Author: kannadanewsnow09

ಬೆಂಗಳೂರು : “ಆಸ್ತಿ ತೆರಿಗೆ ಸುಸ್ತಿದಾರರಿಗಾಗಿ ಜಾರಿಗೆ ತರಲಾಗಿದ್ದ ‘ಒಂದು ಬಾರಿ ಪರಿಹಾರ ಯೋಜನೆ’ (ಒಟಿಎಸ್)ಯ ಕಾಲಾವಧಿ (ಜುಲೈ 31) ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರ ಒತ್ತಡದ ಮೇರೆಗೆ ಇದನ್ನು ಒಂದು ತಿಂಗಳ ಕಾಲ ಅಂದರೆ ಆಗಸ್ಟ್ 31ರವರೆಗೆ ವಿಸ್ತರಣೆ ಮಾಡಲಾಗಿದೆ” ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದರು. 13ನೇ ನ್ಯಾನೋ ತಂತ್ರಜ್ಞಾನ ಅಂತಾರಾಷ್ಟ್ರೀಯ ಸಮ್ಮೇಳನ ಕಾರ್ಯಕ್ರಮದ ಬಳಿಕ ಮಾಧ್ಯಮಗಳ ಜತೆ ಶುಕ್ರವಾರ ಮಾತನಾಡಿದ ಶಿವಕುಮಾರ್ ಅವರು, “ಈವರೆಗೂ 3 ಸಾವಿರ ಕೋಟಿಯಷ್ಟು ಆಸ್ತಿ ತೆರಿಗೆ ಸಂಗ್ರಹವಾಗಿದ್ದು, ಹೆಚ್ಚುವಾರಿಯಾಗಿ 400 ಕೋಟಿ ತೆರಿಗೆ ಸಂಗ್ರಹವಾಗಿದೆ. ಕೆಲ ಬದಲಾವಣೆ ಮಾಡಿಕೊಳ್ಳಬೇಕು ಮತ್ತು ಒಟಿಎಸ್ ಕಾಲಾವಧಿ ಒಂದು ತಿಂಗಳು ವಿಸ್ತರಣೆ ಮಾಡಬೇಕು ಎಂದು ಅಧಿಕಾರಿಗಳು ಹಾಗೂ ಸಾರ್ವಜನಿಕರಿಂದ ಒತ್ತಡ ಬರುತ್ತಿದೆ. ಸರ್ವರ್ ಸಮಸ್ಯೆ ಹಾಗೂ ಮತ್ತೆ ಕೆಲವರು ಚೆಕ್ ನೀಡಿದ್ದು, ಜುಲೈ 31ರವರೆಗೆ ನೀಡಲಾಗಿದ್ದ ಕಾಲಾವಧಿಯನ್ನು ಒಂದು ತಿಂಗಳ ಕಾಲ ಅಂದರೆ ಆಗಸ್ಟ್ 31ರವರೆಗೆ ವಿಸ್ತರಣೆ ಮಾಡಲಾಗಿದೆ” ಎಂದು ತಿಳಿಸಿದರು. “ಪ್ರಾಮಾಣಿಕವಾಗಿ ತೆರಿಗೆ ಪಾವತಿ ಮಾಡುತ್ತಿರುವವರಿಗೆ ತೊಂದರೆಯಾಗದ…

