Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸ್ಥೂಲಕಾಯದ ಪುರುಷರಿಗೆ ಸಿಹಿ ಸುದ್ದಿ: ತೂಕ ಕಡಿಮೆ ಮಾಡಿಕೊಂಡರೆ ಸುಧಾರಿಸಲಿದೆ ಲೈಂಗಿಕ ಸಾಮರ್ಥ್ಯ | Weight loss improves sex life

ತಾಂತ್ರಿಕ ಶಿಕ್ಷಣ ಇಲಾಖೆ ಬೋಧಕರ ವರ್ಗಾವಣೆ ಪ್ರಕ್ರಿಯೆ ಆರಂಭ: ಸಂಪೂರ್ಣ ವೇಳಾಪಟ್ಟಿ ಮತ್ತು ಮಾರ್ಗಸೂಚಿ ಪ್ರಕಟ

ಬಿಸಿಲ ಬೇಗೆಯಿಂದ ಕಂಗಾಲಾದವರಿಗೆ ಸಿಹಿ ಸುದ್ದಿ: ಈ ಬಾರಿ ಮುಂಚಿತವಾಗಿಯೇ ಮಳೆಗಾಲ ಆರಂಭ; ವಾರಾಂತ್ಯಕ್ಕೆ ಅಂಡಮಾನ್‌ಗೆ ಮುಂಗಾರು ಪ್ರವೇಶ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರು ನಗರದ ಕೆರೆಗಳ ಒತ್ತುವರಿ ಸೇರಿ ಮಾಲಿನ್ಯ ಅಧ್ಯಯನಕ್ಕೆ MLC ನೇತೃತ್ವದಲ್ಲಿ ಕೆರೆ ಅಧ್ಯಯನ ಸಮಿತಿ ರಚ
KARNATAKA

ಬೆಂಗಳೂರು ನಗರದ ಕೆರೆಗಳ ಒತ್ತುವರಿ ಸೇರಿ ಮಾಲಿನ್ಯ ಅಧ್ಯಯನಕ್ಕೆ MLC ನೇತೃತ್ವದಲ್ಲಿ ಕೆರೆ ಅಧ್ಯಯನ ಸಮಿತಿ ರಚ

By ವಸಂತ ಬಿ ಈಶ್ವರಗೆರೆ

ಬೆಂಗಳೂರು : “ಬೆಂಗಳೂರು ನಗರದ ಕೆರೆಗಳ ಒತ್ತುವರಿ ಸೇರಿದಂತೆ ಕೆರೆ ಮಾಲಿನ್ಯದ ಬಗ್ಗೆ ಅಧ್ಯಯನ ನಡೆಸಲು ವಿಧಾನಪರಿಷತ್ ಸದಸ್ಯರಾದ ಟಿ.ಎ.ಶರವಣ, ಜವರಾಯಿಗೌಡ ಹಾಗೂ ಗೋಪಿನಾಥ್ ಅವರ ನೇತೃತ್ವದಲ್ಲಿ ಪ್ರತ್ಯೇಕ ಮೂರು ಸಮಿತಿಗಳನ್ನು ಮಾಡುವಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸೂಚನೆ ನೀಡಿದರು.

ಬನಶಂಕರಿಯಲ್ಲಿರುವ ಬೆಂಗಳೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ 2025-26ನೇ ಸಾಲಿನ ಮೊದಲನೇ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಡಿಸಿಎಂ ಮಾತನಾಡಿದರು.

“ಈ ಸಮಿತಿಯು ನಗರದಾದ್ಯಂತ ಇರುವ ಕೆರೆಗಳ ಒತ್ತುವರಿ, ಕೆರೆಗಳಿಗೆ ಕೊಳಚೆ ನೀರು ಸೇರುತ್ತಿರುವುದು ಸೇರಿದಂತೆ ಇತರೇ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲಿದೆ.‌ ಕೆರೆಗಳಿಗೆ ಚರಂಡಿ ಕೊಳಚೆ ನೀರು ಬಿಡುತ್ತಿರುವವರು ಯಾರೇ ಆಗಿರಲಿ, ಯಾವುದೇ ಕೈಗಾರಿಕೆಗಳಾಗಲಿ ಯಾರಿಗೂ ಮುಲಾಜು ತೋರಬೇಡಿ.‌ ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ. ಕೆರೆಗಳನ್ನು ಈಗಲೇ ಸಂರಕ್ಷಣೆ ಮಾಡದಿದ್ದರೆ ಮುಂದಕ್ಕೆ ಕಷ್ಟವಾಗಲಿದೆ” ಎಂದು ಅಧಿಕಾರಿಗಳಿಗೆ ತಿಳಿಸಿದರು.

