Author: kannadanewsnow57

ಬೆಂಗಳೂರು : 2025-26ನೇ ಸಾಲಿಗೆ ಖಾಸಗಿ ಶಾಲೆಗಳಿಗೆ ಹೊಸದಾಗಿ ಶಾಶ್ವತ ಅನುದಾನರಹಿತ ಪೂರ್ವ ಪ್ರಾಥಮಿಕ/ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ಪ್ರಾರಂಭಿಸಲು ನೊಂದಣಿ (Registration) ಹಾಗೂ ಶಾಲಾ ಡೈಸ್ ಕೋಡ್ ಪಡೆಯುವ ಕುರಿತು ಅವಧಿಯನ್ನು ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕರ್ನಾಟಕ ಶಿಕ್ಷಣ ಕಾಯ್ದೆ-1983ರ ಸೆಕ್ಷನ್, 30, 31 ಮತ್ತು 32ರಂತೆ ಹಾಗೂ The Karnataka Educational Institutions(Classification and Registration) Rules 1997 2 ಅಧಿಸೂಚನೆ ಪತ್ರ ಸಂಖ್ಯೆ:ED 709 PGC 2017, ದಿನಾಂಕ:07-03-2018ರ ಅಧಿಸೂಚನೆಯಂತೆ ಹೊಸ ಶಾಲಾ ನೊಂದಣಿ ಮತ್ತು ಉನ್ನತೀಕರಿಸಿದ ತರಗತಿಗಳನ್ನು ಪ್ರಾರಂಭಿಸಲು ಅನುಮತಿ ಕೋರಿದ ಶೈಕ್ಷಣಿಕ ವರ್ಷದ ಹಿಂದಿನ ಸಾಲಿನ ನವೆಂಬರ್ 30 ಅಥವಾ ಅದಕ್ಕೂ ಮೊದಲು ಇಲಾಖಾ ವೆಬ್ ಸೈಟ್ ನಲ್ಲಿ ಹೊಸ ಶಾಲಾ ನೊಂದಣಿ ಕುರಿತು ಅರ್ಜಿ ಸಲ್ಲಿಸಿ ನಿಯಮಾನುಸಾರ ನೊಂದಣಿ ಪಡೆಯಬೇಕಾಗಿರುತ್ತದೆ. ಅದರಂತೆ ಉಲ್ಲೇಖ-13 ರನ್ವಯ 2025-26ನೇ ಸಾಲಿಗೆ ಖಾಸಗಿ ಅನುದಾನರಹಿತ ಪೂರ್ವ ಪ್ರಾಥಮಿಕ / ಪ್ರಾಥಮಿಕ/ಪ್ರೌಢಶಾಲೆ ನೊಂದಣಿ ಹಾಗೂ ಉನ್ನತೀಕರಿಸಿದ ತರಗತಿಗಳನ್ನು…

Read More

ಬೆಂಗಳೂರು : ಉನ್ನತ ಶಿಕ್ಷಣದಲ್ಲಿ ಪರಿಸರವನ್ನು ಪಠ್ಯಕ್ರಮವಾಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ರಾಜ್ಯ ಮಾಲೀನ್ಯ ನಿಯಂತ್ರಣ ಮಂಡಳಿ ಬೆಂಗಳೂರು ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ವಿಶ್ವಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪ್ರತಿಯೊಬ್ಬರಿಗೂ ಪರಿಸರದ ಜ್ಞಾನ ಮತ್ತು ಅದರ ಸಂರಕ್ಷಣೆ ಅರಿವು ಮೂಡಿಸುವುದು ಅಗತ್ಯ. ಅದರ ಭಾಗವಾಗಿ ಉನ್ನತ ಶಿಕ್ಷಣದಲ್ಲಿ ಪರಿಸರ ಪಠ್ಯ ಸೇರ್ಪಡೆಗೆ ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಬಾರಿಯ ವಿಶ್ವ ಪರಿಸರ ದಿನಾಚರಣೆಯ ಘೋಷವಾಕ್ಯ “ಪ್ಲಾಸ್ಟಿಕ್ ಮಾಲಿನ್ಯ ಕೊನೆಗಾಣಿಸಿ” ಎಂದಿದೆ. ಇದು ಕಷ್ಟದ ಕೆಲಸವಾದರೂ ನಾವು ಮಾಡಲೇಬೇಕಾಗುತ್ತದೆ. ಪರಿಸರ ಶುದ್ಧವಾಗಿದ್ದರೆ ಜನರು ಆರೋಗ್ಯ, ಪ್ರಕೃತಿಯನ್ನು ಉಳಿಸಿಕೊಳ್ಳಲು ಸಾಧ್ಯ ಎಂದರು. ಜೀವದ ಸೆಲೆಯಾಗಿರುವ ಪರಿಸರಕ್ಕೆ ನಮ್ಮಿಂದ ಯಾವುದೇ ರೀತಿಯಲ್ಲಿ ಹಾನಿಯಾಗಬಾರದು ಎಂಬುದನ್ನು ಸದಾ ನೆನಪಿಟ್ಟುಕೊಂಡು ಜೀವಿಸಬೇಕು. ಈ ನಿಟ್ಟಿನ ಮೊದಲ ಹೆಜ್ಜೆ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದಾಗಿದೆ. ಹಾಗಾಗಿ ಎಲ್ಲರೂ ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸುತ್ತೇವೆ ಎಂಬ ಪಣ ತೊಡಬೇಕಿದೆ ಎಂದು ಹೇಳಿದ್ದಾರೆ.

