Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಗಳ ದಂಧೆ ವಿರುದ್ಧ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಮೈಕ್ರೋ ಫೈನಾನ್ಸ್, ಮೀಡರ್ ಬಡ್ಡಿಗೆ ಕಡಿವಾಣ ಹಾಕಲು ನೂತನ ಕಾಯ್ದೆ ಜಾರಿಗೆ ಮುಂದಾಗಿದೆ. ಈ ಕುರಿತಂತೆ ಕಾನೂನು ಸಚಿವ ಹೆಚ್.ಕೆ ಪಾಟೀಲ್ ಮಾಹಿತಿ ಹಂಚಿಕೊಂಡಿದ್ದು, ಮೈಕ್ರೋ ಫೈನಾನ್ಸ್ ಸಂಸ್ಥೆಗಳ ದಂಧೆ ಹಾಗೂ ಮೀಟರ್ ಬಡ್ಡಿ ಮಾಫಿಯಾಕ್ಕೆ ಕಡಿವಾಣ ಹಾಕಲು ನೂತನ ಕಾಯ್ದೆ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದಿದ್ದಾರೆ. ಮುಂದಿನ ಅಧಿವೇಶನದಲ್ಲಿಯೇ ವಿಧೇಯಕ ಮಂಡಿಸಲಾಗುವುದು. ಬಡವರ, ಮಧ್ಯಮ ವರ್ಗದ ಹಿತ ಕಾಯುವುದು ನಮ್ಮ ಸರ್ಕಾರದ ಕರ್ತವ್ಯ ಎಂದು ಕಾನೂನು ಸಚಿವರಾದ ಎಚ್.ಕೆ.ಪಾಟೀಲ್ ಅವರು ತಿಳಿಸಿದ್ದಾರೆ. https://twitter.com/KarnatakaVarthe/status/1881674549533848024 https://kannadanewsnow.com/kannada/what-money-did-the-congressmen-use-for-the-convention-today-rajkumar-patil-telkus-question/ https://kannadanewsnow.com/kannada/breaking-saif-ali-khan-discharged-from-mumbais-lilavati-hospital-photo-goes-viral-saif-ali-khan/
ಕಲಬುರಗಿ : ಕಾಂಗ್ರೆಸ್ಸಿಗರು ಇಂದಿನ ಸಮಾವೇಶಕ್ಕೆ ಬಳಸಿದ ಹಣ ಯಾವುದು? ಅದರ ಲೆಕ್ಕ ಕೊಡಬೇಕು ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಅವರು ಆಗ್ರಹಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಅದು ಕಾಂಗ್ರೆಸ್ಸಿನ ಖಾತೆಯಿಂದ ಖರ್ಚಾದ ಹಣವೇ? ಅಥವಾ ನೀವು ಸರಕಾರದ ಬೊಕ್ಕಸದಿಂದ ಖರ್ಚು ಮಾಡಿದ್ದೀರಾ ಎಂಬುದನ್ನು ಜನರಿಗೆ ತಿಳಿಸಬೇಕು ಎಂದು ಒತ್ತಾಯಿಸಿದರು. ಇದು ಮಹಾತ್ಮ ಗಾಂಧಿಯವರ ಕಾಲದ ಕಾಂಗ್ರೆಸ್ ಪಕ್ಷ ಅಲ್ಲ ಮಹಾತ್ಮ ಗಾಂಧಿ ಸಿದ್ಧಾಂತಕ್ಕೂ ಇವತ್ತಿನ ಗಾಂಧಿಗಳ ಕಾಂಗ್ರೆಸ್ಸಿನ ಸಿದ್ಧಾಂತಕ್ಕೂ ಅಜಗಜಾಂತರವಿದೆ. ಅವತ್ತಿನ ಗಾಂಧಿ ಕಾಂಗ್ರೆಸ್ ಪಕ್ಷಕ್ಕೆ ಯಾರು ಮದ್ಯಪಾನ ಮಾಡುತ್ತಿದ್ದರೋ ಅವರು ಸದಸ್ಯರಾಗುವ ಹಾಗಿರಲಿಲ್ಲ; ಇವತ್ತಿನ ಕಾಂಗ್ರೆಸ್ಸಿನವರು ರಾತ್ರಿಯಿಡೀ ಕುಡಿದು