Author: kannadanewsnow09

ಬೆಂಗಳೂರು: ಇಂದಿನಿಂದ ನಗರದ ಲಾಲ್ ಬಾಗ್ ನಲ್ಲಿ ಫಲಪುಷ್ಪ ಪ್ರದರ್ಶನ ಆರಂಭಗೊಳ್ಳಲಿದೆ. ಇಂದಿನಿಂದ ಜನವರಿ 26ರವರೆಗೆ ಗಣರಾಜ್ಯೋತ್ಸವದ ಪ್ರಯುಕ್ತ ಫಲಪುಷ್ಪ ಪ್ರದರ್ಶ ನಡೆಯಲಿದೆ. ಈ ಹಿನ್ನಲೆ ಸಂಚಾರ ಮಾರ್ಗ ಬದಲಾವಣೆಯನ್ನು ಮಾಡಲಾಗಿದೆ.  ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಬೆಂಗಳೂರು ನಗರ ಸಂಚಾರ ಪೊಲೀಸರು ಮಾಹಿತಿ ನೀಡಿದ್ದು,  ತೋಟಗಾರಿಕೆ ಇಲಾಖೆಯ ವತಿಯಿಂದ ದಿನಾಂಕ:16/01/2025 ರಿಂದ ದಿನಾಂಕ:26/01/2025 ರವರೆಗೆ ಒಟ್ಟು 11 ದಿನಗಳ ವರೆಗೆ ಲಾಲ್‌ಬಾಗ್‌ನಲ್ಲಿ “ಗಣರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿರುತ್ತದೆ. ಈ ಫಲಪುಷ್ಪ ಪ್ರದರ್ಶನಕ್ಕೆ ಗಣ್ಯವ್ಯಕ್ತಿಗಳು, ಸಾರ್ವಜನಿಕರು, ಪ್ರವಾಸಿಗರು ದೇಶ-ವಿದೇಶಿ ಪ್ರೇಕ್ಷಕರು ಹಾಗೂ ಶಾಲಾ ಮಕ್ಕಳುಗಳನ್ನೊಳಗೊಂಡಂತೆ ಸುಮಾರು 8 ರಿಂದ 10 ಲಕ್ಷ ಜನ ಆಗಮಿಸುವ ನಿರೀಕ್ಷೆ ಇರುವುದರಿಂದ ವಿಲ್ಸನ್ ಗಾರ್ಡನ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿ ಹಾಗು ಸುತ್ತಮುತ್ತಲ್ಲಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಲಿದ್ದು, ಸುಗಮ ಸಂಚಾರ ಏರ್ಪಡಿಸುವ ನಿಟ್ಟಿನಲ್ಲಿ ಈ ಕೆಳಕಂಡಂತೆ ಕ್ರಮ ಕೈಗೊಳ್ಳಲಾಗಿದೆ ಎಂದಿದೆ.  ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಿರುವ ಸ್ಥಳಗಳು 1. ಡಾ|| ಮರಿಗೌಡ…

