Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ರಾಜ್ಯ ಸರ್ಕಾರದಿಂದ ಈ ಬಾರಿಯ ಎಸ್ಎಸ್ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಅಕ್ರಮ ತಡೆಗೆ ಮಹತ್ವದ ಕ್ರಮ ವಹಿಸಲಾಗಿದೆ. ಈ ಬಾರಿ ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇಂದು ಬೆಂಗಳೂರಿನ ಸಮಗ್ರ ಶಿಕ್ಷಣ ಕರ್ನಾಟಕ (ಎಸ್.ಎಸ್.ಕೆ) ಭವನದಲ್ಲಿ “2024-25ನೇ ಸಾಲಿನ ದ್ವಿತೀಯ ಪಿಯುಸಿ ಮತ್ತು ಎಸ್.ಎಸ್.ಎಲ್.ಸಿ ಪರೀಕ್ಷೆ”ಯ ಪೂರ್ವಸಿದ್ದತೆಗಳ ಕುರಿತು ಶಿಕ್ಷಣ ಇಲಾಖೆ, ಗೃಹ ಇಲಾಖೆ ಹಾಗೂ ಕಂದಾಯ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಸಭೆನಡೆಸಲಾಯಿತು. ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿ, ಜಿಲ್ಲಾ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯತ್ ಸಿಇಒ ಸೇರಿದಂತೆ ಜಿಲ್ಲಾಮಟ್ಟದ ಉನ್ನತ ಅಧಿಕಾರಿಗಳೊಂದಿಗೆ “ಪರೀಕ್ಷಾ ಸಂಬಂಧ ಕೈಗೊಗೊಳ್ಳಬೇಕಾಗಿರುವ ಭದ್ರತೆಗಳ” ಕುರಿತು ವಿಡಿಯೋ ಕಾನ್ಫರೆನ್ಸ್ ಮೂಲಕ ಕೆಲವು ಅಗತ್ಯ ಸಲಹೆ ಸೂಚನೆಗಳನ್ನು ನೀಡಲಾಯಿತು. ಈ ಸಭೆಯಲ್ಲಿ ಚರ್ಚಿಸಿ, ಕೈಗೊಂಡಿರುವ ಕ್ರಮಗಳು ♦️ದ್ವಿತೀಯ ಪಿಯುಸಿ ಪರೀಕ್ಷೆಯು ಮಾರ್ಚ್ 01ರಿಂದ 20ರ ವರೆಗೆ ಮತ್ತು ಎಸ್ಎಸ್ಎಲ್ಸಿ ಪರೀಕ್ಷೆಯು ಮಾರ್ಚ್ 21 ರಿಂದ ಏಪ್ರಿಲ್ 04ರವರೆಗೆ ನಡೆಯಲಿದ್ದು ಅಗತ್ಯ ಕ್ರಮ ಕೈಗೊಳ್ಳುವ ಕುರಿತು. ♦️ರಾಜ್ಯದ ಎಲ್ಲ…
ಧಾರವಾಡ: ಮುಡಾ ಹಗರಣ ಸಂಬಂಧ ಇಡಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಪತ್ನಿ ಪಾರ್ವತಿ ಹಾಗೂ ಸಚಿವ ಬೈರತಿ ಸುರೇಶ್ ಅವರಿಗೆ ಸಮನ್ಸ್ ನೀಡಲಾಗಿತ್ತು. ಈ ಸಮನ್ಸ್ ಗೆ ಹೈಕೋರ್ಟ್ ತಡೆಯಾಜ್ಞೆಯನ್ನು ವಿಸ್ತರಿಸಿ ಆದೇಶಿಸಿದೆ. ಇಂದು ಧಾರವಾಡದ ವಿಭಾಗೀಯ ಹೈಕೋರ್ಟ್ ನ್ಯಾಯಪೀಠದಲ್ಲಿ ಇಡಿ ಸಮನ್ಸ್ ರದ್ದು ಕೋರಿ ಸಿಎಂ ಸಿದ್ಧರಾಮಯ್ಯ ಅವರ ಪತ್ನಿ ಪಾರ್ವತಿ ಹಾಗೂ ಸಚಿವ ಬೈರತಿ ಸುರೇಶ್ ಸಲ್ಲಿಸಿದ್ದಂತ ಅರ್ಜಿಯ ವಿಚಾರಣೆಯನ್ನು ನಡೆಸಲಾಯಿತು. ಇಡಿ ಹಾಗೂ ಸಿಎಂ ಪತ್ನಿ ಪಾರ್ವತಿ, ಬೈರತಿ ಸುರೇಶ್ ಎರಡು ಕಡೆಯ ವಾದ, ಪ್ರತಿವಾದವನ್ನು ಆಲಿಸಿದಂತ ಹೈಕೋರ್ಟ್ ನ್ಯಾಯಪೀಠವು ಆದೇಶವನ್ನು ಕಾಯ್ದಿರಿಸಿತು. ಅಲ್ಲದೇ ಇಡಿ ಸಮನ್ಸ್ ಗೆ ತಡೆಯಾಜ್ಞೆಯನ್ನು ವಿಸ್ತರಿಸಿ ಆದೇಶಿಸಿದೆ. ಅಂದಹಾಗೇ ಸಿಎಂ ಸಿದ್ಧಾರಮಯ್ಯ ಪತ್ನಿ ಪರವಾಗಿ ಹಿರಿಯ ವಕೀಲ ಸಂದೇಶ್ ಚೌಟಾ ಅವರು, ಇಡಿಯು ಮೂಲ ಅಂಶಗಳೇ ಇಲ್ಲದೇ ಇಸಿಆರ್ ದಾಖಲಿಸಿದೆ. ಸೈಟ್ ಹಿಂದಿರಸಿರುವ ಅಪರಾಧ ಒಪ್ಪಿಕೊಂಡಂತೆ ಅಲ್ಲ. ಸಿಎಂ ಮೇಲೆ ಆರೋಪ ಬಂದಿದ್ದಕ್ಕೆ ಆಗಿದೆ ಎಂಬುದಾಗಿ ವಾದಿಸಿದರು. ಇಡಿ ಪರವಾಗಿ ಎಎಸ್ ಜೆ…
