Author: kannadanewsnow09

ಬೆಂಗಳೂರು: 2025ನೇ ಸಾಲಿಗೆ ವಿಕಲಚೇತನರ ರಿಯಾಯಿತಿ ಬಸ್ ಪಾಸ್‌ಗಳ ವಿತರಣೆ/ನವೀಕರಣಕ್ಕೆ “ಸೇವಾ ಸಿಂಧು” ಆನ್‌ಲೈನ್ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಡಿ.30 ರಿಂದ ಫೆ.28 ರವರೆಗೆ https://serviceonline.gov.in.karnataka/URL ಬಳಸಿ ಅರ್ಜಿ ಸಲ್ಲಿಸುವುದು ಕಡ್ಡಾಯ. ನಿಗದಿಪಡಿಸಿದ ದಿನಾಂಕದ ಒಳಗೆ ಪಾಸ್‌ಗಳ ವಿತರಣೆ/ನವಿಕರಿಸಬೇಕಾಗಿರುತ್ತದೆ. ಹೊಸದಾಗಿ ವಿಕಲಚೇತನರ ಬಸ್‌ಪಾಸ್ ಪಡೆಯಲು ವಿಭಾಗೀಯ ನಿಯಂತ್ರಣಾಧಿಕಾರಿಗಳು ಶಿವಮೊಗ್ಗ ವಿಭಾಗ ಎಂಬ ಕೌಂಟರ್ ಆಯ್ಕೆ ಮಾಡುವುದು ಹಾಗೂ 2024ನೇ ಸಾಲಿನಲ್ಲಿ ಪಾಸ್ ಪಡೆದಿರುವ ಫಲಾನುಭವಿಗಳು ಪಾಸ್ ನವೀಕರಣಕ್ಕಾಗಿ ಘಟಕ ವ್ಯವಸ್ಥಾಪಕರ ಕೌಂಟರ್ ಆಯ್ಕೆ ಮಾಡಲು ಸೂಚಿಸಿದೆ. ಫಲಾನುಭವಿಗಳು ಪಾಸ್ ಪಡೆಯಲು ಬರುವಾಗ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಯವರಿಂದ ದೃಢೀಕರಿಸಿದ ಮಾನ್ಯತೆ ಇರುವ ವಿಕಲಚೇತನರ ಗುರುತಿನ ಚೀಟಿ ಪುಸ್ತಕ ಅಥವಾÀ ಯುಡಿಐಡಿ ಸ್ಮಾರ್ಟ್ ಕಾರ್ಡ್, ಡಿಸೆಬಿಲಿಟಿ ಸರ್ಟಿಫಿಕೇಟ್, ಫಲಾನುಭವಿಗಳ ಇತ್ತೀಚಿನ 3 ಭಾವಚಿತ್ರ, 2024ನೇ ಸಾಲಿನಲ್ಲಿ ಪಡೆದಿರುವ ವಿಕಲಚೇತನರ ಮೂಲ ಪಾಸ್(ನವೀಕರಣಕ್ಕಾಗಿ), ಆಧಾರ್ ಕಾರ್ಡ್ ಅಥವಾ ರೇಷನ್ ಕಾರ್ಡ್ ನೀಡಬೇಕು. ಪಾಸ್ ಶುಲ್ಕ ರೂ.660 ಗಳನ್ನು ನಗದು ಮೂಲಕ ಪಾವತಿಸಬೇಕೆಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ…

Read More

ಬೆಂಗಳೂರು: ಕೆಎಎಸ್‌ ಪೂರ್ವಭಾವಿ ಮರು ಪರೀಕ್ಷೆಯಲ್ಲಿ ಕೆಪಿಎಸ್‌ಸಿ ಮತ್ತೆ ಎಡವಟ್ಟು ಮಾಡಿದ್ದು, ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ಭವಿಷ್ಯ ಡೋಲಾಯಮಾನವಾಗಿದೆ. ಸಿಎಂ ಸಿದ್ದರಾಮಯ್ಯನವರ ರಾಜಕೀಯ ಹಸ್ತಕ್ಷೇಪವೇ ಇದಕ್ಕೆ ಕಾರಣ ಎಂದು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತು ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಕಾಂಗ್ರೆಸ್‌ ಸರ್ಕಾರ ಮರುಪರೀಕ್ಷೆಯಲ್ಲೂ ಮುಗ್ಗರಿಸಿದೆ. ಆಗಸ್ಟ್ ನಲ್ಲಿ ನಡೆದ 2023-24ನೇ ಸಾಲಿನ ಕೆಪಿಎಸ್‌ಸಿ ಗೆಜೆಟೆಡ್ ಪ್ರೊಬೇಷನರ್‌ ಪೂರ್ವಭಾವಿ ಪರೀಕ್ಷೆಯಲ್ಲಿ ಭಾರಿ ಎಡವಟ್ಟುಗಳು ಕಂಡುಬಂದಿತ್ತು. ಅಭ್ಯರ್ಥಿಗಳ ಆಕ್ರೋಶಕ್ಕೆ ಮಣಿದ ಸರ್ಕಾರ ಮರು ಪರೀಕ್ಷೆ ನಡೆಸಿತ್ತು. ಆದರೆ ಅದರಲ್ಲೂ ಎಡವಟ್ಟುಗಳ ಮೇಲೆ ಎಡವಟ್ಟು ಮಾಡಿದ್ದು, ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ಭವಿಷ್ಯ ಡೋಲಾಯಮಾನವಾಗಿದೆ. ಭಾಷಾಂತರದಲ್ಲಿ ಲೋಪ, ಒಎಂಆರ್‌ ಶೀಟ್ ಮತ್ತು ನೋಂದಣಿ ಸಂಖ್ಯೆ ಅದಲು ಬದಲು, ಕೆಲವೆಡೆ 45 ನಿಮಿಷ ತಡವಾಗಿ ಪರೀಕ್ಷೆ ಆರಂಭ, ಹೀಗೆ ಸಾಲು ಸಾಲು ಎಡವಟ್ಟುಗಳಿಂದ ಕೂಡಿದ್ದ ಭಾನುವಾರದ ಮರು ಪರೀಕ್ಷೆ ಮತ್ತೊಮ್ಮೆ ಅಭ್ಯರ್ಥಿಗಳ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಅವರು ದೂರಿದ್ದಾರೆ. ಮರುಪರೀಕ್ಷೆಗೆ ನೋಂದಣಿ ಮಾಡಿಕೊಂಡ್ಡ 2.10 ಲಕ್ಷ…

Read More

ಶಿವಮೊಗ್ಗ: ಇಂದು ಜಿಲ್ಲೆಯ ಸಾಗರ ನಗರದ ಗಣಪತಿ ಬ್ಯಾಂಕ್ ಆಡಳಿತ ಮಂಡಳಿ ಸದಸ್ಯರ ನೇಮಕ್ಕೆ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಸಾಗರ ನಗರಸಭೆ ಸದಸ್ಯೆ ಮಧುಮಾಲತಿ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಸಾಗರ ನಗರದಲ್ಲಿರುವಂತ ಶ್ರೀ ಗಣಪತಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ನ ಆಡಳಿತ ಮಂಡಳಿ ಸದಸ್ಯರ ಚುನಾವಣೆ ಇಂದು ನಡೆಯಿತು. ಇಂದಿನ ಚುನಾವಣೆಯಲ್ಲಿ 1500 ಷೇರುದಾರರು ತಮ್ಮ ಮತವನ್ನು ಚಲಾಯಿಸಿದರು. ಇಂದಿನ ಚುನಾವಣೆಯಲ್ಲಿ ಕ್ರಮಸಂಖ್ಯೆ 20, ಮಹಿಳಾ ಮೀಸಲು ವರ್ಗದಿಂದ ನಗರಸಭೆ ಸದಸ್ಯೆ ಮಧು ಮಾಲತಿ ಸ್ಪರ್ಧಿಸಿದ್ದರು. ಅವರು ಬರೋಬ್ಬರಿ 539 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ. ಗಣಪತಿ ಬ್ಯಾಂಕ್ ಷೇರುದಾರರ ಹಿತಕಾಯುವ ಉದ್ದೇಶ, ಬ್ಯಾಂಕ್ ಅಭಿವೃದ್ಧಿಯ ಪಣದೊಂದಿಗೆ ನಗರಸಭೆ ಸದಸ್ಯೆ ಮಧುಮಾಲತಿ ಕಣಕ್ಕೆ ಇಳಿದಿದ್ದರು. ಅವರಿಗೆ ಮತದಾರರು ಒಲವು ತೋರಿ, ಹೆಚ್ಚು ಮತಗಳನ್ನು ಚಲಾಯಿಸುವ ಮೂಲಕ, ವಿಜಯದ ಸರಮಾಲೆ ಧರಿಸುವಂತೆ ಮಾಡಿದ್ದಾರೆ. ಇಂತಹ ಗಣಪತಿ ಬ್ಯಾಂಕ್ ಚುನಾವಣೆಯಲ್ಲಿ ಗೆಲುವು ಸಾಧಿಸಿದಂತ ನಗರಸಭೆ ಸದಸ್ಯೆ ಮಧುಮಾಲತಿ ಅವರಿಗೆ…

Read More

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಜಂಟಿ ಕ್ರಿಯಾ ಸಮಿತಿಯು ಡಿಸೆಂಬರ್.31ರಂದು ನಡೆಸಲು ನಿರ್ಧರಿಸಿದ್ದಂತ ಸಾರಿಗೆ ಸಿಬ್ಬಂದಿಗಳ ಮುಷ್ಕರವನ್ನು ಹಿಂಪಡೆಯಲಾಗಿದೆ. ಹೀಗಾಗಿ ಡಿಸೆಂಬರ್.31ರಂದು ಎಂದಿನಂತೆ ಕೆ ಎಸ್ ಆರ್ ಟಿ ಸಿ ಬಸ್ ಸಂಚಾರ ( KSRTC Bus Service ) ಇರಲಿದೆ. ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಜೊತೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಕೆ ಎಸ್ ಆರ್ ಟಿಸಿ ಸಿಬ್ಬಂದಿಗಳ ಜಂಟಿ ಕ್ರಿಯಾ ಸಮಿತಿಯ ಬೇಡಿಕೆ ಕುರಿತಂತೆ ಚರ್ಚೆ ನಡೆಸಿದರು. ಈ ಬೇಡಿಕೆಗಳನ್ನು ಈಡೇರಿಸೋದಕ್ಕೆ ಸಕಾರಾತ್ಮಕವಾಗಿಯೇ ಸಿಎಂ ಸಿದ್ಧರಾಮಯ್ಯ ( CM Siddaramaiah ) ಸ್ಪಂದಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಸಾರಿಗೆ ಸಿಬ್ಬಂದಿಗಳ ಬೇಡಿಕೆ ಈಡೇರಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕಾರಣ, ಕೆ ಎಸ್ ಆರ್ ಟಿಸಿ ಸಿಬ್ಬಂದಿಗಳ ಜಂಟಿ ಕ್ರಿಯಾ ಸಮಿತಿಯು ಡಿ.31ರ ಮುಷ್ಕರವನ್ನು ಹಿಂಪಡೆಯಲು ನಿರ್ಧರಿಸಿದೆ ಎಂಬುದಾಗಿ ತಿಳಿದು ಬಂದಿದೆ. ಅಲ್ಲದೇ ಸಂಕ್ರಾಂತಿ ಹಬ್ಬದ ಬಳಿಕ ಸಭೆ ನಡೆಸಿ ಸಾರಿಗೆ ಸಿಬ್ಬಂದಿಗಳ ಬೇಡಿಕೆ ಈಡೇರಿಕೆ ಕುರಿತಂತೆ ಸೂಕ್ತ…

Read More

ಬೆಂಗಳೂರು: ಸಾರಿಗೆ ಮುಷ್ಕರವನ್ನು ಜಂಟಿ ಕ್ರಿಯಾ ಸಮಿತಿ ಹಿಂಪಡೆದಿದೆ. ಡಿಸೆಂಬರ್.31ರಂದು ನಡೆಸಲು ನಿರ್ಧರಿಸಿದ್ದಂತ ಪ್ರತಿಭಟನೆಯನ್ನು ವಾಪಾಸ್ ಪಡೆಯಲಾಗಿದೆ. ಹೀಗಾಗಿ ಮಂಗಳವಾರದಂದು ಎಂದಿನಂತೆ ಸಾರಿಗೆ ಬಸ್ಸುಗಳು ರಾಜ್ಯಾಧ್ಯಂತ ಸಂಚಾರ ನಡೆಸಲಿದ್ದಾವೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಸಾರಿಗೆ ಜಂಟಿ ಕ್ರಿಯಾ ಸಮಿತಿಯೊಂದಿಗೆ ಮಹತ್ವದ ಸಭೆಯನ್ನು ನಡೆಸಲಾಯಿತು. ಈ ಸಭೆಯಲ್ಲಿ ಸಾರಿಗೆ ಸಿಬ್ಬಂದಿಗಳ ಬೇಡಿಕೆ ಈಡೇರಿಸುವಂತ ಭರವಸೆಯನ್ನು ಮುಖ್ಯಮಂತ್ರಿ ನೀಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಸರ್ಕಾರ ಹಾಗೂ ಸಾರಿಗೆ ಸಿಬ್ಬಂದಿಗಳ ಜೊತೆಗಿನ ಸಂಧಾನ ಸಕ್ಸಸ್ ಆಗಿದ್ದು, ಡಿಸೆಂಬರ್.31ರಂದು ನಡೆಸಲು ನಿರ್ಧರಿಸಿದ್ದಂತ ಮುಷ್ಕರವನ್ನು ಹಿಂಪಡೆದಿರುವುದಾಗಿ ತಿಳಿದು ಬಂದಿದೆ. ಸಂಕ್ರಾಂತಿ ಬಳಿಕ ಮುಷ್ಕರ ನಡೆಸೋ ಬಗ್ಗೆ ನಿರ್ಧಾರವನ್ನು ಕೈಗೊಳ್ಳೋದಾಗಿ ಜಂಟಿ ಕ್ರಿಯಾ ಸಮಿತಿ ತಿಳಿಸಿದೆ ಎನ್ನಲಾಗಿದೆ. https://kannadanewsnow.com/kannada/crucial-meeting-scheduled-for-transport-department-employees-strike-tomorrow/ https://kannadanewsnow.com/kannada/why-here-on-december-31-go-here-with-your-family-and-celebrate-the-new-year/

Read More

ಬೆಂಗಳೂರು: ಡಿಸೆಂಬರ್.31ರಂದು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ಸಿಬ್ಬಂದಿಗಳು ಪ್ರತಿಭಟನೆಗೆ ಕರೆ ನೀಡಿದ್ದಾರೆ. ಈ ಸಂಬಂಧ ನಾಳೆ ಮಹತ್ವದ ಸಭೆಯನ್ನು ಕಾರ್ಮಿಕ ಇಲಾಖೆಯ ಆಯುಕ್ತರೊಂದಿಗೆ ನಡೆಸಲಿದ್ದಾರೆ. ನಾಳೆ ಡಿಸೆಂಬರ್.31ರಂದು ಮುಷ್ಕರಕ್ಕೆ ಕರೆ ನೀಡಿರುವಂತ ಸಾರಿಗೆ ಸಂಘಟನೆಗಳ ಜೊತೆಗೆ ಕಾರ್ಮಿಕ ಇಲಾಖೆಯಿಂದ ಸಭೆ ನಡೆಸಲಾಗುತ್ತಿದೆ. ನಾಳೆ ಬೆಳಿಗ್ಗೆ 11 ಗಂಟೆಗೆ ಕಾರ್ಮಿಕ ಇಲಾಖೆಯ ಮುಖ್ಯ ಕಚೇರಿಯಲ್ಲಿ ಸಭೆ ನಡೆಯಲಿದೆ. ನಾಳಿನ ಸಭೆಯಲ್ಲಿ ಕೆ ಎಸ್ ಆರ್ ಟಿಸಿ, ಬಿಎಂಟಿಸಿ ಸೇರಿದಂತೆ 4 ನಿಗಮಗಳ ಎಂಡಿಗಳು ಕೂಡ ಭಾಗಿಯಾಗಲಿದ್ದಾರೆ. ಅಲ್ಲದೇ ಮುಷ್ಕರಕ್ಕೆ ಕರೆ ನೀಡಿದವರು, ಜಂಟಿ ಕ್ರಿಯಾ ಸಮಿತಿಯವರು ಕೂಡ ಭಾಗಿಯಾಗಲಿದ್ದಾರೆ. ಮುಷ್ಕರ ಸಂಬಂಧ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಸಂಘಟನೆಗಳಿಂದ ಸರ್ಕಾರಕ್ಕೆ ನೋಟಿಸ್ ನೀಡಲಾಗಿತ್ತು. ಕಾರ್ಮಿಕ ಇಲಾಖೆಯ ನಿಯಮದಂತೆ ಮುಷ್ಕರಕ್ಕೆ ನೋಟಿಸ್ ನೀಡಿದ 21 ದಿನಗಳ ನಂತ್ರವೇ ಮುಷ್ಕರ ನಡೆಸಬೇಕು. ಹೀಗಾಗಿ ನಾಳೆ ಕಾರ್ಮಿಕ ಇಲಾಖೆಯ ಆಯುಕ್ತರ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಯಾವ ನಿರ್ಧಾರ ವ್ಯಕ್ತವಾಗಲಿದೆ ಎಂಬುದನ್ನು ಕಾದು ನೋಬೇಕಿದೆ. https://kannadanewsnow.com/kannada/sagar-ganapathi-bank-elections-cmc-member-madhumalathi-wins/ https://kannadanewsnow.com/kannada/why-here-on-december-31-go-here-with-your-family-and-celebrate-the-new-year/

Read More

ಶಿವಮೊಗ್ಗ: ಇಂದು ಸಾಗರದ ಗಣಪಿತ ಬ್ಯಾಂಕ್ ನ ಆಡಳಿತ ಮಂಡಳಿಯ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ನಗರಸಭೆ ಸದಸ್ಯ ವಿ.ಶಂಕರ್ (ಮಾಸ್ಟರ್ ಶಂಕರ್), ಶ್ರೀನಿವಾಸ್ ಮೇಸ್ತ್ರಿ, ಸದಸ್ಯೆ ಮಧುಮಾಲತಿ ಸೇರಿದಂತೆ 13 ಮಂದಿ ಗೆಲುವು ಸಾಧಿಸಿರುವುದಾಗಿ ತಿಳಿದು ಬಂದಿದೆ. ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿರುವಂತ ಶ್ರೀ ಗಣಪತಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಗೆ ಆಡಳಿತ ಮಂಡಳಿ ಸದಸ್ಯರ ನೇಮಕಾತಿಗಾಗಿ ಮತದಾನ ನಡೆಯಿತು. ಸಾಗರ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಂತ ಮತದಾನದಲ್ಲಿ 1500 ಷೇರುದಾರರು ಪಾಲ್ಗೊಂಡು ತಮ್ಮ ಮತವನ್ನು ಚಲಾಯಿಸಿದ್ದಾಗಿ ತಿಳಿದು ಬಂದಿದೆ. ಇಂದಿನ ಗಣಪತಿ ಬ್ಯಾಂಕ್ ಚುನಾವಣೆಯಲ್ಲಿ 13 ಮಂದಿ ಗೆಲುವು ಸಾಧಿಸಿದ್ದಾರೆ. ಶ್ರೀ ಗಣಪತಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿ ಚುನಾವಣೆಯಲ್ಲಿ ಗೆದ್ದಂತ ಅಭ್ಯರ್ಥಿಗಳ ಸಂಪೂರ್ಣ ಪಟ್ಟಿ ಈ ಕೆಳಗಿನಂತಿದೆ. ಹೀಗಿದೆ ಗಣಪತಿ ಬ್ಯಾಂಕ್ ಚುನಾವಣೆಯಲ್ಲಿ ಗೆಲುವು ಸಾಧಿಸಿದಂತ ಅಭ್ಯರ್ಥಿಗಳ ಪಟ್ಟಿ ಶ್ರೀನಿವಾಸ್ ಮೇಸ್ತ್ರಿ, ಸಾಮಾನ್ಯ ವರ್ಗ, 786 ಮತಗಳು ಬಿ.ದೇವೇಂದ್ರ ಭೋಜಪ್ಪ, ಸಾಮಾನ್ಯ ವರ್ಗ,…

Read More

ಬೆಂಗಳೂರು: ರಾಜ್ಯ ಸರ್ಕಾರದಿಂದ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರಿಗೆ ಗುಡ್ ನ್ಯೂಸ್ ನೀಡಿದೆ. ಅದೇ ಕಾರ್ಮಿಕರ ಆರೋಗ್ಯ ಭದ್ರತೆಗಾಗಿ ಅಪಘಾತ ಪರಿಹಾರ ಯೋಜನೆಯನ್ನು ಜಾರಿಗೊಳಿಸಿದೆ. ಈ ಕುರಿತಂತೆ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ಮಾಹಿತಿ ನೀಡಲಾಗಿದ್ದು, ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆಯನ್ನು ಸರ್ಕಾರದಿಂದ ಜಾರಿಗೊಳಿಸಲಾಗಿದೆ ಎಂದಿದೆ. ಖಾಸಗಿ ವಾಣಿಜ್ಯ ಸಾರಿಗೆ ಹಾಗೂ ಇತರೆ ಸಂಬಂಧಿತ ಕೆಲಸಗಳಲ್ಲಿ ತೊಡಗಿರುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಕೊಡಲು ಈ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದೆ. ಯಾರು ಈ ಯೋಜನೆಗೆ ಅರ್ಹರು.? ಚಾಲಕ ನಿರ್ವಾಹಕ ಕ್ಲೀನರ್ ನಿಲ್ದಾಣ ಸಿಬ್ಬಂದಿ ಮಾರ್ಗ ಪರಿಶೀಲನಾ ಸಿಬ್ಬಂದಿ ಬುಕ್ಕಿಂಗ್ ಗುಮಾಸ್ತ ನಗದು ಗುಮಾಸ್ತ ಡಿಪೋ ಗುಮಾಸ್ತ ಸಮಯ ಪಾಲಕ ಕಾವಲುಗಾರ ಅಥವಾ ಪರಿಚಾರಕ ಗ್ಯಾರೇಜುಗಳಲ್ಲಿ ಟೈರ್ ಜೋಡಿಸುವ ಮತ್ತು ಬೇರ್ಪಡಿಸುವವರು ಪಂಚರ್ ದುರಸ್ತಿ ಮಾಡುವವರು ವೀಲ್ ಬ್ಯಾಲೆನ್ಸಿಂಗ್ ಮತ್ತು ಅಲೈಮೆಂಟ್ ಕಾರ್ಮಿಕರು ನೀರಿನಿಂದ ಸ್ವಚ್ಛಗೊಳಿಸುವ ಘಟಕಗಳಲ್ಲಿ ಕೆಲಸ ಮಾಡುವವರು ಮೋಟಾರು…

Read More

ಬೆಂಗಳೂರು: ರಾಜ್ಯದಲ್ಲಿ ಸರಣಿ ಆತ್ಮಹತ್ಯೆ ಪ್ರಕರಣಗಳು, ಬಾಣಂತಿಯರ ಸಾವಿನ ಕುರಿತಂತೆ ಬಿಜೆಪಿಯಿಂದ ಆಂದೋಲನ ಸಮಿತಿ ಹಾಗೂ ಸತ್ಯ ಶೋಧನಾ ಸಮಿತಿಯನ್ನು ರಚಿಸಲಾಗಿದೆ. ಈ ತಂಡವು ರಾಜ್ಯಾಧ್ಯಂತ ಸಂಚರಿಸಿ ವರದಿಯನ್ನು ಸಂಗ್ರಹಿಸಿ, ಬಿಜೆಪಿ ರಾಜ್ಯಾಧ್ಯಕ್ಷರಿಗೆ ಸಲ್ಲಿಸಲಿದೆ. ಈ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಆದೇಶ ಹೊರಡಿಸಿದ್ದು, ರಾಜ್ಯದಲ್ಲಿ ಸರಣಿ ಆತ್ಮಹತ್ಯೆಗೆ ಕಾರಣವಾಗಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಈ ಕೆಳಕಂಡ ಪ್ರಮುಖರನ್ನು ಒಳಗೊಂಡ ಆಂದೋಲನ ಸಮಿತಿಯನ್ನು ರಚಿಸಲಾಗಿರುತ್ತದೆ ಎಂದಿದ್ದಾರೆ. ಹೀಗಿದೆ ಆಂದೋಲನ ಸಮಿತಿ ತಂಡದ ಪಟ್ಟಿ ಛಲವಾದಿ ನಾರಾಯಣಸ್ವಾಮಿ – ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಅರಗ ಜ್ಞಾನೇಂದ್ರ, ಶಾಸಕರು ಎನ್ ಮಹೇಶ್, ರಾಜ್ಯ ಉಪಾಧ್ಯಕ್ಷರು ಅಶ್ವತ್ಥನಾರಾಯಣ, ಮುಖ್ಯ ವಕ್ತಾರರು ಬಸವರಾಜ ಮತ್ತಿಮೂಡ್, ಶಾಸಕರು ಎನ್ ರವಿಕುಮಾರ್, ವಿಧಾನ ಪರಿಷತ್ ಸದಸ್ಯರು ಕೆ ಎನ್ ನವೀನ್, ಎಂಎಲ್ಸಿ ರಾಜುಗೌಡ, ಮಾಜಿ ಸಚಿವರು ಭಾರತಿ ಶೆಟ್ಟಿ, ಎಂಎಲ್ಸಿ ಹೇಮಲತಾ ನಾಯಕ್, ಎಂಎಲ್ಸಿ ಲಲಿತಾ ಅನಪೂರ್, ರಾಜ್ಯ ಕಾರ್ಯದರ್ಶಿ ಚಂದು ಪಾಟೀಲ್, ಜಿಲ್ಲಾಧ್ಯಕ್ಷರು…

