Author: kannadanewsnow09

ಲವಂಗದಿಂದ ಈ ಪರಿಹಾರವನ್ನು ಮಾಡಿಕೊಳ್ಳಿ ಮೂರು ಶುಕ್ರ ವಾರ ಗಳ ಕಾಲ ಈ ಪರಿಹಾರವನ್ನು ನೀವು ಪಾಲಿಸಿಕೊಂಡು ಬಂದಿದೆ ಅದರೆ ನಿಮ್ಮ ಜೀವನದಲ್ಲಿ ಎದುರಾಗುತ್ತ ಇರುವಂತಹ ಹಣಕಾಸಿಗೆ ಸಂಬಂಧಪಟ್ಟ ವಿಚಾರಗಳು ಬೇಗ ಪರಿಹರವಾಗುತ್ತದೆ. ಪಂಡಿತ್  ವಿದ್ಯಾಧರ್ ನಕ್ಷತ್ರಿ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 9686268564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ರಕ್ತೇಶ್ವರೀ ದೇವಿಯ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಶ್ರೀ ವಿದ್ಯಾಧರ್ ನಕ್ಷತ್ರಿ ಪ್ರಧಾನ್ ತಾಂತ್ರಿಕ್ 9686268564 ಅದು ಹೇಗೆ ಅಂತೀರಾ ಈ ಲವಂಗಕ್ಕೆ ಬಹಳ ವಿಶೇಷವಾದ ಶಕ್ತಿ ಇದೆ ಹಾಗೂ ದುಷ್ಟಶಕ್ತಿಯನ್ನು ದೂರ ಮಾಡುವಂತಹ…

Read More

ಬೆಂಗಳೂರು: ವಕ್ಫ್ ಮಂಡಳಿ ಹಿಂದೂಗಳು ಹಾಗೂ ರೈತರ ಆಸ್ತಿ ಕಬಳಿಕೆ ಮಾಡುತ್ತಿರುವ ಬಗ್ಗೆ ಸದನದಲ್ಲಿ ದಾಖಲೆ ಸಮೇತ ಮಾತನಾಡಿದ್ದು, ಈ ಹೋರಾಟಕ್ಕೆ ತಕ್ಕ ಮಟ್ಟಿನ ಜಯ ಸಿಕ್ಕಿದೆ. ಬಿಜೆಪಿಯ ಹೋರಾಟಕ್ಕೆ ಮಣಿದ ಸರ್ಕಾರ ಸಮಿತಿ ರಚನೆಗೆ ತೀರ್ಮಾನಿಸಿದೆ. ಜೊತೆಗೆ ಬಾಣಂತಿಯರ ಸಾವಿನ ಪ್ರಕರಣವನ್ನೂ ನ್ಯಾಯಾಂಗ ತನಿಖೆಗೆ ವಹಿಸಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಹೇಳಿದರು. ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಅಧಿವೇಶನ ಹತ್ತು ದಿನ ನಿಗದಿಯಾಗಿತ್ತು. ಆದರೆ ಕನ್ನಡ ಸಾಹಿತ್ಯ ಸಮ್ಮೇಳನ ಇದೆ ಎಂದು ಅದನ್ನು 9 ದಿನಕ್ಕೆ ಇಳಿಕೆ ಮಾಡಲಾಯಿತು. ಬಸವಣ್ಣನವರ ವರ್ಣಚಿತ್ರ ಅನಾವರಣ ಕಾರ್ಯಕ್ರಮದಲ್ಲಿ ಒಂದು ದಿನ ಕಳೆಯಿತು. ಉಳಿದಿದ್ದು ಏಳು ದಿನ ಮಾತ್ರ. ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ನಿಧನದಿಂದ ಎರಡು ದಿನ ಸದನ ನಡೆಯಲಿಲ್ಲ. ಉಳಿದಂತೆ ಬಿಜೆಪಿಗೆ ಚರ್ಚೆಗೆ ಕೇವಲ ಐದು ದಿನ ದೊರೆತಿದ್ದು, ವಕ್ಫ್‌ ಬೋರ್ಡ್, ಬಾಣಂತಿಯರ ಸಾವು, ಅನುದಾನ ತಾರತಮ್ಯ, ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಚರ್ಚಿಸಿ ಸರ್ಕಾರವನ್ನು ಕಟ್ಟಿ ಹಾಕುವ ಕೆಲಸ…