Read More

ಬಳ್ಳಾರಿ: ಅಂತರ್ಜಾತಿ ವಿವಾಹಕ್ಕೆ ವಿರೋಧ ವ್ಯಕ್ತ ಪಡಿಸಿದ ಹಿನ್ನಲೆಯಲ್ಲಿ ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ಬಳ್ಳಾರಿಯ ಸಿರಗುಪ್ಪದಲ್ಲಿ ನಡೆದಿದೆ. ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಪಟ್ಟಣದ ಜಮೀನೊಂದರಲ್ಲಿ ವಿಷ ಸೇವಿಸಿ ರಾಜು(23) ಹಾಗೂ ಪವಿತ್ರಾ(20) ಆತ್ಮಹತ್ಯೆಗೆ ಶರಣಾದಂತ ಪ್ರೇಮಿಗಳಾಗಿದ್ದಾರೆ. ಅನ್ಯ ಜಾತಿಯವರಾಗಿದ್ದಂತ ಇಬ್ಬರೂ, ಪರಸ್ಪರ ಪ್ರೀತಿಸುತ್ತಿದ್ದರು. ಆದರೇ ಇವರ ವಿವಾಹಕ್ಕೆ ಮನೆಯಲ್ಲಿ ಪೋಷಕರು ವಿರೋಧ ವ್ಯಕ್ತ ಪಡಿಸಿದ್ದರು. ಈ ಹಿನ್ನಲೆಯಲ್ಲಿ ಇಂದು ಸಿರಗುಪ್ಪದ ಜಮೀನೊಂದರಲ್ಲಿ ವಿಷ ಸೇವಿಸಿ ರಾಜು ಹಾಗೂ ಪವಿತ್ರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ವಿಷಯ ತಿಳಿದಂತ ಸಿರಗುಪ್ಪ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ. https://kannadanewsnow.com/kannada/governor-issues-notice-on-muda-scam-what-did-cm-siddaramaiah-say-heres/ https://kannadanewsnow.com/kannada/140-army-personnel-constructed-120-foot-long-bailey-bridge-in-record-31-hours-in-wayanad/

Read More

ಮೈಸೂರು : ರಾಜ್ಯಪಾಲರು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಹಾಗೂ ಬಿಜೆಪಿ, ಜೆಡಿಎಸ್ ಪಕ್ಷದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಮೈಸೂರಿನಲ್ಲಿ ಕೊಡಗು ಜಿಲ್ಲೆಗೆ ತೆರಳುವ ಮುನ್ನ ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಶೋಕಾಸ್ ನೋಟೀಸು ಕೊಟ್ಟಿರುವುದು ಕಾನೂನುಬಾಹಿರವಾಗಿದೆ , ಸಂವಿಧಾನಕ್ಕೆ ವಿರುದ್ಧವಾಗಿದೆ. ಕೇಂದ್ರ ಸರ್ಕಾರ ರಾಜಭವನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ನೋಟೀಸನ್ನು ಹಿಂಪಡೆಯಬೇಕೆಂದು ರಾಜ್ಯಪಾಲರಿಗೆ ಸಲಹೆ ನೀಡಲು ನಿರ್ಧಾರ ಪ್ರಾಸಿಕ್ಯೂಶನ್ ಗೆ ಅನುಮತಿ ಕೊಟ್ಟಿರುವ ಸಂದರ್ಭದಲ್ಲಿ ಏನು ಬೆಳವಣಿಗಳಾಗಿವೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ನಿನ್ನೆ ನಡೆದ ಸಚಿವ ಸಂಪುಟ ಸಭೆಗೆ ಕೆಟ್ಟ ಸಾಂಪ್ರದಾಯವಾಗುತ್ತದೆ ಎಂದು ಸಭೆಗೆ ಹೋಗದೇ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಸಚಿವ ಸಂಪುಟ ಸಭೆ ನಡೆಸಲು ನೇಮಿಸಲಾಗಿತ್ತು. ಶೋಕಾಸ್ ನೋಟಿಸ್ ಬಗ್ಗೆ ಸುದೀರ್ಘ ಚರ್ಚೆ ಮಾಡಿ, ನೋಟೀಸು ನೀಡಿರುವುದು ಕಾನೂನು ಬಾಹಿರವಾಗಿದ್ದು, ನೋಟೀಸನ್ನು ಅದನ್ನು ಹಿಂಪಡೆಯಬೇಕೆಂದು ನಿರ್ಧರಿಸಲಾಗಿದೆ ಎಂದರು. ಯಾವುದೇ ಅಪರಾಧ…