Read More

ಬೆಂಗಳೂರು: ನಾಳೆ ಸಿಎ ಪರೀಕ್ಷೆಯ ಸಮಯಕ್ಕೆ ಬೆಂಗಳೂರು ನಗರ ವಿವಿಯಿಂದ ಬಿಕಾಂ ಪರೀಕ್ಷೆಯನ್ನು ನಿಗದಿ ಪಡಿಸಿ ಎಡವಟ್ಟು ಮಾಡಿದ್ದರ ಬಗ್ಗೆ ಕನ್ನಡ ನ್ಯೂಸ್ ನೌ ಬೆಂಗಳೂರು ವಿವಿಯಿಂದ ಯಡವಟ್ಟು: ನಾಳೆ ‘CA ಪರೀಕ್ಷೆ’ಯ ಸಮಯಕ್ಕೆ ಬಿಕಾಂ ಪರೀಕ್ಷೆ ನಿಗದಿ ಎಂಬುದಾಗಿ ಸುದ್ದಿಯನ್ನು ಪ್ರಕಟಿಸಿತ್ತು. ಈ ಬೆನ್ನಲ್ಲೇ ನಾಳೆ ನಡೆಸಲು ನಿಗದಿ ಪಡಿಸಿದ್ದಂತ ಎಲ್ಲಾ ಸ್ನಾತಕ ಪದವಿಯ ಪರೀಕ್ಷೆಯನ್ನು ಮುಂದೂಡಿಕೆ ಮಾಡಿ ಆದೇಶಿಸಲಾಗಿದೆ. ಈ ಕುರಿತಂತೆ ಬೆಂಗಳಊರು ನಗರ ವಿವಿಯ ಸೆಂಟ್ರಲ್ ಕ್ಯಾಂಪಸ್ ನ ಮೌಲ್ಯಮಾಪನದ ಕುಲಸಚಿವರು ಅಧಿಸೂಚನೆ ಹೊರಡಿಸಿದ್ದಾರೆ. ಅದರಲ್ಲಿ ದಿನಾಂಕ 16-01-2025ರಂದು ಮಧ್ಯಾಹ್ನ 2 ಗಂಟೆಗೆ ನಿಗದಿಯಾಗಿದ್ದ ಬೆಂಗಳೂರು ನಗರ ವಿವಿಯ ಎಸ್ಇಪಿ 1ನೇ ಸೆಮಿಸ್ಟರ್ ಎಲ್ಲಾ ಸ್ನಾತಕ ಪದವಿ ಕೋರ್ಸ್ ಗಳ ಪರೀಕ್ಷೆಯನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ ಎಂದಿದ್ದಾರೆ. ಇನ್ನು ಮುಂದೂಡಲಾಗಿರುವ ಪರೀಕ್ಷೆಯ ದಿನಾಂಕವನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು ಎಂಬುದಾಗಿ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಮತ್ತು ಪ್ರಾಂಶುಪಾಲರುಗಳಿಗೆ ತಿಳಿಸಿದ್ದಾರೆ. https://kannadanewsnow.com/kannada/do-you-know-what-home-minister-dr-g-parameshwara-said-about-the-caste-census-report/ https://kannadanewsnow.com/kannada/the-state-government-has-given-green-signal-to-fill-up-the-vacant-posts-of-teachers-in-private-aided-high-schools/