Read More

ಬೆಂಗಳೂರು: ಕುಂಭಮೇಳದ ಸಮಯದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ನೈಋತ್ಯ ರೈಲ್ವೆಯು ಮೈಸೂರಿನಿಂದ ಪ್ರಯಾಗ್ ರಾಜ್ ಗೆ ವಿಶೇಷ ಏಕಮುಖ ಎಕ್ಸ್ ಪ್ರೆಸ್ ರೈಲು (06215) ಓಡಿಸಲಿದೆ. ರೈಲು ಸಂಖ್ಯೆ 06215 ಮೈಸೂರು-ಪ್ರಯಾಗ್ ರಾಜ್ ಒನ್-ವೇ ಕುಂಭ ವಿಶೇಷ ಏಕಮುಖ ಎಕ್ಸ್ ಪ್ರೆಸ್ ರೈಲು ಡಿಸೆಂಬರ್ 23,2024 (ಸೋಮವಾರ) 00:30 ಗಂಟೆಗೆ ಮೈಸೂರಿನಿಂದ ಹೊರಟು, ಬುಧವಾರ 3:00 ಗಂಟೆಗೆ ಪ್ರಯಾಗ್ ರಾಜ್ ಜಂಕ್ಷನ್ ತಲುಪಲಿದೆ. ಮಾರ್ಗಮಧ್ಯದಲ್ಲಿ, ಈ ರೈಲು ಮಂಡ್ಯಾ, ಕೆಎಸ್ಆರ್. ಬೆಂಗಳೂರು, ಯಶವಂತಪುರ, ತುಮಕೂರು, ಅರಸೀಕೆರೆ, ಕಡೂರು, ಚಿಕ್ಕಜಾಜೂರು,ದಾವಣಗೆರೆ, ಎಸ್ಎಂಎಂ ಹಾವೇರಿ, ಎಸ್ಎಸ್ಎಸ್. ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಘಟಪ್ರಭಾ, ಮಿರಜ್, ಸಾಂಗ್ಲಿ, ಕರಾಡ್, ಪುಣೆ, ದೌಂಡ್ ಚೋರ್ಡ್ ಲೈನ್, ಅಹ್ಮದ್ನಗರ, ಮನ್ಮಡ, ಭುಸಾವಲ್, ಖಾಂಡ್ವಾ, ತಲ್ವಾಡಿಯಾ, ಛಾನೆರಾ, ಖಿರ್ಕಿಯಾ, ಹರ್ದಾ, ಬನಪುರ, ಇಟಾರ್ಸಿ, ಪಿಪರಿಯಾ, ನರಸಿಂಗಪುರ, ಜಬಲ್ಪುರ, ಕಟ್ನಿ, ಮೈಹಾರ್, ಸತ್ನಾ ಮತ್ತು ಮಾಣಿಕ್ಪುರ ನಿಲ್ದಾಣಗಳಲ್ಲಿ ನಿಲ್ಲಲಿದೆ. ಈ ರೈಲಿನ ಆಗಮನ ಮತ್ತು ನಿರ್ಗಮನದ ಸಮಯವನ್ನು ತಿಳಿಯಲು, ಪ್ರಯಾಣಿಕರು ಭಾರತೀಯ ರೈಲ್ವೆಯ…