Read More

ಕೇರಳ: ವಯನಾಡ್ನ ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸುವ ಪ್ರಯತ್ನದಲ್ಲಿ, ಭಾರತೀಯ ಸೇನಾ ಸಿಬ್ಬಂದಿ 31 ಗಂಟೆಗಳಲ್ಲಿ 120 ಅಡಿ ಉದ್ದದ ಬೈಲಿ ಸೇತುವೆಯನ್ನು ನಿರ್ಮಿಸಿದ್ದಾರೆ. ಈ ಮೂಲಕ ಹೊಸ ದಾಖಲೆಯನ್ನೇ ಭಾರತೀಯ ಸೇನೆ ನಿರ್ಮಿಸಿದೆ. ಭಾರತೀಯ ಸೇನೆಯು ಸಿಎಲ್ 24 ಬೈಲಿ ಸೇತುವೆಯ ನಿರ್ಮಾಣವನ್ನು ಗುರುವಾರ ದಾಖಲೆಯ ಸಮಯದಲ್ಲಿ ಪೂರ್ಣಗೊಳಿಸಿದೆ. ಇರುವಾನಿಪ್ಳ ನದಿಗೆ ಅಡ್ಡಲಾಗಿ ಚೂರಲ್ಮಾಲಾವನ್ನು ಮುಂಡಕ್ಕೈಗೆ ಸಂಪರ್ಕಿಸುವ ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ ಮತ್ತು ನಾಗರಿಕ ಆಡಳಿತಕ್ಕೆ ಹಸ್ತಾಂತರಿಸಲಾಗಿದೆ. 24 ಟನ್ ತೂಕದ ಸೇತುವೆಯ ನಿರ್ಮಾಣವು ಜುಲೈ.31ರ ಸಂಜೆ ನಿರ್ಮಾಣ ಮಾಡುವುದಕ್ಕೆ ಪ್ರಾರಂಭಿಸಲಾಯಿತು. ಮರುದಿನ ಪೂರ್ಣಗೊಂಡಿತು. ಭಾರತೀಯ ಸೇನೆಯು ಆಂಬ್ಯುಲೆನ್ಸ್ ಮತ್ತು ನಂತರ ಮಿಲಿಟರಿ ಟ್ರಕ್ ಅನ್ನು ಓಡಿಸುವ ಮೂಲಕ ತನ್ನ ರಚನಾತ್ಮಕ ಸಮಗ್ರತೆಯನ್ನು ಪರೀಕ್ಷಿಸಿತು. https://kannadanewsnow.com/kannada/parents-beware-read-this-news-before-you-leave-the-mobile-charger-on-the-electricity-board/ https://kannadanewsnow.com/kannada/breakingtensions-in-middle-east-air-india-suspends-all-flights-to-and-from-tel-aviv/

Read More

ತೆಲಂಗಾಣ: ಬಹುತೇಕರು ಇಂದು ಮೊಬೈಲ್ ಬಳಕೆ ಮಾಡ್ತಾರೆ. ಕೆಲಸಕ್ಕೆ ಹೋಗುವ, ತುರ್ತಾಗಿ ಹೋಗುವ ಯಾವ್ಯಾವುದೋ ಸಂದರ್ಭದಲ್ಲಿ ಚಾರ್ಜರ್ ಕರೆಂಟ್ ಪ್ಲಗ್ ನಿಂದ ತೆಗೆಯದೇ ಬಿಟ್ಟು ಹೋಗ್ತಾರೆ. ಮಕ್ಕಳ ಪೋಷಕರೇ ನೀವು ಹಾಗೆ ಬಿಟ್ಟು ಹೋಗುವ ಮುನ್ನಾ ಮುಂದೆ ಸುದ್ದಿ ಓದಿ. ತೆಲಂಗಾಣದ ನಿರ್ಮಲ್ ಜಿಲ್ಲೆಯ ಕಡಂ ಮಂಡಲದ ಕೋಟ ಮಡ್ಡಿಪಡಗ ಗ್ರಾಮದಲ್ಲಿ ಮೊಬೈಲ್ ಚಾರ್ಜ್ ಹಾಕಿದ್ದಂತ ಚಾರ್ಜ್ ಅನ್ನು ವಿದ್ಯುತ್ ಪಿನ್ ನಲ್ಲೇ ಸ್ವಿಚ್ ಆಫ್ ಮಾಡದೇ ಹಾಗೆ ಬಿಟ್ಟು ಹೋಗಿದ್ದಾರೆ. ವಿದ್ಯುತ್ ಬೋರ್ಡ್ ನಲ್ಲೇ ನೇತು ಹಾಕಿದ್ದಂತ ಚಾರ್ಜರ್ ಕೇಬಲ್ ಇಡಿದು ಆಟವಾಡುತ್ತಿದ್ದಂತ ಒಂದೂವರೆ ವರ್ಷದ ಮಗು, ಅದನ್ನು ಬಾಯಿಗೆ ಹಾಕಿ ಕಚ್ಚಿ ಬಿಟ್ಟಿದೆ. ಹೀಗೆ ಕಚ್ಚಿದ್ದೇ ತಡ ಮಗುವಿಗೆ ವಿದ್ಯುತ್ ಶಾಕ್ ಹೊಡೆದು, ನಿತ್ರಾಣಗೊಂಡಿದೆ. ವಿದ್ಯುತ್ ಶಾಕ್ ಗೆ ಒಳಗಾಗಿದ್ದಂತ ಒಂದೂವರೆ ವರ್ಷದ ಬಾಲಕಿ ದುರ್ಗಂ ಆರಾಧ್ಯಳನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಆದರೇ ಚಿಕಿತ್ಸೆ ಫಲಿಸದೇ ಬಾಲಕಿ ದುರ್ಗಂ ಆರಾಧ್ಯ ಸಾವನ್ನಪ್ಪಿದ್ದಾರೆ. ಮಗು ವಿದ್ಯುತ್ ಚಾರ್ಜರ್…

