Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಮಾಜಿ ಸಂಸದ ಡಿಕೆ ಸುರೇಶ್ ಸಹೋದರಿ ಎಂದು ಹೇಳಿ ಚಿನ್ನ ವಂಚನೆ ಎಸಗಿದ್ದ ಪ್ರಕರಣ ಸಂಬಂಧ ಐಶ್ವರ್ಯ ಗೌಡ ಅವರ ಬೆಂಗಳೂರು ಹಾಗೂ ಮಂಡ್ಯದ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಇಂದು ದಾಳಿ ನಡೆಸಿದರು. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿರುವ ಮನೆ ಹಾಗೂ ಬೆಂಗಳೂರಿನ ನಿವಾಸದ ಮೇಲೆ ದಾಳಿ ನಡೆದಿದ್ದು, ಕಡತಗಳು ಹಾಗೂ ದಾಖಲೆಗಳ ಶೋಧ ಮಾಡಿದರು. ಈ ಬಳಿಕ ಹೆಚ್ಚಿನ ವಿಚಾರಣೆಗಾಗಿ ಅವರನ್ನು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ. ಶಾಸಕ ವಿನಯ್ ಕುಲಕರ್ಣಿಗೂ ED ಶಾಕ್! ಡಿಕೆ ಸುರೇಶ್ ಸಹೋದರಿ ಎಂದು ಹೇಳಿ ಐಶ್ವರ್ಯ ಗೌಡ ವಂಚನೆ ಎಸಗಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಶಾಸಕ ವಿನಯ್ ಕುಲಕರ್ಣಿ ನಿವಾಸದ ಮೇಲು ಇಡಿ ಅಧಿಕಾರಿಗಳು ದಾಳಿ ಮಾಡಿ ಹಲವು ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಏನಿದು ಪ್ರಕರಣ? ವಾರಾಹಿ…
ಮೈಸೂರು: ಮೈಸೂರು ನಗರದಲ್ಲಿ ಸುಸಜ್ಜಿತವಾದಂತ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡಲು, ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದಂತ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಈ ಬಗ್ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಮಾಹಿತಿ ಹಂಚಿಕೊಂಡಿದ್ದು, ಮೈಸೂರಿಗೆ ಒಂದು ಸುಸಜ್ಜಿತವಾದ ಕ್ರಿಕೆಟ್ ಸ್ಟೇಡಿಯಂ ಬೇಕೆಂಬುದು ಮೈಸೂರಿಗರ ಬಹು ವರ್ಷಗಳ ಕನಸಾಗಿತ್ತು. ಮೈಸೂರು ನಗರದ ಸಾತಗಳ್ಳಿ ಸಮೀಪ ಮೂಡಾ ಗುರುತು ಮಾಡಿದಂತಹ ಸುಮಾರು19.5 ಎಕರೆ ಜಾಗವನ್ನ 2021ರಲ್ಲಿ ಶ್ರೀ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಬಂದ ನಂತರ, ಆ ಭೂಮಿಯನ್ನು ಹಸ್ತಾಂತರ ಮಾಡಲು ನಾನು ಎಲ್ಲಾ ಪ್ರಯತ್ನವನ್ನು ಮಾಡಿದ್ದೆ. ಆದರೆ ಒಂದು ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡಲು ಕನಿಷ್ಠ 06 ಎಕರೆ ಮೈದಾನಕ್ಕೆ ಹಾಗೂ 05 ಎಕರೆ ಸ್ಟೇಡಿಯಂ ನಿರ್ಮಾಣಕ್ಕೆ ಬೇಕು, ಜತೆಗೆ ಪಾರ್ಕಿಂಗ್, ಕ್ಲಬ್ ಹೌಸ್ ನಿರ್ಮಾಣಕ್ಕೂ ಕೂಡ ಜಾಗ ಬೇಕಾಗಿತ್ತು. ಆದರೆ 19.5 ಎಕರೆ ಜಾಗದ ಮಧ್ಯದಲ್ಲಿ ಒಂದು ನಿರ್ಜೀವ ಕೆರೆ ಇತ್ತು, ಅದನ್ನು ಸುಪ್ರೀಂ ಕೋರ್ಟ್…