Read More

ನವದೆಹಲಿ: ನಾಗರಿಕರು ತಮ್ಮ ಆಧಾರ್‌ಕಾರ್ಡ್ ನವೀಕರಣ ಮಾಡಿಕೊಳ್ಳಲು ಆನ್ಸೆನ್ ಸೌಲಭ್ಯ ವನ್ನು 2026ರ ಜೂ.14ರವರೆಗೆ ವಿಸ್ತರಿಸಲಾಗಿದೆ ಎಂದು ಭಾರತೀಯ ವಿಶಿಷ್ಟಗುರುತಿನ ಪ್ರಾಧಿಕಾರ (ಯುಐಡಿಎಐ) ಘೋಷಿಸಿದೆ. ಉಚಿತ ಆಧಾ‌ರ್ ನವೀಕರಣಸೇವೆಯು#myAadhaarಪೋರ್ಟಲ್ ನಲ್ಲಿಲಭ್ಯವಿದೆ. ಇದನ್ನು 2026ರ ಜೂ.14ರವರೆಗೆ ವಿಸ್ತರಿಸಲಾಗಿದೆ. ನಾಗರಿಕರು ತಮ್ಮ ಗುರುತು ಹಾಗೂವಿಳಾಸದದಾಖಲೆಯನ್ನು ಅಂತರ್ಜಾಲದ ಮೂಲಕವೇ ಅಪ್‌ಲೋಡ್ ಮಾಡಿ, ಆಧಾರ್ ಕಾರ್ಡ್ ನವೀಕರಣ ಮಾಡಿಕೊಳ್ಳಬೇಕು’ ಎಂದು ಯುಐಡಿಎಐ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ. ಇದೀಗ ನೀವು ನಿಮ್ಮ ಆಧಾರ್ ಕಾರ್ಡ್ನಲ್ಲಿ ಅಗತ್ಯ ಮಾಹಿತಿಯನ್ನು ಯಾವುದೇ ಶುಲ್ಕವಿಲ್ಲದೆ ಆನ್ಲೈನ್ನಲ್ಲಿ ನವೀಕರಿಸಬಹುದು. ಸರ್ಕಾರಿ ಮತ್ತು ಖಾಸಗಿ ಸೇವೆಗಳನ್ನು ಬಳಸುವಲ್ಲಿ ನೀವು ಯಾವುದೇ ಸಮಸ್ಯೆಯನ್ನು ಎದುರಿಸದಂತೆ ಆಧಾರ್ನ ನಿಖರತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳುವುದು ಯುಐಡಿಎಐನ ಈ ನಿರ್ಧಾರದ ಉದ್ದೇಶವಾಗಿದೆ. https://twitter.com/UIDAI/status/1933713650084425880?ref_src=twsrc%5Etfw%7Ctwcamp%5Etweetembed%7Ctwterm%5E1933713650084425880%7Ctwgr%5E756904ac1654b8b959148d31b9c43541b25cb0ca%7Ctwcon%5Es1_c10&ref_url=https%3A%2F%2Fkannadadunia.com%2Fthe-deadline-for-free-updating-of-aadhaar-card-has-been-extended-till-june-14-2026%2F ಉಚಿತವಾಗಿ ಏನು ನವೀಕರಿಸಬಹುದು? ಈ ಸೌಲಭ್ಯದ ಅಡಿಯಲ್ಲಿ, ನೀವು ನಿಮ್ಮ ಜನಸಂಖ್ಯಾ ವಿವರಗಳನ್ನು ಉಚಿತವಾಗಿ ನವೀಕರಿಸಬಹುದು, ಉದಾಹರಣೆಗೆ: ಹೆಸರು ವಿಳಾಸ ಜನ್ಮ ದಿನಾಂಕ ಲಿಂಗ ಮೊಬೈಲ್ ಸಂಖ್ಯೆ ಇಮೇಲ್ ಐಡಿ ಸೂಚನೆ: ಫಿಂಗರ್ಪ್ರಿಂಟ್, ಫೋಟೋ ಅಥವಾ ಐರಿಸ್…