Read More

ಭೀಮನ ಅಮಾವಾಸ್ಯೆಯು ದಕ್ಷಿಣ ಭಾರತದಲ್ಲಿ, ಹೆಚ್ಚಾಗಿ ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಕೆಲವು ಭಾಗಗಳಲ್ಲಿ ಆಚರಿಸಲ್ಪಡುವ ಹಬ್ಬವಾಗಿದೆ. ಇದನ್ನು ಹಿಂದೂ ಪಂಚಾಂಗದ ಆಷಾಢ ಮಾಸದ ಅಮಾವಾಸ್ಯೆಯ ದಿನದಂದು ಆಚರಿಸಲಾಗುತ್ತದೆ. ಇದು ಶುಭ ಅವಧಿಯ ಆರಂಭವನ್ನು ಸೂಚಿಸುತ್ತದೆ, ಮತ್ತು ಆಶೀರ್ವಾದ ಪಡೆಯಲು ಹಿಂದೂ ದೇವತೆಗಳಿಗೆ ಅನೇಕ ಪೂಜೆಗಳನ್ನು ನಡೆಸಲಾಗುತ್ತದೆ. ಆಷಾಢದ ಮಾಸದ ಕೊನೆಯ ದಿನವನ್ನು ಭೀಮನ ಅಮಾವಾಸ್ಯೆಯೆಂದು ಗುರುತಿಸಲಾಗಿದೆ. ಈ ಬಾರಿ 2024 ರ ಭೀಮನ ಅಮಾವಾಸ್ಯೆಯನ್ನು ಆಗಸ್ಟ್‌ 4 ರಂದು ಭಾನುವಾರ ಆಚರಿಸಲಾಗುತ್ತಿದೆ. ಈ ಭೀಮನ ಅಮಾವಾಸ್ಯೆಯ ಬಗ್ಗೆ ಒಂದಿಷ್ಟು ಪ್ರಯೋಜನಕಾರಿ ಮಾಹಿತಿಯನ್ನು ತಿಳಿದುಕೊಳ್ಲೋಣ.. ​ಭೀಮನ ಅಮಾವಾಸ್ಯೆ 2024 ಮುಹೂರ್ತ ​ 2024 ಭೀಮನ ಅಮಾವಾಸ್ಯೆ ಶುಭ ದಿನ: ಆಗಸ್ಟ್‌ 4, ಭಾನುವಾರ ಅಮಾವಾಸ್ಯೆ ಪ್ರಾರಂಭ : ಆಗಸ್ಟ್ 3, 2024 ಹಗಲು 3:50 p.m. ‌ ‌ ‌ ‌ ಅಮಾವಾಸ್ಯೆ ಮುಕ್ತಾಯ : ಆಗಸ್ಟ್ 4, 2024 ಹಗಲು 4:42 p.m. ವರ್ಜ್ಯಂ ಮುಹೂರ್ತ: ಮಧ್ಯರಾತ್ರಿ ರಾಹುಕಾಲ: ಸಂಜೆ…

