Subscribe to Updates
Get the latest creative news from FooBar about art, design and business.
Author: ವಸಂತ ಬಿ ಈಶ್ವರಗೆರೆ
ವಸಂತ ಬಿ ಈಶ್ವರಗೆರೆ (Vasantha B Eshwaragere) ಅವರು ಕರ್ನಾಟಕದ ಪತ್ರಕರ್ತರು ಮತ್ತು ಕವಿ. ಉದಯ ನ್ಯೂಸ್, ಟಿವಿ5 ಕನ್ನಡ ಸೇರಿದಂತೆ ವಿವಿಧ ಸುದ್ದಿ ಮಾಧ್ಯಮಗಳಲ್ಲಿ ಸುಮಾರು 15 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಪ್ರಸ್ತುತ ಅವರು Kannada News Now ಡಿಜಿಡಿಲ್ ಮಾಧ್ಯಮದಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಾಜಾ ಸುದ್ದಿ, ಸಾಹಿತ್ಯ, ಸಾಮಾಜಿಕ ವರದಿಗಾರಿಕೆ, ನ್ಯಾಯಾಂಗ ಸಂಬಂಧಿತ ವರದಿ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಸುದ್ದಿಗಳ ವರದಿಯಲ್ಲಿ ಸಕ್ರಿಯರಾಗಿದ್ದಾರೆ. ಗುಡವಿ ಪಕ್ಷಿಧಾಮದಂತಹ ಪ್ರವಾಸಿ ತಾಣಗಳ ಕುರಿತು ಲೇಖನಗಳನ್ನು ಬರೆದಿದ್ದಾರೆ.
ಬೆಂಗಳೂರು : “ಶೃಂಗೇರಿ ಕ್ಷೇತ್ರದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಬಿದ್ದಿರುವ ಅಂಚೆ ಮತಗಳನ್ನು ತಿದ್ದುವ ಮೂಲಕ ಮರುಎಣಿಕೆಯಲ್ಲಿ ಅಸಿಂಧುಗೊಳಿಸಲಾಗಿದೆ. ಇಡೀ ದೇಶದಲ್ಲಿ ಇಂತಹ ಅಪರಾಧ ನಡೆದಿಲ್ಲ. ಇದರ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದರು. ಶೃಂಗೇರಿ ಕ್ಷೇತ್ರದ ಮರುಎಣಿಕೆಯ ಬಗ್ಗೆ ಕೇಳಿದಾಗ, “ಚುನಾವಣೆ ಮತ ಎಣಿಕೆ ಸಮಯದಲ್ಲಿ ಪ್ರತಿ ಅಂಚೆ ಮತವನ್ನು ತೆರೆದು ಎರಡೂ ಪಕ್ಷಗಳ ಏಜೆಂಟರು ಹಾಗೂ ಅಧಿಕಾರಿಗಳಿಗೆ ತೋರಿಸಿ ಅದನ್ನು ಮಾನ್ಯ ಮಾಡಿ ಎಣಿಕೆ ಮಾಡಲಾಗಿರುತ್ತದೆ. ಈ ರೀತಿ ಮತ ಎಣಿಕೆ ಮಾಡಿದ ಬಳಿಕ ಬಿಜೆಪಿ ಅಭ್ಯರ್ಥಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಅಂಚೆ ಮತಗಳನ್ನು ತಿದ್ದಲಾಗಿದೆ. ಹೀಗಾಗಿಯೇ ಅವರು ನಿರ್ದಿಷ್ಟ ಮತಗಳ ಬಂಡಲ್ ಅನ್ನೇ ಮರು ಎಣಿಕೆ ಮಾಡಿ ಎಂದು ಪಟ್ಟು ಹಿಡಿದಿದ್ದರು. ಅಧಿಕಾರಿಗಳು ಹಾಗೂ ಬಿಜೆಪಿ ಅಭ್ಯರ್ಥಿ ಈ ಅಕ್ರಮದಲ್ಲಿ ಭಾಗಿಯಾಗಿದ್ದು, ಗಂಭೀರವಾದ ತನಿಖೆ ನಡೆಯಬೇಕಿದೆ.…
ಮಡಿಕೇರಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವ ಮೊದಲನೆಯ ದೊಡ್ಡ ಜನರ ಸಂಕಲ್ಪ ಬಿ.ಎಸ್. ಯಡಿಯೂರಪ್ಪ ಅವರ ಅಭಿಮಾನೋತ್ಸವ. ಅದು ನಮ್ಮ ಚುನಾವಣೆಯ ಪ್ರಾರಂಭ ಮತ್ತು ಕಾಂಗ್ರೆಸ್‌ನ ಅಂತ್ಯದ ಆರಂಭ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ಕೊಡಗಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಮತ್ತೊಮ್ಮೆ ಪಧಾನಮಂತ್ರಿ ನರೇಂದಮೋದಿಯವರ ನೇತೃತ್ತದಲ್ಲಿ ಮುಂದಿನ ಚುನಾವಣೆಯನ್ನೂ ಗೆಲ್ಲುವಂತ ಶಕ್ತಿ ಈ ಚುನಾವಣೆ ನೀಡಿದೆ. ಅವರ ಕನಸಿನ ವಿಕಸಿತ ಭಾರತದ ಸಂಕಲ್ಪಕ್ಕೆ ಶಕ್ತಿ ನೀಡುವ ಸಂದೇಶ ಈ ಚುನಾವಣೆಯಲ್ಲಿದೆ ಎಂದು ಹೇಳಿದರು. ಕರ್ನಾಟಕದಲ್ಲಿ ನಡೆದ ಎರಡು ಕ್ಷೇತಗಳ ಉಪ ಚುನಾವಣೆಯಲ್ಲಿ ಎರಡೂ ಕ್ಷೇತ್ರದಲ್ಲಿ ಉತ್ತಮವಾದ ವಾತಾವರಣ ಇತ್ತು. ನಮ್ಮ ಕಾರ್ಯಕರ್ತರು ಉತ್ತಮವಾಗಿ ಕೆಲಸ ಮಾಡಿದ್ದರು. ಆದರೆ ಕೊನೆಯ ಎರಡು ದಿನ ಸಿಎಂ ಸಿದ್ದರಾಮಯ್ಯ ಹಣದ ಹೊಳೆ ಹರಿಸಿ ಚುನಾವಣೆಯಲ್ಲಿ ಗೆದ್ದಿದ್ದಾರೆ. ಇದು ಪಜಾಪಭುತ್ವಕ್ಕೆ ಒಪ್ಪುವಂತಹ ಕೆಲಸ ಅಲ್ಲ ಎಂದು ಹೇಳಿದರು. https://kannadanewsnow.com/kannada/huge-amount-of-gold-and-money-found-in-hospitals-operation-theater/ https://kannadanewsnow.com/kannada/the-extraordinary-achievement-of-twin-sisters-from-davangere-not-only-do-they-have-the-same-appearance-but-their-puc-scores-are-also-the-same/
ದಾವಣಗೆರೆ: ಅವಳಿ ಮಕ್ಕಳು ನೋಡಲು ಒಂದೇ ರೀತಿ ಇರುವುದು ಸಾಮಾನ್ಯ. ಆದರೆ, ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಈ ಅವಳಿ ಸಹೋದರಿಯರು ತಮ್ಮ ಜ್ಞಾನ ಮತ್ತು ಸಾಧನೆಯಲ್ಲೂ ‘ಅವಳಿ’ಗಳೇ ಎಂಬುದನ್ನು ಸಾಬೀತುಪಡಿಸಿದ್ದಾರೆ. ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಇಬ್ಬರೂ ಸರಿಸಮಾನ ಅಂಕಗಳನ್ನು ಗಳಿಸುವ ಮೂಲಕ ಇಡೀ ಗ್ರಾಮವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಒಂದು ಅಂಕದ ಅಂತರ, ಸಮಾನ ಶೇಕಡಾವಾರು! ಹರಿಹರ ತಾಲ್ಲೂಕಿನ ಹಿರೇಹಾಲಿವಾಣ ಗ್ರಾಮದ ಕೃಷಿ ಕುಟುಂಬದ ಸಂಪತ್ ಕುಮಾರ್ ಹಾಗೂ ರೇಖಾ ದಂಪತಿಯ ಪುತ್ರಿಯರಾದ ಹರ್ಷಿತಾ ಮತ್ತು ಅರ್ಪಿತಾ ಈ ಸಾಧನೆ ಮಾಡಿದ ಪ್ರತಿಭೆಗಳು. ಮಲೇಬೆನ್ನೂರಿನ ಸರ್ಕಾರಿ ಕಿರಿಯ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಓದಿದ ಇವರು ಪ್ರಕಟಿತ ಫಲಿತಾಂಶದಲ್ಲಿ ಎಲ್ಲರೂ ಹುಬ್ಬೇರಿಸುವಂತೆ ಅಂಕ ಗಳಿಸಿದ್ದಾರೆ: ಹರ್ಷಿತಾ: 513 ಅಂಕಗಳು (ಶೇ. 85.5) ಅರ್ಪಿತಾ: 512 ಅಂಕಗಳು (ಶೇ. 85.33) ವಿಶೇಷವೆಂದರೆ, ಇಬ್ಬರೂ ಕನ್ನಡ ವಿಷಯದಲ್ಲಿ ತಲಾ 98 ಅಂಕಗಳನ್ನು ಪಡೆಯುವ ಮೂಲಕ ತಮ್ಮ ಬುದ್ಧಿಮತ್ತೆಯೂ ಒಂದೇ ರೀತಿ ಇದೆ…
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಸರ್ಕಾರಿ ಆಸ್ಪತ್ರೆಯೊಂದು ಈಗ ಭ್ರಷ್ಟಾಚಾರದ ಕೇಂದ್ರವಾಗಿ ಸುದ್ದಿಯಲ್ಲಿದೆ. ರೋಗಿಗಳಿಗೆ ಜೀವದಾನ ಮಾಡಬೇಕಾದ ಆಸ್ಪತ್ರೆಯ ಆಪರೇಷನ್ ಥಿಯೇಟರ್ (OT) ನಲ್ಲಿ ಭಾರಿ ಪ್ರಮಾಣದ ನಗದು ಮತ್ತು ಚಿನ್ನಾಭರಣ ಪತ್ತೆಯಾಗಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಆಪರೇಷನ್ ಥಿಯೇಟರ್‌ನಲ್ಲಿ ಅಕ್ರಮ ದಾಸ್ತಾನು! ಸರ್ಕಾರಿ ಆಸ್ಪತ್ರೆಯ ಒಳಭಾಗದಲ್ಲಿರುವ ಆಪರೇಷನ್ ಥಿಯೇಟರ್‌ನಲ್ಲಿ ಅಕ್ರಮವಾಗಿ ಹಣ ಮತ್ತು ಚಿನ್ನವನ್ನು ಬಚ್ಚಿಡಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಯಾರಿಗೂ ಅನುಮಾನ ಬಾರದಂತೆ ಪೆಟ್ಟಿಗೆಗಳಲ್ಲಿ ಪ್ಯಾಕ್ ಮಾಡಿ ಇಟ್ಟಿದ್ದ ಅಪಾರ ಪ್ರಮಾಣದ ನಗದು ಮತ್ತು ಚಿನ್ನದ ಒಡವೆಗಳು ಪತ್ತೆಯಾಗಿವೆ. ಆಸ್ಪತ್ರೆಯಂತಹ ಸೂಕ್ಷ್ಮ ಪ್ರದೇಶವನ್ನು ಅಕ್ರಮ ಹಣ ಬಚ್ಚಿಡಲು ಬಳಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಟಿಎಂಸಿ ಮುಖಂಡನ ಕೈವಾಡ? ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಹಣ ಮತ್ತು ಚಿನ್ನಾಭರಣಗಳು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಪ್ರಭಾವಿ ಮುಖಂಡನೊಬ್ಬನಿಗೆ ಸೇರಿದ್ದು ಎನ್ನಲಾಗಿದೆ. ತನಿಖಾ ಸಂಸ್ಥೆಗಳ ಕಣ್ಣು ತಪ್ಪಿಸಲು ಆಸ್ಪತ್ರೆಯ ಸಿಬ್ಬಂದಿಗಳ ನೆರವಿನೊಂದಿಗೆ…
