Author: kannadanewsnow09

ಬೆಂಗಳೂರು: ವಿದೇಶಿ ಪ್ರಜೆಗಳಿಗೆ ಸಂಬಂಧಿಸಿದ ಲೆಕ್ಕಪರಿಶೋಧನೆ ಮತ್ತು ಪರಿಶೀಲನೆ ಕುರಿತು ಶೈಕ್ಷಣಿಕ ಮತ್ತು ವೈದ್ಯಕೀಯ ಸೇರಿದಂತೆ ಸಂಬಂಧಿಸಿದ ಎಲ್ಲಾ ಸಂಸ್ಥೆಗಳಿಗೆ ಸುತ್ತೋಲೆ ಅಥವಾ ಅಧಿಸೂಚನೆಯನ್ನು ಹೊರಡಿಸುವಂತೆ ಕರ್ನಾಟಕ ಹೈಕೋರ್ಟ್ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ACS) ಅವರನ್ನು ಕೇಳಿದೆ. ಭಾರತದಲ್ಲಿ ವಾಸಿಸುವ ವಿದೇಶಿ ಪ್ರಜೆಗಳ ಅನುಸರಣೆಯನ್ನು ಮೇಲ್ವಿಚಾರಣೆ ಮಾಡಲು, ನಿಯಂತ್ರಿಸಲು ಮತ್ತು ಜಾರಿಗೊಳಿಸಲು ಬಹು ಅಧಿಕಾರಿಗಳನ್ನು ಒಳಗೊಂಡ ಸಮಗ್ರ, ಸಂಘಟಿತ ಮತ್ತು ಪಾರದರ್ಶಕ ಕಾರ್ಯವಿಧಾನದ ತುರ್ತು ಅವಶ್ಯಕತೆಯಿದೆ ಎಂದು ಗಮನಿಸಿ, ಜೂನ್ 18 ರೊಳಗೆ ACS ಗೆ ಅಂತಹ ಸುತ್ತೋಲೆ/ಅಧಿಸೂಚನೆಯನ್ನು ಹೊರಡಿಸುವಂತೆ ನ್ಯಾಯಾಲಯವು ಈ ಮಧ್ಯಂತರ ಆದೇಶವನ್ನು ನೀಡಿದೆ. “ವಿದೇಶಿ ಪ್ರಜೆಗಳು ತಮ್ಮ ವೀಸಾದಿಂದ ಅನುಮತಿಸಲಾದ ಅವಧಿಯನ್ನು ಮೀರಿ ಭಾರತದಲ್ಲಿ ಉಳಿಯುವ ವಿದ್ಯಮಾನವು ಗಮನಾರ್ಹ ಕಳವಳವಾಗಿ ಹೊರಹೊಮ್ಮಿದೆ. ಅಂತಹ ಮಿತಿಮೀರಿದ ವಾಸ್ತವ್ಯಗಳು ರಾಷ್ಟ್ರೀಯ ಭದ್ರತೆಗೆ ಬೆದರಿಕೆಗಳು, ಸ್ಥಳೀಯ ಆಡಳಿತ ಮತ್ತು ಕಾನೂನು ಜಾರಿಯ ಮೇಲಿನ ಒತ್ತಡ, ಸಾರ್ವಜನಿಕ ಆರೋಗ್ಯ ಟ್ರ್ಯಾಕಿಂಗ್‌ನಲ್ಲಿನ ಸವಾಲುಗಳು ಮತ್ತು ಅನೌಪಚಾರಿಕ ಉದ್ಯೋಗ ವಲಯಗಳಲ್ಲಿನ ಶೋಷಣೆ ಸೇರಿದಂತೆ…