Read More

ಬೆಂಗಳೂರು: ರಾಜ್ಯದಲ್ಲಿ ಅತಿವೃಷ್ಟಿ, ಪ್ರವಾಹದಿಂದ ಹಾನಿಯಾಗಿರುವ ಮನೆಗಳ ಪುನರ್ ನಿರ್ಮಾಣ, ದುರಸ್ಥಿ ಕಾರ್ಯ ಹಾಗೂ ಪ್ರವಾಹದಿಂದ ಮನೆಯ ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ನೀಡಲು ಹಣ ಮಂಜೂರು ಮಾಡಿ ಆದೇಶಿಸಿದೆ. ಈ ಸಂಬಂಧ ಕಂದಾಯ ಇಲಾಖೆಯ ಸರ್ಕಾರ ಉಪ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, 20 ಅತಿವೃಷ್ಟಿ / ಪುವಾಹದಿಂದ ಹಾನಿಗೊಳಗಾದ ಮನೆಗಳ ಪುನರ್ ನಿರ್ಮಾಣ / ದುರಸ್ಥಿ ಕಾರ್ಯ ಹಾಗೂ ಪುವಾಹದಿಂದಾಗಿ ಮನೆಯ ಗ್ರಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ 2024-25 ನೇ ಸಾಲಿನಲ್ಲಿ ಪಾವತಿಸಿರುವ ಪರಿಹಾರದಂತೆ, 2025-26 ನೇ ಸಾಲಿನ ನೈಋತ್ಯ ಮುಂಗಾರು ಹಂಗಾಮಿನಲ್ಲಿ (01.06.2025 ರಿಂದ 30.09.2025) ಮತ್ತು ಈಶಾನ್ಯ ಮುಂಗಾರು ಹಂಗಾಮಿನಲ್ಲಿ (01.10.2025 ರಿಂದ 31.12.2025) ಹಾನಿಗೊಳಗಾಗುವ ಮನೆಗಳ ಪುನರ್ ನಿರ್ಮಾಣ / ದುರಸ್ತಿ ಕಾರ್ಯ ಹಾಗೂ ಪುವಾಹದಿಂದಾಗಿ ಮನೆಯ ಗ್ರಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ನಿಯಾಮಾನುಸಾರ ಅರ್ಹತೆಯಂತೆ ಪರಿಹಾರವನ್ನು ಮೇಲೆ ಓದಲಾದ (2), (3) ಮತ್ತು (4) ರ ಆದೇಶಗಳಲ್ಲಿ ವಿಧಿಸಿರುವ ಷರತ್ತುಗಳ ಪಾಲನೆಗೆ ಒಳಪಟ್ಟು, ಜಿಲ್ಲಾಧಿಕಾರಿರವರ…