ಶಿವಮೊಗ್ಗ: ಜಿಲ್ಲೆಯ ಸಾಗರದಲ್ಲಿ ಇಂದು ಮಹಿಳೆಯೊಬ್ಬರ ಮಾಂಗಲ್ಯ ಸರವನ್ನು ಬೈಕ್ ನಲ್ಲಿ ಬಂದಂತ ಇಬ್ಬರು ಕಳ್ಳರು ಕದ್ದು ಪರಾರಿಯಾಗಿರುವಂತ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಇಕ್ಕೇರಿ ರಸ್ತೆಯಲ್ಲಿ ಇಂದು ಸಂಜೆ ಈ ಘಟನೆ ನಡೆದಿದೆ. ಕೂಲಿ ಕೆಲಸ ಮಾಡುತ್ತಿದ್ದಂತ 60 ವರ್ಷದ ಮಹಿಳೆಯೊಬ್ಬರು ಇಕ್ಕೇರಿ ರಸ್ತೆಯಿಂದ ಜನ್ನತ್ ನಗರದ ತಮ್ಮ ಮನೆಗೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಮಹಿಳೆಯನ್ನು ಸ್ಕೂಟಿಯಲ್ಲಿ ಹಿಂಬಾಲಿಸಿ ತೆರಳಿದಂತ ಕಳ್ಳರು, ಹಿಂದಿನಿಂದ ಮಾಂಗಲ್ಯ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ. ಕಳ್ಳರು ಕದ್ದೊಯ್ದಂತ ಮಾಂಗಲ್ಯ ಸರವು 28 ಗ್ರಾಂ ತೂಕದ್ದು ಎಂಬುದಾಗಿ ಮಹಿಳೆ ತಿಳಿಸಿದ್ದಾರೆ. ಸರಗಳ್ಳತನ ಪ್ರಕರಣ ಸಂಬಂಧ ಸಾಗರ ನಗರ ಠಾಣೆಗೆ ತೆರಳಿ ಸೀತಮ್ಮ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಸಾಗರ ಟೌನ್ ಠಾಣೆಯ ಪೊಲೀಸರು ಕಾರ್ಯ ಪ್ರವೃತ್ತರಾಗಿದ್ದು, ಮಹಿಳೆ ಮಾಂಗಲ್ಯ ಸರ ಕಸಿದುಕೊಂಡು ಪರಾರಿಯಾಗಿರುವಂತ ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ. ವರದಿ: ವಸಂತ ಬಿ ಈಶ್ವರಗೆರೆ https://kannadanewsnow.com/kannada/male-mahadeshwara-hills-to-be-alcohol-free-siddaramaiah/ https://kannadanewsnow.com/kannada/here-are-the-key-highlights-of-the-state-cabinet-meeting-held-at-male-mahadeshwara-hills-today/
ಬೆಂಗಳೂರು: ಶಕ್ತಿ ಯೋಜನೆಯಡಿ ಸಾರಿಗೆ ಬಸ್ಸುಗಳಲ್ಲಿ ಉಚಿತವಾಗಿ ಮಹಿಳೆಯರು ಪ್ರಯಾಣಿಸುತ್ತಿದ್ದಾರೆ. ಈ ಯೋಜನೆಯ ಫಲಾನುಭವಿಗಳಿಗೆ ಗುಡ್ ನ್ಯೂಸ್ ಎನ್ನುವಂತೆ ಈ ವರ್ಷ 2000 ಹೊಸ ಬಸ್ ಖರೀದಿ ಮಾಡಲಾಗುತ್ತಿದೆ. ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ಹಂಚಿಕೊಂಡಿದ್ದು, ಸಕ್ತ ವರ್ಷ 2,000 ಬಸ್ಗಳನ್ನು ಖರೀದಿಸಿ ವಾಯುವ್ಯ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳಿಗೆ ತಲಾ 700 ಬಸ್ಗಳನ್ನು ನೀಡಲಾಗುವುದು. ಉಳಿದ ಬಸ್ಗಳು ಕೆಎಸ್ಆರ್ಟಿಸಿಗೆ ಸೇರಲಿವೆ ಎಂದು ತಿಳಿಸಿದ್ದಾರೆ. https://twitter.com/KarnatakaVarthe/status/1915331899838583248 https://kannadanewsnow.com/kannada/male-mahadeshwara-hills-to-be-alcohol-free-siddaramaiah/ https://kannadanewsnow.com/kannada/here-are-the-key-highlights-of-the-state-cabinet-meeting-held-at-male-mahadeshwara-hills-today/
ಬೆಂಗಳೂರು: ಕಾವೇರಿ ಮಾತೆಗೆ ಗಂಗಾರತಿ ಮಾದರಿಯಲ್ಲಿ ‘ಕಾವೇರಿ ಆರತಿ’ ನೆರವೇರಿಸುವ ಸಂಬಂಧ ರಾಜ್ಯ ಸರ್ಕಾರವು ಗುರುವಾರ ನಡೆದ ಸಚಿವ ಸಂಪುಟದಲ್ಲಿ 92 ಕೋಟಿ ರೂಪಾಯಿಯನ್ನು ಮೀಸಲಿಟ್ಟಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಇದಕ್ಕೆೆ ಕಾರಣೀಕರ್ತರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಚಲವರಾಯಸ್ವಾಮಿ ಅವರನ್ನು ಹಾಗೂ ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ ಅವರನ್ನು ಕಾವೇರಿ ಪ್ರಾಂತ್ಯದ ಮಹಾಜನತೆ ಪರವಾಗಿ ಅಭಿನಂದಿಸುತ್ತೇನೆ ಎಂದು ವಿಧಾನ ಪರಿಷತ್ ಶಾಸಕರಾದ ದಿನೇಶ್ ಗೂಳಿಗೌಡ ಹೇಳಿದ್ದಾರೆ. ದೇಶದ ಪುಣ್ಯ ನದಿಗಳಲ್ಲಿ ಕಾವೇರಿಯೂ ಒಂದು. ಅತ್ಯಂತ ಶ್ರೇಷ್ಠವಾದ ತಾಯಿ ಕಾವೇರಿಗೆ ಪೂಜೆ ಸಲ್ಲಿಸಲು ಈ ಅನುದಾನವನ್ನು ಬಳಸಿಕೊಳ್ಳಲಾಗುತ್ತದೆ. ಅಲ್ಲಿ ಕಾವೇರಿ ಆರತಿಗೆ ಸಂಬಂಧಪಟ್ಟಂತೆ ಎಲ್ಲ ಮೂಲಭೂತ ಸೌಕರ್ಯವನ್ನು ಕಲ್ಪಿಸಲು ಇಂದಿನ ಸಚಿವ ಸಂಪುಟವು 92 ಕೋಟಿ ರೂಪಾಯಿಗೆ ಅನುಮೋದನೆಯನ್ನು ನೀಡಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಕಾವೇರಿ ಆರತಿಗಾಗಿ ಮನವಿ ಮಾಡಿದ್ದ ಶಾಸಕರು: ಗಂಗಾರತಿ ಮಾದರಿಯಲ್ಲಿ ಕರ್ನಾಟಕದಲ್ಲಿ ಕಾವೇರಿ ಆರತಿ ಮಾಡುವ ಸಂಬಂಧ ಈ ಹಿಂದೆ…
