ದಕ್ಷಿಣ ಕನ್ನಡ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಯುವಕನೊಬ್ಬನ ಮೇಲೆ ಹಲ್ಲೆ ನಡೆದಿದ್ದ ವೀಡಿಯೋ ವೈರಲ್ ಆಗಿತ್ತು. ಇದಕ್ಕೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದಾಗಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ್ ಸ್ಪಷ್ಟ ಪಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟನೆ ನೀಡಿರುವಂತ ಅವರು, ಪವಿತ್ರ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕೊಠಡಿ ನೋಡಿ ಬಾಡಿಗೆಗೆ ಪಡೆಯದಿದ್ದಕ್ಕೆ ಯಾತ್ರಿಕನ ಮೇಲೆ ಅಮಾನವೀಯ ಹಲ್ಲೆ ಎಂದು ತಪ್ಪಾಗಿ ವರದಿಯಾಗಿದೆ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.
ಪ್ರಕರಣದ ವಿವರವು ದಿನಾಂಕ:10.06.2025 ರಂದು, ಒಬ್ಬ ಯುವಕನು ತನ್ನ ಮೊಬೈಲ್ ವಾಟ್ಸಾಪ್ ವೀಕ್ಷಣೆ ಮಾಡುತ್ತಿರುವಾಗ, ಸುಬ್ರಹಣ್ಯ ಗ್ರಾಮದ ಕಾಶಿಕಟ್ಟೆ ಮಾರ್ಗವಾಗಿ ಆದಿ ಸುಬ್ರಹ್ಮಣ್ಯ ಕಡೆಗೆ ಹೋಗುವ ಕಾಕ್ರೀಟ್ ರಸ್ತೆಯಲ್ಲಿ ದುರ್ಗಾಲಾಡ್ಜ್ ಎದುರು ಕಪ್ಪು ಬಟ್ಟೆ ಧರಿಸಿದ್ದ ಯುವಕನೊಬ್ಬನು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮತ್ತೊಬ್ಬ ಯುವಕನನ್ನು ತಡೆದು ನಿಲ್ಲಿಸಿ ಆತನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಕೈಯಿಂದ ಹಲ್ಲೆ ಮಾಡುತ್ತಿರುವ ದೃಶ್ಯ ಕಂಡು ಬಂದಿರುತ್ತದೆ. ಇದಕ್ಕೂ ಕುಕ್ಕೆ ಶ್ರೀ ದೇವಸ್ಥಾನದ ಕೊಠಡಿಯ ಯಾತ್ರಿಕರಿಗೂ ಯಾವುದೇ ಸಂಬಂಧವಿರುವುದಿಲ್ಲ ಎಂದು ತಿಳಿಸಿದ್ದಾರೆ.
ಈ ಸಂಬಂಧ ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಆದ್ದರಿಂದ ದೇವಸ್ಥಾನ ವ್ಯಾಪ್ತಿಯ ಯಾತ್ರಿಕರ ಕೊಠಡಿಗೂ ಈ ಹಲ್ಲೆ ಪ್ರಕರಣಕ್ಕೂ ಸಂಬಂಧವಿಲ್ಲ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಲಾಗಿದೆ.
BREAKING: ವಿಶ್ವದಾದ್ಯಂತ ChatGPT ಡೌನ್: ಬಳಕೆದಾರರು ಪರದಾಟ | ChatGPT Down
BIG NEWS : ರಾಯಚೂರಲ್ಲಿ ಓರ್ವ ಬಾಲಕ ಸೇರಿ 15 ಜನರ ಮೇಲೆ ಬೀದಿ ನಾಯಿಗಳ ದಾಳಿ : 8 ಜನ ಆಸ್ಪತ್ರೆಗೆ ದಾಖಲು