Author: kannadanewsnow09

ಭೋಪಾಲ್: ಮಧ್ಯಪ್ರದೇಶದ ನೋಂದಣಿಯಾಗದ ಅನಾಥಾಶ್ರಮದಿಂದ ಗುಜರಾತ್, ಜಾರ್ಖಂಡ್ ಮತ್ತು ಇತರ ರಾಜ್ಯಗಳ 26 ಬಾಲಕಿಯರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಈ ಹುಡುಗಿಯರು ಎಲ್ಲಿದ್ದಾರೆಂದು ತಿಳಿದಿಲ್ಲ. ಅವರ ಪ್ರಸ್ತುತ ಸ್ಥಳಗಳ ಬಗ್ಗೆ ಮಾಹಿತಿಯ ಕೊರತೆಯನ್ನು ಅಧಿಕಾರಿಗಳು ಎದುರಿಸುತ್ತಿದ್ದಾರೆ. ಈ ನಡುವೆ ತನಿಖೆಗೆ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌವ್ಹಾಣ್ ಆಗ್ರಹಿಸಿದ್ದಾರೆ ಭೋಪಾಲ್ನ ಪರ್ವಾಲಿಯಾ ಸಡಕ್ ಪೊಲೀಸ್ ಠಾಣೆಯಲ್ಲಿ ಬಾಲನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ, 2015 ರ ಸೆಕ್ಷನ್ಗಳ ಅಡಿಯಲ್ಲಿ ಮಕ್ಕಳ ಗೃಹದ ವ್ಯವಸ್ಥಾಪಕ ಅನಿಲ್ ಮೆಥ್ಯೂ ಅವರನ್ನು ಆರೋಪಿ ಎಂದು ಹೆಸರಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. ಮನೆಯಲ್ಲಿ ನೋಂದಾಯಿತ 68 ಬಾಲಕಿಯರಲ್ಲಿ 6-18 ವರ್ಷದೊಳಗಿನ 26 ಬಾಲಕಿಯರು ಕಾಣೆಯಾಗಿದ್ದಾರೆ ಎಂದು ಎಫ್ಐಆರ್ನಲ್ಲಿ ತಿಳಿಸಲಾಗಿದೆ. ಬಾಲನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ, 2015 ರ ಪ್ರಕಾರ ಮಕ್ಕಳ ಮನೆಯನ್ನು ನಡೆಸುತ್ತಿಲ್ಲ ಮತ್ತು ನೋಂದಾಯಿಸಲಾಗಿಲ್ಲ ಎಂದು ಎಫ್ಐಆರ್ನಲ್ಲಿ ತಿಳಿಸಲಾಗಿದೆ. ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್…

Read More

ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ದೇವನಹಳ್ಳಿಯಲ್ಲಿನ 5ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ನಿಂದ ಇಂದು ಮಧ್ಯಾಹ್ನ 3.30ಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡ ಅವರ ಜಾಮೀನು ಅರ್ಜಿಯ ಸಂಬಂಧ ಕಾಯ್ದಿರಿಸಲಾಗಿದ್ದಂತ ತೀರ್ಪನ್ನು ಪ್ರಕಟಿಸಲಾಗುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದಲ್ಲಿರುವಂತ 5ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ನ ನ್ಯಾಯಾಧೀಶರಾದಂತ ಬೀರಾದಾರ್ ದೇವೇಂದ್ರ ಅವರು ಕರವೇ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನಂತ್ರ, ತೀರ್ಪನ್ನು ಇಂದಿಗೆ ಕಾಯ್ದಿರಿಸಿದ್ದರು. ಇಂತಹ ತೀರ್ಪನ್ನು ಇಂದು ನ್ಯಾಯಮೂರ್ತಿ ಬಿರಾದಾರ್ ದೇವೇಂದ್ರಪ್ಪ ಅವರು ಪ್ರಕಟಿಸಲಿದ್ದಾರೆ. ಇಂದು ಮಧ್ಯಾಹ್ನ 3.30ಕ್ಕೆ ತನ್ನ ತೀರ್ಪು ಪ್ರಕಟಿಸೋ ಅವರು, ಯಾವ ತೀರ್ಪು ನೀಡಲಿದ್ದಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಅಂದಹಾಗೇ ಕನ್ನಡ ಕಹಳೆ ಮೊಳಗಿಸಿದ್ದಂತ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಸೇರಿದಂತೆ 32 ಮಂದಿಯನ್ನು ಬಂಧಿಸಲಾಗಿತ್ತು. ವಾಣಿಜ್ಯ ಮಳಿಗೆಗಳ ನಾಮಫಲಕ ಒಡೆದು ಹಾಕಿದಂತ ಅವರ ವಿರುದ್ಧ ಕೇಸ್ ದಾಖಲಿಸಿ ಜೈಲಿಗಟ್ಟಲಾಗಿತ್ತು. ಸದ್ಯ ಸೆಂಟ್ರಲ್ ಜೈಲಿನಲ್ಲಿ ಕರವೇ ಅಧ್ಯಕ್ಷ…

Read More

ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಅಂಗಡಿ/ ಉದ್ದಿಮೆ/ಮಳಿಗೆಗಳು ಮತ್ತು ಸಂಘ-ಸಂಸ್ಥೆಗಳು ಅಥವಾ ಇತರೆ ಯಾವುದೇ ರೀತಿಯ ಪ್ರದರ್ಶನ ಫಲಕಗಳು, ಜಾಹೀರಾತು ಫಲಕಗಳು ಕನಿಷ್ಠ ಶೇ.60 ರಷ್ಟು ಕಡ್ಡಾಯವಾಗಿ ಕರ್ನಾಟಕದ ಆಡಳಿತ ಭಾಷೆಯಾದ ಕನ್ನಡದಲ್ಲಿ ಇರುವಂತೆ ನಾಮಫಲಕಗಳನ್ನು ಅಳವಡಿಸಿಕೊಳ್ಳುವಂತೆ ಪಾಲಿಕೆ ಆಯುಕ್ತರು ಸೂಚಿಸಿರುತ್ತಾರೆ. ಯಾವುದೇ ದ್ವಿಭಾಷಾ ಅಥವಾ ಬಹುಭಾಷಾ ಫಲಕಗಳು ಇದ್ದಲ್ಲಿ ಗರಿಷ್ಠ ಪ್ರಮಾಣ ಶೇ. 60 ರಷ್ಟು ಕನ್ನಡದಲ್ಲಿಯೇ ಅಳವಡಿಸಿಕೊಳ್ಳಲು ಎಲ್ಲಾ ಅಂಗಡಿ ಮಾಲೀಕರುಗಳು ಕೂಡಲೇ ಕ್ರಮ ಕೈಗೊಳ್ಳುವುದು. ಕನ್ನಡ ಫಲಕಗಳನ್ನು ಪ್ರದರ್ಶಿಸಲು 15 ದಿನಗಳಲ್ಲಿ ಕ್ರಮವಹಿಸದೇ ಇದ್ದಲ್ಲಿ ಪಾಲಿಕೆಯ ಆರೋಗ್ಯ ವಿಭಾಗದಿಂದ ಜಂಟಿ ಸರ್ವೆಗಳನ್ನು ನಡೆಸಿ ಪ್ರತ್ಯೇಕವಾಗಿ ನಿಯಮಾನುಸಾರ ಅಂಗಡಿ/ ಉದ್ದಿಮೆ/ಮಳಿಗೆಗಳು ಮತ್ತು ಸಂಘ-ಸಂಸ್ಥೆಗಳು ಅಥವಾ ಇತರೆ ಯಾವುದೇ ರೀತಿಯ ಪ್ರದರ್ಶನ ಫಲಕಗಳು, ಜಾಹೀರಾತು ಫಲಕಗಳನ್ನು ಅಳವಡಿಸದೇ ಇರುವಂತಹ ಅಂಗಡಿಯ ಮಾಲೀಕರುಗಳಿಗೆ ಅಥವಾ ಸಂಬಂಧಪಟ್ಟಂತ ನಿಯಮ ಉಲ್ಲಂಘನೆ ಮಾಡುವವರಿಗೆ ಉದ್ದಿಮೆ ಪರವಾನಿಗೆಯನ್ನು ರದ್ದುಪಡಿಸುವ ಮತ್ತು ಕರ್ನಾಟಕ ಕಾರ್ಪೋರೇಷನ್ ಕಾಯ್ದೆ 1976ರ ಸಂಬಂಧಪಟ್ಟ ವಿಧಿಗಳ ಅನ್ವಯದಂತೆ ಹಾಗೂ…