Read More

ಇತ್ತೀಚಿನ ದಿನಗಳಲ್ಲಿ ಮೊಬೈಲ್‌ ಇಲ್ಲದೆ ಬದುಕುವುದೇ ಕಷ್ಟವಾಗುತ್ತಿದೆ. ಎಷ್ಟೋ ಜನರು ತಡರಾತ್ರಿವರೆಗೂ ಮೊಬೈಲ್‌ ನೋಡುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಬೆಳಗ್ಗೆ ಎದ್ದತಕ್ಷಣ ನಾವು ಮೊದಲು ನೋಡುವುದೇ ಮೊಬೈಲ್.‌ ಈ ರೀತಿ ಅತಿಯಾಗಿ ಮೊಬೈಲ್‌ ವೀಕ್ಷಿಸುವುದರಿಂದ ಕಣ್ಣಿನಲ್ಲಿ ನೀರು ಸುರಿಯುತ್ತದೆ. ವಾಸ್ತವವಾಗಿ ಸೆಲ್‌ಫೋನ್‌ನಿಂದ ಹೊರಬರುವ ನೀಲಿ ದೀಪವು ಕಣ್ಣಿನಲ್ಲಿ ನೀರು ತರುತ್ತದೆ. ಸ್ವಲ್ಪ ಸಮಯ ಫೋನ್ ನೋಡಿದರೂ ಕಣ್ಣುಗಳಲ್ಲಿ ನೀರು ಬರಲು ಪ್ರಾರಂಭಿಸಿದರೆ ಅಥವಾ ಅವು ಕೆಂಪು ಬಣ್ಣಕ್ಕೆ ತಿರುಗಿದರೆ ನಿಮಗೆ ಕಣ್ಣಿನ ಸಮಸ್ಯೆ ಇದೆ ಎಂದು ಅರ್ಥಮಾಡಿಕೊಳ್ಳಿ. ಕಣ್ಣುಗಳಲ್ಲಿ ನೀರು ಬರಲು ಕಾರಣ ಕಣ್ಣುಗಳಲ್ಲಿ ಶುಷ್ಕತೆ ಕಣ್ಣಿನ ಸ್ನಾಯುಗಳು ನಮ್ಮ ದೇಹದ ಅತ್ಯಂತ ಸಕ್ರಿಯ ಸ್ನಾಯುಗಳಾಗಿವೆ. ಕಣ್ಣುಗಳು ಒಣಗದಂತೆ ತಡೆಯುವುದು ಇದರ ಕೆಲಸ. ಹಲವಾರು ಸೆಕೆಂಡುಗಳ ಕಾಲ ನಿರಂತರವಾಗಿ ಕಣ್ಣುಗಳನ್ನು ತೆರೆದುಕೊಂಡೇ ಇದ್ದಾಗ ಅದರಲ್ಲಿ ನೀರು ಬರಲು ಪ್ರಾರಂಭಿಸುತ್ತದೆ ಎಂಬುದು ನಮ್ಮ ಭಾವನೆ. ಆದರೆ ದೇಹದಲ್ಲಿ ನೀರು, ಎಣ್ಣೆ ಮತ್ತು ಲೋಳೆಯ ಸಮತೋಲನವು ಸರಿಯಾದ ರೀತಿಯಲ್ಲಿ ಇಲ್ಲದಿದ್ದಾಗ, ಕಣ್ಣುಗಳು ಒಣಗಲು ಪ್ರಾರಂಭಿಸುತ್ತವೆ, ಆದ್ದರಿಂದ…

