Author: kannadanewsnow09

ಬೆಂಗಳೂರು: ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ ಎನ್ನುವಂತೆ ಏಪ್ರಿಲ್ ಅಂತ್ಯಕ್ಕೆ 3000 ಲೈನ್ ಮೆನ್ ಹುದ್ದೆಗಳ ನೇಮಕಕ್ಕೆ ನಿರ್ಧರಿಸಲಾಗಿದೆ ಅಂತ ಇಂಧನ ಸಚಿವ ಕೆ.ಜೆ ಜಾರ್ಜ್ ಹೇಳಿದ್ದಾರೆ. ಖಾಲಿ ಇರುವ 3 ಸಾವಿರ ಲೈನ್‌ಮೆನ್‌ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಆರಂಭಗೊಂಡಿದೆ. ಬರುವ ಏಪ್ರಿಲ್‌ನೊಳಗೆ ನೇಮಕಾತಿ ಪ್ರಕ್ರಿಯೆ ಮುಗಿಯಲಿದೆ. ಮೊದಲ ಬಾರಿಗೆ ಇಡೀ ರಾಜ್ಯದಲ್ಲಿ ಒಂದೇ ದಿನ ದೈಹಿಕ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಬಳಿಕ ಎಇಇ, ಜೆಇ ಸೇರಿದಂತೆ ಇತರೆ ಹುದ್ದೆಗಳನ್ನು ಹಂತ ಹಂತವಾಗಿ ತುಂಬಲಾಗುವುದು ಎಂದು ಇಂಧನ ಸಚಿವರಾದ ಕೆ.ಜೆ.ಜಾರ್ಜ್‌ ತಿಳಿಸಿದ್ದಾರೆ. https://twitter.com/KarnatakaVarthe/status/1882785562681303234 https://kannadanewsnow.com/kannada/the-state-government-has-decided-to-promulgate-an-ordinance-to-regulate-the-use-and-use-of-the-land-of-the-palace-grounds-in-bengaluru/ https://kannadanewsnow.com/kannada/cnn-to-lay-off-200-jobs-cnn-layoffs/

Read More

ಬೆಂಗಳೂರು: 66/11ಕೆವಿ ಗ್ಲೋಬಲ್ ಟೆಕ್ ಪಾರ್ಕ್ ಉಪಕೇಂದ್ರದಲ್ಲಿ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಈ ಕೆಳಕಂಡ ಪ್ರದೇಶಗಳಲ್ಲಿ ದಿನಾಂಕ 25.01.2025 (ಶನಿವಾರ) ರಂದು ಬೆಳಗ್ಗೆ 10:00 ರಿಂದ ಮಧ್ಯಾನ್ನ 2:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. “ಎಕೊವರ್ಲ್ಡ್ ಕ್ಯಾಂಪಸ್, ಮ್ಯಾರಿಯಟ್ ಹೋಟೆಲ್, ದೇವರಬೀಸನಹಳ್ಳಿ, ವಜ್ರಮ್ ಅಪಾರ್ಟ್ಮೆಂಟ್, ದೇವರಬೀಸನಹಳ್ಳಿ ಗ್ರಾಮ, ದೊಡ್ಡಕನ್ನೆಳ್ಳಿ ರೋಡ್, ಗೇರ್ ಸ್ಕೂಲ್ ರೋಡ್, ಆದರ್ಶ್, ಸಾಯಿ ಶೃತಿ, ಸ್ಟರ್ಲಿಂಗ್ ಅಸೆಂಟಿಯಾ, ಸಾಮ್ವಿ, ಜೆ.ವಿ ಹೋಟೆಲ್ ಮತ್ತು ಸುತ್ತಮುತ್ತಲಿನ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. 66/11ಕೆವಿ ಸೇಂಟ್‌ಜಾನ್‌ವುಡ್ ಉಪಕೇಂದ್ರದಲ್ಲಿನ ಈ ಕೆಳಕಂಡ ಪ್ರದೇಶಗಳಲ್ಲಿ ದಿನಾಂಕ 27.01.2025 (ಸೋಮವಾರ) ರಂದು ಬೆಳಗ್ಗೆ 10:00 ರಿಂದ ಸಂಜೆ 3:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ಕರೆಂಟ್ ಇರೋದಿಲ್ಲ. “ಸೇಂಟ್‌ಜಾನ್‌ವುಡ್ ಅಪಾರ್ಟ್ಮೆಂಟ್ & ಆಸ್ಪತ್ರೆ, ತಾವರೆಕೆರೆ, ಅಕ್ಸೆಂಚರ್, ಒರೆಕಲ್, ಚರಿಸ್ಟ್ ಕಾಲೇಜು, ಮತ್ತು ಸುತ್ತಮುತ್ತಲಿನ ಸ್ಥಳ. ಬಿಟಿಎಮ್ ಲೇಔಟ್,ಮೆಜೆಸ್ಟಿಕ್ ಅಪಾರ್ಟ್ಮೆಂಟ್, ಎಕ್ಷಾ , ಆಕ್ಷಿಸ್ ಭವನ, ಸುದ್ದಗುಂಟೆ ಪಾಳ್ಯ, ಗುರಪ್ಪನ ಲೇಔಟ್,ಬಿಜಿ ರೋಡ್…

