Author: kannadanewsnow09

ಶಿವಮೊಗ್ಗ : ರಾಜ್ಯ ಸರ್ಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿ ಗಣತಿಯಲ್ಲಿ ಸಮಾಜ ಬಾಂಧವರು ಜಾತಿ ಕಾಲಂನಲ್ಲಿ ವನ್ನಿಯಕುಲ ಕ್ಷತ್ರೀಯ ಎಂದು ನಮೂದಿಸಲು ರಾಜ್ಯ ವನ್ನಿಯಕುಲ ಕ್ಷತ್ರೀಯ ಸಂಘದ ಅಧ್ಯಕ್ಷ ಶ್ರೀನಿವಾಸ್ ಆರ್. ಮನವಿ ಮಾಡಿದ್ದಾರೆ. ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಸಾಗರದ ರಾಜ್ಯ ವನ್ನಿಯಕುಲ ಕ್ಷತ್ರೀಯ ಸಂಘದ ಅಧ್ಯಕ್ಷ ಶ್ರೀನಿವಾಸ್.ಆರ್ ಅವರು, ರಾಜ್ಯದ ಹಿಂದುಳಿದ ವರ್ಗಗಳ ಆಯೋಗದವರಿಂದ ನಡೆಸುತ್ತಿರುವ ಸಾಮಾಜಿಕ ಶೈಕ್ಷಣಿಕ ಜಾತಿಗಣತಿ ಸಂಬಂಧ ನಡೆದ ಸಂಘದ ಸರ್ವಸದಸ್ಯರ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು ಧರ್ಮದ ಕಾಲಂನಲ್ಲಿ ಹಿಂದೂ ಧರ್ಮ, ಜಾತಿ ಕಾಲಂನಲ್ಲಿ ವನ್ನಿಯಕುಲ ಕ್ಷತ್ರೀಯ, ಉಪ ಜಾತಿ ಕಾಲಂನಲ್ಲಿ ವನ್ನಿಯರು, ವನ್ನಿಯ ಗೌಂಡರ್ ಇನ್ನಿತರೆ ನಮೂದಿಸಲು ತಿಳಿಸಿದ್ದಾರೆ. ದಿನಾಂಕ 13-06-1929ರಂದು ಗೌರ್ನಮೆಂಟ್ ಆಫ್ ಮಡ್ರಾಸ್ ಸರ್ಕಾರದ ಸಂದರ್ಭದಲ್ಲಿಯೆ ವನ್ನಿಯಕುಲ ಕ್ಷತ್ರಿಯ ಪ್ರಮುಖ ಜಾತಿ ಎಂದು ನಮೂದಾಗಿದೆ. ವನ್ನಿಯಕುಲ ಕ್ಷತ್ರೀಯರನ್ನು ಹಲವು ಉಪನಾಮಗಳಿಂದ ಕರೆಯುತ್ತಾರೆ. ನಮ್ಮ ಕುಲಬಾಂಧವರು ಜಾತಿಗಣತಿಗೆ ಬಂದಾಗ ತನ್ನ ಉಪಜಾತಿ ಹೆಸರನ್ನು ಸರಿಯಾದ…