Read More

ಬೆಂಗಳೂರು : ಜಾತಿಗಣತಿ ವರದಿಯ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸುವುದು ಈಗಿನ ಕೆಲಸ. ಅನುಷ್ಟಾನಗೊಳಿಸುವುದು ಸರ್ಕಾರದ ವಿವೇಚನೆಗೆ ಬಿಟ್ಟಿರುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು. ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿಗಣತಿ ವರದಿಯ ಸೀಲ್ಡ್ ಕವರ್‌ನ್ನು ಸಚಿವ ಸಂಪುಟ ಸಭೆಯಲ್ಲಿ ತೆರೆಯಬೇಕು. ಅದಕ್ಕು ಮುಂಚೆ ತೆರೆಯಬಾರದು. ಒಂದು ವೇಳೆ ತೆರೆದರೆ ಮಾಹಿತಿ ಸೋರಿಕೆಯಾಗುವ ಸಾಧ್ಯತೆ ಇರುತ್ತದೆ ಎಂದರು. ವರದಿ ಬಗ್ಗೆ ಚರ್ಚೆ ಆಗುತ್ತದೆಯೇ ಎಂಬುದರ ಕುರಿತು ಹೇಳಲಾಗುವುದಿಲ್ಲ. ಒಂದಷ್ಟು ವಿಷಯಗಳು ಗೊತ್ತಾಗುತ್ತವೆ. ಸರ್ಕಾರವು 160 ಕೋಟಿ ರೂ. ಖರ್ಚು ಮಾಡಿ ವರದಿ ತರಿಸಿಕೊಳ್ಳಲಾಗಿದೆ. ವರದಿಯಲ್ಲಿರುವ ಅಂಶಗಳು ಸಾರ್ವಜನಿಕರಿಗೆ ಗೊತ್ತಾಗಬೇಕಲ್ಲವೇ ಅನುಷ್ಟಾನಗೊಳಿಸುವುದು ಸರ್ಕಾರದ ವಿವೇಚನೆಗೆ ಬಿಟ್ಟಿರುವ ವಿಚಾರ. ಸರ್ಕಾರದ ತೀರ್ಮಾನ ಅಂತಿಮ. ಜಾತಿಗಣತಿ ವರದಿಯಲ್ಲಿರುವ ಮಾಹಿತಿ ಹೊರಗಡೆ ಬರಬೇಕಲ್ಲವೇ? ಅದಕ್ಕಾಗಿ ಒತ್ತಾಯ ಮಾಡಲಾಗುತ್ತಿದೆ ಎಂದು ಹೇಳಿದರು. ಸಮುದಾಯಗಳ ಸಭೆಗಳನ್ನು ಪಕ್ಷವೇ ಮಾಡಲಿ.‌ ಅದರಲ್ಲಿ ಏನು ತಪ್ಪಿದೆ. ನಮಗೆ ನಮ್ಮ ಸಮಸ್ಯೆ ಬಗೆಹರಿಯಬೇಕು. ಪಕ್ಷ ಅಂದರೆ‌ ನಾವಲ್ಲವೇ? ಪಕ್ಷ ಅಂದರೆ ಬೇರೆ…

Read More

ಬಳ್ಳಾರಿ : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯವೆಸಗಲಾಗಿದೆ. ಮನೆಯ ಮುಂದೆ ಆಟವಾಡುತ್ತಿದ್ದಂತ 5 ವರ್ಷದ ಬಾಲಕಿಯ ಮೇಲೆಯೇ ಅತ್ಯಾಚಾರ ಎಸಗಲಾಗಿದೆ. ಬಳ್ಳಾರಿಯ ತೋರಣಗಲ್ ನ ಖಾಸಗಿ ಕಾರ್ಖಾನೆಯೊಂದರಲ್ಲಿ ಉತ್ತರ ಭಾರತದ ದಂಪತಿಗಳು ಕೆಲಸ ಮಾಡುತ್ತಿದ್ದರು. ಇವರಿಗೆ 5 ವರ್ಷದ ಪುತ್ರಿ ಇದ್ದರು. ಆಕೆಯನ್ನು ಪುಸಲಾಯಿಸಿ ಕರೆದೊಯ್ದಿರುವಂತ ಬಿಹಾರ ಮೂಲದ ವ್ಯಕ್ತಿಯೊಬ್ಬ, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರದಿಂದಾಗಿ ನಿತ್ರಾಣಗೊಂಡಿದ್ದಂತ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶಸ್ತ್ರಚಿಕಿತ್ಸೆಯ ಮೂಲಕ ಮಗುವಿಗೆ ಚಿಕಿತ್ಸೆ ನೀಡಲಾಗಿದೆ. ಹೀಗಾಗಿ ಬಾಲಕಿ ಪ್ರಾಣಾಯಪಾಯದಿದಂ ಪಾರಾಗಿದ್ದಾಳೆ. ಬಳ್ಳಾರಿಯ ಸರ್ಕಾರಿ ಆರೋಗ್ಯ ಸಂಸ್ಥೆಯ ವೈದ್ಯರು 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿರುವುದನ್ನು ಖಚಿತ ಪಡಿಸಿದ್ದಾರೆ. ಇದೀಗ ಅತ್ಯಾಚಾರವೆಸಗಿದಂತ ಆರೋಪಿಯ ವಿರುದ್ಧ ಪೋಕ್ಸೋ ಕೇಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕಿಯನ್ನು ಪುಸಲಾಯಿಸಿ ಆರೋಪಿ ಕರೆದೊಯ್ದಂತ ವೀಡಿಯೋ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಆತನನ್ನು ಬಂಧಿಸುವಂತೆ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯೊಂದು ಬಳ್ಳಾರಿಯ ಡಿಸಿ ಕಚೇರಿ ಎದುರು ಪ್ರತಿಭಟನೆ ಕೂಡ ನಡೆಸಿತು. https://kannadanewsnow.com/kannada/if-you-are-using-these-things-at-home-stop-today-cancer-can-occur/ https://kannadanewsnow.com/kannada/the-state-government-has-given-green-signal-to-fill-up-the-vacant-posts-of-teachers-in-private-aided-high-schools/

