Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ದ್ವೇಷಭಾಷಣ ಪ್ರತಿಬಂಧಕ ಮಸೂದೆ ವಾಕ್ ಸ್ವಾತಂತ್ರ್ಯವನ್ನು ಕಸಿಯಲಿದೆ. ಈ ಕುರಿತು ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಡುತ್ತೇವೆ. ಕೇರಳದಲ್ಲಿ ಕನ್ನಡ ಭಾಷೆಗೆ ಧಕ್ಕೆ, ಇದು ಮೊದಲೇ ಆಗಿರುವ ಮ್ಯಾಚ್ ಫಿಕ್ಸಿಂಗ್ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದ್ವೇಷಭಾಷಣ ಪ್ರತಿಬಂಧಕ ಮಸೂದೆಯ ಬಗ್ಗೆ ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ನೀಡಬೇಕಿತ್ತು. ಇಂತಹ ಮಸೂದೆ ತರುವಾಗ ಅದು ಜನರ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂದು ನೋಡಬೇಕಾಗುತ್ತದೆ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ಮಸೂದೆ ಬಗ್ಗೆ ಚರ್ಚೆ ನಡೆಸಲು ಅವಕಾಶವಿದೆ. ವಿಧಾನಸಭೆ ಇರುವುದು ಮಸೂದೆ ಮಂಡನೆ ಹಾಗೂ ಚರ್ಚೆಗೇ ಹೊರತು ಗಲಾಟೆ ಮಾಡುವುದಕ್ಕಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಇದರ ಚರ್ಚೆಗೆ ಅವಕಾಶ ನೀಡಲಿಲ್ಲ. ನಾನು ಮಸೂದೆಯ ಬಗ್ಗೆ ಚರ್ಚೆ ಮಾಡಲು ಮುಂದಾದಾಗ ಕಾಂಗ್ರೆಸ್ ಶಾಸಕರು, ಸಚಿವರು ಭಯಗೊಂಡು ತರಾತುರಿಯಲ್ಲಿ ಮಸೂದೆ ಮಂಡನೆ ಮಾಡಿದರು. ಈ ವಿಚಾರದಲ್ಲಿ ಸ್ಪೀಕರ್ ಯು.ಟಿ.ಖಾದರ್ ಅವರ ನಡೆಯೂ ನನಗೆ ಬೇಸರ ತಂದಿದೆ ಎಂದರು. ಬಿಜೆಪಿಯಲ್ಲಿ 15 ಶಾಸಕರು…
ಬೆಂಗಳೂರು : ತಲಾ ಆದಾಯದಲ್ಲಿ ನಮ್ಮ ರಾಜ್ಯವು ದೇಶದಲ್ಲೇ ಮೊದಲ ಸ್ಥಾನದಲ್ಲಿರಲು ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳೇ ಕಾರಣ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ. ಡಾ.ಬಿ.ಅರ್. ಅಂಬೇಡ್ಕರ್ ವೈದ್ಯಕೀಯ ಮತ್ತು ಆಸ್ಪತ್ರೆ ಸಮೂಹ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ಸಂಸ್ಥಾಪಕರ ದಿನಾಚರಣೆಯಲ್ಲಿ ಭಾಗವಹಿಸಿ ಸಚಿವರು ಮಾತನಾಡಿದರು. “ತ್ಯಾಗ ಮತ್ತು ಮಮತೆಯ ಪ್ರತೀಕ ಎನಿಸಿರುವ ಮಹಿಳೆಯರಿಗೆ ನಮ್ಮ ಸರ್ಕಾರವು ಗ್ಯಾರಂಟಿ ಯೋಜನೆಗಳ ಮೂಲಕ ಆರ್ಥಿಕ ಶಕ್ತಿ ತುಂಬಿದೆ. ಇದರಿಂದಾಗಿಯೇ ತಲಾ ಆದಾಯದಲ್ಲಿ ನಾವು ದೇಶದಲ್ಲೇ ನಂಬರ್ ಒನ್ ಸ್ಥಾನಕ್ಕೇರಿದ್ದೇವೆ ಎಂದು ಹೇಳಲು ಹೆಮ್ಮೆಯಾಗುತ್ತದೆ. ಯೋಜನೆಗಳಿಂದ ಒಂದು ಕುಟುಂಬಕ್ಕೆ ಸುಮಾರು ಐದು ಸಾವಿರದ ಐನೂರು ರೂಪಾಯಿ ಸಂದಾಯ ಆಗಲಿದೆ. ಇದರಿಂದ ಕುಟುಂಬಗಳು ಸಬಲವಾಗುವ ಜತೆಗೆ ರಾಜ್ಯದ ಆರ್ಥಿಕ ವಹಿವಾಟಿನಲ್ಲೂ ಏರಿಕೆ ಕಂಡಿದೆ. ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಿವೆ. ಮುಖ್ಯವಾಗಿ ಜನರ ಖರೀದಿ ಶಕ್ತಿ ಹೆಚ್ಚಿದೆ,”ಎಂದು ಹೇಳಿದರು. “ಇಂದಿರಾ ಗಾಂಧಿ ಅವರು ಹೇಳಿದಂತೆ ಸರ್ಕಾರವು ಎಲ್ಲರನ್ನೊಳಗೊಳ್ಳುವ ಸರ್ಕಾರವಾಗಬೇಕು. ಸಂಪತ್ತು ಕೇವಲ ಒಂದು ವರ್ಗದ ಸ್ವತ್ತಾಗದೆ, ಸಮರ್ಪಕವಾಗಿ…
ಬೆಂಗಳೂರು: ಅಮೃತ ಮಹೋತ್ಸವ ಪ್ರಯುಕ್ತ ಬೆಂಗಳೂರಿನ ಬಡ ಕುಟುಂಬಗಳಿಗೆ ವಸತಿ ಕಲ್ಪಿಸಲು ಜಿಬಿ ಎ (ಹಿಂದಿನ ) ಬಿಬಿಎಂಪಿ 550 ಫಲಾನುಭವಿಗಳಿಗೆ ತಲಾ ಐದು ಲಕ್ಷ ರೂ. ನಂತೆ ರಾಜೀವ್ ಗಾಂಧಿ ವಸತಿ ನಿಗಮದ ಖಾತೆಗೆ ಜಮೆ ಮಾಡಿದೆ. ಆದರೆ ಫಲಾನುಭವಿಗಳ ಪಟ್ಟಿ ಕೊಡದ ಕಾರಣ ಮನೆ ಹಂಚಿಕೆ ಮಾಡಿಲ್ಲ ಎಂದು ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪರಶುರಾಮ್ ಶಿನ್ನಾಳ್ಕರ್ ಸ್ಪಷ್ಟ ಪಡಿಸಿದ್ದಾರೆ. ಜಿಬಿಎ ಜಮೆ ಮಾಡಿರುವ ಮೊತ್ತ ಸುರಕ್ಷಿತ ವಾಗಿದ್ದು ಯಾವುದೇ ಆತಂಕ ಪಡಬೇಕಿಲ್ಲ. ಪಾಲಿಕೆ ವತಿಯಿಂದ ಫಲಾನುಭವಿಗಳ ಪಟ್ಟಿ ಕೊಟ್ಟ ತಕ್ಷಣ ಮುಖ್ಯಮಂತ್ರಿ ಯವರ ಒಂದು ಲಕ್ಷ ಮನೆ ಯೋಜನೆಯಡಿಯಲ್ಲಿ ಮನೆ ಹಂಚಿಕೆ ಮಾಡಲಾಗುವುದು. 19 ಸಾವಿರ ಮನೆಗಳು ಈಗಾಗಲೇ ಹಂಚಿಕೆಗೆ ಸಿದ್ದವಿದೆ ಎಂದು ಹೇಳಿದ್ದಾರೆ. ಈಗಾಗಲೇ ಫಲಾನುಭವಿಗಳ ಪಟ್ಟಿ ನೀಡುವ ಸಂಬಂಧ ಹಲವಾರು ಬಾರಿ ಪತ್ರ ಬರೆಯಲಾಗಿದೆ. ಆದರೂ ಪಾಲಿಕೆ ವತಿಯಿಂದ ಪಟ್ಟಿ ಬಂದಿಲ್ಲ. ಫಲಾನುಭವಿಗಳ ಪಟ್ಟಿ ಕಳುಹಿಸುವವರೆಗೂ ಈ ಹಣ ಬಳಕೆ ಮಾಡುವಂತಿಲ್ಲ…
ದೇವನಹಳ್ಳಿ : ಮನರೇಗಾ ಯೋಜನೆಯ ಹೆಸರಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ವಿಬಿ ಜಿ ರಾಮ್ಜಿ ಯೋಜನೆ ಅಂತ್ಯಗೊಳಿಸಿದೆ. ಆದರೆ ಕಾಂಗ್ರೆಸ್ ನಾಯಕರು ಕೇವಲ ಹೆಸರು ಬದಲಾವಣೆಯ ವಿಚಾರವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಮನರೇಗಾ ಯೋಜನೆಯನ್ನು ಸುಧಾರಣೆ ಮಾಡಿ ವಿಬಿ ಜಿ ರಾಮ್ ಜಿ ಯೋಜನೆ ತಂದಿದೆ. ಇದು 2047 ರ ‘ವಿಕಸಿತ ಭಾರತ’ದ ಗುರಿಯನ್ನು ತಲುಪಲು ಪೂರಕವಾಗಿದೆ. 2005 ರ ಮೂಲ ಕಾಯಿದೆಯನ್ನು ಈಗಿನ ಕಾಲಕ್ಕೆ ತಕ್ಕಂತೆ ಸುಧಾರಣೆ ಮಾಡುವುದು ಅನಿವಾರ್ಯವಾಗಿತ್ತು. ಯುಪಿಎ ಆಡಳಿತದ ಅವಧಿಯಲ್ಲಿ ಈ ಯೋಜನೆಯಡಿ ಭ್ರಷ್ಟಾಚಾರ ಹಾಗೂ ರಾಜಕೀಯ ಹಸ್ತಕ್ಷೇಪ ನಡೆಯುತ್ತಿತ್ತು. ಗ್ರಾಮ ಪಂಚಾಯಿತಿಗಳ ಪಾತ್ರ ಹೆಸರಿಗೆ ಮಾತ್ರವಿದ್ದು, ರಾಜಕೀಯ ತೀರ್ಮಾನಗಳೇ ಹೆಚ್ಚಾಗಿರುತ್ತಿತ್ತು. ಇದನ್ನು ಸ್ಥಳೀಯ ಶಾಸಕರು ಮತ್ತು ಕಾರ್ಯಕರ್ತರು ನಿಯಂತ್ರಣ ಮಾಡುತ್ತಿದ್ದರು. ಹಾಜರಾತಿಯಲ್ಲಿ ಭ್ರಷ್ಟಾಚಾರ ಸಾಮಾನ್ಯವಾಗಿದ್ದು, 10 ಜನ ಕೆಲಸಕ್ಕೆ ಬಂದರೆ 50 ಜನರ ಹೆಸರು ನೋಂದಾಯಿಸಲಾಗುತ್ತಿತ್ತು. ಯೋಜನೆಯ ಹಣದಲ್ಲಿ…
ಬೆಂಗಳೂರು: ನಮ್ಮ ಮೆಟ್ರೋ ಕಾಳೆನ ಅಗ್ರಹಾರದಿಂದ ತಾವರೆಕೆರೆಯವರೆಗೆ ಇರುವ ಗುಲಾಬಿ ಮಾರ್ಗದಲ್ಲಿ (ಸುಮಾರು 7.5 ಕಿಮೀ ಉದ್ದ) ರೋಲಿಂಗ್ ಸ್ಟಾಕ್ ಪರೀಕ್ಷೆಗಳನ್ನು ದಿನಾಂಕ 11ನೇ ಜನವರಿ 2026 ರಿಂದ ಆರಂಭಿಸಿ ಏಪ್ರಿಲ್ 2026ರ ಮಧ್ಯಭಾಗದೊಳಗೆ ನಿಗಮವು ಪೂರ್ಣಗೊಳಿಸುವ ಯೋಜನೆ ಹೊಂದಿದೆ. ಈ ಮುಖ್ಯ ಪರೀಕ್ಷೆಗಳು (Main Line Testing) ವಾಣಿಜ್ಯ ಸಂಚಾರ ಮಾಡುವ ಮೊದಲು ಕೈಗೊಳ್ಳಲಾಗುವ ಅತ್ಯಂತ ಮಹತ್ವದ ಚಟುವಟಿಕೆಯಾಗಿದ್ದು, ನೈಜ ಕ್ಷೇತ್ರ ಪರಿಸ್ಥಿತಿಗಳಲ್ಲಿ ರೈಲುಗಳ ಕಾರ್ಯಕ್ಷಮತೆ ಹಾಗೂ ವ್ಯವಸ್ಥೆಗಳ ಪರಸ್ಪರ ಸಂಯೋಜನೆಯ ಸಮಗ್ರ ಪರಿಶೀಲನೆಯನ್ನು ಒಳಗೊಂಡಿರುತ್ತದೆ. ಶಾಸನಬದ್ಧ ಅನುಮೋದನೆಗಳನ್ನು ಪಡೆಯಲು ಈ ಪರೀಕ್ಷೆಗಳು ಅಗತ್ಯವಾಗಿದೆ. ಮೇಲ್ಕಂಡ ಅವಧಿಯಲ್ಲಿ ಟ್ರಾಕ್ಷನ್ ಮತ್ತು ಬ್ರೇಕ್, ಆಸಿಲೇಷನ್ (Oscillation), ಸಿಗ್ನಲಿಂಗ್, ವಿದ್ಯುತ್ ಮತ್ತು ದೂರಸಂಪರ್ಕ ವ್ಯವಸ್ಥೆಗಳೊಂದಿಗೆ ಏಕೀಕರಣ (Integration) ಸೇರಿದಂತೆ ಹಲವು ಪರೀಕ್ಷೆಗಳು ನಡೆಸಲಾಗುತ್ತವೆ. ಇದು ಗುಲಾಬಿ ಮಾರ್ಗದಲ್ಲಿನ ಯೋಜನೆಯ ಮಹತ್ವದ ಮೈಲಿಗಲ್ಲಿನತ್ತ ಸಾಗುತ್ತಿರುವುದನ್ನು ಸೂಚಿಸುತ್ತದೆ. ಸಾರ್ವಜನಿಕ ಸೇವೆಗೆ ಸದರಿ ಮಾರ್ಗ ತೆರೆಯುವ ಮೊದಲು ಅತ್ಯುನ್ನತ ಮಟ್ಟದ ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳಲು ಬಿಎಂಆರ್ಸಿಎಲ್…
ನವದೆಹಲಿ: ಪ್ರತಿ ವರ್ಷ ಕೇಂದ್ರ ಬಜೆಟ್ ಭಾರತದಲ್ಲಿ ಅತ್ಯಂತ ಸೂಕ್ಷ್ಮವಾಗಿ ವೀಕ್ಷಿಸಲ್ಪಡುವ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಏಕೆಂದರೆ ಇದು ದೇಶದ ಆರ್ಥಿಕ ಮಾರ್ಗಸೂಚಿಯನ್ನು ಹೊಂದಿಸುತ್ತದೆ. ಸಾಂಪ್ರದಾಯಿಕವಾಗಿ, ಫೆಬ್ರವರಿ 1 ರಂದು ಹಣಕಾಸು ಸಚಿವರು ಬಜೆಟ್ ಮಂಡಿಸುತ್ತಾರೆ ಮತ್ತು ಕಳೆದ ಹಲವಾರು ವರ್ಷಗಳಿಂದ, ಈ ಜವಾಬ್ದಾರಿಯನ್ನು ನಿರ್ಮಲಾ ಸೀತಾರಾಮನ್ ಹೊತ್ತಿದ್ದಾರೆ. ಈ ವರ್ಷವೂ ಅವರು ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಆದಾಗ್ಯೂ, ಫೆಬ್ರವರಿ 1 ಭಾನುವಾರದಂದು ಬರುವುದರಿಂದ ಬಜೆಟ್ ಇನ್ನೂ ಆ ದಿನದಂದು ಮಂಡನೆಯಾಗುತ್ತದೆಯೇ ಎಂಬ ಪ್ರಶ್ನೆಗಳು ಉದ್ಭವಿಸುತ್ತಿವೆ. ಇಲ್ಲಿಯವರೆಗೆ, ಸರ್ಕಾರ ಯಾವುದೇ ಅಧಿಕೃತ ಸ್ಪಷ್ಟೀಕರಣವನ್ನು ನೀಡಿಲ್ಲ, ಆದ್ದರಿಂದ ಅಂತಿಮ ನಿರ್ಧಾರಕ್ಕಾಗಿ ಇನ್ನೂ ಕಾಯಲಾಗುತ್ತಿದೆ. ಫೆಬ್ರವರಿ 1 ರಂದು ಕೇಂದ್ರ ಬಜೆಟ್ ಅನ್ನು ಏಕೆ ಮಂಡಿಸಲಾಗುತ್ತದೆ? ಕುತೂಹಲಕಾರಿಯಾಗಿ, ಫೆಬ್ರವರಿ 1 ಯಾವಾಗಲೂ ಬಜೆಟ್ ದಿನವಾಗಿರಲಿಲ್ಲ. 2017 ರ ಮೊದಲು, ಭಾರತವು ಫೆಬ್ರವರಿಯ ಕೊನೆಯ ಕೆಲಸದ ದಿನದಂದು ಬಜೆಟ್ ಮಂಡಿಸುವ ಬ್ರಿಟಿಷ್ ಯುಗದ ಪದ್ಧತಿಯನ್ನು ಅನುಸರಿಸುತ್ತಿತ್ತು. ಏಪ್ರಿಲ್ 1 ರಂದು ಹೊಸ ಹಣಕಾಸು ವರ್ಷ ಪ್ರಾರಂಭವಾಗುವ ಮೊದಲು…
ಬೆಂಗಳೂರು: ವಿಬಿ ಜಿ ರಾಮ್ ಜಿ ಯೋಜನೆಗೆ ಹಣ ನೀಡಲು ಕೂಡ ಕಾಂಗ್ರೆಸ್ ಬಳಿ ಅನುದಾನವಿಲ್ಲ. ಆ ಮಟ್ಟಿಗೆ ಖಜಾನೆ ಖಾಲಿಯಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಇಷ್ಟು ದಿನ ಮನರೇಗಾ ಅಡಿಯಲ್ಲಿ ಹಣ ಕಳ್ಳತನ ಮಾಡುತ್ತಿತ್ತು. ಈಗ ಪ್ರಧಾನಿ ನರೇಂದ್ರ ಮೋದಿ ವಿಬಿ ಜಿ ರಾಮ್ ಜಿ ಯೋಜನೆ ಜಾರಿ ಮಾಡಿ ಪಾರದರ್ಶಕತೆ ಹೆಚ್ಚಿಸಿದ್ದಾರೆ. ಈ ಹಿಂದೆ ಪೂರ್ಣ ಅನುದಾನ ಬರುತ್ತಿದ್ದರೆ, ಈಗ 60-40 ರಂತೆ ಅನುದಾನ ಹಂಚಿಕೆ ಮಾಡಬೇಕಿದೆ. ಆದರೆ 40% ಹಣ ನೀಡಲು ಕೂಡ ಕಾಂಗ್ರೆಸ್ ಬಳಿ ಅನುದಾನವಿಲ್ಲ. ಆ ಮಟ್ಟಿಗೆ ಕಾಂಗ್ರೆಸ್ ಸರ್ಕಾರದ ಖಜಾನೆ ಖಾಲಿಯಾಗಿದೆ. ರೈಲು, ಮೆಟ್ರೋ ಸೇರಿದಂತೆ ಅನೇಕ ಯೋಜನೆಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾಲು ಇದೆ. ಅದೇ ರೀತಿ ಈಗ ಪಾಲು ಮಾಡಬಹುದು ಎಂದರು. ಮನಮೋಹನ್ ಸಿಂಗ್ ಸರ್ಕಾರದ ಅವಧಿಯಲ್ಲಿ ಈ ಯೋಜನೆಗೆ 2 ಲಕ್ಷ ಕೋಟಿ ರೂ. ನೀಡಿದ್ದರೆ, ಮೋದಿ ಸರ್ಕಾರದ…
ಬೆಂಗಳೂರು : ಕುಮಾರಸ್ವಾಮಿ ಅವರು ಕೇವಲವಾಗಿ ಮಾತನಾಡುವುದನ್ನು ಬಿಟ್ಟು ರಾಜ್ಯದ ಹಿತ ಕಾಪಾಡಲಿ, ಎಚ್ಎಂಟಿಯವರಿಗೆ ನ್ಯಾಯ ಕೊಡಿಸಲಿ ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಅವರು ತಿರುಗೇಟು ನೀಡಿದರು. ಸದಾಶಿವನಗರ ನಿವಾಸದಲ್ಲಿ ಸುರೇಶ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಶನಿವಾರ ಪ್ರತಿಕ್ರಿಯೆ ನೀಡಿದರು. ಬಳ್ಳಾರಿ ಗಲಭೆ ವಿಚಾರದಿಂದ ಡಿ.ಕೆ. ಶಿವಕುಮಾರ್ ಹಾಗೂ ಕುಮಾರಸ್ವಾಮಿ ನಡುವೆ ರಾಜಕೀಯ ಅನುಭವದ ವಾಕ್ಸಮರ ನಡೆಯುತ್ತಿರುವ ಬಗ್ಗೆ ಕೇಳಿದಾಗ, “ಸುಮ್ಮನೆ ಇಲ್ಲಸಲ್ಲದ್ದು ಯಾಕೆ ಹೇಳುತ್ತೀರಿ. ಮಂಡ್ಯ ಶಾಸಕ ಗಣಿಗ ರವಿ ಅವರು 100 ಎಕರೆ ಜಾಗವನ್ನು ನಿರ್ಧರಿಸಿದ್ದಾರಂತೆ. ಅವರಿಗೆ ಏನು ಅಧಿಕಾರ ಇದೆ ಎಂದು ಕುಮಾರಸ್ವಾಮಿ ಅವರು ಕೇಳುತ್ತಾರೆ. ಅವರಿಗೆ ಅಧಿಕಾರ ಇದೆಯೋ ಇಲ್ಲವೋ, ಸರ್ಕಾರಿ ಜಾಗ ಎಲ್ಲಿದೆ ಎಂದು ಅವರು ಗುರುತಿಸಿದ್ದಾರೆ. ಅಲ್ಲಿಯ ಜನರಿಗೆ ಉದ್ಯೋಗ ಕೊಡಿಸಲು ನಿಮ್ಮ ಇಲಾಖೆಯಿಂದ ಏನು ಮಾಡುತ್ತೀರಿ ಅದನ್ನು ಹೇಳಿ. ಹೆಚ್ಎಂಟಿ ಉದ್ಧಾರ ಮಾಡುವುದಾಗಿ ಮಾತನಾಡುತ್ತಿದ್ದರಲ್ಲ, ಆ ಕೆಲಸ ಮಾಡಲಿ” ಎಂದು ತಿರುಗೇಟು ನೀಡಿದರು. ಸಿಡಿ ಫ್ಯಾಕ್ಟರಿ ಇರುವುದು, ತಯಾರಾಗಿದ್ದು ಹಾಸನದ…
ನವದೆಹಲಿ: ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಜಾಗತಿಕ ಗುಣಮಟ್ಟದ ಕ್ರೀಡಾ ಮೂಲಸೌಕರ್ಯ ಕಲ್ಪಿಸುವ ಉದೇಶಕ್ಕಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಮನವಿಯ ಮೇರೆಗೆ ಕೇಂದ್ರ ಸರ್ಕಾರವು ₹14 ಕೋಟಿ ಮಂಜೂರು ಮಾಡಿದೆ. ಜಿಲ್ಲೆಯಲ್ಲಿ ಕ್ರೀಡಾ ಸೌಕರ್ಯವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಸಚಿವ ಕುಮಾರಸ್ವಾಮಿ ಅವರು ಕೇಂದ್ರದ ಕ್ರೀಡಾ ಮತ್ತು ಯುವಜನ ಸಬಲೀಕರಣ ಖಾತೆ ಸಚಿವ ಮನ್ಸುಖ್ ಮಾಂಡವೀಯ ಅವರಿಗೆ ಪತ್ರ ಬರೆದು ವಿನಂತಿಸಿದ್ದರು. ಮನವಿಗೆ ತಕ್ಷಣ ಸ್ಪಂದಿಸಿರುವ ಕ್ರೀಡಾ ಸಚಿವರು; ಖೇಲೋ ಇಂಡಿಯಾ ಯೋಜನೆಯಡಿ ಮಂಡ್ಯ ಜಿಲ್ಲೆಯಲ್ಲಿ ಬಹುಪಯೋಗಿ ಕ್ರೀಡಾ ಸೌಲಭ್ಯ ನಿರ್ಮಾಣಕ್ಕೆ ₹14 ಕೋಟಿ ಮಂಜೂರು ಮಾಡಿದ್ದಾರೆ. ₹14 ಕೋಟಿ ಅನುಮೋದಿತ ವೆಚ್ಚದಲ್ಲಿ ಮಂಡ್ಯದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಬಹುಪಯೋಗಿ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಸಚಿವ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ. ಮಂಡ್ಯ ಜಿಲ್ಲೆಯ ಅನೇಕ ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯ ಮತ್ತು ರಾಷ್ಟ್ರವನ್ನು ಪ್ರತಿನಿಧಿಸಿದ್ದಾರೆ. ಅನೇಕ ಯುವ ಪ್ರತಿಭೆಗಳು ಜಿಲ್ಲೆಯಲ್ಲಿ ಅವಕಾಶ ಸಿಗದೆ…
ಶಿವಮೊಗ್ಗ: ಬಡಜನರ ಹಸಿವು ನೀಗಿಸುವ ಸದುದ್ದೇಶದಿಂದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಇಂದಿರಾ ಕ್ಯಾಂಟಿನ್ ಯೋಜನೆ ಜಾರಿಗೆ ತಂದಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ಅವರು ಹೇಳಿದ್ದಾರೆ. ಶುಚಿ-ರುಚಿಯಾದ ಪೌಷ್ಟಿಕ ಆಹಾರವನ್ನು ಕೈಗೆಟುಕುವ ದರದಲ್ಲಿ ಪೂರೈಸುವ ಕನಸಿನೊಂದಿಗೆ ಕಾಂಗ್ರೆಸ್ ಸರ್ಕಾರ ಆರಂಭಿಸಿದ “ಇಂದಿರಾ ಕ್ಯಾಂಟೀನ್” ಅನ್ನು ಇಂದು ಶಿವಮೊಗ್ಗದ ವಿದ್ಯಾನಗರದಲ್ಲಿ ಉದ್ಘಾಟಿಸಿ, ಮುಖಂಡರುಗಳೊಂದಿಗೆ ಉಪಹಾರವನ್ನು ಸವಿದರು. ಶುಚಿ, ರುಚಿಯಾಗಿ ಹೊಸ ಬಗೆಯ ಆಹಾರದೊಂದಿಗೆ ಗ್ರಾಹಕರ ಸೇವೆಗೆ “ಇಂದಿರಾ ಕ್ಯಾಂಟೀನ್” ಸಿದ್ಧಗೊಂಡಿದ್ದು, ಗ್ರಾಹಕರು ಇದರ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಈ ಕ್ಯಾಂಟೀನ್ ಆಟೋ ಚಾಲಕರಿಗೆ ಹಾಗೂ ಕೂಲಿ ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ ಮತ್ತು ಬಡ ಕುಟುಂಬಗಳಿಗೆ ನಿಜವಾದ ಆಶಾಕಿರಣವಾಗಿದೆ. ಇದುವೇ ಕಾಂಗ್ರೆಸ್ ಸರ್ಕಾರದ ಜನಪರ ಚಿಂತನೆ ಮತ್ತು ಸಾಮಾಜಿಕ ನ್ಯಾಯದ ಪ್ರತಿರೂಪವಾಗಿದೆ ಎಂದರು.