Read More

ಧಾರವಾಡ: ಶಾಲೆಗೆ ಸಾರಿಗೆ ಬಸ್ಸಿನಲ್ಲಿ ತೆರಳುತ್ತಿದ್ದಂತ ಆ ಬಾಲಕಿ, ಅಚಾನಕ್ಕಾಗಿ ಬಸ್ಸಿನಲ್ಲಿ ಬಸ್ ಕಂಡಕ್ಟರ್ ದುಡ್ಡು ಎಣಿಸುತ್ತಿದ್ದಾಗ ಆತನ ಕೈ ಟಚ್ ಮಾಡಿದ್ದಳು. ಆಗ ಅವರ ಕೈಯಲ್ಲಿದ್ದಂತ ದುಡ್ಡು ಕೆಳಗೆ ಬಿದ್ದಿತ್ತು. ಇಷ್ಟಕ್ಕೇ ಸಿಟ್ಟಾದಂತ ಸರ್ಕಾರಿ ಬಸ್ ಕಂಡಕ್ಟರ್ ಶಾಲಾ ಬಾಲಕಿಯ ಕಪಾಳಕ್ಕೆ ಹೊಡೆದಿರೋ ಘಟನೆ ಧಾರವಾಡದ ಕೆಲಗೇರಿ ಬಡಾವಣೆಯಲ್ಲಿ ನಡೆದಿದೆ. ಧಾರವಾಡದಿಂದ ಮುಗಡ ಗ್ರಾಮಕ್ಕೆ ಶಾಲಾ ಬಾಲಕಿ ಪ್ರಕೃತಿ ಸರ್ಕಾರಿ ಬಸ್ಸಿನಲ್ಲಿ ತೆರಳುತ್ತಿದ್ದಳು. ಬಸ್ ರಷ್ ಆಗಿದ್ದರಿಂದಾಗಿ ಹೇಗೋ ಸಾವರಿಸಿಕೊಂಡು ನಿಂತಿದ್ದಂತ ಆಕೆ ಕಂಡಕ್ಟರ್ ದುಡ್ಡು ಏಣಿಸೋದನ್ನ ಗಮನಿಸದೇ, ಅಚಾನಕ್ಕಾಗಿ ಬಸ್ ಎತ್ತಾಕಿದಾಗ ಟಚ್ ಮಾಡಿದ್ದಳು. ಆಗ ಕಂಡಕ್ಟರ್ ಕೈಯಲ್ಲಿದ್ದಂತ ಹಣ ಕೆಳಗೆ ಬಿದ್ದಿತ್ತು. ಇಷ್ಟಕ್ಕೇ ಸಿಟ್ಟಾದಂತ ಸಾರಿಗೆ ಬಸ್ ಕಂಡಕ್ಟರ್ ಗೌರೀಶ್ ಎಂಬಾತ ಶಾಲಾ ಬಾಲಕಿ ಪ್ರಕೃತಿಯ ಕಪಾಳಕ್ಕೆ ಹೊಡೆದಿದ್ದನು. ಕಂಡಕ್ಟರ್ ಕಪಾಳಕ್ಕೆ ಹೊಡೆದಿದ್ದರಿಂದ ಬಿಕ್ಕಿಬಿಕ್ಕಿ ಅತ್ತಿದ್ದಾಳೆ. ಕಪಾಳ ಮೋಕ್ಷದಿಂದಾಗಿ ಶಾಲಾ ಬಾಲಕಿ ಪ್ರಕೃತಿ ಕೆನ್ನೆ ಊತ ಬಂದು, ಕೆಂಪಾಗಿತ್ತು. ಮನೆಗೆ ತೆರಳಿದಂತ ಪ್ರಕೃತಿ, ಬಸ್ಸಿನಲ್ಲಿ ನಡೆದಂತ ಘಟನೆಯನ್ನು…

Read More

ಬೆಂಗಳೂರು: ಕೇಂದ್ರ ಸರ್ಕಾರದಿಂದ ಹಿಟ್ ಅಂಡ್ ರನ್ ಕಾಯ್ದೆಯ ವಿರುದ್ಧ ಉತ್ತರ ಭಾರತದಲ್ಲಿ ಲಾರಿ ಮಾಲೀಕರು ರೊಚ್ಚಿಗೆದ್ದಿದ್ದರು. ಈ ಬೆನ್ನಲ್ಲೇ ಕರ್ನಾಟಕದಲ್ಲೂ ಲಾರಿ ಮಾಲೀಕರು ಜನವರಿ.17ರಿಂದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಈ ಕುರಿತಂತೆ ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದಂತ ಲಾರಿ ಅಸೋಸಿಯೇಷನ್ ಗೌರವಾಧ್ಯಕ್ಷ ಚನ್ನಾರೆಡ್ಡಿ ಅವರು, ಕೇಂದ್ರ ಸರ್ಕಾರದಿಂದ ಹಿಟ್ ಅಂಡ್ ರನ್ ಕಾಯ್ದೆಯನ್ನು ಪರಿಷ್ಕರಣೆ ಮಾಡಲಾಗುತ್ತಿದೆ. ಲಾರಿ ಮಾಲೀಕರನ್ನು ಜೈಲಿಗಟ್ಟೋ ಕೆಲಸ ಮಾಡುತ್ತಿದೆ ಎಂಬುದಾಗಿ ಕಿಡಿಕಾರಿದರು. ಹಿಟ್ ಅಂಡ್ ರನ್ ಕೇಸ್ ಗೆ ಜೈಲು ಶಿಕ್ಷೆಯ ಅವಧಿಯನ್ನು ಹೆಚ್ಚಳ ಮಾಡಲಾಗುತ್ತಿದೆ. ದಂಡದ ಮೊತ್ತವನ್ನು ಭಾರೀ ಹೆಚ್ಚಳ ಮಾಡಲಾಗುತ್ತಿದೆ. ಇಂತಹ ಕಾಯ್ದೆಯನ್ನು ವಿರೋಧಿಸಿ ಕರ್ನಾಟಕದಲ್ಲಿ ಲಾರಿ ಮಾಲೀಕರಿಂದ ಜನವರಿ.17ರಿಂದ ಅನಿರ್ಧಿಷ್ಟಾವಧಿ ಮುಷ್ಕರವನ್ನು ನಡೆಸೋದಾಗಿ ತಿಳಿಸಿದರು. ಅಂದಹಾಗೇ ಕಳೆದ ವಾರ ಉತ್ತರ ಭಾರತದ ಹಲವೆಡೆ ಲಾರಿ ಮಾಲೀಕರು ಕೇಂದ್ರ ಸರ್ಕಾರದ ಕಾಯ್ದೆಯ ವಿರುದ್ಧ ಸಿಡಿದೆದ್ದಿದ್ದರು. ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ, ಟೈಯರ್ ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದರು. ಈ…

Read More

ನವದೆಹಲಿ: ಜ.14 ರಿಂದ ಪ್ರಾರಂಭವಾಗಲಿರುವ ರಾಹುಲ್ ಗಾಂಧಿ ಅವರ ಮುಂಬರುವ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಲಾಂಛನ, ಟೀಸರ್, ಟ್ಯಾಗ್ ಲೈನ್ ಅನ್ನು ಕಾಂಗ್ರೆಸ್ ಉನ್ನತ ನಾಯಕರು ಶನಿವಾರ ಅನಾವರಣಗೊಳಿಸಿದರು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಹಿರಿಯ ನಾಯಕರಾದ ಜೈರಾಮ್ ರಮೇಶ್ ಮತ್ತು ಕೆ.ಸಿ.ವೇಣುಗೋಪಾಲ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಲಾಂಛನ, ಟೀಸರ್, ಟ್ಯಾಗ್ ಲೈನ್ ಅನ್ನು ಅನಾವರಣಗೊಳಿಸಿದರು. 6,700 ಕಿಲೋಮೀಟರ್ ಉದ್ದದ ಪಾದಯಾತ್ರೆ ಮಣಿಪುರದ ಇಂಫಾಲ್ನಿಂದ ಪ್ರಾರಂಭವಾಗುತ್ತದೆ ಮತ್ತು 15 ರಾಜ್ಯಗಳ ಮೂಲಕ ಹಾದು ಮುಂಬೈನಲ್ಲಿ ಕೊನೆಗೊಳ್ಳುತ್ತದೆ. ಈ ಯಾತ್ರೆಯು ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಅಸ್ಸಾಂ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಒಡಿಶಾ, ಛತ್ತೀಸ್ಗಢ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರದ ಮೂಲಕ ಹಾದುಹೋಗಲಿದೆ. ಈ ಹಿಂದೆ ‘ಭಾರತ್ ನ್ಯಾಯ್ ಯಾತ್ರೆ’ ಎಂದು ಹೆಸರಿಸಲಾಗಿದ್ದ ಈ ಉಪಕ್ರಮವನ್ನು ‘ಭಾರತ್ ಜೋಡೋ ನ್ಯಾಯ್ ಯಾತ್ರಾ’ ಎಂದು ಮರುನಾಮಕರಣ ಮಾಡಲಾಯಿತು. ಇದಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೈರಾಮ್ ರಮೇಶ್, ಪ್ರತಿಪಕ್ಷಗಳ ಐಎನ್ಡಿಎಎ ಬಣದ…