Read More

ಮೈಸೂರು: ಜಿಲ್ಲೆಯ ಇನ್ಪೋಸಿಸ್ ಕ್ಯಾಂಪಸ್ ನಲ್ಲಿನ ಚಿರತೆ ಕಾಣಿಸಿಕೊಂಡಿತ್ತು. ಹೀಗಾಗಿ ಕಳೆದ 16 ದಿನಗಳಿಂದ ಚಿರತೆ ಸೆರೆಗಾಗಿ ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಆದರೇ ಈವರೆಗೆ ಚಿರತೆ ಚಲನವಲನ ಪತ್ತೆಯಾಗದ ಕಾರಣ ಸೆರೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಕಳೆದ 16 ದಿನಗಳಿಂದ ಇನ್ಪೋಸಿಸ್ ಕ್ಯಾಂಪಸ್ ನಲ್ಲಿ ಚಿರತೆ ಸೆರೆಗಾಗಿ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ತೊಡಗಿದ್ದರು. ಕ್ಯಾಮರಾ ಟ್ರ್ಯಾಕರ್, ಡ್ರೋನ್ ಕ್ಯಾಮರಾ ಮೂಲಕ ಕಾರ್ಯಾಚರಣೆಗೆ ಇಳಿಯಲಾಗಿತ್ತು. ಆದರೇ ಈವರೆಗೆ ಚಿರತೆಯ ಯಾವುದೇ ಚಲನವಲನ ಹೆಜ್ಜೆ ಗುರುತು ಪತ್ತೆಯಾಗಿಲ್ಲ. ಚಿರತೆ ಇರುವಿಕೆಯ ಬಗ್ಗೆಯೂ ಯಾವುದೇ ಕುರುಹುಗಳು ಕಂಡು ಬಂದಿಲ್ಲ. ಕ್ಯಾಂಪಸ್ ಸೇರಿದಂತೆ ಹೊರ ಪ್ರದೇಶದಲ್ಲೂ ಚಿತರೆ ಇರುವಿಕೆಯ ಬಗ್ಗೆ ಪರಿಶೀಲನೆ ನಡೆಸಲಾಗಿತ್ತು. ಆದರೇ ಅಲ್ಲಿಯೂ ಶೋಧ ಕಾರ್ಯಾಚರಣೆಯ ವೇಳೆಯಲ್ಲಿ ಚಿರತೆ ಪತ್ತೆಯಾಗಿಲ್ಲ. ಚಿರತೆ ಸೆರೆಗಾಗಿ ಏರಿಯಲ್ ಸರ್ಚ್ ಗಾಗಿ 2 ಡ್ರೋನ್ ಕೂಡ ಬಳಕೆ ಮಾಡಲಾಗಿತ್ತು. ಆದರೇ ಈವರೆಗೆ ಚಿರತೆ ಸುಳಿವು ಸಿಕ್ಕಿಲ್ಲ. ಈ ಎಲ್ಲಾ ಕಾರಣದಿಂದ ರಾತ್ರಿ ವೇಳೆ ನಿಗಾ, ಶೋಧ ಕಾರ್ಯಾಚರಣೆ…

Read More

ಮಧ್ಯಪ್ರದೇಶ: ಗ್ವಾಲಿಯರ್ ಜಿಲ್ಲೆಯಲ್ಲಿ 20 ವರ್ಷದ ಯುವತಿಯೊಬ್ಬಳು ತನ್ನ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಕ್ಕಾಗಿ ಮತ್ತು ತನ್ನ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗಲು ಒತ್ತಾಯಿಸಿದ್ದಕ್ಕಾಗಿ ಆಕೆಯನ್ನು ತಂದೆ ಮತ್ತು ಸೋದರಸಂಬಂಧಿಯು ಪೊಲೀಸರು ಮುಂದೆಯೇ ಗುಂಡಿಕ್ಕಿ ಕೊಂದಿದ್ದಾರೆ. ಘಟನೆಯ ನಂತರ ಸಂತ್ರಸ್ತೆಯ ತಂದೆಯನ್ನು ಪೊಲೀಸರು ಬಂಧಿಸಿದ್ದು, ಘಟನೆಯ ನಂತ್ರ ಸೋದರಸಂಬಂಧಿ ನಾಪತ್ತೆಯಾಗಿದ್ದು, ಆತನನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಜನವರಿ 14 ರ ಮಂಗಳವಾರ ಗ್ವಾಲಿಯರ್ನ ಗೋಲ್ ಕಾ ಮಂದಿರ್ ಪ್ರದೇಶದಲ್ಲಿ ಈ ವಿಷಯದ ಬಗ್ಗೆ ಕರೆಯಲಾಗಿದ್ದ ಪಂಚಾಯತ್ (ಸಮುದಾಯ ಸಭೆ) ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಸಭೆ ನಡೆಯುತ್ತಿರುವಾಗ, ಮಹಿಳೆ ಬಿಡುಗಡೆ ಮಾಡಿದ ವೀಡಿಯೊವನ್ನು ತನಿಖೆ ಮಾಡುವ ಸಲುವಾಗಿ ಪೊಲೀಸ್ ತಂಡವು ಸ್ಥಳಕ್ಕೆ ತಲುಪಿತು. ವೀಡಿಯೊದಲ್ಲಿ, ತನು ಗುರ್ಜರ್ ಎಂಬ ಮಹಿಳೆ ತನ್ನ ತಂದೆ ಮಹೇಂದ್ರ ಗುರ್ಜರ್ ಮತ್ತು ಇತರ ಸಂಬಂಧಿಕರು ತನ್ನನ್ನು ಮನೆಯಲ್ಲಿ ಬಂಧಿಯಾಗಿರಿಸಿದ್ದಾರೆ. ತನ್ನ ವ್ಯವಸ್ಥಿತ ಮದುವೆಯನ್ನು ವಿರೋಧಿಸಿದ್ದಕ್ಕಾಗಿ ಥಳಿಸಿದ್ದಾರೆ ಎಂದು ಆರೋಪಿಸಿದ್ದರು. ನಾನು ಆರು ವರ್ಷಗಳಿಂದ ಒಬ್ಬ ವ್ಯಕ್ತಿಯೊಂದಿಗೆ ಸಂಬಂಧ…

Read More

ಬೆಂಗಳೂರು; ಕಿಯೋನಿಕ್ಸ್ ಹಗರಣ ಸಂಬಂಧ ರಾಜ್ಯ ಸರ್ಕಾರದಿಂದ ಕಿರುಕುಳ ಆರೋಪಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಜಂಟಿ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದ್ದಾರೆ. ಅವರು ಏನು ಹೇಳಿದ್ರು ಅಂತ ಮುಂದೆ ಓದಿ. ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ದಯೆಯಿಂದ ಕಿಯೋನಿಕ್ಸ್ ಸರಬರಾಜುದಾರರು ದಯಾಮರಣ ಕೋರುವಂತಾಗಿದೆಯೇ ಹೊರತು ನಮ್ಮಿಂದಲ್ಲ. ಭ್ರಷ್ಟಾಚಾರದೆಡೆಗಿನ ನಮ್ಮ ಸರ್ಕಾರದ ಕಠಿಣ ನಿಲುವಿಗೆ ಹಾಗೂ ಜನರ ತೆರೆಗೆ ಹಣದ ದುರ್ಬಳಕೆಯನ್ನು ತಡೆಯುವ ನಮ್ಮ ಪ್ರಯತ್ನಕ್ಕೆ ಬಿಜೆಪಿಯವರು “ಕಿರುಕುಳ“ ಎಂದು ಹೆಸರು ಕೊಡುವುದು ಎಷ್ಟು ಸರಿ? ಪಾರದರ್ಶಕತೆಯು ಭ್ರಷ್ಟರಿಗೆ ಕಿರುಕುಳದಂತೆ ಭಾಸವಾಗುವುದು ಸಹಜವೇ! ಇಂದು ಕಿಯೋನಿಕ್ಸ್ ಸರಬರಾಜುದಾರರ ಬಿಲ್ ಬಾಕಿ ಉಳಿದಿದೆ ಎಂದರೆ ಅದಕ್ಕೆ ಹಿಂದಿನ ಭ್ರಷ್ಟ ಬಿಜೆಪಿ ಸರ್ಕಾರ, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು, ಬೊಮ್ಮಯಿಯವರು ಹಾಗೂ ಮಾಜಿ ಸಚಿವ ಅಶ್ವಥ್ ನಾರಾಯಣ್ ಅವರೇ ನೇರ ಕಾರಣ. ಜನಸಾಮಾನ್ಯರ ಬೆವರಿನ ನೂರಾರು ಕೋಟಿ ತೆರಿಗೆ ಹಣದ ಪ್ರತಿ ರೂಪಾಯಿಗೂ ಸಮರ್ಪಕ ಲೆಕ್ಕ ಇಡುವುದು ನಮ್ಮ ಹೊಣೆ ಮತ್ತು ಅತ್ಯಗತ್ಯದ…

Read More

ಬೆಂಗಳೂರು: ನಾಳೆ ಸಿಎ ಪರೀಕ್ಷೆ ನಡೆಸಲು ನಿಗದಿ ಪಡಿಸಲಾಗಿದೆ. ಇದೇ ಸಮಯಕ್ಕೆ ಇಂದು ದಿಢೀರ್ ಬೆಂಗಳೂರು ವಿವಿಯಿಂದ ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟ ಎನ್ನುವಂತೆ ನಾಳೆ ಬಿಕಾಂ ಪರೀಕ್ಷೆಯನ್ನು ಇರಿಸಲಾಗಿದೆ. ಇದೀಗ ನಾಳೆ ಸಿಎ ಪರೀಕ್ಷೆ ಬರೆಯೋದೋ ಅಥವಾ ಬಿಕಾಂ ಪರೀಕ್ಷೆ ಬರೆಯೋದೋ ಎನ್ನುವ ಆತಂಕದಲ್ಲಿ ವಿದ್ಯಾರ್ಥಿಗಳನ್ನು ದೂಡಲಾಗಿದೆ. ಈ ಕುರಿತಂತೆ ಮಾಜಿ ಸಚಿವ ಎಸ್ ಸುರೇಶ್ ಕುಮಾರ್ ಪೋಸ್ಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ. ಅವರ ಪೋಸ್ಟ್ ಸಾರಾಂಶ ಈ ಕೆಳಕಂಡಂತಿದೆ. ನನ್ನ ಮನೆಗೆ ಇಂದು ಸಂಜೆ ಓರ್ವ ಫಸ್ಟ್ ಬಿಕಾಂ ವಿದ್ಯಾರ್ಥಿನಿ ತನ್ನ ತಂದೆಯ ಜೊತೆ ಬಂದಿದ್ದರು. ನಾಳೆ ಬೆಳಗ್ಗೆ (16.1.2025, ಗುರುವಾರ) 9.30 ಗಂಟೆಗೆ ಅವರಿಗೆ ಮೊದಲನೇ ಬಿಕಾಂ ನ ಪರೀಕ್ಷೆ ನಿಗದಿಯಾಗಿತ್ತು. ಆಕೆ ಸಿಎ ಶಿಕ್ಷಣವನ್ನು ಸಹ ಪಡೆಯುತ್ತಿರುವುದರಿಂದ, ಸಿಎ ಪರೀಕ್ಷೆ ಮಧ್ಯಾಹ್ನ 2 ಗಂಟೆಗೆ ನಿಗದಿಯಾಗಿದೆ. ಆದರೆ ಇಂದು ಸಂಜೆ 4:30ಗೆ ಆಕೆಯ ಮೊಬೈಲ್ ಗೆ ಬೆಂಗಳೂರು ನಗರ ವಿಶ್ವವಿದ್ಯಾನಿಲಯದಿಂದ ಈ ಕೆಳಕಂಡ ಮೆಸೇಜ್ ಬಂದು “ನಾಳೆ…