Read More

ಬೆಂಗಳೂರು : ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಜಲಸಿರಿ 24×7 ನೀರು ಸರಬರಾಜು ಕಾಮಗಾರಿ, ಯುಜಿ ಕೇಬಲ್ ಹಾನಿ ಸರಿಪಡಿಸುವ ಕಾರ್ಯ, ಗ್ಯಾಸ್ ಪೈಪ್ ಲೈನ್ ಕಾಮಗಾರಿ ಮತ್ತು ನಿಗಮದ ಕಾಮಗಾರಿಗಳ ಹಿನ್ನೆಲೆಯಲ್ಲಿ ಡಿಸೆಂಬರ್ 30 ರ ಸೋಮವಾರ ವಿವಿಧ ಪ್ರದೇಶಗಳಲ್ಲಿ ನಿಗದಿತ ವಿದ್ಯುತ್ ಕಡಿತವನ್ನು ಘೋಷಿಸಿದೆ. ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಆರು ಗಂಟೆಗಳ ಕಾಲ ಪವರ್ ಕಟ್ ಆಗಲಿದೆ. ನಾಳೆ ಈ ಪ್ರದೇಶಗಳಲ್ಲಿ ಕರೆಂಟ್ ಇರೋದಿಲ್ಲ -ಎಸ್ಎಸ್ ಲೇಔಟ್ ಎ ಬ್ಲಾಕ್ -ಎಸ್ಎಸ್ ಮಾಲ್ – ಗಾಜಿನ ಮನೆ ಪ್ರದೇಶ -ಶಾಮನೂರು ರಸ್ತೆ -ಲಕ್ಷ್ಮಿ ಫ್ಲೋರ್ ಮಿಲ್ -ಸಿದ್ದವೀರಪ್ಪ ಬಡವಾಣೆ -ಕುವೆಂಪು ನಗರ -ಮಾವಿನಾ ಟೋಪು – ಜಿಎಚ್-ಪಾರ್ಕ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಇರೋದಿಲ್ಲ. ಸಾರ್ವಜನಿಕ ಅಡೆಚಣೆಗಾಗಿ ವಿಷಾದಿಸಲಾಗುತ್ತದೆ. ವಿದ್ಯುತ್ ಗ್ರಾಹಕರು ಸಹಕರಿಸುವಂತೆ ಕೋರಿದೆ. https://kannadanewsnow.com/kannada/should-the-bjp-give-up-when-they-want-to-resign-minister-priyank-kharge-hits-back/ https://kannadanewsnow.com/kannada/why-here-on-december-31-go-here-with-your-family-and-celebrate-the-new-year/ https://kannadanewsnow.com/kannada/pakistani-soldier-killed-11-injured-in-afghan-taliban-firing/

Read More