Read More

ಬೆಂಗಳೂರು: ಇಂದು ಬೆಳಿಗ್ಗೆ 11:00 ಗಂಟೆಯಿಂದ ಸಂಜೆ 16:00 ಗಂಟೆಯವರೆಗೆ 66/11ಕೆ.ವಿ ಮಾನ್ಯತಾ ಟೆಕ್ ಪಾರ್ಕ್’ ಸ್ಟೇಷನ್ ನಲ್ಲಿ ತುರ್ತುನಿರ್ವಹಣಾ ಕೆಲಸಗಳನ್ನು ನಿರ್ವಹಿಸುವುದರಿಂದ ಈ ಕೆಳಗಿನ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುವುದು ಎಂಬುದಾಗಿ ಬೆಸ್ಕಾಂ ತಿಳಿಸಿದೆ. ಇಂದು ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಡೆಲಿಟಿ, ಫಿಲಿಪ್ಸ್, ಇಕ್ಯುಬೇಟರ್, IBM D4 ಬ್ಲಾಕ್, IBM D1 & D2 ಬ್ಲಾಕ್, IBM D3 ಬ್ಲಾಕ್, F2 ಬ್ಲಾಕ್, L6 ಸೀಮೆನ್ಸ್, ಮಾನ್ಯತಾ ರೆಸಿಡೆನ್ಸಿ, B.T.S ಲೌಸೆಂಟ್, Anz H ಬ್ಲಾಕ್, C4 ಬ್ಲಾಕ್, ಗೋದ್ರೇಜ್ ಅಪಾರ್ಟ್‌ಮೆಂಟ್, ಹೆಬ್ಬಾಳ್ ಕೆಂಪಾಪುರ, ಲಾಯ್‌ಔಟ್, ವಿನ್ಯಾಕ ವೆಂಕಟಾವಿ ಲೇಔಟ್, JNC, L5 ನೋಕಿಯಾ ಬ್ಲಾಕ್, G1 ಬ್ಲಾಕ್, MFAR, ಮಧುವನ M2 ಬ್ಲಾಕ್, ರಾಚೇನಹಳ್ಳಿಯಲ್ಲಿ ಕರೆಂಟ್ ಇರೋದಿಲ್ಲ. ಶ್ರೀರಾಂಪುರ, ಚಾಮುಂಡೇಶ್ವರಿ ಲೇಔಟ್, ರಾಯಲ್ ಎನ್‌ಕ್ಲೇವ್, ಮೇಸ್ತ್ರಿ ಪಾಳ್ಯ, ಥಣಿಸಂದ್ರ, SNN ಕ್ಲರ್ಮಾಂಟ್ ಅಪಾರ್ಟ್‌ಮೆಂಟ್, ಕಾರ್ಲೆ, ಬಿ.ನಾರಾಯಣಪುರ ಕ್ರಾಸ್, ಮಂತ್ರಿಆಫ್ ಲಿಥೌಟ್, ಬೋರ್ಡ್ ಲಿಥೌಟ್ ಲೇಔಟ್, ಅಮರಜೋತಿ ಲೇಔಟ್,…

Read More

ಇರಾನ್ : ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಬೆದರಿಕೆಯ ನಂತರ, ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಇಸ್ರೇಲ್ ವಿರುದ್ಧ ಯುದ್ಧ ಘೋಷಿಸಿದ್ದಾರೆ.  ಅವರು X ನಲ್ಲಿ ಪೋಸ್ಟ್ ಮಾಡಿ ಹೈದರ್ ಹೆಸರಿನಲ್ಲಿ ಯುದ್ಧ ಪ್ರಾರಂಭವಾಗುತ್ತದೆ ಎಂದು ಬರೆದಿದ್ದಾರೆ. ಈ ಘೋಷಣೆಯ ಜೊತೆಗೆ, ಇರಾನ್ ಕಡೆಯಿಂದ ಇಸ್ರೇಲ್ ಮೇಲೆ ಹಲವಾರು ಕ್ಷಿಪಣಿಗಳನ್ನು ಹಾರಿಸಲಾಗಿದೆ. https://twitter.com/Khamenei_fa/status/1935091514083778752?ref_src=twsrc%5Etfw%7Ctwcamp%5Etweetembed%7Ctwterm%5E1935091514083778752%7Ctwgr%5E955fb9f17b71f1579c7409547fab03aac5ab6473%7Ctwcon%5Es1_c10&ref_url=https%3A%2F%2Fwww.tv9hindi.com%2Fworld%2Firan-israel-war-news-live-updates-netanyahu-attacks-khamenei-3346034.html ಅಮೆರಿಕ ಅಧ್ಯಕ್ಷ ಟ್ರಂಪ್ ಶ್ವೇತಭವನದಲ್ಲಿ ರಾಷ್ಟ್ರೀಯ ಭದ್ರತಾ ತಂಡದೊಂದಿಗೆ ಸಭೆ ನಡೆಸಿದರು. ಇದಾದ ಸ್ವಲ್ಪ ಸಮಯದ ನಂತರ, ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರು ಟ್ರಂಪ್ ಅವರೊಂದಿಗೆ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಚರ್ಚಿಸಿದರು. ಇರಾನ್ ಯುದ್ಧ ಘೋಷಣೆಯ ನಂತರ, ರಾಜಧಾನಿ ಟೆಹ್ರಾನ್ ಮತ್ತು ಕರಾಜ್ ನಗರದ ಅನೇಕ ಪ್ರದೇಶಗಳಲ್ಲಿ ಜೋರಾಗಿ ಸ್ಫೋಟಗಳು ಕೇಳಿಬಂದವು. ಈ ಸ್ಫೋಟಗಳ ನಂತರ, ಇಸ್ರೇಲ್ ಸೈನ್ಯವು ಟೆಹ್ರಾನ್‌ನ ಕೈಗಾರಿಕಾ ಪ್ರದೇಶವನ್ನು ಸ್ಥಳಾಂತರಿಸಲು ಎಚ್ಚರಿಕೆ ನೀಡಿದೆ. ಜೆರುಸಲೆಮ್‌ನಲ್ಲಿರುವ ತನ್ನ ರಾಯಭಾರ ಕಚೇರಿಯನ್ನು ಮುಂದಿನ 3 ದಿನಗಳವರೆಗೆ ಮುಚ್ಚಲು ಅಮೆರಿಕ ವಿದೇಶಾಂಗ ಇಲಾಖೆ ಆದೇಶ…