Read More

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿವಿಧ ಕೋರ್ಸ್ ಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆಯ ಜೊತೆ ವಿವಿಧ ಇಲಾಖೆಗಳು ಕೋರಿಕೆ ಸಲ್ಲಿಸುವ ಹುದ್ದೆಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕೂಡ ನಡೆಸುತ್ತಿದೆ. ಈ ಪರೀಕ್ಷೆಗಳು ಅತ್ಯಂತ ಪಾರದರ್ಶಕತೆಯಿಂದ ನಡೆಸುವುದು ಪ್ರಾಧಿಕಾರದ ಆದ್ಯ ಕರ್ತವ್ಯವಾಗಿದ್ದು ಈ ಹಿನ್ನೆಲೆಯಲ್ಲಿ ಪ್ರಾಧಿಕಾರ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ (ವೆಬ್ ಕಾಸ್ಟಿಂಗ್) Web Casting ಮೂಲಕ ಆಧುನಿಕ ತಂತ್ರಜ್ಞಾನಗಳೊಂದಿಗೆ AI ಸಿಸಿ ಕ್ಯಾಮೆರಾ ಗಳನ್ನು ಬಳಕೆ ಮಾಡಲು ಇಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಯಿತು. ಇದಕ್ಕಾಗಿ 10 ಕೋಟಿ ಮೌಲ್ಯದ ಟೆಂಡರ್ ಪ್ರಕ್ರಿಯೆ ಕೈಗೊಳ್ಳಲು ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು. ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಂತ ಉನ್ನತ ಶಿಕ್ಷಣ ಸಚಿವರಾದ ಡಾ. ಎಂಸಿ ಸುಧಾಕರ್ ಅವರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸುವ ಎಲ್ಲಾ ಪರೀಕ್ಷೆಗಳಲ್ಲಿ ಎಐ ತಂತ್ರಜ್ಞಾನದ ಮೂಲಕ ಅಭ್ಯರ್ಥಿಗಳ ಹಸ್ತ ಮುದ್ರೆ ಸಂಗ್ರಹ ಹಾಗೂ ಮುಖ ಚಹರೆಯನ್ನು ಗುರುತಿಸುವ ತಂತ್ರಜ್ಞಾನವನ್ನು ಬಳಸಲು ಕೂಡ ಪ್ರಾಧಿಕಾರದ ಸಭೆಯು ಒಪ್ಪಿಗೆ ನೀಡಿತು.…

Read More

ನವದೆಹಲಿ: ಕೇರಳದ ಗುಡ್ಡಗಾಡು ಪಟ್ಟಣವಾದ ವಯನಾಡ್ನಲ್ಲಿ 296ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ ಭಾರಿ ಭೂಕುಸಿತದ ಎರಡು ದಿನಗಳ ನಂತರ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (Indian Space Research Organisation -ISRO) ಈ ಪ್ರದೇಶದಲ್ಲಿ ಉಂಟಾದ ವ್ಯಾಪಕ ಹಾನಿಯ ಉಪಗ್ರಹ ಚಿತ್ರಗಳನ್ನು ಬಿಡುಗಡೆ ಮಾಡಿದೆ. ವಯನಾಡ್ನಲ್ಲಿ ಮಂಗಳವಾರ ಸಂಭವಿಸಿದ ಭಾರಿ ಭೂಕುಸಿತದಲ್ಲಿ ಕನಿಷ್ಠ 296 ಜನರು ಸಾವನ್ನಪ್ಪಿದ್ದಾರೆ ಮತ್ತು 206 ಜನರು ಕಾಣೆಯಾಗಿದ್ದಾರೆ. ಭಾರತೀಯ ಸೇನೆ, ಎನ್ಡಿಆರ್ಎಫ್ ಮತ್ತು ಸ್ಥಳೀಯ ತುರ್ತು ಪ್ರತಿಕ್ರಿಯೆ ಇಲಾಖೆಗಳು ದುರಂತದಲ್ಲಿ ಸಿಲುಕಿರುವ ಜನರನ್ನು ಪತ್ತೆಹಚ್ಚಲು ಭಾರಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಂಡಿವೆ. ಹೈದರಾಬಾದ್ನ ರಾಷ್ಟ್ರೀಯ ದೂರ ಸಂವೇದಿ ಕೇಂದ್ರ (ಎನ್ಆರ್ಎಸ್ಸಿ) ಇಸ್ರೋದ ಸುಧಾರಿತ ಕಾರ್ಟೊಸ್ಯಾಟ್ -3 ಆಪ್ಟಿಕಲ್ ಉಪಗ್ರಹ ಮತ್ತು ರಿಸ್ಯಾಟ್ ಉಪಗ್ರಹವನ್ನು ವಯನಾಡ್ನಲ್ಲಿ ಭೂಕುಸಿತದಿಂದ ಉಂಟಾದ ವಿನಾಶದ ವ್ಯಾಪ್ತಿಯನ್ನು ಸೆರೆಹಿಡಿಯಲು ಹಾರಿಸಿತು. ಭಾರೀ ಮಳೆಯಿಂದಾಗಿ ಉಂಟಾದ ಭೂಕುಸಿತವು 1,550 ಮೀಟರ್ ಎತ್ತರದಲ್ಲಿ ಹುಟ್ಟಿಕೊಂಡಿತು. ಎನ್ಆರ್ಎಸ್ಸಿ ವರದಿಯ ಪ್ರಕಾರ, ಚೂರಲ್ಮಾಲಾ ಪಟ್ಟಣ ಮತ್ತು…

