Author: kannadanewsnow09

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆಯಾಗುತ್ತಿದೆ. ಇದರಿಂದಾಗಿ ವಾಹನ ಸವಾರರು ಪರದಾಡುವಂತೆ ಆಗಿದೆ. ಬೆಂಗಳೂರಿನ ವಿಧಾನಸೌಧ, ದಾಸರಹಳ್ಳಿ ಶಿವಾಜಿನಗರ, ಮಲ್ಲೇಶ್ವರಂ, ಫ್ರೇಜರ್ ಟೌನ್, ಕಾರ್ಪೊರೋಷನ್ ಸೇರಿದಂತೆ ವಿವಿಧೆಡೆ ಬಿರುಗಾಳಿ, ಗುಡುಗು ಸಹಿತ ಮಳೆಯಾಗುತ್ತಿದೆ. ಭಾರೀ ಮಳೆಯಿಂದಾಗಿ ರಸ್ತೆಗಳೆಲ್ಲ ಜಲಾವೃತಗೊಂಡಿದ್ದು, ಅಲ್ಲಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಬೆಂಗಳೂರಿನ ಭಾರೀ ಮಳೆಯ ಅವಾಂತರದಿಂದಾಗಿ ಕತ್ರಿಗುಪ್ಪೆ ಸಮೀಪದಲ್ಲಿ ಮರವೊಂದು ಆಟೋ ಮೇಲೆ ಬಿದ್ದ ಪರಿಣಾಮ, ಅದರಲ್ಲಿದ್ದಂತ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇದರ ನಡುವೆ ಮುಂದಿನ 3 ಗಂಟೆಗಳಲ್ಲಿ ಬೆಂಗಳೂರಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಲಿದೆ. ಮುಂಜಾಗ್ರತಾ ಕ್ರಮ ವಹಿಸುವಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. https://kannadanewsnow.com/kannada/mike-waltz-resigns-as-us-president-donald-trumps-national-security-adviser-report/ https://kannadanewsnow.com/kannada/pahalgam-terror-attack-sc-refuses-to-entertain-plea-seeking-judicial-probe/

Read More

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕ್ ವಾಲ್ಟ್ಜ್ ಮತ್ತು ಅವರ ಉಪಾಧ್ಯಕ್ಷ ಅಲೆಕ್ಸ್ ವಾಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಶ್ವೇತಭವನದ ಕೆಲಸದಿಂದ ಕೆಳಗಿಳಿಯಲಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಮಾರ್ಚ್ನಲ್ಲಿ, ವಾಲ್ಟ್ಜ್ ಸಿಗ್ನಲ್ ಗ್ರೂಪ್ ಚಾಟ್ ಅನ್ನು ರಚಿಸಿದ ನಂತರ ಮತ್ತು ಆಕಸ್ಮಿಕವಾಗಿ ದಿ ಅಟ್ಲಾಂಟಿಕ್ ಪತ್ರಕರ್ತ ಜೆಫ್ರಿ ಗೋಲ್ಡ್ಬರ್ಗ್ ಅವರನ್ನು ಸೇರಿಸಿದ ನಂತರ ತೀವ್ರ ಟೀಕೆಗೆ ಗುರಿಯಾದರು. ಯೆಮೆನ್ನಲ್ಲಿ ಹೌತಿ ಗುರಿಗಳ ವಿರುದ್ಧ ಸಂಭಾವ್ಯ ಮಿಲಿಟರಿ ಕ್ರಮದ ಬಗ್ಗೆ ಹಿರಿಯ ರಾಷ್ಟ್ರೀಯ ಭದ್ರತಾ ಅಧಿಕಾರಿಗಳೊಂದಿಗಿನ ಸಂಭಾಷಣೆಗಳನ್ನು ಅಜಾಗರೂಕತೆಯಿಂದ ಬಹಿರಂಗಪಡಿಸಿದರು. ಫ್ಲೋರಿಡಾದ ಮಾಜಿ ಕಾಂಗ್ರೆಸ್ಸಿಗ ವಾಲ್ಟ್ಜ್, ಸಿಗ್ನಲ್ ಚಾಟ್ ಸೋರಿಕೆ ಪ್ರಕರಣ ಸ್ಫೋಟಗೊಂಡ ನಂತರ ಮಾರ್ಚ್ನಿಂದ ಡೆಮಾಕ್ರಟಿಕ್ ಮತ್ತು ಇತರರಿಂದ ಟೀಕೆಗಳನ್ನು ಎದುರಿಸುತ್ತಿದ್ದಾರೆ. ವಾಲ್ಟ್ಜ್, ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಮತ್ತು ಸಿಐಎ ನಿರ್ದೇಶಕ ಜಾನ್ ರಾಟ್ಕ್ಲಿಫ್ ಸೇರಿದಂತೆ ಉನ್ನತ ರಾಷ್ಟ್ರೀಯ ಭದ್ರತಾ ಅಧಿಕಾರಿಗಳೊಂದಿಗೆ ಸಿಗ್ನಲ್ ಗ್ರೂಪ್…

