Author: kannadanewsnow09

ಬೆಂಗಳೂರು: 10 ರೂ ನಾಣ್ಯ ಚಲಾವಣೆಯಲ್ಲಿ ಇಲ್ಲ. ಯಾರು ತಗೊಳ್ಳೋದಿಲ್ಲ. ನಿಷೇಧಿಸಿದೆ ಹಾಗೆ, ಹೀಗೆ ಅಂತ ಸುದ್ದಿ ಹಬ್ಬಿತ್ತು. ಆದ್ರೇ ಭಾರತೀಯ ರಿಸರ್ವ್ ಬ್ಯಾಂಕ್ ಅಂತಹ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ. 10 ರೂ ನಾಣ್ಯ ಚಾಲನೆಯಲ್ಲಿದೆ ಅಂತ ಸ್ಪಷ್ಟ ಪಡಿಸಿತ್ತು. ಇದರ ಮಧ್ಯೆ KSRTC, BMTC ಬಸ್ಸುಗಳಲ್ಲಿ ಕಂಡಕ್ಟರ್ 10 ರೂ ನಾಣ್ಯ ಪಡೆಯೋದಕ್ಕೆ ನಿರಾಕರಿಸುತ್ತಿದ್ದರು. ಆದ್ರೇ ಹೀಗೆ ನಿರಾಕರಿಸುವಂತಿಲ್ಲ. ಕಡ್ಡಾಯವಾಗಿ ಪ್ರಯಾಣಿಕರಿಂದ ಪಡೆಯುವಂತೆ ಸಾರಿಗೆ ಇಲಾಖೆ ಖಡಕ್ ಸೂಚನೆ ನೀಡಿದೆ. ಕೆ ಎಸ್ ಆರ್ ಟಿಸಿ ಹಾಗೂ ಬಿಎಂಟಿಸಿ ಬಸ್ ಏರೋ ಅನೇಕ ಪ್ರಯಾಣಿಕರು ತಮ್ಮ ಬಳಿಯಿದ್ದಂತ 10 ರೂ ನಾಣ್ಯವನ್ನು ಟಿಕೆಟ್ ಖರೀದಿಸೋದಕ್ಕೆ ನೀಡಿದಾಗ ಕಂಡಕ್ಟರ್ ಪಡೆಯಲು ನಿರಾಕರಿಸುತ್ತಿದ್ದರು. ಈ ಬಗ್ಗೆ ಸಾರಿಗೆ ಇಲಾಖೆಗೆ ಹಲವು ಪ್ರಯಾಣಿಕರು ದೂರು ನೀಡಿದ್ದರು. ಆರ್ ಬಿಐ ಚಲಾವಣೆಯಲ್ಲಿದೆ ಅಂತ ಸ್ಪಷ್ಟ ಪಡಿಸಿದೆ. ಹೀಗಿದ್ದೂ ಕಂಡಕ್ಟರ್ ಪಡೆಯದೇ ಇರೋದು ಸರಿಯಲ್ಲ ಅಂತ ಆಕ್ಷೇಪಿಸಿದ್ದರು. ಈ ಹಿನ್ನಲೆಯಲ್ಲಿ ಪ್ರಯಾಣಿಕರು 10 ರೂ ನಾಣ್ಯವನ್ನು ನೀಡಿದ್ರೇ…

Read More

ತುಮಕೂರು: ಬಂಡೆನಾಗನ ಮೇಲೆ ಕೊಲೆಗೆ ಯತ್ನಿಸಿ ಮಚ್ಚು ಬಿಸಿ ಪಾರಿಯಾಗಿದ್ದಂತ ರೌಡಿ ಶೀಟರ್ ಮೇಲೆ ಪೊಲೀಸರು ಫೈರಿಂಗ್ ಮಾಡಿ ಬಂಧಿಸಿರೋ ಘಟನೆ ತುಮಕೂರಿನ ಒಕ್ಕೋಡಿ ಬಳಿಯಲ್ಲಿ ನಡೆದಿದೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಿಗ್ಗೆ ಬಂಡೆ ನಾಗನ ಮೇಲೆ ಕೊಲೆಗೆ ಮನೋಜ್ ಆಲಿಯಾಸ್ ಮಂಡೇಲಾ ಯತ್ನಿಸಿದ್ದನು. ರೌಡಿ ಶೀಟರ್ ಆಗಿದ್ದಂತ ಮನೋಜ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು. ಮನೋಜ್ ಬೀಸಿದಂತ ಮಚ್ಚೇಟಿನಿಂದ ತಪ್ಪಿಸಿಕೊಂಡು ಜೀವ ಉಳಿಸಿಕೊಂಡಿದ್ದಂತ ಬಂಡೆನಾಗ, ಮನೋಜ್ ತುಮಕೂರಿನ ಒಕ್ಕೋಡಿ ಬಳಿಯಲ್ಲಿ ತಲೆಮರೆಸಿಕೊಂಡಿರೋ ಮಾಹಿತಿಯನ್ನು ನೀಡಿದ್ದನು. ಈ ಮಾಹಿತಿ ಆಧರಿಸಿ ಮನೋಜ್ ಆಲಿಯಾಸ್ ಮಂಡೇಲಾ ಬಂಧನಕ್ಕೆ ಪೊಲೀಸರು ತೆರಳಿದ್ದರು. ಈ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳೋದಕ್ಕೆ ಅವರ ಮೇಲೆಯೇ ಹಲ್ಲೆ ನಡೆಸಿ, ಪರಾರಿಯಾಗೋದಕ್ಕೆ ಯತ್ನಿಸಿದಾಗ ಪೊಲೀಸರು ಆತನ ಕಾಲಿಗೆ ಗುಂಡೇಟು ನೀಡಿ ಬಂಧಿಸಿದ್ದಾರೆ. ಈ ಸಂಬಂಧ ತುಮಕೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/good-news-for-state-government-employees-cm-siddaramaiah-announces-scrapping-of-nps/ https://kannadanewsnow.com/kannada/woman-ips-officer-arrested-for-threatening-woman-ips-officer-in-bengaluru-jailed/

Read More

ನವದೆಹಲಿ: ಭಾರತದ ಮೊದಲ ಮೀಸಲಾದ ಸೌರ ಮಿಷನ್ ಆದಿತ್ಯ -ಎಲ್ 1 ( Aditya-L1 ) ಶನಿವಾರ ಲ್ಯಾಗ್ರೇಂಜ್ ಪಾಯಿಂಟ್ 1 (ಎಲ್ 1) ಸುತ್ತಲೂ ಹ್ಯಾಲೋ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದೆ. ಇದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (Indian Space Research Organisation -ISRO) ಗೆ ಮಹತ್ವದ ಮೈಲಿಗಲ್ಲಾಗಿದೆ. ಹಾಗಾದ್ರೆ ಇಸ್ರೋ ಮುಂದೆ ಏನು ಮಾಡಲಿದೆ ಅನ್ನೋ ಮಾಹಿತಿ ಮುಂದೆ ಓದಿ. ಬಾಹ್ಯಾಕಾಶ ನೌಕೆಯು ಈಗ ಸೂರ್ಯನ ಸಮಗ್ರ ಅಧ್ಯಯನವನ್ನು ಪ್ರಾರಂಭಿಸಲು ಸಜ್ಜಾಗಿದೆ. ಆದರೆ ಅದು ಅಮೂಲ್ಯವಾದ ಸೌರ ವೀಕ್ಷಣೆಗಳನ್ನು ಪ್ರಸಾರ ಮಾಡಲು ಪ್ರಾರಂಭಿಸುವ ಮೊದಲು, ನಿರ್ಣಾಯಕ ಹಂತಗಳ ಸರಣಿಯನ್ನು ಪೂರ್ಣಗೊಳಿಸಬೇಕು. ಸೆಪ್ಟೆಂಬರ್ 2, 2023 ರಂದು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾದ ಆದಿತ್ಯ-ಎಲ್ 1 ಭೂಮಿಯ ಮೇಲಿನ ನಾಲ್ಕು ಕುಶಲತೆಗಳು ಮತ್ತು ಟ್ರಾನ್ಸ್-ಲ್ಯಾಗ್ರಾಂಜಿಯನ್ ಪಾಯಿಂಟ್ 1 ಸೇರ್ಪಡೆ ಕುಶಲತೆಯನ್ನು ಒಳಗೊಂಡ ಸಂಕೀರ್ಣ ಪ್ರಯಾಣಕ್ಕೆ ಒಳಗಾಗಿದೆ. ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿಲೋಮೀಟರ್ ದೂರದಲ್ಲಿರುವ ಬಾಹ್ಯಾಕಾಶ ನೌಕೆಯನ್ನು ಅದರ…