Read More

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರವು CISCO ಸಹಯೋಗದೊಂದಿಗೆ “ಸೈಬರ್‌ ಸೆಕ್ಯೂರಿಟಿ ಪಾಲಿಸಿ 2024 ಹಾಗೂ ಕೌಶಲ್ಯ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಈ ಮೂಲಕ ಕರ್ನಾಟಕದಲ್ಲಿ ಸೈಬರ್ ಅಪರಾಧ ತಡೆಗೆ ರಾಜ್ಯ ಸರ್ಕಾರದಿಂದ ಮಹತ್ವದ ಹೊಸ ಸೈಬರ್ ಭದ್ರತಾ ನೀತಿಯನ್ನು ಕೈಗೊಂಡಿರುವುದಾಗಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಮತ್ತು ಎಸ್ & ಟಿ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಇ-ಆಡಳಿತ), ಗೃಹ ಇಲಾಖೆ ಹಾಗೂ ಸರ್ಕಾರಿ ಮತ್ತು ಖಾಸಗಿ ವಲಯದ ಎಲ್ಲಾ ಸಂಬಂಧಿತ ಪಾಲುದಾರರೊಂದಿಗೆ ಸಮಾಲೋಚಿಸಿ ಈ ನೀತಿಯ ಕರಡನ್ನು ಜಂಟಿಯಾಗಿ ರಚಿಸಲಾಗಿದೆ. ಈ ನೀತಿಯನ್ನು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಸಹ ಪರಿಶೀಲಿಸಿದ್ದು, ಇದು ರಾಜ್ಯದ K-ಟೆಕ್ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಸೈಬರ್ ಸೆಕ್ಯುರಿಟಿ (CYSECK) ಇನ್‌ಸ್ಟಿಟ್ಯೂಟ್ ಆಗಿದೆ. ಈ ನೀತಿಯು ಎರಡು ಭಾಗವನ್ನು ಹೊಂದಿದ್ದು, ಮೊದಲ ಭಾಗವು ಸಾರ್ವಜನಿಕ, ಶೈಕ್ಷಣಿಕ, ಉದ್ಯಮ, ಸ್ಟಾರ್ಟ್-ಅಪ್‌, ರಾಜ್ಯದ ಐಟಿ ಸ್ವತ್ತುಗಳು ಮತ್ತು ಸರ್ಕಾರ ಸೇರಿದಂತೆ ಸಮಾಜದ…

Read More

ಪ್ಯಾರಿಸ್: ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ, ಪಿ.ವಿ.ಸಿಂಧು ಅವರ ಮೂರನೇ ಒಲಿಂಪಿಕ್ಸ್ ಅಭಿಯಾನವು ಚೀನಾದ ಹಿ ಬಿಂಗ್ ಜಿಯಾವೊ ವಿರುದ್ಧ ನೇರ ಗೇಮ್ ಸೋಲಿನೊಂದಿಗೆ ಕೊನೆಗೊಂಡಿದೆ. ಪ್ಯಾರಿಸ್ ಒಲಿಂಪಿಕ್ಸ್ 2024 ರ ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ಸ್ಪರ್ಧೆಯ 16ನೇ ಸುತ್ತಿನಲ್ಲಿ ಪಿ.ವಿ.ಸಿಂಧು ಆರನೇ ಶ್ರೇಯಾಂಕದ ಚೀನಾದ ಹಿ ಬಿಂಗ್ ಜಿಯಾವೊ ವಿರುದ್ಧ 19-21, 14-21 ಅಂತರದಲ್ಲಿ ಸೋತು ಹೊರನಡೆದರು.

Read More