Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಮಾರುಕಟ್ಟೆ ಪಾಲನ್ನು ಅಸ್ತ್ರವಾಗಿಸಬೇಡಿ’; ಮಾರ್ಕೋ ರೂಬಿಯೊ ಎದುರೇ ಜೈಶಂಕರ್ ತೀಕ್ಷ್ಣ ಪ್ರತಿಕ್ರಿಯೆ!

OpenAI ಆಫರ್: ಎಐ ನಿಯಂತ್ರಿಸುವ ಹುದ್ದೆಗೆ ವಾರ್ಷಿಕ ₹3.7 ಕೋಟಿ ಪ್ಯಾಕೇಜ್!

ರೆಡ್ ಫೋರ್ಟ್ ಬಳಿ ಬ್ಲಾಸ್ಟ್: ಭಯೋತ್ಪಾದನೆಗೆ ಉಗ್ರರಿಂದ ‘AI’ ದುರ್ಬಳಕೆ, NIA ದೋಷಾರೋಪ ಪಟ್ಟಿಯಲ್ಲಿ ರಿವೀಲ್

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » GOOD NEWS: ಹುಬ್ಬಳ್ಳಿ-ಕುಷ್ಟಗಿ ನಡುವೆ ಹೊಸ ದೈನಂದಿನ ಎಕ್ಸ್‌ಪ್ರೆಸ್‌ ರೈಲು ಸಂಚಾರ ಆರಂಭ
KARNATAKA

GOOD NEWS: ಹುಬ್ಬಳ್ಳಿ-ಕುಷ್ಟಗಿ ನಡುವೆ ಹೊಸ ದೈನಂದಿನ ಎಕ್ಸ್‌ಪ್ರೆಸ್‌ ರೈಲು ಸಂಚಾರ ಆರಂಭ

By ವಸಂತ ಬಿ ಈಶ್ವರಗೆರೆ

ಹುಬ್ಬಳ್ಳಿ: ಉತ್ತರ ಕರ್ನಾಟಕದ ರೈಲು ಸಂಪರ್ಕವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನೈರುತ್ಯ ರೈಲ್ವೆಯು ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಜಂಕ್ಷನ್ ಮತ್ತು ಕುಷ್ಟಗಿ ನಿಲ್ದಾಣಗಳ ನಡುವೆ ಹೊಸ ದೈನಂದಿನ ಎಕ್ಸ್‌ಪ್ರೆಸ್‌ ರೈಲು ಸೇವೆಗಳನ್ನು ಪ್ರಾರಂಭಿಸಲು ಸಂತಸ ವ್ಯಕ್ತಪಡಿಸಿದೆ.

ಉದ್ಘಾಟನಾ ವಿಶೇಷ ರೈಲು:

ಗದಗ-ಕುಷ್ಟಗಿ ಹೊಸ ರೈಲು ಮಾರ್ಗದ ಉದ್ಘಾಟನೆಯೊಂದಿಗೆ, ರೈಲು ಸಂಖ್ಯೆ 07353 ಕುಷ್ಟಗಿ – ಎಸ್ಎಸ್ಎಸ್ ಹುಬ್ಬಳ್ಳಿ ಉದ್ಘಾಟನಾ ವಿಶೇಷ ಎಕ್ಸ್‌ಪ್ರೆಸ್‌ (ಒನ್ ವೇ) ರೈಲಿಗೆ ಮಾನ್ಯ ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಅವರು ಮೇ 15, 2024 ರಂದು ಕುಷ್ಟಗಿ ರೈಲು ನಿಲ್ದಾಣದಿಂದ ಹಸಿರು ನಿಶಾನೆ ತೋರಲಿದ್ದಾರೆ.

ಈ ಉದ್ಘಾಟನಾ ವಿಶೇಷ ರೈಲು 2 ಎಸ್ಎಲ್ಆರ್/ಡಿ ಮತ್ತು 6 ಸಾಮಾನ್ಯ ದ್ವಿತೀಯ ದರ್ಜೆ/ಸ್ಲೀಪರ್ ದರ್ಜೆಯ ಬೋಗಿಗಳೊಂದಿಗೆ ಕುಷ್ಟಗಿಯಿಂದ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿಗೆ ಚಲಿಸಲಿದ್ದು, ಮಾರ್ಗಮಧ್ಯ, ಈ ರೈಲು ಲಿಂಗನಬಂಡಿ, ಹನಮಾಪೂರ, ಯಲಬುರ್ಗಾ, ಸಂಗನಾಳ, ಕುಕನೂರು, ತಳಕಲ್, ಬನ್ನಿಕೊಪ್ಪ, ಸೋಂಪುರ ರೋಡ್, ಹಳ್ಳಿಗುಡಿ ಹಾಲ್ಟ್, ಹರ್ಲಾಪುರ, ಕಣಗಿನಹಾಳ, ಗದಗ, ಹುಲಕೋಟಿ, ಅಣ್ಣಿಗೇರಿ, ಶಿಶ್ವಿನಹಳ್ಳಿ, ಹೆಬಸೂರ ಮತ್ತು ಕುಸುಗಲ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರುತ್ತದೆ.

ನಿಯಮಿತ ರೈಲು ಸೇವೆಗಳು:

• ರೈಲು ಸಂಖ್ಯೆ 17327 ಎಸ್ಎಸ್ಎಸ್ ಹುಬ್ಬಳ್ಳಿ – ಕುಷ್ಟಗಿ ದೈನಂದಿನ ಎಕ್ಸ್‌ಪ್ರೆಸ್‌ ರೈಲು ಮೇ 16, 2025 ರಿಂದ ನಿಯಮಿತ ಸೇವೆಯನ್ನು ಪ್ರಾರಂಭಿಸಲಿದೆ.

• ರೈಲು ಸಂಖ್ಯೆ 17328 ಕುಷ್ಟಗಿ – ಎಸ್ಎಸ್ಎಸ್ ಹುಬ್ಬಳ್ಳಿ ದೈನಂದಿನ ಎಕ್ಸ್‌ಪ್ರೆಸ್‌ ರೈಲು ಮೇ 17, 2025 ರಿಂದ ನಿಯಮಿತ ಸೇವೆಯನ್ನು ಪ್ರಾರಂಭಿಸಲಿದೆ.

ರೈಲು ಸಂಖ್ಯೆ 17327 ಎಸ್ಎಸ್ಎಸ್ ಹುಬ್ಬಳ್ಳಿ-ಕುಷ್ಟಗಿ ದೈನಂದಿನ ಎಕ್ಸ್‌ಪ್ರೆಸ್‌ ರೈಲು ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ನಿಲ್ದಾಣದಿಂದ ಸಂಜೆ 5:00 ಗಂಟೆಗೆ ಹೊರಟು ಅದೇ ದಿನ ರಾತ್ರಿ 8:40 ಕ್ಕೆ ಕುಷ್ಟಗಿಯನ್ನು ತಲುಪಲಿದೆ. ಮಾರ್ಗ ಮಧ್ಯೆ, ಈ ರೈಲು ಕುಸುಗಲ್ (05:14/05:15 pm), ಹೆಬಸೂರ (05:24/05:25 pm), ಶಿಶ್ವಿನಹಳ್ಳಿ (05:28/05:29 pm), ಅಣ್ಣಿಗೇರಿ (05:45/05:46 pm), ಹುಲಕೋಟಿ (05:54/05:55 pm), ಗದಗ (06:10/06:12 pm), ಕಣಗಿನಹಾಳ (06:19/06:20 pm), ಹರ್ಲಾಪುರ (06:27/06:28 pm), ಹಳ್ಳಿಗುಡಿ ಹಾಲ್ಟ್ (06:31/06:32 pm), ಸೊಂಪುರ ರೋಡ್ (06:35/06:36 pm), ಬನ್ನಿಕೊಪ್ಪ (06:43/06:44 pm), ತಲಕಲ್ (06:50/07:00 pm), ಕುಕನೂರು (07:12/07:13 pm), ಸಂಗನಾಳ (07:23/07:24 pm), ಯಲಬುರ್ಗಾ (07:33/07:34 pm), ಹನಮಪೂರ (07:42/07:43 pm) ಮತ್ತು ಲಿಂಗನಬಂಡಿ (07:56/07:57 pm) ನಿಲ್ದಾಣಗಳಲ್ಲಿ ಆಗಮಿಸಿ/ನಿರ್ಗಮಿಸಲಿದೆ.

ರೈಲು ಸಂಖ್ಯೆ 17328 ಕುಷ್ಟಗಿ- ಎಸ್ಎಸ್ಎಸ್ ಹುಬ್ಬಳ್ಳಿ ದೈನಂದಿನ ಎಕ್ಸ್‌ಪ್ರೆಸ್‌ ರೈಲು ಕುಷ್ಟಗಿಯಿಂದ ಬೆಳಿಗ್ಗೆ 07:00 ಗಂಟೆಗೆ ಹೊರಟು ಅದೇ ದಿನ ಬೆಳಿಗ್ಗೆ 10:40 ಕ್ಕೆ ಶ್ರೀ ಸಿದ್ಧರೂಢ ಸ್ವಾಮೀಜಿ ಹುಬ್ಬಳ್ಳಿಯನ್ನು ತಲುಪಲಿದೆ. ಮಾರ್ಗ ಮಧ್ಯೆ, ಈ ರೈಲು ಲಿಂಗನಬಂಡಿ (07:10/07:11 am), ಹನಮಾಪುರ (07:21/07:22 am), ಯಲಬುರ್ಗಾ (07:29/07:30 am), ಸಂಗನಾಳ (07:38/07:39 am), ಕುಕನೂರು (07:49/07:50 am), ತಲಕಲ್ (08:10/08:20 am), ಬನ್ನಿಕೊಪ್ಪ (08:25/08:26 am), ಸೊಂಪುರ ರೋಡ್ (08:33/08:34 am), ಹಳ್ಳಿಗುಡಿ ಹಾಲ್ಟ್ (08:36/08:37 am), ಹರ್ಲಾಪುರ (08:40/08:41 am), ಕಣಗಿನಹಾಳ (08:48/08:49 am), ಗದಗ (09:08/09:10 am), ಹುಲಕೋಟಿ (09:24/09:25 am), ಅಣ್ಣಿಗೇರಿ (09:33/09:34 am), ಶಿಶ್ವಿನಹಳ್ಳಿ (09:37/09:38 am), ಹೆಬಸೂರ (09:41/09:42 am) ಮತ್ತು ಕುಸುಗಲ್ (09:49/09:50 am) ನಿಲ್ದಾಣಗಳಲ್ಲಿ ಆಗಮಿಸಿ/ನಿರ್ಗಮಿಸಲಿದೆ.

ಈ ರೈಲುಗಳು ಒಟ್ಟು 11 ಬೋಗಿಗಳನ್ನು ಹೊಂದಿವೆ, ಅವುಗಳಲ್ಲಿ 9 ಸಾಮಾನ್ಯ ದ್ವಿತೀಯ ದರ್ಜೆಯ ಮತ್ತು 2 ದ್ವಿತೀಯ ದರ್ಜೆಯ ಲಗೇಜ್ ಕಮ್ ಗಾರ್ಡ್ ಬ್ರೇಕ್ ವ್ಯಾನ್’ಗಳು/ದಿವ್ಯಾಂಗಜನ ಬೋಗಿಗಳು ಸೇರಿವೆ.

ಈ ಹೊಸ ದೈನಂದಿನ ಎಕ್ಸ್‌ಪ್ರೆಸ್‌ ಸೇವೆಯು ಈ ಭಾಗದ ಪ್ರಯಾಣಿಕರು, ವಿದ್ಯಾರ್ಥಿಗಳು, ವ್ಯಾಪಾರಿಗಳು ಮತ್ತು ಸಾರ್ವಜನಿಕರಿಗೆ ವೇಗವಾದ ಮತ್ತು ಅನುಕೂಲಕರ ಪ್ರಯಾಣವನ್ನು ಒದಗಿಸುವ ಮೂಲಕ ಉತ್ತರ ಕರ್ನಾಟಕದ ಪ್ರಮುಖ ಪಟ್ಟಣಗಳ ನಡುವಿನ ಸಂಪರ್ಕವನ್ನು ಹೆಚ್ಚಿಸುವ ನಿರೀಕ್ಷೆಯಿದೆ.

ಗುಡುಗು-ಸಿಡಿಲಿನಿಂದ ರಕ್ಷಿಸಿಕೊಳ್ಳಲು ಈ ಸಲಹೆ ತಪ್ಪದೇ ಪಾಲಿಸಿ

GOOD NEWS: ರಾಜ್ಯದಲ್ಲಿ ‘NHM ಯೋಜನೆ’ಯಡಿ ನೇಮಕಗೊಳ್ಳುವ ವೈದ್ಯರು, ಸ್ಟಾಫ್ ನರ್ಸ್ ಗಳಿಗೆ ಭರ್ಜರಿ ಸಿಹಿಸುದ್ದಿ

Share. Facebook Twitter LinkedIn WhatsApp Email

Related Posts

Rain In Karnataka: ಜೂನ್.1ರಂದು ರಾಜ್ಯಕ್ಕೆ ಮುಂಗಾರು ಪ್ರವೇಶ ಸಾಧ್ಯತೆ: ಉತ್ತರ ಕರ್ನಾಟಕದಲ್ಲಿ 3 ದಿನ ಭಾರಿ ಮಳೆ, ಆಲಿಕಲ್ಲು ಎಚ್ಚರಿಕೆ!

1 Min Read

BREAKING : ಪತಿಯ ಸ್ನೇಹಿತ ಎಂದು ಹೇಳಿ ಮಹಿಳೆಯ ಮೇಲೆ ಅತ್ಯಾಚಾರ : ಬಿಜೆಪಿ ಮುಖಂಡನ ವಿರುದ್ಧ ಗಂಭೀರ ಆರೋಪ!

2 Mins Read

ನಕಲಿ ಸುಪ್ರೀಂ ಕೋರ್ಟ್ ಆದೇಶ ನೀಡಿ ಪರಪ್ಪನ ಅಗ್ರಹಾರ ಜೈಲಿಂದ ಪರಾರಿ: 8 ವರ್ಷಗಳ ಬಳಿಕ ಕದೀಮನ ಕೃತ್ಯ ಬಯಲು, ಎಫ್‌ಐಆರ್ ದಾಖಲು!

2 Mins Read
Recent News

‘ಮಾರುಕಟ್ಟೆ ಪಾಲನ್ನು ಅಸ್ತ್ರವಾಗಿಸಬೇಡಿ’; ಮಾರ್ಕೋ ರೂಬಿಯೊ ಎದುರೇ ಜೈಶಂಕರ್ ತೀಕ್ಷ್ಣ ಪ್ರತಿಕ್ರಿಯೆ!

OpenAI ಆಫರ್: ಎಐ ನಿಯಂತ್ರಿಸುವ ಹುದ್ದೆಗೆ ವಾರ್ಷಿಕ ₹3.7 ಕೋಟಿ ಪ್ಯಾಕೇಜ್!

ರೆಡ್ ಫೋರ್ಟ್ ಬಳಿ ಬ್ಲಾಸ್ಟ್: ಭಯೋತ್ಪಾದನೆಗೆ ಉಗ್ರರಿಂದ ‘AI’ ದುರ್ಬಳಕೆ, NIA ದೋಷಾರೋಪ ಪಟ್ಟಿಯಲ್ಲಿ ರಿವೀಲ್

ಉಕ್ರೇನ್ ಮೇಲೆ ರಷ್ಯಾದಿಂದ ಸಾರ್ವಕಾಲಿಕ ಮಹಾ ದಾಳಿ; ಒಂದೇ ಸಮನೆ 50 ಕ್ಷಿಪಣಿ, 700 ಡ್ರೋನ್‌ಗಳ ವರ್ಷಪಾತ!

State News
KARNATAKA

Rain In Karnataka: ಜೂನ್.1ರಂದು ರಾಜ್ಯಕ್ಕೆ ಮುಂಗಾರು ಪ್ರವೇಶ ಸಾಧ್ಯತೆ: ಉತ್ತರ ಕರ್ನಾಟಕದಲ್ಲಿ 3 ದಿನ ಭಾರಿ ಮಳೆ, ಆಲಿಕಲ್ಲು ಎಚ್ಚರಿಕೆ!

By ವಸಂತ ಬಿ ಈಶ್ವರಗೆರೆ KARNATAKA 1 Min Read

ಧಾರವಾಡ: ಬಿಸಿಲಿನ ಬೇಗೆಯಿಂದ ಕಂಗಾಲಾಗಿದ್ದ ರಾಜ್ಯದ ಜನತೆಗೆ ಹವಾಮಾನ ಇಲಾಖೆ ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯ ಸಿಹಿ ಸುದ್ದಿ ನೀಡಿದೆ.…

BREAKING : ಪತಿಯ ಸ್ನೇಹಿತ ಎಂದು ಹೇಳಿ ಮಹಿಳೆಯ ಮೇಲೆ ಅತ್ಯಾಚಾರ : ಬಿಜೆಪಿ ಮುಖಂಡನ ವಿರುದ್ಧ ಗಂಭೀರ ಆರೋಪ!

ನಕಲಿ ಸುಪ್ರೀಂ ಕೋರ್ಟ್ ಆದೇಶ ನೀಡಿ ಪರಪ್ಪನ ಅಗ್ರಹಾರ ಜೈಲಿಂದ ಪರಾರಿ: 8 ವರ್ಷಗಳ ಬಳಿಕ ಕದೀಮನ ಕೃತ್ಯ ಬಯಲು, ಎಫ್‌ಐಆರ್ ದಾಖಲು!

BREAKING : ಭಟ್ಕಳ ದುರಂತಕ್ಕೆ ಸಿಎಂ ಸಿದ್ದರಾಮಯ್ಯ ಆಘಾತ : ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.