Author: kannadanewsnow09

ಬಳ್ಳಾರಿ: ಜಿಲ್ಲೆಯ ಎಲ್ಲಾ ಪಡಿತರ ಚೀಟಿದಾರರು ತಮ್ಮ ಕುಟುಂಬದ ಎಲ್ಲಾ ಸದಸ್ಯರ ಇ-ಕೆವೈಸಿ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಫಲಾನುಭವಿಗಳು ಮ್ಯಾಪಿಂಗ್ ಮಾಡಿಸಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರಾದ ಸಕೀನ ಅವರು ತಿಳಿಸಿದ್ದಾರೆ. ಆರ್ಥಿಕವಾಗಿ ದುರ್ಬಲರಿರುವ ಕುಟುಂಬಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡುತ್ತಿರುವ ಬಿಪಿಎಲ್ ಪಡಿತರವನ್ನು ಆಹಾರ ಭದ್ರತಾ ಕಾಯ್ದೆ ನಿಯಮಗಳನ್ನು ಪಾಲಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಪಡಿತರ ಚೀಟಿದಾರರು ಕಡ್ಡಾಯವಾಗಿ ತಮ್ಮ ಕುಟುಂಬದ ಎಲ್ಲಾ ಸದಸ್ಯರ ಇ-ಕೆವೈಸಿ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಫಲಾನುಭವಿಗಳ ಮ್ಯಾಪಿಂಗ್ ಕಾರ್ಯ ಚಾಲ್ತಿಯಲ್ಲಿದ್ದು, ಜಾತಿವಾರು ಮ್ಯಾಪಿಂಗ್ ಮಾಡಿಸಬೇಕು. ಜಿಲ್ಲೆಯಲ್ಲಿ ಬಿಪಿಎಲ್ ಹಾಗೂ ಎಪಿಎಲ್ ಪಡಿತರ ಚೀಟಿದಾರರು ಈಗಾಗಲೇ ಕುಟುಂಬ ಪಡಿತರ ಚೀಟಿಯಲ್ಲಿನ ಎಲ್ಲಾ ಸದಸ್ಯರು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿ ಮಟ್ಟದಲ್ಲಿಯೇ ಕುಟುಂಬದ ಎಲ್ಲಾ ಸದಸ್ಯರು ಕಡ್ಡಾಯವಾಗಿ ತಮ್ಮ ಬೆರಳಚ್ಚು ನೀಡಿ (ಇ-ಕೆವೈಸಿ) ನವೀಕರಿಸಿಕೊಳ್ಳಬೇಕು. ಇ-ಕೈವೈಸಿ ಆಗದ ಮತ್ತು ಪರಿಶಿಷ್ಠ ಜಾತಿ, ಪರಿಶಿಷ್ಠ…