Read More

ಕುವೈತ್: ಎರಡು ದಿನಗಳ ಕುವೈತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಭಾರತೀಯ ವಿದೇಶಾಂಗ ಸೇವೆ (ಐಎಫ್ಎಸ್) ಅಧಿಕಾರಿ 101 ವರ್ಷದ ಮಂಗಲ್ ಸೈನ್ ಹಂಡಾ ಅವರನ್ನು ಹೃದಯಪೂರ್ವಕವಾಗಿ ಭೇಟಿಯಾದರು. ಹಂಡಾ ಅವರ ಮೊಮ್ಮಗಳು ಸಾಮಾಜಿಕ ಮಾಧ್ಯಮದಲ್ಲಿ ಮನವಿ ಮಾಡಿದ ನಂತರ ಸಂವಾದ ಸಾಧ್ಯವಾಯಿತು. ಕುವೈತ್ ಎಮಿರ್ ಶೇಖ್ ಮೆಶಾಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾಹ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿಯವರ ಕುವೈತ್ ಭೇಟಿ 43 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತೀಯ ಪ್ರಧಾನಿಯಾಗಿದೆ. ಶನಿವಾರ ಕುವೈತ್ಗೆ ಬಂದಿಳಿದ ಪ್ರಧಾನಿ ಮೋದಿ ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಿದರು. ಆಗಮಿಸಿದ ನಂತರ, ಪಿಎಂ ಮೋದಿ ಹೋಟೆಲ್ ಗೆ ಭೇಟಿ ನೀಡಿದರು, ಅಲ್ಲಿ ಅವರು ಮಂಗಲ್ ಸೈನ್ ಹಂಡಾ ಅವರನ್ನು ವಿನಯದಿಂದ ಭೇಟಿಯಾದರು. ಹಂಡಾ ಅವರ ಮೊಮ್ಮಗಳು ಶ್ರೇಯಾ ಜುನೇಜಾ ಅವರು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಮಾಡಿದ ವಿನಂತಿಯ ಮೇರೆಗೆ ಈ ಸಭೆಯನ್ನು ಆಯೋಜಿಸಲಾಗಿತ್ತು, ಅವರು ತಮ್ಮ ಅಜ್ಜನನ್ನು ಪ್ರಧಾನಿಯ “ದೊಡ್ಡ ಅಭಿಮಾನಿ”…

Read More

ಧಾರವಾಡ: ಇಂದಿನ ರಾಜಕಾರಣ ಬಹಳ ಕಲುಷಿತಗೊಂಡು, ದ್ವೇಷದ ರಾಜಕಾರಣ ಹೆಚ್ಚಿದೆ. ಹಿಂದಿನ ಆದರ್ಶದ ರಾಜಕಾರಣಿಗಳು ಇಲ್ಲ. ರಾಜಕಾರಣ ಶುದ್ಧೀಕರಣಗೊಳ್ಳುವ ಅಗತ್ಯವಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ನಗರದ‌ ಕರ್ನಾಟಕ ವಿದ್ಯಾವರ್ಧಕ ಸಂಘದ ನಾಡೋಜ ಡಾ.ಪಾಟೀಲ ಪುಟ್ಟಪ್ಪ ಭವನದಲ್ಲಿ ಶುಕ್ರವಾರ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪತ್ರಕರ್ತರ ಶಂಕರ ಪಾಗೋಜಿ ವಿರಚಿತ ‘ಗಾಂಧಿ ಮಂದಿರ’ ಕಥಾ ಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಸಾರ್ವಜನಿಕರು ಎಲಿಯವರೆಗೂ ಹಣ ಪಡೆದು ಓಟ್ ಹಾಕುತ್ತಿರೋ, ಅಲ್ಲಿಯವರೆಗೂ ವ್ಯವಸ್ಥೆಯನ್ನು ಬದಲಾಣೆ ಮಾಡುವುದು ಅಸಾಧ್ಯ. ಈ ವ್ಯವಸ್ಥೆಯೊಂದಿಗೆ ಬದುಕುವ ಸಂದಿಗ್ಧೆ ಎದುರಾಗಿದೆ. ಹೀಗಾಗಿ ಹಣ ಪಡೆದು ಮತ ಹಾಕುವ ಕೆಟ್ಟ ಪ್ರವೃತ್ತಿ ಬಿಡಬೇಕು ಎಂದು ನೆರದ ಜನರಿಗೆ ಸಲಹೆ ನೀಡಿದರು. ಜಗತ್ತಿನಲ್ಲಿ ಮಹಾತ್ಮ ಗಾಂಧೀಜಿ ಅತ್ಯಂತ ಶ್ರೇಷ್ಠ ವ್ಯಕ್ತಿ. ತಮ್ಮ ಮೈಮೇಲೆ ಬಟ್ಟೆ ಹಾಕದೆ, ಇಡೀ ದೇಶಕ್ಕಾಗಿ ಜೀವನ ಮುಡುಪು ಇಟ್ಟವರು. ಇಂತಹ ಅನೇಕ ಮಹನೀಯರ ಹೋರಾಟದ ಫಲದಿಂದ ಬಂದ ಸ್ವಾತಂತ್ರ್ಯ ದುರ್ಬಳಕೆಗೆ ವಿಷಾದಿಸಿದರಲ್ಲೇ, ಯುವಜನ…