ಸಮರ್ಪಕ ಆಸ್ತಿ ತೆರಿಗೆ ಏಕೆ ಬರುತ್ತಿಲ್ಲ

“ನಗರ ಇಷ್ಟು ದೊಡ್ಡದಾಗಿ ಬೆಳೆದರೂ ಸಮರ್ಪಕ ಆಸ್ತಿ ತೆರಿಗೆ ಏಕೆ ಬರುತ್ತಿಲ್ಲ? ನಗರದಲ್ಲಿ ಎಷ್ಟು ಬಾಲ್ಯ ವಿವಾಹಗಳು ನಡೆದಿವೆ ಎನ್ನುವ ಮಾಹಿತಿ ಇದೆಯೇ? ಎಂಬಿತ್ಯಾದಿ ಪ್ರಶ್ನೆಗಳ ಸುರಿಮಳೆಗೈದು ಅಧಿಕಾರಿಗಳ ಬೆವರಿಳಿಸಿದರು.

“ಬೆಂಗಳೂರು ನಗರದಲ್ಲಿ ವಿದ್ಯಾವಂತರು, ಬುದ್ಧಿವಂತರು, ಸುಶಿಕ್ಷಿತರು ಇದ್ದಾರೆ. ಬೆಂಗಳೂರು ದಿನೇ ದಿನೇ ಬೆಳೆಯುತ್ತಿದೆ. ಗ್ರೇಟರ್ ಬೆಂಗಳೂರು ಆಗಿ ಮಾರ್ಪಾಡಾಗಿದೆ. ಹೊರವಲಯದ ಪ್ರದೇಶಗಳನ್ನು ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಸೇರಿಸಿಕೊಳ್ಳುವ ಒತ್ತಡವಿದೆ. ನಗರದ ಸೌಲಭ್ಯಗಳನ್ನು ಪಡೆಯಲು ಜನ ಉತ್ಸುಕರಾಗಿದ್ದಾರೆ” ಎಂದು ಹೇಳಿದರು.

ಆಸಕ್ತಿ ಇದ್ದರೆ ನನ್ನ ಜೊತೆ ಕೆಲಸ ಮಾಡಿ

“ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಯಾರ್ಯಾರು ಏನೇನೂ ಮಾಡುತ್ತಿದ್ದಾರೆ ಅನ್ನೋ ಸಂಪೂರ್ಣ ಮಾಹಿತಿ ಇದೆ. ನನಗೇನೂ ಗೊತ್ತಾಗಲ್ಲ ಅನ್ನುವ ಭ್ರಮೆ ಬೇಡ. ಆತ್ಮ ಸ್ಥೈರ್ಯ ಕುಂದಿಸಬಾರದು ಎಂದು ನಿಮ್ಮ ವಿರುದ್ದ ಕ್ರಮ ತೆಗೆದುಕೊಳ್ಳುತ್ತಿಲ್ಲ. ನನ್ನ ಜೊತೆ ಕೆಲಸ ಮಾಡಲು ಆಸಕ್ತಿ ಇದ್ದರೆ ಇರಬಹುದು, ಇಲ್ಲದಿದ್ದರೆ ಬೇರೆ ಕಡೆಗೆ ನೀವು ಹೊರಡಬಹುದು” ಎಂದು ಖಡಕ್ ಎಚ್ಚರಿಕೆ ನೀಡಿದರು.