Read More

ಬೆಂಗಳೂರು: ರಾಜ್ಯದ ಕೆಲ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ತಪ್ಪುಗಳಾಗಿರುತ್ತವೆ. ಆ ತಪ್ಪುಗಳನ್ನು ಸರಿ ಪಡಿಸೋದು ಹೇಗೆ ಎಂಬುದು ಅನೇಕ ವಿದ್ಯಾರ್ಥಿಗಳಿಗೆ ತಿಳಿದಿರೋದಿಲ್ಲ. ಅಂತವರಿಗೆ ಇಲಾಖೆಯಿಂದಲೇ ತಿದ್ದುಪಡಿಗೆ ಆದೇಶ ಮಾಡಿದೆ. ಜಸ್ಟ್ ನೀವು ಈ ಕೆಳಕಂಡ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಿದರೇ ತಪ್ಪು ತಿದ್ದುಪಡಿಯಾಗಿ, ಹೊಸ ಅಂಕಪಟ್ಟಿ ಲಭ್ಯವಾಗಲಿದೆ. ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯಿಂದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ದ್ವಿತೀಯ ಪಿಯುಸಿ ಅಂಕಪಟ್ಟಿಯಲ್ಲಿನ ತಪ್ಪುಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ನೀಡಿದೆ. ಈ ಮೂಲಕ ದ್ವಿತೀಯ ಪಿಯುಸಿ ಅಂಕಪಟ್ಟಿಯಲ್ಲಿನ ತಪ್ಪು ತಿದ್ದುಪಡಿ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್ ನೀಡಿದೆ. ಈ ಸಂಬಂಧ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಜ್ಞಾಪನ ಪತ್ರವನ್ನು ಹೊರಡಿಸಲಾಗಿದೆ. ಅದರಲ್ಲಿ ಪ್ರಸ್ತುತ ಮತ್ತು ಹಿಂದಿನ ಸಾಲಿನ ಅಂಕಪಟ್ಟಿಯಲ್ಲಿ ಅಭ್ಯರ್ಥಿಯ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಭಾವಚಿತ್ರ, ಲಿಂಗ, ಮಾಧ್ಯಮ ಮತ್ತು ಜನ್ಮ ದಿನಾಂಕ ತಿದ್ದುಪಡಿಗಳಿಗೆ ಸಂಬಂಧಿಸಿದಂತೆ ರಾಜ್ಯದ ವಿವಿಧ ಕಾಲೇಜುಗಳ ಪ್ರಾಂಶುಪಾಲರುಗಳಿಂದ ಪ್ರಸ್ತಾವನೆಗಳು ಪಿ.ಯು. ಅಂಕಪಟ್ಟಿ ಶಾಖೆಗೆ ಮೂಲ…

Read More

ಚಿತ್ರದುರ್ಗ: ಆಧುನಿಕತೆಯ ಭರಾಟೆಯಲ್ಲಿ ಸಂಕ್ರಾಂತಿಯ ಸುಗ್ಗಿ ಸಂಭ್ರಮ‌ಮರೆಯಾಗುತ್ತಿದೆ ಎಂದು ಚಿತ್ರದುರ್ಗದ ಅಪರ ಜಿಲ್ಲಾಧಿಕಾರಿ ಬಿಟಿ ಕುಮಾರಸ್ವಾಮಿ ಹೇಳಿದರು. ನಗರದ ಐಯುಡಿಪಿ ಬಡಾವಣೆಯಲ್ಲಿ ಇತ್ತೀಚೆಗೆ ನಡೆದ ಸಂಕ್ರಾಂತಿ ಸಂಭ್ರಮ2025 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,ಎಲ್ಲೆಡೆ ಸುಗ್ಗಿಯ ಸಂಭ್ರಮ ಮರೆಯಾಗುತ್ತಿದೆ.ಯುವಜನತೆ ಮೊಬೈಲ್ ನಲ್ಲಿ ಮುಳುಗಿದೆ.ಮಹಿಳೆಯರು,ಮಕ್ಕಳು ಟಿವಿಯ ಧಾರಾವಾಹಿ,ರಿಯಾಲಿಟಿ ಶೋನಂತಹ ಕಾರ್ಯಕ್ರಮಗಳಿಗೆ ಸೀಮಿತವಾಗಿದ್ದಾರೆಂದು ಅಸಮಧಾನ ವ್ಯಕ್ತಪಡಿಸಿದರು. ಈ ಹಿಂದೆ ಹಳ್ಳಿಗಳಲ್ಲಿ ಸುಗ್ಗಿ ಸಂಭ್ರಮ ನೋಡೋದೇ ನಮ್ಮ ಪುಣ್ಯ ಎನಿಸುತ್ತಿತ್ತು‌.ಆದರೆ ಈಗ ಹಳ್ಳಿಗಳು ನಗರಪ್ರದೇಶಗಳಾಗಿ ಮಾರ್ಪಾಡುತ್ತಿವೆ.ಹೀಗಾಗಿ ಸಂಕ್ರಮಣದ ಸಂಸ್ಕ್ರತಿ,ಸಂಪ್ರದಾಯ ತೆರೆಮರೆಗೆ ಸರಿಯುತ್ತಿವೆ.ಭಾರತೀಯರ ಮೊದಲ ಹಬ್ಬ ಎನಿಸಿರುವ ಸಂಕ್ರಾಂತಿ ಹಬ್ಬ ಕೇವಲ ಎಳ್ಳು ಬೆಲ್ಲ ಹಂಚುವ ಫ್ಯಾಷನ್ ಎನಿಸಿದೆ.ಈ ಸಂಭ್ರಮದ‌ ಹಿಂದೆ ರೈತರ ಶ್ರಮ ಇರುತ್ತಿತ್ತು‌.ವರ್ಷವಿಡಿ ಬೆಳೆದ ರಾಗಿ,ಭತ್ತ ಹಾಗು ವಿವಿಧ ಬೆಳೆಗಳ ರಾಶಿಹಾಕಿ ಪೂಜಿಸುವ ವಾಡಿಕೆ ಇತ್ತು‌.ಆ ಆಚರಣೆ ನಮ್ಮ ಸಂಸ್ಕೃತಿ,ಸಂಪ್ರದಾಯ ಮರೆಯಾಗುತ್ತಿವೆ. ಎಲ್ಲೆಡೆ ಅವಿಭಕ್ತ ಕುಟುಂಬಗಳು ಇಬ್ಬಾಗವಾಗಿ ಸ್ವಾರ್ಥದ ಬದುಕು ಸಾಗಿಸುತ್ತಿದ್ದು,ನಗರದಲ್ಲಿ ವಾಸಿಸುವ ಕುಟುಂಬ ಅಕ್ಕಪಕ್ಕದಲ್ಲಿರುವವರ ಬಾಂದವ್ಯತೆಯನ್ನು ದೂರವಿಡ್ತಿದ್ದಾರೆ.ಯಾವುದೇ ಕುಟುಂಬಕ್ಕೆ ಏನಾದ್ರು ಸಮಸ್ಯೆ ಎದುರಾದರೆ ಅದು…

Read More

ಬೆಂಗಳೂರು: ನಿವೇಶನ ಖರೀದಿಯ ವೇಳೆಯಲ್ಲಿ ಎಷ್ಟೇ ಎಚ್ಚರಿಕೆ ವಹಿಸಿದ್ರೂ ಕೆಲವೊಮ್ಮೆ ಮೋಸ ಆಗೋದು ಉಂಟು. ಆದರೇ ಈ ನಡುವೆ ಆನ್ ಲೈನ್ ಸೇವೆ ಆರಂಭದ ನಂತ್ರ ಕೊಂಚ ಇದಕ್ಕೆಲ್ಲ ಬ್ರೇಕ್ ಬಿದ್ದಿದೆ. ನೀವು ಸೈಟ್ ಖರೀದಿ ಮಾಡ್ತಾ ಇದ್ದೀರಿ ಅಂದರೇ, ನೋಂದಣಿಯ ವೇಳೆಯಲ್ಲಿ ಕೆಲವು ಮಹತ್ವದ ಮಾಹಿತಿಯನ್ನು ಪರಿಶೀಲಿಸುವುದು ಮುಖ್ಯವಾಗಿದೆ. ಅದು ಯಾವುವು ಅಂತ ಮುಂದೆ ಓದಿ. ಈ ಕುರಿತಂತೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದಲೇ ಮಾಹಿತಿ ಹಂಚಿಕೊಳ್ಳಲಾಗಿದೆ. ಕಾವೇರಿ 2.0 ತಂತ್ರಾಂಶದಲ್ಲಿ ದಾಸ್ತಾವೇಜುಗಳ ನೋಂದಣಿಗೆ ಅರ್ಜಿ ಸಲ್ಲಿಸಲು ಮಾಹಿತಿ ನಮೂದಿಸಿದ ನಂತ್ರ, ಅಂತಿಮ ಅರ್ಜಿಯನ್ನು ಉಪ ನೋಂದಣಾಧಿಕಾರಿ ಅವರಿಗೆ ಸಲ್ಲಿಸುವ ಮುನ್ನ ಅರ್ಜಿದಾರರು ಅಥವಾ ಪಕ್ಷದಾರರು ಕಡ್ಡಾಯವಾಗಿ ದಾಸ್ತಾವೇಜು ಸಾರಾಂಶವನ್ನು ಪರಿಶೀಲಿಸಬೇಕು ಅಂತ ತಿಳಿಸಿದೆ. ಈ ಮಹತ್ವದ ದಾಸ್ತಾವೇಜು ಸಾರಾಂಶ ಪರಿಶೀಲಿಸೋದು ಮರೆಯಬೇಡಿ ಸ್ವತ್ತಿನ ಮಾಲೀಕರ ಹೆಸರು ಹಾಗೂ ಸ್ವತ್ತಿನ ಪಿಐಡಿ ಸಂಖ್ಯೆ ದಾಸ್ತಾವೇಜು ಮಾದರಿ, ಆರ್ಟಿಕಲ್ ಮತ್ತು ಸಬ್ ಆರ್ಟಿಕಲ್ ಪಕ್ಷಕಾರರ ಹೆಸರುಗಳು, ಗುರುತಿನ ದಾಖಲೆಗಳಾದಂತ ಆಧಾರ್, ಪಾಸ್…

Read More

ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನವು ಜನವರಿ 31 ರಿಂದ ಏಪ್ರಿಲ್ 4 ರವರೆಗೆ ನಡೆಯಲಿದ್ದು, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ಸತತ ಎಂಟನೇ ಬಾರಿಗೆ ಬಜೆಟ್ ಮಂಡಿಸಲಿದ್ದಾರೆ. ಜನವರಿ 31 ರಂದು ಅಧ್ಯಕ್ಷ ದ್ರೌಪದಿ ಮುರ್ಮು ಅವರು ಸಂಸತ್ತಿನ ಉಭಯ ಸದನಗಳಾದ ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡುವ ಮೂಲಕ ಅಧಿವೇಶನ ಪ್ರಾರಂಭವಾಗಲಿದೆ. ನಂತರ ಆರ್ಥಿಕ ಸಮೀಕ್ಷೆ ನಡೆಯಲಿದೆ. https://twitter.com/ANI/status/1880272225942794425 ಒಟ್ಟಾರೆಯಾಗಿ ಸಂಸತ್ತಿನ ಬಜೆಟ್ ಅಧಿವೇಶನದ ಮೊದಲ ಭಾಗವು 2025 ರ ಜನವರಿ 31 ರಂದು ಪ್ರಾರಂಭವಾಗಿ ಫೆಬ್ರವರಿ 13 ರಂದು ಕೊನೆಗೊಳ್ಳಲಿದೆ. ಅಧಿವೇಶನದ ಎರಡನೇ ಭಾಗವು ಮಾರ್ಚ್ 10, 2025 ರಂದು ಪ್ರಾರಂಭವಾಗುತ್ತದೆ ಮತ್ತು ಏಪ್ರಿಲ್ 4, 2025 ರಂದು ಕೊನೆಗೊಳ್ಳುತ್ತದೆ.

Read More

ಬೆಂಗಳೂರು: ರಾಜ್ಯ ಸರ್ಕಾರದಿಂದ ಜಾರಿಗೆ ತಂದಿರುವಂತ ಕೆ ಎಸ್ ಆರ್ ಟಿಸಿ ಆರೋಗ್ಯ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಾರಿಗೊಂಡ 10 ದಿನಗಳಲ್ಲಿ ಬರೋಬ್ಬರಿ 1280 ಸಿಬ್ಬಂದಿಗಳು ಈ ಯೋಜನೆಯಡಿ ಚಿಕಿತ್ಸೆಯನ್ನು ಪಡೆದಿದ್ದಾರೆ. ಈ ಬಗ್ಗೆ ಕೆ ಎಸ್ ಆರ್ ಟಿ ಸಿ ಮಾಹಿತಿ ನೀಡಿದ್ದು, ಕೆ ಎಸ್ ಆರ್ ಟಿಸಿ ಆರೋಗ್ಯ ಯೋಜನೆ ಯು ಸಾರಿಗೆ ನೌಕರರ ದಶಕಗಳ ಬೇಡಿಕೆ. ಅದನ್ನು ಸಾಕಾರಗೊಳಿಸಲು ನಿಗಮವು ಕರ್ನಾಟಕ ರಾಜ್ಯಾದ್ಯಂತ ಇಂದಿನವರೆಗೆ 314 ಆಸ್ಪತ್ರೆಗಳೊಂದಿಗೆ ಒಡಂಬಂಡಿಕೆ ಮಾಡಿಕೊಂಡಿದೆ. ಈ ಯೋಜನೆಯು ನಿಗಮದ ಅತಿ ದೊಡ್ಡ ಯೋಜನೆಯಾಗಿದ್ದು, 34000 ಸಿಬ್ಬಂದಿಗಳು, ಅವರ ಪತಿ/ಪತ್ನಿ ಮಕ್ಕಳು, ತಂದೆ ತಾಯಿ ಒಳಗೊಂಡಂತೆ ಸರಿ ಸುಮಾರು 1.50 ಲಕ್ಷ ಫಲಾನುಭವಿಗಳಿಗೆ 300 ಕ್ಕೂ ಹೆಚ್ಚು ಆಸ್ಪತ್ರೆಗಳೊಂದಿಗೆ ಪ್ರತಿ ನಿಮಿಷ ವ್ಯವಹರಿಸಿ ಉತ್ತಮ ಆರೋಗ್ಯ ಸೇವೆ ಒದಗಿಸುವುದಾಗಿದೆ ಎಂಬುದಾಗಿ ತಿಳಿಸಿದೆ. ಈ ಯೋಜನೆಯು ಪ್ರಾರಂಭಗೊಂಡು ನೆನ್ನೆಗೆ 10 ದಿವಸಗಳಷ್ಟೇ ಆಗಿದೆ. ಇಲ್ಲಿಯವರೆಗೆ ಅಂದರೆ 17-01-2025 ಬೆಳಗ್ಗೆ 11 ಗಂಟೆಯವರೆಗೆ‌‌ 1280 ಸಿಬ್ಬಂದಿಗಳು…

Read More

ಬೆಂಗಳೂರು: ಬಿಎಂಆರ್‌ಸಿಎಲ್, ದಿನಾಂಕ 19.01.2025 (ಭಾನುವಾರ) ರಂದು ನೇರಳೆ ಮಾರ್ಗದಲ್ಲಿನ ಕಬ್ಬನ್ ಪಾರ್ಕ್ ಮತ್ತು ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಹಳಿ ನಿರ್ವಹಣಾ ಕಾಮಗಾರಿಯನ್ನು  ಕೈಗೆತ್ತಿಕೊಳ್ಳಲಿದ್ದು, ಕೆಂಪೇಗೌಡ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣ ಮತ್ತು ಇಂದಿರಾನಗರ ಮೆಟ್ರೋ ನಿಲ್ದಾಣಗಳ ನಡುವೆ ಬೆಳಿಗ್ಗೆ 07:00 ರಿಂದ 10.00 ರವರೆಗೆ ಮೂರು ಗಂಟೆಗಳ ಕಾಲ  ಮೆಟ್ರೋ ರೈಲು ಸೇವೆ ಇರುವುದಿಲ್ಲ. ನೇರಳೆ ಮಾರ್ಗದ ಇತರ ವಿಭಾಗಗಳಲ್ಲಿ ಬರುವ, ಚಲ್ಲಘಟ್ಟ ಮತ್ತು ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್ ಹಾಗೂ ವೈಟ್‌ಫೀಲ್ಡ್ (ಕಾಡುಗೋಡಿ) ಮತ್ತು ಇಂದಿರಾನಗರ ಮೆಟ್ರೋ ನಿಲ್ದಾಣಗಳ ನಡುವೆ, ಮೇಲಿನ ಅವಧಿಯಲ್ಲಿ ನಿಗದಿತ ವೇಳಾಪಟ್ಟಿಯಂತೆ ರೈಲು ಸೇವೆಗಳು ಎಂದಿನಂತೆ ಬೆಳಿಗ್ಗೆ 07:00 ಗಂಟೆಗೆ ಪ್ರಾರಂಭವಾಗುತ್ತವೆ. ಹಸಿರು ಮಾರ್ಗದ ರೈಲು ಸಮಯಗಳಲ್ಲಿ ಯಾವುದೇ ಬದಲಾವಣೆಯಿರುವುದಿಲ್ಲ ಮತ್ತು ಎಂದಿನಂತೆ ಮೆಟ್ರೋ ರೈಲುಗಳ ಸೇವೆ ಇರಲಿದೆ. ನಮ್ಮ ಮೆಟ್ರೋ ಪ್ರಯಾಣಿಕರು ಮೇಲಿನ ಬದಲಾವಣೆಯನ್ನು ಗಮನಿಸ ಬೇಕೆಂದು ಕೋರಿದೆ.  ಸಾರ್ವಜನಿಕರಿಗೆ ಇದರಿಂದಾಗುವ ಅನಾನುಕೂಲತೆಗೆ ವಿಷಾದಿಸಿದೆ.

Read More

ಮಂಗಳೂರು: ಜಾತಿಗಣತಿ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ವಿಷಯ ಮಂಡಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ಪಕ್ಷಗಳು ಜಾತಿಗಣತಿಯನ್ನು ವಿರೋಧಿಸುತ್ತಿರುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ ವರದಿಯಲ್ಲಿ ಏನಿದೆ ಎಂದು ತಿಳಿದಿಲ್ಲದೇ ವಿರೋಧ ಏಕೆ ಮಾಡುತ್ತಾರೆ. ವರದಿ ಇನ್ನೂ ಬಹಿರಂಗಗೊಳ್ಳದಿರುವುದರಿಂದ ಈ ಬಗ್ಗೆ ನನಗೂ ತಿಳಿದಿಲ್ಲ ಎಂದರು. ನಮ್ಮ ಪ್ರಣಾಳಿಕೆಯಲ್ಲಿ ಜಾತಿಗಣತಿಯನ್ನು ಮಂಡಿಸಲಾಗುವುದು ಎಂದು ಜನತೆಗೆ ಭರವಸೆ ನೀಡಲಾಗಿದೆ ಎಂದರು. ದರೋಡೆಕೋರರನ್ನು ಕೂಡಲೆ ಪತ್ತೆ ಹಚ್ಚಲು ಸೂಚನೆ ಉಲ್ಲಾಳ್ ನಲ್ಲಿ ನಡೆದಿರುವ ದರೋಡೆ ಪ್ರಕರಣದ ಬಗ್ಗೆ ಮಾತನಾಡಿ ದರೋಡೆಕೋರರನ್ನು ಕೂಡಲೇ ಪತ್ತೆ ಹಚ್ಚಿ ಶಿಕ್ಷೆ ನೀಡುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

Read More

ಬೆಂಗಳೂರು: ರಾಜ್ಯ ಸರ್ಕಾರದಿಂದ ರಾಜ್ಯದಲ್ಲಿ ಸುರಿದ ಮಳೆ ಮತ್ತು ಪ್ರವಾಹದಿಂದಾಗಿ ಹಾನಿಗೊಳಗಾದ ಗ್ರಾಮೀಣ ರಸ್ತೆ, ಸೇತುವೆ ಮತ್ತು ಚರಂಡಿ ಕಾಮಗಾರಿಗಳನ್ನು ಕೈಗೊಳ್ಳಲು ಅನುದಾನ ಹಂಚಿಕೆ ಮಾಡಿ ಆದೇಶಿಸಿದೆ. ಈ ಕುರಿತಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕರು ಹಾಗೂ ಸರ್ಕಾರದ ಉಪ ಕಾರ್ಯದರ್ಶಿ ರಾಜ್ಯದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಅದರಲ್ಲಿ 2024-25 ನೇ ಸಾಲಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಿಂದಾಗಿ ಗ್ರಾಮೀಣ ರಸ್ತೆಗಳು ತೀವ್ರ ಹಾನಿಯಾಗಿರುವ ಹಿನ್ನೆಲೆಯಲ್ಲಿ ಸದರಿ ಗ್ರಾಮೀಣ ರಸ್ತೆಗಳ ಸುಧಾರಣೆಗಾಗಿ ರಾಜ್ಯದ 189 ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಿಗೆ ಪ್ರತಿ ಕ್ಷೇತ್ರಕ್ಕೆ ತಲಾ 10.00 ಕೋಟಿಗಳಂತೆ ಒಟ್ಟು 1890.00 ಕೋಟಿಗಳ ಅನುದಾನದಲ್ಲಿ ರಸ್ತೆ,ಸೇತುವೆ ಮತ್ತು ಚರಂಡಿ ಕಾಮಗಾರಿಗಳನ್ನು ಲೆಕ್ಕ ಶೀರ್ಷಿಕೆ-5054-03-337-0-75-059 ರಡಿ ಕೈಗೆತ್ತಿಕೊಳ್ಳಲು ಉಲ್ಲೇಖ 1 ರಲ್ಲಿ ಆರ್ಥಿಕ ಇಲಾಖೆಯು ಹಂಚಿಕೆ ಮಾಡಿರುತ್ತದೆ ಎಂದಿದ್ದಾರೆ. ಆದುದರಿಂದ, ಉಲ್ಲೇಖ-1 ರಲ್ಲಿ ಹಂಚಿಕೆಯಾಗಿ ಅನುಬಂಧ-1 ರಲ್ಲಿನ ರಾಜ್ಯದ 189 ಗ್ರಾಮೀಣ ವಿಧಾನಸಭಾ ಕ್ಷೇತ್ರವಾರು ಹಂಚಿಕೆಯಾಗಿರುವ ಅನುದಾನಕ್ಕೆ ಆಯಾ ವಿಧಾನಸಭಾ ಕ್ಷೇತ್ರದ…

Read More

ಬೆಂಗಳೂರು: ರಾಜ್ಯದಲ್ಲಿ ಅಂಧತ್ವ ಮುಕ್ತ ಕರ್ನಾಟಕ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ಈ ಸಂಬಂಧ ರಾಜ್ಯಾಧ್ಯಂತ ಆಶಾಕಿರಣ ಯೋಜನೆ ವಿಸ್ತರಣೆ ಮಾಡಿದೆ. ಅಂಧತ್ವ ಮುಕ್ತ ಕರ್ನಾಟಕ ನಿರ್ಮಾಣದತ್ತ ಮಹತ್ವದ ಹೆಜ್ಜೆ ಇಟ್ಟಿರುವ ರಾಜ್ಯ ಸರ್ಕಾರವು ಮಹಾತ್ವಾಕಾಂಕ್ಷಿ ಆಶಾಕಿರಣ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ದಾರವನ್ನು ತೆಗೆದುಕೊಂಡಿದೆ. ಇದಕ್ಕಾಗಿ ₹13.30 ಕೋಟಿ ಮೊತ್ತವನ್ನು ಮೀಸಲಿರಿಸಲು ತೀರ್ಮಾನಿಸಿದೆ. ಈ ಮೂಲಕ ದೃಷ್ಟಿ ದೋಷ ಉಳ್ಳವರಿಗೆ ಉಚಿತವಾಗಿ ಕಣ್ಣಿನ ತಪಾಸಣೆ, ಶಸ್ತ್ರಚಿಕಿತ್ಸೆ ಮತ್ತು ಕನ್ನಡಕಗಳನ್ನು ವಿತರಿಸಲಾಗುತ್ತದೆ. https://twitter.com/KarnatakaVarthe/status/1880179222234427526

Read More