ಬೆಂಗಳೂರು: ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮುಂದಿನ ಹಂತದ ಚುನಾವಣಾ ಪ್ರಕ್ರಿಯೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಈ ಮೂಲಕ ಕೆಳ ಹಂತದ ನ್ಯಾಯಾಲಯ ನೀಡಿದ್ದ ಆದೇಶವನ್ನೇ ಮುಂದುವರಿಸಲು ಹೈಕೋರ್ಟ್‌ನ ಏಕಸದಸ್ಯ ಪೀಠ ನಿರ್ದೇಶನ ನೀಡಿದ್ದು, ಚುನಾವಣಾ ಕಣದಲ್ಲಿದ್ದವರಿಗೆ ಹಿನ್ನಡೆಯುಂಟಾಗಿದೆ. ಪ್ರಕರಣದ ಹಿನ್ನೆಲೆ: ಕಳೆದ ಏಪ್ರಿಲ್ 30, 2026 ರಂದು ಚುನಾವಣಾ ಪ್ರಕ್ರಿಯೆಯನ್ನು ನಡೆಸದಂತೆ ಕೆಳ ಹಂತದ ನ್ಯಾಯಾಲಯವು ತಡೆಯಾಜ್ಞೆ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಮತ್ತು ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ಕೋರಿ ಶಿಕ್ಷಕರ ಸಂಘದ ಪದಾಧಿಕಾರಿಗಳು ಇಂದು ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್‌ನಲ್ಲಿ ನಡೆದಿದ್ದೇನು? ಸಂಘದ ಪರ ನ್ಯಾಯವಾದಿಗಳು ಮಂಡಿಸಿದ ವಾದವನ್ನು ಆಲಿಸಿದ ಮಾನ್ಯ ಹೈಕೋರ್ಟ್‌ನ ಏಕಸದಸ್ಯ ಪೀಠವು, ಸದ್ಯಕ್ಕೆ ಕೆಳ ನ್ಯಾಯಾಲಯದ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿತು. ತಡೆಯಾಜ್ಞೆ ಮುಂದುವರಿಕೆ: ಕೆಳ ಹಂತದ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆಯನ್ನೇ ಎತ್ತಿ ಹಿಡಿದ ನ್ಯಾಯಾಲಯ, ಸದ್ಯಕ್ಕೆ ಯಾವುದೇ ಚುನಾವಣಾ ಪ್ರಕ್ರಿಯೆ ನಡೆಸದಂತೆ ಸೂಚಿಸಿದೆ. ವಿಚಾರಣೆ ಮುಂದೂಡಿಕೆ: ಈ ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯವು ಮುಂದಿನ…
