Subscribe to Updates
Get the latest creative news from FooBar about art, design and business.
Author: kannadanewsnow09
ಹಾವೇರಿ: ಇದು ಕೇವಲ ಉಪಚುನಾವಣೆಯಲ್ಲ. ನನಗೆ, ನನ್ನ ಸರ್ಕಾರಕ್ಕೆ ಹೆಚ್ಚಿನ ಶಕ್ತಿ ನೀಡುವ ಮಹತ್ವದ ಚುನಾವಣೆ. ಆದ್ದರಿಂದ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಅಹ್ಮದ್ ಖಾನ್ ಪಠಾಣ್ ಅವರನ್ನು ಗೆಲ್ಲಿಸಿ ನನಗೆ ಶಕ್ತಿ ನೀಡಿ ಎಂಬುದಾಗಿ ಸಿಎಂ ಸಿದ್ಧರಾಮಯ್ಯ ಮನವಿ ಮಾಡಿದ್ದಾರೆ. ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ನಾವು ನುಡಿದಂತೆ ನಡೆದಿದ್ದೇವೆ. ಸರ್ಕಾರ ಬಂದ 8 ತಿಂಗಳಲ್ಲೇ ಐದಕ್ಕೆ ಐದೂ ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ಇಡೀ ರಾಜ್ಯದ ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡುತ್ತಿದ್ದೇವೆ. ಇದಕ್ಕಾಗಿ ಗ್ಯಾರಂಟಿ ಯೋಜನೆಗಳಿಗಾಗಿ 56 ಸಾವಿರ ಕೋಟಿ ರೂಪಾಯಿಯನ್ನು ನೇರವಾಗಿ ರಾಜ್ಯದ ಜನರಿಗೆ ತಲುಪಿಸಿದ್ದೇವೆ ಎಂದಿದ್ದಾರೆ. ಬಸವರಾಜ ಬೊಮ್ಮಾಯಿ ಅವರು ಕೃಷಿ ಸಚಿವರಾಗಿ, ಗೃಹ ಸಚಿವರಾಗಿ, ಮುಖ್ಯಮಂತ್ರಿಯಾಗಿ ಕ್ಷೇತ್ರಕ್ಕೆ ಏನು ನೀಡಿದ್ದಾರೆ? ಕ್ಷೇತ್ರಕ್ಕೆ ಏನೂ ಕೆಲಸ ಮಾಡದ ಬೊಮ್ಮಾಯಿ ಅವರ ಪುತ್ರನಿಗೆ ಮತ ಹಾಕುವುದರಲ್ಲಿ ಅರ್ಥವೇ ಇಲ್ಲ ಎಂದು ತಿಳಿಸಿದ್ದಾರೆ. 40 ವರ್ಷದಲ್ಲಿ ಸಣ್ಣ ಕಪ್ಪು ಚುಕ್ಕೆ ಕೂಡ ಇಲ್ಲದ ನನ್ನನ್ನು ಕೇವಲ ಷಡ್ಯಂತ್ರದಿಂದ ಕೆಳಗಿಳಿಸಲು…
ಬೆಂಗಳೂರು: ನಗರದಲ್ಲಿನ ನಮ್ಮ ಮೆಟ್ರೋದ ನಿಲ್ದಾಣದಲ್ಲಿ ಕಿಲೋಮೀಟರ್ ಗಟ್ಟಲೇ ಸಾಲುಗಟ್ಟಿ ನಿಂತಿದ್ದು, ಇಂತಹ ಪರಿಸ್ಥಿತಿಗೆ ಕಾರಣವಾಗಿದ್ದರ ಬಗ್ಗೆ ಪ್ರಾಯಾಣಿಕರು ಆಕ್ರೋಶ ಹೊರ ಹಾಕಿದ್ದರು. ಈ ಸಮಸ್ಯೆ ಬಗ್ಗೆ ಬಿಎಂಆರ್ ಸಿಎಲ್ ಈ ಕೆಳಗಿನಂತೆ ಸ್ಪಷ್ಟನೆ ನೀಡಿದೆ. ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ನಾಗಸಂದ್ರ ಮೆಟ್ರೋ ನಿಲ್ದಾಣದಿಂದ ಸಾಮಾನ್ಯ ದಿನಗಳಲ್ಲಿ ಬೆಳಿಗ್ಗೆ 6-11 ಗಂಟೆಯವರೆಗೆ ಸುಮಾರು 11000 ಜನರು ದಿನನಿತ್ಯ ಪ್ರಯಾಣಿಸುತ್ತದ್ದು, ಇಂದು, ಸದರಿ ಸಮಯದಲ್ಲಿ 15800 ಪ್ರಯಾಣಿಸಿದ್ದಾರೆ. ದೀರ್ಘ ರಜೆಯ ನಂತರ ಬಂದ ಪ್ರಯಾಣಿಕರ ಸರಂಜಾಮುಗಳನ್ನು ತ್ವರಿತವಾಗಿ ಪರಿಶೀಲಿಸಿ ಜನದಟ್ಟಣೆಯನ್ನು ಕಡಿಮೆಮಾಡಿ ಪ್ರಯಾಣಕ್ಕೆ ಅನೂಕೂಲ ಮಾಡಲಾಯಿತು ಎಂದು ತಿಳಿಸಿದೆ. https://twitter.com/OfficialBMRCL/status/1853400042209726810 https://kannadanewsnow.com/kannada/important-information-for-kset-passouts-last-chance-for-original-document-verification/ https://kannadanewsnow.com/kannada/sensex-crashes-1400-points-investor-wealth-worth-rs-8-lakh-cr-wiped-out-why-is-market-falling/
ಬೆಂಗಳೂರು: ಕೆಸೆಟ್ ಪರೀಕ್ಷೆ ಪಾಸಾದಂತವರಿಗೆ ಕೊನೆಯ ಅವಕಾಶ ಎನ್ನುವಂತೆ ಮೂಲ ದಾಖಲಾತಿ ಪರಿಶೀಲನೆಗೆ ಅವಕಾಶ ನೀಡಿರುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ. ಇಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದು, ದಿನಾಂಕ 11.07.2024 80 22.07.2024 31.07.2024. 17.08.2024 13.09.2024 ರಂದು ಮೂಲ ದಾಖಲೆಗಳ ಪರಿಶೀಲನೆಗೆ ಅವಕಾಶ ನೀಡಲಾಗಿತ್ತು, ಆದರೆ ದಾಖಲಾತಿ ಪರಿಶೀಲನೆಗೆ ಗೈರು ಹಾಜರಾದ / ದಾಖಲಾತಿ ಪರಿಶೀಲನೆ ಅಪೂರ್ಣಗೊಂಡ ಅಭ್ಯರ್ಥಿಗಳು ಮತ್ತೊಮ್ಮೆ ಮೂಲ ದಾಖಲೆಗಳ ಪರಿಶೀಲನೆಗೆ ಕಾಲಾವಾಶ ನೀಡುವಂತೆ ಪ್ರಾಧಿಕಾರಕ್ಕೆ ಕೋರಿರುತ್ತಾರೆ ಎಂದಿದೆ. ಪರಿಶೀಲನೆಗೆ ಅರ್ಹರಿದ್ದು ಇದುವರೆಗೂ ದಾಖಲಾತಿ ಪರೀಶೀಲನೆ ಪೂರ್ಣಗೊಳ್ಳದ (PG Degree Completed / Pursuing) en (Annexure-B) wond ದಿನಾಂಕ 12.11.2024 ರಂದು ಬೆಳಿಗ್ಗೆ 10.00 ಘಂಟೆಗೆ ಎಲ್ಲಾ ಮೂಲ ದಾಖಲೆಗಳೊಂದಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬೆಂಗಳೂರು, ಇಲ್ಲಿ ದಾಖಲಾತಿ ಪರಿಶೀಲನೆಗೆ ತಪ್ಪದೆ ಹಾಜರಾಗುವಂತೆ ತಿಳಿಸಲಾಗಿದೆ. ಇದು ಕೊನೆಯ ಅವಕಾಶವಾಗಿದ್ದು, ಮತ್ತೊಮ್ಮೆ ದಾಖಲಾತಿ ಪರಿಶೀಲನೆಗೆ ಯಾವುದೇ ಅವಕಾಶ ನೀಡಲಾಗುವುದಿಲ್ಲ ಹಾಗೂ ದಾಖಲಾತಿ ಪರಿಶೀಲನೆಗೆ ಹಾಜರಾಗದೆ ಇರುವ ಅಭ್ಯರ್ಥಿಗಳನ್ನು ಅರ್ಹತಾ…
ಬೆಂಗಳೂರು: ನಗರದ ಪಶ್ಚಿಮ ವಲಯ ಮತ್ತಿಕೆರೆ ಉಪವಿಭಾಗ ಯಶವಂತಪುರ ಆರ್.ಟಿ.ಒ ರಸ್ತೆಯಲ್ಲಿರುವ ಮಾರುಕಟ್ಟೆ ಪ್ರದೇಶದಲ್ಲಿ ಇಂದು BBMP ವಲಯ ಆಯುಕ್ತರಾದ ಅರ್ಚನಾ ರವರ ನೇತೃತ್ವದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಬಾಕಿ ಆಸ್ತಿ ತೆರಿಗೆ ಉಳಿಸಿಕೊಂಡಿರುವ 32 ಮಳಿಗೆಗಳಿಗೆ ಬೀಗ ಮುದ್ರೆ ಹಾಕಲಾಗಿರುತ್ತದೆ. ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ಹೆಚ್ಚು ಆಸ್ತಿತೆರಿಗೆ ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರು ಹಾಗೂ ಪರಿಷ್ಕರಣೆ ಪ್ರಕರಣಗಳಿಗೆ ನೋಟೀಸ್ ಗಳನ್ನು ಜಾರಿ ಮಾಡಲಾಗಿದ್ದು, ಸಾಕಷ್ಟು ಸಮಯಾವಕಾಶವನ್ನು ನೀಡಿದ್ದರೂ ಬಾಕಿ ಆಸ್ತಿ ತೆರಿಗೆಯನ್ನು ಪಾವತಿಸಿರುವುದಿಲ್ಲ. ಈ ಕಾರಣ ಬಿಬಿಎಂಪಿ ಕಾಯ್ದೆ 2020 ಹಾಗೂ ನಿಯಮಾವಳಿಗಳನ್ವಯ, ವಾಣಿಜ್ಯೇತರ ಆಸ್ತಿಗಳಿಗೆ ಬೀಗಮುದ್ರೆ ಹಾಕುವುದರ ಮೂಲಕ ಬಾಕಿ ಆಸ್ತಿತೆರಿಗೆ ವಸೂಲಿ ಮಾಡಲಾಗುತ್ತಿದೆ. ಮತ್ತಿಕೆರೆ ಸಹಾಯಕ ಕಂದಾಯ ಅಧಿಕಾರಿ ಉಪವಿಭಾಗದಲ್ಲಿನ ಸ್ವತ್ತುಗಳಲ್ಲಿ ಆಸ್ತಿತೆರಿಗೆ ಪರಿಷ್ಕರಣೆ ಪ್ರಕರಣಗಳಲ್ಲಿ ಅತೀ ಹೆಚ್ಚು ಮೊತ್ತವನ್ನು ಬಾಕಿ ಉಳಿಸಿಕೊಂಡಿದ್ದ ಸ್ವತ್ತಿಗೆ ಬೀಗಮುದ್ರೆ (Sealing) ಮಾಡಲಾಗಿರುತ್ತದೆ. *ವಸತಿಯೇತರ ಉಪಯೋಗದ, ಪಿಐಡಿ ಸಂಖ್ಯೆ: 7-39-27 ಮತ್ತು 7-39-27/1, ಸುಬೇದಾರ್ ಛತ್ರಂ ರಸ್ತೆ, ಯಶವಂತಪುರ (ವಾರ್ಡ್ ಸಂಖ್ಯೆ 45 –…