Read More

ಜ್ಯೋತಿಷ್ಯ ಎನ್ನುವುದು ವೇದದ ಒಂದು ಅಂಗ. ವೇದವು ಷಡಂಗ ಗಳಿಂದ ಕೂಡಿದೆ. ಆರು ಅಂಗಗಳಲ್ಲಿ ಜ್ಯೋತಿಷ್ಯವು ವೇದದ ಕಣ್ಣು ಎಂದೇ ಪರಿಪೂರ್ಣತೆಯನ್ನು ಪಡೆದಿದೆ. ಜ್ಯೋತಿಷ್ಯವು ಸುಳ್ಳು ಎನ್ನುವುದಾದರೆ ವೇದ ಕೂಡ ಸುಳ್ಳು ಎಂದಂತೆ ಆಗುತ್ತದೆ. ವೇದ ಸುಳ್ಳಾದರೆ ಇಂದು ದೇವಾಲಯಗಳಲ್ಲಿ ಮಾಡುವ ಸಕಲ ಪೂಜಾವಿಧಾನಗಳು ಸಕಲ ವೈದಿಕ ಮಂತ್ರಗಳು ಅಷ್ಟಾದಶ ಪುರಾಣಗಳು, ಉಪನಿಷತ್ತುಗಳು, ಭಗವದ್ಗೀತೆ ,ಪಂಚಾಂಗಗಳು (ವಾರ ತಿಥಿ ನಕ್ಷತ್ರ ಯೋಗ ಕರಣ) ಗ್ರಹಣ ಮುಹೂರ್ತಗಳು ಉತ್ಸವಗಳು ರಥೋತ್ಸವಗಳು ದೇವ ಪ್ರತಿಷ್ಠೆಗಳು ಸಂಪ್ರದಾಯಬದ್ಧ ದೈವಿಕ ವಿಷಯಗಳು ಇತ್ಯಾದಿಗಳೆಲ್ಲವೂ ಕೂಡ ಸುಳ್ಳು ಎಂದಂತೆ ಆಗುತ್ತದೆ. ಈ ಮಾತನ್ನು ಏಕೆ ಹೇಳುತ್ತಿದ್ದೇನೆ ಎಂದರೆ ಇತ್ತೀಚಿನ ದಿನಗಳಲ್ಲಿ ಜ್ಯೋತಿಷ್ಯದ ಬಗ್ಗೆ ಅಲ್ಲಸಲ್ಲದ ಹೇಳಿಕೆಗಳು ಕುಚೋದ್ಯ ಉಕ್ತಿಗಳು ಅಲ್ಲಲ್ಲಿ ಕಂಡುಬರುತ್ತವೆ. ನವ ನಾಗರಿಕತೆಯು ಪ್ರತಿಯೊಂದನ್ನು ವೈಜ್ಞಾನಿಕ ದೃಷ್ಟಿಯಲ್ಲಿ ಸ್ವೀಕರಿಸುವುದರಿಂದ ಜ್ಯೋತಿಷ್ಯವು ಈ ಕಾಲಘಟ್ಟದ ವಿಜ್ಞಾನಕ್ಕೂ ಕೂಡ ಪರಿಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯತೆ ಕಡಿಮೆ ಇರುವುದರಿಂದ ಇದರ ಬಗ್ಗೆ ಅವಹೇಳನ ಮಾಡುವ ಒಂದು ಸಮೂಹ ಸೃಷ್ಟಿಯಾದದ್ದು ಸುಳ್ಳಲ್ಲ….! ಅದಕ್ಕಾಗಿಯೇ ಈ…