ಮಲಗಿದ್ದು, ಬೆಳಿಗ್ಗೆ ಸಮಾವೇಶ ಮಾಡುತ್ತಾರೆ ಎಂದು ಟೀಕಿಸಿದರು. ಎಲ್ಲರೂ ಖಾದಿಧಾರಿಗಳಾಗಿ ಇರಬೇಕು ಎಂಬುದು ಹಳೆ ಕಾಂಗ್ರೆಸ್ಸಿನ ಸಿದ್ಧಾಂತ. ಇವತ್ತು ಶೇ 5- 10 ರಷ್ಟು ಖಾದಿಧಾರಿಗಳೂ ಅಲ್ಲಿ ಸಿಗುವುದಿಲ್ಲ ಎಂದು ವ್ಯಂಗ್ಯವಾಡಿದರು. ಮಹಾತ್ಮ ಗಾಂಧಿಯವರು ಈ ಕಾಲದಲ್ಲಿ ಇದ್ದಿದ್ದರೆ, ಈ ಕಾಂಗ್ರೆಸ್ಸಿನವರನ್ನು…
ಬೆಂಗಳೂರು: ನಾಳೆ ರಾಯಚೂರಿನಲ್ಲಿ ಮಾತೃತ್ವ ಸುರಕ್ಷಾ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದೆ. ಆ ಬಳಿಕ ರಾಜ್ಯಾಧ್ಯಂತ ಉಚಿತ ಆರೋಗ್ಯ ಶಿಬಿರಗಳ ಮೂಲಕ ಪ್ರತಿ ತಿಂಗಳು ಎರಡು ಬಾರಿ ಗರ್ಭಿಣಿಯರ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. ಗರ್ಭಿಣಿಯರ ಆರೋಗ್ಯ ಸುರಕ್ಷತೆ ದೃಷ್ಟಿಯಿಂದ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗುತ್ತಿರುವ ಮಾತೃತ್ವ ಸುರಕ್ಷಾ ಅಭಿಯಾನಕ್ಕೆ ಜನವರಿ 22 ರಂದು ರಾಯಚೂರಿನಲ್ಲಿ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ಚಾಲನೆ ನೀಡಲಿದ್ದಾರೆ. ಪ್ರತಿ ತಿಂಗಳ 9 ಮತ್ತು 24ನೇ ತಾರೀಕಿನಂದು ಎರಡು ಬಾರಿ ಉಚಿತವಾಗಿ ಗರ್ಭಿಣಿಯರ ಆರೋಗ್ಯ ತಪಾಸಣೆಯನ್ನು ಆರೋಗ್ಯ ಇಲಾಖೆ ನಡೆಸಲಿದೆ. ರಾಜ್ಯದಾದ್ಯಂತ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಈ ಅಭಿಯಾನವನ್ನು ಕಡ್ಡಾಯವಾಗಿ, ನಿರಂತರವಾಗಿ ನಡೆಸಲು ಸೂಚನೆ ನೀಡಲಾಗಿದೆ. https://twitter.com/KarnatakaVarthe/status/1881695628616704380 https://kannadanewsnow.com/kannada/good-news-for-commuters-one-way-special-train-to-run-from-bengaluru-to-banaras-on-the-occasion-of-kumbh-mela/ https://kannadanewsnow.com/kannada/breaking-saif-ali-khan-discharged-from-mumbais-lilavati-hospital-photo-goes-viral-saif-ali-khan/
