Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ನಗರದ ಜನತೆಗೆ ಗುಡ್ ನ್ಯೂಸ್ ಎನ್ನುವಂತೆ ಈ ಹೊಸ ಮಾರ್ಗದಲ್ಲಿ ಬಿಎಂಟಿಸಿ ಬಸ್ ಸಂಚಾರವನ್ನು ಆರಂಭಿಸಲಾಗುತ್ತಿದೆ. ಈ ಕುರಿತಂತೆ ಬಿಎಂಟಿಸಿ ಮಾಹಿತಿ ನೀಡಿದ್ದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮಧಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ ಎಂದಿದೆ. ಬೆಂ.ಮ.ಸಾ. ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹವಾನಿಯಂತ್ರಣರಹಿತ ಸೇವೆಗಳಲ್ಲಿ ನೂತನ ಮೆಟ್ರೋ ಫೀಡರ್ ಮಾರ್ಗವನ್ನು ದಿನಾಂಕ 16.01.2025 ರಿಂದ ಪರಿಚಯಿಸಿದ್ದು, ವಿವರ ಕೆಳಕಂಡಂತಿದೆ: ಕ್ರ.ಸಂ. ಮಾರ್ಗ ಸಂಖ್ಯೆ ಎಲ್ಲಿಂದ ಎಲ್ಲಿಗೆ ಮಾರ್ಗ ಬಸ್ಸುಗಳ ಸಂಖ್ಯೆ 1 ಎಂ ಎಫ್-8ಎ ಮಂತ್ರಿ ಮಾಲ್ ಮೆಟ್ರೋ ನಿಲ್ದಾಣ ಶಿವಾಜಿನಗರ ಮಲ್ಲೇಶ್ವರಂ ಸರ್ಕಲ್, ಗುಟ್ಟಹಳ್ಳಿ, ಮೌಂಟ್ ಕಾರ್ಮೆಲ್ ಕಾಲೇಜು, ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ 1 ಮಾರ್ಗ ಸಂಖ್ಯೆ : ಎಂಎಫ್-8ಎ ಬಿಡುವ ವೇಳೆ ಮಂತ್ರಿ ಮಾಲ್ ಮೆಟ್ರೋ ನಿಲ್ದಾಣ ಶಿವಾಜಿನಗರ 0715, 0845, 1215, 1330 1440, 1625 0805, 0845,…
ನವದೆಹಲಿ: ಮದ್ಯದ ಹಗರಣದಲ್ಲಿ ಛತ್ತೀಸ್ಗಢದ ಮಾಜಿ ಅಬಕಾರಿ ಸಚಿವ ಮತ್ತು ಹಾಲಿ ಕಾಂಗ್ರೆಸ್ ಶಾಸಕ ಕವಾಸಿ ಲಖ್ಮಾ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಸುಮಾರು 2,161 ಕೋಟಿ ರೂ.ಗಳ ಮದ್ಯ ಹಗರಣದಿಂದ ಉತ್ಪತ್ತಿಯಾದ ಅಪರಾಧದ ಆದಾಯದಿಂದ ಹಿರಿಯ ಕಾಂಗ್ರೆಸ್ ನಾಯಕ ಮಾಸಿಕ ಆಧಾರದ ಮೇಲೆ ಗಣನೀಯ ಮೊತ್ತವನ್ನು ನಗದು ರೂಪದಲ್ಲಿ ಸ್ವೀಕರಿಸುತ್ತಿದ್ದರು ಎಂದು ಇಡಿ ಸೋಮವಾರ ಹೇಳಿದೆ. ಏಜೆನ್ಸಿಯ ಪ್ರಕಾರ, ಕವಾಸಿ ಲಖ್ಮಾ ಅವರು ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಅಬಕಾರಿ ಸಚಿವರಾಗಿದ್ದ ಅವಧಿಯಲ್ಲಿ ಅಪರಾಧದ ಆದಾಯವನ್ನು ನಗದು ರೂಪದಲ್ಲಿ ಸ್ವೀಕರಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. https://kannadanewsnow.com/kannada/micro-finance-staff-harassed-in-cm-siddaramaiahs-hometown-people-try-to-leave-village/ https://kannadanewsnow.com/kannada/what-is-the-difference-between-heart-rate-and-pulse-rate-how-much-should-a-normal-person-have-heres-the-information/
ಕೆಎನ್ಎನ್ ಡಿಜಿಟಲ್ ಡೆಸ್ಕ್: ಜನರು ಹೆಚ್ಚಾಗಿ ಹೃದಯ ಬಡಿತ ಮತ್ತು ನಾಡಿ ಬಡಿತವನ್ನು ಒಂದೇ ಎಂದು ಗೊಂದಲಗೊಳಿಸುತ್ತಾರೆ. ಅದು ತಪ್ಪು. ಇದು ಎರಡೂ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ. ಹೃದಯ ಬಡಿತವು ನಿಮಿಷಕ್ಕೆ ಹೃದಯವು ಎಷ್ಟು ಬಾರಿ ಬಡಿದುಕೊಳ್ಳುತ್ತದೆ ಎಂಬುದನ್ನು ಸೂಚಿಸುತ್ತದೆ. ಇದು ಹೃದಯದ ಆರೋಗ್ಯ ಮತ್ತು ದೇಹದ ಭೌತಿಕ ಪರಿಸ್ಥಿತಿಗಳನ್ನು ಸೂಚಿಸುತ್ತದೆ. ಮೆದುಳು ಮತ್ತು ದೇಹದ ಅಗತ್ಯಗಳನ್ನು ಅವಲಂಬಿಸಿ ಹೃದಯ ಬಡಿತವು ಹೆಚ್ಚು ಅಥವಾ ಕಡಿಮೆ ಇರಬಹುದು. ಹೃದಯ ಬಡಿತವು ನಮ್ಮ ಹೃದಯದ ಬಗ್ಗೆ ಮಾಹಿತಿಯನ್ನು ನೀಡುವುದಲ್ಲದೆ ನಮ್ಮ ಜೀವನಶೈಲಿಯನ್ನು ಸಹ ಹೇಳುತ್ತದೆ. ಅದೇ ಸಮಯದಲ್ಲಿ, ನಾಡಿಮಿಡಿತವು ಅಪಧಮನಿಗಳಲ್ಲಿ ರಕ್ತದ ಹರಿವನ್ನು ಸೂಚಿಸುತ್ತದೆ. ಹೃದಯವು ರಕ್ತವನ್ನು ಪಂಪ್ ಮಾಡಿದಾಗ. ಇದು ಅಪಧಮನಿಗಳಲ್ಲಿ ತರಂಗವನ್ನು ಸೃಷ್ಟಿಸುತ್ತದೆ, ಇದನ್ನು ನಾಡಿಮಿಡಿತ ಎಂದು ಕರೆಯಲಾಗುತ್ತದೆ. ಹೃದಯ ಬಡಿತ ಮತ್ತು ನಾಡಿಮಿಡಿತ ಎರಡೂ ದೇಹದ ಕಾರ್ಯನಿರ್ವಹಣೆ ಮತ್ತು ಹೃದಯದ ಆರೋಗ್ಯದ ಬಗ್ಗೆ ಪ್ರಮುಖ ಮಾಹಿತಿಯನ್ನು ಒದಗಿಸುತ್ತವೆ. ಹೃದಯ ಬಡಿತ ಮತ್ತು ನಾಡಿ ಬಡಿತದ ನಡುವಿನ ವ್ಯತ್ಯಾಸವೇನು? ಹೃದಯ ಬಡಿತ…