“ಶೈಕ್ಷಣಿಕ ಕ್ಷೇತ್ರಗಳಿಗೆ ಸಿಎಸ್ ಆರ್ ನಿಧಿಗಳನ್ನು ತರುವ ಬಗ್ಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಯಿ ಸಿಇಓಗಳು ಉದ್ಯಮಿಗಳ ಸಭೆ ಕರೆದು ಚರ್ಚೆ ನಡೆಸಬೇಕು. ವಿದ್ಯಾರ್ಥಿ ನಿಲಯಗಳಲ್ಲಿ ಇರುವ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಫಲಿತಾಂಶ ಉತ್ತಮಗೊಳಿಸಲು ನಿಗಾವಹಿಸಬೇಕು ಹಾಗೂ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು” ಎಂದರು.

ಬಾಲ್ಯವಿವಾಹದ ಬಗ್ಗೆ ಮಾಹಿತಿ ಇದೆಯೇ?

“ಬಾಲ್ಯ ವಿವಾಹ ತಡೆಯಬೇಕು ಅಂತ ಪ್ರತಿಜ್ಞೆ ಸ್ವೀಕಾರ ಮಾಡಿದ್ದೇವೆ. ಆದರೆ ಬೆಂಗಳೂರು ನಗರದಲ್ಲಿ ಎಷ್ಟೆಷ್ಟು ಬಾಲ್ಯ ವಿವಾಹ ನಡೆದಿದೆ ಅಂತ ನಿಮ್ಮ ಬಳಿ ಮಾಹಿತಿ ಇದೆಯಾ? ಪೊಲೀಸರು ಎಷ್ಟು ಕೇಸ್ ದಾಖಲು ಮಾಡಿದ್ದೀರಿ?” ಎಂದು ಪ್ರಶ್ನಿಸಿದರು.

“ಬೆಂಗಳೂರಿನ ರಸ್ತೆಗಳನ್ನು ಸುಸ್ಥಿತಿಯಲ್ಲಿಡಿ, ಅಗತ್ಯ ಬಿದ್ದ ಕಡೆ ಹೊಸ ರಸ್ತೆ ನಿರ್ಮಾಣ ಮಾಡಿ” ಎಂದೂ ಸಭೆಯಲ್ಲಿ ಸೂಚನೆ ನೀಡಿದರು.

ಮಾದಕವಸ್ತು ಮುಕ್ತ ಬೆಂಗಳೂರು

“ನಗರದ ಪ್ರತಿಯೊಂದು ಶಾಲಾ,‌ ಕಾಲೇಜುಗಳ ಆಡಳಿತ ಮಂಡಳಿ,‌ ಮುಖ್ಯೋಪಾಧ್ಯಾಯರು, ಕುಲಪತಿಗಳ ಸಭೆ ಕರೆದು ಮಾದಕವಸ್ತು ನಿಯಂತ್ರಣದ ಬಗ್ಗೆ ತಿಳಿಸಬೇಕು. ಜೊತೆಗೆ ಶಾಲಾ, ಕಾಲೇಜುಗಳ ಹತ್ತಿರ ಅಂಗಡಿಗಳಲ್ಲಿ ಅಥವಾ ಇತರೇ ರೀತಿಯಲ್ಲಿ ಮಾದಕವಸ್ತುಗಳ ರವಾನೆ ಬಗ್ಗೆ ಅನುಮಾನ ಬಂದರೆ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು” ಎಂದು ಚರ್ಚೆ ನಡೆಸಲಾಯಿತು.

BREAKING: ಕೆಇಎಯಿಂದ ಬಿಪಿಟಿ, ಬಿಪಿಒ, ಎಎಚ್ಎಸ್ ಕೋರ್ಸ್ ಗಳ ರಾಂಕ್ ಪ್ರಕಟ

ಭೀಕರ ದುರ್ಘಟನೆಯಲ್ಲಿ ಇಬ್ಬರು ಬಚಾವ್..!

Share. Facebook Twitter LinkedIn WhatsApp Email

Related Posts

ತಾಂತ್ರಿಕ ಶಿಕ್ಷಣ ಇಲಾಖೆ ಬೋಧಕರ ವರ್ಗಾವಣೆ ಪ್ರಕ್ರಿಯೆ ಆರಂಭ: ಸಂಪೂರ್ಣ ವೇಳಾಪಟ್ಟಿ ಮತ್ತು ಮಾರ್ಗಸೂಚಿ ಪ್ರಕಟ

2 Mins Read

BIG ALERT: ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಚಾರ್ಜ್ ಹಾಕಿ ಪಕ್ಕದಲ್ಲೇ ಮಲಗೋ ಮುನ್ನ ಎಚ್ಚರ! ಸ್ಪೋಟಗೊಂಡು ವ್ಯಕ್ತಿ ದುರ್ಮರಣ

1 Min Read

ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಅಗತ್ಯ: ಸಾಗರದ ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ ಸಲಹೆ

2 Mins Read
Recent News

ಸ್ಥೂಲಕಾಯದ ಪುರುಷರಿಗೆ ಸಿಹಿ ಸುದ್ದಿ: ತೂಕ ಕಡಿಮೆ ಮಾಡಿಕೊಂಡರೆ ಸುಧಾರಿಸಲಿದೆ ಲೈಂಗಿಕ ಸಾಮರ್ಥ್ಯ | Weight loss improves sex life

ತಾಂತ್ರಿಕ ಶಿಕ್ಷಣ ಇಲಾಖೆ ಬೋಧಕರ ವರ್ಗಾವಣೆ ಪ್ರಕ್ರಿಯೆ ಆರಂಭ: ಸಂಪೂರ್ಣ ವೇಳಾಪಟ್ಟಿ ಮತ್ತು ಮಾರ್ಗಸೂಚಿ ಪ್ರಕಟ

ಬಿಸಿಲ ಬೇಗೆಯಿಂದ ಕಂಗಾಲಾದವರಿಗೆ ಸಿಹಿ ಸುದ್ದಿ: ಈ ಬಾರಿ ಮುಂಚಿತವಾಗಿಯೇ ಮಳೆಗಾಲ ಆರಂಭ; ವಾರಾಂತ್ಯಕ್ಕೆ ಅಂಡಮಾನ್‌ಗೆ ಮುಂಗಾರು ಪ್ರವೇಶ!

ಬ್ರಿಕ್ಸ್‌ ಶೃಂಗಸಭೆಗೆ ದೆಹಲಿ ಸಜ್ಜು: ಇರಾನ್‌ನ ಅರಾಗ್ಚಿ ಮತ್ತು ರಷ್ಯಾದ ಲಾವ್ರೊವ್ ಭಾರತಕ್ಕೆ ಆಗಮನ!

State News
KARNATAKA

ತಾಂತ್ರಿಕ ಶಿಕ್ಷಣ ಇಲಾಖೆ ಬೋಧಕರ ವರ್ಗಾವಣೆ ಪ್ರಕ್ರಿಯೆ ಆರಂಭ: ಸಂಪೂರ್ಣ ವೇಳಾಪಟ್ಟಿ ಮತ್ತು ಮಾರ್ಗಸೂಚಿ ಪ್ರಕಟ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ಕರ್ನಾಟಕ ಸರ್ಕಾರದ ತಾಂತ್ರಿಕ ಶಿಕ್ಷಣ ಇಲಾಖೆಯು 2026ನೇ ಸಾಲಿನ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು ಮತ್ತು ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಗಳ…

BIG ALERT: ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಚಾರ್ಜ್ ಹಾಕಿ ಪಕ್ಕದಲ್ಲೇ ಮಲಗೋ ಮುನ್ನ ಎಚ್ಚರ! ಸ್ಪೋಟಗೊಂಡು ವ್ಯಕ್ತಿ ದುರ್ಮರಣ

ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಅಗತ್ಯ: ಸಾಗರದ ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ ಸಲಹೆ

ಸಾಗರ ಮಾರ್ಕೆಟ್ ರಸ್ತೆ ಅಗಲೀಕರಣ ಅನಿವಾರ್ಯ: ಜಾಗ ಬಿಟ್ಟುಕೊಡಲು ನಿವಾಸಿಗಳಿಗೆ ‘AC ವಿರೇಶ ಕುಮಾರ್’ ಮನವಿ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.