Read More

ಶಿವಮೊಗ್ಗ : ಜಾತಿ ಜನಗಣತಿ ಸಂದರ್ಭದಲ್ಲಿ ಬಿಲ್ಲವರು ಧರ್ಮದ ಕಾಲಂನಲ್ಲಿ ಹಿಂದೂ, ಜಾತಿ ಕಾಲಂನಲ್ಲಿ ಬಿಲ್ಲವ ಎಂದು ನಮೂದಿಸಿ, ಉಪಜಾತಿ ಕಾಲಂನಲ್ಲಿ ಏನನ್ನೂ ನಮೂದಿಸಬಾರದು ಎಂದು ಬಿಲ್ಲವ ಸಂಘದ ಅಧ್ಯಕ್ಷ ಕರ್ಕಿಕೊಪ್ಪ ಚಂದ್ರು ತಿಳಿಸಿದ್ದಾರೆ. ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಮಂಗಳವಾರ ಕರೆಯಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಲ್ಲವ ಎನ್ನುವುದು ನಮ್ಮ ಅಧಿಕೃತ ಜಾತಿಯಾಗಿದ್ದು ಉಪಜಾತಿ ನಮೂದಿಸಿ ಅನಗತ್ಯ ಗೊಂದಲ ಸೃಷ್ಟಿ ಮಾಡಬೇಡಿ ಎಂದು ಸಮುದಾಯದವರಿಗೆ ಮನವಿ ಮಾಡಿದರು. ರಾಜ್ಯದ ವಿವಿಧ ಬಿಲ್ಲವ ಸಂಘಟನೆಗಳ ತೀರ್ಮಾನಂದAತೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ನಮ್ಮಲ್ಲಿ ಬಳಕೆ ಇರುವ ಉಪನಾಮಗಳ ಬಳಕೆಯಿಂದ ಅನಗತ್ಯ ಗೊಂದಲ ಉಂಟಾಗುತ್ತದೆ. ಸರ್ಕಾರಿ ಸೌಲಭ್ಯ ಪಡೆಯಲು ಮುಂದಿನ ದಿನಗಳಲ್ಲಿ ತೊಡಕುಂಟಾಗಬಹುದು. ಈ ಹಿನ್ನೆಲೆಯಲ್ಲಿ ಕಾಲಂನಲ್ಲಿ 11ರಲ್ಲಿ ಏನೂ ಬರೆಯುವುದು ಬೇಡ. ಸರ್ಕಾರವು ಬಿಲ್ಲವ ಜಾತಿಯೊಂದಿಗೆ ಕ್ರಿಶ್ಚಿಯನ್ ಎಂಬ ಪದ ಸೇರಿಸಿ ಇನ್ನೊಂದು ಉಪಜಾತಿ ಮಾಡುವ ಕುರಿತು ತೆಗೆದುಕೊಂಡ ತೀರ್ಮಾನಕ್ಕೆ ಸಮುದಾಯ ಬಾಂಧವರು ಅಕ್ಷೇಪಣೆ ಸಲ್ಲಿಸಿದ್ದಾರೆ. ನಮ್ಮಲ್ಲಿ…

Read More

ಶಿವಮೊಗ್ಗ: ಜಾತಿ ಜನಗಣತಿಗೆ ಬರುವವರ ಬಳಿ ಸಮುದಾಯ ಬಾಂಧವರು ಜಾತಿ ಕಾಲಂನಲ್ಲಿ ದೀವರು, ಉಪ ಜಾತಿ ಕಾಲಂನಲ್ಲೂ ಸಹ ದೀವರು ಎಂದು ನಮೂದಿಸುವಂತೆ ನಾವು ದೀವರು ಅಭಿಯಾನದ ಸಂಚಾಲಕ ವೆಂಕಟೇಶ್ ಮೆಳವರಿಗೆ ಮನವಿ ಮಾಡಿದ್ದಾರೆ. ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಮಂಗಳವಾರ ಕರೆಯಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆಯಲ್ಲಿ ದೀವರ ಜನಸಂಖ್ಯೆ 6ಲಕ್ಷಕ್ಕೂ ಅಧಿಕವಿದ್ದು ಗಣತಿದಾರರು ಬಂದಾಗ ಧರ್ಮದ ಕಾಲಂನಲ್ಲಿ ಹಿಂದೂ, ಜಾತಿ ಮತ್ತು ಉಪಜಾತಿ ಕಾಲಂನಲ್ಲಿ ದೀವರು ಎಂದು ನಮೂದಿಸಿ ಎಂದು ತಿಳಿಸಿದರು. ಈಡಿಗ ಎನ್ನುವುದು ಒಂದು ಒಕ್ಕೂಟವಾಗಿದ್ದು, ಇದರಲ್ಲಿ 26 ಪಂಗಡಗಳು ಸೇರಿವೆ. ಕೆಲವು ಕಡೆ ಜಾತಿ ವಿಭಾಗದಲ್ಲಿ ಈಡಿಗ ಎಂದು ಬರೆಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಇದರಿಂದ ಸರ್ಕಾರದ ಅನೇಕ ಸೌಲಭ್ಯಗಳಿಂದ ನಾವು ವಂಚಿತರಾಗುವ ಸಾಧ್ಯತೆ ಇದೆ. ಹಿಂದಿನ ಕಾಂತರಾಜ ವರದಿ ಸಂದರ್ಭದಲ್ಲಿ ಸಹ ದೀವರ ಜನಸಂಖ್ಯೆಯನ್ನು ಕೇವಲ 65ಸಾವಿರ ಎಂದು ತೋರಿಸಲಾಗಿದೆ. ಅತ್ಯಂತ ಪ್ರಾಚೀನ ಸಂಸ್ಕೃತಿ, ಆಚಾರ, ವಿಚಾರ,…

