Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಆರ್ಭಟಿಸುತ್ತಿದೆ. ಈ ಹೊತ್ತಿನಲ್ಲೇ ಆರೋಗ್ಯ ಇಲಾಖೆಯಿಂದ ನಿಯಂತ್ರಣ ಕ್ರಮ, ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಆದೇಶ ಹೊರಡಿಸಲಾಗಿದೆ. ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಬಿಡುಗಡೆ ಮಾಡಲಾಗಿದೆ. ಡೆಂಗ್ಯೂ ಜ್ವರವು ವೈರಲ್ ಸೋಂಕುಗಳಲ್ಲಿ ಒಂದಾಗಿದೆ. ಡೆಂಗ್ಯೂ, ಸೊಳ್ಳೆಯಿಂದ ಹರಡುವ ಕಾಯಿಲೆಯಾಗಿದ್ದು, ಹಗಲು ಹೊತ್ತಿನಲ್ಲಿ ಕಚ್ಚುವ ಈಡಿಸ್ ಜಾತಿಯ ಸೊಳ್ಳೆಗಳಿಂದ ಡೆಂಗಿ ಜ್ವರವು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿಸಿದೆ. ರೋಗಲಕ್ಷಣಗಳು ಸೊಳ್ಳೆ ಕಚ್ಚಿದ ನಾಲ್ಕರಿಂದ ಹತ್ತು ದಿನಗಳ ಒಳಗೆ ರೋಗ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಡೆಂಗ್ಯೂ ಜ್ವರ ಇದ್ದರೆ ವಿಪರೀತವಾಗಿ ದೇಹದ ತಾಪಮಾನ ಹೆಚ್ಚಾಗುತ್ತದೆ. ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುವ ತೀವ್ರ ಜ್ವರ, ಕಣ್ಣಿನ ಗುಡ್ಡೆಯ ಹಿಂಭಾಗದಲ್ಲಿ ನೋವು, ತಲೆ ನೋವು , ಮೈ-ಕೈ ನೋವು , ಇವು ಡೆಂಗಿ ಜ್ವರದ ಸಾಮಾನ್ಯ ಲಕ್ಷಣಗಳಾಗಿವೆ. ಡೆಂಗಿ ಜ್ವರಕ್ಕೆ ನಿರ್ದಿಷ್ಟ ಚಿಕಿತ್ಸೆ ಹಾಗೂ ಲಸಿಕೆ ಇಲ್ಲದಿರುವುದಿಂದ, ರೋಗ ಲಕ್ಷಣಗಳಿಗೆ ಅನುಸಾರವಾಗಿ ಚಿಕಿತ್ಸೆ ನೀಡಲಾಗುವುದು. ಪ್ರಸ್ತುತ, 2024ನೇ ಸಾಲಿನಲ್ಲಿ ದಿನಾಂಕ: 13.5.2024ರವರೆಗೆ ರಾಜ್ಯದಲ್ಲಿ…
ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋ ಪ್ರಕರಣ ಸಂಬಂಧ ಇಂದು ಎಸ್ಐಟಿ ಅಧಿಕಾರಿಗಳಿಂದ ಬಿಜೆಪಿ, ಜೆಡಿಎಸ್ ಮುಖಂಡರಿಗೆ ಬಿಗ್ ಶಾಕ್ ನೀಡಲಾಗಿದೆ. ಹಾಸನದಲ್ಲಿ ಪ್ರೀತಂ ಗೌಡ ಆಪ್ತರ ಬಾರ್, ಹೋಟೆಲ್ ಮೇಲೆ ದಾಳಿ ನಡೆಸಿದ್ರೇ, ವಕೀಲ ದೇವರಾಜೇಗೌಡ ಅವರ ನಿವಾಸದ ಮೇಲೂ ದಾಳಿ ನಡೆಸಿ, ಶಾಕ್ ಮೇಲೆ ಶಾಕ್ ನೀಡಿದ್ದಾರೆ. ಹಾಸನದ ರವೀಂದ್ರನಗರದಲ್ಲಿರುವಂತ ವಕೀಲ ದೇವರಾಜೇಗೌಡ ಅವರ ನಿವಾಸದ ಮೇಲೆ ಎಸ್ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹಾಸನದ ರವೀಂದ್ರನಗರದಲ್ಲಿರುವಂತ ವಕೀಲ ದೇವರಾಜೇಗೌಡ ಅವರ ನಿವಾಸದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ಪ್ರಕರಣ ಸಂಬಂಧ ಪರಿಶೀಲನೆಯನ್ನು ನಡೆಸುತ್ತಿದ್ದಾರೆ. ಅಂದಹಾಗೇ ಹಾಸನ ಪೆನ್ ಡ್ರೈವ್ ಪ್ರಕರಣಕ್ಕೆ ಮೊದಲು ಟ್ವಿಸ್ಟ್ ಸಿಕ್ಕಿದೇ ವಕೀಲ ದೇವರಾಜೇಗೌಡ ಅವರಿಂದ ಆಗಿದೆ. ನನ್ನ ಬಳಿ ಇದ್ದಂತ ಪೆನ್ ಡ್ರೈವ್ ಅನ್ನು ವಕೀಲ ದೇವರಾಜೇಗೌಡ ಅವರಿಗೆ ನೀಡಲಾಗಿತ್ತು ಎಂಬುದಾಗಿ ಪ್ರಜ್ವಲ್ ಮಾಜಿ ಕಾರು ಚಾಲಕ ಕಾರ್ತಿಕ್ ಹೇಳಿದ್ದರು. ಈ ಪ್ರಕರಣದ ನಂತ್ರ ವಕೀಲ ದೇವರಾಜೇಗೌಡ ಅವರ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ…
ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣ ಹಾಗೂ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ವಕೀಲ ದೇವರಾಜೇಗೌಡ ಅವರು ಜೈಲುಪಾಲಾಗಿದ್ದಾರೆ. ಈ ಬೆನ್ನಲ್ಲೇ ಅವರ ನಿವಾಸದ ಮೇಲೆ ಎಸ್ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹಾಸನದ ರವೀಂದ್ರನಗರದಲ್ಲಿರುವಂತ ವಕೀಲ ದೇವರಾಜೇಗೌಡ ಅವರ ನಿವಾಸದ ಮೇಲೆ ಎಸ್ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹಾಸನದ ರವೀಂದ್ರನಗರದಲ್ಲಿರುವಂತ ವಕೀಲ ದೇವರಾಜೇಗೌಡ ಅವರ ನಿವಾಸದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ಪ್ರಕರಣ ಸಂಬಂಧ ಪರಿಶೀಲನೆಯನ್ನು ನಡೆಸುತ್ತಿದ್ದಾರೆ. ಅಂದಹಾಗೇ ಹಾಸನ ಪೆನ್ ಡ್ರೈವ್ ಪ್ರಕರಣಕ್ಕೆ ಮೊದಲು ಟ್ವಿಸ್ಟ್ ಸಿಕ್ಕಿದೇ ವಕೀಲ ದೇವರಾಜೇಗೌಡ ಅವರಿಂದ ಆಗಿದೆ. ನನ್ನ ಬಳಿ ಇದ್ದಂತ ಪೆನ್ ಡ್ರೈವ್ ಅನ್ನು ವಕೀಲ ದೇವರಾಜೇಗೌಡ ಅವರಿಗೆ ನೀಡಲಾಗಿತ್ತು ಎಂಬುದಾಗಿ ಪ್ರಜ್ವಲ್ ಮಾಜಿ ಕಾರು ಚಾಲಕ ಕಾರ್ತಿಕ್ ಹೇಳಿದ್ದರು. ಈ ಪ್ರಕರಣದ ನಂತ್ರ ವಕೀಲ ದೇವರಾಜೇಗೌಡ ಅವರ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ಕಿರುಕುಳ ನೀಡಿದಂತ ಆರೋಪದಲ್ಲಿ ದೂರು ನೀಡಿದ್ದರು. ಈ ದೂರು ಸಂಬಂಧ ಅವರನ್ನು ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದರು. ಈಗ…
ನವದೆಹಲಿ: ತನ್ನ ಕೋಟ್ಯಂತರ ಚಂದಾದಾರರಿಗೆ ಉಡುಗೊರೆ ನೀಡುವ ಇಪಿಎಫ್ಒ ಶಿಕ್ಷಣ, ಮದುವೆ ಮತ್ತು ಮನೆ ಖರೀದಿಸಲು ಮುಂಗಡ ಕ್ಲೈಮ್ಗಳಿಗಾಗಿ ಆಟೋ-ಮೋಡ್ ಇತ್ಯರ್ಥ ಪ್ರಕ್ರಿಯೆಯನ್ನು ಪರಿಚಯಿಸಿದೆ. ಇಪಿಎಫ್ಒ ಸ್ವಯಂ ಕ್ಲೈಮ್ ಪರಿಹಾರವನ್ನು ಪ್ರಾರಂಭಿಸಿದೆ. ಇದರಲ್ಲಿ ಈಗ ಯಾವುದೇ ಮಾನವ ಹಸ್ತಕ್ಷೇಪವಿಲ್ಲದೆ ಐಟಿ ವ್ಯವಸ್ಥೆಯ ಮೂಲಕ ಕ್ಲೈಮ್ ಅನ್ನು ಸ್ವಯಂಚಾಲಿತವಾಗಿ ಇತ್ಯರ್ಥಪಡಿಸಲಾಗುತ್ತದೆ. ಈ ಹಿಂದೆ, ರೋಗದ ಚಿಕಿತ್ಸೆಗಾಗಿ ಮುಂಗಡ ಕ್ಲೈಮ್ ವ್ಯವಸ್ಥೆಯನ್ನು ಏಪ್ರಿಲ್ 2020 ರಲ್ಲಿ ಆಟೋ ಮೋಡ್ ಸೆಟಲ್ಮೆಂಟ್ ಮೂಲಕ ಪರಿಚಯಿಸಲಾಯಿತು. ಆಟೋ ಕ್ಲೈಮ್ ಸೌಲಭ್ಯ ಪ್ರಾರಂಭ 2023-24ರ ಹಣಕಾಸು ವರ್ಷದಲ್ಲಿ ಒಟ್ಟು 2.84 ಕೋಟಿ ಮುಂಗಡ ಕ್ಲೇಮ್ಗಳನ್ನು ಇತ್ಯರ್ಥಪಡಿಸಲಾಗಿದ್ದು, ಅದರಲ್ಲಿ 89.52 ಲಕ್ಷ ಕ್ಲೈಮ್ಗಳನ್ನು ಆಟೋ ಮೋಡ್ ಮೂಲಕ ಇತ್ಯರ್ಥಪಡಿಸಲಾಗಿದೆ. ಇಪಿಎಫ್ ಯೋಜನೆ 1952 ರ ಅಡಿಯಲ್ಲಿ ಪ್ಯಾರಾ 68 ಕೆ (ಅಧ್ಯಯನ ಮತ್ತು ಮದುವೆಗಾಗಿ), 68 ಜೆ (ಅನಾರೋಗ್ಯಕ್ಕಾಗಿ) ಮತ್ತು 68 ಬಿ (ವಸತಿ) ಗೆ ಈಸ್ ಆಫ್ ಲಿವಿಂಗ್ ಅಡಿಯಲ್ಲಿ ಆಟೋ ಕ್ಲೈಮ್ ಸೌಲಭ್ಯವನ್ನು ವಿಸ್ತರಿಸಲಾಗಿದೆ. ಇದರೊಂದಿಗೆ, ಇಪಿಎಫ್ಒ ಆಟೋ…
