Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಹೆಲಿಕಾಪ್ಟರ್, ವಿಮಾನ ಪ್ರಯಾಣಕ್ಕೂ ವ್ಯತ್ಯಾಸವೇನು? ಸಾಗರದ ಜನತೆ ಈ ಸುದ್ದಿ ಓದಿ!

06/02/2026 10:18 PM

‘ಕಾಶ್ಮೀರ ಪಾಕಿಸ್ತಾನದ ಭಾಗವಾಗಲಿದೆ’ : ಪ್ರಧಾನಿ ‘ಶೆಹಬಾಜ್ ಷರೀಫ್’ ಉದ್ಧಟತನ

06/02/2026 10:13 PM

ನಕಾರಾತ್ಮಕ ಜನರಿಂದ ದೂರವಿರಿ, ಪ್ರತಿದಿನ ಒಂದು ಗಂಟೆ ಪರಿಷ್ಕರಿಸಿ, 7 ಗಂಟೆ ನಿದ್ರೆ ಮಾಡಿ ; ‘ವಿದ್ಯಾರ್ಥಿಗಳಿಗೆ’ ಪ್ರಧಾನಿ ಮೋದಿ ವಿಶೇಷ ಸಲಹೆ

06/02/2026 10:09 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ದೇಶದಲ್ಲೇ ಮೊದಲು: ಕರ್ನಾಟಕದಲ್ಲಿ ಜಿಲ್ಲಾಸ್ಪತ್ರೆಗಳ ಮಟ್ಟದಲ್ಲಿ ‘ಕೀಮೋಥೆರಪಿ ಚಿಕಿತ್ಸೆ’ ಆರಂಭ
KARNATAKA

BIG NEWS: ದೇಶದಲ್ಲೇ ಮೊದಲು: ಕರ್ನಾಟಕದಲ್ಲಿ ಜಿಲ್ಲಾಸ್ಪತ್ರೆಗಳ ಮಟ್ಟದಲ್ಲಿ ‘ಕೀಮೋಥೆರಪಿ ಚಿಕಿತ್ಸೆ’ ಆರಂಭ

By kannadanewsnow0924/05/2025 5:35 AM

ಮೈಸೂರು: ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ, ಜಿಲ್ಲಾಮಟ್ಟದ ಆಸ್ಪತ್ರೆಗಳಲ್ಲಿ ಡೇ ಕೇರ್ ಕಿಮೋಥೆರಪಿ ಚಿಕಿತ್ಸೆಯನ್ನು ಆರಂಭಿಸಲಾಗಿದೆ. 16 ಜಿಲ್ಲಾಸ್ಪತ್ರೆಗಳಲ್ಲಿ ಏಕಕಾಲಕ್ಕೆ ಕೀಮೋಥೆರಪಿ ಚಿಕಿತ್ಸೆ ಪ್ರಾರಂಭವಾಗಿದ್ದು, ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು. 

ಮೈಸೂರು ಜಿಲ್ಲಾಸ್ಪತ್ರೆಯಲ್ಲಿ 20 ಬೆಡ್ ಗಳ ಕೀಮೋಥೆರಪಿ ಕೇಂದ್ರ ಹಾಗೂ ಉಳಿದ 15 ಜಿಲ್ಲಾಸ್ಪತ್ರೆಗಳಲ್ಲಿ 10 ಬೆಡ್ ಗಳ ಕೀಮೋಥೆರಪಿ ಕೇಂದ್ರಗಳಿಗೆ ಚಾಲನೆ ದೊರೆತಿದೆ.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ರಾಜ್ಯದಲ್ಲಿ ಕೇಂದ್ರೀಕೃತವಾಗಿದ್ದ ಕ್ಯಾನ್ಸರ್ ಚಿಕಿತ್ಸೆಯನ್ನು ಜಿಲ್ಲಾಸ್ಪತ್ರೆಗಳ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಮೂಲಕ ವಿಕೇಂದ್ರಿಕೃತ ವ್ಯವಸ್ಥೆ ಜಾರಿಗೆ ತಂದಿದ್ದೇವೆ. ಬಡವರು ಹೆಚ್ಚಿನ ಸಂಖ್ಯೆಯಲ್ಲಿ ಕ್ಯಾನ್ಸರ್ ಗೆ ತುತ್ತಾಗುತ್ತಿದ್ಧಾರೆ. ಪ್ರತಿ ವರ್ಷ 70 ಸಾವಿರ ಹೊಸ ರೋಗಿಗಳು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಚಿಕಿತ್ಸೆಗಾಗಿ ಶೇ 60 ರಷ್ಟು ಕ್ಯಾನ್ಸರ್ ಪೀಡಿತರು 100 ಕಿ.ಮೀ ಗೂ ಹೆಚ್ಚು ದೂರ ಪ್ರಯಾಣ ಮಾಡಬೇಕಿತ್ತು. ಇದರಲ್ಲಿ ಶೇ 30 ರಷ್ಟು ಬಡ ರೋಗಿಗಳು ದೂರದ ಪ್ರಯಾಣದ ವೆಚ್ಚ ಭರಿಸಲಾಗದೇ ಕೀಮೋಥೆರಪಿ ಚಿಕಿತ್ಸೆ ಪಡೆಯಲು ಆಸ್ಪತ್ರೆಗಳಿಗೆ ಹೋಗುತ್ತಿರಲಿಲ್ಲ.. ಇದೀಗ ರಾಜ್ಯದ 16 ಜಿಲ್ಲಾಸ್ಪತ್ರೆಗಳಲ್ಲಿ ಡೇ ಕೇರದ ಕೀಮೋಥೆರಪಿ ಕೇಂದ್ರಗಳಲ್ಲಿ ಚಿಕಿತ್ಸೆ ದೊರಯಲಿದೆ. ಬಿಪಿಎಲ್ ಕುಟುಂಬಗಳಿಗೆ ಉಚಿತ ಆರೋಗ್ಯ ಸೇವೆ ಕಲ್ಪಿಸಲಾಗಿದೆ. ಇದು ಬಡವರಿಗೆ ಹೆಚ್ಚು ಅನುಕೂಲವಾಗುವ ಯೋಜನೆಯಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಡೇ ಕೇರ್ ಕೀಮೋಥೆರಪಿ ಕೇಂದ್ರಗಳನ್ನು ಉನ್ನತ ಮಟ್ಟದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಸಹಯೋಗದೊಂದಿಗೆ ಹಬ್ ಅಂಡ್ ಸ್ಪೋಕ್ ಮಾಡೆಲ್ ನಲ್ಲಿ ಜಾರಿಗೆ ತಂದಿದ್ದೇವೆ. 