Read More

ಶಿವಮೊಗ್ಗ: ಜಿಲ್ಲೆಯ ಸಾಗರ ನಗರದ ಪ್ರತಿಮನೆಗೆ ದಿನದ 24 ಗಂಟೆ ನೀರು ಪೂರೈಕೆ ಮಾಡಲು ಯೋಜನೆ ರೂಪಿಸಿದ್ದು, ಇದಕ್ಕಾಗಿ 250 ಕೋಟಿ ರೂ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರ ಮಂಜೂರಾತಿಯಾಗುತ್ತದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು. ಇಲ್ಲಿನ ವಿಜಯನಗರ ಬಡಾವಣೆಯಲ್ಲಿ ಗುರುವಾರ ಯುವ ಸಬಲೀಕರಣ ಇಲಾಖೆಯಿಂದ ನವೀಕೃತಗೊಂಡ ಈಜುಕೊಳದ ಲೋಕಾರ್ಪಣೆ ಹಾಗೂ ಈಜು ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಾ, ಜನರಿಗೆ ಶುದ್ದ ಕುಡಿಯುವ ನೀರನ್ನು ಶರಾವತಿ ಹಿನ್ನೀರಿನಿಂದ ತರುವ ಯೋಜನೆ ಇನ್ನಷ್ಟು ಸಶಕ್ತಗೊಳಿಸಲಾಗುತ್ತಿದೆ ಎಂದು ಹೇಳಿದರು. ವಿಜಯನಗರ ಬಡಾವಣೆ ಈಜುಕೊಳ 2008ರಲ್ಲಿ ನನ್ನ ಅವಧಿಯಲ್ಲಿ 2 ಕೋಟಿ ರೂ. ಅನುದಾನ ಮಂಜೂರು ಮಾಡಿಸಿತ್ತು. ನಂತರ ಕಾಗೋಡು ತಿಮ್ಮಪ್ಪ ಅವರು 50 ಲಕ್ಷ ರೂ. ಅನುದಾನ ಮಂಜೂರು ಮಾಡಿಸಿದ್ದರು. ನಂತರ ಬಂದವರು ತರಾತುರಿಯಲ್ಲಿ ಈಜುಕೋಳ ಉದ್ಘಾಟಿಸಿದ್ದರು. ಆದರೆ ಇಲ್ಲಿನ ವ್ಯವಸ್ಥೆ ಪರಿಶೀಲನೆ ನಡೆಸಿರಲಿಲ್ಲ. ಈಜುಕೊಳ ಸಂಪೂರ್ಣ ಹಾಳಾಗಿದ್ದರಿಂದ ಮೂರು ವರ್ಷಗಳ ಕಾಲ…