Read More

ಇರಾನ್ : ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಬೆದರಿಕೆಯ ನಂತರ, ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಇಸ್ರೇಲ್ ವಿರುದ್ಧ ಯುದ್ಧ ಘೋಷಿಸಿದ್ದಾರೆ.  ಅವರು X ನಲ್ಲಿ ಪೋಸ್ಟ್ ಮಾಡಿ ಹೈದರ್ ಹೆಸರಿನಲ್ಲಿ ಯುದ್ಧ ಪ್ರಾರಂಭವಾಗುತ್ತದೆ ಎಂದು ಬರೆದಿದ್ದಾರೆ. ಈ ಘೋಷಣೆಯ ಜೊತೆಗೆ, ಇರಾನ್ ಕಡೆಯಿಂದ ಇಸ್ರೇಲ್ ಮೇಲೆ ಹಲವಾರು ಕ್ಷಿಪಣಿಗಳನ್ನು ಹಾರಿಸಲಾಗಿದೆ. https://twitter.com/Khamenei_fa/status/1935091514083778752?ref_src=twsrc%5Etfw%7Ctwcamp%5Etweetembed%7Ctwterm%5E1935091514083778752%7Ctwgr%5E955fb9f17b71f1579c7409547fab03aac5ab6473%7Ctwcon%5Es1_c10&ref_url=https%3A%2F%2Fwww.tv9hindi.com%2Fworld%2Firan-israel-war-news-live-updates-netanyahu-attacks-khamenei-3346034.html ಅಮೆರಿಕ ಅಧ್ಯಕ್ಷ ಟ್ರಂಪ್ ಶ್ವೇತಭವನದಲ್ಲಿ ರಾಷ್ಟ್ರೀಯ ಭದ್ರತಾ ತಂಡದೊಂದಿಗೆ ಸಭೆ ನಡೆಸಿದರು. ಇದಾದ ಸ್ವಲ್ಪ ಸಮಯದ ನಂತರ, ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರು ಟ್ರಂಪ್ ಅವರೊಂದಿಗೆ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಚರ್ಚಿಸಿದರು. ಇರಾನ್ ಯುದ್ಧ ಘೋಷಣೆಯ ನಂತರ, ರಾಜಧಾನಿ ಟೆಹ್ರಾನ್ ಮತ್ತು ಕರಾಜ್ ನಗರದ ಅನೇಕ ಪ್ರದೇಶಗಳಲ್ಲಿ ಜೋರಾಗಿ ಸ್ಫೋಟಗಳು ಕೇಳಿಬಂದವು. ಈ ಸ್ಫೋಟಗಳ ನಂತರ, ಇಸ್ರೇಲ್ ಸೈನ್ಯವು ಟೆಹ್ರಾನ್‌ನ ಕೈಗಾರಿಕಾ ಪ್ರದೇಶವನ್ನು ಸ್ಥಳಾಂತರಿಸಲು ಎಚ್ಚರಿಕೆ ನೀಡಿದೆ. ಜೆರುಸಲೆಮ್‌ನಲ್ಲಿರುವ ತನ್ನ ರಾಯಭಾರ ಕಚೇರಿಯನ್ನು ಮುಂದಿನ 3 ದಿನಗಳವರೆಗೆ ಮುಚ್ಚಲು ಅಮೆರಿಕ ವಿದೇಶಾಂಗ ಇಲಾಖೆ ಆದೇಶ…