ಬೆಂಗಳೂರು: ಮಹಿಳೆ ಅಪಹರಣ ಪ್ರಕರಣದಲ್ಲಿ ಜೈಲು ಪಾಲಾಗಿದ್ದಂತ ಮಾಜಿ ಸಚಿವ ಹೆಚ್.ಡಿ ರೇವಣ್ಣ, ಜಾಮೀನು ಬಳಿಕ ಇಂದು ಬಿಡುಗಡೆಯಾಗಿದ್ದರು. ಆ ಬಳಿಕ ಟೆಂಪಲ್ ರನ್ನ ಕೂಡ ಮಾಡುತ್ತಿದ್ದಾರೆ. ಈ ವೇಳೆಯಲ್ಲಿ ಮೊದಲ ಪ್ರತಿಕ್ರಿಯೆ ಏನು ನೀಡಿದ್ರು ಅಂತ ಮುಂದೆ ಓದಿ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಹೊರ ಬರುತ್ತಿದ್ದಂತೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರನ್ನು ಪದ್ಮನಾಭ ನಗರದ ನಿವಾಸದಲ್ಲಿ ಭೇಟಿಯಾದರು. ಆ ಬಳಿಕ, ಅಲ್ಲಿನ ದೇವರ ಕೋಣೆಗೆ ತೆರಳಿ ಪೂಜೆ ಕೂಡ ನೆರವೇರಿಸಿದ್ದಾರೆ. ಅಲ್ಲಿಂದ ಬೆಂಗಳೂರಿನ ಜೆಪಿ ನಗರದಲ್ಲಿ ಇರುವಂತ ತಿರುಮಲ ಲಕ್ಷ್ಮೀ ವೆಂಕಟೇಶ್ವರ ದೇವಾಲಯಕ್ಕೆ ತೆರಳಿದಂತ ಅವರು, ವಿಶೇಷ ಪೂಜೆಯನ್ನು ಸಲ್ಲಿಸಿದರು. ಜೊತೆಗೆ ಕುಂಬಳಕಾಯಿ, ಈಡುಗಾಯಿ ಹೊಡೆದು ದೃಷ್ಠಿ ತೆಗೆಸಿ, ಒಬ್ಬರೇ ಪೂಜೆ ಮಾಡಿದ್ರು. ಅಲ್ಲಿಂದ ಬಸವನಗುಡಿಯಲ್ಲಿರುವಂತ ಕಾರಂಜಿ ಆಂಜನೇಯ ದೇವಸ್ಥಾನಕ್ಕೆ ತೆರಳಿದಂತ ಅವರು, ಅಲ್ಲಿಯೂ ವಿಶೇಷ ಪೂಜೆ ಸಲ್ಲಿಸಿದರು. ಇಲ್ಲಿಂದ ನೇರವಾಗಿ ಬೆಂಗಳೂರಿನ ನಿವಾಸಕ್ಕೆ ತೆರಳಿದಂತ ಅವರು, ಸಂಪ್ರದಾಯದಂತೆ ಮನೆ ಒಳಗೆ ಹೋಗಿ, ಕೆಲ ಕಾಲವಿದ್ದು, ಹೊರ…
ಬೆಂಗಳೂರು: ಮಹಿಳೆ ಅಪಹರಣ ಪ್ರಕರಣದಲ್ಲಿ ಜೈಲು ಪಾಲಾಗಿದ್ದಂತ ಮಾಜಿ ಸಚಿವ ಹೆಚ್.ಡಿ ರೇವಣ್ಣಗೆ ನಿನ್ನೆ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯವು ಜಾಮೀನು ನೀಡಿತ್ತು. ಇಂದು ಜೈಲಿನಿಂದ ರಿಲೀಸ್ ಆದ ಬೆನ್ನಲ್ಲೇ ಹೆಚ್.ಡಿ ರೇವಣ್ಣ ಟೆಂಪಲ್ ರನ್ ನಲ್ಲಿ ತೊಡಗಿದ್ದಾರೆ. ಹೌದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಹೊರ ಬರುತ್ತಿದ್ದಂತೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರನ್ನು ಪದ್ಮನಾಭ ನಗರದ ನಿವಾಸದಲ್ಲಿ ಭೇಟಿಯಾದರು. ಆ ಬಳಿಕ, ಅಲ್ಲಿನ ದೇವರ ಕೋಣೆಗೆ ತೆರಳಿ ಪೂಜೆ ಕೂಡ ನೆರವೇರಿಸಿದ್ದಾರೆ. ಅಲ್ಲಿಂದ ಬೆಂಗಳೂರಿನ ಜೆಪಿ ನಗರದಲ್ಲಿ ಇರುವಂತ ತಿರುಮಲ ಲಕ್ಷ್ಮೀ ವೆಂಕಟೇಶ್ವರ ದೇವಾಲಯಕ್ಕೆ ತೆರಳಿದಂತ ಅವರು, ವಿಶೇಷ ಪೂಜೆಯನ್ನು