ಬೆಂಗಳೂರು: ನಗರದ ಪಿಯುಸಿ, ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಎನ್ನುವಂತೆ ಪರೀಕ್ಷೆ-1ಕ್ಕೆ ತಮ್ಮ ನಿವಾಸದಿಂದ ಪರೀಕ್ಷಾ ಕೇಂದ್ರಕ್ಕೆ ಬಿಎಂಟಿಸಿ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ಹೌದು. ಪಿಯುಸಿ ಪರೀಕ್ಷೆ ಮಾರ್ಚ್ 1ರಿಂದ 20ರವರೆಗೆ, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾರ್ಚ್ 21ರಿಂದ ಏಪ್ರಿಲ್ 4ರವರೆಗೆ ನಡೆಯಲಿವೆ. ಈ ಸಮಯದಲ್ಲಿ ವಿದ್ಯಾರ್ಥಿಗಳು ಪರೀಕ್ಷಾ ಪ್ರವೇಶ ಪತ್ರವನ್ನು ತೋರಿಸಿ ಬಿಎಂಟಿಸಿ ಸಾಮಾನ್ಯ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. https://twitter.com/KarnatakaVarthe/status/1892518023392788601 https://kannadanewsnow.com/kannada/cm-siddaramaiah-arrives-at-vidhana-soudha-in-toyota-vellfire-car/ https://kannadanewsnow.com/kannada/meenakshi-negi-appointed-as-first-woman-chief-of-forest-force-by-state-government/
ಬೆಂಗಳೂರು: ರಾಜ್ಯ ಸರ್ಕಾರದಿಂದ ಅರಣ್ಯ ಪಡೆಗೆ ಪ್ರಥಮ ಮಹಿಳಾ ಮುಖ್ಯಸ್ಥೆಯಾಗಿ ಐಎಫ್ಎಸ್ ಅಧಿಕಾರಿ ಮೀನಾಕ್ಷಿ ನೇಗಿ ಅವರನ್ನು ನೇಮಕ ಮಾಡಿ ಆದೇಶಿಸಿದೆ. ಈ ಕುರಿತಂತೆ ರಾಜ್ಯ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದ್ದು, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪೋಸ್ಟಿಂಗ್ಗಾಗಿ ಕಾಯುತ್ತಿರುವ) ಮೀನಾಕ್ಷಿ ನೇಗಿ (ಕೆಎನ್: 1989) ಅವರನ್ನು ಕರ್ನಾಟಕದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ (ಅರಣ್ಯ ಪಡೆ ಮುಖ್ಯಸ್ಥರು) ತಕ್ಷಣದಿಂದ ಜಾರಿಗೆ ಬರುವಂತೆ 2,25,000 ರೂ.ಗಳ (ನಿಗದಿತ) ಅಪೆಕ್ಸ್ ಸ್ಕೇಲ್-ಲೆವೆಲ್ -17 ರಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ನೇಮಿಸಲಾಗಿದೆ ಎಂದಿದೆ. ಇನ್ನೂ ಮುಂದಿನ ಆದೇಶದವರೆಗೆ ಐಎಫ್ಎಸ್ ಸುಭಾಷ್ ಕೆ ಮಲ್ಖೇಡೆ ಅವರನ್ನು ಸಮವರ್ತಿ ಉಸ್ತುವಾರಿಯಿಂದ ಮುಕ್ತಗೊಳಿಸಲಾಗಿದೆ ಎಂಬುದಾಗಿ ತಿಳಿಸಿದೆ. https://kannadanewsnow.com/kannada/deputy-cm-dk-shivakumar-inaugurates-3-day-namma-road-2025-workshop-exhibition-conference/ https://kannadanewsnow.com/kannada/cm-siddaramaiah-arrives-at-vidhana-soudha-in-toyota-vellfire-car/ https://kannadanewsnow.com/kannada/breaking-producer-k-manjus-son-shreyas-escapes-unhurt-in-car-accident/
ಬೆಂಗಳೂರು: ಮೊಣಗಾಲಿನ ನೋವಿನಿಂದ ಬಳಲುತ್ತಿರುವಂತ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸರ್ಕಾರಿ ಫಾರ್ಚೂನರ್ ಕಾರು ತೊರೆದಿದ್ದಾರೆ. ಖಾಸಗಿ ಟೊಯೋಟಾ ವೆಲ್ ಪೈರ್ ಕಾರಿನಲ್ಲೇ ಓಡಾಡುತ್ತಿರುವುದಾಗಿ ಹೇಳಲಾಗುತ್ತಿತ್ತು. ಇಂದು ವಿಧಾನಸೌಧಕ್ಕೆ ಅದೇ ಕಾರಿನಲ್ಲಿ ಆಗಮಿಸಿ ಗಮನ ಸೆಳೆದರು. ಇಂದು ವಿಧಾನಸೌಧದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ಹಿನ್ನಲೆಯಲ್ಲಿ ಸಿಎಂ ಸಿದ್ಧರಾಮಯ್ಯ ಅವರು ಸರ್ಕಾರಿ ಫಾರ್ಚೂನರ್ ಕಾರು ಬಿಟ್ಟು, ಖಾಸಗಿ ಕಾರಿನಲ್ಲೇ ಆಗಮಿಸಿದರು. ಟೊಯೋಟಾ ವೆಲ್ ಫೈರ್ ಕಾರಿನಲ್ಲಿ ವಿಧಾನಸೌಧಕ್ಕೆ ಆಗಮಿಸಿದಂತ ಅವರು, ಕಾರಿನಿಂದ ಇಳಿದು ವೀಲ್ಹ್ ಚೇರಿನಲ್ಲೇ ವಿಧಾನಸೌಧದ ಸಂಪುಟ ಸಭಾ ಮಂದಿರಕ್ಕೆ ತೆರಳಿದರು. ಇದೇ ವೇಳೆಯಲ್ಲಿ ಮೂಡಾ ಹಗರಣದಲ್ಲಿ ಕ್ಲೀನ್ ಚಿಟ್ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ ಅದಕ್ಕೆ ಪ್ರತಿಕ್ರಿಯಿಸದೇ ಮುಂದೆ ಸಾಗಿದರು. https://kannadanewsnow.com/kannada/deputy-cm-dk-shivakumar-inaugurates-3-day-namma-road-2025-workshop-exhibition-conference/ https://kannadanewsnow.com/kannada/officer-suspended-for-transferring-rs-60-lakh-to-wifes-account/
ಬೆಂಗಳೂರು: ಬಿಬಿಎಂಪಿ ವತಿಯಿಂದ ಮೂರು ದಿನಗಳ “ನಮ್ಮ ರಸ್ತೆ-2025” ಕಾರ್ಯಗಾರ, ಪ್ರದರ್ಶನ ಹಾಗೂ ಸಮಾವೇಶ ಕಾರ್ಯಕ್ರಮಕ್ಕೆ ಸನ್ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಶ್ರಿ ಡಿ.ಕೆ ಶಿವಕುಮಾರ್ ರವರು ಚಾಲನೆ ನೀಡಿದರು. ನಮ್ಮ ರಸ್ತೆ-2025 ಫೆ. 20, 21 ಹಾಗೂ 22 ರಂದು ಕಾರ್ಯಕ್ರಮದಲ್ಲಿ ಕಾರ್ಯಗಾರಗಳು, ವಿವಿಧ ಸಂಚಾರ ಪದ್ಧತಿಗಳ ಪ್ರದರ್ಶನ ಹಾಗೂ ಸಮಾವೇಶಗಳು ನಡೆಯಲಿವೆ. ಒಂದೇ ಸೂರಿನಡಿ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ರಸ್ತೆ, ಪಾದಚಾರಿ ಮಾರ್ಗಗಳ ಅಭಿವೃದ್ಧಿ, ಸಂಚಾರ ದಟ್ಟಣೆ ನಿಯಂತ್ರಣದ ಕುರಿತು ಪರಿಹಾರಗಳನ್ನು ಕಂಡುಕೊಳ್ಳಲು ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ. “ನಮ್ಮ ರಸ್ತೆ 2025” ಸುಸ್ಥಿರ ನಗರ ವಿನ್ಯಾಸ ಸೃಷ್ಟಿಸುವಲ್ಲಿ ಬಹುಮುಖ್ಯ ಪಾತ್ರವಹಿಸಲಿರುವ ಸಮಗ್ರ ಬಹು ಮಾದರಿಯ ಸಾರಿಗೆ ವ್ಯವಸ್ಥೆಗಳ ಕುರಿತಾಗಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಮೋಟಾರು ರಹಿತ ಸಾರಿಗೆಗಳನ್ನೊಳಗೊಂಡಂತೆ ಭವಿಷ್ಯದ ಯೋಜನಾಬದ್ಧ ನಗರವನ್ನು ರೂಪಿಸುವಲ್ಲಿ ವಿಶ್ವಾಸಾರ್ಹ ಮಾಹಿತಿ ಹೇಗೆ ಸಹಾಯಕವಾಗಲಿದೆ ಎನ್ನುವುದನ್ನು ತಿಳಿಸಲಿದೆ. ನಗರದಲ್ಲಿ ವಿಸ್ತರಿಸುತ್ತಿರುವ ಮೆಟ್ರೋ, ಉಪ ನಗರ ರೈಲು ಮತ್ತು ಬಸ್ಸುಗಳ ಜಾಲಗಳು ಸಮಗ್ರ ಚಲನಶೀಲ…
ಬೆಂಗಳೂರು: ಮಹಿಳೆಯರ ಪ್ರೀಮಿಯರ್ ಲೀಗ್ (WPL) ಕ್ರಿಕೆಟ್ 2025 ಪ್ರಿಯರಿಗೆ ಗುಡ್ ನ್ಯೂಸ್ ಎನ್ನುವಂತೆ ಬೆಂಗಳೂರು ಪಂದ್ಯಗಳಿಗೆ ನಮ್ಮ ಮೆಟ್ರೋ ರೈಲು ಸೇವೆಗಳ ವಿಸ್ತರಣೆ ಮಾಡಲಾಗಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಬಿ ಎಂ ಆರ್ ಸಿ ಎಲ್ ಮಾಹಿತಿ ನೀಡಿದ್ದು, ಟಾಟಾ ಮಹಿಳಾ ಪ್ರೀಮಿಯರ್ ಲೀಗ್ (WPL) T-20 ಕ್ರಿಕೆಟ್ ಪಂದ್ಯಗಳು ಬೆಂಗಳೂರಿನಲ್ಲಿ ಫೆಬ್ರವರಿ 21, 22, 24, 25, 26, 27, 28 ಮತ್ತು ಮಾರ್ಚ್ 01, 2025 ರಂದು ನಡೆಯಲಿವೆ ಎಂದಿದೆ. ಕ್ರಿಕೆಟ್ ಪಂದ್ಯಗಳಿಗೆ ಪ್ರಯಾಣಿಸಲು ಮತ್ತು ಹಿಂತಿರುಗಲು ಅನುಕೂಲವಾಗುವಂತೆ, ಬಿ.ಎಂ.ಆರ್.ಸಿ.ಎಲ್ ಈ ಮೇಲೆ ತಿಳಿಸಿದ ದಿನಗಳಲ್ಲಿ ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಮೆಟ್ರೋ ರೈಲು ಸೇವೆಗಳನ್ನು ವಿಸ್ತರಿಸಲಾಗಿದೆ ಎಂದಿದೆ. ನೇರಳೆ ಮತ್ತು ಹಸಿರು ಮಾರ್ಗಗಲ್ಲಿನ ನಾಲ್ಕು ಟರ್ಮಿನಲ್ ಮೆಟ್ರೋ ನಿಲ್ದಾಣಗಳಾದ ಚಲ್ಲಘಟ್ಟ, ವೈಟ್‌ಫೀಲ್ಡ್, ಮಾದಾವರ ಮತ್ತು ರೇಷ್ಮೆ ಸಂಸ್ಥೆಯಿಂದ ಕೊನೆಯ ರೈಲು ಸೇವೆ ರಾತ್ರಿ 11.20 ರವರೆಗೆ ಮತ್ತು ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ ಎಲ್ಲಾ ನಾಲ್ಕು…
GOOD NEWS: ರಾಜ್ಯದ ಸಾರಿಗೆ ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್: ಎಲ್ಲಾ ಬಸ್ಸುಗಳಲ್ಲಿ ಸ್ಯಾನ್ ಮಾಡಿ, ಪೇ ಮಾಡಲು ಅವಕಾಶ
ಬೆಂಗಳೂರು: ರಾಜ್ಯದ ಸಾರಿಗೆ ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್ ಎನ್ನುವಂತೆ ಎಲ್ಲಾ ಬಸ್ಸುಗಳಲ್ಲಿ ಕ್ಯಾಶ್ ಲೆಸ್ ವ್ಯವಸ್ಥೆಯನ್ನು ಸರ್ಕಾರ ಜಾರಿಗೊಳಿಸಿದೆ. ಹೀಗಾಗಿ ಪ್ರಯಾಣಿಕರು ಟಿಕೆಟ್ ಖರೀದಿಸಿದಂತ ಹಣವನ್ನು ಸ್ಕ್ಯಾನ್ ಮಾಡಿ, ಪೇ ಮಾಡಬಹುದಾಗಿದೆ. ಈ ಬಗ್ಗೆ ಸಿಎಂ ಸಿದ್ಧರಾಮಯ್ಯ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದು, ಕನ್ನಡಿಗರ ಸಂಚಾರನಾಡಿಯಾಗಿರುವ ಸಾರಿಗೆ ಬಸ್‌ಗಳಲ್ಲಿ ಡಿಜಿಟಲ್ ಯುಗ ಆರಂಭಗೊಂಡಿದೆ ಎಂದಿದ್ದಾರೆ. ರಾಜ್ಯದ ಸಾರಿಗೆ ಬಸ್‌ಗಳಲ್ಲಿ ಪ್ರಯಾಣ ಮಾಡುವ ಸಂದರ್ಭದಲ್ಲಿ ಪ್ರಯಾಣಿಕರಿಗೆ ಎದುರಾಗುತ್ತಿದ್ದ ಚಿಲ್ಲರೆ ಸಮಸ್ಯೆಗೆ ರಾಜ್ಯ ಸರ್ಕಾರ ಮುಕ್ತಿ ಹಾಡಿದ್ದು, ನಿಮ್ಮ ಪ್ರಯಾಣವನ್ನು ಇನ್ನಷ್ಟು ಸುಲಭ ಮತ್ತು ಸುಖಕರವಾಗಿರಿಸಲು ಕ್ಯಾಶ್‌ಲೆಸ್ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ ಎಂಬುದಾಗಿ ತಿಳಿಸಿದ್ದಾರೆ. ನೀವು ಗೂಗಲ್‌ಪೇ, ಫೋನ್ ಪೇ ಅಥವಾ ಇತರೆ ಯಾವುದೇ ಯುಪಿಐ ಆ್ಯಪ್ ಬಳಕೆ ಮಾಡುತ್ತಿದ್ದಲ್ಲಿ ಕ್ಯಾಷ್‌ನ ಚಿಂತೆ ಮರೆತು ನಿಶ್ಚಿಂತರಾಗಿ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸಬಹುದು ಎಂದು ಹೇಳಿದ್ದಾರೆ. https://twitter.com/siddaramaiah/status/1892170413297533129 https://kannadanewsnow.com/kannada/pakistans-opener-fakhar-zaman-ruled-out-of-champions-trophy-2025-reports/ https://kannadanewsnow.com/kannada/rs-315-crore-investment-in-vemagal-in-kolar-550-jobs-created-m-b-patil/
ಚಿಕ್ಕಬಳ್ಳಾಪುರ: ರಾಜ್ಯದಲ್ಲೊಂದು ವಿಚಿತ್ರ ಘಟನೆ ಎನ್ನುವಂತೆ ದೇವರ ಹುಂಡಿಯ ಖಾತೆಯಲ್ಲಿದ್ದಂತ 60 ಲಕ್ಷ ಹಣವನ್ನೇ ಸರ್ಕಾರಿ ಅಧಿಕಾರಿಯೊಬ್ಬ ತನ್ನ ಪತ್ನಿಯ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ಇಂತಹ ಅಧಿಕಾರಿಯನ್ನು ಸರ್ಕಾರ ಅಮಾನತುಗೊಳಿಸಿದೆ. ದೊಡ್ಡಬಳ್ಳಾಪುರದ ಸಾಸಲು ಹೋಬಳಿಯ ರೆವೆನ್ಯೂ ಇನ್ಸ್ ಪೆಕ್ಟರ್ ಹೇಮಂತ್ ಕುಮಾರ್ ಎಂಬುವರೇ ಈ ರೀತಿಯ ಕೃತ್ಯವೆಸಗಿರುವಂತ ಸರ್ಕಾರಿ ಅಧಿಕಾರಿಯಾಗಿದ್ದಾರೆ. ಸಾಸಲು ಹೋಬಳಿಗೆ ಬರುವ ಮೊದಲು ಹೇಮಂತ್ ಕುಮಾರ್ ಮುಜರಾಯಿ ಇಲಾಖೆಯ ಕೇಸ್ ವರ್ಕರ್ ಆಗಿ ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲೇ ಸುಮಾರು 60 ಲಕ್ಷ ದೇವಸ್ಥಾನದ ಹುಂಡಿಯ ಹಣವನ್ನೇ ಪತ್ನಿ ಖಾತೆಗೆ ವರ್ಗಾವಣೆ ಮಾಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. 2023ರಿಂದ ಈವರೆಗೆ ಇಬ್ಬರು ತಹಶೀಲ್ದಾರ್, ಓರ್ವ ಕೇಸ್ ವರ್ಕರ್ ಸಹಿ ಹಾಗೂ ಸೀಲ್ ಪೋರ್ಜರಿ ಮಾಡಿ ಹೇಮಂತ್ ಕುಮಾರ್, 60 ಲಕ್ಷ ಹಣವನ್ನು ಹಲವು ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ರೆವೆನ್ಯೂ ಇನ್ಸ್ ಪೆಕ್ಟರ್ ಆಗಿ ವರ್ಗಾವಣೆಗೊಂಡರೂ ಮುಜರಾಯಿ ಇಲಾಖೆಯ ಚೆಕ್ ಬುಕ್ ವಾಪಾಸ್ ನೀಡದೇ, ಅದರಿಂದಲೂ ಹಣ ಡ್ರಾ ಮಾಡಿಕೊಂಡ ಆರೋಪ…
ಶಿವಮೊಗ್ಗ : ಕರ್ನಾಟಕ ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ಯುವನಿಧಿ ಗೆ 2022-23 ರಲ್ಲಿ ಹಾಗೂ ನಂತರದ ಸಾಲಿನಲ್ಲಿ ಸ್ನಾತಕ ಪದವಿ/ ಸ್ನಾತಕೋತ್ತರ ಪದವಿ ಮತ್ತು ಡಿಪ್ಲೊಮಾ ತೇರ್ಗಡೆಯಾಗಿ ಉದ್ಯೋಗ ಸಿಗದೆ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯದೆ ಇರುವವರಿಗೆ ಫೆ. 24 ರಂದು ನಗರದ ಎ.ಟಿ.ಎನ್.ಸಿ. ಕಾಲೇಜು, ಮಹಾವೀರ ವೃತ್ತ ಇಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದ್ದು, ಈ ಮೇಳದಲ್ಲಿ ಯುವನಿಧಿ ಯೋಜನೆಯ ವಿಶೇಷ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಆಸಕ್ತರು ಈ ಸದಾವಕಾಶವನ್ನು ಉಪಯೋಗಿಸಿಕೊಂಡು ಪ್ರಯೋಜನ ಪಡೆದುಕೊಳ್ಳುವಂತೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಖಲಂದರ್ ಖಾನ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ದೂ.ಸಂ.: 08182-255293/ 9680663606 ಗಳನ್ನು ಸಂಪರ್ಕಿಸುವುದು. https://kannadanewsnow.com/kannada/rs-315-crore-investment-in-vemagal-in-kolar-550-jobs-created-m-b-patil/ https://kannadanewsnow.com/kannada/pakistans-opener-fakhar-zaman-ruled-out-of-champions-trophy-2025-reports/