Read More

ಬೆಂಗಳೂರು: ನಗರದಲ್ಲಿ ಈಗಾಗಲೇ ಮಳೆ ಆರಂಭಗೊಂಡಿದೆ. ಇದಲ್ಲದೇ ಮುಂದಿನ ಮೂರು ಗಂಟೆಗಳ ಕಾಲ ಗುಡುಗು ಸಹಿತ ಭಾರೀ ಮಳೆಯಾಗುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ನಗರದಲ್ಲಿ ಮುಂದಿನ 3 ಗಂಟೆಗಳ ಕಾಲ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಈಗಾಗಲೇ ಬೆಂಗಳೂರಿನ ವಿವಿಧೆಡೆ ಮಳೆಯಾಗುತ್ತಿದೆ. ಕತ್ರಿಗುಪ್ಪೆಯಲ್ಲಿ ಬಿರುಗಾಳಿ ಸಹಿತ ಮಳೆಗೆ ಮರವೊಂದು ಆಟೋದ ಮೇಲೆ ಉರುಳಿ ಬಿದ್ದಿದೆ. ಈ ಪರಿಣಾಮ ಆಟೋ ಚಾಲಕನೊಬ್ಬ ದುರ್ಮರಣ ಹೊಂದಿರುವುದಾಗಿ ತಿಳಿದು ಬಂದಿದೆ. https://kannadanewsnow.com/kannada/auto-driver-killed-in-heavy-rain-in-bengaluru/ https://kannadanewsnow.com/kannada/pahalgam-terror-attack-sc-refuses-to-entertain-plea-seeking-judicial-probe/

Read More

ಶಿವಮೊಗ್ಗ: ಜಿಲ್ಲೆಯ ಸಾಗರ ಸಮೀಪದ ಕುಗ್ವೆ ಗ್ರಾಮದ ಇತಿಹಾಸ ಪ್ರಸಿದ್ದ ಈಶ್ವರ, ನಂದೀಶ್ವರ ಹಾಗೂ ಸಪರಿವಾರ ದೇವರ ಪ್ರಾಣ ಪ್ರತಿಷ್ಟಾಪನೆ, ಪುರಾತನ ಧಾರ್ಮಿಕ ಶ್ರದ್ಧಾಕೇಂದ್ರದ ನೂತನ ಶಿಲಾಮಯ ದೇವಾಲಯದ ಪ್ರತಿಷ್ಟಾಪನೆ ಮೇ 3, 4 ಮತ್ತು 5ರಂದು ನಡೆಯಲಿದೆ ಎಂದು ಶ್ರೀ ಈಶ್ವರ ಸೇವಾ ಪ್ರತಿಷ್ಟಾನ ಮತ್ತು ಗ್ರಾಮ ಸುಧಾರಣಾ ಸಮಿತಿ ಮುಖಂಡರು ತಿಳಿಸಿದ್ದಾರೆ. ಇಂದು ಸಾಗರದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪ್ರಮುಖರು, ಈಶ್ವರ ಸೇವಾ ಪ್ರತಿಷ್ಟಾನ ಮತ್ತು ಗ್ರಾಮ ಅಭಿವೃದ್ದಿ ಸಮಿತಿ ಜಂಟೀಯಾಗಿ ಈ ಧಾರ್ಮಿಕ ಕಾರ್ಯಕ್ರಮದ ಮುಂದಾಳತ್ವ ವಹಿಸಿದೆ. ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ, ಸುಂದರವಾದ ಶಿಲಾಮಯ ದೇವಸ್ಥಾನ ನಿರ್ಮಿಸಿದೆ ಎಂದರು. ಮೇ 3ರಂದು ಬೆಳಿಗ್ಗೆ 8ರಿಂದ ಧಾರ್ಮಿಕ ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ. ಸಂಜೆ ಗೋಧೂಳಿ ಮುಹೂರ್ತದಲ್ಲಿ ನೂತನ ದೇವಾಲಯ ಪ್ರವೇಶ ಇನ್ನಿತರೆ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ ಸೇಡಿನ ಜ್ವಾಲೆ ಸಾಮಾಜಿಕ ನಾಟಕ ಇರುತ್ತದೆ. ಮೇ 4ರಂದು ಬೆಳಿಗ್ಗೆ…

Read More

ಬೆಂಗಳೂರು: ನಗರದಲ್ಲಿ ದಿಢೀರ್ ಸುರಿಯುತ್ತಿರುವಂತ ಗಾಳಿ ಮಳೆಯಿಂದಾಗಿ ಆಟೋ ಮೇಲೆ ಮರಬಿದ್ದ ಪರಿಣಾಮ ಚಾಲಕ ಸ್ಥಳದಲ್ಲೇ ದುರ್ಮರಣ ಹೊಂದಿರುವಂತ ಘಟನೆ ನಡೆದಿದೆ. ನಗರದಲ್ಲಿ ಭಾರೀ ಮಳೆಯಾಗುತ್ತಿದೆ. ಮಳೆಯ ಜೊತೆಗೆ ಬಿರುಗಾಳಿ ಕೂಡ ಬೀಸುತ್ತಿದೆ. ಬೆಂಗಳೂರಿನ ಕತ್ರಿಗುಪ್ಪೆಯ ಎಂ.ಎಂ ಬಾರ್ ಬಳಿಯಲ್ಲಿ ಭಾರೀ ಮಳೆಯೊಂದಿಗೆ ಮರವೊಂದು ಆಟೋ ಮೇಲೆ ಉರುಳಿ ಬಿದ್ದಿದೆ. ಈ ಪರಿಣಾಮ ಚಾಲಕನೊಬ್ಬ ಸಾವನ್ನಪ್ಪಿದ್ದಾನೆ. ಬೆಂಗಳೂರಿನ ಮೆಜೆಸ್ಟಿಕ್, ಶಾಂತಿನಗರ, ಕೆ ಆರ್ ಮಾರ್ಕೆಟ್, ಕತ್ರಿಗುಪ್ಪೆ, ಜಯನಗರ ಸೇರಿದಂತೆ ವಿವಿಧೆಡೆ ಭಾರೀ ಮಳೆಯಾಗುತ್ತಿದೆ. ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡ ಪರಿಣಾಮ ಅಲ್ಲಲ್ಲಿ ಟ್ರಾಫಿಕ್ ಜಾಮ್ ಕೂಡ ಉಂಟಾಗಿದೆ. ಇದರಿಂದಾಗಿ ವಾಹನ ಸವಾರರು ಪರದಾಡುವಂತಾಗಿದೆ. https://kannadanewsnow.com/kannada/pahalgam-terror-attack-sc-refuses-to-entertain-plea-seeking-judicial-probe/ https://kannadanewsnow.com/kannada/pakistan-orders-suspension-of-indian-song-broadcast-on-pakistani-fm-radio-stations/

Read More

ಹುಬ್ಬಳ್ಳಿ: “ಐದು ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಡವರಿಗೆ ನೆರವು ನೀಡುತ್ತಿದೆ. ಆದರೆ ಕೇಂದ್ರ ಬಿಜೆಪಿ ಸರ್ಕಾರವು ಉದ್ಯಮಿಗಳ ಸಾಲ ಮನ್ನಾ ಮಾಡಿ ಅವರಿಗೆ ಶ್ರೀಮಂತರಿಗೆ ನೆರವು ನೀಡುತ್ತಿದೆ. ಬಿಜೆಪಿಯು ಅಗತ್ಯ ವಸ್ತುಗಳ ಬೆಲೆ ಏರಿಕೆ, ಜಿಎಸ್ಟಿ ಮೂಲಕ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಬೆಲೆ ಏರಿಕೆ ವಿರುದ್ಧ ಹಾಗೂ ಸಂವಿಧಾನ ರಕ್ಷಣೆಗೆ ಹುಬ್ಬಳ್ಳಿಯ ಗಿರಿನಿಚಾಳ ಮೈದಾನದಲ್ಲಿ ಗುರುವಾರ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು. “ಕಾರ್ಮಿಕರ ದಿನದಂದು ಕಾರ್ಮಿಕ ಸಚಿವರ ಜಿಲ್ಲೆಯಲ್ಲಿ ಈ ಪ್ರತಿಭಟನೆ ನಡೆಯುತ್ತಿದ್ದು, ದೇಶಕ್ಕೆ ದೊಡ್ಡ ಸಂದೇಶ ರವಾನೆಯಾಗುತ್ತಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದು, ಜನರ ಆದಾಯ ಪಾತಾಳಕ್ಕೆ ಕುಸಿಯುತ್ತಿದೆ. ಇದಕ್ಕೆ ಕೊನೆಯಾಡಲು ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರ ಆದೇಶದಂತೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ದಿನವೇ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಲು ಅನುಮೋದನೆ ನೀಡಲಾಯಿತು. ಆದರೆ…

Read More

ಇಸ್ಲಮಾಬಾದ್: ಪಾಕಿಸ್ತಾನಿ ಎಫ್ಎಂ ರೇಡಿಯೋ ಕೇಂದ್ರಗಳಲ್ಲಿ ಪ್ರಸಾರವಾಗುವಂತ ಭಾರತೀಯ ಹಾಡುಗಳನ್ನು ಪ್ರಸಾರ ಮಾಡದಂತೆ ಪಾಕ್ ಸರ್ಕಾರ ಆದೇಶಿಸಿದೆ. ಈ ಮೂಲಕ ಭಾರತದ ಹಾಡುಗಳನ್ನು ಎಫ್ಎಂನಲ್ಲಿ ಪ್ರಸಾರ ಮಾಡದಂತೆ ನಿರ್ಬಂಧ ಹೇರಿದೆ. ಇಂದು ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ಆದೇಶ ಹೊರಡಿಸಿದ್ದು, ವೇಗವಾಗಿ ಬೆಳೆಯುತ್ತಿರುವ ಪ್ರಸ್ತುತ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪಾಕಿಸ್ತಾನಿ FM ರೇಡಿಯೋ ಕೇಂದ್ರಗಳಲ್ಲಿ ಭಾರತೀಯ ಹಾಡುಗಳನ್ನು ಪ್ರಸಾರ ಮಾಡುವುದನ್ನು ನಿಲ್ಲಿಸಲು ಪಾಕಿಸ್ತಾನ ಪ್ರಸಾರಕರ ಸಂಘ (PBA) ತೆಗೆದುಕೊಂಡ ತಾತ್ವಿಕ ನಿರ್ಧಾರವನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಶ್ಲಾಘಿಸುತ್ತದೆ ಎಂದಿದೆ. ಈ ದೇಶಭಕ್ತಿಯ ನಡೆ ಹೆಚ್ಚು ಮೆಚ್ಚುಗೆ ಪಡೆದಿದೆ ಮತ್ತು ಇಡೀ ರಾಷ್ಟ್ರದ ಸಾಮೂಹಿಕ ಭಾವನೆಯನ್ನು ಪ್ರತಿಬಿಂಬಿಸುತ್ತದೆ. ಇದು PBA ಪರವಾಗಿ ರಾಷ್ಟ್ರೀಯ ಒಗ್ಗಟ್ಟಿನ ಬಲವಾದ ಅರ್ಥವನ್ನು ಪ್ರದರ್ಶಿಸುತ್ತದೆ ಎಂದು ತಿಳಿಸಿದೆ. ರಾಷ್ಟ್ರದ ಘನತೆ ಮತ್ತು ಸಾರ್ವಭೌಮತ್ವವನ್ನು ಎತ್ತಿಹಿಡಿಯುವ PBA ಯ ಮೇಲಿನ ಉಪಕ್ರಮವನ್ನು ನಾನು ಆಳವಾಗಿ ಪ್ರಶಂಸಿಸುತ್ತೇನೆ. ಇಂತಹ ಸಂದಿಗ್ಧ ಸಮಯದಲ್ಲಿ ರಾಷ್ಟ್ರೀಯ ಏಕತೆಯನ್ನು ಉತ್ತೇಜಿಸುವಲ್ಲಿ ಮತ್ತು ಮೂಲ ಮೌಲ್ಯಗಳನ್ನು…

Read More

ಬೆಂಗಳೂರು: ರೈಲ್ವೆ ಪ್ರಯಾಣಿಕರಿಗೆ ಮಹತ್ವದ ಮಾಹಿತಿ ಎನ್ನುವಂತೆ ಈ ರೈಲುಗಳ ಸಂಚಾರ ರದ್ದು, ನಿಯಂತ್ರಣ ಮತ್ತು ಮಾರ್ಗ ಬದಲಾವಣೆ ಮಾಡಿರುವುದಾಗಿ ನೈರುತ್ಯ ರೈಲ್ವೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಗುಂತಕಲ್ ವಿಭಾಗದ ಪ್ರಮುಖ ರೈಲು ನಿಲ್ದಾಣವಾದ ಧರ್ಮಾವರಂ ಜಂಕ್ಷನ್‌ನಲ್ಲಿ ಎರಡನೇ ಹಂತದ ಯಾರ್ಡ್ ಮಾರ್ಪಾಡು ಮತ್ತು ಆಧುನೀಕರಣ ಕಾಮಗಾರಿಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಮೇ ತಿಂಗಳಿನಲ್ಲಿ ಹಲವು ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಕೆಲವು ರೈಲುಗಳನ್ನು ರದ್ದುಗೊಳಿಸಲಾಗಿದೆ, ಇನ್ನು ಕೆಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ ಹಾಗೂ ಕೆಲವು ರೈಲುಗಳನ್ನು ಮಾರ್ಗ ಮಧ್ಯದಲ್ಲಿ ನಿಯಂತ್ರಿಸಲಾಗುವುದು ಎಂದು ದಕ್ಷಿಣ ಮಧ್ಯ ರೈಲ್ವೆ ತಿಳಿಸಿದೆ. ರದ್ದು: ಕೆಎಸ್ಆರ್ ಬೆಂಗಳೂರು-ಧರ್ಮಾವರಂ ನಡುವಿನ ಮೆಮು ವಿಶೇಷ ರೈಲುಗಳು (ಸಂಖ್ಯೆ 06595/06596) ಮೇ 5 ರಿಂದ 17 ರವರೆಗೆ, ಗುಂತಕಲ್-ಹಿಂದೂಪುರ (77213) ಮೇ 4 ರಿಂದ 17 ರವರೆಗೆ ಹಾಗೂ ಹಿಂದೂಪುರ-ಗುಂತಕಲ್ (77214) ನಡುವಿನ ಡೆಮು ರೈಲುಗಳು ಮೇ 5 ರಿಂದ 18 ರವರೆಗೆ ರದ್ದಾಗಿರಲಿವೆ. ಇದರೊಂದಿಗೆ ಯಶವಂತಪುರ-ಬೀದರ್ (16571)…

Read More

ಹುಬ್ಬಳ್ಳಿ : ನಿರಂತರ ಬೆಲೆ ಏರಿಕೆ ಮೂಲಕ ಬಡವರ, ಮಧ್ಯಮ ವರ್ಗದ ದ್ವೇಷಿ ಆಗಿರುವ ಮೋದಿ ಸರ್ಕಾರ, ಜಾತಿಗಳ ನಡುವೆ-ಧರ್ಮಗಳ ನಡುವೆ ದ್ವೇಷದ ಬೆಂಕಿ ಹಚ್ಚಿ ತನ್ನ ವೈಫಲ್ಯ ಮುಚ್ಚಿಕೊಳ್ಳುತ್ತಿದೆ ಎಂದು ಸಿ.ಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರದ ದೇಶ ವಿರೋಧಿ ವರ್ತನೆ, ಜನ ವಿರೋಧಿ ಆಡಳಿತ ಮತ್ತು ಬೆಲೆ ಏರಿಕೆಯ ಜನದ್ರೋಹವನ್ನು ಖಂಡಿಸಿ ನಡೆದ ಜನತಾ ಸಮಾವೇಶದಲ್ಲಿ ಮಾತನಾಡಿದರು. ನರೇಂದ್ರ ಮೋದಿ ಪ್ರಧಾನಿ ಆದ ಬಳಿಕ ಅಕ್ಕಿಯಿಂದ ಚಿನ್ನದವರೆಗೂ ಎಲ್ಲದರ ಬೆಲೆ ಆಕಾಶಕ್ಕೆ ಏರಿದೆ. ದೇಶದ, ರಾಜ್ಯದ ಜನರಿಗೆ ಬಿಜೆಪಿ ಪರಿವಾರದ ಈ ಜನದ್ರೋಹ ಅರ್ಥವಾಗಿದೆ. ಇದನ್ನು ಮರೆ ಮಾಚಲು ತಮ್ಮ ಜನದ್ರೋಹವನ್ನು ಮುಚ್ಚಿಕೊಳ್ಳಲು ದೇಶದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದರು. ಉಪ್ಪು, ಸಕ್ಕರೆ, ಟೀ, ಕಾಫಿ, ಅಕ್ಕಿ, ಬೇಳೆ, ಎಣ್ಣೆ, ಕಾಳು, ಚಿನ್ನ, ಬೆಳ್ಳಿ, ರಸಗೊಬ್ಬರ, ಔಷಧ, ಡೀಸೆಲ್, ಪೆಟ್ರೋಲ್, ಅಡುಗೆ ಅನಿಲ ಸೇರಿ ಎಲ್ಲದರ ಬೆಲೆ ಆಕಾಶಕ್ಕೆ ಏರಿಸಿರುವ ಮೋದಿಯವರೇ ನೀವು…

Read More