Author: kannadanewsnow09

ಬೆಂಗಳೂರು: ನಿನ್ನೆ ಮಧ್ಯಾಹ್ನ ಬೆಂಗಳೂರಿನ ಕುಂದಲಹಳ್ಳಿ ಬಳಿಯಿರುವಂತ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟಗೊಂಡಿತ್ತು. ಈ ಘಟನೆಯಲ್ಲಿ 10 ಮಂದಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಯಲ್ಲಿ ಸಿಲುಕಿ ಗಾಯಗೊಳ್ಳಬೇಕಿದ್ದಂತ ಆ ಯುವಕನ ಜೀವವನ್ನು ಅಮ್ಮನ ಆ ಒಂದು ಪೋನ್ ಕರೆ ಉಳಿಸಿದೆ.  ಈ ಕುರಿತಂತೆ ಯುವಕ ಕುಮಾರ್ ಎಂಬಾತ ತನ್ನ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದು, ನನ್ನನ್ನು ನಿನ್ನೆ ರಾಮೇಶ್ವರಂ ಕೆಫೆಯಲ್ಲಿ ಬ್ಲಾಸ್ಟ್ ನಲ್ಲಿ ಸಿಲುಕಿ ಗಾಯಗೊಳ್ಳಬೇಕಾಗಿದ್ದನ್ನು ಅಮ್ಮನ ಕರೆ ಕಾಯಿತು ಎಂದಿದ್ದಾನೆ. ರಾಮೇಶ್ವರಂ ಕೆಫೆಗೆ ನಿನ್ನೆ ತಿನ್ನೋಕೆ ಹೋಗಿದ್ದೆನು. ದೋಸೆ ತೆಗೆದುಕೊಂಡು ತಿನ್ನೋಕೆ ಕುಳಿತೆ. ದೋಸೆ ತಿನ್ನುತ್ತಿದ್ದಾಗ ಅಮ್ಮನ ಪೋನ್ ಬಂತು. ಕೆಫೆಯಲ್ಲಿ ಜನರ ಸದ್ಧಿನಿಂದ ಸರಿಯಾಗಿ ಕೇಳಿಸದ ಕಾರಣ, ಅಮ್ಮನ ಜೊತೆಗೆ ಮಾತನಾಡೋಕೆ ಆಚೆ ಬಂದೆ ಎಂದಿದ್ದಾನೆ. ನಾನು ರಾಮೇಶ್ವರಂ ಕೆಫೆಯಿಂದ 10 ಮೀಟರ್ ದೂರ ಅಮ್ಮನ ಜೊತೆಗೆ ಮಾತನಾಡೋದಕ್ಕೆ ದೋಸೆ ತಿನ್ನೋದು ಬಿಟ್ಟು ಸಾಗುತ್ತಿದ್ದಂತೇ ಬ್ಲಾಸ್ಟ್ ಆಯಿತು. ಅದೃಷ್ಠ ವಶಾತ್ ಅಮ್ಮನ ಪೋನ್ ಕರೆಯ ಕಾರಣದಿಂದ ನಾನು…

Read More

ನವದೆಹಲಿ: ತಂತ್ರಜ್ಞಾನ ದೈತ್ಯ ಗೂಗಲ್ ತನ್ನ ಪ್ಲೇ ಸ್ಟೋರ್ನಿಂದ ಪಟ್ಟಿಯಿಂದ ತೆಗೆದುಹಾಕಿದ್ದ ಕೆಲವು ಭಾರತೀಯ ಅಪ್ಲಿಕೇಶನ್ಗಳನ್ನು ಮರುಸ್ಥಾಪಿಸಿದೆ. ಅದರಲ್ಲೂ ನೌಕರಿ, 99 ಎಕರೆ ಆಪ್ ಗಳನ್ನು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಮರು ಸೇರ್ಪಡೆ ಮಾಡಲಾಗಿದೆ. ಕೆಲವು ಅಪ್ಲಿಕೇಶನ್ ಗಳನ್ನು ಪಟ್ಟಿಯಿಂದ ತೆಗೆದುಹಾಕುವ ಗೂಗಲ್ ಕ್ರಮವನ್ನು ಸರ್ಕಾರ ಬಲವಾಗಿ ವಿರೋಧಿಸುತ್ತದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ಗೂಗಲ್ ಕೆಲವು ಅಪ್ಲಿಕೇಶನ್ ಗಳನ್ನು ಪ್ಲೇ ಸ್ಟೋರ್ ನಿಂದ ಪಟ್ಟಿಯಿಂದ ತೆಗೆದುಹಾಕಿರುವ ಬಗ್ಗೆ ಸರ್ಕಾರ ಬಲವಾದ ದೃಷ್ಟಿಕೋನವನ್ನು ಹೊಂದಿದೆ. ಅಪ್ಲಿಕೇಶನ್ಗಳನ್ನು ಪಟ್ಟಿಯಿಂದ ತೆಗೆದುಹಾಕಲು ನಾವು ಅನುಮತಿಸುವುದಿಲ್ಲ ಎಂದು ಅವರು ಹೇಳಿದರು. https://twitter.com/sbikh/status/1763845405622796363 ಮಧ್ಯಪ್ರವೇಶದ ನಂತರ, ಗೂಗಲ್ ಇನ್ಫೋ ಎಡ್ಜ್ ಇಂಡಿಯಾದ ಕೆಲವು ಪ್ರಮುಖ ಅಪ್ಲಿಕೇಶನ್ಗಳಾದ ನೌಕ್ರಿ, 99 ಎಕರೆ, ನೌಕ್ರಿ ಗಲ್ಫ್ ಅನ್ನು ಪುನಃಸ್ಥಾಪಿಸಿದೆ. ಸರ್ಕಾರದ ಮಧ್ಯಪ್ರವೇಶದ ನಂತರ ಪೀಪಲ್ ಗ್ರೂಪ್ನ ವೈವಾಹಿಕ ಅಪ್ಲಿಕೇಶನ್ ಶಾದಿ ಕೂಡ ಶನಿವಾರ ಮಧ್ಯಾಹ್ನ ಪ್ಲೇ ಸ್ಟೋರ್ಗೆ ಮರಳಿತು. ಪಟ್ಟಿಯಿಂದ ತೆಗೆದುಹಾಕಲಾದ…

Read More

ಬೆಂಗಳೂರು: ನಗರದ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣದ ಸಂಬಂಧ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತಮ್ಮ ಕಾವೇರಿ ನಿವಾಸದಲ್ಲಿ ಮಹತ್ವದ ಸಭೆಯನ್ನು ನಡೆಸುತ್ತಿದ್ದಾರೆ. ನಿನ್ನೆ ಕುಂದಲಹಳ್ಳಿ ಬಳಿಯ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟಗೊಂಡಿತ್ತು. ಈ ಪ್ರಕರಣ ಸಂಬಂಧ ಈಗಾಗಲೇ ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದಿರುವಂತ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಬೆನ್ನಲ್ಲೇ ಸಿಎಂ ಸಿದ್ಧರಾಮಯ್ಯ ಅವರು ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಮಹತ್ವದ ಸಭೆಯನ್ನು ಗೃಹ ಇಲಾಖೆಯ ಅಧಿಕಾರಿಗಳ ಜೊತೆಗೆ ನಡೆಸುತ್ತಿದ್ದಾರೆ. ಈ ಸಭೆಯಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್, ಪೊಲೀಸ್ ಅಧಿಕಾರಿಗಳು ಭಾಗಿಯಾಗಿರೋದಾಗಿ ತಿಳಿದು ಬಂದಿದೆ. ಕಾವೇರಿ ನಿವಾಸದಲ್ಲಿನ ಬಾಂಬ್ ಸ್ಪೋಟ ಪ್ರಕರಣ ಸಂಬಂಧ ಘಟನೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿಯನ್ನು ಸಿಎಂ ಸಿದ್ಧರಾಮಯ್ಯ ಪಡೆಯುತ್ತಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ. ಈ ಬಗ್ಗೆ ಮತ್ತಷ್ಟು ಮಾಹಿತಿ ನಿರೀಕ್ಷಿಸಲಾಗಿದೆ. https://kannadanewsnow.com/kannada/good-news-for-job-seekers-bmtc-invites-applications-for-2500-vacancies/ https://kannadanewsnow.com/kannada/google-play-stores-gatepass-for-indian-apps-governments-first-reaction/

Read More

ಶಿವಮೊಗ್ಗ : ತೋಟಗಾರಿಕೆ ಇಲಾಖೆಯು 2024-25 ನೇ ಸಾಲಿನಲ್ಲಿ ರೈತರ ಮಕ್ಕಳಿಗಾಗಿ ನಡೆಸುವ 10 ತಿಂಗಳ ತರಬೇತಿಯನ್ನು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೊಸೂರು ತೋಟಗಾರಿಕ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ್ದು, ಶಿವಮೊಗ್ಗ ಜಿಲ್ಲೆಯ ಆಸಕ್ತ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ನಿಗದಿತ ನಮೂನೆ ಅರ್ಜಿಗಳನ್ನು ತೋಟಗಾರಿಕೆ ಇಲಾಖೆಯ ವೆಬ್ ಸೈಟ್ https://horticulturedir.karnataka.gov.in ನಿಂದ ಡೌನ್‍ಲೋಡ್ ಮಾಡಿಕೊಂಡು ಅಥವಾ ಶಿವಮೊಗ್ಗ ಜಿಲ್ಲೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಶಿವಮೊಗ್ಗ ಕಛೇರಿಯಿಂದ ಅಥವಾ ಆಯಾ ತಾಲೂಕಿನ ತೋಟಗಾರಿಕೆ ಕಛೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಏ.01 ರೊಳಗಾಗಿ ಆಯಾ ಸಂಬಂಧ ಪಟ್ಟ ಕಛೇರಿಗಳಿಗೆ ಸಲ್ಲಿಸುವಂತೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ತರಬೇತಿಗೆ ಅರ್ಹತೆಗಳು ಎಸ್.ಎಸ್.ಎಲ್.ಸಿಯಲ್ಲಿ ಉತ್ತಿರ್ಣರಾಗಿರಬೇಕು ಹಾಗೂ ಅಭ್ಯರ್ಥಿಯ ತಂದೆ/ತಾಯಿ/ಪೋಷಕರು ಕಡ್ಡಾಯವಾಗಿ ಜಮೀನು ಹೊಂದಿದ್ದು, ಸ್ವಂತ ಸಾಗುವಳಿ ಮಾಡುತ್ತಿರಬೇಕು. ಹೆಚ್ಚಿನ ವಿವರಗಳಿಗೆ ದೂ. ಸಂ.: 08182-222794/6986950460 ಸಂಪರ್ಕಿಸಬಹುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ರಾಜ್ಯವಲಯ ಶಿವಮೊಗ್ಗ…