Read More

ಬೆಂಗಳೂರು: ನಗರದಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದಂತ ಸವಾರನೊಬ್ಬನಿಗೆ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ಬುದ್ಧಿವಾದ ಹೇಳಿದ್ದಾರೆ. ಇಷ್ಟಕ್ಕೇ ಸಿಟ್ಟಾದಂತ ಬೈಕ್ ಸವಾರ ಮಹಿಳಾ ಐಪಿಎಸ್ ಅಧಿಕಾರಿಗೆ ಬೆದರಿಕೆ ಹಾಕಿದ್ದಾನೆ. ಈ ಹಿನ್ನಲೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಬಂಧಿಸಿ ಜೈಲಿಗಟ್ಟಿದ್ದಾರೆ. ಬೆಂಗಳೂರಿನ ಆರ್ ಎಂ ಸಿ ಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಿಎಂಟಿಎಫ್ ಎಸ್.ಪಿಯಾಗಿರುವಂತ ಮಹಿಳಾ ಐಪಿಎಸ್ ಅಧಿಕಾರಿ ಶೋಭಾರಾಣಿಯವರು, ಬೈಕ್ ಸವಾರನೊಬ್ಬನಿಗೆ ಬುದ್ಧಿವಾದ ಹೇಳಿದ್ದರು. ಆ ವೇಳೆಯಲ್ಲಿ ಅವರಿಗೆ ಅವಾಜ್ ಹಾಕಿದ್ದಂತ ಆತ, ಬೆದರಿಕೆಯನ್ನು ಹಾಕಿದ್ದ ಎಂಬುದಾಗಿ ಆತನ ವಿರುದ್ಧ ದೂರು ದಾಖಲಾಗಿತ್ತು. ಬೆಂಗಳೂರಿನ ಆರ್ ಎಂ ಸಿ ಯಾರ್ಡ್ ಠಾಣೆಯ ಪೊಲೀಸರು ಬೈಕ್ ಸವಾರನ ವಿರುದ್ಧ ದೂರು ದಾಖಲಿಸಿಕೊಂಡು ಆತನನ್ನು ಬಂಧಿಸಿ, ಜೈಲಿಗಟ್ಟಿದ್ದಾರೆ. ಈ ಮೂಲಕ ಸರಿಯಾದ ದಾರಿಯಲ್ಲಿ ನಡೆಯಪ್ಪ, ಸರಿಯಾಗಿ ಬೈಕ್ ಓಡಿಸಪ್ಪ ಅಂತ ಹೇಳಿದ್ದಕ್ಕೆ ಬೆದರಿಕೆ ಹಾಕಿದಂತ ಬೈಕ್ ಸವಾರ ಈಗ ಬಂಧನಕ್ಕೆ ಒಳಗಾಗಿ ಜೈಲುಪಾಲಾಗಿದ್ದಾನೆ. https://kannadanewsnow.com/kannada/cm-siddaramaiah-agrees-to-pay-hike-guest-lecturers-call-off-strike/ https://kannadanewsnow.com/kannada/good-news-for-state-government-employees-cm-siddaramaiah-announces-scrapping-of-nps/

Read More

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ( Karnataka Government Employees ) ಬಹು ದಿನಗಳ ಬೇಡಿಕೆಯಲ್ಲಿ ಎನ್ ಪಿಎಸ್ ( NPS) ರದ್ದುಗೊಳಿಸಿ ಓಪಿಎಸ್(OPS) ಜಾರಿಗೊಳಿಸೋದಾಗಿದೆ. ಇಂತಹ ಬೇಡಿಕೆ ಈಡೇರಿಸೋ ಬಗ್ಗೆ ಸಿಎಂ ಸಿದ್ಧರಾಮಯ್ಯ ( CM Siddaramaiah ) ಇಂದು ಮಹತ್ವದ ಘೋಷಣೆ ಮಾಡಿದ್ದಾರೆ. ಅದು ಏನು ಅಂತ ಮುಂದೆ ಓದಿ. ಕರ್ನಾಟಕ ರಾಜ್ಯ ಸರ್ಕಾರಿ ಎನ್.ಪಿ.ಎಸ್ ನೌಕರರ ಸಂಘದ ಪದಾಧಿಕಾರಿಗಳು ಇಂದು ಅವರನ್ನು ಭೇಟಿಯಾಗಿ ಎನ್.ಪಿ.ಎಸ್ ರದ್ದತಿ ( Cancellation of NPS ) ಬಗ್ಗೆ ಚರ್ಚಿಸಿದರು. ಈ ಬಳಿಕ ಮಾತನಾಡಿದಂತ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ಎನ್.ಪಿ.ಎಸ್ ರದ್ದತಿ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಸಂಪುಟ ಸದಸ್ಯರೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ತಿಳಿಸಿದರು. ಎನ್.ಪಿ.ಎಸ್ ರದ್ದತಿಯ ಸಾಧ್ಯಾಸಾಧ್ಯತೆಗಳ ಕುರಿತು ಚರ್ಚಿಸಿ ತೀರ್ಮಾನಕ್ಕೆ ಬರಲಾಗುವುದು. ಇದನ್ನು ರದ್ದು ಪಡಿಸಿದ ಇತರ ರಾಜ್ಯಗಳಲ್ಲಿ ಅನುಸರಿಸಿರುವ ಕ್ರಮಗಳ ಕುರಿತೂ ಸಹ ಪರಿಶೀಲಿಸಲಾಗುವುದು. ಆರ್ಥಿಕ ಇಲಾಖೆ ಕೂಡ ಈ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಲಿದೆ ಎಂದರು.…

Read More

ಬೆಂಗಳೂರು: ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಸಂಬಂಧ ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಅತಿಥಿ ಉಪನ್ಯಾಸಕರ ನಿಯೋಗ ಭೇಟಿ ಮಾಡಿ, ಬೇಡಿಕೆಯ ಮನವಿ ಸಲ್ಲಿಸಿತ್ತು. ಅಲ್ಲದೇ ಈ ಸಂಬಂಧ ಮಹತ್ವದ ಚರ್ಚೆಯನ್ನು ಅವರೊಂದಿಗೆ ಮಾಡಿತ್ತು. ಇಂದಿನ ಸಭೆಯಲ್ಲಿ ಅತಿಥಿ ಉಪನ್ಯಾಸಕರ ಗೌರವಧನವನ್ನು 5,000ದಿಂದ 8,000ಕ್ಕೆ ಹೆಚ್ಚಳ ಮಾಡೋದಕ್ಕೆ ಸಿಎಂ ಸಿದ್ಧರಾಮಯ್ಯ ಸಮ್ಮತಿಸಿದ್ದಾರೆ. ಅಲ್ಲದೇ ಕೆಲ ಬೇಡಿಕೆ ಈಡೇರಿಕೆಗೂ ಭರವಸೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಅತಿಥಿ ಉಪನ್ಯಾಸಕರು ಮುಷ್ಕರವನ್ನು ವಾಪಾಸ್ ಪಡೆದಿರೋದಾಗಿ ತಿಳಿದು ಬಂದಿದೆ. ಅತಿಥಿ ಉಪನ್ಯಾಸಕರ ಬೇಡಿಕೆ ಕುರಿತಂತೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ,ಉನ್ನತ ಶಿಕ್ಷಣ ಸಚಿವ ಡಾಕ್ಟರ್ ಎಂ ಸಿ ಸುಧಾಕರ್ ಹಾಗೂ ಉನ್ನತ ಅಧಿಕಾರಿಗಳ ಸಭೆಯಲ್ಲಿ ಅತಿಥಿ ಉಪನ್ಯಾಸಕರ ಸಂಘಟನೆಗಳ ಮುಖಂಡರೊಂದಿಗೆ ನಡೆದ ಚರ್ಚೆಯ ನಂತರ ಸರ್ಕಾರ ಕೈಗೊಂಡ ನಿರ್ಧಾರಗಳು ಹೀಗಿವೆ. 1)ಮಹಿಳಾ ಅತಿಥಿ ಉಪನ್ಯಾಸಕರಿಗೆ ಇದೇ ಜನವರಿ ತಿಂಗಳಿನಿಂದ ಜಾರಿಗೆ ಬರುವಂತೆ ಮೂರು ತಿಂಗಳ ಕಾಲ ಹೆರಿಗೆ ರಜೆಯನ್ನು ಸಂಬಳ ಸಹಿತ ನೀಡಲು ನಿರ್ಧರಿಸಲಾಗಿದೆ. 2)…

Read More

ಬೆಂಗಳೂರು: ರಾಜ್ಯದಲ್ಲಿ ಇಂದು ಕೂಡ ಕೋವಿಡ್ ಸೋಂಕಿನ ಸಂಖ್ಯೆ ಏರಿಕೆಯಾಗಿದೆ. ಇಂದು 297 ಜನರಿಗೆ ಕೊರೋನಾ ಪಾಸಿಟಿವ್ ( Corona Positive ) ಎಂಬುದಾಗಿ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಹೀಗಾಗಿ ಸಕ್ರೀಯ ಸೋಂಕಿತರ ಸಂಖ್ಯೆ 1,136ಕ್ಕೆ ಏರಿಕೆಯಾಗಿದೆ. ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ( Karnataka Health and Family Welfare Department ) ಮಾಹಿತಿ ಬಿಡುಗಡೆ ಮಾಡಲಾಗಿದ್ದು, ಕಳೆದ 24 ಗಂಟೆಯಲ್ಲಿ RTPC ಮೂಲಕ 6,548 ಹಾಗೂ RAT ಮೂಲಕ 808 ಸೇರಿದೆತ 7,356 ಮಂದಿಯನ್ನು ಕೋವಿಡ್ ಸೋಂಕು ಪತ್ತೆ ಪರೀಕ್ಷೆಗೆ ( Covid19 Test ) ಒಳಪಡಿಸಲಾಗಿದೆ ಅಂತ ತಿಳಿಸಿದೆ. ಕಳೆದ 24 ಗಂಟೆಯಲ್ಲಿ ಪರೀಕ್ಷೆಗೆ ಒಳಪಡಿಸಲಾಗದಂತ 7,356ರಲ್ಲಿ ಬೆಂಗಳೂರು ನಗರ 171, ಬಾಗಲಕೋಟೆ 05,  ಬಳ್ಳಾರಿ 06, ಬೆಂಗಳೂರು ಗ್ರಾಮಾಂತರ 12, ಚಾಮರಾಜನಗರ 02, ಚಿಕ್ಕಬಳ್ಳಾಪುರ 05, ಚಿತ್ರದುರ್ಗ 05, ದಕ್ಷಿಣ ಕನ್ನಡ 06, ದಾವಣಗೆರೆ 01, ಧಾರವಾಡ 08, ಗದಗ 02,…

Read More

ಬೆಂಗಳೂರು: ಮುಂಗಾರಿನಲ್ಲಿ ಬಂದ ಬರಕ್ಕೆ ಸಂಕ್ರಾಂತಿಯಲ್ಲಿ ಬಿಡಿಗಾಸು ಪರಿಹಾರವನ್ನು ರಾಜ್ಯ ಸರ್ಕಾರ ನೀಡಿದೆ ಎಂಬುದಾಗಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ. ಈ ಕುರಿತಂತೆ ಇಂದು ಎಕ್ಸ್ ಮಾಡಿರೋ ಅವರು, ಕಳೆದ ವರ್ಷ ಜೂನ್ ನಲ್ಲಿ ಮುಂಗಾರು ಮಳೆ ಕೈಕೊಟ್ಟಾಗ ಶುರುವಾದ ಬರಕ್ಕೆ 7 ತಿಂಗಳು ಕಾಲ ಕೊಡಲೋ ಬೇಡವೋ ಎಂದು ಮೀನ-ಮೇಷ ಎಣಿಸಿ ಕಡೆಗೆ ‘ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ’ ಕೇವಲ ₹105 ಕೋಟಿ ಬಿಡುಗಡೆ ಮಾಡಿದೆ ಈ ರೈತ ವಿರೋಧಿ ಕಾಂಗ್ರೆಸ್ ಸರ್ಕಾರ ಎಂದು ಗುಡುಗಿದ್ದಾರೆ. ನಾನು ಕಂದಾಯ ಸಚಿವನಾಗಿದ್ದಾಗ 2022 ನೇ ಸಾಲಿನಲ್ಲಿ 13,09,421 ಹೆಕ್ಟೇರ್‌ ಕೃಷಿ ಜಮೀನಿನಲ್ಲಿ ಬೆಳೆ ಹಾನಿಯಾಗಿತ್ತು. ಆಗ 14.62 ಲಕ್ಷಕ್ಕೂ ಹೆಚ್ಚು ರೈತರಿಗೆ 2031.15 ಕೋಟಿ ರೂ. ನೀಡಲಾಯಿತು ಎಂದು ಕಿಡಿಕಾರಿದ್ದಾರೆ. ಮಳೆಯಾಶ್ರಿತ ಜಮೀನಿಗೆ ಹೆಕ್ಟೇರ್‌ಗೆ 6,800 ರೂ. ಮಾರ್ಗಸೂಚಿ ದರವಿದ್ದು, ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ 6,800 ರೂ. ಸೇರಿಸಿ, ಒಟ್ಟು 13,600 ರೂ. ನೀಡಲಾಯಿತು. ನೀರಾವರಿ ಜಮೀನಿಗೆ ಹೆಕ್ಟೇರ್‌ಗೆ 13,500 ರೂ.…

Read More

ಬೆಂಗಳೂರು: ಕನ್ನಡ ನಾಡಿನ ಅಸ್ಮಿತೆಗೆ ಹೆಸರಾದ ಸರ್ಕಾರಿ ಉದ್ದಿಮೆಗಳ ಉತ್ಪನ್ನಗಳ ಎರಡು ಮಾರಾಟ ಮಳಿಗೆಗಳು “ಕಲಾಲೋಕ” ಹೆಸರಿನಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏಪ್ರಿಲ್ ವೇಳೆಗೆ ಆರಂಭವಾಗಲಿವೆ. ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ ಅವರು ವಿಮಾನ ನಿಲ್ದಾಣದ ಅಧಿಕಾರಿಗಳ (ಬಿಐಎಎಲ್) ಉಪಸ್ಥಿತಿಯಲ್ಲಿ ಶನಿವಾರ ನಡೆಸಿದ ಸಭೆಯಲ್ಲಿ ಈ ಬಗ್ಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಸರ್ಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆ ಎಸ್ ಡಿ ಎಲ್), ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ, ಕೆಎಸ್ಐಸಿ (ಕರ್ನಾಟಕ ರೇಷ್ಮೆ ಉದ್ಯಮ ನಿಗಮ), ಕಾಫಿ ಬೋರ್ಡ್ ಮತ್ತು ಲಿಡ್ಕರ್ ಸಂಸ್ಥೆಗಳು ತಯಾರಿಸುವ ಉತ್ಪನ್ನಗಳನ್ನು ಈ ಮಳಿಗೆಗಳಲ್ಲಿ ಮಾರಾಟ ಮಾಡಲಾಗುವುದು. ಇವುಗಳೊಟ್ಟಿಗೆ ನಾಡಿನಲ್ಲಿ ತಯಾರಾಗುವ ಪಾರಂಪರಿಕ ಆಟಿಕೆಗಳಾದ ಚನ್ನಪಟ್ಟಣ ಆಟಿಕೆ, ಇಳಕಲ್ ಸೀರೆ, ಲಂಬಾಣಿ ಕುಸೂತಿ ಇತ್ಯಾದಿ ಉತ್ಪನ್ನಗಳನ್ನು ಕೂಡ ಮಳಿಗೆಗಳಲ್ಲಿ ಮಾರಾಟಕ್ಕೆ ಲಭ್ಯವಾಗಿಸಲಾಗುತ್ತದೆ ಎಂದು ಸಚಿವರು ವಿವರಿಸಿದರು. ಇದಕ್ಕಾಗಿ, ಹೊಸದಾಗಿ ನಿರ್ಮಿಸಿರುವ ಟರ್ಮಿನಲ್-2ರ ದೇಶೀಯ ಮತ್ತು ಅಂತರರಾಷ್ಟ್ರೀಯ…

Read More

ಬೆಂಗಳೂರು: ವಿಜಯಪುರದ ಬಿಎಲ್ ಡಿಇ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ,‌ ವಚನ‌ ಪಿತಾಮಹ ಫ.ಗು.ಹಳಕಟ್ಟಿ ಸಂಶೋಧನಾ ಸಂಸ್ಥೆಯ ಬೆಂಗಳೂರು ಶಾಖೆ ನಗರದ ಶಿವಾನಂದ ವೃತ್ತದ ಮನೆಯೊಂದರಲ್ಲಿ ಕಾರ್ಯಾರಂಭವಾಗಿದ್ದು, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ಶನಿವಾರ ಖುದ್ದು ಭೇಟಿ ನೀಡಿ ಸಾಹಿತಿ ಗೊ.ರು.ಚನ್ನಬಸಪ್ಪ, ಎಸ್.ಜಿ.ಸಿದ್ದರಾಮಯ್ಯ ಅವರೊಟ್ಟಿಗೆ ಮಾತುಕತೆ ನಡೆಸಿದರು. ತಾಳೆ ಗರಿ ಸೇರಿದಂತೆ ಇತರ ರೂಪಗಳಲ್ಲಿ ಇರುವ ವಚನಗಳ ಸಂಗ್ರಹ ಮತ್ತು ಅವುಗಳನ್ನು ದಾಖಲಿಸುವ ಕೆಲಸವನ್ನು ಇಲ್ಲಿ‌ ಮಾಡುತ್ತಿದ್ದು ಅದನ್ನು ಸಚಿವರು ಪರಿಶೀಲಿಸಿದರು. ಸಚಿವರು ಬಿಎಲ್ ಡಿಇ ಸಂಸ್ಥೆ ಅಧ್ಯಕ್ಷರು ಕೂಡ ಆಗಿದ್ದು, ವಚನ‌ ಸಾಹಿತ್ಯಕ್ಕೆ ಸಂಬಂಧಿಸಿದಂತೆ ವಿವಿಧ ಮೂಲಗಳಿಂದ ಸಂಗ್ರಹಿಸಿರುವ ಬೇರೆ ಬೇರೆ ರೂಪಗಳಲ್ಲಿನ ಮಾಹಿತಿಯನ್ನು ಸ್ಕ್ಯಾನ್ ಮಾಡಿ, ಅದನ್ನು ಟೈಪಿಸುವ ಕೆಲಸ ಮಾಡುತ್ತಿದ್ದು ಅದಕ್ಕೆ ಹಣಕಾಸಿನ‌ ನೆರವು ಕೂಡ ನೀಡಲಾಗುವುದು ಎಂದರು. ಬೆಂಗಳೂರು ಶಾಖೆ ಉಸ್ತುವಾರಿ ಅಶೋಕ ದೊಮ್ಮಲೂರು, ಮಹಾಂತೇಶ ಬಿರಾದರ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಇದ್ದರು. https://kannadanewsnow.com/kannada/aditya-l-1-indias-first-sun-mission-reaches-final-destination-after-126-day-long-journey/ https://kannadanewsnow.com/kannada/karve-state-president-ta-narayana-gowda-granted-bail/

Read More