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿ ಚರಿತ್ರೆ ಸೃಷ್ಟಿಸಿರುವ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ಈಗ ಅಧಿಕಾರದ ಗದ್ದುಗೆ ಏರಲು ಸಜ್ಜಾಗಿದೆ. ಇಂದು ನಡೆದ ಮಹತ್ವದ ಬೆಳವಣಿಗೆಯಲ್ಲಿ, ಟಿವಿಕೆ ಶಾಸಕಾಂಗ ಪಕ್ಷದ ನಾಯಕನಾಗಿ ಪಕ್ಷದ ಸಂಸ್ಥಾಪಕ ಮತ್ತು ನಟ ವಿಜಯ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಶಾಸಕಾಂಗ ಪಕ್ಷದ ಸಭೆ ಚೆನ್ನೈನ ಪಣಿಯೂರಿನಲ್ಲಿರುವ ಟಿವಿಕೆ ಕೇಂದ್ರ ಕಚೇರಿಯಲ್ಲಿ ಇಂದು ನೂತನವಾಗಿ ಆಯ್ಕೆಯಾದ ಶಾಸಕರ ಮಹತ್ವದ ಸಭೆ ನಡೆಯಿತು. ಈ ಸಭೆಯಲ್ಲಿ ಪಕ್ಷದ ಎಲ್ಲಾ 108 ಶಾಸಕರು ಭಾಗವಹಿಸಿದ್ದರು. ಸಭೆಯಲ್ಲಿ ವಿಜಯ್ ಅವರ ಹೆಸರನ್ನು ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಪ್ರಸ್ತಾಪಿಸಲಾಯಿತು ಮತ್ತು ಎಲ್ಲಾ ಶಾಸಕರು ಇದಕ್ಕೆ ಒಮ್ಮತದ ಬೆಂಬಲ ಸೂಚಿಸಿದರು. ಅಧಿಕಾರ ಸ್ವೀಕಾರದತ್ತ ಹೆಜ್ಜೆ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗಿರುವ ವಿಜಯ್ ಅವರು ಶೀಘ್ರದಲ್ಲೇ ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿ ಮಾಡಲಿದ್ದಾರೆ. ತಮ್ಮ ಪಕ್ಷಕ್ಕೆ ಬಹುಮತವಿರುವ ಹಿನ್ನೆಲೆಯಲ್ಲಿ ಸರ್ಕಾರ ರಚಿಸಲು ಹಕ್ಕು ಮಂಡಿಸಲಿದ್ದಾರೆ. ಈ ಮೂಲಕ ತಮಿಳುನಾಡು…
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಡಿಎಂಕೆ (DMK) ಸೋಲನ್ನೊಪ್ಪಿಕೊಂಡ ಬೆನ್ನಲ್ಲೇ, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಂಗಳವಾರ ಸ್ಟಾಲಿನ್ ಮತ್ತು ಅವರ ಸಚಿವ ಸಂಪುಟ ಸಲ್ಲಿಸಿದ್ದ ರಾಜೀನಾಮೆಯನ್ನು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಅಂಗೀಕರಿಸಿದ್ದಾರೆ ಎಂದು ರಾಜಭವನ ಅಧಿಕೃತವಾಗಿ ತಿಳಿಸಿದೆ. ಚುನಾವಣಾ ಫಲಿತಾಂಶದ ಚಿತ್ರಣ 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಈ ಬಾರಿ ಭಾರಿ ಬದಲಾವಣೆ ಕಂಡುಬಂದಿದೆ. ಪ್ರಮುಖ ಪಕ್ಷಗಳ ಬಲಾಬಲ ಹೀಗಿದೆ: ಪಕ್ಷ ಗೆದ್ದ ಸ್ಥಾನಗಳು ಪಾತ್ರ ಟಿವಿಕೆ (TVK – ವಿಜಯ್ ನೇತೃತ್ವ) 108 ಅತಿ ದೊಡ್ಡ ಪಕ್ಷ ಡಿಎಂಕೆ (DMK) 59 ಪ್ರಬಲ ವಿರೋಧ ಪಕ್ಷ ಎಐಎಡಿಎಂಕೆ (AIADMK) 47 ಇತರರು ನಟ ವಿಜಯ್ ನೇತೃತ್ವದ ಟಿವಿಕೆ ಅಬ್ಬರ ತಮಿಳು ಚಿತ್ರರಂಗದ ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ತನ್ನ ಚೊಚ್ಚಲ ಚುನಾವಣೆಯಲ್ಲೇ 108 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.…
ಬೆಂಗಳೂರು: ಯಶವಂತಪುರದಿಂದ ಉತ್ತರಾಖಂಡದ ಪವಿತ್ರ ನಗರಿ ಋಷಿಕೇಶಕ್ಕೆ (ಯೋಗ ನಗರಿ) ತೆರಳುವ ಪ್ರಯಾಣಿಕರಿಗೆ ಮತ್ತು ಯಾತ್ರಾರ್ಥಿಗಳಿಗೆ ನೈಋತ್ಯ ರೈಲ್ವೆಯು ಸಿಹಿ ಸುದ್ದಿಯೊಂದನ್ನು ನೀಡಿದೆ. ಭಾರಿ ಬೇಡಿಕೆಯ ಹಿನ್ನೆಲೆಯಲ್ಲಿ ಯಶವಂತಪುರ-ಯೋಗ ನಗರಿ ಋಷಿಕೇಶ-ಯಶವಂತಪುರ ನಡುವಿನ ಸಾಪ್ತಾಹಿಕ ವಿಶೇಷ ರೈಲು ಸೇವೆಯನ್ನು ಮುಂದಿನ ಕೆಲವು ತಿಂಗಳುಗಳವರೆಗೆ ವಿಸ್ತರಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ವಿಸ್ತರಣೆಯ ವಿವರಗಳು: ಈ ಹಿಂದೆ ನಿಗದಿಪಡಿಸಲಾಗಿದ್ದ ಅವಧಿಯು ಮುಕ್ತಾಯ ಹಂತದಲ್ಲಿದ್ದ ಕಾರಣ, ಪ್ರಯಾಣಿಕರ ಅನುಕೂಲಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಹೊಸ ವೇಳಾಪಟ್ಟಿಯ ಪ್ರಕಾರ: ರೈಲು ಸಂಖ್ಯೆ 06261 (ಯಶವಂತಪುರ – ಯೋಗ ನಗರಿ ಋಷಿಕೇಶ): ಈ ರೈಲು ಪ್ರತಿ ಶುಕ್ರವಾರ ಯಶವಂತಪುರದಿಂದ ಹೊರಡಲಿದ್ದು, ಈ ಸೇವೆಯನ್ನು ಜುಲೈ 2026 ರವರೆಗೆ ವಿಸ್ತರಿಸಲಾಗಿದೆ. ರೈಲು ಸಂಖ್ಯೆ 06262 (ಯೋಗ ನಗರಿ ಋಷಿಕೇಶ – ಯಶವಂತಪುರ): ಈ ರೈಲು ಪ್ರತಿ ಮಂಗಳವಾರ ಋಷಿಕೇಶದಿಂದ ಹೊರಡಲಿದ್ದು, ಈ ಸೇವೆಯೂ ಸಹ ಜುಲೈ ಅಂತ್ಯದವರೆಗೆ ಲಭ್ಯವಿರಲಿದೆ. ಈ ವಿಸ್ತರಣೆಯ ಮಹತ್ವ: ಋಷಿಕೇಶ ಮತ್ತು ಹರಿದ್ವಾರಕ್ಕೆ ದಕ್ಷಿಣ ಭಾರತದಿಂದ,…
ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರವು ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಮತ್ತು ರೈತರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಅತ್ಯಂತ ಪ್ರಮುಖವಾದುದು ‘ಗಂಗಾ ಕಲ್ಯಾಣ ಯೋಜನೆ’. ಮಳೆಯನ್ನೇ ನಂಬಿ ಕೃಷಿ ಮಾಡುವ ಸಣ್ಣ ಮತ್ತು ಅತಿಸಣ್ಣ ರೈತರಿಗೆ ನೀರಾವರಿ ಸೌಲಭ್ಯ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಏನಿದು ಗಂಗಾ ಕಲ್ಯಾಣ ಯೋಜನೆ? ಶುಷ್ಕ ಭೂಮಿ ಅಥವಾ ನೀರಾವರಿ ಸೌಲಭ್ಯವಿಲ್ಲದ ಜಮೀನು ಹೊಂದಿರುವ ರೈತರಿಗೆ ಸರ್ಕಾರವೇ ಉಚಿತವಾಗಿ ಬೋರ್‌ವೆಲ್ ಕೊರೆಸಿಕೊಟ್ಟು, ಅದಕ್ಕೆ ಪಂಪ್‌ಸೆಟ್ ಮತ್ತು ವಿದ್ಯುತ್ ಸಂಪರ್ಕವನ್ನು ಕಲ್ಪಿಸಿಕೊಡುವ ಯೋಜನೆಯೇ ಗಂಗಾ ಕಲ್ಯಾಣ ಯೋಜನೆ. ಈ ಯೋಜನೆಯನ್ನು ವಿವಿಧ ಅಭಿವೃದ್ಧಿ ನಿಗಮಗಳ ಮೂಲಕ ಅನುಷ್ಠಾನಗೊಳಿಸಲಾಗುತ್ತದೆ (ಉದಾಹರಣೆಗೆ: ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ಇತ್ಯಾದಿ). ಯೋಜನೆಯ ಪ್ರಮುಖ ಪ್ರಯೋಜನಗಳು: ಉಚಿತ ಬೋರ್‌ವೆಲ್: ರೈತರ ಜಮೀನಿನಲ್ಲಿ ಸರ್ಕಾರವೇ ಉಚಿತವಾಗಿ ಕೊಳವೆಬಾವಿ ಕೊರೆಸುತ್ತದೆ. ಪಂಪ್‌ಸೆಟ್ ವಿತರಣೆ: ನೀರು ಎತ್ತಲು…
ಬ್ರಿಟನ್: ವಿಜ್ಞಾನ ಮತ್ತು ಪ್ರಕೃತಿಯಲ್ಲಿ ಅಚ್ಚರಿಗಳಿಗೆ ಕೊನೆಯಿಲ್ಲ ಎಂಬುದಕ್ಕೆ ಯುನೈಟೆಡ್ ಕಿಂಗ್‌ಡಮ್‌ನ ಈ ಘಟನೆ ಸಾಕ್ಷಿಯಾಗಿದೆ. ಸುಮಾರು 49 ವರ್ಷಗಳ ಕಾಲ ತಾವು ಅವಳಿ ಸಹೋದರಿಯರೆಂದು ನಂಬಿದ್ದ ಮಿಚೆಲ್ ಮತ್ತು ಲಾವಿನಿಯಾ ಓಸ್ಬೋರ್ನ್ ಎಂಬುವವರಿಗೆ ಡಿಎನ್‌ಎ (DNA) ಪರೀಕ್ಷೆಯ ನಂತರ ಅಚ್ಚರಿಯ ಸತ್ಯವೊಂದು ತಿಳಿದುಬಂದಿದೆ. ಅವರಿಬ್ಬರೂ ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ್ದರೂ, ಅವರಿಬ್ಬರ ತಂದೆ ಬೇರೆ ಬೇರೆ ಎಂಬ ವಿಷಯ ಈಗ ಜಗತ್ತನ್ನೇ ಬೆರಗುಗೊಳಿಸಿದೆ. ಘಟನೆಯ ಹಿನ್ನೆಲೆ ಮಿಚೆಲ್ ಮತ್ತು ಲಾವಿನಿಯಾ 1976 ರಲ್ಲಿ ನಾಟಿಂಗ್‌ಹ್ಯಾಮ್‌ನಲ್ಲಿ ಕೇವಲ ಕೆಲವು ನಿಮಿಷಗಳ ಅಂತರದಲ್ಲಿ ಜನಿಸಿದ್ದರು. ದಶಕಗಳ ಕಾಲ ಅವರು ಸಾಮಾನ್ಯ ಅವಳಿಗಳಂತೆಯೇ ಬೆಳೆದರು. ಆದರೆ, ಇತ್ತೀಚೆಗೆ ಕುತೂಹಲಕ್ಕಾಗಿ ಮನೆಯಲ್ಲೇ ಮಾಡಬಹುದಾದ ಡಿಎನ್‌ಎ ಪರೀಕ್ಷೆಯನ್ನು ಮಾಡಿಸಿಕೊಂಡಾಗ, ಅವರ ನಡುವೆ ಕೇವಲ ಅರ್ಧ-ಸಹೋದರಿ (Half-sisters) ಸಂಬಂಧ ಇರುವುದು ಪತ್ತೆಯಾಗಿದೆ. ಅಂದರೆ ಅವರ ತಾಯಿ ಒಬ್ಬರೇ ಆದರೂ, ತಂದೆ ಇಬ್ಬರು ಎಂಬುದು ದೃಢಪಟ್ಟಿದೆ. ಏನಿದು ವೈಜ್ಞಾನಿಕ ವಿದ್ಯಮಾನ? ವೈದ್ಯಕೀಯ ವಿಜ್ಞಾನದಲ್ಲಿ ಇದನ್ನು ‘ಹೆಟೆರೊಪಟರ್ನಲ್ ಸೂಪರ್‌ಫೆಕಂಡೇಶನ್’ (Heteropaternal Superfecundation)…














