Subscribe to Updates
Get the latest creative news from FooBar about art, design and business.
Author: kannadanewsnow09
ಚಾಮರಾಜನಗರ: ಜಿಲ್ಲೆಯಲ್ಲಿ ಕೋಂಬಿಂಗ್ ಕಾರ್ಯಾಚರಣೆಯ ವೇಳೆಯಲ್ಲಿ ಹಾಡಹಗಲೇ ಹುಲಿಯೊಂದು ಹಸುವಿನ ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ. ಹೌದು. ಕೋಂಬಿಂಗ್ ಕಾರ್ಯಾಚರಣೆಯ ವೇಳೆಯಲ್ಲಿ ಹುಲಿ ದಾಳಿಗೆ ಹಸು ಬಲಿಯಾಗಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಕಲ್ಲಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಪಡಗೂರು ಗ್ರಾಮದಲ್ಲಿ ನಡೆಯುತ್ತಿದ್ದ ಹುಲಿ ಸೆರೆ ಕಾರ್ಯಾಚರಣೆಯ ವೇಳೆಯಲ್ಲಿ ಹಾಡಹಗಲೇ ಹಸುವಿನ ಮೇಲೆ ದಾಳಿ ನಡೆಸಿ, ಕೊಂದಿದೆ. ಹುಲಿ ಸೆರೆ ಕಾರ್ಯಾಚರಣೆಯ ವೇಳೆ ಮಾರ್ಗಸೂಚಿ ಪಾಲನೆ ಮಾಡದಿದ್ದದ್ದೇ ಇದಕ್ಕೆ ಕಾರಣ ಎಂಬುದಾಗಿ ಗ್ರಾಮಸ್ಥರು ಆರೋಪಿಸಿದ್ದಾರೆ. ಕೋಂಬಿಂಗ್ ನಡೆಸುವಾಗ ಎಚ್ಚರಿಕೆ ಕೊಡಬೇಕಿದ್ದ ಅರಣ್ಯ ಇಲಾಖೆ, ಇದನ್ನು ಮರೆತಿದ್ದೇ ಕಾರಣ ಎನ್ನಲಾಗುತ್ತಿದೆ. https://kannadanewsnow.com/kannada/there-is-no-vacancy-for-the-cm-post-in-the-state-minister-bairati-suresh/
ಕೋಲಾರ : ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಆ ಹುದ್ದೆಯನ್ನು ತೆಗೆದು ನಮಗೆ ಕೊಡಿ ಎಂದು ಯಾರೂ ಕೇಳುತ್ತಿಲ್ಲ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ಸ್ಪಷ್ಟಪಡಿಸಿದ್ದಾರೆ. ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಯಾವ ಕ್ರಾಂತಿಯೂ ಇಲ್ಲ, ಭ್ರಾಂತಿಯೂ ಇಲ್ಲ. ಎಲ್ಲವೂ ಊಹಾಪೋಹದ ಸುದ್ದಿ ಎಂದರು. ದಲಿತ ಸಿಎಂ ವಿಚಾರ ಮುನ್ನೆಲೆಗೆ ಬಂದಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಹುದ್ದೆಯನ್ನು ಕೇಳಲು ಎಲ್ಲರಿಗೂ ಹಕ್ಕಿದೆ. ಹೀಗಾಗಿ ದಲಿತ ಸಿಎಂ ಆಗಬೇಕೆಂದು ಹೇಳುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು. ಆದರೆ, ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿಯಿಲ್ಲ. ಸಿದ್ದರಾಮಯ್ಯ ಅವರು ರಾಜ್ಯವನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ ಎಂದು ಹೇಳಿದರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್, ನಾನು ಸೇರಿದಂತೆ ಎಲ್ಲರೂ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಗಳು. ಯಾವುದೇ ವಿಚಾರದಲ್ಲಿ ಅಂತಿಮ ನಿರ್ಧಾರವನ್ನು ನಮ್ಮ ಸಮರ್ಥವಾಗಿರುವ ಹೈಕಮಾಂಡ್ ಕೈಗೊಳ್ಳಲಿದೆ ಎಂದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ…
ಬೆಂಗಳೂರು: ರಾಜ್ಯದ ಅನುದಾನಿತ ಪ್ರಾಥಮಿಕ ಶಾಲಾ ಮಹಿಳಾ ಶಿಕ್ಷಕಿಯರು, ನೌಕರರಿಗೆ ಗುಡ್ ನ್ಯೂಸ್ ಎನ್ನುವಂತೆ ಶಿಶುಪಾಲನಾ ರಜೆ ಸೌಲಭ್ಯ ಕಲ್ಪಿಸಿ ಸರ್ಕಾರ ಆದೇಶಿಸಿದೆ. ಈ ಕುರಿತು ಶಾಲಾ ಶಿಕ್ಷಣ ಇಲಾಖೆಯ ಪ್ರಾಥಮಿಕ ಶಿಕ್ಷಣದ ನಿರ್ದೇಶಕರು ಆದೇಶ ಹೊರಡಿಸಿದ್ದು, ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕಿಯರಿಗೆ ನೌಕರರಿಗೆ ಶಿಶುಪಾಲನ ರಜೆ ಸೌಲಭ್ಯವನ್ನು ಅಡಳಿತಾತ್ಮಕವಾಗಿ ಹಾಗೂ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗದಂತೆ ರಜೆ ಸೌಲಭ್ಯವನ್ನು ವಿಸ್ತರಿಸಲು ಪರ್ಯಾಯ ವ್ಯವಸ್ಥೆಯನ್ನು ಸಂಬಂಧಿಸಿದ ಆಯಾ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯವರೇ ಸ್ವಂತ ಸಂಪನ್ಮೂಲದಿಂದಲೇ ಒದಗಿಸಿಕೊಂಡು ಅನುದಾನಿತ ಪ್ರಾಥಮಿಕ ಶಾಲಾ ಮಹಿಳಾ ಶಿಕ್ಷಕಿಯರು/ನೌಕರರಿಗೆ ಶಿಶುಪಾಲನಾ ರಜೆ ಮಂಜೂರು ಮಾಡಲು ನಿರ್ದೇಶಿಸಲಾಗಿರುತ್ತದೆ ಎಂದಿದ್ದಾರೆ. ಅದರಂತೆ ಆಡಳಿತಾತ್ಮಕವಾಗಿ ಹಾಗೂ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆಯನ್ನು ಸಂಬಂಧಿಸಿದ ಆಯಾ ಶಿಕ್ಷಣ ಸಂಸ್ಥೆಯ ಆಡಳಿತ ದುಂಡಳಿಯವರೇ ಸ್ವಂತ ಸಂಪನ್ಮೂಲದಿಂದಲೇ ಒದಗಿಸಿಕೊಂಡು, ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕಿಯರಿಗೆ/ನೌಕರರಿಗೆ ಶಿಶುಪಾಲನಾ ರಜೆ ಸೌಲಭ್ಯವನ್ನು ಒದಗಿಸಲು ಅಗತ್ಯ ಶ್ರಮವಹಿಸಲು ಸೂಚಿಸಿದ್ದಾರೆ. ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು..
ನವದೆಹಲಿ: ಸೋಮವಾರದ ತನ್ನ ಬ್ಲಾಗ್ ಪೋಸ್ಟ್ನಲ್ಲಿ, ವಾರಕ್ಕೊಮ್ಮೆ ಒಂದು ಮಿಲಿಯನ್ಗಿಂತಲೂ ಹೆಚ್ಚು ಚಾಟ್ಜಿಪಿಟಿ ಬಳಕೆದಾರರು ಆತ್ಮಹತ್ಯಾ ಆಲೋಚನೆಗಳ ಕುರಿತು ಸಂಭಾಷಣೆಗಳಲ್ಲಿ ತೊಡಗಿದ್ದಾರೆ ಎಂದು ಓಪನ್ಎಐ ಬಹಿರಂಗಪಡಿಸಿದೆ. ವಾರಕ್ಕೊಮ್ಮೆ ಒಂದು ಮಿಲಿಯನ್ಗಿಂತಲೂ ಹೆಚ್ಚು ಚಾಟ್ಜಿಪಿಟಿ ಬಳಕೆದಾರರು “ಆತ್ಮಹತ್ಯಾ ಯೋಜನೆ ಅಥವಾ ಉದ್ದೇಶದ ಸ್ಪಷ್ಟ ಸೂಚಕಗಳು” ಸೇರಿದಂತೆ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ ಎಂದು ಸಂಸ್ಥೆ ಬಹಿರಂಗಪಡಿಸಿದೆ. ಈ ಅಂಕಿ ಅಂಶವು AI ತೊಡಗಿಸಿಕೊಳ್ಳುವಿಕೆ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳ ಭಯಾನಕ ಮತ್ತು ಹೆಚ್ಚುತ್ತಿರುವ ಸಂಯೋಜನೆಯನ್ನು ಪ್ರತಿನಿಧಿಸುತ್ತದೆ. ಪ್ರತಿ ವಾರ 800 ಮಿಲಿಯನ್ಗಿಂತಲೂ ಹೆಚ್ಚು ಸಕ್ರಿಯ ಬಳಕೆದಾರರಲ್ಲಿ, ಚಾಟ್ಜಿಪಿಟಿ ಪ್ರತಿ ವಾರ ಆತ್ಮಹತ್ಯೆ ಕಲ್ಪನೆಗೆ ಸಂಬಂಧಿಸಿದ “ಒಂದು ಮಿಲಿಯನ್ಗಿಂತಲೂ ಹೆಚ್ಚು” ಸಂಭಾಷಣೆಗಳಲ್ಲಿ ತೊಡಗಿಸಿಕೊಂಡಿದೆ. ದಿ ಗಾರ್ಡಿಯನ್ ಪ್ರಕಾರ, ಈ ಹೇಳಿಕೆಯು ಕೃತಕ ಬುದ್ಧಿಮತ್ತೆ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎಷ್ಟು ಉಲ್ಬಣಗೊಳಿಸಬಹುದು ಎಂಬುದರ ಕುರಿತು ದೊಡ್ಡ AI ನಿಗಮದಿಂದ ಸ್ಪಷ್ಟ ಮತ್ತು ನೇರ ಸೂಚನೆಗಳಲ್ಲಿ ಒಂದಾಗಿದೆ. ಇದಲ್ಲದೆ, AI ಚಾಟ್ಬಾಟ್ ಉನ್ಮಾದ ಅಥವಾ ಮನೋವಿಕಾರದ ಲಕ್ಷಣಗಳನ್ನು ಪ್ರದರ್ಶಿಸುವ ಸುಮಾರು…
ಬೆಂಗಳೂರು: ರಾಜ್ಯ ಸರ್ಕಾರದಿಂದ ಜ್ಯೋತಿ ಸಂಜೀವಿನಿ ಯೋಜನೆಗೆ ಒಳಪಡುವ ಸರ್ಕಾರಿ ನೌಕರರಿಗೆ ಅರ್ಜಿ ತುಂಬಲು ಈ ಕೆಳಕಂಡಂತೆ ವಿಶೇಷ ಸೂಚನೆಗಳನ್ನು ನೀಡಿದೆ. ಜ್ಯೋತಿ ಸಂಜೀವಿನಿ ಯೋಜನೆಗೆ ಒಳಪಡುವ ಸರ್ಕಾರಿ ನೌಕರರಿಗೆ ಅರ್ಜಿ ತುಂಬಲು ವಿಶೇಷ ಸೂಚನೆಗಳು : 1.ಅನುಬಂಭ 1 ನ್ನು ಕಛೇರಿಗೆ 2 ಪ್ರತಿಗಳಲ್ಲಿ ಸಲ್ಲಿಸುವುದು. 2. ಅರ್ಜಿಯಲ್ಲಿನ ವಿವರಗಳನ್ನು ಕನ್ನಡ ಮತ್ತು ಆಂಗ್ಲ (CAPITAL LETTERS)ಭಾಷೆಯಲ್ಲಿ ತುಂಬುವುದು. 3.ಆ ನೌಕರರ ಮತ್ತು ಎಲ್ಲಾ ಅವಲಂಬಿತರ ಆಧಾರ್ಕಾರ್ಡ್ ಜೆರಾಕ್ಸ್ ಪ್ರತಿ ಲಗತ್ತಿಸುವುದು. 4. ಎಲ್ಲಾ ಅವಲಂಬಿತರ ಪ್ರತಿಯೊಬ್ಬರ ಭಾವಚಿತ್ರಗಳ ಹಿಂದೆ ಬಿಳಿಬಣ್ಣದ ಸೀನ್ನಲ್ಲಿರಬೇಕು ( Colour Photo With Wight BackGruond) ಪಾಸ್ಪೋರ್ಟ್ ಸೈಜ್ 5. ನೌಕರರು ಅವಲಂಬಿತರ ಭಾವಚಿತ್ರದ ಮೇಲೆ ಸಹಿ ಮಾಡಿ ಮತ್ತು ದಿನಾಂಕವನ್ನು ನಮೂದಿಸಿ. 6. ಅನುಬಂಧ-1 ರಲ್ಲಿ ತೋರಿಸಿದ ಅವಲಂಬಿತರ ವಿವರಗಳನ್ನು FORM-C ನಲ್ಲಿಯೂ ತುಂಬಿ BEO ರವರ ಸಹಿಗಾಗಿ ಸಲ್ಲಿಸುವುದು. 7. ನೌಕರರ ಮತ್ತು ಅವಲಂಬಿತರ ಭಾವಚಿತ್ರಗಳು ಒಂದುಸಾರಿ ಅಪ್ಲೋಡ್ ಆದಮೇಲೆ ಪುನಃ…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ಹೇಳಿದ್ದಾರೆ. ಬೆಂಗಳೂರಿನ ಕೆಆರ್ ಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಯಲ್ಲಿ ಜಿಬಿಎ ಪೂರ್ವಭಾವಿ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ವಿಷಯ ಸ್ಪಷ್ಟಪಡಿಸಿದರು. ಕಳೆದ ಮೂರ್ನಾಲ್ಕು ದಿನಗಳಲ್ಲಿ ಬಹಳಷ್ಟು ರಾಜಕೀಯ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ನಾವೆಲ್ಲಾ ಕಾಂಗ್ರೆಸ್ ಪಕ್ಷದ ಕಟ್ಟಾಳುಗಳು. ಸಿದ್ದರಾಮಯ್ಯ ಅವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬುದು ಸುಳ್ಳು. 2028 ರ ಚುನಾವಣೆಯಲ್ಲಿಯೂ ಅವರು ಸ್ಪರ್ಧೆ ನಡೆಸಬೇಕೆಂಬುದು ನಮ್ಮೆಲ್ಲರ ಹಕ್ಕೊತ್ತಾಯವಾಗಿದೆ ಎಂದು ಅವರು ಹೇಳಿದರು. ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯದಾಗಬೇಕಾದರೆ ಸಿದ್ದರಾಮಯ್ಯ ಅವರು ಚುನಾವಣೆಗೆ ಸ್ಪರ್ಧೆ ಮಾಡಲೇಬೇಕು ಎಂದು ಹೇಳಿದ ಅವರು, ಸಚಿವ ಸಂಪುಟ ಪುನಾರಚನೆ, ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ನೇಮಕಾತಿ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ನಿರ್ಧಾರ ಕೈಗೊಳ್ಳಲು ಹೈಕಮಾಂಡ್ ಸಮರ್ಥವಾಗಿದೆ ಎಂದರು.…