Read More

ಕೋಲಾರ: ಗ್ರಾಮೀಣ ಭಾಗದ ಜನರ ಆರೋಗ್ಯ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂಬ ಭರವಸೆ ಹುಟ್ಟಿಸಿರುವ ಗೃಹ ಆರೋಗ್ಯ ಯೋಜನೆ ಅನುಷ್ಠಾನದ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಂದು ಪ್ರಗತಿ ಪರಿಶೀಲನೆ ನಡೆಸಿದರು. ರಾಜ್ಯಾದ್ಯಂತ ಯೋಜನೆಯನ್ನ ವಿಸ್ತರಿಸಲು ರೂಪರೇಷೆ ಹಾಕಿಕೊಂಡಿರುವ ಸಚಿವ ದಿನೇಶ್ ಗುಂಡೂರಾವ್ ಕೋಲಾರ ಜಿಲ್ಲೆಯಲ್ಲಿ ಇಂದು ಯೋಜನೆ ಅನುಷ್ಠಾನಗೊಂಡಿರುವ ಹಳ್ಳಿಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೋಲಾರದ ಬಂಗಾರಪೇಟೆಯ ಮಾಗುಂದಿಯಲ್ಲಿ ಮನೆ ಮನೆಗಳಿಗೆ ಭೇಟಿ ನೀಡಿದ ಸಚಿಚರು, ಗೃಹ ಆರೋಗ್ಯ ಯೋಜನೆ ಮೂಲಕ ಮನೆ ಬಾಗಿಲಿಗೆ ಔಷಧಿಗಳು ತಲುಪುತ್ತಿದೆಯಾ ಎಂದು ಜನರನ್ನು ಪ್ರಶ್ನಿಸಿದರು. ಔಷಧಿಗಳು ಮನೆಗೆ ತಲುಪುತ್ತಿರುವ ಬಗ್ಗೆ ಸಚಿವರ ಎದುರು ಹರ್ಷ ವ್ಯಕ್ತಪಡಿಸಿದ ಗ್ರಾಮಸ್ಥರು, ಯೋಜನೆಯಿಂದಾಗಿ ಗ್ರಾಮೀಣ ಭಾಗದ ಜನರಿಗೆ ಅನುಕೂಲ ಆಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಮೊದಲು ಆಸ್ಪತ್ರೆಗಳಿಗೆ ಹೋಗಿ ತಪಾಸಣೆ ಮಾಡಿಸಬೇಕಿತ್ತು. ಅಲ್ಲದೇ ಮೆಡಿಕಲ್ ಶಾಪ್ ಗಳಲ್ಲಿ ಮಾತ್ರೆ ಪಡೆಯಬೇಕಾಗಿತ್ತು. ತಿಂಗಳಿಗೆ ಎರಡು ಸಾವಿರ ರೂಪಾಯಿ ಮಾತ್ರೆಗಳಿಗೆ ಖರ್ಚಾಗುತ್ತಿತ್ತು. ಅಲ್ಲದೇ ಎರಡು…