Read More

ಬೆಂಗಳೂರು: ಮುಖ್ಯಮಂತ್ರಿಗಳೇ ತಾವು ಬಿಡುಗಡೆ ಮಾಡಿರುವ 105 ಕೋಟಿ ಎಷ್ಟು ಲಕ್ಷ ಜನ ರೈತರಿಗೆ ತಲುಪಲಿದೆ. ಅರೆಕಾಸಿನ ಮಜ್ಜಿಗೆಗೂ ಸಾಲುವುದಿಲ್ಲ. ಅಗಾಧ ಪ್ರಮಾಣದ ಬರ ಮತ್ತು ತಾವು ಬಿಡುಗಡೆ ಮಾಡಿರುವ ಹಣವನ್ನು ನೋಡಿದರೆ, ರೈತರಿಗೆ ಚಿಲ್ಲರೆ ಕಾಸಿನ ಭಿಕ್ಷೆ ಕೊಟ್ಟಂತೆ ಕಾಣುತ್ತದೆ ಎಂಬುದಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ. ಈ ಕುರಿತಂತೆ ಇಂದು ಎಕ್ಸ್ ಮಾಡಿರುವಂತ ಅವರು, ಎನ್ ಡಿ ಆರ್ ಎಫ್ ಮಾರ್ಗಸೂಚಿ ಪ್ರಕಾರ ಕೇಂದ್ರ ಸರ್ಕಾರ ಬಿಡುಗಡೆ ಮಾಡುವ ಹಣದ ಬಗ್ಗೆ ನಾವೂ ಕೂಡ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇವೆ. ಆದರೆ, ನಿಮ್ಮನ್ನು ಆಯ್ಕೆ ಮಾಡಿ ಅಧಿಕಾರದ ಗದ್ದುಗೆಗೆ ಕುಂದರಿಸಿರುವ ರೈತಾಪಿ ವರ್ಗವನ್ನು ರಕ್ಷಿಸುವಂತದ್ದು ನಿಮ್ಮ ಕರ್ತವ್ಯ ನೀವು ಕೂಡಲೇ ಸಂಪೂರ್ಣವಾಗಿರುವ ಹಣವನ್ನು ಬಿಡಿಗಡೆ ಮಾಡಬೇಕೆಂದು ಆಗ್ರಹ ಮಾಡಿದ್ದಾರೆ. ಈಗಾಗಲೇ ಸಾಕಷ್ಟು ಕಾಲಹರಣವನ್ನು ಮಾಡಿರುತ್ತೀರಿ, ರಾಜ್ಯದ ಆರ್ಥಿಕ ಸ್ಥಿತಿ ಉತ್ತಮ ಇದೆ ಎಂದು ಬೆನ್ನು ತಟ್ಟಿಕೊಳ್ಳುತ್ತಿರುವ ನಿಮ್ಮ ಸರ್ಕಾರ ಯಾಕೆ ರೈತರ ಪರಿಹಾರವನ್ನು ಪೂರ್ಣ ಬಿಡುಗಡೆ ಮಾಡುತ್ತಿಲ್ಲ.…