ರಾಜಸ್ಥಾನ: 15 ಕೋಟಿ ರೂ. ಮೌಲ್ಯದ ಕುದುರೆ, 23 ಕೋಟಿ ರೂ. ಮೌಲ್ಯದ ಎಮ್ಮೆ ಮತ್ತು ಕೇವಲ 16 ಇಂಚು ಎತ್ತರದ ಹಸು ರಾಜಸ್ಥಾನದ ಪುಷ್ಕರ್ ದನಗಳ ಮೇಳದ ಪ್ರಮುಖ ಆಕರ್ಷಣೆಗಳಾಗಿವೆ. ಇದು ಭಾರತದ ಪ್ರಮುಖ ಜಾನುವಾರು ಮೇಳಗಳಲ್ಲಿ ಒಂದಾಗಿದ್ದು, ಇದು ಗಣ್ಯ ತಳಿಗಳನ್ನು ಪ್ರದರ್ಶಿಸಲು ಮತ್ತು ಪ್ರಾಣಿಗಳ ದಾಖಲೆಯ ಮೌಲ್ಯಮಾಪನಕ್ಕೆ ಹೆಸರುವಾಸಿಯಾಗಿದೆ. ಅಕ್ಟೋಬರ್ 30 ರಿಂದ ಆರಂಭವಾಗಿ ನವೆಂಬರ್ 5 ರವರೆಗೆ ಮೇಳ ನಡೆಯಲಿದ್ದರೂ, ಜಾನುವಾರು ವ್ಯಾಪಾರಿಗಳು ಮತ್ತು ಉತ್ಸಾಹಿಗಳು ಈಗಾಗಲೇ ಸ್ಥಳದಲ್ಲಿ ಸೇರಲು ಪ್ರಾರಂಭಿಸಿದ್ದಾರೆ. 3,028 ಕುದುರೆಗಳು ಮತ್ತು 1,306 ಒಂಟೆಗಳು ಸೇರಿದಂತೆ 4,300 ಕ್ಕೂ ಹೆಚ್ಚು ಪ್ರಾಣಿಗಳನ್ನು ಮೇಳಕ್ಕೆ ನೋಂದಾಯಿಸಲಾಗಿದೆ. ಅವುಗಳಲ್ಲಿ ಕೇಂದ್ರಬಿಂದು ಚಂಡೀಗಢ ಮೂಲದ ತಳಿಗಾರ ಗ್ಯಾರಿ ಗಿಲ್ ಒಡೆತನದ ಎರಡೂವರೆ ವರ್ಷದ ಶಹಬಾಜ್, ಇದು ಭಾರಿ ಜನಸಂದಣಿಯನ್ನು ಸೆಳೆದಿದೆ. ಶಹಬಾಜ್ ಬಹು ಪ್ರದರ್ಶನಗಳನ್ನು ಗೆದ್ದಿದ್ದಾರೆ ಮತ್ತು ಪ್ರತಿಷ್ಠಿತ ವಂಶಾವಳಿಯಿಂದ ಬಂದವರು. ಅವರ ಕವರೇಜ್ ಶುಲ್ಕ 2 ಲಕ್ಷ ರೂ. ಮತ್ತು ಕೇಳುವ ಬೆಲೆ 15…
ಬೆಂಗಳೂರು: ರಾಜ್ಯ ಹೈಕೋರ್ಟಿನ ತೀರ್ಪಿನಿಂದ ಸರಕಾರಕ್ಕೆ ಹಿನ್ನಡೆ ಆಗಿದೆ. ಅವರ ಕುತಂತ್ರ, ಷಡ್ಯಂತ್ರಕ್ಕೆ ತಡೆ ಕೊಟ್ಟಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ ಅವರು ತಿಳಿಸಿದ್ದಾರೆ. ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ಮತ್ತೊಂದು ಕಡೆ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರವು ರಾಜ್ಯದಲ್ಲಿ ರೈತರಿಗೆ ಪರಿಹಾರ ಕೊಟ್ಟಿಲ್ಲ; ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಪರಿಹಾರ ಕೊಡಿ ಎಂದರೆ ಕೇಂದ್ರ ಸರಕಾರದ ಕಡೆ ಬೆಟ್ಟು ಮಾಡಿ ಕೂತಿದ್ದಾರೆಯೇ ವಿನಾ ರಾಜ್ಯ ಸರಕಾರದಿಂದ ಈ ನಾಡಿನ ರೈತರಿಗೆ ಪರಿಹಾರ, ಅನುಕೂಲ ಸಿಗುತ್ತಿಲ್ಲ ಎಂದು ಟೀಕಿಸಿದರು. ರಾಜ್ಯ ಸರಕಾರ, ಮುಖ್ಯಮಂತ್ರಿಗಳಿಗೆ ರೈತರ ಸಂಕಷ್ಟಕ್ಕೆ ಸ್ಪಂದಿಸಲು ಸಾಧ್ಯವಾಗದೇ ಇದ್ದರೆ, ಈ ಸರಕಾರ ರೈತರ ಪಾಲಿಗೆ ಬದುಕಿದ್ದೂ ಸತ್ತಂತೆ ಎಂದು ಆಕ್ಷೇಪಿಸಿದರು. ಅಭಿವೃದ್ಧಿ ಕೆÀಲಸಗಳು ಆಗುತ್ತಿಲ್ಲ; ಶಾಸಕರು ಪರದಾಡುತ್ತಿದ್ದಾರೆ. ಆಡಳಿತ ಪಕ್ಷದ ಶಾಸಕರು, ಸಚಿವರು ನವೆಂಬರ್ ಕ್ರಾಂತಿಯ ಹೇಳಿಕೆ ಕೊಡುತ್ತಿದ್ದಾರೆ ಎಂದು ದೂರಿದರು. ರೈತರ ಸಮಸ್ಯೆಗೆ ಪರಿಹಾರ ಕೊಡಿ ಎಂದರೆ ಇವತ್ತು ಸಿಎಂ ಬದಲಾವಣೆ ಚರ್ಚೆ ನಡೆದಿದೆ.…
ಬೆಂಗಳೂರು: ಪ್ರತಿ 5 ಭಾರತೀಯರಲ್ಲಿ ಒಬ್ಬರು ಮಲಬದ್ಧತೆಯಿಂದ ಬಳಲುತ್ತಿದ್ದು, ಜೀರ್ಣಕ್ರಿಯೆಯ ಸ್ವಾಸ್ಥ್ಯದಲ್ಲಿ ವಿಶ್ವಾಸಾರ್ಹ ಹೆಸರಾದ ಡಲ್ಕೊಫ್ಲೆಕ್ಸ್®, ಈ ಸಾಮಾನ್ಯ ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸಲು “ಮಲಬದ್ಧತೆ ಬಗ್ಗೆ ತಿಳಿಯಿರಿ” ಎಂಬ ವಿಶೇಷ ಅಭಿಯಾನ ಪ್ರಾರಂಭಿಸಿದೆ. ಸಿಎಚ್ಸಿ ಇಂಡಿಯಾದ ಮುಖ್ಯಸ್ಥೆ ನೂಪುರ್ ಗುರ್ಬಕ್ಸಾನಿ ಅವರು ಮಾತನಾಡಿ, ಮಲಬದ್ಧತೆ ಪ್ರತಿದಿನ 276 ಮಿಲಿಯನ್ ಭಾರತೀಯರ ಮೇಲೆ ಪರಿಣಾಮ ಬೀರುತ್ತದೆ. ಆದರೂ, ಈ ಸಮಸ್ಯೆಯಿಂದ ಬಳಲುತ್ತಿರುವವರಲ್ಲಿ ಮೂರನೇ ಒಂದು ಭಾಗದಷ್ಟು ಜನರು ಎಂದಿಗೂ ಸಹಾಯವನ್ನು ಪಡೆಯುವುದಿಲ್ಲ, ಮತ್ತು ಸುಮಾರು ಅರ್ಧದಷ್ಟು ಜನರು ಸಮಸ್ಯೆಯನ್ನು ಯಾವಾಗಲೂ ಪರಿಹರಿಸದ ಮನೆಮದ್ದುಗಳನ್ನು ಅವಲಂಬಿಸಿರುತ್ತಾರೆ. ವರ್ಷಗಳಿಂದ, ಜನಪ್ರಿಯ ಸಂಸ್ಕೃತಿ ಮತ್ತು