16 ಜಿಲ್ಲಾಸ್ಪತ್ರೆಗಳಲ್ಲಿ 7 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಸಹಯೋಗದೊಂದಿಗೆ ಕೀಮೋಥೆರಪಿ ಚಿಕಿತ್ಸೆ ಒದಗಿಸಲಾಗಿದೆ. ಕೀಮೋಥೆರಪಿ ಹೊರತಾಗಿ ಹೆಚ್ಚಿನ ಚಿಕಿತ್ಸೆಯನ್ನು ಹಬ್ ಕೇಂದ್ರಗಳಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಕಲ್ಪಿಸಿಕೊಡುವುದಾಗಿ ಇದೇ ವೇಳೆ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಮುಂಬರುವ ದಿನಗಳಲ್ಲಿ 16 ಜಿಲ್ಲಾಸ್ಪತ್ರೆಗಳ ಜೊತೆಗೆ ಉಳಿದ ಜಿಲ್ಲೆಗಳಲ್ಲಿಯೂ ಡೇ ಕೇರ್ ಕೀಮೋಥೆರಪಿ ಕೇಂದ್ರಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿದರು. ಬಡವರಿಗು ಉತ್ತಮ ಚಿಕಿತ್ಸೆಗಳು ದೊರೆಯಬೇಕು. ಈ ಮೊದಲು ಕೀಮೋಥೆರಪಿ ಚಿಕಿತ್ಸೆಗೆ ಬೆಂಗಳೂರಿಗೆ ತೆರಳಬೇಕಾಗಿತ್ತು. ಇದು ರೋಗಿಗಳ ಪಾಲಿಗೆ ಕಷ್ಟಸಾಧ್ಯವಾಗಿತ್ತು. ರಾಜ್ಯದಲ್ಲಿ ಪ್ರತಿವರ್ಷ ಹೊಸ ರೋಗಿಗಳು ಪತ್ತೆಯಾಗುತ್ತಿದ್ದಾರೆ.. ಈ ನಿಟ್ಟಿನಲ್ಲಿ ನಮ್ಮ ಸರ್ಕಾರದ ಡೇ ಕೇರ್ ಕೀಮೋಥೆರಪಿ ಕೇಂದ್ರಗಳು ಬಡವರಿಗೆ ಹೆಚ್ಚು ಅನುಕೂಲ ಕಲ್ಪಿಸಲಿವೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚು ಅನುಭವ ಮತ್ತು ಪರಿಣಿತಿಯುಳ್ಳ ವೈದ್ಯರಿದ್ದಾರೆ. ಖಾಸಗಿ ಆಸ್ಪತ್ರೆಗಳಿಗೆ ಹೋದರೆ ಕಾಯಿಲೆ ವಾಸಿಯಾಗುತ್ತದೆ ಎಂಬ ಭಾವನೆ ನಮ್ಮ ಜನರಲ್ಲಿದೆ. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲೂ ಉತ್ತಮ ಚಿಕಿತ್ಸೆ ಒದಗಿಸಿಕೊಡುತ್ತಿದ್ದೇವೆ. ಇಂದು 240 ಕೇಂದ್ರಗಳಲ್ಲಿ ಡಯಾಲಿಸಿಸ್ ಆರೋಗ್ಯ ಸೇವೆ ನೀಡಲಾಗುತ್ತಿದೆ.ಆರೋಗ್ಯಕರ ಜೀವನ ಮುಖ್ಯ. ಪ್ರತಿಯೊಬ್ಬರು ವಾರ್ಷಿಕ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ರೋಗಗಳನ್ನು ಮುಂಚಿತವಾಗಿ ಪತ್ತೆಹಚ್ಚಲು ಅನುಕೂಲವಾಗುತ್ತದೆ. ಆಗಮಾತ್ರ ಆರೋಗ್ಯಕರ ಜೀವನ ನಡೆಸಲು ಸಾಧ್ಯ. ಆರೋಗ್ಯ ಸದೃಢವಾಗಿದ್ದರೆ, ದೇಶದ ಅಭಿವೃದ್ಧಿಯಲ್ಲಿ ಜನರೂ ಕೊಡುಗೆ ನೀಡಬಹುದು. ಜೀವನ ಶೈಲಿ ಮತ್ತು ಆಹಾರ ಪದ್ಧತಿಯ ಬಗ್ಗೆ ಗಮನ ಹರಿಸಿ ಎಂದು ಸಿಎಂ ಸಿದ್ದರಾಮಯ್ಯ ಅವರು ಜನರಿಗೆ ಕಿವಿಮಾತು ಹೇಳಿದರು.

Share. Facebook Twitter LinkedIn WhatsApp Email

Related Posts

ಹೆಲಿಕಾಪ್ಟರ್, ವಿಮಾನ ಪ್ರಯಾಣಕ್ಕೂ ವ್ಯತ್ಯಾಸವೇನು? ಸಾಗರದ ಜನತೆ ಈ ಸುದ್ದಿ ಓದಿ!

06/02/2026 10:18 PM3 Mins Read

ಟಿ20 ವಿಶ್ವಕಪ್: ಭಾರತ ತಂಡದಿಂದ ಹರ್ಷಿತ್ ರಾಣಾ ಔಟ್, ಮೊಹಮ್ಮದ್ ಸಿರಾಜ್ ಇನ್

06/02/2026 9:38 PM2 Mins Read

ಋಷಿಮುನಿಗಳೇ ನಮ್ಮ ದೇಶದ ವಿಜ್ಞಾನಿಗಳು: ಇಸ್ರೋ ಡೆಪ್ಯುಟಿ ಡೈರೆಕ್ಟರ್ ಡಾ.ಎಸ್.ವೆಂಕಟೇಶ್ವರ ಶರ್ಮಾ

06/02/2026 9:13 PM2 Mins Read
Recent News

ಹೆಲಿಕಾಪ್ಟರ್, ವಿಮಾನ ಪ್ರಯಾಣಕ್ಕೂ ವ್ಯತ್ಯಾಸವೇನು? ಸಾಗರದ ಜನತೆ ಈ ಸುದ್ದಿ ಓದಿ!

06/02/2026 10:18 PM

‘ಕಾಶ್ಮೀರ ಪಾಕಿಸ್ತಾನದ ಭಾಗವಾಗಲಿದೆ’ : ಪ್ರಧಾನಿ ‘ಶೆಹಬಾಜ್ ಷರೀಫ್’ ಉದ್ಧಟತನ

06/02/2026 10:13 PM

ನಕಾರಾತ್ಮಕ ಜನರಿಂದ ದೂರವಿರಿ, ಪ್ರತಿದಿನ ಒಂದು ಗಂಟೆ ಪರಿಷ್ಕರಿಸಿ, 7 ಗಂಟೆ ನಿದ್ರೆ ಮಾಡಿ ; ‘ವಿದ್ಯಾರ್ಥಿಗಳಿಗೆ’ ಪ್ರಧಾನಿ ಮೋದಿ ವಿಶೇಷ ಸಲಹೆ

06/02/2026 10:09 PM

BREAKING : “ಹಲವು ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿ” : ವಿಶ್ವಕಪ್ ಗೆಲುವಿನ ಕುರಿತು ಅಂಡರ್-19 ಕ್ರಿಕೆಟ್ ತಂಡಕ್ಕೆ ‘ಪ್ರಧಾನಿ ಮೋದಿ’ ಸಂದೇಶ

06/02/2026 9:41 PM
State News
KARNATAKA

ಹೆಲಿಕಾಪ್ಟರ್, ವಿಮಾನ ಪ್ರಯಾಣಕ್ಕೂ ವ್ಯತ್ಯಾಸವೇನು? ಸಾಗರದ ಜನತೆ ಈ ಸುದ್ದಿ ಓದಿ!

By kannadanewsnow0906/02/2026 10:18 PM KARNATAKA 3 Mins Read

ಶಿವಮೊಗ್ಗ: ಇಂದಿನಿಂದ ಸಾಗರದ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಹೆಲಿ ಟೂರಿಸಂ ಆರಂಭಗೊಂಡಿದೆ. ಇಲ್ಲಿದ ನಿಗದಿ ಪಡಿಸಿರುವಂತ ದುಡ್ಡಿಗಿಂತ…

ಟಿ20 ವಿಶ್ವಕಪ್: ಭಾರತ ತಂಡದಿಂದ ಹರ್ಷಿತ್ ರಾಣಾ ಔಟ್, ಮೊಹಮ್ಮದ್ ಸಿರಾಜ್ ಇನ್

06/02/2026 9:38 PM

ಋಷಿಮುನಿಗಳೇ ನಮ್ಮ ದೇಶದ ವಿಜ್ಞಾನಿಗಳು: ಇಸ್ರೋ ಡೆಪ್ಯುಟಿ ಡೈರೆಕ್ಟರ್ ಡಾ.ಎಸ್.ವೆಂಕಟೇಶ್ವರ ಶರ್ಮಾ

06/02/2026 9:13 PM

ಇದು ಕನ್ನಡ ನ್ಯೂಸ್ ನೌ ಸುದ್ದಿ ಎಫೆಕ್ಟ್: ರೀಲ್ಸ್ ನೋಡುತ್ತ KSRTC ಬಸ್ ಚಾಲನೆ ಮಾಡಿದ ಚಾಲಕ ಸಸ್ಪೆಂಡ್

06/02/2026 9:05 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.