Read More

ಬೆಂಗಳೂರು: ನಗರದಲ್ಲಿ ಬಿರುಗಾಲಿ ಸಹಿತ ಮಳೆಯಾಗುತ್ತಿದೆ. ಈ ಕಾರಣದಿಂದ ಮರದ ಕೊಂಬೆಯೊಂದು ಮುರಿದು ಬೈಕ್ ಸವಾರನ ಮೇಲೆ ಬಿದ್ದ ಪರಿಣಾಮ, ಗಂಭೀರವಾಗಿ ಗಾಯಗೊಂಡಿದ್ದಾನೆ. ಬೆಂಗಳೂರಿನ ಬನಶಂಕರಿ 2ನೇ ಹಂತದ ಶ್ರೀನಿವಾಸನಗರದಲ್ಲಿ ಮರದ ಕೊಂಬೆಯೊಂದು ಮುರಿದು ಬಿದ್ದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ಮರದ ಕೊಂಬೆ ಮುರಿದು ಬಿದ್ದು ಗಾಯಗೊಂಡಿರುವಂತ ಸವಾರ ಅಕ್ಷಯ್ (29) ಸ್ಥಿತಿ ಗಂಭೀರವಾಗಿರುವುದಾಗಿ ತಿಳಿದು ಬಂದಿದೆ. ಗಾಯಾಳು ಅಕ್ಷಯನ್ ಗೆ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. https://kannadanewsnow.com/kannada/breaking-mobile-attendance-is-mandatory-for-doctors-and-staff-at-all-health-centers-in-the-state-dinesh-gundu-rao/ https://kannadanewsnow.com/kannada/6-houses-collapsed-simultaneously-while-digging-soil-many-feared-trapped-under-rubble/

Read More

ಉತ್ತರ ಪ್ರದೇಶ: ರಾಜ್ಯದಲ್ಲಿ ಮಣ್ಣು ಅಗೆಯುತ್ತಿದ್ದಂತ ಸಂದರ್ಭದಲ್ಲಿ ಏಕಕಾಲಕ್ಕೆ 6 ಮನೆಗಳು ಕುಸಿದು ಬಿದ್ದಿದ್ದಾವೆ. ಈ ದುರಂತದಲ್ಲಿ ಮನೆಗಳ ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಉತ್ತರ ಪ್ರದೇಶದ ಮಥುರಾ ನಗರದಲ್ಲಿ ಮಣ್ಣು ಅಗೆಯುವಾಗ ಏಕಕಾಲಕ್ಕೆ ಆರು ಮನೆಗಳು ಕುಸಿದು ಬಿದ್ದಿದ್ದಾವೆ. ಈ ದುರಂತದಲ್ಲಿ ಮನೆಯ ಅವಶೇಷಗಳಡಿ ಅನೇಕ ಜನರು ಸಿಲುಕಿರುವಂತ ಶಂಕೆ ವ್ಯಕ್ತವಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ರಕ್ಷಣಾ ತಂಡಗಳು ಆಗಮಿಸಿದ್ದು, ಮನೆಗಳ ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಣೆ ಮಾಡುವಂತ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. https://kannadanewsnow.com/kannada/good-news-for-the-maratha-community-of-the-state-invitation-to-apply-for-loan-facilities-under-various-schemes/

Read More

ಬೆಂಗಳೂರು: ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ದಿ ನಿಗಮದಿಂದ ಪ್ರಸಕ್ತ ಸಾಲಿಗೆ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು ವೆಬ್‍ಸೈಟ್ www.kaushalkar.com ಮೂಲಕ ಜುಲೈ 4 ರೊಳಗಾಗಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ http://kmcdc.karnataka.gov.in 8867537799, 080-29903994, ದೂ.ಸಂ: 08192-230934 ನ್ನು ಸಂಪರ್ಕಿಸಬಹುದೆಂದು ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ. ವೀರಶೈವ ಲಿಂಗಾಯ ಅಭಿವೃದ್ದಿ ನಿಗಮದ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮದಿಂದ ಪ್ರಸಕ್ತ ಸಾಲಿಗೆ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು ವೆಬ್‍ಸೈಟ್ www.kaushalkar.com ಮೂಲಕ ಜೂನ್ 30 ರೊಳಗಾಗಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ http://kvldcl.karnataka.gov.in 080-22865522, 9900012351, 9900012352 ದೂ.ಸಂ: 08192-230934 ನ್ನು ಸಂಪರ್ಕಿಸಬಹುದೆಂದು ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.

Read More

ಬೆಂಗಳೂರು: ಪ್ರಸಕ್ತ ಸಾಲಿನ ಶೇ.24.10%, 7.25% ಮತ್ತು 5% ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಅಲ್ಪಸಂಖ್ಯಾತ ಮತ್ತು ದೈಹಿಕ ವಿಕಲಚೇತನರ ಫಲಾನುಭವಿಗಳಿಂದ ವೈಯಕ್ತಿಕ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ನಿಗದಿತ ಅರ್ಜಿ ನಮೂನೆಯನ್ನು ಜಗಳೂರು ಪಟ್ಟಣ ಪಂಚಾಯಿತಿಯ ಕಚೇರಿಯಲ್ಲಿ ಪಡೆದು ಜೂನ್ 30 ರೊಳಗಾಗಿ ಕಚೇರಿಗೆ ಸಲ್ಲಿಸಬೇಕೆಂದು ಮುಖ್ಯಾಧಿಕಾರಿ ಲೋಕ್ಯಾನಾಯ್ಕ.ಸಿ ತಿಳಿಸಿದ್ದಾರೆ. ಅರ್ಚಕರಿಗೆ ಮಾಸಿಕ ಗೌರವಧನಕ್ಕೆ ಅರ್ಜಿ ಆಹ್ವಾನ ಜೈನ್ ಸಮುದಾಯ ಬಸದಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಧಾನ ಮತ್ತು ಸಹಾಯಕ ಅರ್ಚಕರುಗಳಿಗೆ ಹಾಗೂ ಸಿಖ್ ಗುರುದ್ವಾರಗಳಲ್ಲಿರುವ ಮುಖ್ಯ ಮತ್ತು ಸಹಾಯಕ ಗ್ರಂಥಿಗಳಿಗೆ ಮಾಸಿಕ ಗೌರವಧನ ಪಡೆಯಲಿಚ್ಚಿಸುವ ಅರ್ಹ ಫಲಾನುಭವಿಗಳಿಂದ ನಿಗಧಿತ ನಮೂನೆಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಜೂನ್ 26 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಫಲಾನುಭವಿಗಳು ಜಿಲ್ಲೆಯ ಜೈನ್ ಬಸದಿಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಸಂಘಗಳ ನೊಂದಣಿ ಕಾಯ್ದೆ ಅಥವಾ ಇತರೆ ಸಂಬಂಧಪಟ್ಟ ಕಾಯ್ದೆ ಅನ್ವಯ ನೊಂದಣಿಯಾದ ಪ್ರಧಾನ ಅರ್ಚಕ, ಗ್ರಂಥಿಗೆ ಮಾಸಿಕ ರೂ.6000/, ಸಹಾಯಕ ಗ್ರಂಥಿ, ಅರ್ಚಕರಿಗೆ ಮಾಸಿಕ ರೂ.5000/ ಗೌರವಧನ…

Read More

ಗುಜರಾತ್: ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ಅಪಘಾತದ ನಂತರ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರ ಡಿಎನ್‌ಎ ಹೋಲಿಕೆಯಾಗಿದೆ ಎಂದು ರಾಜ್ಯದ ಗೃಹ ಸಚಿವ ಹರ್ಷ ಸಾಂಘವಿ ಭಾನುವಾರ ದೃಢಪಡಿಸಿದರು. https://twitter.com/ANI/status/1934152108317585661 ಜೂನ್ 12 ರಂದು ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ಅಪಘಾತದಲ್ಲಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಪ್ರಾಣ ಕಳೆದುಕೊಂಡರು. ಇಂದು, ಬೆಳಿಗ್ಗೆ 11:10 ರ ಸುಮಾರಿಗೆ, ಅವರ ಡಿಎನ್‌ಎ ಹೊಂದಾಣಿಕೆಯಾಗಿದೆ. ಅವರು ಹಲವಾರು ವರ್ಷಗಳ ಕಾಲ ರಾಜ್ಯದ ಜನರಿಗಾಗಿ ಕೆಲಸ ಮಾಡಿದರು…” ಎಂದು ಗುಜರಾತ್ ಗೃಹ ಸಚಿವ ಹರ್ಷ್ ಸಾಂಘ್ವಿ ಹೇಳಿದ್ದಾರೆ. ಅವರ ಪಾರ್ಥಿವ ಶರೀರದ ಸಾಗಣೆ ಮಾಡಲು ಮಾಜಿ ಸಿಎಂ ವಿಜಯ್ ರೂಪಾನಿ ಕುಟುಂಬಸ್ಥರು ಆಸ್ಪತ್ರೆಯ ಬಳಿ ನೆರೆದಿದ್ದಾರೆ. ಇಂದೇ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ನೆರವೇರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಒಟ್ಟಾರೆಯಾಗಿ ಅಹಮದಾಬಾದ್ ಏರ್ ಇಂಡಿಯಾ ಅಪಘಾತದಲ್ಲಿ ಸಾವನ್ನಪ್ಪಿದ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರ ಮೃತದೇಹವನ್ನು ಕೆಲವು ದಿನಗಳ ನಂತರ ಗುರುತಿಸಲಾಗಿದೆ

Read More

ಬೆಂಗಳೂರು: ನಗರದಲ್ಲಿ BMTC ಸಿಬ್ಬಂದಿ ಮೇಲೆ ಪದೇಪದೆ ನಡೆಯುತ್ತಿರುವ ಹಲ್ಲೆ ಮತ್ತು ಅವಮಾನದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಗೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಪತ್ರ ಬರೆದು ಆಗ್ರಹಿಸಿದ್ದಾರೆ. ಈ ಕುರಿತಂತೆ ಪತ್ರ ಬರೆದಿರುವಂತ ಅವರು, ಈ‌ ಹಿಂದೆಯೂ ಹಲವಾರು ಈ ರೀತಿಯ ಪ್ರಕರಣಗಳು ನಡೆದಿದ್ದು, ನಾನು ಪೊಲೀಸ್ ಆಯುಕ್ತರು ಬೆಂಗಳೂರುರವರಿಗೆ ಪತ್ರ ಬರೆದು ಸೂಕ್ತ ಕ್ರಮ ತೆಗೆದುಕೊಳ್ಳಲು ಹಾಗೂ ಈ ಸಂಬಂಧ ಖುದ್ದು ವ್ಯವಸ್ಥಾಪಕ ನಿರ್ದೇಶಕರು ಬಿಎಂಟಿಸಿ ರವರಿಗೆ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ವಿವರಿಸಲು ಕೂಡ ಸೂಚಿಸಿರುತ್ತೇನೆ. ಈ ಎಲ್ಲಾ ಕ್ರಮಗಳ ಹೊರತಾಗಿಯೂ ಮತ್ತೊಂದು ಪ್ರಕರಣವು ಎರಡು ದಿನಗಳಿಂದಷ್ಟೇ ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವುದು ಆಘಾತಕಾರಿಯಾಗಿದೆ ಎಂದಿದ್ದಾರೆ. ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಮಹಿಳಾ ಟೆಕ್ಕಿಯೊಬ್ಬರು ತಾವು ಕೋರಿದ ಕಡೆ ಬಸ್ ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಚಾಲಕ ಹುಸೇನ್ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಈ…

Read More

ಮೈಸೂರು: ರೈಲ್ ಮದದ್ ದೂರಿನ ಮೂಲಕ ರೈಲಿನಲ್ಲಿ ಕಳೆದುಹೋದ ಚಿನ್ನದ ಸರ ಮಾಲೀಕರಿಗೆ ಮೈಸೂರಿನ ರೈಲ್ವೆ ರಕ್ಷಣಾ ಪಡೆ ಮರಳಿಸಿದೆ. 08 ಜೂನ್ 2025 ರಂದು ರೈಲು ಸಂಖ್ಯೆ 16231 (ತಿರುಚಿರಾಪಳ್ಳಿ – ಕೆಎಸ್‌ಆರ್ ಬೆಂಗಳೂರು) ನಲ್ಲಿ ಪ್ರಯಾಣಿಸಿದ ಸಾಂಗವಿ ಎಂಬ ಪ್ರಯಾಣಿಕರು 09.06.2025 ರಂದು ರೈಲ್ ಮದದ್ ಮೂಲಕ ಚಿನ್ನದ ಸರ ಕಳೆದುಹೋದ ಬಗ್ಗೆ ದೂರು ನೀಡಿದ್ದಾರೆ. ಬೋಗಿ ಸಂಖ್ಯೆ B1, ಸೀಟು ಸಂಖ್ಯೆ 71 ನಲ್ಲಿ ಪ್ರಯಾಣಿಸುತ್ತಿದ್ದು, ತಾನು ಶೌಚಾಲಯಕ್ಕೆ ಹೋಗಿದ್ದಾಗ ಚಿನ್ನದ ಸರ ಶೌಚಾಲಯದಲ್ಲಿ ಬಿದ್ದಿರಬಹುದೆಂಬ ಅನುಮಾನ ವ್ಯಕ್ತಪಡಿಸಿದ್ದರು. ಈ ದೂರನ್ನು ದಾಖಲಿಸಿ ಸಂಬಂಧಿತ ಬೋಗಿಯನ್ನು ಮೈಸೂರಿನಲ್ಲಿ ಪ್ರಾಥಮಿಕ ನಿರ್ವಹಣೆ ಮಾಡಲಾಯಿತು. ದೂರನ್ನು ಪೂರಕವಾಗಿ ಗಮನಿಸಿ, ನಿರ್ವಹಣಾ ತಂಡವು ಬಯೋ-ಟಾಯ್ಲೆಟ್ ಟ್ಯಾಂಕ್‌ ಅನ್ನು ತೆರೆದು ಶುದ್ಧಪಡಿಸುವ ಕಾರ್ಯಾಚರಣೆ ವೇಳೆ, ಕಳೆದುಹೋದ ಚಿನ್ನದ ಸರವನ್ನು ಪತ್ತೆ ಹಚ್ಚಿತು. ಆ ಚಿನ್ನದ ಸರವನ್ನು ತಕ್ಷಣವೇ ರೈಲ್ವೆ ರಕ್ಷಣಾ ಪಡೆಯ (ಆರ್‌ಪಿಎಫ್) ಅಧಿಕಾರಿಗಳಿಗೆ ಹಸ್ತಾಂತರಿಸಿ, ಅಗತ್ಯ ಕಾನೂನು ಕ್ರಮಗಳು ಕೈಗೊಳ್ಳಲಾಯಿತು ಮತ್ತು…

Read More

ತಮಿಳುನಾಡು: ಇಂಧನ ಕೊರತೆಯಿಂದಾಗಿ ಬ್ರಿಟಿಷ್ ಎಫ್ -35 ಫೈಟರ್ ಜೆಟ್ ತಿರುವನಂತಪುರದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ. ಇಂಧನ ಕೊರತೆಯಿಂದಾಗಿ ಶನಿವಾರ ರಾತ್ರಿ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಬ್ರಿಟಿಷ್ ಎಫ್ -35 ಯುದ್ಧ ವಿಮಾನ ತುರ್ತು ಭೂಸ್ಪರ್ಶ ಮಾಡಿತು. ಇಂಧನ ತುಂಬಿಸಲು ಕೇಂದ್ರ ಅನುಮತಿಗಾಗಿ ಕಾಯುತ್ತಿರುವುದಾಗಿ ತಿಳಿದು ಬಂದಿದೆ. ಚಾರ್ ಧಾಮ್ ಮಾರ್ಗದಲ್ಲಿ 6 ವಾರಗಳಲ್ಲಿ 5 ಅಪಘಾತಗಳು ಉತ್ತರಾಖಂಡವು ಸುಮಾರು 40 ದಿನಗಳ ಅವಧಿಯಲ್ಲಿ ಚಾರ್ ಧಾಮ್ ಮಾರ್ಗದಲ್ಲಿ ಕನಿಷ್ಠ ಆರು ಹೆಲಿಕಾಪ್ಟರ್ ಅಪಘಾತಗಳಿಗೆ ಸಾಕ್ಷಿಯಾಗಿದೆ. ಭಾನುವಾರದ ಹೆಲಿಕಾಪ್ಟರ್ ಅಪಘಾತದಲ್ಲಿ ಏಳು ಜನರು ಸಾವನ್ನಪ್ಪಿದ್ದಾರೆ. ಆರು ಯಾತ್ರಿಕರು (ಐದು ವಯಸ್ಕರು ಮತ್ತು ಒಂದು ಮಗು) ಮತ್ತು ಒಬ್ಬ ಪೈಲಟ್ ಇದ್ದ ಹೆಲಿಕಾಪ್ಟರ್, ಕೇದಾರನಾಥ ದೇವಸ್ಥಾನದಿಂದ ಉತ್ತರಾಖಂಡದ ಗುಪ್ತಕಾಶಿಗೆ ಹಾರುತ್ತಿದ್ದಾಗ ಗೌರಿಕುಂಡ್ ಮತ್ತು ಸೋನ್‌ಪ್ರಯಾಗ್ ನಡುವಿನ ಕಾಡಿನಲ್ಲಿ ಪತನಗೊಂಡಿತು. 10 ನಿಮಿಷಗಳ ಪ್ರಯಾಣದ ಸಮಯದಲ್ಲಿ ಸಾವನ್ನಪ್ಪಿದ ಯಾತ್ರಿಕರು ಉತ್ತರಾಖಂಡ, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್‌ನವರು. ಮೇ ಮತ್ತು ಜೂನ್ ನಡುವಿನ ಚಾರ್…

Read More

ಮೈಸೂರು: ಆಪರೇಷನ್ ನಾರ್ಕೋಸ್‌ ಆಧೀನದಲ್ಲಿ ಮೈಸೂರು ವಿಭಾಗದ ರೈಲ್ವೆ ರಕ್ಷಣಾ ಪಡೆ 2025ರ ಜೂನ್ 14ರಂದು ಮಾದಕ ವಸ್ತುವನ್ನು ಜಪ್ತಿ ಮಾಡಿದ್ದಾರೆ. ಸ್ಯಾಮ್ ಪ್ರಕಾಶ್ ಜೆ.ಆರ್, ಹಿರಿಯ ವಿಭಾಗೀಯ ಭದ್ರತಾ ಆಯುಕ್ತರು/ಆರ್‌ಪಿಎಫ್/ಮೈಸೂರು ಅವರ ನಿರ್ದೇಶನದಂತೆ, ವಿಶೇಷ ತಂಡವು ರೈಲು ಸಂಖ್ಯೆ 18111 ಟಾಟಾನಗರ – ಯಶವಂತಪುರ ಎಕ್ಸ್‌ಪ್ರೆಸ್‌ನ ಬಿರೂರು – ಕಡೂರು ಮಾರ್ಗದಲ್ಲಿ ಬೋಗಿ ಸಂಖ್ಯೆ. S5 ರಲ್ಲಿ ತಪಾಸಣೆ ನಡೆಸಿದರು. ಈ ತಂಡದಲ್ಲಿ ಅನಂದ ಬಿ, ಸಹಾಯಕ ಉಪನಿರೀಕ್ಷಕ/ಸಿಬಿಐ/ಮೈಸೂರು, ಶಿವನಂದ ಟಿ, ಮುಖ್ಯ ಕಾನ್ಸ್ಟೇಬಲ್/ದಾವಣಗೆರೆ, ಮುಜಮ್ಮಿಲ್ ಖಾನ್, ಕಾನ್ಸ್ಟೇಬಲ್/ಮೈಸೂರು, ಮತ್ತು ಜಿ. ಶಿವಮೂರ್ತಿ, ಸಹಾಯಕ ಉಪನಿರೀಕ್ಷಕ/ಆರ್‌ಪಿಎಫ್/ಅರಸೀಕೆರೆಯವರು ಸೇರಿದ್ದರು. ಈ ಸಂಯುಕ್ತ ಕಾರ್ಯಾಚರಣೆಯ ಫಲವಾಗಿ ಗಾಂಜಾ ವಶಪಡಿಸುವಲ್ಲಿ ಯಶಸ್ವಿಯಾದರು. ಪರಿಶೀಲನೆ ವೇಳೆ ಮಹೇಂದ್ರ ದಾಸ್ (ವಯಸ್ಸು 57), ಧನು ರವಿ ದಾಸ್ ಅವರ ಪುತ್ರ, ಬಿಹಾರದ ಜಮುಯ್ ಜಿಲ್ಲೆಯ ಸೋನಾ ಗ್ರಾಮದ ನಿವಾಸಿಯಾಗಿರುವ ಹಾಗೂ ಈ ರೈಲಿನಲ್ಲಿ ನಲ್ಲಿ ಬೆಡ್‌ರೋಲ್ ಸಿಬ್ಬಂದಿಯಾಗಿ ಕೆಲಸಮಾಡುತ್ತಿದ್ದ ವ್ಯಕ್ತಿಯು 5.050 ಕೆಜಿ ಗಾಂಜಾ ಹೊಂದಿರುವ ಚೀಲವನ್ನು…

Read More