Read More

ಕೊಪ್ಪಳ : ಕೊಪ್ಪಳದ ಅಂಜನಾದ್ರಿ ಬೆಟ್ಟ ಸೇರಿ ರಾಜ್ಯದ 11 ಪ್ರವಾಸಿ ತಾಣಗಳಲ್ಲಿ ‘ಕೇಬಲ್ ಕಾರ್’ ಅಳವಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೆ ಸುಲಭವಾಗಿ ತೆರಳಲು ಕೇಬಲ್ ಕಾರ್ ಸೌಲಭ್ಯ ಅಳವಡಿಸಲು ನಿರ್ಧರಿಸಲಾಗಿದೆ. ಮಾರ್ಚ್ 31ರ ಒಳಗೆ ಕಾಮಗಾರಿ ಮುಗಿಸುವಂತೆ ಗುತ್ತಿಗೆ ಪಡೆದ ಏಜೆನ್ಸಿಗೆ ಸೂಚಿಸಲಾಗಿದೆ. ಅಂಜನಾದ್ರಿಯೂ ಸೇರಿ ರಾಜ್ಯದ 11 ಪ್ರವಾಸಿ ತಾಣಗಳಲ್ಲಿ ಕೇಬಲ್ ಕಾರ್ ಅಳವಡಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವರಾದ ಎಚ್.ಕೆ.ಪಾಟೀಲ್ ಅವರು ತಿಳಿಸಿದ್ದಾರೆ. https://twitter.com/KarnatakaVarthe/status/1934904250896699402?ref_src=twsrc%5Etfw%7Ctwcamp%5Etweetembed%7Ctwterm%5E1934904250896699402%7Ctwgr%5Ea9ace9972ebaaf8398a257ccd645bac1f24966dd%7Ctwcon%5Es1_c10&ref_url=https%3A%2F%2Fkannadadunia.com%2Finstallation-of-cable-cars-at-11-tourist-destinations-in-the-state-including-anjanadri-hills-in-koppal-minister-h-k-patil%2F

Read More

ಬೆಂಗಳೂರು : 2024-25ನೇ ಸಾಲಿನ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ವೃಂದ/ ತತ್ಸಮಾನ ವೃಂದದ ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯರು ಮತ್ತು ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರು/ತತ್ಸಮಾನ ವೃಂದ, ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ವಿಶೇಷ ಶಿಕ್ಷಕರು ಹಾಗೂ ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕರು/ತತ್ಸಮಾನ ವೃಂದದ ಸಾಮಾನ್ಯ ಅಧಿಕಾರಿಗಳ ವರ್ಗಾವಣೆಯ ಬಗ್ಗೆ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖಿತ ಪತ್ರದಲ್ಲಿ 2024-25ನೇ ಸಾಲಿನ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರನ್ನೊಳಗೊಂಡಂತೆ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಹೆಚ್ಚುವರಿ, ಕೋರಿಕೆ, ಪರಸ್ಪರ ಹಾಗೂ ಸಾಮಾನ್ಯ ವರ್ಗಾವಣೆಗಳನ್ನು ಸಂಬಂಧ ಬಗ್ಗೆ ಉಲ್ಲೇಖದ ಅಧಿಸೂಚನೆಯಲ್ಲಿ ನೀಡಿರುವ ಶಿಕ್ಷಕರ ವರ್ಗಾವಣೆ ಕಾಯ್ದೆಗಳನ್ವಯ ಹಾಗೂ ನಿರ್ದೇಶನ ಮತ್ತು ಮಾರ್ಗದರ್ಶನದಂತೆ ನಿಗಧಿಪಡಿಸಿರುವ ವರ್ಗಾವಣಾ ವೇಳ ಪಟ್ಟಿಯಂತೆ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗಿರುವ ಹಿನ್ನಲೆಯಲ್ಲಿ ವರ್ಗಾವಣೆಗಳನ್ನು ಗಣಕೀಕೃತ ಕೌನ್ಸಿಲಿಂಗ್‌ ಮೂಲಕ ಮಾಡಬೇಕಾಗಿರುವುದರಿಂದ ಸದರಿ ಅಧಿಸೂಚನೆಯಲ್ಲಿ ತಿಳಿಸಿರುವ ಎಲ್ಲಾ ನಿಯಮಗಳು, ಅಧಿಕೃತ https://schooleducation.karnataka.gov.in ಪ್ರಕಟಿಸಲಾಗಿದೆ ಹಾಗೂ ವರ್ಗಾವಣೆ ಬಗ್ಗೆ…

Read More