ನಮಸ್ಕಾರ ಸ್ನೇಹಿತರೆ ಸಾಮಾನ್ಯವಾಗಿ ಅಶ್ವಿನಿ ಕುಮಾರರ ಹೆಸರನ್ನು ಕೇಳಿರುತ್ತೀರಿ ಇವರು ವೈದ್ಯ ದೇವತೆಗಳು ಋಗ್ವೇದದಲ್ಲಿ ದೈವಿಕ ಅವಳಿ ಕುದುರೆ ಸವಾರರು, ಮೋಡಗಳ ದೇವತೆಗಳು ಇವರು ಸೂರ್ಯೋದಯ ಮತ್ತು ಸೂರ್ಯಾಸ್ತದ ಹೊಳಪನ್ನು ಸಂಕೇತಿಸುತ್ತಾರೆ, ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ವಿದ್ವಾನ್ ವಿದ್ಯಾಧರ್ ತಂತ್ರಿ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9686268564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9686268564 ಸೂರ್ಯೋದಯಕ್ಕೆ ಮುಂಚೆ ಆಕಾಶದಲ್ಲಿ ಸುವರ್ಣ ರಥದಲ್ಲಿ ಕಾಣಿಸಿಕೊಳ್ಳುತ್ತಾರೆ ಮತ್ತು ಮನುಷ್ಯರಿಗೆ ಸಂಪತ್ತನ್ನು ದಯಪಾಲಿಸುತ್ತಾರೆ ಮತ್ತು…
ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ, ಭಾರತವು ಮುಂದಿನ ದಿನಗಳಲ್ಲಿ ಕದನ ವಿರಾಮವನ್ನು ನಿಲ್ಲಿಸುವುದಾಗಿ ಘೋಷಿಸಬಹುದು ಎಂಬುದಾಗಿ ಸರ್ಕಾರಿ ಮೂಲಗಳಿಂದ ತಿಳಿದು ಬಂದಿದೆ. ಗಡಿ ನಿಯಂತ್ರಣ ರೇಖೆ ಮತ್ತು ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ಪಾಕಿಸ್ತಾನವು ತನ್ನ ಬದ್ಧತೆಗಳನ್ನು ಪಾಲಿಸಲು ಸಾಧ್ಯವಾಗದ ಕಾರಣ ಇದನ್ನು ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಸರ್ಕಾರದ ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಅಂದಹಾಗೆ ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಏಪ್ರಿಲ್.22ರಂದು ಭಯೋತ್ಪಾದಕರು ಅಟ್ಟಹಾಸ ಮೆರೆದಿದ್ದರು. ಗುಂಡಿನ ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟಿದ್ದರು. https://kannadanewsnow.com/kannada/male-mahadeshwara-hills-to-be-alcohol-free-siddaramaiah/ https://kannadanewsnow.com/kannada/our-government-is-committed-to-eradicating-backward-district-tag-attached-to-chamarajanagar-deputy-cm-dk-shivakumar/