Read More

144 ವರ್ಷಗಳಿಗೆ ಒಮ್ಮೆ ಬರುವ ಮಹಾ ಕುಂಭಮೇಳಕ್ಕೆ ಹೋಗಲು ಸಾಧ್ಯವಿಲ್ಲದವರು ಮನೆಯಲ್ಲಿ ಈ ಸ್ತೋತ್ರವನ್ನು ಪಠಿಸಿ ತ್ರಿವೇಣೀಸ್ತೋತ್ರಮ್ ಮುಕ್ತಾಮಯಾಲಂಕೃತಮುದ್ರವೇಣೀ ಭಕ್ತಾಭಯತ್ರಾಣಸುಬದ್ಧವೇಣೀ । ಮತ್ತಾಲಿಗುಂಜನ್ಮಕರನ್ದವೇಣೀ ಶ್ರೀಮತ್ಪ್ರಯಾಗೇ ಜಯತಿ ತ್ರಿವೇಣೀ ॥ 1॥ ಲೋಕತ್ರಯೈಶ್ವರ್ಯನಿದಾನವೇಣೀ ತಾಪತ್ರಯೋಚ್ಚಾಟನಬದ್ಧವೇಣೀ । ಧರ್ಮಾ-ಽರ್ಥಕಾಮಾಕಲನೈಕವೇಣೀ ಶ್ರೀಮತ್ಪ್ರಯಾಗೇ ಜಯತಿ ತ್ರಿವೇಣೀ ॥ 2॥ ಮುಕ್ತಾಂಗನಾಮೋಹನ-ಸಿದ್ಧವೇಣೀ ಭಕ್ತಾನ್ತರಾನನ್ದ-ಸುಬೋಧವೇಣೀ । ವೃತ್ತ್ಯನ್ತರೋದ್ವೇಗವಿವೇಕವೇಣೀ ಶ್ರೀಮತ್ಪ್ರಯಾಗೇ ಜಯತಿ ತ್ರಿವೇಣೀ ॥ 3॥ ದುಗ್ಧೋದಧಿಸ್ಫೂರ್ಜಸುಭದ್ರವೇಣೀ ನೀಲಾಭ್ರಶೋಭಾಲಲಿತಾ ಚ ವೇಣೀ । ಸ್ವರ್ಣಪ್ರಭಾಭಾಸುರಮಧ್ಯವೇಣೀ ಶ್ರೀಮತ್ಪ್ರಯಾಗೇ ಜಯತಿ ತ್ರಿವೇಣೀ ॥ 4॥ ವಿಶ್ವೇಶ್ವರೋತ್ತುಂಗಕಪರ್ದಿವೇಣೀ ವಿರಿಂಚಿವಿಷ್ಣುಪ್ರಣತೈಕವೇಣೀ । ತ್ರಯೀಪುರಾಣಾ ಸುರಸಾರ್ಧವೇಣೀ ಶ್ರೀಮತ್ಪ್ರಯಾಗೇ ಜಯತಿ ತ್ರಿವೇಣೀ ॥ 5॥ ಮಾಂಗಲ್ಯಸಮ್ಪತ್ತಿಸಮೃದ್ಧವೇಣೀ ಮಾತ್ರಾನ್ತರನ್ಯಸ್ತನಿದಾನವೇಣೀ । ಪರಮ್ಪರಾಪಾತಕಹಾರಿವೇಣೀ ಶ್ರೀಮತ್ಪ್ರಯಾಗೇ ಜಯತಿ ತ್ರಿವೇಣೀ ॥ 6॥ ನಿಮಜ್ಜದುನ್ಮಜ್ಜಮನುಷ್ಯವೇಣೀ ತ್ರಯೋದಯೋಭಾಗ್ಯವಿವೇಕವೇಣೀ । ವಿಮುಕ್ತಜನ್ಮಾವಿಭವೈಕವೇಣೀ ಶ್ರೀಮತ್ಪ್ರಯಾಗೇ ಜಯತಿ ತ್ರಿವೇಣೀ ॥ 7॥ ಸೌನ್ದರ್ಯವೇಣೀ ಸುರಸಾರ್ಧವೇಣೀ ಮಾಧುರ್ಯವೇಣೀ ಮಹನೀಯವೇಣೀ । ರತ್ನೈಕವೇಣೀ ರಮಣೀಯವೇಣೀ ಶ್ರೀಮತ್ಪ್ರಯಾಗೇ ಜಯತಿ ತ್ರಿವೇಣೀ ॥ 8॥ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ…