ಮೈಸೂರು: ಚಾಮರಾಜನಗರದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ತವರು ಕ್ಷೇತ್ರ ವರುಣಾ, ನಂಜನಗೂಡಿನಲ್ಲೂ ಮೈಕ್ರೋ ಫೈನಾನ್ಸರ್ ಸಿಬ್ಬಂದಿಗಳ ಕಿರುಕುಳ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಕಿರುಕುಳ ತಾಳಲಾರದೇ ಗ್ರಾಮವನ್ನೇ ತೊರೆಯಲು ಜನರು ಮುಂದಾಗಿದ್ದಾರೆ. ಮೈಸೂರು ಜಿಲ್ಲೆಯ ವರುಣ ಹಾಗೂ ನಂಜನಗೂಡು ವ್ಯಾಪ್ತಿಯಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿಯ ಕಿರುಕುಳ ಹೆಚ್ಚಾಗಿದೆ. ಕೊಟ್ಟ ಸಾಲ ವಾಪಾಸ್ ಕಟ್ಟದೇ ಇದ್ದಕ್ಕೆ ಗ್ರಾಮದ ಜನರ ಮನೆಯ ಬಾಗಿಲ ಮೇಲೆಯೇ ನೋಟಿಸ್ ಬೋರ್ಡ್ ರೀತಿಯಲ್ಲಿ ಈ ಸ್ವತ್ತಿನ ಮೇಲೆ ಸಾಲ ಪಡೆದಿರುವುದಾಗಿ ಕಪ್ಪು ಶಾಹಿರಿಯಿಂದ ಬರೆಯಲಾಗಿದೆ. ಮೈಕ್ರೋ ಫೈನಾನ್ಸ್ ಸಿಬ್ಬಂದಿಯ ಈ ಬರವಣಿಗೆಯಿಂದಾಗಿ ಗ್ರಾಮದ ಜನರು ಮಾನಸಿಕವಾಗಿ ನೋಂದು ಹೋಗಿದ್ದು, ಕಿರುಕುಳಕ್ಕೆ ಬೇಸತ್ತಿದ್ದಾರೆ. ಬಲವಂತವಾಗಿ ಸಾಲ ವಾಪಾಸ್ಸು ನೀಡುವಂತೆಯೂ ಫೈನಾನ್ಸ್ ಸಿಬ್ಬಂದಿ ಒತ್ತಾಯಿಸುತ್ತಿದ್ದಾರೆ. ಈ ಕಾರಣಕ್ಕೆ ವರುಣ, ನಂಜನಗೂಡು ಕ್ಷೇತ್ರದ ಜನರು ಗ್ರಾಮವನ್ನೇ ತೊರೆಯಲು ಮುಂದಾಗಿದ್ದಾರೆ. ಜೊತೆಗೆ ಈ ಕಿರುಕುಳ ತಪ್ಪಿಸುವಂತೆ ಆಗ್ರಹಿಸಿದ್ದಾರೆ. https://kannadanewsnow.com/kannada/issue-of-caste-census-report-will-not-be-tabled-in-tomorrows-cabinet-meeting-siddaramaiah/ https://kannadanewsnow.com/kannada/bpl-apl-cardholders-in-the-state-e-kyc-and-mapping-mandatory-jan-31-last-date/
ಬಳ್ಳಾರಿ: ಜಿಲ್ಲೆಯ ಎಲ್ಲಾ ಪಡಿತರ ಚೀಟಿದಾರರು ತಮ್ಮ ಕುಟುಂಬದ ಎಲ್ಲಾ ಸದಸ್ಯರ ಇ-ಕೆವೈಸಿ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಫಲಾನುಭವಿಗಳು ಮ್ಯಾಪಿಂಗ್ ಮಾಡಿಸಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರಾದ ಸಕೀನ ಅವರು ತಿಳಿಸಿದ್ದಾರೆ. ಆರ್ಥಿಕವಾಗಿ ದುರ್ಬಲರಿರುವ ಕುಟುಂಬಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡುತ್ತಿರುವ ಬಿಪಿಎಲ್ ಪಡಿತರವನ್ನು ಆಹಾರ ಭದ್ರತಾ ಕಾಯ್ದೆ ನಿಯಮಗಳನ್ನು ಪಾಲಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಪಡಿತರ ಚೀಟಿದಾರರು ಕಡ್ಡಾಯವಾಗಿ ತಮ್ಮ ಕುಟುಂಬದ ಎಲ್ಲಾ ಸದಸ್ಯರ ಇ-ಕೆವೈಸಿ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಫಲಾನುಭವಿಗಳ ಮ್ಯಾಪಿಂಗ್ ಕಾರ್ಯ ಚಾಲ್ತಿಯಲ್ಲಿದ್ದು, ಜಾತಿವಾರು ಮ್ಯಾಪಿಂಗ್ ಮಾಡಿಸಬೇಕು. ಜಿಲ್ಲೆಯಲ್ಲಿ ಬಿಪಿಎಲ್ ಹಾಗೂ ಎಪಿಎಲ್ ಪಡಿತರ ಚೀಟಿದಾರರು ಈಗಾಗಲೇ ಕುಟುಂಬ ಪಡಿತರ ಚೀಟಿಯಲ್ಲಿನ ಎಲ್ಲಾ ಸದಸ್ಯರು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿ ಮಟ್ಟದಲ್ಲಿಯೇ ಕುಟುಂಬದ ಎಲ್ಲಾ ಸದಸ್ಯರು ಕಡ್ಡಾಯವಾಗಿ ತಮ್ಮ ಬೆರಳಚ್ಚು ನೀಡಿ (ಇ-ಕೆವೈಸಿ) ನವೀಕರಿಸಿಕೊಳ್ಳಬೇಕು. ಇ-ಕೈವೈಸಿ ಆಗದ ಮತ್ತು ಪರಿಶಿಷ್ಠ ಜಾತಿ, ಪರಿಶಿಷ್ಠ…
ನವದೆಹಲಿ : ಜಾತಿಗಣತಿ ವರದಿಯಲ್ಲಿರುವ ಅಂಕಿಅಂಶ ಇನ್ನೂ ಸಾರ್ವಜನಿಕವಾಗದೇ, ಊಹಾಪೋಹಗಳಾಗಿರುವುದರಿಂದ, ಈ ವಿಚಾರದ ಬಗ್ಗೆ ವಿರೋಧ ಅನವಶ್ಯಕ. ನಾಳೆ ನಡೆಯುವ ಸಂಪುಟಸಭೆಯಲ್ಲಿ ಜಾತಿ ಗಣತಿ ವರದಿಯ ವಿಷಯವನ್ನು ಮಂಡಿಸಲಾಗುವುದಿಲ್ಲ. ಮುಂದಿನ ಸಂಪುಟಸಭೆಯಲ್ಲಿ ವಿಷಯ ಮಂಡಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ನವದೆಹಲಿಯಲ್ಲಿ ಉದ್ಘಾಟನೆಗೆ ಸಿದ್ದವಾಗಿರುವ ಕನ್ನಡ ಭವನದ ನೂತನ ಕಟ್ಟಡವನ್ನು ವೀಕ್ಷಿಸಿದ ನಂತರ ಜಾತಿ ಗಣತಿ ವರದಿಯ ಜಾರಿ ಬಗ್ಗೆ ಉತ್ತರಿಸುತ್ತಾ ಮಾಧ್ಯಮದವರೊಂದಿಗೆ ಮಾತನಾಡಿದರು. ಎಐಸಿಸಿ ಕಚೇರಿ ಉದ್ಘಾಟನೆ ಎಐಸಿಸಿ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಲೋಕಸಭಾ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಏಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರ ಭಾಷಣ ಉತ್ತಮವಾಗಿತ್ತು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಶಂಕುಸ್ಥಾಪನೆಗೊಂಡಿದ್ದ ಕಟ್ಟಡ , ಇಂದು ಸುಸಜ್ಜಿತ ಕಟ್ಟಡವಾಗಿ ಉದ್ಘಾಟನೆಗೊಂಡಿದೆ ಎಂದು ತಿಳಿಸಿದರು. ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಲಿಲ್ಲ ಆರ್ ಎಸ್ ಎಸ್ ಪ್ರಮುಖ ಮೋಹನ್ ಭಾಗವತ್ ಅವರು ಆಯೋಧ್ಯೆಯ ರಾಮಮಂದಿರ ಪ್ರಾರಂಭವಾದ ದಿನ…
ಬೆಂಗಳೂರು: ಕನ್ನಡ ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದ ಸರಿಗಮ ವಿಜಿ ಅವರ ನಿಧನಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಕನ್ನಡ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಸರಿಗಮ ವಿಜಿ ಕನ್ನಡ ರಂಗಭೂಮಿ ಮತ್ತು ಚಲನಚಿತ್ರಗಳಲ್ಲಿ ಹಾಸ್ಯ ಕಲಾವಿದರಾಗಿ ,ತಂತ್ರಜ್ಞರಾಗಿ, ಸಹಾಯಕ ನಿರ್ದೇಶಕರಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ. ಸಂಸಾರದಲ್ಲಿ ಸರಿಗಮ ನಾಟಕ ಅವರಿಗೆ ಅತ್ಯಂತ ಜನಪ್ರಿಯತೆ ತಂದು ಕೊಟ್ಟಿತು. 270ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದ ಸರಿಗಮ ವಿಜಿ ತಮ್ಮ ವಿಶಿಷ್ಟ ಹಾವ, ಭಾವ ಹಾಗೂ ಸಂಭಾಷಣೆಗಳ ಮೂಲಕ ಕನ್ನಡ ಜನಮಾನಸದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ. ಅವರ ನಿಧನದಿಂದ ಕನ್ನಡ ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರ ಒಬ್ಬ ಅತ್ಯುತ್ತಮ ಕಲಾವಿದನನ್ನ ಕಳೆದುಕೊಂಡಂತಾಗಿದೆ. ಅವರ ಕುಟುಂಬಕ್ಕೆ ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿ ಭಗವಂತನು ನೀಡಲಿ ಎಂದು ಸಚಿವ ಶಿವರಾಜ ತಂಗಡಗಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ. https://kannadanewsnow.com/kannada/artists-on-the-walls-of-bengaluru-these-pictures-tell-many-stories/ https://kannadanewsnow.com/kannada/shivarajkumar-underwent-6-surgeries-190-stitches-minister-madhu-bangarappa/