ಜಾಹೀರಾತುಗಳು ಮಲಬದ್ಧತೆಯನ್ನು ತಮಾಷೆಯಾಗಿ ಪರಿಗಣಿಸಿವೆ, ವಾಸ್ತವವಾಗಿ ಗಂಭೀರ ಮತ್ತು ಅಹಿತಕರ ಆರೋಗ್ಯ ಕಾಳಜಿಯನ್ನು ಹಗುರಗೊಳಿಸುತ್ತಿವೆ. ಈ ಅಭಿಯಾನವು ಡಿಜಿಟಲ್ ಪ್ಲಾಟ್ಫಾರ್ಮ್ಗಳನ್ನು ಮೀರಿ, ಭಾರತದಾದ್ಯಂತ ನೆಲದ ಸಮುದಾಯ ಚಟುವಟಿಕೆಗಳು ಮತ್ತು ರೇಡಿಯೋ ಉಪಕ್ರಮಗಳನ್ನು ಒಳಗೊಂಡಿರುವ ಸಮಗ್ರ ವಿಧಾನವನ್ನು ಬಳಸಲಿದೆ. ಸಂಭಾಷಣೆಯನ್ನು ಆಫ್ಲೈನ್ಗೆ ತರುವ ಮೂಲಕ, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಜನರಲ್ಲಿ…
ಬೆಂಗಳೂರು: ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದಲ್ಲಿ 125 ಕೋಟಿ ಹಗರಣ ನಡೆದಿದೆ ಎಂದು ಸುದ್ದಿ ಮಾಧ್ಯಮಗಳು ವರದಿ ಮಾಡಿದ್ದು ಅರ್ಹತೆ ಇಲ್ಲದ ಸಂಸ್ಥೆಗಳಿಗೆ ಟೆಂಡರ್ ನೀಡಲಾಗಿದೆ ಎಂಬ ಆರೋಪವನ್ನು ಮಾಡಿವೆ. ಇದು ವಾಸ್ತವಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿರುವಂತಹ ಸಂಗತಿಯಾಗಿದ್ದು, ಮಾಧ್ಯಮಗಳ ಮೂಲಕ ತಪ್ಪಾದ ವಿವರಗಳನ್ನು ಸಾರ್ವಜನಿಕರಿಗೆ ನೀಡುವ ಪ್ರಯತ್ನ ಮಾಡಲಾಗಿದೆ ಎಂಬುದಾಗಿ ಸಮಾಜ ಕಲ್ಯಾಣ ಸಚಿವ ಡಾ. ಹೆಚ್ ಸಿ ಮಹದೇವಪ್ಪ ಸ್ಪಷ್ಟ ಪಡಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, 2024 – 25 ನೇ ಸಾಲಿಗೆ ಅನುಮೋದನೆಯಾಗಿರುವ ಕ್ರಿಯಾ ಯೋಜನೆಯ ಮೊತ್ತ 154.61 ಕೋಟಿ ಆಗಿರುತ್ತದೆ.ಈ ಪೈಕಿ ಪ್ರಬುದ್ಧ ಯೋಜನೆಗೆ 70 ಕೋಟಿ ರೂ ಹಣ ಖರ್ಚಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ 28.84 ಕೋಟಿ ಹಣ ಖರ್ಚಾಗಿದೆ. IEC ಪ್ರಚಾರ ಕೆಲಸಗಳಿಗೆ 99 ಲಕ್ಷ ರೂಪಾಯಿಗಳಷ್ಟು ಖರ್ಚು ಮಾಡಲಾಗಿದ್ದು ಕಚೇರಿಯ ಆಡಳಿತಾತ್ಮಕ ವೆಚ್ಚವು 2.79 ಕೋಟಿ ವೆಚ್ಚ ಆಗಿರುತ್ತದೆ ಎಂದರು. ಇನ್ನು 32.03 ಕೋಟಿಗಳ ವೆಚ್ಚದಲ್ಲಿ ಡ್ರೋನ್ ತರಬೇತಿ, PSI…