ಸಲ್ಲಿಸಿದರು. ಜೊತೆಗೆ ಕುಂಬಳಕಾಯಿ, ಈಡುಗಾಯಿ ಹೊಡೆದು ದೃಷ್ಠಿ ತೆಗೆಸಿ, ಒಬ್ಬರೇ ಪೂಜೆ ಮಾಡಿದ್ರು. ಅಲ್ಲಿಂದ ಬಸವನಗುಡಿಯಲ್ಲಿರುವಂತ ಕಾರಂಜಿ ಆಂಜನೇಯ ದೇವಸ್ಥಾನಕ್ಕೆ ತೆರಳಿದಂತ ಅವರು, ಅಲ್ಲಿಯೂ ವಿಶೇಷ ಪೂಜೆ ಸಲ್ಲಿಸಿದರು. ಇಲ್ಲಿಂದ ನೇರವಾಗಿ ಬೆಂಗಳೂರಿನ ನಿವಾಸಕ್ಕೆ ತೆರಳಿದಂತ ಅವರು, ಸಂಪ್ರದಾಯದಂತೆ ಮನೆ ಒಳಗೆ ಹೋಗಿ, ಕೆಲ ಕಾಲವಿದ್ದು, ಹೊರ ಬಂದರು.…
ಬೆಂಗಳೂರು: ಮಹಿಳೆ ಅಪಹರಣ ಪ್ರಕರಣದಲ್ಲಿ ಜೈಲು ಸೇರಿದ್ದಂತ ಮಾಜಿ ಸಚಿವ ಹೆಚ್.ಡಿ ರೇವಣ್ಣ ಇಂದು ಜೈಲಿನಿಂದ ಬಿಡುಗಡೆಯಾದರು. ಅಲ್ಲದೇ ತಂದೆ ನಿವಾಸಕ್ಕೆ ತೆರಳಿ ಆಶೀರ್ವಾದ ಪಡೆದರು. ಅಲ್ಲಿ ನೆರೆದಿದ್ದಂತ ಜೆಡಿಎಸ್ ಕಾರ್ಯಕರ್ತರನ್ನು ಕಂಡಂತ ಅವರು ಗಳಗಳನೇ ಕಣ್ಣೀರಿಟ್ಟ ಘಟನೆಯೂ ನಡೆದಿದೆ. ಮಾಜಿ ಪ್ರಧಾನಿ ದೇವೇಗೌಡ ಅವರ ನಿವಾಸಕ್ಕೆ ಜೆಡಿಎಸ್ ಶಾಸಕ ಹೆಚ್.ಡಿ ರೇವಣ್ಣ ಭೇಟಿ ನೀಡಿದರು. ಆ ನಂತ್ರ ಮನೆಯಿಂದ ಹೊರ ಬಂದಾಗ ದೇವೇಗೌಡರ ನಿವಾಸದ ಎಂದುರು ನೆರೆದಿದ್ದಂತ ಕಾರ್ಯಕರ್ತರನ್ನು ಕಂಡು ಕಣ್ಣೀರಿಟ್ಟರು. ಹೆಚ್.ಡಿ ರೇವಣ್ಣ ಕಣ್ಣೀರು ಹಾಕೋದನ್ನು ಕಂಡಂತ ಜೆಡಿಎಸ್ ಕಾರ್ಯಕರ್ತರು, ನೀವು ಅಳಬೇಡಿ ಕಣಣ್ಣ ಎಂಬುದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಕಿಡಿಕಾರಿದರು. ಈ ವೇಳೆ ರೇವಣ್ಣ ಹಾಗೆಲ್ಲ ಮಾತಾಡಬಾರದು ಅಂದಾಗ, ಯಾಕಣ್ಣ ಮಾತಾಡಬಾರದು ಎಂಬುದಾಗಿ ಕಾರ್ಯಕರ್ತರು ರೊಚ್ಚಿಗೆದ್ದರು ಎನ್ನಲಾಗುತ್ತಿದೆ. ಜೆಡಿಎಸ್ ಕಾರ್ಯಕರ್ತರನ್ನು ಸಮಾಧಾನಿಸಿದಂತ ಹೆಚ್.ಡಿ ರೇವಣ್ಣ, ಕೆಲ ಕಾರ್ಯಕರ್ತರು ಜೊತೆಗೆ ಮಾತನಾಡಿದಾಗ, ಅವರು ಕಣ್ಣೀರು ಹಾಕಿದ್ರು ಎನ್ನಲಾಗುತ್ತಿದೆ. ಆ ಬಳಿಕ ಅಲ್ಲಿಂದ ಟೆಂಪಲ್ ರನ್ ಗೆ ಮಾಜಿ…
ತುಮಕೂರು: ಜಿಲ್ಲೆಯ ಶಿರಾ ತಾಲೂಕಿನ ಪ್ರಸಿದ್ಧ ಶಿಕ್ಷಣ ಸಂಸ್ಥೆಯೊಂದರಲ್ಲಿ ಕೆಲಸ ಮಾಡಲು, ಶಿಕ್ಷಕರ ಹುದ್ದೆಗೆ ( Teacher Jobs ) ಹಾಗೂ ಅಡುಗೆ ಸಹಾಯಕರ ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಕುರಿತಂತೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಬರಗೂರಿನಲ್ಲಿರುವಂತ ದಿ ಪ್ಲೋರೆನ್ಸ್ ಪಬ್ಲಿಕ್ ಶಾಲೆ ( The Florence Public School – CBSE ಶಾಲೆ) ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಪ್ರೌಢ ಶಾಲಾ ವಿಭಾಗದಲ್ಲಿ ಖಾಲಿ ಇರುವಂತ ಈ ಕೆಳಕಂಡ ಹುದ್ದೆಗಳಿಗೆ ಕೂಡಲೇ ಶಿಕ್ಷಕರು ಅರ್ಜಿ ( Teacher Recuritment Application ) ಸಲ್ಲಿಸುವಂತೆ ತಿಳಿಸಿದೆ. ಹುದ್ದೆಯ ವಿವರ ಗಣಿತ ಶಿಕ್ಷಕರು – ಬಿಎಸ್ಸಿ, ಬಿಎಡ್ ಅಥವಾ ಎಂ.ಎಸ್ಸಿ ಬಿಎಡ್ ಅನುಭವಿ ಅಡುಗೆ ಸಹಾಯಕರ ಹುದ್ದೆ ಅರ್ಜಿ ಆಹ್ವಾನ ಊಟ ಮತ್ತು ವಸತಿ ಸೌಲಭ್ಯವಿದೆ ದಿ ಪ್ಲೋರೆನ್ಸ್ ಪಬ್ಲಿಕ್ ಶಾಲೆಯಲ್ಲಿ (The Florence Public School )ಕರ್ತವ್ಯ ನಿರ್ವಹಿಸುವಂತ ಶಿಕ್ಷಕರಿಗೆ, ಶಾಲೆಯ ಕ್ಯಾಂಪಸ್ ನಲ್ಲಿಯೇ ಊಟ ಹಾಗೂ ವಸತಿ ವ್ಯವಸ್ಥೆಯನ್ನು…
ಬೆಂಗಳೂರು: ಕೆಂಪೇಗೌಡ ರಸ್ತೆಯಲ್ಲಿ ದಿನೇ ದಿನೇ ವಾಹನಗಳ ಅತಿಯಾದ ವೇಗದಿಂದಾಗಿ ಅಪಘಾತಗಳು ಹೆಚ್ಚಾಗುತ್ತಿವೆ. ಈ ಅಪಘಾತವನ್ನು ತಡೆಗಟ್ಟುವ ನಿಟ್ಟಿನಲ್ಲಿ ಈಗ ಪೊಲೀಸ್ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ. ಅದೇ ಅತಿ ವೇಗವಾಗಿ ಚಾಲನೆ ಮಾಡೋ ವಾಹನಗಳ ಮೇಲೆ ನಿಗಾ ವಹಿಸಲಾಗಿದೆ. ಜೊತೆಗೆ ನಿಗದಿತ ಮತಿಗಿಂತ ಹೆಚ್ಚಿನ ವೇಗದಲ್ಲಿ ಸಂಚರಿಸಿದ್ರೇ ಕೇಸ್ ಹಾಕೋದು ಫಿಕ್ಸ್ ಆಗಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಬೆಂಗಳೂರು ನಗರ ಸಂಚಾರ ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ. ಅದರಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, ಅದರಲ್ಲೂ ಮುಖ್ಯವಾಗಿ ಚಾಲಕರು/ವಾಹನ ಸವಾರರ ಅತಿವೇಗದ ಚಾಲನೆ ಈ ಅಪಘಾತಗಳು ಉಂಟಾಗುವಲ್ಲಿ ಅತ್ಯಂತ ಪುಮುಖವಾದ ಪಾತ್ರ ವಹಿಸುತ್ತಿರುವುದನ್ನು ಗಮನಿಸಿಸಲಾಗಿದೆ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿಮಾನ ನಿಲ್ದಾಣ ರಸ್ತೆಯಲ್ಲಿ ಅತಿವೇಗದ ಚಾಲನೆಯನ್ನು ಪತ್ತೆ ಹಚ್ಚುವ ಕ್ಯಾಮೆರಾಗಳನ್ನು ಅಳವಡಿಸಿದ್ದು, ಸದರಿ ಕ್ಯಾಮೆರಾಗಳು ಸ್ವಯಂ ಚಾಲಿತವಾಗಿ ಅತಿವೇಗದ ಚಾಲನೆಯನ್ನು ಕಂಡು ಹಿಡಿಯುವ ಸಾಮರ್ಥ್ಯವನ್ನು ಹೊಂದಿದ್ದು,…
ಕೋಲಾರ: ಸಂಸಾರ ನಡೆಸೋದಕ್ಕಾಗಿ ಮಾಡಿದಂತ ಸಾಲ ತೀರಿಸಲು ತನ್ನ ಗಂಡು ಮಗುವನ್ನೇ ಹಣಕ್ಕಾಗಿ ಮಾರಾಟ ಮಾಡಿದಂತ ಅಮಾನವೀಯ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರದ ಬಂಗಾರಪೇಟೆ ನಗರದ ನಿವಾಸಿಗಳಾದಂತ ಮುನಿರಾಜು ಹಾಗೂ ಪವಿತ್ರ ದಂಪತಿಗೆ ಮೂರು ತಿಂಗಳ ಮಗು ಇತ್ತು. ಪತಿ ಮುನಿರಾಜು ಸಿಕ್ಕಾಪಟ್ಟೆ ಸಾಲ ಮಾಡಿದ್ದನಂತೆ. ಈ ಸಾಲವನ್ನು ತೀರಿಸೋದಕ್ಕಾಗಿ ತಮ್ಮ ಮೂರು ತಿಂಗಳ ಮಗುವನ್ನೇ ಬಂಗಾರಪೇಟೆಯ ಕೆರೆಕೋಡಿ ನಿವಾಸದ ವಲ್ಲಿ ಎನ್ನುವ ಮಹಿಳೆ ಮೂಲಕ ಮಾರಾಟ ಮಾಡಿರುವ ಆರೋಪ ಕೇಳಿ ಬಂದಿದೆ. ಸಾಲಕ್ಕಾಗಿ ಮಗುವನ್ನು ಮಾರಾಟ ಮಾಡಿದಂತ ಪತಿಯ ವಿರುದ್ಧ ಪತ್ನಿ ಸಿಡಿದೆದ್ದಿದ್ದಾಳೆ. ತನ್ನ ಮಗು ಬೇಕು. ಪತಿ ಹಣಕ್ಕಾಗಿ ಮಾರಾಟ ಮಾಡಿದ್ದಾರೆ. ಕೊಡಿಸಿ ಅಂತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಆಯೋಗ ಹಾಗೂ ಬಂಗಾರಪೇಟೆ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನಲ್ಲಿ ಪತಿ ಮುನಿರಾಜು ಹಾಗೂ ವಲ್ಲಿ ತಮ್ಮ ಮಗುವನ್ನು ಅಪಹರಿಸಿರೋದಾಗಿ ಆರೋಪಿಸಿದ್ದಾರೆ. https://kannadanewsnow.com/kannada/bagalkot-father-kills-son-with-axe-over-petty-issue/ https://kannadanewsnow.com/kannada/morarji-desai-science-pu-college-invites-applications-for-admission/