ಬೆಂಗಳೂರು: ರಾಜ್ಯ ಸರ್ಕಾರದಿಂದ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಗಡುವು ಮತ್ತೆ ವಿಸ್ತರಿಸಿ ಆದೇಶಿಸಿದೆ. ಈ ಮೂಲಕ ವಾಹನ ಮಾಲೀಕರಿಗೆ ಬಿಗ್ ರಿಲೀಫ್ ಅನ್ನು ನೀಡಿದೆ. ಇಂದು ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದ್ದು, ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ( High Security Registration Plates-HSRP)ಯನ್ನು ವಾಹನಗಳಿಗೆ ಅಳವಡಿಸಿಕೊಳ್ಳಲು ದಿನಾಂಕ 17-08-2024ರವರೆಗೆ ಅವಕಾಶ ನೀಡಲಾಗಿತ್ತು. ಇಂತಹ ಅವಧಿಯನ್ನು ದಿನಾಂಕ 30-11-2024ರವರೆಗೆ ವಿಸ್ತರಿಸಿ ಆದೇಶಿಸಿರುವುದಾಗಿ ತಿಳಿಸಿದೆ. ಇನ್ನೂ ಈ ಆದೇಶವು ದಿನಾಂಕ 17-08-2023ರಂದು ಹೊರಡಿಸಿದಂತ ಅಧಿಸೂಚನೆಯ ನಿಯಮಗಳಿಗೆ ಒಳಪಟ್ಟಿರುವುದಾಗಿ ಸಾರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ. https://kannadanewsnow.com/kannada/sensex-crashes-1400-points-investor-wealth-worth-rs-8-lakh-cr-wiped-out-why-is-market-falling/ https://kannadanewsnow.com/kannada/breaking-deeply-concerned-india-condemns-violence-against-hindus-in-canada/
ಹಾವೇರಿ : ಶಿಗ್ಗಾವಿ ಸವಣೂರು ಕ್ಷೇತ್ರದ ಅಭಿವೃದ್ಧಿ ಕುರಿತು ನಾನು ಬಹಿರಂಗ ಚರ್ಚೆಗೆ ಸಿದ್ದನಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದ್ದಾರೆ. ಶಿಗ್ಗಾವಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ವಿರುದ್ದ ಮಾಡಿರುವ ಆರೋಪಗಳಿಗೆ ಸರಣಿ ಟ್ವೀಟ್ ಗಳ ಮೂಲಕ ತಿರುಗೇಟು ನೀಡಿ, ಸವಾಲು ಹಾಕಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ನಾನು ಖಂಡಿತವಾಗಿಯೂ ಒಂದು ಮನೆ ಕಟ್ಟಿಲ್ಲ ನನ್ನ ಕ್ಷೇತ್ರದಲ್ಲಿ ಐದು ಲಕ್ಷ ರೂಪಾಯಿಯ ಹನ್ನೆರಡುವರೆ ಸಾವಿರ ಮನೆ ಕಟ್ಟಿಸಿದ್ದೇನೆ. ನಿಮ್ಮದೆ ಸರ್ಕಾರ ಇದೆ ದಾಖಲೆ ತೆಗೆದು ನೋಡಿ ಮುಖ್ಯಮಂತ್ರಿಯಾಗಿ ಈ ರೀತಿ ಹಸಿ ಸುಳ್ಳು ಹೇಳುವುದು ನಿಮ್ಮ ಸ್ಥಾನಕ್ಕೆ ಶೋಭೆ ತರುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ. ಕೊರೊನಾ ಸಂದರ್ಭದಲ್ಲಿ ಜೀವನದ ಹಂಗು ತೊರೆದು ನಮ್ಮ ಸರ್ಕಾರ ಕೊರೊನಾ ಸಂಪೂರ್ಣ ನಿಯಂತ್ರಿಸಲು ಆಸ್ಪತ್ರೆ ಬೆಡ್ ಗಳು, ಆಕ್ಸಿಜನ್ ಕಿಟ್ ಗಳು, , ಔಷಧಿ, ಚುಚ್ಚು ಮದ್ದುಗಳನ್ನು ಮತ್ತು ಕೇವಲ ಎರಡು ಟೆಸ್ಟ್ ಲ್ಯಾಬ್ ಗಳಿದ್ದಿದ್ದನ್ನು…
ಚನ್ನಪಟ್ಟಣ/ರಾಮನಗರ: ಚನ್ನಪಟ್ಟಣದಲ್ಲಿ ಧರ್ಮ ಮತ್ತು ಅಧರ್ಮದ ನಡುವೆ ಯುದ್ಧ ನಡೆಯುತ್ತಿದ್ದು, ನಿಖಿಲ್ ಕುಮಾರಸ್ವಾಮಿ ಅವರು ಗೆಲ್ಲುವ ಮೂಲಕ ಅಧರ್ಮಕ್ಕೆ ಹೀನಾಯ ಸೋಲಾಗಲಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು. ಚನ್ನಪಟ್ಟಣ ಉಪ ಚುನಾವಣೆಯ ಕಣದಲ್ಲಿ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿ ಪ್ರಚಾರದಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಅವರು ಗೊಳ್ಳರದೊಡ್ಡಿ ಗ್ರಾಮದಲ್ಲಿ ಮಾಧ್ಯಮಗಳ ಜತೆ ಮಾತನಾಡಿದರು. ಕುತಂತ್ರ ಅಧರ್ಮ ಹಾಗೂ ಧರ್ಮದ ನಡುವಿನ ಚುನಾವಣೆ ಇದಾಗಿದೆ. ಈ ಬಾರಿ ನಿಖಿಲ್ ಅಭಿವನ್ಯುವಲ್ಲ. ಅರ್ಜುನನಾಗಿ ಯುದ್ಧ ಎದುರಿಸುತ್ತಿದ್ದಾರೆ. ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಹಾಪಡೆ ಅವರಿಗೆ ಸಾಥ್ ಕೊಡುತ್ತಿದ್ದಾರೆ. ಎರಡೂ ಪಕ್ಷಗಳ ನಾಯಕರು ಕೃಷ್ಣನ ಪಾತ್ರ ವಹಿಸಿ ಅಧರ್ಮವನ್ನು ಹಿಮ್ಮೆಟ್ಟಿಸಲಿದ್ದಾರೆ. ಸಚಿವರ ದಂಡು ಚನ್ನಪಟ್ಟಣದಲ್ಲಿದೆ. ಡಿಸಿಎಂ ಇವತ್ತು ಬಂದಿದ್ದಾರೆ, ಎಲ್ಲಾ ಕಂಡೆ ನಮ್ಮನ್ನು ಬೈದುಕೊಂಡು ಹೋಗುತ್ತಿದ್ದಾರೆ ಎಂದು ಕೇಂದ್ರ ಸಚಿವರು ಹೇಳಿದರು. ಚದುರಂಗ ಆಡಿದವರೆಲ್ಲ ಏನಾದರು? ಚದುರಂಗ ಆಡಿದವರೆಲ್ಲಾ ಮುಳುಗಿದ್ದಾರೆ ಡಿಕೆಶಿ ಶಿವಕುಮಾರ್ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಚಿವರು; ಚದುರಂಗ…