Read More

ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ಸ್ಪೋಟ ಪ್ರಕರಣ ಸಂಬಂಧ ಶಂಕಿತ ಆರೋಪಿಯು ಬಿಎಂಟಿಸಿಯ ವೋಲ್ವೋ ಬಸ್ಸಿನಲ್ಲಿ ಪ್ರಯಾಣಿಸಿದಂತ ಆತಂಕಕಾರಿ ಮಾಹಿತಿ ಬಹಿರಂಗಗೊಂಡಿದೆ. ಆತನ ಎಲ್ಲಿಂದ ಎಲ್ಲಿಗೆ ಪ್ರಯಾಣಿಸಿದ ಅನ್ನೋ ಮಾಹಿತಿ ಮುಂದೆ ಓದಿ. ನಿನ್ನೆ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟಕಕ್ಕೂ ಮುನ್ನಾ, ಶಂಕಿತ ಆರೋಪಿ ಬಿಎಂಟಿಸಿಯ ವೋಲ್ವೋ ಬಸ್ಸಿನಲ್ಲಿ ಪ್ರಯಾಣ ಮಾಡಿರೋ ಮಾಹಿತಿ ಬಹಿರಂಗವಾಗಿದೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ. ಬೆಂಗಳೂರಿನ ಡಿಪೋ-3ರಕ್ಕೆ ಸೇರಿದಂತ ಕೆಎ-57, ಎಫ್-186 ಬಸ್ಸಿನಲ್ಲಿ ಶಂಕಿತ ಆರೋಪಿ ರೂಟ್ ನಂ.500ಸಿ ನಲ್ಲಿ ಪ್ರಯಾಣಿಸಿದ್ದಾನೆ. ಬನಶಂಕರಿಯಿಂದ ಐಟಿಪಿಎಲ್ ಮಾರ್ಗದ ನಡುವೆ ಸಂಚರಿಸುವಂತ ಈ ಬಸ್ ಸಿಲ್ಕ್ ಬೋರ್ಡ್ ಮೂಲಕ ಕೂಡ ಸಂಚರಿಸುತ್ತೆ. ಇಂತಹ ಬಿಎಂಟಿಸಿ ವೋಲ್ವೋ ಬಸ್ಸನ್ನು ಶಂಕಿತ ಬಾಂಬ್ ಬ್ಲಾಸ್ಟ್ ಆರೋಪಿ ಕುಂದಲಹಳ್ಳಿ ಬಸ್ ನಿಲ್ದಾಣದಲ್ಲಿ ಹತ್ತಿರೋ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಕುಂದಲಹಳ್ಳಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತಿ, ಸಿಎಂಆರ್ ಐಟಿ ಕಾಲೇಜಿನ ಬಳಿ ಇಳಿದಿರೋ ಮಾಹಿತಿಯನ್ನು ಬಸ್ ಚಾಲಕ, ಕಂಡಕ್ಟರ್ ಮೂಲಕ ಮಾಹಿತಿ…

Read More

ಬೆಂಗಳೂರು: ರಾಮೇಶ್ವರಂ ಕೆಫೆ ಬಳಿ ನಡೆದ ಬಾಂಬ್ ಸ್ಪೋಟ ಪ್ರಕರಣದ ಹಿಂದೆ‌ ದೊಡ್ಡ ಕಾರ್ಯತಂತ್ರ ಅಡಗಿದೆ.ರಾಜ್ಯ ಸರ್ಕಾರ ಇದನ್ನು ಲಘುವಾಗಿ ಪರಿಗಣಿಸಿದರೆ, ಭಯೋತ್ಪಾದಕರಿಗೆ ಪ್ರೋತ್ಸಾಹ ಕೊಟ್ಟಂತಾಗುತ್ತದೆ. ರಾಜ್ಯ ಸರ್ಕಾರ ಈ ಪ್ರಕರಣವನ್ನು ಎನ್ ಐಎ ಗೆ ವಹಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಾಂಬ್ ಸ್ಪೋಟಗೊಂಡು ತೀವ್ರವಾಗಿ ಗಾಯಗೊಂಡಿದ್ದರೂ ಅದರ ಗಂಭೀರತೆ ಸರ್ಕಾರಕ್ಕೆ ಇಲ್ಲ. ಅದು ಲಘು ಬಾಂಬ್ ಅಂತ ಹೇಳುತ್ತಾರೆ. ಗಂಭೀರವಾಗಿ ಪರಿಗಣಿಸಲು ಸಾವು ನೋವು ಆಗಬೇಕೆ.‌ ಇದರ ಹಿಂದೆ ದೊಡ್ಡ ಸ್ಲೀಪರ್ ಸೆಲ್ ಇದೆ. ಒಂದು ಕಡೆ ಪಾಕಿಸ್ತಾನ ಜಿಂದಾಬಾದ್ ಅಂತ ಹೇಳಿದ್ದಾರೆ. ಇದೆಲ್ಲದರ ಹಿಂದ ದೊಡ್ಡ ಕಾರ್ಯತಂತ್ರ ಅಡಗಿದೆ. ಈ ಪ್ರಕರಣವನ್ನು ತಕ್ಷಣ ಎನ್ ಐಎ ಗೆ ವಹಿಸಬೇಕು. ಇದರಿಂದ ಅಂತಾರಾಷ್ಟ್ರೀಯ ಮಟ್ಟದ ಲಿಂಕ್ ಇರುವ ಬಗ್ಗೆ ಮಾಹಿತಿ ದೊರೆಯುತ್ತದೆ.‌ ಸರ್ಕಾರ ಗಂಭೀರವಾಗಿ ಪರಿಗಣಿಸದಿದ್ದರೆ, ಅವರಿಗೆ ಪ್ರೊತ್ಸಾಹ ಕೊಟ್ಡಂತಾಗುತ್ತದೆ ಎಂದು ಹೇಳಿದರು. ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್…

Read More

ಬೆಂಗಳೂರು: ನಗರದ ಕುಂದಲಹಳ್ಳಿ ಬಳಿಯಿರುವಂತ ರಾಮೇಶ್ವರಂ ಕೆಫೆಯಲ್ಲಿ ನಿನ್ನೆ ಉಂಟಾದಂತ ಬಾಂಬ್ ಸ್ಪೋಟ ಪ್ರಕರಣ ಸಂಬಂಧ ಪೊಲೀಸರು ನಾಲ್ವರು ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ. ಈ ಕುರಿತಂತೆ ಪೊಲೀಸ್ ಉನ್ನತ ಮೂಲಗಳಿಂದ ಮಾಹಿತಿ ತಿಳಿದು ಬಂದಿದ್ದು, ಈ ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣದ ತನಿಖೆಯನ್ನು ನಡೆಸುತ್ತಿರುವಂತ ಸಿಸಿಬಿಯ ಅಧಿಕಾರಿಗಳು ಧಾರವಾಡ, ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ನಾಲ್ವರು ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದಿರೋದಾಗಿ ತಿಳಿಸಿವೆ. ಅಂದಹಾಗೇ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಪ್ರತಿಕ್ರಿಯಿಸಿ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣವನ್ನು ಇಲ್ಲಿಯವರೆಗೆ ಪಡೆದ ವಿವಿಧನ್ನ ಸುಳಿವುಗಳ ಆಧಾರದ ಮೇಲೆ ಹಲವಾರು ತಂಡಗಳು ತನಿಖೆಯನ್ನು ನಡೆಸುತ್ತಿವೆ. ಪ್ರಕರಣದ ಸೂಕ್ಷ್ಮತೆ, ಭದ್ರತಾ ದೃಷ್ಠಿಯಿಂದ ಮಾಧ್ಯಮಗಳು ಊಹಾಪೋಹಗಳಲ್ಲಿ ತೊಡಗದಂತೆ, ಪೊಲೀಸರಿಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ. https://kannadanewsnow.com/kannada/good-news-for-job-seekers-bmtc-invites-applications-for-2500-vacancies/ https://kannadanewsnow.com/kannada/minister-chaluvarayaswamy-accuses-bjp-of-being-involved-in-rameswaram-cafe-blast/

Read More

ಬೆಂಗಳೂರು: ನಿನ್ನೆ ಬೆಂಗಳೂರಿನ ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣದ ಹಿಂದೆ ಬಿಜೆಪಿಯವರ ಕೈವಾಡವಿದೆ ಎಂಬುದಾಗಿ ಸಚಿವ ಚಲುವರಾಯಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತಂತೆ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು ಈ ಹಿಂದೆಯೂ ಹಲವು ಬಾರಿ ನಡೆದಂತ ಪ್ರಕರಣಗಳಲ್ಲಿ ಬಿಜೆಪಿಯವರ ಕೈವಾಡವಿತ್ತು. ನಿನ್ನೆ ರಾಮೇಶ್ವರಂ ಕೆಫೆಯಲ್ಲಿ ನಡೆದಂತ ಬಾಂಬ್ ಬ್ಲಾಸ್ಟ್ ಪ್ರಕರಣದ ಹಿಂದೆ ಬಿಜೆಪಿಯವರ ಕೈವಾಡ ಇರೋದಾಗಿ ಶಂಕೆ ವ್ಯಕ್ತವಾಗಿದೆ ಎಂದರು. ರಾಮೇಶ್ವರಂ ಕೆಫೆ ಬ್ಲಾಸ್ಟ್ ಬ್ಯುಸಿನೆಸ್ ವೈಷಮ್ಯದಿಂದಲೂ ನಡೆದಿರೋದು ಮೇಲ್ ನೋಟಕ್ಕೆ ಕಂಡು ಬರುತ್ತಿದೆ. ಅವರ ಹೋಟೆಲ್ ಬ್ಯುಸಿನೆಸ್ ಚೆನ್ನಾಗಿ ನಡೆಯುತ್ತಿದೆ. ಬೆಂಗಳೂರಿನ ಹಲವೆಡೆ ಅವರ ಕೆಫೆಗಳಿದ್ದಾವೆ ಎಂದು ಹೇಳಿದರು. ರಾಮೇಶ್ವರಂ ಕೆಫೆ ಸ್ಪೋಟಕದಂತೆ ಇಂತಹ ಹಲವು ಘಟನೆಗಳಲ್ಲಿ ಬಿಜೆಪಿಯವರ ಕೈವಾಡವಿದೆ. ಆದರೇ ನಾನು ಅವರೇ ಮಾಡಿದ್ದಾರೆ ಎಂದು ಹೇಳುತ್ತಿಲ್ಲ. ಇರಬಹುದು ಎಂಬ ಶಂಕೆಯನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರೇ ಮಾಡಿದ್ದಾರೇ, ಇವರು ಮಾಡಿದ್ದಾರೆ ಎಂಬುದು ತನಿಖೆಯಿಂದ ತಿಳಿದು ಬರಬೇಕು ಎಂದರು. ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣದ ತನಿಖೆಯನ್ನು ಪೊಲೀಸರು ಶರವೇಗದಲ್ಲಿ ನಡೆಸುತ್ತಿದ್ದಾರೆ.…

Read More

ಶಿವಮೊಗ್ಗ: ತಮ್ಮ ಅಧಿಕಾರಾವಧಿಯಲ್ಲಿ ಬಡ ಮತ್ತು ಮಧ್ಯಮ ವರ್ಗದವರಿಗೆ ಕೈಗೆಟಕುವ ದರದಲ್ಲಿ ಸುಮಾರು 5 ರಿಂದ 10 ಸಾವಿರ ನಿವೇಶನಗಳನ್ನು ಹಂಚುವ ಉದ್ದೇಶ ಹೊಂದಿದ್ದೇನೆ ಎಂದು ನೂತನ ಸೂಡಾ ಅಧ್ಯಕ್ಷ ಹೆಚ್ ಎಸ್ ಸುಂದರೇಶ್ ತಿಳಿಸಿದರು. ಇಂದು ಸೂಡಾ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ, ನನ್ನನ್ನು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಸೂಡಾ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ನಿವೇಶನ ಹಂಚಿಕೆಯಾಗಿಲ್ಲ. ತಮ್ಮ ಅವಧಿಯಲ್ಲಿ ಬಡ-ಮಧ್ಯಮ ವರ್ಗದವರಿಗೆ ಅನುಕೂಲವಾಗುವಂತೆ ನಿವೇಶನ ಹಂಚಿಕೆ ಮಾಡಲು ಕ್ರಮ ವಹಿಸಲಾಗುವುದು. ಸೂಡಾ ಪರಿಷ್ಕøತ ಮಹಾಯೋಜನೆ(ಸಿಡಿಪಿ) ಕಾರ್ಯ ಪ್ರಗತಿಯಲ್ಲಿದೆ. ಪ್ರಾಧಿಕಾರದ ವತಿಯಿಂದ ಶಿವಮೊಗ್ಗ ನಗರದ ಊರಗಡೂರು ಗ್ರಾಮದಲ್ಲಿ ವಸತಿ ಬಡಾವಣೆಯನ್ನು ನಿರ್ಮಿಸುತ್ತಿದ್ದು ಸಿವಿಲ್ ಕಾಮಗಾರಿ ಪ್ರಗತಿಯಲ್ಲಿರುತ್ತದೆ. ಕಾಮಗಾರಿಗಳು ಪೂರ್ಣಗೊಂಡ ನಂತರ ಲಭ್ಯವಾಗುವ ಒಟ್ಟು 684 ನಿವೇಶನಗಳನ್ನು ಸಾರ್ವಜನಿಕರಿಗೆ ಹಂಚಿಕೆ ಮಾಡಲು ಅರ್ಜಿ ಆಹ್ವಾನಿಸಿ ಕ್ರಮ ತೆಗೆದುಕೊಳ್ಳಲಾಗುವುದು. ಸೋಮಿನಕೊಪ್ಪದ ಜೆ.ಹೆಚ್.ಪಟೇಲ್ ಬಡಾವಣೆಯಲ್ಲಿ ಲಭ್ಯವಿರುವ 01 ಎಕರೆ 09 ಗುಂಟೆ…

Read More

ಬೆಂಗಳೂರು: ನಗರದ ರಾಮೇಶ್ವರಂ ಕೆಫೆಯಲ್ಲಿ ನಿನ್ನೆ ಉಂಟಾದಂತ ಬಾಂಬ್ ಸ್ಪೋಟ ಪ್ರಕರಣದಲ್ಲಿ ಗಾಯಗೊಂಡಿರುವಂತ ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ ಎಂಬುದಾಗಿ ಸಿಎಂ ಸಿದ್ಧರಾಮಯ್ಯ ಘೋಷಣೆ ಮಾಡಿದ್ದಾರೆ. ಇಂದು ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಂತ ಆಸ್ಪತ್ರೆಗಳಿಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿ, ಧೈರ್ಯ ತುಂಬಿದ ಬಳಿಕ ಮಾತನಾಡಿದಂತ ಅವರು,  ರಾಮೇಶ್ವರಂ ಕೆಫೆಯಲ್ಲಿ‌ ನಡೆದ ಸ್ಫೋಟ ಪ್ರಕರಣದಲ್ಲಿ ಗಾಯಗೊಂಡವರಿಗೆ ಉತ್ತಮ ಚಿಕಿತ್ಸೆಯನ್ನು ನೀಡಲು ಸೂಚಿಸಲಾಗಿದೆ ಎಂದರು. ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಆದಾಗ ಮಹಿಳೆ ಸ್ವರ್ಣಾಂಭ ಎಂಬುವರು ಸ್ಥಳದಲ್ಲೇ ಇದ್ದಿದ್ದರಿಂದ ಹೆಚ್ಚು ಗಾಯಗೊಂಡಿದ್ದಾರೆ. ಗಾಯಾಳುಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ. ಮೂವರಲ್ಲಿ ಒಬ್ಬರು ಇಂದು ಡಿಚ್ಚಾರ್ಜ್ ಆಗಲಿದ್ದಾರೆ ಎಂದು ತಿಳಿಸಿದರು. ರಾಜ್ಯದಲ್ಲಿ ಯಾವುದೇ ಭದ್ರತಾ ಲೋಪ ಆಗಿಲ್ಲ. ಮಂಗಳೂರಿನ ಕುಕ್ಕರ್ ಬ್ಲಾಸ್ಟ್ ಗೂ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟಕ್ಕೂ ಯಾವುದೇ ಸಂಬಂಧವಿಲ್ಲ. ಪೊಲೀಸರು ಎಲ್ಲಾ ನಿಟ್ಟಿನಲ್ಲಿಯೂ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದರು. https://kannadanewsnow.com/kannada/maha-shivratri-2024-heres-the-date-history-significance-puja-timings-other-important-information/ https://kannadanewsnow.com/kannada/good-news-for-job-seekers-bmtc-invites-applications-for-2500-vacancies/

Read More