Read More

ನವದೆಹಲಿ: ಜನವರಿ 14 ರಿಂದ ಪ್ರಾರಂಭವಾಗಲಿರುವ ರಾಹುಲ್ ಗಾಂಧಿ ಅವರ ಮುಂಬರುವ ಭಾರತ್ ಜೋಡೋ ನ್ಯಾಯ್ ಯಾತ್ರೆಯ ( Bharat Jodo Nyay Yatra ) ಲಾಂಛನವನ್ನು ಕಾಂಗ್ರೆಸ್ ಉನ್ನತ ನಾಯಕರು ಶನಿವಾರ ಅನಾವರಣಗೊಳಿಸಿದರು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಹಿರಿಯ ನಾಯಕರಾದ ಜೈರಾಮ್ ರಮೇಶ್ ಮತ್ತು ಕೆ.ಸಿ.ವೇಣುಗೋಪಾಲ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಲಾಂಛನವನ್ನು ಅನಾವರಣಗೊಳಿಸಿದರು. ನಿನ್ನೆಯಷ್ಟೇ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಹೆಸರನ್ನು ಮರು ನಾಮಕರಣಗೊಳಿಸಲಾಗಿತ್ತು. ಭಾರತ್ ಜೋಡೋ ಯಾತ್ರೆಯ ಬದಲಾಗಿ ಭಾರತ್ ಜೋಡೋ ನ್ಯಾಯ್ ಯಾತ್ರೆ ಎಂಬುದಾಗಿ ಮರು ನಾಮಕರಣಗೊಳಿಸಲಾಗಿತ್ತು. ಜ.14ರಿಂದ ಈ ಯಾತ್ರೆ ಆರಂಭಗೊಳ್ಳಲಿದ್ದು, ಇಂದು ಭಾರತ್ ಜೋಡೋ ನ್ಯಾಯ್ ಯಾತ್ರೆಗೆ ನೂತನ ಲಾಂಛನವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಹಿರಿಯ ನಾಯಕರಾದ ಜೈರಾಮ್ ರಮೇಶ್, ಕೆಸಿ ವೇಣುಗೋಪಾಲ್ ಅನಾವರಣಗೊಳಿಸಿದ್ದಾರೆ. https://twitter.com/ANI/status/1743534563790594140 ನೇಪಾಳದ ಜನಕ್ಪುರ ಧಾಮ್ನಿಂದ ಪ್ರಾರಂಭವಾದ ‘ಭರ್ ಯಾತ್ರೆ’ ಜನವರಿ 22 ರಂದು ರಾಮ ಮಂದಿರದ ‘ಪ್ರಾಣ ಪ್ರತಿಷ್ಠಾ’ ಸಮಾರಂಭಕ್ಕೆ ಮುಂಚಿತವಾಗಿ ಉತ್ತರ ಪ್ರದೇಶದ ಅಯೋಧ್ಯೆಯನ್ನು…

Read More

ಬೆಂಗಳೂರು: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು, ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಅಂತ್ಯವಾಗಲಿದೆ ಅಂತ ಹೇಳಿದ್ದರು. ಅವರ ಹೇಳಿಕೆಗೆ ಖಡಕ್ ತಿರುಗೇಟು ನೀಡಿರೋ ಸಿಎಂ ಸಿದ್ಧರಾಮಯ್ಯ, ಏನು ಹೇಳಿದ್ದಾರೆ ಅಂತ ಮುಂದೆ ಓದಿ. ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು,  ನನ್ನ ಮತ್ತು ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಅಂತ್ಯವಾಗಲಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಭವಿಷ್ಯ ನುಡಿದಿದ್ದಾರೆ. ವಯಸ್ಸಿನಲ್ಲಿ ದೊಡ್ಡವರಾದ ದೇವೇಗೌಡರ ಈ ಶಾಪವನ್ನು ಆಶೀರ್ವಾದ ಎಂದೇ ಸ್ವೀಕರಿಸಿದ್ದೇನೆ. ಅವರಿಗೆ ಅವರ ಪಕ್ಷಕ್ಕೆ ದೀರ್ಘ ಕಾಲ ಆಯುರಾರೋಗ್ಯವನ್ನು ಪರಮಾತ್ಮ ಕರುಣಿಸಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ. ರಾಜಕೀಯ ಭಿನ್ನಾಭಿಪ್ರಾಯ ಏನೇ ಇರಲಿ, ಹಿರಿಯರು ಕಿರಿಯರಿಗೆ ಆಶೀರ್ವಾದ ಮಾಡಬೇಕು, ಶಾಪ ಕೊಡಬಾರದು. ದಶಕಗಳ ಕಾಲ ಜಾತ್ಯತೀತತೆಯ ಕಿರೀಟ ಧರಿಸಿಕೊಂಡು ಬಂದಿದ್ದ ಗೌಡರು ಇಳಿಗಾಲದಲ್ಲಿ ಅದನ್ನು ಕೆಳಗೆಸೆದು ಕೋಮುವಾದಿ ಕಿರೀಟವನ್ನು ಧರಿಸಿಕೊಳ್ಳಬೇಕಾಗಿ ಬಂದಿರುವುದರಿಂದ ನೊಂದು ಹತಾಶೆಯಿಂದ ಇಂತಹ ಹೇಳಿಕೆ ನೀಡಿರಬಹುದೆಂದು ಭಾವಿಸಿದ್ದೇನೆ.…

Read More

ಕಲಬುರ್ಗಿ: ಕಲ್ಯಾಣ ಕರ್ನಾಟಕ‌ ಅಭಿವೃದ್ದಿ ನಿಗಮದ ವತಿಯಿಂದ ಅರಣ್ಯ ಇಲಾಖೆಗೆ ರೂ 30 ಕೋಟಿ ಅನುದಾನ‌ ಬಿಡುಗಡೆ ಮಾಡಲಾಗುತ್ತಿದ್ದು. ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆಗೆ ಈ ಅನುದಾನ ಬಳಸಿಕೊಳ್ಳಬೇಕು. ಇದಲ್ಲದೇ ಇನ್ನೂ ಬೇಕಾಗುವ ಅನುದಾನ ಬಿಡುಗಡೆ ಮಾಡಲು ಮಾನ್ಯ ಅರಣ್ಯ ಸಚಿವರಿಗೆ ಮನವಿ ಸಲ್ಲಿಸಿ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಹೇಳಿದರು. ಪ್ರಕೃತಿಯ ಆಸ್ತಿಯನ್ನು ಕಾಪಾಡುವ ಅರಣ್ಯ ಸಿಬ್ಬಂದಿಗಳ ಕಾರ್ಯಕ್ಷಮತೆ ದೇಶದ ಗಡಿ ಕಾಯುವ ಸೈನಿಕರ ಸೇವೆಗೆ ಸಮಾನವಾದುದು ಎಂದು ಶ್ಲಾಘಿಸಿದ ಸಚಿವರು ನೈಸರ್ಗಿಕ ವಿಕೋಪ, ವನ್ಯ ಜೀವಿಗಳ ನಡುವಿನ ಸಂಘರ್ಷ, ಅರಣ್ಯ ಚೋರರ ವಿರುದ್ದದ ಕಾರ್ಯಾಚರಣೆ ಸೇರಿದಂತೆ ಹಲವಾರು ಅಡೆತಡೆಗಳ ನಡುವೆ ಕೆಲಸ ಮಾಡುವ ನಿಮ್ಮ ಸೇವೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಿದೆ. ನಾವು ವನ್ಯಜೀವಿಗಳ ಬಗ್ಗೆ ತೋರಿಸುವ ಕಾಳಜಿ ಅರಣ್ಯ ಸಿಬ್ಬಂದಿಗಳಿಗೂ ತೋರಿಸಬೇಕಿದೆ ಎಂದು ಕಾಳಜಿ ವ್ಯಕ್ತಪಡಿಸಿದರು. ಅರಣ್ಯ ಇಲಾಖೆಯ ವತಿಯಿಂದ ಏರ್ಪಡಿಸಲಾಗಿದ್ದ ರಾಜ್ಯ ಮಟ್ಟದ ಅರಣ್ಯ ಕ್ರೀಡಾಕೂಟದ ಸಮಾರಂಭದಲ್ಲಿ…

Read More