Read More

ಬೆಂಗಳೂರು: ಭ್ರಷ್ಟಾಚಾರದ ಅನೇಕ ಹಗರಣಗಳು, ಮುಖ್ಯಮಂತ್ರಿ ಬದಲಾವಣೆ ವಿಚಾರ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಷಯ- ಹೀಗೆ ಹಲವು ರೀತಿಯ ಸಮಸ್ಯೆಗಳನ್ನು ಕಾಂಗ್ರೆಸ್ ಸರಕಾರ ಎದುರಿಸುತ್ತಿದೆ. ಗೋಲ್‍ಪೋಸ್ಟ್ ಬದಲಿಸುವ ಉದ್ದೇಶದಿಂದ ಜಾತಿಗಣತಿಯ ಚರ್ಚೆಯನ್ನು ಮುಂದಕ್ಕೆ ತಂದಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದ್ದಾರೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈಗಾಗಲೇ ಅವರ ಪಕ್ಷದಲ್ಲೇ ಅದಕ್ಕೆ ವಿರೋಧ ಇದೆ. ಒಂದು ಕಡೆ ಡಿ.ಕೆ.ಶಿವಕುಮಾರ್, ಇನ್ನೊಂದು ಕಡೆ ಶಾಮನೂರು ಶಿವಶಂಕರಪ್ಪ ಅವರೂ ವಿರೋಧ ಮಾಡುತ್ತಿದ್ದಾರೆ ಎಂದು ವಿವರಿಸಿದರು. ಕಾಂತರಾಜ್ ವರದಿಯಲ್ಲಿ ಏನಿದೆಯೋ ಅದನ್ನೇ ಜಯಪ್ರಕಾಶ್ ಹೆಗ್ಡೆಯವರೂ ಕೊಟ್ಟಿದ್ದಾರೆ. ಅಂದಮೇಲೆ ಕಳೆದ ಹಲವು ವರ್ಷಗಳಲ್ಲಿ ಏನು ಬದಲಾವಣೆ ಆಗಿದೆ? ವಾಸ್ತವವಾಗಿ ಪರಿಶಿಷ್ಟ ಜಾತಿಗಳ ಜನಸಂಖ್ಯೆ ಈಗ ಸುಮಾರು 1.50 ಕೋಟಿ ಇದ್ದರೂ ಅದನ್ನು ಒಂದು ಕೋಟಿ ಎಂಟು ಲಕ್ಷ ಎಂದೇ ತೋರಿಸಿದ್ದಾರೆ ಎಂದು ಟೀಕಿಸಿದರು. ಸರಿಯಾದ ಅಂಕಿಅಂಶ ಇಲ್ಲ; ಮುಂದಿನ ಏಪ್ರಿಲ್, ಮೇ ತಿಂಗಳಿನಲ್ಲಿ ಜನಗಣತಿ ನಡೆಯಲಿದೆ. ಆಗ ಸರಿಯಾದ ಅಂಕಿಅಂಶ…

Read More