ಚನ್ನಪಟ್ಟಣ : “ಕಾಂಗ್ರೆಸ್ ಸರ್ಕಾರವನ್ನು ಮುಂದಿನ ಎಂಟೂವರೆ ವರ್ಷಗಳ ಕಾಲ ಯಾರೂ ಅಲುಗಾಡಿಸಲು ಆಗುವುದಿಲ್ಲ. ಕುಮಾರಸ್ವಾಮಿ ಮತ್ತೊಂದು ಜನ್ಮ ಎತ್ತಿ ಬಂದರೂ ಏನೂ ಮಾಡಲು ಸಾಧ್ಯವಿಲ್ಲ” ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಹೇಳಿದರು. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಎಲೆ ತೋಟದ ಹಳ್ಳಿ, ಅಕ್ಕೂರು ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಕುಮಾರಸ್ವಾಮಿ ಅವರ ವಿರುದ್ಧ ಸರಣಿ ವಾಗ್ದಾಳಿ ನಡೆಸಿದರು. “ಚುನಾವಣೆಗೆ ನಾಲ್ಕೈದು ದಿನವಿರುವಾಗ ಜನರ ಬಳಿಗೆ ಬರುವ ಕುಮಾರಸ್ವಾಮಿ ಅವರೇ ನಿಮ್ಮ ಈ ಧೋರಣೆಯನ್ನು ಇನ್ನೆಷ್ಟು ದಿನ ಮುಂದುವರಿಸಿಕೊಂಡು ಹೋಗುತ್ತೀರಿ” ಎಂದರು. ಕುಮಾರಸ್ವಾಮಿ ಸಹವಾಸ ಮಾಡಿ ಸಾಕಾಗಿದೆ “18 ಸೀಟು ಇಟ್ಟುಕೊಂಡು ಸರ್ಕಾರ ಮಾಡಲು ಸಾಧ್ಯವೇ? ಬಿಜೆಪಿಯವರು ದಡ್ಡರು, ಕೇವಲ ಎರಡು ಕ್ಷೇತ್ರ ಗೆದ್ದಿರುವುದಕ್ಕೆ ಕೇಂದ್ರದಲ್ಲಿ ಮಂತ್ರಿ ಮಾಡಿದ್ದಾರೆ. ಕಾಂಗ್ರೆಸ್ ನವರಾಗಿದ್ದರೆ ಅವರನ್ನು ಹತ್ತಿರಕ್ಕೂ ಸೇರಿಸುತ್ತಿರಲಿಲ್ಲ. ಈ ಹಿಂದೆ ಅವರ ಸಹವಾಸ ಮಾಡಿ ಅನುಭವಿಸಿದ್ದು ಸಾಕಾಗಿದೆ. ಚುನಾವಣೆ ಸಮೀಪಿಸಲಿ ಆಗ ಆ ಬಗ್ಗೆ ಮಾತನಾಡುತ್ತೇನೆ” ಎಂದು ಹೇಳಿದರು. ಚನ್ನಪಟ್ಟಣದ ಜನರ ಕಾಳಜಿ ನಾವು…
ಕೋಲಾರ: ವಕ್ಫ್ ಅಧಿಕಾರಿಗಳು ರೈತರ ಬಳಿ ಬಂದರೆ ಜಮೀನಿಗೆ ಕಾಲಿಡಲು ಬಿಡಬಾರದು. ರೈತರಿಗೆ ನೋಟಿಸ್ ಬಂದರೆ ಕೂಡಲೇ ಅದನ್ನು ಬಿಜೆಪಿ ಮುಖಂಡರಿಗೆ ತಿಳಿಸಬೇಕು. ರೈತರ ಪರವಾಗಿ ನಾವು ಸದಾ ಹೋರಾಟ ಮಾಡುತ್ತೇವೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು. ವಕ್ಫ್ ಮಂಡಳಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 10 ಸಾವಿರ ಕೋಟಿ ರೂಪಾಯಿಯನ್ನು ಮುಸ್ಲಿಮರಿಗೆ ನೀಡುತ್ತೇನೆ ಎಂದು ಕಾಂಗ್ರೆಸ್ ಘೋಷಿಸಿತ್ತು. ಅವರ ಮತ ಗಳಿಸಲು ಕಾಂಗ್ರೆಸ್ ಏನು ಬೇಕಾದರೂ ಮಾಡುತ್ತದೆ. ಈಗ ವಕ್ಫ್ ಮೂಲಕ ಕಾಂಗ್ರೆಸ್ ರೈತರ ಜಮೀನು