ಬೆಂಗಳೂರು: ಮುಂಗಾರು ಮಳೆಯನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣಿಕರ ಸುರಕ್ಷತೆ ಮತ್ತು ರೈಲುಗಳ ಸುಗಮ ಸಂಚಾರಕ್ಕಾಗಿ ನೈರುತ್ಯ ರೈಲ್ವೆಯ ವ್ಯಾಪ್ತಿಯಲ್ಲಿ ಸಂಚರಿಸುವ ಕೆಲವು ರೈಲುಗಳ ವೇಳಾಪಟ್ಟಿಯನ್ನು ಬದಲಾಯಿಸಲಾಗಿದೆ ಎಂದು ಕೊಂಕಣ ರೈಲ್ವೆ ನಿಗಮ ನಿಯಮಿತ ತಿಳಿಸಿದೆ. ಈ ಪರಿಷ್ಕೃತ ವೇಳಾಪಟ್ಟಿ 2025ರ ಜೂನ್ ಹದಿನೈದರಿಂದ ಅಕ್ಟೋಬರ್ ಇಪ್ಪತ್ತರವರೆಗೆ ಜಾರಿಯಲ್ಲಿರುತ್ತದೆ. ಪರಿಷ್ಕೃತ ಸಮಯವು 2025ರ ಜೂನ್ ಹದಿನೈದರಂದು ಅಥವಾ ನಂತರ ತಮ್ಮ ಮೂಲ ನಿಲ್ದಾಣಗಳಿಂದ ಹೊರಡುವ ರೈಲುಗಳಿಗೆ ಅನ್ವಯಿಸುತ್ತದೆ. ಮುಂಗಾರು ವೇಳಾಪಟ್ಟಿ ಅನ್ವಯವಾಗುವ ರೈಲುಗಳ ವಿವರ: 1. ರೈಲು ಸಂಖ್ಯೆ 16595/16596 ಕೆಎಸ್ಆರ್ ಬೆಂಗಳೂರು–ಕಾರವಾರ–ಕೆಎಸ್ಆರ್ ಬೆಂಗಳೂರು ಡೈಲಿ ಎಕ್ಸ್ ಪ್ರೆಸ್. 2. ರೈಲು ಸಂಖ್ಯೆ 16585/16586 ಎಸ್ಎಮ್ವಿಟಿ ಬೆಂಗಳೂರು–ಮುರ್ಡೇಶ್ವರ–ಎಸ್ಎಮ್ವಿಟಿ ಬೆಂಗಳೂರು ಡೈಲಿ ಎಕ್ಸ್ ಪ್ರೆಸ್. 3. ರೈಲು ಸಂಖ್ಯೆ 16515/16516 ಯಶವಂತಪುರ–ಕಾರವಾರ–ಯಶವಂತಪುರ ಟ್ರೈ-ವೀಕ್ಲಿ ಎಕ್ಸ್ ಪ್ರೆಸ್. 4. ರೈಲು ಸಂಖ್ಯೆ 12741/12742 ವಾಸ್ಕೋ-ಡ-ಗಾಮಾ – ಪಾಟ್ನಾ – ವಾಸ್ಕೋ-ಡ-ಗಾಮಾ ಸಾಪ್ತಾಹಿಕ ಸೂಪರ್ಫಾಸ್ಟ್ಎಕ್ಸ್ ಪ್ರೆಸ್. 5. ರೈಲು ಸಂಖ್ಯೆ 11097/11098 ಪುಣೆ–ಎರ್ನಾಕುಲಂ–ಪುಣೆ ಸಾಪ್ತಾಹಿಕ ಎಕ್ಸ್ ಪ್ರೆಸ್. ಈ ರೈಲುಗಳಲ್ಲಿ…
ಬೆಂಗಳೂರು: ರಾಜ್ಯ ಸರ್ಕಾರದಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಜಿಲ್ಲಾವಾರು ಮತ್ತು ವಲಯವಾರು ಅತಿ ಹೆಚ್ಚು ಅಂಕ ಗಳಿಸಿದ ಸರ್ಕಾರಿ ಪ್ರೌಢ ಶಾಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕವಾಗಿ ಉಚಿತ ಲ್ಯಾಪ್ ಟಾಪ್ ವಿತರಣೆ ಮಾಡಲು ನಿರ್ಧರಿಸಿದೆ. ಈ ಸಂಬಂಧ ರಜ್ಯ ಸರ್ಕಾರದಿಂದ ನಡವಳಿಯನ್ನು ಹೊರಡಿಸಿದ್ದು, ನಿರ್ದೇಶಕರು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ, ಬೆಂಗಳೂರು, ಇವರ ಪತ್ರದಲ್ಲಿ, ಏಪ್ರಿಲ್-2024 ಮಾಹೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 35 ಶೈಕ್ಷಣಿಕ ಜಿಲ್ಲೆಗಳ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ವ್ಯಾಸಂಗ ಮಾಡಿ ಅತಿ ಹೆಚ್ಚು ಅಂಕ ಪಡೆದ ಪ್ರತಿ ಜಿಲ್ಲೆಯ ಮೂರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕವಾಗಿ ಲ್ಯಾಪ್ಟಾಪ್ ವಿತರಿಸಲಾಗುತ್ತಿದ್ದು, 2024ನೇ ಸಾಲಿಗೆ ಜಿಲ್ಲಾವಾರು 115 ಮತ್ತು ಬ್ಲಾಕ್ವಾರು 641 ಒಳಗೊಂಡಂತೆ ಒಟ್ಟಾರೆಯಾಗಿ 756 ಫಲಾನುಭವಿಗಳಿಗೆ ಲ್ಯಾಪ್ಟಾಪ್ ವಿತರಿಸಲು ಈಗಾಗಲೇ ಟೆಂಡ ಪ್ರಕ್ರಿಯೆ ಕೈಗೊಂಡು ಸರಬರಾಜುದಾರರನ್ನು ಗುರುತಿಸಲಾಗಿದ್ದು, ಈ ಸಂಬಂಧ ರೂ.3,25,16,940/-ಗಳ ಅನುದಾನದ ಅಗತ್ಯವಿದ್ದು, ಈಗಾಗಲೇ ನಿಗದಿಪಡಿಸಲಾದ ರೂ.280.00 ಲಕ್ಷಗಳ ಎದುರಾಗಿ ರೂ.80.00 ಲಕ್ಷಗಳ ಅನುದಾನ ಒದಗಿಸಲಾಗಿದ್ದು, ಉಳಿಕೆ…
ಮಲೆಮಹದೇಶ್ವರ ಬೆಟ್ಟ : “ದೇಶದ ಭದ್ರತೆ ವಿಚಾರವನ್ನು ನಾವು ರಾಜಕೀಯಕ್ಕೆ ಬಳಸಿಕೊಳ್ಳಲು ಇಷ್ಟಪಡುವುದಿಲ್ಲ. ಕೆಲವರು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಈ ನೆಲದ ಕಾನೂನಿನ ಪ್ರಕಾರ ಎಲ್ಲವೂ ನಡೆಯುತ್ತದೆ. ನಮಗೆ ದೇಶದ ಐಕ್ಯತೆ ಮುಖ್ಯ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದರು. ರಾಹುಲ್ ಗಾಂಧಿ ಅವರು ದೇಶದ ಹೊರಗಡೆ ಇದ್ದಾಗಲೇ ಭಯೋತ್ಪಾದಕ ದಾಳಿಯಾಗುತ್ತವೆ ಎನ್ನುವ ಬಿಜೆಪಿ ಐಟಿ ಸೆಲ್ ಮಾಡಿದ ಆರೋಪದ ವಿರುದ್ದ ಎಫ್ ಐಆರ್ ದಾಖಲಾಗಿರುವ ಬಗ್ಗೆ ಕೇಳಿದಾಗ, “ಇಂತಹ ಸಂದಿಗ್ಧ ಸಂದರ್ಭದಲ್ಲಿ ಕೇಂದ್ರ ಸರ್ಕಾರಕ್ಕೆ ನಾವು ಬೆಂಬಲ ನೀಡಬೇಕು. ದೇಶದಲ್ಲಿ ಶಾಂತಿ ಮುಖ್ಯ” ಎಂದರು. ದೇಶದ ಮುಸ್ಲಿಂ ಸಮುದಾಯ ಹಿಂದುಗಳ ವಿರುದ್ಧ ಇದ್ದಾರೆ ಎನ್ನುವ ವ್ಯಾಖ್ಯಾನ ಹುಟ್ಟುತ್ತಿರುವ ಬಗ್ಗೆ ಕೇಳಿದಾಗ, “ನಾವು ಶಾಂತಿಯನ್ನು ಕಾಪಾಡಬೇಕು. ಯಾರೂ ಸಹ ಇದನ್ನು ರಾಜಕೀಯಕರಣ ಮಾಡಬಾರದು. ಭಾರತೀಯರನ್ನು ಕಾಪಾಡಬೇಕು ಎನ್ನುವುದು ಮುಖ್ಯವಾಗಬೇಕು” ಎಂದು ಹೇಳಿದರು. https://kannadanewsnow.com/kannada/male-mahadeshwara-hills-to-be-alcohol-free-siddaramaiah/ https://kannadanewsnow.com/kannada/here-are-the-key-highlights-of-the-state-cabinet-meeting-held-at-male-mahadeshwara-hills-today/