ಬೆಂಗಳೂರು: ಕುಂಭಮೇಳದ ಸಮಯದಲ್ಲಿ ಪ್ರಯಾಣಿಕರ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್ಎಂವಿಟಿ) ನಿಂದ ಬನಾರಸ್ ಗೆ ಏಕಮಾರ್ಗ ವಿಶೇಷ ರೈಲನ್ನು ನೈಋತ್ಯ ರೈಲ್ವೆ ಓಡಿಸಲಿದೆ. ವಿವರಗಳು ಈ ಕೆಳಗಿನಂತಿವೆ: ಒನ್-ವೇ ವಿಶೇಷ ರೈಲು (06579) ಜನವರಿ 23, 2025 ರಂದು ಮಧ್ಯಾಹ್ನ 1:00 ಗಂಟೆಗೆ ಎಸ್ಎಂವಿಟಿ ಬೆಂಗಳೂರಿನಿಂದ ಹೊರಟು, ಜನವರಿ 25, 2025 ರಂದು ಮಧ್ಯಾಹ್ನ 1:30ಕ್ಕೆ ತನ್ನ ಗಮ್ಯಸ್ಥಾನವಾದ ಬನಾರಸ್ ತಲುಪಲಿದೆ. ಈ ರೈಲು ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು, ಚಿಕ್ಕಜಾಜೂರು, ದಾವಣಗೆರೆ, ರಾಣಿಬೆನ್ನೂರು, ಎಸ್ಎಂಎಂ ಹಾವೇರಿ, ಎಸ್ಎಸ್ಎಸ್ ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ, ಬೆಳಗಾವಿ, ಘಟಪ್ರಭಾ, ರಾಯಬಾಗ, ಮೀರಜ್, ಸಾಂಗ್ಲಿ, ಕಿರ್ಲೋಸ್ಕರವಾಡಿ, ಕರಾಡ್, ಸತಾರಾ, ಪುಣೆ, ಅಹ್ಮದ್ನಗರ, ಕೋಪರ್ಗಾಂವ್, ಮನ್ಮಾಡ್ ಭೂಸಾವಲ್, ಇಟಾರ್ಸಿ, ಜಬಲ್ಪುರ್, ಸತ್ನಾ, ಮಾಣಿಕ್ಪುರ್, ಪ್ರಯಾಗ್ರಾಜ್ ಛೋಕಿ, ಮಿರ್ಜಾಪುರ ಮತ್ತು ವಾರಣಾಸಿ ನಿಲ್ದಾಣಗಳಲ್ಲಿ ನಿಲ್ಲಲಿದೆ. ಒನ್ ವೇ ಸ್ಪೆಷಲ್ ನಲ್ಲಿ 01 ಜನರಲ್ ಸೆಕೆಂಡ್ ಕ್ಲಾಸ್, 17 ಸ್ಲೀಪರ್ ಕ್ಲಾಸ್ ಮತ್ತು…
ಈ ರಾಶಿಯವರಿಗೆ ಗುರು-ಪುಷ್ಯ ಅಮೃತ ಸಿದ್ಧಿ ಯೋಗ ಇದೇ ಜನವರಿ 23, ಗುರುವಾರ. ಪುಷ್ಯ ನಕ್ಷತ್ರ ಗುರುವಾರದ ದಿನ ಬಂದಿದೆ. ನಕ್ಷತ್ರ ಪ್ರಾರಂಭ ಸಮಯ : ಗುರುವಾರ ಹಗಲು 08:15 ಗಂಟೆಯಿಂದ ನಕ್ಷತ್ರ ಮುಗಿಯುವ ಸಮಯ : ಶುಕ್ರವಾರ ಹಗಲು 10:27 ಗಂಟೆಯವರೆಗೆ ಈ ದಿನ ಗುರು ದತ್ತಾತ್ರೇಯ, ದಕ್ಷಿಣಾಮೂರ್ತಿ, ಬೃಹಸ್ಪತಿ, ರಾಘವೇಂದ್ರ, ಸಾಯಿಬಾಬಾ ಮಂತ್ರ ಅಥವಾ ಸ್ತೋತ್ರ ಗಳನ್ನು ಜಪ – ಪಾರಾಯಣ ಮಾಡಿ. ಈ ದೇವರ ದೇವಸ್ಥಾನಗಳಿಗೆ ಭೇಟಿ ನೀಡಿ ದರ್ಶನ ಪಡೆಯಿರಿ. ಜಾತಕದಲ್ಲಿ ಗುರು ಪೀಡಿತನಾಗಿದ್ದರೆ ಅಥವಾ ಬಲಹೀನನಾಗಿದ್ದರೆ ಅಥವಾ ಪ್ರಸ್ತುತ ಗುರುಬಲ ಇಲ್ಲದ ರಾಶಿಗಳು (ಮೇಷ, ವೃಷಭ, ಕಟಕ, ಕನ್ಯಾ, ವೃಶ್ಚಿಕ, ಮಕರ, ಕುಂಭ) ಪರಿಹಾರ ಮಾಡಿಕೊಳ್ಳುವುದು ಪರಿಣಾಮಕಾರಿ. ವಿಶೇಷವಾಗಿ ಮೇಷ, ವೃಷಭ, ಕಟಕ ಮತ್ತು ಮಕರ ರಾಶಿ ಸಂಜಾತರು. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ…
ಬೆಂಗಳೂರು: ಮಹಾತ್ಮಾಗಾಂಧೀಜಿಯವರ ಗ್ರಾಮೀಣಾಭಿವೃದ್ಧಿ ಹಾಗೂ ಗ್ರಾಮ ಸ್ವರಾಜ್ಯದ ಪರಿಕಲ್ಪನೆಯನ್ನು ಸಾಕಾರಗೊಳಿಸಲು ರಾಜ್ಯದ ಗದಗ ನಗರದಲ್ಲಿ ಸ್ಥಾಪನೆಯಾಗಿರುವ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯಕ್ಕೆ ‘ಮಹಾತ್ಮಾ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ’ ಎಂದು ಬೆಳಗಾವಿಯಲ್ಲಿ ಇಂದು ಮರು ನಾಮಕರಣ ಮಾಡಲಾಯಿತು. ಮಹಾತ್ಮ ಗಾಂಧೀಜಿಯವರು ಬೆಳಗಾವಿಯಲ್ಲಿ 1924ರಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಮಹೋನ್ನತ ಸಂದರ್ಭದ ಶತಮಾನೋತ್ಸವ ಐತಿಹಾಸಿಕ ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯರಾದ ಮಲ್ಲಿಕಾರ್ಜುನ ಖರ್ಗೆ, ಲೋಕಸಭಾ ಸದಸ್ಯರಾದ ಪ್ರಿಯಾಂಕಾ ಗಾಂಧಿ ವಾರ್ಧಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರ ಸಮ್ಮುಖದಲ್ಲಿ ವಿಶ್ವವಿದ್ಯಾಲಯ ಹೊಸ ಹೆಸರನ್ನು ಹೊಂದಿತು. ಅಂದಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ಹಾಗೂ ಇಂದಿನ ಕಾನೂನು ಮತ್ತು ಪ್ರವಾಸೊದ್ಯಮ ಸಚಿವರಾದ ಮಾನ್ಯ ಡಾ. ಹೆಚ್. ಕೆ.ಪಾಟೀಲ ಅವರ ಪರಿಕಲ್ಪನೆಯಂತೆ ಗದಗದಲ್ಲಿ ನಾಗಾವಿ ಬಳಿ 353…
ಬೆಂಗಳೂರು: ಬೆಳಗಾವಿಯಲ್ಲಿ ನಡೆದಿರುವುದು 60 ಪರ್ಸೆಂಟ್ ವಸೂಲಿ ಮಾಡಿದ ನೆನಪಿನ ಜಾತ್ರೆಯೇ ಹೊರತು ಕಾಂಗ್ರೆಸ್ ಸಮಾವೇಶವಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಟೀಕಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಮಹಾತ್ಮ ಗಾಂಧೀಜಿ ಹೆಸರಲ್ಲಿ ಕಾಂಗ್ರೆಸ್ ಸಮಾವೇಶ ಮಾಡಲಾಗಿದೆ. ಗಾಂಧೀಜಿ ಬಗ್ಗೆ ಅಷ್ಟೊಂದು ಪ್ರೀತಿ ಇದ್ದರೆ, ಕಾಂಗ್ರೆಸ್ ಭವನಕ್ಕೆ ಗಾಂಧೀಜಿ ಅಥವಾ ಸರ್ದಾರ್ ವಲ್ಲಭಭಾಯಿ ಪಟೇಲ್ ಹೆಸರಿಡಬೇಕಿತ್ತು. ಸೋನಿಯಾ ಗಾಂಧಿಯಾಗಲೀ, ರಾಹುಲ್ ಗಾಂಧಿಯಾಗಲೀ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲಿಲ್ಲ. ಇವರಿಗೆ ಗಾಂಧೀಜಿಯ ಹೆಸರು ಹೇಳುವ ನೈತಿಕತೆ ಇಲ್ಲ. ಇದು 60 ಪರ್ಸೆಂಟ್ ವಸೂಲಿ ಮಾಡುವ ನೆನಪಿನ ಜಾತ್ರೆಯೇ ಹೊರತು ಸಮಾವೇಶವಲ್ಲ ಎಂದರು. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಹಸುವಿನ ಕೆಚ್ಚಲು ಕತ್ತರಿಸಿದ್ದು, ಬ್ಯಾಂಕ್ ದರೋಡೆ, ಮಹಿಳೆ ಮೇಲೆ ಅತ್ಯಾಚಾರ ಮೊದಲಾದ ಘಟನೆಗಳನ್ನು ಕಡೆಗಣಿಸಿ ಸರ್ಕಾರ ಸಮಾವೇಶ ಮಾಡಿದೆ. ಅಭಿವೃದ್ಧಿ ಬಗ್ಗೆ ಕೇಳಿದರೆ ಬಿಜೆಪಿ ಸರ್ಕಾರದ ಅವಧಿಗೆ ಹೋಲಿಸುತ್ತಾರೆ ಎಂದರೆ ಕಾಂಗ್ರೆಸ್ *ಹೇಗೆ ಭಿನ್ನವಾಗುತ್ತದೆ?* ಕಾಂಗ್ರೆಸ್ ಶಾಸಕರು ಕೂಡ ಅನುದಾನ ಸಿಕ್ಕಿಲ್ಲ ಎಂದು ಹೇಳುತ್ತಿದ್ದಾರೆ. ಗಾಂಧೀಜಿಯಂತೆ…
ಇಂಡೋನೇಷ್ಯಾದ ಮಧ್ಯ ಜಾವಾ ಪ್ರಾಂತ್ಯದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ ಮತ್ತು 10 ಜನರು ಗಾಯಗೊಂಡಿದ್ದಾರೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಪೆಕಲೋಂಗನ್ ನಗರದಲ್ಲಿ ಭೂಕುಸಿತವು ಭಾರಿ ಮಳೆಯಿಂದಾಗಿ ಪ್ರಚೋದಿಸಲ್ಪಟ್ಟಿದೆ ಎಂದು ದೇಶದ ವಿಪತ್ತು ತಗ್ಗಿಸುವ ಏಜೆನ್ಸಿಯ ವಕ್ತಾರರು ಮಂಗಳವಾರ ತಿಳಿಸಿದ್ದಾರೆ. ಮಳೆ ಹಲವಾರು ದಿನಗಳವರೆಗೆ ಮುಂದುವರಿಯುವ ನಿರೀಕ್ಷೆಯಿದೆ ಎಂದು ಎಚ್ಚರಿಕೆ ನೀಡಿದ್ದರಿಂದ ಕಾಣೆಯಾದ ಇನ್ನೂ ಮೂವರಿಗಾಗಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ಭೂಕುಸಿತದಿಂದ ಮನೆಗಳು ತೀವ್ರವಾಗಿ ಹಾನಿಗೊಳಗಾಗಿವೆ ಮತ್ತು ಭಾಗಶಃ ಹೂತುಹೋಗಿವೆ ಎಂದು ಸ್ಥಳೀಯ ಸುದ್ದಿ ಸಂಸ್ಥೆ ಕೊಂಪಾಸ್ ಟಿವಿ ತೋರಿಸಿದೆ. ಹಲವಾರು ಕಾರುಗಳು ಸಹ ಮಣ್ಣಿನಲ್ಲಿ ಮುಳುಗಿರುವುದು ಕಂಡುಬಂದಿದೆ. ರಸ್ತೆಗಳು ಹಾನಿಗೊಳಗಾಗಿದ್ದು, ಅವುಗಳ ಮೇಲೆ ಕಲ್ಲುಗಳು ಹರಡಿವೆ. ಎರಡು ಸೇತುವೆಗಳಿಗೂ ಹಾನಿಯಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ. https://kannadanewsnow.com/kannada/breaking-saif-ali-khan-discharged-from-mumbais-lilavati-hospital-photo-goes-viral-saif-ali-khan/ https://kannadanewsnow.com/kannada/who-defeated-babasaheb-ambedkar-in-the-elections/
ಬೆಳಗಾವಿ: ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಯಾರು..? ಎರಡು ಬಾರಿ ಅಂಬೇಡ್ಕರ್ ಅವರನ್ನು ಸರ್ವಾನುಮತದಿಂದ ಆರಿಸಿ ತಂದಿದ್ದು ನಾವು ಎಂಬುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಐತಿಹಾಸಿಕ ಜೈ ಬಾಪು-ಜೈ ಭೀಮ್- ಜೈ ಸಂವಿಧಾನ ಅಭಿಯಾನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದಂತ ಅವರು, ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಯಾರು..? ಎರಡು ಬಾರಿ ಅಂಬೇಡ್ಕರ್ ಅವರನ್ನು ಸರ್ವಾನುಮತದಿಂದ ಆರಿಸಿ ತಂದಿದ್ದು ನಾವು. ರಾಜ್ಯಸಭಾ ಸದಸ್ಯರಾಗಿದ್ದ ಎಂ.ಆರ್ ಜೈಕರ್ ಅವರ ರಾಜೀನಾಮೆ ಕೊಡಿಸಿ, ಆ ಜಾಗದಲ್ಲಿ ಅಂಬೇಡ್ಕರ್ ಅವರನ್ನು ಆರಿಸಿ ತಂದಿದ್ದು ಕಾಂಗ್ರೆಸ್ ಎಂಬುದಾಗಿ ಹೇಳಿದರು. ಪಂಡಿತ್ ಜವಾಹರ್ ಲಾಲ್ ನೆಹರು ಅವರು, ಮಹಾತ್ಮ ಗಾಂಧೀಜಿಯವರು, ನಮ್ಮ ಮೇಲೆ ಆಪಾದನೆ ಮಾಡುತ್ತೀರಿ, ನೀವು ಏನು ಮಾಡಿದಿರಿ ಅವರಿಗೆ? ಎಂಬುದಾಗಿ ಪ್ರಶ್ನಿಸಿದರು. https://twitter.com/INCKarnataka/status/1881661660362133654 https://kannadanewsnow.com/kannada/cm-siddaramaiah-warns-of-serious-action-against-anti-social-elements/ https://kannadanewsnow.com/kannada/breaking-bengaluru-fir-filed-against-it-officer-for-assaulting-sexually-assaulting-lawyer/
ಬೆಳಗಾವಿ : ಮಹಿಳೆಯರಿಗೆ ರಕ್ಷಣೆ ದೊರಕಬೇಕು. ಬಲಾತ್ಕಾರದಂತಹ ಹೀನ ಕೃತ್ಯಗಳು ನಡೆಯಬಾರದು. ಸಮಾಜದಲ್ಲಿ ಸಮಾಜಘಾತಕ ಶಕ್ತಿಗಳು ಇಂಥ ಕೆಲಸ ಮಾಡುತ್ತವೆ. ಅವರ ವಿರುದ್ಧ ಗಂಭೀರ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್ಚರಿಕೆ ನೀಡಿದರು. ಅವರು ಇಂದು ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಇಡೀ ವರ್ಷ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಅಭಿಯಾನವನ್ನು ಮಾಡುತ್ತಿದ್ದೇವೆ. ಗಾಂಧೀಜಿಯವರ ತತ್ವಾದರ್ಶಗಳನ್ನು ಮತ್ತೆ ಪುನಸ್ಥಾಪಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗಾಂಧೀಜಿ ಹಾಗು ಅವರ ವಿಚಾರಧಾರೆಗಳು ಇಡೀ ವಿಶ್ವಕ್ಕೆ ಇಂದಿಗೂ ಪ್ರಸ್ತುತ ಎಂದರು. ಗಾಂಧೀಜಿ ಸೌಹಾರ್ದತೆ, ಸಮಾನತೆ ಬರಬೇಕು, ಅಸ್ಪೃಶ್ಯತೆ ಹೋಗಲಾಡಿಸಲು, ಮಹಿಳೆಯರಿಗೆ ಸ್ವಾತಂತ್ರ್ಯ ಅವರ ಹಕ್ಕುಗಳ ರಕ್ಷಣೆಯಾಗಬೇಕೆಂದು ಪ್ರತಿಪಾದಿಸಿದ್ದರು. ಗಾಂಧೀಜಿ, ಬಸವಣ್ಣ, ಕನಕದಾಸರ ವಿಚಾರಗಳು ಸಂವಿಧಾನದಲ್ಲಿ ಅಡಕವಾಗಿವೆ ಎಂದರು. ಕಾಂಗ್ರೆಸ್ ಸಂವಿಧಾನದ ಪರವಾಗಿದೆ ಗಾಂಧೀಜಿ, ಅಂಬೇಡ್ಕರ್ ಮತ್ತು ಸಂವಿಧಾನವನ್ನು ವಿರೋಧಿಸುವ ಅನಾಹುತಕಾರಿ ರಾಜಕಾರಣ ನಡೆಯುತ್ತಿದೆ. ಅದ್ದರಿಂದ ಇವುಗಳ ರಕ್ಷಣೆ ಮಾಡುವುದು ಕಾಂಗ್ರೆಸ್ ನ ಜವಾಬ್ದಾರಿ. ನಾವು ಸಂವಿಧಾನದ ಪರವಾಗಿದ್ದೇವೆ. ಅವರು ಮನುವಾದದ ಪರವಾಗಿದ್ದಾರೆ ಎಂದು…