Read More

ಶಿವಮೊಗ್ಗ: ಆಧುನಿಕ ತಂತ್ರಜ್ಞಾನ ಬಳಸಿಕೊಂಡು ರೈತರ ಕೃಷಿಯಲ್ಲಿ ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ಕೃಷಿ ವಿವಿಗಳು ಕೆಲಸ ಮಾಡಲಿ ಎಂಬುದಾಗಿ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅಭಿಪ್ರಾಯ ಪಟ್ಟರು. ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಬಳಿಯ ಇರುವಕ್ಕಿಯಲ್ಲಿನ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ 13ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಶಿವಪ್ಪ ನಾಯಕ ಹೆಸರೇಳಿದರೇ ಮಲೆನಾಡಿನಲ್ಲಿ ಹೊಸ ಸಂಚಲನವೇ ಸೃಷ್ಠಿಯಾಗುತ್ತಿದೆ. ಇಂತಹ ಕೆಳದಿ ಶಿವಪ್ಪ ನಾಯಕರ ಹೆಸರಿನಲ್ಲಿ ವಿವಿಯನ್ನು ಸ್ಥಾಪಿಸಿರುವುದು ಸಂತಸದ ಸಂಗತಿಯಾಗಿದೆ. ಹಿರಿಯ ಮುತ್ಸದ್ದಿ ಕಾಗೋಡು ತಿಮ್ಮಪ್ಪ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಶ್ರಮದಿಂದ ಇರುವಕ್ಕಿಯಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ವಿವಿ ಸ್ಥಾಪನೆಯಾದಂತೆ ಆಯಿತು ಎಂದರು. ಭಾರತದ ತಲಾದಾಯದಲ್ಲಿ ಕೃಷಿಯ ಕೊಡುಗೆ ಪಾಲು ಹೆಚ್ಚಿನದ್ದು ಆಗಿದೆ. ಆದರೇ ರೈತರು ಬೆಳೆದಂತ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಅವರ ಬೆಳೆಗೆ ಸರಿಯಾದ ಬೆಲೆ ಸಿಗಬೇಕು. ಪ್ರಗತಿ ಪರ ಕೃಷಿ ನಡೆಸುವಂತೆ ಆಗಬೇಕು.…

Read More

ಬೆಂಗಳೂರು: ವೈದ್ಯಕೀಯ, ದಂತ ವೈದ್ಯಕೀಯ ಪದವಿ ಕೋರ್ಸ್ ಗಳ ಎರಡನೇ ಹಾಗೂ ಆಯುಷ್ ಕೋರ್ಸ್ ಗಳ ಮೂರನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಇಂದು ಪ್ರಕಟಿಸಿದ್ದು, ಈ ಕೋರ್ಸ್ ಗಳಿಗೆ ಇದುವರೆಗೂ ಒಟ್ಟು 18,867 ಸೀಟು ಹಂಚಿಕೆ ಮಾಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ. ಎರಡೂ ಸುತ್ತುಗಳಿಂದ ವೈದ್ಯಕೀಯ ಕೋರ್ಸ್ ಗೆ 9,958, ದಂತ ವೈದ್ಯಕೀಯ ಕೋರ್ಸ್ ಗೆ 2,658 ಮತ್ತು ಆಯುಷ್ ಕೋರ್ಸ್ ಗಳಿಗೆ 6,257 ಸೀಟು ಹಂಚಿಕೆ ಮಾಡಲಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದುವರೆಗಿನ ಸೀಟು ಹಂಚಿಕೆ ನಂತರ ವೈದ್ಯಕೀಯ ಕೋರ್ಸ್ ನಲ್ಲಿ 158 ಸೀಟು, ದಂತ ವೈದ್ಯಕೀಯ ದಲ್ಲಿ 50 ಹಾಗೂ ಆಯುಷ್ ಕೋರ್ಸ್ ನಲ್ಲಿ 6,251 ಸೀಟುಗಳು ಉಳಿದಿವೆ. ಇವಲ್ಲದೆ, ಎರಡನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟುಗಳಿಗೆ ಪ್ರವೇಶ ಪಡೆಯದೇ ಉಳಿಯುವ ಸೀಟುಗಳನ್ನು ಮಾಪ್ ಅಪ್ ಸುತ್ತಿನ ಸೀಟು ಹಂಚಿಕೆಗೆ ಪರಿಗಣಿಸಲಾಗುವುದು ಎಂದು ಅವರು ವಿವರಿಸಿದ್ದಾರೆ. ಈ ಸುತ್ತಿನಲ್ಲಿ…

Read More

ಉತ್ತರ ಕನ್ನಡ: ಜಿಲ್ಲೆಯಲ್ಲಿ ಘೋರ ದುರಂತವೊಂದು ಸಂಭವಿಸಿದೆ. ಮನೆಯಲ್ಲಿದ್ದಂತ ಎಲ್ ಪಿ ಜಿ ಸಿಲಿಂಡರ್ ಸ್ಪೋಟಗೊಂಡು ಯುವತಿ ಸಾವನ್ನಪ್ಪಿರುವಂತ ಘಟನೆ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಮರ್ಕಿಕೊಡ್ಲು ಗ್ರಾಮದಲ್ಲಿ ರಂಜಿತಾ ನಾಗಪ್ಪ ದೇವಾಡಿಗ(21) ಸಾವನ್ನಪ್ಪಿದ್ದಾರೆ. ಮನೆಯಲ್ಲಿದ್ದಂತ ಎಲ್ ಪಿ ಜಿ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಪೋಷಕರು ಕೆಲಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಎಲ್ ಪಿ ಜಿ ಸಿಲಿಂಡರ್ ಸ್ಪೋಟಗೊಂಡಿದೆ. ಅನಾರೋಗ್ಯದಿಂದ ಮನೆಯಲ್ಲೇ ಉಳಿದಿದ್ದ ರಂಜಿತಾ ಸಾವನ್ನಪ್ಪಿದ್ದಾರೆ. ಮನೆಯಲ್ಲಿ ಎಲ್ ಪಿ ಜಿ ಸಿಲಿಂಡರ್ ಸ್ಪೋಟಕ್ಕೆ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಶಿರಸಿ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. https://kannadanewsnow.com/kannada/famous-actor-superstar-mohanlal-conferred-with-dadasaheb-phalke-award/ https://kannadanewsnow.com/kannada/low-pressure-in-the-bay-of-bengal-heavy-rains-in-the-state-till-september-29/

Read More

ನವದೆಹಲಿ: ಮಲಯಾಳಂ ಸೂಪರ್‌ಸ್ಟಾರ್ ಮೋಹನ್ ಲಾಲ್ ಅವರು ಸೆಪ್ಟೆಂಬರ್ 23, 2025 ರಂದು ಮಂಗಳವಾರ 71 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2023 ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವು ಇಂದು ಸೆಪ್ಟೆಂಬರ್ 23 ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಅಧಿಕೃತವಾಗಿ ಪ್ರಾರಂಭವಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾರತೀಯ ಚಿತ್ರರಂಗದ ಕೆಲವು ಅತ್ಯುತ್ತಮ ಪ್ರತಿಭೆಗಳಿಗೆ ಪ್ರತಿಷ್ಠಿತ ಗೌರವಗಳನ್ನು ಪ್ರದಾನ ಮಾಡುತ್ತಿದ್ದಾರೆ. ಶಾರುಖ್ ಖಾನ್, ರಾಣಿ ಮುಖರ್ಜಿ, ವಿಕ್ರಾಂತ್ ಮಾಸ್ಸಿ, ಮೋಹನ್ ಲಾಲ್ ಮತ್ತು ಇನ್ನೂ ಅನೇಕರಿಂದ, ಈ ಸಂಜೆ ಪ್ರೇಕ್ಷಕರ ಮೇಲೆ ಅಳಿಸಲಾಗದ ಛಾಪು ಮೂಡಿಸಿದ ಅತ್ಯುತ್ತಮ ಪ್ರದರ್ಶನಗಳು ಮತ್ತು ಚಲನಚಿತ್ರಗಳನ್ನು ಆಚರಿಸಲಾಗುತ್ತಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಟ ಮೋಹನ್ ಲಾಲ್ ಅವರಿಗೆ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಭಾರತೀಯ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿಯಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು. https://twitter.com/ANI/status/1970459004347523424

Read More

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರಿಗೆ ‘ಜವಾನ್’ ಚಿತ್ರಕ್ಕಾಗಿ ಅತ್ಯುತ್ತಮ ನಾಯಕ ನಟ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪ್ರದಾನ ಮಾಡಿದರು. https://twitter.com/ANI/status/1970457364772843884 ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರಿಗೆ ‘ಜವಾನ್’ ಚಿತ್ರಕ್ಕಾಗಿ ಅತ್ಯುತ್ತಮ ನಾಯಕ ನಟ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪ್ರದಾನ ಮಾಡಿದರು. https://twitter.com/ANI/status/1970456179785847115 https://kannadanewsnow.com/kannada/i-have-nothing-wrong-with-this-accused-burude-chinnaiah-breaks-down-in-tears-before-the-judge/ https://kannadanewsnow.com/kannada/low-pressure-in-the-bay-of-bengal-heavy-rains-in-the-state-till-september-29/

Read More

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಟ ಮೋಹನ್ ಲಾಲ್ ಅವರಿಗೆ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಭಾರತೀಯ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿಯಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು. https://twitter.com/ANI/status/1970459004347523424

Read More

ಶುಕ್ರವಾರದ ಅಮಾವಾಸ್ಯೆಯಂದು 11 ಅಥವಾ 16 ಲವಂಗವನ್ನು ಇದರ ಜೊತೆ ಸುಟ್ಟಾಕಿ ಬರಬೇಕಾಗಿರುವ ದುಡ್ಡು ಐಶ್ವರ್ಯ ಬಂಗಾರ ಹಣ ನದಿಯಂತೆ ಹರಿದು ಬರುತ್ತದೆ.! ನಮ್ಮಲ್ಲಿ ಪ್ರತಿಯೊಬ್ಬರೂ ಕೂಡ ಹಣವನ್ನು ಸಂಪಾದನೆ ಮಾಡಬೇಕು ನಮ್ಮ ಆಸೆಗಳನ್ನು ಈಡೇರಿಸಿಕೊಳ್ಳಬೇಕು ಎಂಬ ಕನಸನ್ನು ಇಟ್ಟು ಕೊಂಡಿರುತ್ತಾರೆ. ಆದರೆ ಕೆಲವೊಂದಷ್ಟು ಜನರಿಗೆ ಇದು ಸಾಧ್ಯವಾಗುವುದಿಲ್ಲ ಎಷ್ಟೇ ಕಷ್ಟಪಟ್ಟು ಸಂಪಾದನೆ ಮಾಡಿದರು ಒಂದಲ ಒಂದು ರೀತಿಯಾಗಿ ಹಣ ಖರ್ಚಾಗುತ್ತಿರುತ್ತದೆ ಹಾಗೂ ಇನ್ನೂ ಕೆಲವೊಂದಷ್ಟು ಜನರು ಎಷ್ಟೇ ಪ್ರಯತ್ನ ಪಟ್ಟರು ಅತಿ ಹೆಚ್ಚಿನ ಹಣವನ್ನು ಸಂಪಾದನೆ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಇಂತಹ ಸಮಸ್ಯೆಗಳನ್ನು ಅನುಭವಿಸುತ್ತಿರುವವರು ಈ ಒಂದು ಪರಿಹಾರವನ್ನು ಮಾಡಿಕೊಳ್ಳುವು ದರಿಂದ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು ಅದೇನೆಂದು ನೋಡುವುದಾದರೆ 2 ರಿಂದ 4 ಲವಂಗವನ್ನು ಮಲ್ಲಿಗೆ ಎಣ್ಣೆಯಲ್ಲಿ ಹಾಕಿ ಆಂಜನೇಯನ ಮುಂದೆ ದೀಪವನ್ನು ಹಚ್ಚುವುದರಿಂದ ಅಲ್ಲಿ ನಿಮ್ಮ ಕೋರಿಕೆಗಳನ್ನು ಹೇಳಿಕೊಳ್ಳುವುದರ ಮೂಲಕ ದೀಪ ಹಚ್ಚಬೇಕು ಈ ರೀತಿ ಮಾಡುವುದರಿಂದ ನೀವು ಅಂತಹ ಒಂದು ಸಂಕಷ್ಟದಿಂದ ಪಾರಾಗಬಹುದು. ಶ್ರೀ ಸಿಗಂದೂರು…

Read More