Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ದಾಖಲಾಗಿದ್ದಂತ ಪೋಕ್ಸೋ ಕೇಸ್ ಸಂಬಂಧ ಹೈಕೋರ್ಟ್ ವಿಚಾರಣೆಯನ್ನು ಡಿಸೆಂಬರ್.12ಕ್ಕೆ ಮುಂದೂಡಿಕೆ ಮಾಡಿದೆ. ಈ ಮೂಲಕ ಬಿಎಸ್ ವೈಗೆ ತಾತ್ಕಾಲಿಕ ರಿಲೀಫ್ ನೀಡಿದೆ. ಇಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಕೇಸ್ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಡೆಸಿತು. ವಿಚಾರಣೆಯ ವೇಳೆಯಲ್ಲಿ ಮತ್ತಷ್ಟು ಕಾಲಾವಕಾಶವನ್ನು ಕೋರಿದ ಕಾರಣದಿಂದಾಗಿ ಹೈಕೋರ್ಟ್ ಏಕಸದಸ್ಯ ಪೀಠವು ಡಿಸೆಂಬರ್.12ಕ್ಕೆ ಮುಂದೂಡಿಕೆ. ಅಂದಹಾಗೇ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿತ್ತು. ಹೈಕೋರ್ಟ್ ಅವರನ್ನು ಬಂಧಿಸದಂತೆ ಆದೇಶಿಸಿತ್ತು. ಈ ಪ್ರಕರಣ ರದ್ದು ಕೋರಿ ಬಿಎಸ್ ಯಡಿಯೂರಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದರು. ಕರ್ನಾಟಕದ ‘ಸೂಟ್-ಬೂಟ್’ ಸಿಎಂ ಎಸ್.ಎಂ ಕೃಷ್ಣ: ಇದು ಅವರ ಪ್ರಯಾಣದ ಏರಿಳಿತಗಳ ಹಾದಿ | SM Krishna Biography – Kannada News | India News | Breaking news | Live news | Kannada | Kannada News | Karnataka…
ಬೆಂಗಳೂರು: ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದ 116 ಕೆಜಿ ತೂಕವುಳ್ಳ 41 ವರ್ಷದ ವ್ಯಕ್ತಿಗೆ ತನ್ನ ಸೊಸೆಯೇ ಯಕೃತ್ನ ಒಂದು ಭಾಗವನ್ನು ದಾನ ಮಾಡುವ ಮೂಲಕ ಫೋರ್ಟಿಸ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಯಕೃತ್ ಕಸಿ ನಡೆಸಲಾಗಿದೆ. ಫೋರ್ಟಿಸ್ ಆಸ್ಪತ್ರೆಯ ಯಕೃತ್ ಕಸಿ ಶಸ್ತ್ರಚಿಕಿತ್ಸಕ ಡಾ. ಕಿಶೋರ್ ಜಿ.ಎಸ್.ಬಿ. ಹಾಗೂ ಡಾ. ಪಿಯೂಷ್ ಸಿನ್ಹಾ ಅವರ ನೇತೃತ್ವದಲ್ಲಿ ಈ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಈ ಕುರಿತು ಮಾತನಾಡಿದ ಡಾ. ಕಿಶೋರ್ ಜಿಎಸ್ಬಿ, ಆಫ್ರಿಕಾ ಮೂಲಕ ಜಾನ್ ಎಂಬ ವ್ಯಕ್ತಿಯು ಕಳೆದ 3-4 ವರ್ಷಗಳಿಂದ ಡಿಕಂಪೆನ್ಸೇಟೆಡ್ ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದರು. ಇದು ತೀವ್ರವಾದ ಪಿತ್ತಜನಕಾಂಗದ ಹಾನಿ, ಅಸ್ಸೈಟ್ಸ್ (ಹೊಟ್ಟೆಯಲ್ಲಿ ದ್ರವದ ಶೇಖರಣೆ), ಕಾಮಾಲೆ ಮತ್ತು ಉಸಿರಾಟದ ತೊಂದರೆ ಉಂಟು ಮಾಡಲಿದೆ. ಅದೂಅಲ್ಲದೆ, ಅತಿಯಾದ ತೂಕ ಹೊಂದಿದ್ದರಿಂದ ನಿದ್ರೆಯಲ್ಲಿ ಉಸಿರುಗಟ್ಟವಿಕೆ ಸಮಸ್ಯೆಗೆ ಒಳಗಾಗುತ್ತಿದ್ದ ಕಾರಣ ಅವರ ಸ್ಥಿತಿ ಇನ್ನಷ್ಟು ಜಟಿಲವಾಗಿತ್ತು. ಲಿವರ್ ಕಸಿ ಮಾಡುವ ಎಂಟು ತಿಂಗಳ ಮೊದಲೇ ಮದ್ಯಪಾನ ಸೇವನೆ ನಿಲ್ಲಿಸಿದ್ದರೂ ಅವರ ಯಕೃತ್ತಿನ ಕಾರ್ಯವು ಕ್ಷೀಣಿಸುತ್ತಲೇ…
ಬೆಂಗಳೂರು: ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ ಅವರ ನಿಧನಕ್ಕೆ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಒಬ್ಬ ಸಮರ್ಥ ರಾಜಕಾರಣಿ, ಸಂಸದೀಯ ಪಟುವಾಗಿ ಈ ರಾಜ್ಯದ ಪ್ರಗತಿಗೆ ಅಪಾರ ಕೊಡುಗೆ ನೀಡಿದ ಕೃಷ್ಣ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಗೃಹ ಸಚಿವರಾಗಿ ತಾವು ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳನ್ನು ಒಮ್ಮತದಿಂದ ಸ್ವೀಕರಿಸುತ್ತಿದ್ದರು ಎಂದಿರುವ ಮಲ್ಲಿಕಾರ್ಜುನ ಖರ್ಗೆ ಅವರು ಅವರೊಂದಿಗೆ ಗೃಹ ಸಚಿವರಾಗಿದ್ದ ದಿನಗಳನ್ನು ನೆನೆಪು ಮಾಡಿಕೊಂಡಿದ್ದಾರೆ, ಡಾ.ರಾಜಕುಮಾರ್ ಅಪರಣವಾದ ಸಂದರ್ಭದಲ್ಲಿ ಅವರು ತಮ್ಮ ಜೊತೆ ಜೊತೆಯಲ್ಲಿ ಸಂಯಮದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು ಎಂದು ಬಣ್ಣಿಸಿದ್ದಾರೆ. ತಮ್ಮ ಸಹೋದ್ಯೋಗಿಯಾಗಿ ರಾಜಕೀಯ ಜೀವನದುದ್ದಕ್ಕೂ ಸ್ನೇಹಮಯಿಯಾಗಿದ್ದರು, ರಾಜ್ಯದ ಬೆಳವಣಿಗೆಯ ದೃಷ್ಟಿಯಿಂದ ಇಬ್ಬರೂ ಒಟ್ಟಿಗೆ ಕಾರ್ಯನಿರ್ವಹಿಸುವಸುವ ಹಲವಾರು ಅವಕಾಶಗಳು ಒದಗಿ ಬಂದಿದ್ದವು ಎಂದು ತಿಳಿಸಿದ್ದಾರೆ, ಬೆಂಗಳೂರು ನಗರವನ್ನು ವಿಶ್ವಮಾನ್ಯ ನಗರವನ್ನಾಗಿ ನಿರ್ಮಿಸಲು ಎಸ್.ಎಂ.ಕೃಷ್ಣ ಅವರು ಅಡಿಪಾಯ ಹಾಕಿದರು, ಬೆಂಗಳೂರು ನಗರವನ್ನು ಸಿಂಗಪುರವಾಗಿ ನೋಡಲು ಇಚ್ಛಿಸಿ, ನಗರವನ್ನು ಸೌಂದರ್ಯೀಕರಣ ಮಾಡಲು ಆರಂಭಿಸಿದರು. ಬೆಂಗಳೂರನ್ನು ಸಿಲಿಕಾನ್ ವ್ಯಾಲಿಯನ್ನಾಗಿ ರೂಪಿಸುವ…
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಅರಣ್ಯ ಇಲಾಖೆಯ ಎಸಿಎಫ್ ಸುರೇಶ್ ನಿವಾಸ, ಕಚೇರಿಯ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದರು. ಈ ದಾಳಿಯ ವೇಳೆಯಲ್ಲಿ ಸಿಕ್ಕಂತ ಚಿನ್ನಾಭರಣ, ಆಸ್ತಿಯನ್ನು ಕಂಡಂತ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಹಾಗಾದ್ರೇ ಸಿಕ್ಕಿದ್ದು ಏನೇನು ಅನ್ನೋ ಬಗ್ಗೆ ಮುಂದೆ ಓದಿ. ಇಂದು ಬೆಳ್ಳಂಬೆಳಿಗ್ಗೆ ಭ್ರಷ್ಟ ಸರ್ಕಾರಿ ಅಧಿಕಾರಿಗಳ ಭೇಟೆಗೆ ಲೋಕಾಯುಕ್ತ ಪೊಲೀಸರು ಇಳಿದಿದ್ದರು. ಬೆಂಗಳೂರಿನ ಐದು ಕಡೆ, ಬೆಂಗಳೂರು ಗ್ರಾಮಾಂತರದ ಓರ್ವ ಅಧಿಕಾರಿಯ ಮೇಲೆ, ಗದಗ, ಕಲಬುರ್ಗಿ, ರಾಯಚೂರು, ಚಿತ್ರದುರ್ಗದಲ್ಲಿ ವಿವಿಧ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಎಸಿಸ್ಟೆಂಟ್ ಕನ್ವೆರ್ಟರ್ ಆಫ್ ಫಾರೆಸ್ಟ್ ಅಧಿಕಾರಿ ಸುರೇಶ್ ನಿವಾಸದ, ಕಚೇರಿಯ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಲೋಕಾಯುಕ್ತ ಅಧಿಕಾರಿಗಳ ದಾಳಿಯ ಸಂದರ್ಭದಲ್ಲಿ ಅಕ್ರಮ ಆಸ್ತಿ, ಪಾಸ್ತಿ ಪರಿಶೀಲನೆ ವೇಳೆಯಲ್ಲಿ ಸಿಕ್ಕಂತ ಚಿನ್ನಾಭರಣ, ಆಸ್ತಿಯನ್ನು ಕಂಡು ದಂಗಾಗಿದ್ದಾರೆ. ಹಿರಿಯೂರು ತಾಲ್ಲೂಕು ಎಸಿಎಫ್ ಸುರೇಶ್ ಮನೆಯಲ್ಲಿ ತನಿಖೆ ವೇಳೆ 1 ಕೆಜಿ ಚಿನ್ನಾಭರಣ, 3 ನಿವೇಶನಗಳು, 9 ಎಕರೆ…
ಬೆಳಗಾವಿ : ಜಿಲ್ಲೆಯಲ್ಲಿ ವಿಧಾನಮಂಡಲದ ಅಧಿವೇಶನ ನಡೆಯುತ್ತಿದ್ದಂತ ಸಂದರ್ಭದಲ್ಲಿಯೇ ಪಂಚಮಸಾಲಿ ಮೀಸಲಾತಿಗೆ ಒತ್ತಾಯಿಸಿ ಪ್ರತಿಭಟನೆ ತೀವ್ರಗೊಂಡಿದೆ. ಇಂದು ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಪ್ರತಿಭಟನಾಕಾರರು ಯತ್ನಿಸಿದರು. ಈ ವೇಳೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಇಂದು ಬೆಳಗಾವಿಯ ಸುವರ್ಣಸೌಧದ ಮುಂದೆ ಪಂಚಮಸಾಲಿ ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆಯನ್ನು ನಡೆಸಲಾಗುತ್ತಿತ್ತು. ಪ್ರತಿಭಟನೆ ವಿಕೋಪಕ್ಕೆ ತಿರುಗಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕೋದಕ್ಕೆ ಯತ್ನಿಸಲಾಯಿತು. ಈ ವೇಳೆ ಪ್ರತಿಭಟನಾಕಾರರನ್ನು ತಡೆಯೋದಕ್ಕೆ ಪೊಲೀಸರು ಎಷ್ಟೇ ಹರಸಾಹಸ ಪಟ್ಟರು ಸಾಧ್ಯವಾಗಲಿಲ್ಲ. ಈ ಹಿನ್ನಲೆಯಲ್ಲಿ ಪ್ರತಿಭಟನಾಕಾರರ ಮೇಲೆ ಎಡಿಜಿಪಿ ಹಿತೇಂದ್ರರಿಂದಲೇ ಲಾಠಿಚಾರ್ಜ್ ನಡೆಸಲಾಯಿತು. ಲಾಠಿ ಏಟು ತಿಂದರು ತಮ್ಮ ಹಠವನ್ನು ಬಿಡದಂತ ಅನೇಕರು ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕೋದಕ್ಕೆ ಮುಂದಾದರು. ಪೊಲೀಸರ ಲಾಠಿ ಏಟಿನಿಂದಾಗಿ 20ಕ್ಕೂ ಹೆಚ್ಚು ಪ್ರತಿಭಟನಾಕಾರರಿಗೆ ಗಾಯವಾಗಿದೆ ಎಂಬುದಾಗಿ ತಿಳಿದು ಬಂದಿದೆ. https://kannadanewsnow.com/kannada/chief-minister-siddaramaiah-condoles-the-death-of-former-mla-s-jayanna/ https://kannadanewsnow.com/kannada/karnatakas-suit-boot-cm-sm-krishna-its-a-journey-of-ups-and-downs/
ಗುರುಗ್ರಾಮ್: ಗುರುಗ್ರಾಮದ ಸೆಕ್ಟರ್ 29 ರ ಪಬ್ ಗಳ ಹೊರಗೆ ಇಂದು ಬಾಂಬ್ ಸ್ಫೋಟ ಸಂಭವಿಸಿದೆ. ಗುರುಗ್ರಾಮ್ ಪೊಲೀಸರ ಪ್ರಕಾರ, ಎರಡು ಹತ್ತಿ ಬಾಂಬ್ಗಳನ್ನು ಎಸೆಯಲಾಗಿದ್ದು, ಅದರಲ್ಲಿ ಒಂದು ಸ್ಫೋಟಗೊಂಡಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಮತ್ತು ತನಿಖೆ ಆರಂಭಿಸಲಾಗಿದೆ. ಗುರುಗ್ರಾಮದ ಪಂಚತಾರಾ ಹೋಟೆಲ್ ಗಳಿಗೆ ಬಾಂಬ್ ಬೆದರಿಕೆ ಇಮೇಲ್ ಗಳು ಬಂದ ಒಂದು ದಿನದ ನಂತರ ಈ ಸ್ಫೋಟ ಸಂಭವಿಸಿದೆ. ಗುರುಗ್ರಾಮದ ಸೆಕ್ಟರ್ 29ರಲ್ಲಿ ಬಾಂಬ್ ಸ್ಫೋಟ, ಆರೋಪಿ ಬಂಧನ ಗುರುಗ್ರಾಮದ ಸೆಕ್ಟರ್ -29 ರಲ್ಲಿರುವ ಕ್ಲಬ್ ಗಳ ಹೊರಗೆ ಇಂದು ಮುಂಜಾನೆ ಎರಡು ಹತ್ತಿ ಬಾಂಬ್ ಗಳನ್ನು ಎಸೆಯಲಾಗಿದೆ ಎಂದು ಗುರುಗ್ರಾಮ್ ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಸಚಿನ್ ಎಂದು ಗುರುತಿಸಲಾಗಿದ್ದು, ಆತ ಬಾಂಬ್ ಎಸೆಯುತ್ತಿದ್ದಾಗ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗುರುಗ್ರಾಮ್ ಪೊಲೀಸರ ಪ್ರಕಾರ, ಪ್ರಾಥಮಿಕ ತನಿಖೆಯಲ್ಲಿ, ಘಟನೆಯ ಸಮಯದಲ್ಲಿ, ಆರೋಪಿಯು ಅಮಲಿನಲ್ಲಿದ್ದನು ಮತ್ತು ಅವನು ಈಗಾಗಲೇ 2 ಹತ್ತಿ ಬಾಂಬ್ಗಳನ್ನು ಎಸೆದಿದ್ದನು ಮತ್ತು ಇನ್ನೂ 2 ಬಾಂಬ್ಗಳನ್ನು…
ಬೆಂಗಳೂರು: ಹೃದಯಾಘಾತದಿಂದ ದಿಢೀರ್ ನಿಧನರಾದಂತ ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು, ಇಂದು ಸಂಜೆ 5.30ಕ್ಕೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸಭೆಯನ್ನು ನಿಗದಿ ಪಡಿಸಲಾಗಿದೆ. ಈ ಬಗ್ಗೆ ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಮಾಹಿತಿ ಹಂಚಿಕೊಂಡಿದ್ದು, ಕರ್ನಾಟಕದ ಹಿರಿಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿ, ಕೇಂದ್ರ ಸರ್ಕಾರದ ಮಾಜಿ ವಿದೇಶಾಂಗ ಸಚಿವ, ಮಾಜಿ ರಾಜ್ಯಪಾಲ ಎಸ್ಎಂ ಕೃಷ್ಣ ಅವರಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ವತಿಯಿಂದ ಈ ದಿನ ಸಂಜೆ 5:30ಕ್ಕೆ ಕ್ವೀನ್ಸ್ ರಸ್ತೆಯ ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಭವನದಲ್ಲಿ ಶ್ರದ್ಧಾಂಜಲಿ ಸಭೆಯನ್ನು ಏರ್ಪಡಿಸಲಾಗಿದೆ ಎಂದಿದ್ದಾರೆ. ಕೆಪಿಸಿಸಿ ಅಧ್ಯಕ್ಷರು ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರು, ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಕರ್ನಾಟಕ ರಾಜ್ಯ ಸರ್ಕಾರದ ಸಂಪುಟ ಸಚಿವರು, ಕರ್ನಾಟಕ ಕಾಂಗ್ರೆಸ್ ಪಕ್ಷದ ಮುಖಂಡರು ಶಾಸಕರು ಸಂಸದರು ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ. https://kannadanewsnow.com/kannada/sm-krishnas-funeral-to-be-attended-tomorrow-dk-shivakumar/ https://kannadanewsnow.com/kannada/karnatakas-suit-boot-cm-sm-krishna-its-a-journey-of-ups-and-downs/
ಮಂಡ್ಯ: ನಾಳೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಚಿವ ಸಂಪುಟದ ಎಲ್ಲರೂ ಬರಲಿದ್ದಾರೆ. ವಿಶೇಷ ವಾಹನದಲ್ಲಿ ಪಕ್ಷದ ಎಲ್ಲಾ ಶಾಸಕರು ಬರ್ತಾರೆ. ಕೇಂದ್ರ ನಾಯಕರು ಬರೋ ಬಗ್ಗೆ ನನಗೆ ಮಾಹಿತಿ ಇಲ್ಲ. ಯಾರ ಪೋನ್ ಕೂಡ ನಾನು ರಿಸೀವ್ ಮಾಡೋಕೆ ಆಗಿಲ್ಲ ಎಂಬುದಾಗಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರಿನ ಸೋಮನಹಳ್ಳಿಯಲ್ಲಿ ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ನಡೆಯುವ ಸ್ಥಳವನ್ನು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮಂಗಳವಾರ ಪರಿಶೀಲನೆ ನಡೆಸಿ, ಅಗತ್ಯ ಸೂಚನೆಗಳನ್ನು ನೀಡಿದರು. ಸಚಿವ ಚಲುವರಾಸ್ವಾಮಿ, ಶಾಸಕರಾದ ಉದಯ ಕದಲೂರು, ರವಿ ಗಣಿಗ, ರಮೇಶ್ ಬಂಡಿಸಿದ್ದೇಗೌಡ , ಜಿಲ್ಲಾಧಿಕಾರಿ ಕುಮಾರ್, ಎಂಎಲ್ಸಿ ದಿನೇಶ್ ಗೂಳಿಗೌಡ ಮತ್ತಿತರರು ಜತೆಗಿದ್ದರು. https://kannadanewsnow.com/kannada/karnatakas-suit-boot-cm-sm-krishna-its-a-journey-of-ups-and-downs/ https://kannadanewsnow.com/kannada/breaking-sm-krishna-funeral-at-4-pm-tomorrow-all-preparations-for-last-rites-in-somanahalli/
ಬೆಂಗಳೂರು: 2004ರ ಫೆಬ್ರವರಿಯಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ಣ ಪ್ರಮಾಣದ ಸಚಿವ ಸಂಪುಟ ಸಭೆಯಲ್ಲಿ ಈ ಘಟನೆ ನಡೆದಿತ್ತು. ಆ ಬೇಸಿಗೆಯಲ್ಲಿ ರಾಜ್ಯವು ಮತ್ತೊಂದು ಬರಗಾಲವನ್ನು ಎದುರಿಸುವ ನಿರೀಕ್ಷೆಯಿರುವುದರಿಂದ ಏಪ್ರಿಲ್ ನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯ ಜೊತೆಗೆ ಮುಂಚಿತವಾಗಿ ವಿಧಾನಸಭಾ ಚುನಾವಣೆಗೆ ಹೋಗಲು ನಿರ್ಧರಿಸಿದ್ದೇನೆ ಎಂದು ಕೃಷ್ಣ ಘೋಷಿಸಿದರು. ಅಕ್ಟೋಬರ್ ವರೆಗೆ (ವಿಧಾನಸಭೆಯ ಅವಧಿ ಮುಗಿಯುವವರೆಗೆ) ಕಾಯುತ್ತಿದ್ದರೆ ರೈತರ ಕೋಪವನ್ನು ವಿರೋಧ ಪಕ್ಷಗಳು ಚುನಾವಣಾ ವಿಷಯವನ್ನಾಗಿ ಮಾಡುತ್ತವೆ ಎಂದು ಅವರು ಅಭಿಪ್ರಾಯಪಟ್ಟರು. ಮತ್ತೊಂದು ಕಾರಣವೆಂದರೆ, ದಿವಂಗತ ಮಾಜಿ ಪ್ರಧಾನಿ ಎಬಿ ವಾಜಪೇಯಿ ಅವರ ‘ಇಂಡಿಯಾ ಶೈನಿಂಗ್’ ಘೋಷಣೆಯನ್ನು (2004 ರಲ್ಲಿ ಭಾರತದಲ್ಲಿ ಆರ್ಥಿಕ ಆಶಾವಾದದ ಒಟ್ಟಾರೆ ಭಾವನೆಯನ್ನು ಸೂಚಿಸಲು ರಚಿಸಲಾದ ಮಾರ್ಕೆಟಿಂಗ್ ಘೋಷಣೆ) ಎದುರಿಸುವುದು ಕಷ್ಟಕರವಾಗಿತ್ತು. ಹಿರಿಯ ಸಚಿವರಾದ ಮಲ್ಲಿಕಾರ್ಜುನ ಖರ್ಗೆ, ಎನ್.ಧರಂ ಸಿಂಗ್, ಕಾಗೋಡು ತಿಮ್ಮಪ್ಪ ಮತ್ತು ಇತರರು ಈ ಕಲ್ಪನೆಯನ್ನು ಬಲವಾಗಿ ವಿರೋಧಿಸಿದರು, ಉತ್ತಮ ಮಾನ್ಸೂನ್ ಮುನ್ಸೂಚನೆ ನೀಡಲಾಗಿದೆ ಮತ್ತು ಅಕ್ಟೋಬರ್ ವೇಳೆಗೆ ರಾಜ್ಯದ…
ಬೆಳಗಾವಿ ಸುವರ್ಣ ಸೌಧ: ಕೊಳ್ಳೇಗಾಲ ಮಾಜಿ ಶಾಸಕ, ಉಗ್ರಾಣ ನಿಗಮದ ಅಧ್ಯಕ್ಷ ಜಯಣ್ಣ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಎಸ್.ಎಂ.ಕೃಷ್ಣ ಅವರ ಸಾವಿನ ಆಘಾತದಿಂದ ಚೇತರಿಸಿಕೊಳ್ಳುವ ಮುನ್ನವೇ ಜಯಣ್ಣ ಅವರ ಸಾವಿನ ಸುದ್ದಿ ಆಘಾತ ತಂದಿದೆ. ಜಯಣ್ಣ ನನ್ನ ಆತ್ಮೀಯರು. ನಮ್ಮ ನಡುವೆ ದೀರ್ಘಕಾಲದ ಒಡನಾಟವಿತ್ತು. ಇವರು 1994 ರಲ್ಲಿ ಜೆಡಿಎಸ್ ನಿಂದ ಹಾಗೂ 2013ರಲ್ಲಿ ಕಾಂಗ್ರೆಸ್ ಪಕ್ಷದಿಂದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದರು. ಪಕ್ಷ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಶ್ರಮವಹಿಸಿ ಕೆಲಸ ಮಾಡಿದ ಜಯಣ್ಣ ಜನಾನುರಾಗಿ ಶಾಸಕರಾಗಿದ್ದರು. ಜನರ ಕಷ್ಟಗಳಿಗೆ ಸದಾ ಮಿಡಿಯುತ್ತಿದ್ದರು. ಡಿಸೆಂಬರ್ ಏಳರಂದು ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಜೊತೆಗಿದ್ದರು. ಅವರ ಮನೆಯಲ್ಲಿಯೇ ಊಟ ಮಾಡಿ ಬಂದಿದ್ದನ್ನು ಸ್ಮರಿಸಿದರು ಮುಖ್ಯಮಂತ್ರಿಗಳು, ಜಯಣ್ಣ ಅವರ ಸಾವು ವೈಯಕ್ತಿಕವಾಗಿ ಆಘಾತ ತಂದಿದೆ. ಅವರ ನಿಧನದಿಂದ ಜನಪ್ರಿಯ ರಾಜಕಾರಣಿಯನ್ನು ಕಳೆದುಕೊಂಡಂತಾಗಿದೆ. ಭಗವಂತ ಮೃತರ ಆತ್ಮಕ್ಕೆ ಚಿರಶಾಂತಿ ನೀಡಲಿ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ…