Subscribe to Updates
Get the latest creative news from FooBar about art, design and business.
Author: kannadanewsnow09
ನವದೆಹಲಿ: 24 ವರ್ಷಗಳ ಹಿಂದೆ ದೆಹಲಿಯ ಕೆಂಪು ಕೋಟೆಯ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದಕ್ಕಾಗಿ ಶಿಕ್ಷೆಗೊಳಗಾದ ಪಾಕಿಸ್ತಾನಿ ಭಯೋತ್ಪಾದಕ ಮೊಹಮ್ಮದ್ ಆರಿಫ್ ಅಲಿಯಾಸ್ ಅಶ್ಫಾಕ್ ಅವರ ಕ್ಷಮಾದಾನ ಅರ್ಜಿಯನ್ನು ಅಧ್ಯಕ್ಷ ದ್ರೌಪದಿ ಮುರ್ಮು ತಿರಸ್ಕರಿಸಿದ್ದಾರೆ. ನವೆಂಬರ್ 2022 ರಲ್ಲಿ, ಸುಪ್ರೀಂ ಕೋರ್ಟ್ ಅವರ ಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿ, ಅವರ ಮರಣದಂಡನೆಯನ್ನು ಎತ್ತಿಹಿಡಿದಿತ್ತು. ಮೇ 15 ರಂದು ಸ್ವೀಕರಿಸಿದ ಆರಿಫ್ನಿಂದ ಬಂದ ಕ್ಷಮಾದಾನ ಅರ್ಜಿಯನ್ನು ಮೇ 27 ರಂದು ತಿರಸ್ಕರಿಸಲಾಗಿದೆ ಎಂದು ಮೇ 29 ರ ರಾಷ್ಟ್ರಪತಿಗಳ ಸಚಿವಾಲಯದ ಆದೇಶವನ್ನು ಉಲ್ಲೇಖಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಕೆಂಪು ಕೋಟೆ ದಾಳಿಯು ಭಾರತದ ಏಕತೆ, ಸಮಗ್ರತೆ ಮತ್ತು ಸಾರ್ವಭೌಮತ್ವದ ವಿರುದ್ಧದ ಬೆದರಿಕೆಯಾಗಿದೆ ಎಂದು 2022 ರಲ್ಲಿ ಸುಪ್ರೀಂ ಕೋರ್ಟ್ ಗಮನಿಸಿತ್ತು. ಅಪರಾಧಿಯ ಪರವಾಗಿ ಯಾವುದೇ ತಗ್ಗಿಸುವ ಸಂದರ್ಭಗಳಿಲ್ಲ ಎಂದು ಅದು ಹೇಳಿದೆ. 2000ನೇ ಇಸವಿಯ ಡಿಸೆಂಬರ್ 22ರಂದು ಈ ದಾಳಿ ನಡೆದಿತ್ತು. ಕೆಂಪು ಕೋಟೆಯೊಳಗೆ ಬೀಡುಬಿಟ್ಟಿದ್ದ 7 ರಜಪೂತಾನಾ ರೈಫಲ್ಸ್ ಘಟಕದ ಮೂವರು ಸೇನಾ…
ಬೆಂಗಳೂರು: ರಾಜ್ಯ ಸರ್ಕಾರದಿಂದ ಸರ್ಕಾರಿ ಜಮೀನು ರಕ್ಷಣೆಗೆ, ಭೂ ಗಳ್ಳರ ನಿಯಂತ್ರಣಕ್ಕೆ ಮಹತ್ವದ ಕ್ರಮ, ದಿಟ್ಟ ಹೆಜ್ಜೆ ಇರಿಸಲಾಗಿದೆ. ಅದೇ ಲ್ಯಾಂಡ್ ಬೀಟ್ ಅಪ್ಲಿಕೇಷನ್ ಅಭಿವೃದ್ಧಿ ಪಡಿಸಿದೆ. ಈ ಅಪ್ಲಿಕೇಷನ್ ಮೂಲಕ ಆನ್ ಲೈನ್ ಗಸ್ತು ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಹೌದು ರಾಜ್ಯದ ಸರ್ಕಾರಿ ಜಮೀನು ರಕ್ಷಣೆಗೆ ಸರ್ಕಾರ ದಿಟ್ಟ ಕ್ರಮ ತೆಗೆದುಕೊಂಡಿದ್ದು, ಲ್ಯಾಂಡ್ ಬೀಟ್ ಅಪ್ಲಿಕೇಶನ್ ಮೂಲಕ ಅಕ್ರಮವಾಗಿ ಭೂ ಒತ್ತುವರಿಗೆ ಕಡಿವಾಣ ಹಾಕುವಲ್ಲಿ ಪ್ರಮುಖ ಹೆಜ್ಜೆ ಇಟ್ಟಿದೆ. ಈ ಅಪ್ಲಿಕೇಶನ್ ಮೂಲಕ ಬೆರಳ ತುದಿಯಲ್ಲೇ ಸುಮಾರು 14 ಲಕ್ಷ ಸರ್ಕಾರಿ ಆಸ್ತಿಗಳ ಸಂಕ್ಷಿಪ್ತ ವಿವರಗಳು ಲಭ್ಯವಿದೆ. ಪಹಣಿದಾರರ ಜಮೀನುಗಳ ರಕ್ಷಣೆಗೂ ಅತ್ಯಪಯುಕ್ತ ಮಾಹಿತಿ ಸಿಗುತ್ತದೆ. https://twitter.com/KarnatakaVarthe/status/1800845271049400455 https://kannadanewsnow.com/kannada/renukaswamy-murder-case-darshan-offers-rs-5-lakh-to-surrendered-actor-darshan/ https://kannadanewsnow.com/kannada/kmdc-advances-rs-72-78-crore-to-7616-students-for-higher-education/
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈವರೆಗೆ 13 ಆರೋಪಿಗಳ ವಿರುದ್ಧ ಕೇಸ್ ದಾಖಲಾಗಿದೆ ಎನ್ನಲಾಗಿತ್ತು. ಆದ್ರೇ 13 ಮಂದಿ ಅಲ್ಲ. ನಟ ದರ್ಶನ್ ಸೇರಿದಂತೆ 17 ಆರೋಪಿಗಳ ವಿರುದ್ಧ ಕಾಮಾಕ್ಷಿ ಠಾಣೆಯ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ನಿನ್ನೆ ಚಿತ್ರದುರ್ಗ ಮೂಲಕ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 13 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಅಲ್ಲದೇ ನ್ಯಾಯಾಲಯಕ್ಕೆ ಹಾಜರುಪಡಿಸಿ ತಮ್ಮ ಕಸ್ಟಡಿಗೆ ಪಡೆದು, ಸ್ಥಳ ಮಹಜರು ನಡೆಸುತ್ತಿದ್ದಾರೆ. ಆದ್ರೇ ಈ ಪ್ರಕರಣದಲ್ಲಿ 13 ಮಂದಿಯಲ್ಲಿ 17 ಆರೋಪಿಗಳು ಭಾಗಿಯಾಗಿರೋದಾಗಿ ಪೊಲೀಸರ ಎಫ್ಐಆರ್ ನಿಂದ ತಿಳಿದು ಬಂದಿದೆ. ಕಾಮಾಕ್ಷಿ ಠಾಣೆಯ ಪೊಲೀಸರು ದಾಖಲಿಸಿರುವಂತ ಎಫ್ಐಆರ್ ನಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಎ1 ಆರೋಪಿಯಾಗಿದ್ರೇ, ನಟ ದರ್ಶನ್ ಎ2 ಆರೋಪಿಯಾಗಿದ್ದಾರೆ. ಇನ್ನೂ ಪವನ್ ಎ3, ರಾಘವೇಂದ್ರ ಎ4, ನಂದೀಶ್ ಎ5, ಜಗದೀಶ್ ಆಲಿಯಾಸ್ ಜಗ್ಗು ಎ6, ಅನು ಎ7, ರವಿ ಎ8, ರಾಜು ಎ9, ವಿನಯ್ ಎ10, ನಾಗರಾಜು ಎ11,…
ಬೆಂಗಳೂರು: ಕೆಪಿಸಿಎಲ್ ನ ಸಹಾಯಕ ಎಂಜಿನಿಯರ್, ಕಿರಿಯ ಎಂಜಿನಿಯರ್ ನೇಮಕಾತಿ ಸಂಬಂಧ 622 ಹುದ್ದೆಗಳ ನೇಮಕಕ್ಕೆ ನಡೆಸಲಾಗಿದ್ದಂತ ಸ್ಪರ್ಧಾತ್ಮಕ ಪರೀಕ್ಷೆಯ ಅಂಕಪಟ್ಟಿಯನ್ನು ಕೆಇಎ ಪ್ರಕಟಿಸಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ( Karnataka Examinations Authority-KEA) ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಕರ್ನಾಟಕ ವಿದ್ಯುತ್ ನಿಗಮ ನಿಯಮಿತದಲ್ಲಿ (ಕೆಪಿಸಿಎಲ್) ಖಾಲಿ ಇರುವ ಎಇ, ಜೆಇ (ವಿವಿಧ ವಿಭಾಗಗಳಲ್ಲಿನ), ಕೆಮಿಸ್ಟ್ ಮತ್ತು ಕೆಮಿಕಲ್ ಸೂಪರ್ವೈಸರ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪ್ರಾಧಿಕಾರದಿಂದ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎರಡು ಅವಧಿಗಳಲ್ಲಿ ದಿನಾಂಕ 18-02-2024 ರಂದು ನಡೆಸಲಾಗಿದೆ ಎಂದು ತಿಳಿಸಿದೆ. ಸದರಿ ಪರೀಕ್ಷೆಯ ಅಂತಿಮ ಕೀ ಉತ್ತರಗಳನ್ನು 17-04-2024 ರಂದು ಪ್ರಕಟಿಸಲಾಗಿದೆ. ಹುದ್ದೆವಾರು ತಾತ್ಕಾಲಿಕ ಅಂಕಪಟ್ಟಿಯನ್ನು ಪ್ರಾಧಿಕಾರದ ವೆಬ್ಸೈಟಿನಲ್ಲಿ ದಿನಾಂಕ 03-05-2024 ರಂದು ಪ್ರಕಟಿಸಿ ಆಕ್ಷೇಪಣೆಗಳನ್ನು ಅಹ್ವಾನಿಸಲಾಗಿತ್ತು. ಅದರಂತೆ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಶೀಲಿಸಲಾಗಿದೆ. ಕಳೆದ ಬಾರಿ ನಡೆಸಿದ ಪರೀಕ್ಷೆಯಂತೆ ಈ ಬಾರಿಯೂ, ಪ್ರತಿ ತಪ್ಪು ಉತ್ತರಕ್ಕೆ 1/3 ರಷ್ಟು ನಕಾರಾತ್ಮಕ ಅಂಕವನ್ನು ಕಡಿತಗೊಳಿಸಿ ಅಂತಿಮ ಅಂಕ ಪಟ್ಟಿಯನ್ನು ಸಿದ್ಧಪಡಿಸುವಂತೆ ಕೆಪಿಸಿಎಲ್…
ಬೆಂಗಳೂರು : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಪ್ರಸಕ್ತ ಸಾಲಿನಲ್ಲಿ ವೃತ್ತಿಪರ ಶಿಕ್ಷಣದ ವ್ಯಾಸಂಗಕ್ಕಾಗಿ 72.78 ಕೋಟಿ ರೂ.ಶಿಕ್ಷಣ ಸಾಲ ನೀಡಲಾಗಿದೆ. ಕೆಎಂಡಿಸಿ ಕಚೇರಿಯಲ್ಲಿ ಮಂಗಳವಾರ ಪ್ರಗತಿ ಪರಿಶೀಲನೆ ನಡೆಸಿ ಸುದ್ಧಿಗಾರರ ಜತೆ ಮಾತನಾಡಿದ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್, ವೈದ್ಯಕೀಯ, ದಂತ ವೈದ್ಯಕೀಯ,ಆಯುಷ್, ಫಾರ್ಮಸಿ ಎಂಜಿನಿಯರಿಂಗ್ ಕೋರ್ಸ್ ವ್ಯಾಸಂಗ ಮಾಡಲು ಬಯಸಿದ ಬಡ ಕುಟುಂಬಗಳ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ಗರಿಷ್ಠ ಐದು ಲಕ್ಷ ರೂ. ವರೆಗೆ ಸಾಲದ ಸೌಲಭ್ಯ ಒದಗಿಸಲಾಗಿದೆ. ಇದರ ಜತೆಗೆ ವಿದೇಶದಲ್ಲಿ ವ್ಯಾಸಂಗ ಮಾಡಲು 88 ವಿದ್ಯಾರ್ಥಿಗಳಿಗೆ ಗರಿಷ್ಠ 10 ಲಕ್ಷ ರೂ. ವರೆಗೆ 7.5 ಕೋಟಿ ರೂ. ಸಾಲ ನೀಡಲಾಗಿದೆ ಎಂದು ವಿವರಿಸಿದರು. ಅಲ್ಪಸಂಖ್ಯಾತರ ಸಮುದಾಯದ ಮಕ್ಕಳು ವೃತ್ತಿಪರ ಶಿಕ್ಷಣ ಪಡೆಯಲು ಇದರಿಂದ ಸಹಕಾರಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಲಹೆ ಮೇರೆಗೆ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು. ಇದೇ ಮೊದಲ ಬಾರಿಗೆ ಸಣ್ಣ ವ್ಯಾಪಾರ ಮಾಡುವ ಮಹಿಳೆಯರಿಗೆ ವಿಶೇಷ…
ಬೆಂಗಳೂರು: ನಟ ದರ್ಶನ್ ಪದೇ ಪದೇ ಸುದ್ದಿಯಾಗುತ್ತಿದ್ದಾರೆ. ಅದೂ ವಿವಿಧ ಕ್ರೈಂಗಳಿಂದ ಆಗಿದೆ. ಈಗ ಚಿತ್ರದುರ್ಗ ಮೂಲಕ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾರೆ. ಈ ಪ್ರಕರಣದಲ್ಲಿ ಆರೋಪ ಸಾಭೀತಾದ್ರೆ ಕನ್ನಡ ಚಿತ್ರರಂಗದಿಂದ ನಟ ದರ್ಶನ್ ಬ್ಯಾನ್ ಆಗಲಿದ್ದಾರೆ ಎನ್ನಲಾಗುತ್ತಿದೆ. ನಟ ದರ್ಶನ್ ಗೆಳತಿ ಪವಿತ್ರಾ ಗೌಡಗೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬಾತ ಅಸಭ್ಯ ಮೆಸೇಜ್ ಹಾಗೂ ಪೋಟೋಗಳನ್ನು ಕಳುಹಿಸುತ್ತಿದ್ದ ಎಂಬ ಕಾರಣಕ್ಕೆ ದರ್ಶನ್ ಅಂಡ್ ಗ್ಯಾಂಗ್ ಬರ್ಬರವಾಗಿ ರೇಣುಕಾಸ್ವಾಮಿ ಹತ್ಯೆಗೈದಿದ್ದಾರೆ. ಇದು ಕನ್ನಡ ಚಿತ್ರರಂಗಕ್ಕೆ ದೊಡ್ಡ ಶಾಕ್ ನೀಡಿದಂತೆ ಆಗಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪವಿತ್ರಾ ಗೌಡ ಎ.1 ಆರೋಪಿಯಾದ್ರೇ, ನಟ ದರ್ಶನ್ ಎ.2 ಆರೋಪಿಯಾಗಿದ್ದಾರೆ. ಈಗ 6 ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿರುವಂತ ನಟ ದರ್ಶನ್ ಅಂಡ್ ಟೀಂಗೆ ಆರೋಪ ಸಾಭೀತಾದ್ರೆ ಸಂಕಷ್ಟ ಎದುರಾಗಲಿದೆ ಎನ್ನಲಾಗುತ್ತಿದೆ. ಅದರಲ್ಲೂ ನಟ ದರ್ಶನ್ ಗೆ ದೊಡ್ಡ ಸಂಕಷ್ಟವೇ ಎದುರಾಗಲಿದೆ. ಕನ್ನಡ ಚಿತ್ರರಂಗದಿಂದ ನಟ ದರ್ಶನ್ ಬ್ಯಾನ್ ಮಾಡ್ತಾರಾ ಎಂಬ ಪ್ರಶ್ನೆ…
ಬೆಂಗಳೂರು: ರಾಜ್ಯದ ಮಕ್ಕಳ ಪೋಷಕರಿಗೆ ಸರ್ಕಾರ ಗುಡ್ ನ್ಯೂಸ್ ನೀಡಲಾಗಿದೆ. ಅದೇ ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಹೀಗಾಗಿ ರಾಜ್ಯದ 7 ಜಿಲ್ಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳು ಆರಂಭಗೊಳ್ಳಲಿದ್ದಾವೆ. ಈ ಕುರಿತಂತೆ ರಾಜ್ಯ ಸರ್ಕಾರದ ಆದೇಶ ಹೊರಡಿಸಿದ್ದು, ಪೂರ್ವ ಪ್ರಾಥಮಿಕ ಶಾಲೆ ಆರಂಭಕ್ಕೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. 7 ಜಿಲ್ಲೆಗಳಲ್ಲಿ 1,008 ಪೂರ್ವ ಪ್ರಾಥಮಿಕ ಶಾಲೆಗಳು ಈ ವರ್ಷದಿಂದಲೇ ಆರಂಭಿಸಲು ಆದೇಶದಲ್ಲಿ ತಿಳಿಸಿದೆ. ಬಳ್ಳಾರಿ- 119 ಶಾಲೆಗಳು, ಬೀದರ್ -98 ಶಾಲೆಗಳು, ಕೊಪ್ಪಳ-131 ಶಾಲೆಗಳು, ಕಲಬುರಗಿ-234 ಶಾಲೆಗಳು, ರಾಯಚೂರು- 190 ಶಾಲೆಗಳು, ವಿಜಯನಗರ- 142 ಶಾಲೆಗಳು, ಯಾದಗಿರಿಯಲ್ಲಿ 94 ಶಾಲೆಗಳು ಆರಂಭಗೊಳ್ಳಲಿವೆ. https://twitter.com/KarnatakaVarthe/status/1800830877213114558 https://kannadanewsnow.com/kannada/encounter-in-jammu-and-kashmirs-kathua-leaves-2-militants-1-crpf-personnel-dead/ https://kannadanewsnow.com/kannada/renukaswamy-murder-case-darshan-offers-rs-5-lakh-to-surrendered-actor-darshan/
ನವದೆಹಲಿ: ಜೂನ್ 15-16 ರಂದು ಸ್ವಿಟ್ಜರ್ಲೆಂಡ್ನಲ್ಲಿ ನಡೆಯಲಿರುವ ಉಕ್ರೇನ್ ಕುರಿತ ಜಾಗತಿಕ ಶಾಂತಿ ಶೃಂಗಸಭೆಯಲ್ಲಿ ಭಾರತ ಭಾಗವಹಿಸಲಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಬುಧವಾರ ತಿಳಿಸಿದ್ದಾರೆ. ಜಾಗತಿಕ ಶಾಂತಿ ಶೃಂಗಸಭೆ ಜೂನ್ 15-16 ರಂದು ಸ್ವಿಟ್ಜರ್ಲೆಂಡ್ ನ ಲೇಕ್ ಲುಸೆರ್ನ್ ಮೇಲಿನ ಬರ್ಗೆನ್ ಸ್ಟಾಕ್ ಹೋಟೆಲ್ ನಲ್ಲಿ ನಡೆಯಲಿದೆ. ಭಾರತವು “ಸೂಕ್ತ ಮಟ್ಟದಲ್ಲಿ” ಶೃಂಗಸಭೆಯಲ್ಲಿ ಭಾಗವಹಿಸಲಿದೆ ಎಂದು ಕ್ವಾತ್ರಾ ಹೇಳಿದರು. https://twitter.com/NayanimaBasu/status/1800827842110107696 https://kannadanewsnow.com/kannada/encounter-in-jammu-and-kashmirs-kathua-leaves-2-militants-1-crpf-personnel-dead/ https://kannadanewsnow.com/kannada/renukaswamy-murder-case-police-form-three-teams-of-murder-accused/
ನವದೆಹಲಿ: ಏರ್ ಏಷ್ಯಾ ಏರ್ಲೈನ್ಸ್ ಮಾಲೀಕ ಎಐಎಕ್ಸ್ ಕನೆಕ್ಟ್ ಪ್ರೈವೇಟ್ ಲಿಮಿಟೆಡ್ ಅನ್ನು ಏರ್ ಇಂಡಿಯಾ ಎಕ್ಸ್ಪ್ರೆಸ್ ಲಿಮಿಟೆಡ್ ಕಂಪನಿಯೊಂದಿಗೆ ವಿಲೀನಗೊಳಿಸಲು ಚಂಡೀಗಢದ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್ಸಿಎಲ್ಟಿ) ಮಂಗಳವಾರ ಅನುಮೋದನೆ ನೀಡಿದೆ. ನ್ಯಾಯಾಂಗ ಸದಸ್ಯ ಹರ್ನಾಮ್ ಸಿಂಗ್ ಠಾಕೂರ್ ಮತ್ತು ತಾಂತ್ರಿಕ ಸದಸ್ಯ ಎಲ್.ಎನ್.ಗುಪ್ತಾ ಅವರನ್ನೊಳಗೊಂಡ ನ್ಯಾಯಪೀಠವು ವಿಲೀನ ಪ್ರಸ್ತಾಪಕ್ಕೆ ಕಂಪನಿಗಳ ರಿಜಿಸ್ಟ್ರಾರ್ ಮತ್ತು ನಾಗರಿಕ ವಿಮಾನಯಾನ ಸಚಿವಾಲಯ (ಎಂಒಸಿಎ) ಸೇರಿದಂತೆ ವಲಯ ನಿಯಂತ್ರಕರಿಂದ ಅನುಮೋದನೆ ನೀಡಲಾಗಿದೆ ಎಂದು ಗಮನಿಸಿದೆ. ಅದರಂತೆ, 2013 ರ ಕಂಪನಿಗಳ ಕಾಯ್ದೆಯ ಸೆಕ್ಷನ್ 230 ರಿಂದ 232 ರ ಅಡಿಯಲ್ಲಿ ಎನ್ಸಿಎಲ್ಟಿ ಮುಂದೆ ಸಲ್ಲಿಸಿದ ಎರಡು ಕಂಪನಿಗಳನ್ನು ವಿಲೀನಗೊಳಿಸುವ ಯೋಜನೆಗೆ ಅದು ಅವಕಾಶ ನೀಡಿತು. “ಅರ್ಜಿದಾರರ ಕಂಪನಿಗಳು ಮತ್ತು ಅವುಗಳ ಷೇರುದಾರರ ನಡುವೆ ಸೆಕ್ಷನ್ 230 ರಿಂದ 232 ಮತ್ತು ಕಂಪನಿಗಳ ಕಾಯ್ದೆ, 2013 ರ ಅನ್ವಯವಾಗುವ ಇತರ ನಿಬಂಧನೆಗಳ ಅಡಿಯಲ್ಲಿ ‘ವಿಲೀನ ಯೋಜನೆಗೆ’ ಈ ಮೂಲಕ ಅನುಮತಿ ನೀಡಲಾಗಿದೆ” ಎಂದು ನ್ಯಾಯಮಂಡಳಿ…
ಬೆಂಗಳೂರು: ಚಿತ್ರದುರ್ಗದಿಂದ ಅಶ್ಲೀಲ ಸಂದೇಶವನ್ನು ಕಳುಹಿಸುತ್ತಿದ್ದಾನೆ ಎನ್ನುವಂತ ಒಂದೇ ಒಂದು ಕಾರಣಕ್ಕೆ ರೇಣುಕಾಸ್ವಾಮಿ ಎಂಬಾತನನ್ನು ಕಿಡ್ನ್ಯಾಪ್ ಮಾಡಿಕೊಂಡು ಬೆಂಗಳೂರಿಗೆ ಡಿ ಬಾಸ್ ಅಂಡ್ ಗ್ಯಾಂಗ್ ಬಂದಿತ್ತು. ಅವರನ್ನು ಶೆಡ್ ಒಂದರಲ್ಲಿ ಕೂಡಿ ಹಾಕಿ, ಹಲ್ಲೆ ನಡೆಸಿ ಹತ್ಯೆಗೈದಿದೆ. ಈ ಪ್ರಕರಣದಲ್ಲಿ ನಟ ದರ್ಶನ್ ಸರೆಂಡರ್ ಆದವರಿಗೆ 5 ಲಕ್ಷ ಕೊಡುವುದಾಗಿ ಆಫರ್ ನೀಡಿದ್ರು ಎಂಬುದಾಗಿ ಹೇಳಲಾಗುತ್ತಿದೆ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ, ಪೊಲೀಸರಿಗೆ ಸರೆಂಡರ್ ಆದಂತ ಆರೋಪಿಗಳಿಗೆ ತನ್ನ ಗ್ಯಾಂಗ್ ಟೀಂ ಸದಸ್ಯರ ಮೂಲಕ 5 ಲಕ್ಷ ನೀಡುವ ಆಫರ್ ಕೊಟ್ಟಿದ್ದರು ಎಂಬುದಾಗಿ ಹೇಳಲಾಗುತ್ತಿದೆ. ದೀಪಕ್ ಮೂಲಕ ಪ್ರದೋಶ್ ಗೆ ನಟ ದರ್ಶನ್ ಗೆ ಹಲ್ಲೆ ಮಾಡಿ, ಪೊಲೀಸರಿಗೆ ಸರೆಂಡರ್ ಆದಂತವರಿಗೆ ಐದು ಲಕ್ಷ ನೀಡುವುದಾಗಿ ಹಣದ ಆಫರ್ ನೀಡಿದ್ದರು ಎನ್ನಲಾಗುತ್ತಿದೆ. ಈಗಾಗಲೇ ಈ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 13 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನಿನ್ನೆ…