Read More

ಬೆಂಗಳೂರು: ರಾಜ್ಯದ ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿಯನ್ನು ಸರ್ಕಾರ ನೀಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವಂತ ಬರೋಬ್ಬರಿ 9,871 ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ರವರ ಪ್ರಸ್ತಾವನೆಯಲ್ಲಿ ಈ ಕೆಳಕಂಡ ವಿವಿಧ ವೃಂದಗಳ ಅರೆ ವೈದ್ಯಕೀಯ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಆಡಳಿತಾತ್ಮಕ ಅನುಮತಿ ನೀಡುವಂತೆ ಹಾಗೂ ನರ ನೇಮಕಾತಿ ಮೂಲಕ ಅನುಮತಿ ನೀಡಿ ಭರ್ತಿ ಮಾಡುವವರೆಗೆ ಅಥವಾ ಒಂದು ವರ್ಷದ ಅವಧಿಗೆ ಸದರಿ ಖಾಲಿ ಹುದ್ದೆಗಳನ್ನು ಗುತ್ತಿಗೆ | ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅನುಮತಿ ನೀಡುವಂತೆ ಕೋರಿರುತ್ತಾರೆ ಎಂದಿದ್ದಾರೆ. ಉಳಿಕೆ ಮೂಲ ವೃಂದದ ಹುದ್ದೆಗಳ ವಿವರ ಗ್ರೂಪ್-ಬಿ ಕ್ಲಿನಿಕಲ್ ಇನ್ ಸ್ಟ್ರಕ್ಟರ್ – 01 ಸಹಾಯಕ ಕೀಟಶಾಸ್ತ್ರಜ್ಞರು – 07 ಮೈಕ್ರೋಬಯಾಲಜಿಸ್ಟ್ – 12…

Read More

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ (Union Public Service Commission – UPSC) 2024 ರ ಯುಪಿಎಸ್ಸಿ ಸಿಎಸ್ಇ 2024 ಸಂದರ್ಶನ ವೇಳಾಪಟ್ಟಿಯನ್ನು ( UPSC CSE 2024 interview schedule ) ಬಿಡುಗಡೆ ಮಾಡಿದೆ. ಅಧಿಕೃತ ಅಧಿಸೂಚನೆಯ ಪ್ರಕಾರ, ನಾಗರಿಕ ಸೇವೆಗಳ (ಮುಖ್ಯ) ಪರೀಕ್ಷೆ 2024 ರ ವ್ಯಕ್ತಿತ್ವ ಪರೀಕ್ಷೆಗಳು (ಸಂದರ್ಶನಗಳು) ಜನವರಿ 7, 2025 ರಂದು ಪ್ರಾರಂಭವಾಗುತ್ತವೆ ಮತ್ತು ಏಪ್ರಿಲ್ 17, 2025 ರವರೆಗೆ ಮುಂದುವರಿಯುತ್ತವೆ. ಶಾರ್ಟ್ಲಿಸ್ಟ್ ಮಾಡಲಾದ 2,845 ಅಭ್ಯರ್ಥಿಗಳ ರೋಲ್ ಸಂಖ್ಯೆಗಳು, ಸಂದರ್ಶನ ದಿನಾಂಕಗಳು ಮತ್ತು ಸೆಷನ್ ಸಮಯ ಸೇರಿದಂತೆ ವಿವರವಾದ ವೇಳಾಪಟ್ಟಿ ಈಗ ಅಧಿಕೃತ ಯುಪಿಎಸ್ಸಿ ವೆಬ್ಸೈಟ್ upsc.gov.in ನಲ್ಲಿ ಲಭ್ಯವಿದೆ. ಪೂರ್ವಭಾವಿ ಅಧಿವೇಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಬೆಳಿಗ್ಗೆ 9:00 ಕ್ಕೆ ವರದಿ ಮಾಡಬೇಕು ಮತ್ತು ಮಧ್ಯಾಹ್ನದ ಸೆಷನ್ ವರದಿ ಮಾಡುವ ಸಮಯ ಮಧ್ಯಾಹ್ನ 1:00 ಗಂಟೆ. ಸಂದರ್ಶನಕ್ಕಾಗಿ ಇ-ಸಮನ್ಸ್ ಪತ್ರಗಳನ್ನು ಶೀಘ್ರದಲ್ಲೇ ನೀಡಲಾಗುವುದು ಎಂದು ಆಯೋಗ ಹೇಳಿದೆ. ಅಭ್ಯರ್ಥಿಗಳು ಯುಪಿಎಸ್ಸಿ ವೆಬ್ಸೈಟ್ನಿಂದ ಅವುಗಳನ್ನು…

Read More

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಗೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಜಿಎಸ್ಟಿ ಕೌನ್ಸಿಲ್ ಸಭೆ ಶನಿವಾರ ಚರ್ಚಿಸುತ್ತಿದೆ. ಪ್ರಸ್ತುತ ನಡೆಯುತ್ತಿರುವ 55 ನೇ ಜಿಎಸ್ಟಿ ಕೌನ್ಸಿಲ್ ಸಭೆಯ ನಿರ್ಧಾರಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮುಂದಿನ ಕೆಲವು ಗಂಟೆಗಳಲ್ಲಿ ಅಧಿಕೃತವಾಗಿ ಪ್ರಕಟಿಸಲಿದ್ದಾರೆ. ಆದಾಗ್ಯೂ, ಮೂಲಗಳನ್ನು ಉಲ್ಲೇಖಿಸಿ ವರದಿಗಳ ಪ್ರಕಾರ, ಹೆಚ್ಚಿನ ಪರಿಶೀಲನೆಗಾಗಿ ವಿಮಾ ಪಾಲಿಸಿಗಳ ಮೇಲಿನ ದರಗಳನ್ನು ಕಡಿತಗೊಳಿಸುವ ನಿರ್ಧಾರವನ್ನು ಕೌನ್ಸಿಲ್ ಮುಂದೂಡಿದೆ. ವರದಿಗಳ ಪ್ರಕಾರ, ಮೊದಲೇ ಪ್ಯಾಕ್ ಮಾಡದಿದ್ದರೆ ಉಪ್ಪು ಮತ್ತು ಮಸಾಲೆಗಳೊಂದಿಗೆ ಬೆರೆಸಿದ ರೆಡಿ-ಟು-ಈಟ್ ಪಾಪ್ಕಾರ್ನ್ ಮೇಲೆ ಶೇಕಡಾ 5, ಮೊದಲೇ ಪ್ಯಾಕ್ ಮಾಡಿದ ಮತ್ತು ಲೇಬಲ್ ಮಾಡಿದ ಪಾಪ್ಕಾರ್ನ್ ಮೇಲೆ ಶೇಕಡಾ 12 ಮತ್ತು ಕ್ಯಾರಮೆಲ್ ಪಾಪ್ಕಾರ್ನ್ ಮೇಲೆ ಶೇಕಡಾ 18 ರಷ್ಟು ಜಿಎಸ್ಟಿ ವಿಧಿಸಲು ಕೌನ್ಸಿಲ್ ಶಿಫಾರಸು ಮಾಡಿದೆ. ಐಷಾರಾಮಿ ಸರಕುಗಳು, ವಾಯುಯಾನ ಟರ್ಬೈನ್ ಇಂಧನ (ಎಟಿಎಫ್), ರಿಯಲ್ ಎಸ್ಟೇಟ್ ಮತ್ತು ಹೆಚ್ಚಿನವುಗಳಿಗೆ ಸಂಬಂಧಿಸಿದ ದರ ಹೊಂದಾಣಿಕೆಗಾಗಿ ಕೌನ್ಸಿಲ್ ನಿರ್ಣಾಯಕ ಪ್ರಸ್ತಾಪಗಳನ್ನು…

Read More

ಬೆಂಗಳೂರು: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ 66/11ಕೆವಿ ಇಸ್ರೊ ಉಪಕೇಂದ್ರದಲ್ಲಿನ ಈ ಕೆಳಕಂಡ ಪ್ರದೇಶಗಳಲ್ಲಿ 23.12.2024 (ಸೋಮವಾರ) ರಂದು ಬೆಳಗ್ಗೆ 10:00 ರಿಂದ ಸಂಜೆ 03:00 ಗಂಟೆವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಇಸ್ರೊ ಲೇಔಟ್ ಇಂಡಸ್ಟ್ರಿಯಲ್ ಏರಿಯಾ, ಕುಮಾರಸ್ವಾಮಿ ಲೇಔಟ್, ಯಲಚೇನಹಳ್ಳಿ ಇಲಿಯಾಸ್ ನಗರ, ಗಂಗಾಧರನಗರ, ವಿವೇಕಾನಂದ ಕಾಲೋನಿ, ಪ್ರಗತಿಪುರ, ಸರಬಂಡೆಪಾಳ್ಯ, ಪ್ರತಿಭಾ ಇಂಡಸ್ಟ್ರಿಯಲ್ ಏರಿಯಾ, ಸುಪ್ರಿಮ್ ಲೇದರ್ ಗಾರ್ಮೆಂಟ್ಸ್, ಚಂದ್ರ ನಗರ, ಕಾಶಿ ನಗರ, ವಿಕ್ರಮ್ ನಗರ, ನಂಜಪ್ಪ ಲೇಔಟ್, ಬಿಕಾಸಿಪುರ, ಟೀಚರ್ಸ್ ಕಾಲೋನಿ, ಜೆ.ಹೆಚ್.ಬಿ.ಸಿ.ಎಸ್. ಲೇಔಟ್, ಬೇಂದ್ರೇನಗರ, ಈಶ್ವರನಗರ, ಮಿನಾಜ್ ನಗರ, ಕನಕ ಲೇಔಟ್, ಕನಕನಗರ, ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಪವರ್ ಕಟ್ ಆಗಲಿದೆ. https://kannadanewsnow.com/kannada/laxmi-hebbalkars-fans-stage-massive-protest-in-belagavi-against-ct-ravi/ https://kannadanewsnow.com/kannada/lecturer-brutally-assaulted-by-students-parents-in-sagar/

Read More

ಬೆಳಗಾವಿ: ವಿಧಾನ ಪರಿಷತ್ ನಲ್ಲಿ ಬಿಜೆಪಿ ಎಂಎಲ್ಸಿ ಸಿಟಿ ರವಿ ಅವರು, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿರುದ್ಧ ಅವಾಚ್ಯ ಶಬ್ದ ಬಳಕೆ ಮಾಡಿದ್ದಾರೆ ಎಂಬ ಪ್ರಕರಣ ರಾಷ್ಟ್ರ ರಾಜಕಾರಣದಲ್ಲಿ ಸುದ್ದಿ ಮಾಡುತ್ತಿದ್ದು, ಇಂದು ಬೆಳಗಾವಿಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ ಬೆಂಬಲಿಗರು ಬೃಹತ್ ಪ್ರತಿಭಟನೆ ಮಾಡಿದ್ದಾರೆ. ಬೆಳಗಾವಿ ನಗರದ ಸಿಪಿಎಡ್ ಮೈದಾನದಿಂದ ಸಹಸ್ರಾರು ಬೆಂಬಲಿಗರು ಮೆರವಣಿಗೆ ನಡೆಸಿ, ಸಿ‌.ಟಿ ರವಿ ಪರಿಷತ್ ಸ್ಥಾನದಿಂದ ವಜಾ ಮಾಡುವಂತೆ ಆಗ್ರಹಿಸಿದರು. ಮೆರವಣಿಗೆಯಲ್ಲಿ ಸಿಟಿ ರವಿ ಅಣಕು ಶವಯಾತ್ರೆ ನಡೆಸಿ ಪ್ರತಿಕೃತಿಗೆ ಸೀರೆ ಉಡಿಸಿ ಆಕ್ರೋಶ ಹೊರಹಾಕಿದರು. ಚನ್ನಮ್ಮ ವೃತ್ತದಲ್ಲಿ ಪ್ರತಿಕೃತಿ ಸುಟ್ಟು ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆದು ಆಕ್ರೋಶ ಹೊರ ಹಾಕಿದರು.‌ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಸಿಟಿ ರವಿ ಬಹಿರಂಗ ಕ್ಷಮೆ ಕೇಳಬೇಕು ಎಂದು ಈ ವೇಳೆ ಹೋರಾಟಗಾರರು ಒತ್ತಾಯಿಸಿದರು ಪ್ರತಿಭಟನೆಯಲ್ಲಿ ಶೋಕ ಸೂಚಿಸುವ ಹಾಡುಗಳನ್ನು ಹಾಕಿ ಸಿಟಿ ಸತ್ನಪ್ಪೊ ಸತ್ನೋ ಎಂದು ಬೊಬ್ಬೆ ಹೊಡೆದ ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗರು, ಬೆಳಗಾವಿ…

Read More