ಬೆಂಗಳೂರು: ಸ್ಯಾಂಡಲ್ ವುಡ್ ನಟ ಶಿವರಾಜ್ ಕುಮಾರ್ ಗೆ 6 ಆಪರೇಷನ್ ಮಾಡಲಾಗಿದೆ. 190 ಹೊಲಿಗೆ ಹಾಕಲಾಗಿದೆ. ಶಿವಣ್ಣ ತಲೆಯಲ್ಲಿ ಒಂದು ಸ್ಟಂಟ್ ಇದೆ. ಹೃದಯದಲ್ಲಿ ಒಂದು ಇದೆ. ಇದೇ ಜನವರಿ.25ರಂದು ಬೆಂಗಳೂರಿಗೆ ವಾಪಾಸ್ ಆಗಲಿದ್ದಾರೆ ಎಂಬುದಾಗಿ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಟ ಶಿವರಾಜ್ ಕುಮಾರ್ ಅವರಿಗೆ ಐದೂವರೆ ಗಂಟೆ ಆಪರೇಷನ್ ಮಾಡಲು ಪ್ಲಾನ್ ಮಾಡಲಾಗಿತ್ತು. ಆದರೇ ನಾಲ್ಕು ಮುಕ್ಕಾಲು ಗಂಟೆಯಲ್ಲಿ ಆಪರೇಷನ್ ಮುಗಿಯಿತು ಎಂದರು. ಇದಕ್ಕೂ ಮೊದಲು ನಟ ಶಿವರಾಜ್ ಕುಮಾರ್ ಗೆ ಆಪರೇಷನ್ ಮ್ಯಾನುಯಲಿ ಮಾಡಬೇಕೋ ಅಥವಾ ರೋಬೋಟಿಕ್ ಮಾಡಬೇಕೋ ಅಂತನೂ ಚರ್ಚೆ ನಡೆಸಲಾಗಿತ್ತು. ಆದರೇ ಏಳೆಂಟು ಹೋಲ್ ಮಾಡಿ ದೇಹವನ್ನು ಉಲ್ಲಾ ಮಲಗಿಸಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಕೊನೆಗೆ ಮ್ಯಾನುಯೆಲ್ ಸೂಕ್ತವೆಂದು ನಿರ್ಧರಿಸಿ ಆಪರೇಷನ್ ಮಾಡಲಾಗಿದೆ ಎಂದು ತಿಳಿಸಿದರು. ಈಗ ಶಿವರಾಜ್ ಕುಮಾರ್ ಗೆ 63 ವರ್ಷ. ಅವರು ವಾಪಾಸ್ ಬಂದ ಮೇಲೆ 36ರ ರೀತಿ ಕಾಣಿಸ್ತಾರೆ. ವೈದ್ಯರು…
ಬೆಂಗಳೂರು: ಬೆಂಗಳೂರಿನ 10 ಗೋಡೆಗಳ ಮೇಲೆ ಪ್ರಸಿದ್ಧ ಕಲಾವಿದರಿಂದ ಚಿತ್ತಾರ ಮೂಡಿಸುವ ಕೆಲಸ ಪೂರ್ಣಗೊಂಡಿದೆ.ಬಿಎಂಆರ್ಸಿಎಲ್ ಹಾಗೂ ಅನ್ಬಾಕ್ಸಿಂಗ್ ಬಿಎಲ್ಆರ್ ಸಹಯೋಗದೊಂದಿಗೆ ನಗರದ ಪ್ರಮುಖ 10 ಗೋಡೆಗಳ ಮೇಲೆ ಚಿತ್ರ ಬಿಡಿಸುವ “ಗೋಡೆ ಬೆಂಗಳೂರು” ಉಪಕ್ರಮವನ್ನು ಈ ಹಿಂದೆ ಘೋಷಿಸಲಾಗಿತ್ತು. ಇದೀಗ ಚಿತ್ರಬಿಡುಸವ ಕೆಲಸ ಪೂರ್ಣಗೊಂಡಿದ್ದು, ಬೆಂಗಳೂರಿನ ಈ 10 ಗೋಡೆಗಳು ಸುಂದರವಾಗಿ ಮೂಡಿ ಬಂದಿವೆ. ಎಲ್ಲೆಲ್ಲಿ ಚಿತ್ರ: ವಿಶ್ವೇಶ್ವರಯ್ಯ ಸೆಂಟ್ರಲ್ ಕಾಲೇಜ್ ಮೆಟ್ರೋ ಸ್ಟೇಷನ್ನ ಗೋಡೆಯ ಮೇಲೆ, “ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಳಿ” ಎಂಬ ಶೀರ್ಷಿಕೆಯಡಿ ಬೆಂಗಳೂರಿನ ಜನದಟ್ಟಣೆಯ ಬಗ್ಗೆ ಕಲಾವಿದರಾದ ಅನಿಲ್ಕುಮಾರ್ ಸುಂದರವಾಗಿ ಚಿತ್ರಬಿಡಿಸಿದ್ದಾರೆ. ಚರ್ಚ್ಸ್ಟ್ರೀಟ್ ನಲ್ಲಿರುವ ಗೋಡೆ ಒಂದರ ಮೇಲೆ, ಬಿಡುವಿನ ಸಮಯದಲ್ಲಿ ನಿಮ್ಮೊಂದಿಗೆ ಕಳೆಯಿರಿ ಎಂಬ ಸಂದೇಶ ಸಾರುವ ಚಿತ್ರವನ್ನು ಮನಸೋರೆಗೊಳ್ಳುವಂತೆ ಕಲಾವಿದರಾದ ಅನ್ಪು ವರ್ಕಿ ಅವರು ತಮ್ಮ ಕೈಚಳಕ ತೋರಿಸಿದ್ದಾರೆ. ಇನ್ನು, ಬೆಂಗಳೂರಿನ ವಲಸೆ ಬರುವ ಸಾವಿರಾರು ಜನ ಇಲ್ಲಿ ಬದುಕಲು ನಡೆಸುವ ಜಿದ್ದಾಜಿದ್ದಿನ ಕಷ್ಟವನ್ನು ವಿವರಿಸುವಂತೆ ಒಬ್ಬ ವ್ಯಕ್ತಿ ಸಿಲೆಂಡರ್ ಮೇಲೆ ಮಲಗಿರುವ ಚಿತ್ರದ ಮೂಲಕ…
ಕಲಬುರ್ಗಿ: ಚೆಕ್ ಬುಕ್ ನಲ್ಲಿ ಕಲಬುರ್ಗಿ ಆಯುಕ್ತರ ನಕಲಿ ಸಹಿ ಮಾಡಿ, ಬ್ಯಾಂಕ್ ಗೆ ನೀಡಿ ಲಕ್ಷ ಲಕ್ಷ ಹಣ ಡ್ರಾ ಮಾಡಿಕೊಂಡ ಐವರು ಆರೋಪಿಗಳನ್ನು ಪೊಲೀಸರು ಬಂಧಿಸುವ ಮೂಲಕ, ಅಕ್ರಮಕ್ಕೆ ಬ್ರೇಕ್ ಹಾಕಿದ್ದಾರೆ. ಕಲಬುರ್ಗಿಯ ಆಯುಕ್ತರಿಗೆ ಸೇರಿದಂತ ಚೆಕ್ ಬುಕ್ ನಲ್ಲಿ ನಕಲಿ ಸಹಿ ಮಾಡಿ ಮೂರು ಚೆಕ್ ಗಳಲ್ಲಿ ಒಟ್ಟು 1 ಕೋಟಿ 30 ಲಕ್ಷ ಹಣ ಡ್ರಾಮಾಡೋದಕ್ಕೆ ಐವರು ಆರೋಪಿಗಳು ಸೇರಿಕೊಂಡು ಪ್ರಯತ್ನಿಸಿದ್ದರು. ಮೊದಲ ಹಂತದಲ್ಲಿ ಮೊದಲ ಚೆಕ್ ನಲ್ಲಿ ಬರೋಬ್ಬರಿ 35,56,640 ಹಣವನ್ನು ನಕಲಿ ಸಹಿಯೊಂದಿಗೆ ಡ್ರಾಮಾಡಿಕೊಂಡಿದ್ದರು. ಇದಲ್ಲದೇ ಇನ್ನೂ ಎರಡು ಚೆಕ್ ಗಳನ್ನು ನೀಡಿ ಹಣ ಡ್ರಾಮಾಡೋದಕ್ಕೆ ಮುಂದಾಗಿದ್ದರು. ಈ ಬಗ್ಗೆ ಬ್ಯಾಂಕ್ ಸಿಬ್ಬಂದಿ ಅನುಮಾನಗೊಂಡು ಕಲಬುರ್ಗಿ ಪಾಲಿಕೆ ಆಯುಕ್ತರ ಗಮನಕ್ಕೆ ತಂದಿದ್ದರು. ಕೂಡಲೇ ಅಲರ್ಟ್ ಆದಂತೆ ಕಲಬುರ್ಗಿ ಪಾಲಿಕೆ ಆಯುಕ್ತರು ಬ್ರಹ್ಮಪುರು ಪೊಲೀಸರಿಗೆ ಈ ಸಂಬಂಧ ದೂರು ನೀಡಿದ್ದರು. ಆಯುಕ್ತರ ದೂರು ಆಧರಿಸಿ ಕಾರ್ಯಾಚರಣೆಗೆ ಇಳಿದಂತ ಪೊಲೀಸರು ಮಿರ್ಜಾ ಬೇಗ್, ನಾಸೀರ್ ಅಹ್ಮದ್,…