Read More

ಹುಟ್ಟಿದ ಪ್ರತಿಯೊಬ್ಬ ಮನುಷ್ಯನು ವಿಭಿನ್ನ ಆಸೆಗಳನ್ನು ಮತ್ತು ಆಸೆಗಳನ್ನು ಹೊಂದಿರುತ್ತಾನೆ. ಮಕ್ಕಳಿಗೆ ಆಟಿಕೆಗಳ ಮೇಲೆ ಆಸೆ ಇರುವಂತೆ ದೊಡ್ಡವರಿಗೂ ಬೇರೆ ಬೇರೆ ವಸ್ತುಗಳ ಮೇಲೆ ಆಸೆ ಇರುತ್ತದೆ. ಒಳ್ಳೆಯ ಉದ್ಯೋಗ, ಒಳ್ಳೆಯ ವೃತ್ತಿ, ಮನೆ ಕಟ್ಟಲು, ಮದುವೆ ಮಾಡಿ, ವರವಾಗಿ ಮಗುವಿ ಎಂದು ಕೇಳುವವರಿಗೆ ಈ ಶಂಖದ ಹೂವು ಯಾವ ರೀತಿಯಲ್ಲಿ ಸಹಾಯ ಮಾಡಲಿದೆ? ನಾವು ನಿರಂತರವಾಗಿ ಆಧ್ಯಾತ್ಮಿಕ ಮಾಹಿತಿಯನ್ನು ಹುಡುಕುತ್ತಿದ್ದೇವೆ. ಈ ಶಂಖ ಪುಷ್ಪವು ಇಷ್ಟಾರ್ಥಗಳನ್ನು ಪರಿಪೂರ್ಣವಾಗಿ ಪೂರೈಸುವ ಶಕ್ತಿಯನ್ನು ಹೊಂದಿದೆ. ನೀಲಿ ಶಂಖವು ತುಂಬಾ ವಿಶೇಷವಾಗಿದೆ. ನೀಲಕಂದರನಾಗಬಲ್ಲ ಎಂಪೆರುಮಾನ್ ಈಸನಿಗೆ ಸೂಕ್ತವಾದ ಪುಷ್ಪ. ನೀಲಿ ಶಂಖದ ಹೂವು ಶ್ರೀಮನ್ ನಾರಾಯಣ ವಿಷ್ಣುವಿನ ನೆಚ್ಚಿನ ಹೂವು, ಏಕೆಂದರೆ ಇದು ನೀಲಿ ಕ್ಷೀರ ಸಾಗರವನ್ನು ಸಂಕೇತಿಸುತ್ತದೆ. ಇದಲ್ಲದೆ, ನೀಲಿ ಬಣ್ಣದಲ್ಲಿ ತನ್ನ ಸಂಗಾತಿಯನ್ನು ಹೊಂದಿರುವ ಶ್ರೀ ಕೃಷ್ಣನ ನೆಚ್ಚಿನ ಹೂವು ಇದು. ಕಡು ನೀಲಿಯಾಗಿ ಕಾಣುವ ಶನಿಗ್ರಹಕ್ಕೆ ಇದು ಅತ್ಯುತ್ತಮವಾದ ಹೂವು. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್…

Read More

ಬೆಂಗಳೂರು : ರಾಜ್ಯದಲ್ಲಿ ಪರಭಾಷಾ ಚಿತ್ರಗಳ ಟಿಕೆಟ್ ದರ ನಿಯಂತ್ರಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜೊತೆಗೆ, ಕಲಾತ್ಮಕ ಚಿತ್ರಗಳ ಪ್ರೋತ್ಸಾಹಕ್ಕೆ ಪ್ರತೀ ಜಿಲ್ಲೆಗೂ 200 ಆಸನಗಳ ಮಿನಿ ಚಿತ್ರಮಂದಿರ ಸ್ಥಾಪನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ರವೀಂದ್ರ ಕಲಾ ಕ್ಷೇತ್ರದಲ್ಲಿ ಕನ್ನಡ ಸೇನಾನಿ ಸಾ.ರಾ.ಗೋವಿಂದು ಅವರ ಅಭಿನಂದನ ಕಾರ್ಯಕ್ರಮದಲ್ಲಿ ಗೋವಿಂದು ಅವರನ್ನು ಸನ್ಮಾನಿಸಿ, ಅಭಿನಂದಿಸಿ ಮಾತನಾಡಿದರು. ಪಕ್ಕದ ರಾಜ್ಯಗಳಲ್ಲಿ ಪರಭಾಷಾ ಚಿತ್ರಗಳಿಗೆ ಟಿಕೆಟ್ ದರ ಎಷ್ಟಿದೆ ಎಂದು ಪರಿಶೀಲಿಸಿ ರಾಜ್ಯದಲ್ಲಿ ಅದಕ್ಕೆ ತಕ್ಕಂತೆ ನಿಯಂತ್ರಣ ತರುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವ ಪ್ರಯತ್ನ ಮಾಡುತ್ತೇನೆ ಎಂದರು. ಕನ್ನಡ ಕೆಲಸಕ್ಕೆ ಸರ್ಕಾರ ಸದಾ ಮುಂದೆ ಇರುತ್ತದೆ. ದಿನಾಂಕ 27 ರಂದು ವಿಧಾನಸೌಧದ ಆವರಣದಲ್ಲಿ ತಾಯಿ ಭುವನೇಶ್ವರಿ ಪುತ್ಥಳಿ ಸ್ಥಾಪಿಸಲಾಗುವುದು ಎಂದರು. ಗೋವಿಂದು ಅವರು ರಾಜ್ ಕುಮಾರ್ ಸಂಘದ ಅಧ್ಯಕ್ಷರಾಗಿ ಮಾಡಿದ ಕೆಲಸಗಳು ಸ್ಮರಣೀಯ. ರಾಜ್ ಅವರ ವಿನಯ, ಸಭ್ಯತೆ, ಸರಳತೆ ಇಡೀ ಮನುಷ್ಯ ಕುಲಕ್ಕೇ ಮಾದರಿ. ಡಾ.ರಾಜ್ ಕುಮಾರ್ ಅವರಿಗೆ ರಾಜ್…

Read More

ಬೆಂಗಳೂರು: ರಾಜ್ಯ ಸರ್ಕಾರದಿಂದ ಬೆಂಗಳೂರು ಅರಮನೆ ಮೈದಾನದ ಜಾಗವನ್ನು ಬಳಕೆ ಮಾಡಿಕೊಳ್ಳಲು ಹಾಗೂ ನಿಯಂತ್ರಿಸಲು ಸುಗ್ರಿವಾಜ್ಞೆಗೆ ನಿರ್ಧಾರ ಕೈಗೊಳ್ಳಲಾಗಿದೆ. ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1996ಕ್ಕೆ ಸಂಬಂಧಪಟ್ಟ ಸಿವಿಲ್ ಅಪೀಲುಗಳು ಸರ್ವೋಚ್ಛ ನ್ಯಾಯಾಲಯದಲ್ಲಿ ಬಾಕಿಯಿರುವ ಹಿನ್ನೆಲೆಯಲ್ಲಿ ಅಭಿವೃದ್ಧಿ ಹಕ್ಕುಗಳನ್ನು (ಟಿ.ಡಿ.ಆರ್) ವಿತರಿಸಿದ್ದಲ್ಲಿ ರಾಜ್ಯದ ಹಿತಾಸಕ್ತಿಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಅದಕ್ಕಾಗಿ ಬೆಂಗಳೂರು ಅರಮನೆ ಮೈದಾನದ ಜಾಗವನ್ನು ಬಳಸಿಕೊಳ್ಳಲು ಮತ್ತು ನಿಯಂತ್ರಿಸಲು ಸುಗ್ರಿವಾಜ್ಞೆ ಹೊರಡಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. https://twitter.com/KarnatakaVarthe/status/1882800304246415471 https://kannadanewsnow.com/kannada/it-is-mandatory-for-government-employees-to-follow-these-rules-during-office-hours-state-government/ https://kannadanewsnow.com/kannada/cnn-to-lay-off-200-jobs-cnn-layoffs/

Read More

ಬೆಂಗಳೂರು: ರಾಜ್ಯದ ಸರ್ಕಾರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಂತ ಅಧಿಕಾರಿ, ನೌಕರರು ಕಚೇರಿಯ ವೇಳೆಯಲ್ಲಿ ಈ ಮುಖ್ಯ ಸೂಚನೆಗಳನ್ನು ಪಾಲನೆ ಮಾಡಬೇಕು ಎಂಬುದಾಗಿ ಸರ್ಕಾರ ಖಡಕ್ ಆದೇಶ ಮಾಡಿದೆ. ಈ ಸಂಬಂಧ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಆದೇಶ ಹೊರಡಿಸಿದ್ದು,  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಗಳು ಸಮಯ ಪಾಲನ ಮಾಡದಿರುವುದು, ಚಲನ-ವಲನ ವಹಿಯನ್ನು ನಿರ್ವಹಿಸದಿರುವುದು, ಕರ್ತವ್ಯದ ಅವಧಿಯಲ್ಲಿ ಗುರುತಿನ ಚೀಟಿಯನ್ನು ಧರಿಸದಿರುವುದು, ಅಧಿಕಾರಿ/ಸಿಬ್ಬಂದಿಗಳ ಹೆಸರು ಮತ್ತು ಹುದ್ದೆಯ ನಾಮ ಫಲಕಗಳನ್ನು ಅಳವಡಿಸದಿರುವ ಬಗ್ಗೆ ದೂರುಗಳು ಸ್ವೀಕೃತವಾಗಿರುವುದರಿಂದ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಈ ಕಳಕಂಡ ಸೂಚನಗಳನ್ನು ಪಾಲಿಸಲು ಸೂಚಿಸಿದ್ದಾರೆ. 1. ನಿಯಮಗಳ ಪುಕಾರ ಕಛೇರಿಗೆ ಬರುವ ವೇಳೆ ಹಾಗೂ ಕಛೇರಿಯಿಂದ ಹೊರಡುವ ವೇಳೆಯನ್ನು ಪಾಲನೆ ಮಾಡುವುದು. 2. ಕಛೇರಿ ಅವಧಿ ಪೂರ್ಣವಾಗುವವರೆಗೆ ತಮಗೆ ನಿಗದಿಪಡಿಸಿದ ಸ್ಥಾನದಲ್ಲಿ ಇದ್ದು ಕರ್ತವ್ಯ ನಿರ್ವಹಿಸತಕ್ಕದ್ದು. 3. ಕಛೇರಿ ಸಮಯದಲ್ಲಿ ನೌಕರರು/ಅಧಿಕಾರಿಗಳು ಕಛೇರಿ ಕೆಲಸದ ನಿಮಿತ್ತ…

Read More

ಬೆಂಗಳೂರು: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಎನ್ನುವಂತೆ 12 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ( IAS Officer Transfer ) ಮಾಡಿ ಆದೇಶಿಸಿದೆ. ಈ ಸಂಬಂಧ ಅಧಿಸೂಚನೆ ಹೊರಡಿಸಿರುವಂತ ರಾಜ್ಯ ಸರ್ಕಾವು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದಂತ ಡಾ.ಶಿವ ಶಂಕರ್.ಎನ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಅವರನ್ನು ಕೂಡಲೇ ಜಾರಿಗೆ ಬರುವಂತೆ ಬೆಂಗಳೂರು ಎಲೆಕ್ಟ್ರಿಸಿಟಿ ಸಪ್ಲೈ ಕಂಪನಿ ಲಿಮಿಟೆಡ್, ಬೆಂಗಳೂರು ಇದರ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ನೇಮಿಸಿದೆ. ಈ ಹುದ್ದೆಯಲ್ಲಿದ್ದಂತ ಮಹಾಂತೇಶ್ ಬಿಳಗಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಮಹಾಂತೇಶ್ ಬಿಳಗಿ ಅವರನ್ನು ಬಿಇಎಸ್ ಸಿ ಎಲ್ ನ ಎಂಡಿ ಹುದ್ದೆಯಿಂದ ವರ್ಗಾವಣೆ ಮಾಡಿ ಮ್ಯಾನೇಜಿಂಗ್ ಡೈರೆಕ್ಟರ್, ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಲಿಮಿಟೆಡ್, ಬೆಂಗಳೂರು ಇಲ್ಲಿಗೆ ನೇಮಿಸಲಾಗಿದೆ. ಇಲ್ಲಿದ್ದಂತ ಜಯವಿಭವಸ್ವಾಮಿ ಅವರನ್ನು ವರ್ಗಾವಣೆ ಮಾಡಿದೆ. ಧಾರವಾಡ ಜಿಲ್ಲೆಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ವರೂಪಾ ಟಿ.ಕೆ., ಐಎಎಸ್ (ಕೆಎನ್: 2012) ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ ಮತ್ತು ಮುಂದಿನ…

Read More

ಬೆಂಗಳೂರು: ಬಿಜೆಪಿ ಪಕ್ಷದ್ದು, ಮನೆಯೊಂದು ಮೂರು‌ ಬಾಗಿಲಲ್ಲ, ಬದಲಿಗೆ ಆರು ಬಾಗಿಲು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ‌ ಶಿವರಾಜ್ ಎಸ್.ತಂಗಡಗಿ ಅವರು ವ್ಯಂಗ್ಯವಾಡಿದ್ದಾರೆ. ಶುಕ್ರವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಮಾಜಿ ಸಚಿವ ಶ್ರೀರಾಮುಲು ಅವರು ನಮ್ಮ ಪಕ್ಷಕ್ಕೆ ಬಂದರೆ, ಅವರನ್ನು ಪಕ್ಷಕ್ಕೆ ಸ್ವಾಗತಿಸುವುದು ಪಕ್ಷದ ಅಧ್ಯಕ್ಷರು ಹಾಗೂ ಹೈಕಮಾಂಡ್ ಗೆ ಬಿಟ್ಟ ವಿಚಾರ, ವೈಯಕ್ತಿಕವಾಗಿ ರಾಮುಲು ಕಾಂಗ್ರೆಸ್ ಗೆ ಸೇರ್ಪಡೆಗೊಂಡರೆ ಸ್ವಾಗತ ಎಂದರು. ಜನಾರ್ದನ್ ರೆಡ್ಡಿ ಅವರು ಸುಳ್ಳಿನ‌ ಮನೆಯನ್ನು ಕಟ್ಟುತ್ತಿದ್ದಾರೆ ಎಂದು ಈ ಹಿಂದೆ ಹಲವು ಬಾರಿ ನಾನು ಹೇಳಿದ್ದೆ. ಇದೀಗ ಶ್ರೀರಾಮುಲು ಅವರು ಅವರ ಸುಳ್ಳಿತನ ಕಂತೆ ಬಗ್ಗೆ ಎಳೆ- ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಶ್ರೀರಾಮುಲು ಹಾಗೂ ಜನಾರ್ದನ್ ರೆಡ್ಡಿ ಅವರು ಹಲವು ವರ್ಷಗಳ ಸ್ನೇಹಿತರು. ಇದೀಗ ಅವರವರ ಬಗ್ಗೆ ಅವರು ಮಾತನಾಡುತ್ತಿದ್ದಾರೆ. ಬಿಜೆಪಿಯಲ್ಲಿನ ವಾಸ್ತವ ಸತ್ಯ ಎಲ್ಲರಿಗೂ ಇದೀಗ ತಿಳಿಯುತ್ತಿದೆ ಎಂದು ತೀಕ್ಷ್ಣ ವಾಗಿ ಹೇಳಿದರು. ಶೈಕ್ಷಣಿಕ, ಆರ್ಥಿಕ ಹಾಗೂ…

Read More