ಕಬಳಿಸುತ್ತಿದೆ. ಕೆಎಸ್‌ಆರ್‌ಟಿಸಿಯ ಸ್ಲೀಪ್ ಲೈಕ್ ಎ ಬೇಬಿ ಎಂಬಂತೆ, ಮುಸ್ಲಿಂ ಮೂಲಭೂತವಾದಿಗಳು ಹಾಗೂ ಭಯೋತ್ಪಾದಕರು ಕರ್ನಾಟಕದಲ್ಲಿ ಆರಾಮವಾಗಿ ನಿದ್ರಿಸುವ ವಾತಾವರಣ ಸೃಷ್ಟಿಯಾಗಿದೆ ಎಂದರು. ಮುಸ್ಲಿಮ್ ಗಲಭೆಕೋರರು ಪೊಲೀಸ್ ಠಾಣೆಗೆ ನುಗ್ಗಿ ಹಲ್ಲೆ ಮಾಡಿದ್ದರು. ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಅದನ್ನು ಕೂಡ ವಾಪಸ್ ಪಡೆದು ಮುಸ್ಲಿಮರನ್ನು ಮೆಚ್ಚಿಸಲು ಸಿಎಂ ಸಿದ್ದರಾಮಯ್ಯ ಯತ್ನಿಸಿದ್ದಾರೆ. ಮುಡಾ ಹಗರಣದ…
ಮಂಡ್ಯ : ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ (ಮನ್ ಮುಲ್) ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಜಿಲ್ಲೆಯ ಕೈ ನಾಯಕರಿಂದ ರಾಜಕೀಯ ಚಟುವಟಿಕೆಗಳು ಬಿರುಸು ಪಡೆದುಕೊಂಡಿವೆ. ಜಿಲ್ಲಾಧಿಕಾರಿ ಡಾ.ಕುಮಾರ ಅವರು ಈಗಾಗಲೇ ಅಧಿಸೂಚನೆ ಹೊರಡಿಸಿದ್ದು, ಫೆ.02 ರಂದು ಚುನಾವಣೆ ನಿಗಧಿಯಾಗಿದೆ. ಈ ಬಾರಿ ಘಟಾನುಘಟಿಗಳು ಸ್ಪರ್ಧೆಗೆ ರಣಕಣ ಸಜ್ಜಾಗಿದ್ದು, ಚುನಾವಣೆ ಮತ್ತಷ್ಟು ರಂಗೇರುವಂತೆ ಮಾಡಿದೆ. ಚುನಾವಣಾ ಸಂಬಂಧ ಸೋಮವಾರ ಶಾಸಕ ಕೆ.ಎಂ.ಉದಯ್ ಅವರ ಸ್ವಗ್ರಾಮದ ನಿವಾಸದಲ್ಲಿ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ಮುಖಂಡರು ಮತ್ತು ಆಕಾಂಕ್ಷಿಗಳ ಸಭೆ ನಡೆಸಿ ಮನ್ಮುಲ್ ಅಧಿಕಾರದ ಚುಕ್ಕಾಣಿ ಹಿಡಿಯಲು ರಣತಂತ್ರ ರೂಪಿಸಿದ್ದಾರೆ. ಈ ಚುನಾವಣೆಯಲ್ಲಿ ಯಾವುದೇ ಪಕ್ಷ, ಚಿಹ್ನೆ ಹೆಸರಿನಲ್ಲಿ ಚುನಾವಣೆ ನಡೆಯದಿದ್ದರೂ ರಾಜಕೀಯ ನಂಟು ಬೆಸೆದುಕೊಂಡಿದೆ. ಎಲ್ಲವೂ ರಾಜಕೀಯ ಲೆಕ್ಕಾಚಾರದ ಮೇಲೆ ನಡೆಯಲಿದೆ. ಈಗಾಗಲೇ 6 ಮಂದಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದ್ದು, ಈಗಿನಿಂದಲೇ ಚುನಾವಣಾ ತಯಾರಿ ಮಾಡಿಕೊಂಡು ಗ್ರಾಮೀಣ ಭಾಗದಲ್ಲಿ ಮತದಾನಕ್ಕೆ ನೇಮಕಗೊಂಡಿರುವ ಡೇರಿಗಳ ಪ್ರತಿನಿಧಿಯನ್ನು ಮನವೊಲಿಸಿ, ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ…