Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರವು ಕಾನೂನು- ಸುವ್ಯವಸ್ಥೆಯನ್ನು ಸಂಪೂರ್ಣವಾಗಿ ಹದಗೆಡಿಸಿದೆ ಎಂದು ರಾಜ್ಯ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದ್ದಾರೆ. ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರವು ಇಡೀ ರಾಜ್ಯದಲ್ಲಿ ಕೆಟ್ಟ ವಾತಾವರಣ ಸೃಷ್ಟಿಸುತ್ತಿದೆ. ರಾಜ್ಯದ ಕಾನೂನು- ಸುವ್ಯವಸ್ಥೆಯನ್ನು ಸಂಪೂರ್ಣವಾಗಿ ಹದಗೆಡಿಸಿದ್ದಾರೆ. ಅತ್ಯಾಚಾರಗಳು, ಕೊಲೆಗಳು ಇವತ್ತು ಬಹಳಷ್ಟು ಆಗುತ್ತಿದೆ. ಜೊತೆಗೇ ಬಿಜೆಪಿ ನಾಯಕರು, ಹಿಂದೂಪರ ನಾಯಕರನ್ನು ಟಾರ್ಗೆಟ್ ಮಾಡಿ ತೊಂದರೆ ಕೊಡುವ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ಆಕ್ಷೇಪಿಸಿದರು. ಮಂಗಳೂರಿನಲ್ಲಿ ಕೆಲವು ಮುಸ್ಲಿಂ ಸಂಘಟನೆಗಳು, ಕಾಂಗ್ರೆಸ್ ಪಕ್ಷದಲ್ಲಿರುವ ಕೆಲವು ಮುಸಲ್ಮಾನ ನಾಯಕರು ರಾಜೀನಾಮೆಯ ಬ್ಲ್ಯಾಕ್ಮೇಲ್ ಪ್ರಾರಂಭಿಸಿದ್ದಾರೆ. ಬ್ಲ್ಯಾಕ್ಮೇಲ್ಗೆ ಹೆದರಿ ಹಿಂದುತ್ವ ಕಾರ್ಯಕರ್ತರು, ಬಿಜೆಪಿ ನಾಯಕರನ್ನು ಗಡೀಪಾರು ಮಾಡಲು ಆರಂಭಿಸಿದ್ದಾರೆ. ಮಂಗಳೂರು, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು ಭಾಗಗಳಲ್ಲಿ ಇದು ನಡೆದಿದೆ. ಸುಹಾಸ್ ಅವರು ಮೃತಪಟ್ಟಾಗ ಮೆರವಣಿಗೆಯಲ್ಲಿ ಹೋದವರನ್ನು ಗುರುತಿಸಿ ಕರೆದು ತನಿಖೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಸರಕಾರ…
ಬೆಂಗಳೂರು: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಕೋಲಾರದ ಬೃಹತ್ ಕೆರೆ ಸೋಮಸಂದ್ರ ಅಗ್ರಹಾರದಲ್ಲಿ ತೇಲುವ ಸೌರಶಕ್ತಿ ಘಟಕ ನಿರ್ಮಾಣಕ್ಕೆ ಸರ್ಕಾರ ಸಿದ್ಧತೆ ನಡೆಸಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಕೋಲಾರದ ಬೃಹತ್ ಕೆರೆ ಸೋಮಸುಂದ್ರ ಅಗ್ರಹಾರದಲ್ಲಿ ತೇಲುವ ಸೌರಶಕ್ತಿ ಘಟಕ ನಿರ್ಮಾಣಕ್ಕೆ ಸಿದ್ಧತೆ ನಡೆಸಲಾಗಿದೆ. ಈ ಮೂಲಕ ಸೌರ ಶಕ್ತಿಯಿಂದ ವಿದ್ಯುತ್ ಉತ್ಪಾದನೆಗೆ ಸರ್ಕಾರ ಮುಂದಾಗಿದೆ. ಬಳಿಕ ಇದರ ಯಶಸ್ಸಿನ ಆಧಾರದ ಮೇಲೆ ರಾಜ್ಯದ ವಿವಿಧೆಡೆಗಳಲ್ಲಿ ಇಂತಹ 40ಕ್ಕೂ ಹೆಚ್ಚು ಕೆರೆಗಳಲ್ಲಿ ತೇಲುವ ಸೌರಶಕ್ತಿ ಘಟಕಗಳನ್ನು ನಿರ್ಮಿಸಿ, 2,500 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿಯನ್ನು ಹೊಂದಲಾಗಿದೆ. https://twitter.com/KarnatakaVarthe/status/1929524569737703890 https://kannadanewsnow.com/kannada/ujjivan-small-finance-bank-has-launched-a-tobacco-free-campaign/ https://kannadanewsnow.com/kannada/87-people-confirmed-with-corona-in-the-state-the-number-of-infected-has-increased-to-529/
ನಾವು ಸಂತೋಷದಿಂದ ಬದುಕಬೇಕಾದರೆ, ಅದಕ್ಕಾಗಿ ಶ್ರಮಿಸಬೇಕು. ಮತ್ತು ನೀವು ರಾಜಿ ಮಾಡಿಕೊಂಡು ನಿಮ್ಮ ಕುಟುಂಬದೊಂದಿಗೆ ಬದುಕಬೇಕು. ಆಗ ಮಾತ್ರ ನಾವು ಸಂತೋಷದಿಂದ ಬದುಕಲು ಸಾಧ್ಯ. ಅದೇ ಸಮಯದಲ್ಲಿ, ನಾವು ವಾಸಿಸುವ ಮನೆ ಯಾವುದೇ ರೀತಿಯ ದುಷ್ಟತನದಿಂದ ಮುಕ್ತವಾಗಿದ್ದರೆ ಮಾತ್ರ ನಾವು ಗಳಿಸುವ ಹಣವು ನಮ್ಮೊಂದಿಗೆ ಉಳಿಯುತ್ತದೆ ಮತ್ತು ಕುಟುಂಬದಲ್ಲಿ ಯಾವುದೇ ಜಗಳಗಳು ಇರುವುದಿಲ್ಲ. ಎಲ್ಲಾ ರೀತಿಯ ಶುಭ ಕಾರ್ಯಕ್ರಮಗಳು ನಡೆಯಬೇಕಾದರೂ, ಮನೆಯಲ್ಲಿ ಯಾವುದೇ ದುಷ್ಟತನ ಇರಬಾರದು. ಈ ಆಧ್ಯಾತ್ಮಿಕ ಪೋಸ್ಟ್ನಲ್ಲಿ, ಅಂತಹ ದೋಷವನ್ನು ತೆಗೆದುಹಾಕಲು ಬಳಸಬಹುದಾದ ತಾಂತ್ರಿಕ ಪರಿಹಾರವನ್ನು ನಾವು ನೋಡಲಿದ್ದೇವೆ , ಅದು ಯಾವುದಾದರೂ ಇದ್ದರೆ. ವಾಸ್ತು ದೋಷಗಳನ್ನು ನಿವಾರಿಸಲು ಪರಿಹಾರ ನಾವು ವಾಸಿಸುವ ಮನೆಯನ್ನು ದೇವಾಲಯಕ್ಕೆ ಸಮಾನವೆಂದು ಪರಿಗಣಿಸಲಾಗುತ್ತದೆ. ಆಗಮಗಳ ನಿಯಮಗಳನ್ನು ಅನುಸರಿಸಿ ಅವರು ದೇವಾಲಯಗಳನ್ನು ಹೇಗೆ ನಿರ್ಮಿಸುತ್ತಾರೆ? ಅದೇ ರೀತಿ, ನಾವು ನಮ್ಮ ವಾಸಯೋಗ್ಯ ಮನೆಯನ್ನು ವಾಸ್ತು ಶಾಸ್ತ್ರದ ಆಧಾರದ ಮೇಲೆ ನಿರ್ಮಿಸಬೇಕು. ಯಾವ ಕೋಣೆ ಯಾವ ದಿಕ್ಕಿನಲ್ಲಿರಬೇಕು ಎಂಬುದನ್ನು ಸಂಶೋಧಿಸಿ ನಿರ್ಮಿಸುವುದರಿಂದ ಮಾತ್ರ ಮನೆ ಉತ್ತಮ…
ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೋನಾ ಆರ್ಭಟಿಸಿದೆ. ಇಂದು ಹೊಸದಾಗಿ 87 ಜನರಿಗೆ ಕೋವಿಡ್ ಪಾಸಿಟಿವ್ ಅಂತ ದೃಢಪಟ್ಟಿದೆ. ಹೀಗಾಗಿ ಸೋಂಕಿತರ ಸಂಖ್ಯೆ 529ಕ್ಕೆ ಏರಿಕೆಯಾಗಿದೆ. ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ ನೀಡಲಾಗಿದ್ದು, ಕಳೆದ 24 ಗಂಟೆಯಲ್ಲಿ ಆರ್ ಟಿ ಪಿಸಿಆರ್ ಮೂಲಕ 464, ರಾಟ್ ಮೂಲಕ 40 ಸೇರಿದಂತೆ 504 ಮಂದಿಯನ್ನು ಕೊರೋನಾ ಸೋಂಕು ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲಿ 87 ಜನರಿಗೆ ಪಾಸಿಟಿವ್ ಅಂತ ದೃಢಪಟ್ಟಿದೆ ಎಂದು ತಿಳಿಸಿದೆ. ಕಳೆದ 24 ಗಂಟೆಯಲ್ಲಿ ಸೋಂಕಿತರಾದಂತ 29 ಮಂದಿ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಸದ್ಯ 311 ಸಕ್ರೀಯ ಸೋಂಕಿತರಿದ್ದಾರೆ. ಇವರಲ್ಲಿ 297 ಮಂದಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೇ, ಐವರು ಸರ್ಕಾರಿ, ನಾಲ್ವರು ಖಾಸಗಿ ಜನರಲ್ ಬೆಡ್ ನಲ್ಲಿ, ಇಬ್ಬರು ಐಸೋಲೋಷನ್ ಬೆಡ್ ನಲ್ಲಿ, ಐಸಿಯುನಲ್ಲಿ ಮೂವರು ಸೇರಿದಂತೆ 14 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದಿದೆ. https://kannadanewsnow.com/kannada/shivamogga-arrest-of-house-and-cattle-thieves-by-the-police-of-sagar-police-station/ https://kannadanewsnow.com/kannada/breaking-bjp-leader-arun-kumar-puthil-receives-a-big-shock-border-crossing-notice-issued/
ಶಿವಮೊಗ್ಗ: ಜಿಲ್ಲೆಯ ಸಾಗರ ಪೇಟೆ ಠಾಣೆಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಮನೆಗಳ್ಳತನ, ದನಗಳ್ಳತನ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಾಲ್ವರು ಆರೋಪಿಗಳನ್ನು ಬಂಧಿಸಿರುವಂತ ಸಾಗರ ಪೇಟೆ ಠಾಣೆಯ ಪೊಲೀಸರು, 2 ಲಕ್ಷ ಮೌಲ್ಯದ ಚಿನ್ನಾಭರಣ, 20 ಲಕ್ಷ ಮೌಲ್ಯದ ವಾಹನ ಜಪ್ತಿ ಮಾಡಿದ್ದಾರೆ. ಇಂದು ಪತ್ರಿಕಾ ಗೋಷ್ಠಿಯಲ್ಲಿ ಸಾಗರ ಡಿವೈಎಸ್ಪಿ ಗೋಪಾಲಕೃಷ್ಣ ಟಿ ನಾಯ್ಕ್ ಅವರು ಮಾಹಿತಿ ನೀಡಿದ್ದು, ದಿನಾಂಕ 07-09-2024ರಂದು ನಿಸಾರ್ ಅಹಮದ್ ಎಂಬುವರು ಮನೆಯಲ್ಲಿ ಇಲ್ಲದೇ ಇರುವಾಗ ಮನೆಗೆ ನುಗ್ಗಿ ಕಳ್ಳತನ ನಡೆದಿರುವ ಬಗ್ಗೆ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳಿಂದ 2 ಲಕ್ಷ ಮೌಲ್ಯದ 23 ಗ್ರಾಂ ತೂಕದ ಬಂಗಾರದ ಒಡವೆಗಳು, ಕೃತ್ಯಕ್ಕೆ ಬಳಸಿದಂತ 5 ಲಕ್ಷ ಮೌಲ್ಯದ ಇಕೋ ಕಾರು ಜಪ್ತಿ ಮಾಡಿರುವುದಾಗಿ ತಿಳಿಸಿದರು. ದಿನಾಂಕ 28-05-2025ರಂದು ಉಮಾದೇವಿ ಎಂಬುವರು ಎರಡು ದನಗಳವು ಆಗಿರುವ ಬಗ್ಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.…
ಬೆಂಗಳೂರು: ಪೌರ ಕಾರ್ಮಿಕನಿಗೆ ಕೊಲೆ ಬೆದರಿಕೆ, ನಿಂದನೆ ಆರೋಪದಡಿ ಬಿಜೆಪಿ ಮುಖಂಡ ಎನ್ ಆರ್ ರಮೇಶ್ ವಿರುದ್ಧ ದೂರು ದಾಖಲಾಗಿದೆ. ಈ ಸಂಬಂಧ ಮುನಿಸ್ವಾಮಿ ಎಂಬುವರು ದೂರು ನೀಡಿದ್ದರು. ಈ ದೂರು ಆಧರಿಸಿ ಬೆಂಗಳೂರಿನ ಸಿಕೆ ಅಚ್ಚುಕಟ್ಟು ಠಾಣೆಯಲ್ಲಿ ಎನ್ ಸಿ ಆರ್ ದಾಖಲಾಗಿದೆ. ಬಿಜೆಪಿ ಮುಖಂಡ ಎನ್ ಆರ್ ರಮೇಶ್ ಕಡೆ ಹುಡುಗರ ಜೊತೆ ಜಗಳವಾಡಿದ್ದಕ್ಕೆ ಪೌರ ಕಾರ್ಮಿಕ ಮುನಿಸ್ವಾಮಿ ಎಂಬುವರಿಗೆ ಎನ್ ಆರ್ ರಮೇಶ್ ದೂರವಾಣಿ ಕರೆ ಮಾಡಿ ಬೆದರಿಕೆ ಹಾಕಿದ್ದಂತ ಆರೋಪ ಮಾಡಲಾಗಿದೆ. https://kannadanewsnow.com/kannada/grand-response-for-the-vidhana-soudha-tour-on-the-very-first-day-102-tourists-visited-on-foot/ https://kannadanewsnow.com/kannada/breaking-bjp-leader-arun-kumar-puthil-receives-a-big-shock-border-crossing-notice-issued/
ಬೆಂಗಳೂರು: ನಿನ್ನೆಯಿಂದ ವಿಧಾನಸೌಧಕ್ಕೆ ಸಾರ್ವಜನಿಕರ ಭೇಟಿಗೆ ಅವಕಾಶ ನೀಡಲಾಗಿತ್ತು. ಮೊದಲ ದಿನವೇ ವಿಧಾನಸೌಧ ಪ್ರವಾಸಕ್ಕೆ ಭರ್ಜರಿ ರೆಸ್ಪಾನ್ಸ್ ದೊರೆತಿದೆ. ಬರೋಬ್ಬರಿ 102 ಮಂದಿ ಪ್ರಾಸಿಗರು ಕಾಲ್ನಡಿಗೆಯ ಮೂಲಕ ಭೇಟಿ ನೀಡಿದ್ದಾರೆ. ಜನಸಾಮಾನ್ಯರಿಗೂ ನಾಡಿನ ಶಕ್ತಿಸೌಧ ವೀಕ್ಷಣೆ ಅವಕಾಶ ಸಿಗಲೆಂದು ರಾಜ್ಯ ಸರ್ಕಾರ ಜಾರಿಗೊಳಿಸಿರುವ ವಿಧಾನಸೌಧ ಮಾರ್ಗದರ್ಶಿ ಪ್ರವಾಸಕ್ಕೆ ಭಾನುವಾರ ಅಧಿಕೃತವಾಗಿ ಚಾಲನೆ ಸಿಕ್ಕಿದ್ದು, ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜೂ.1ರಿಂದ ವಿಧಾನಸೌಧ ಗೈಡೆಡ್ ಟೂರ್ ಆರಂಭವಾಗಿದ್ದು, ಮೊದಲ ದಿನ 67 ಮಂದಿ ಪುರುಷರು ಮತ್ತು 53 ಮಂದಿ ಮಹಿಳೆಯರು ಸೇರಿ ಒಟ್ಟು 120 ಮಂದಿ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವೆಬ್ಸೈಟ್ ಮೂಲಕ ನೋಂದಣಿ ಮಾಡಿಸಿದ್ದು ಅದರಲ್ಲಿ 102 ಮಂದಿ ಹಾಜರಾಗಿ ವಿಧಾನಸೌಧ ವೀಕ್ಷಿಸಿದ್ದಾರೆ ಎಂದು ಕೆಎಸ್ಟಿಡಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. https://twitter.com/KarnatakaVarthe/status/1929508078296408286 https://kannadanewsnow.com/kannada/i-personally-apologize-by-writing-a-letter-to-gulbarga-district-mlc-n-ravikumar/ https://kannadanewsnow.com/kannada/breaking-bjp-leader-arun-kumar-puthil-receives-a-big-shock-border-crossing-notice-issued/
ಕಲಬುರ್ಗಿ: ನನ್ನ ಹೇಳಿಕೆಯಿಂದ ನೋವು, ವಿವಾದದ ಬಳಿಕ ನಾನು ಅಂದೇ ಕ್ಷಮೆ ಕೇಳಿದ್ದೇನೆ. ಈಗ ವೈಯಕ್ತಿಕವಾಗಿಯೂ ಕಲಬುರ್ಗಿ ಡಿಸಿಗೆ ಪತ್ರ ಬರೆದು ಕ್ಷಮೆ ಕೇಳುತ್ತೇನೆ ಎಂಬುದಾಗಿ ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ತಿಳಿಸಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಇಂದು ಹೈಕೋರ್ಟ್ ಸೂಚನೆಯ ಮೇರೆಗೆ ವಿಚಾರಣೆಗೆ ಹಾಜರಾಗಿದ್ದೆ. ನನ್ನನ್ನು ಅರೆಸ್ಟ್ ಮಾಡಬಾರದು ಎಂಬುದಾಗಿ ಕೋರ್ಟ್ ಹೇಳಿದೆ ಎಂದರು. ನಾನು ದಲಿತರ ಅವಹೇಳನ ಮಾಡಿಲ್ಲ. ಆ ಬಗ್ಗೆ ವೀಡಿಯೋ ಇದೆ. ಕಲಬುರ್ಗಿ ಡಿಸಿಗೂ ನಾನು ಬೈದಿಲ್ಲ ಎಂದು ಹೇಳಿದ್ದೇನೆ. ಧರ್ಮದ ವಿಚಾರವಾಗಿ ನಾನು ಹೇಳಿಕೆಯನ್ನೂ ನೀಡಿಲ್ಲ. ನಾನು ಹೇಳಿಕೆ ನೀಡಿದ ಮರು ದಿನವೇ ಕ್ಷಮೆ ಕೇಳಿದ್ದೇನೆ ಎಂದರು. ಕಲಬುರ್ಗಿ ಡಿಸಿಗೆ ಬೈದಿದ್ದೇನೆ ಎನ್ನುವ ವಿಚಾರವಾಗಿ ಪ್ರತಿಕ್ರಿಯಿಸಿದಂತ ಅವರು, ನಾನು ಅವರಿಗೆ ವೈಯಕ್ತಿಕವಾಗಿಯೂ ಡಿಸಿಗೆ ಪತ್ರ ಬರೆದು ಕ್ಷಮೆ ಕೇಳುತ್ತೇನೆ. ಕಲಬುರ್ಗಿ ಜಿಲ್ಲಾಧಿಕಾರಿಗೆ ಪತ್ರ ಬರೆದು ಕ್ಷಮೆ ಕೇಳುತ್ತೇನೆ ಎಂದು ಹೇಳಿದರು.
ಬೆಂಗಳೂರು: ರಾಜ್ಯದ ಜನತೆಗೆ ಗುಡ್ ನ್ಯೂಸ್ ಎನ್ನುವಂತೆ ಅಂಗಾಂಗ ಮರುಪಡೆಯುವಿಕೆಯ ಕೇಂದ್ರವನ್ನು ಜಿಲ್ಲಾಸ್ಪತ್ರೆಗಳಲ್ಲೂ ಪ್ರಾರಂಭ ಮಾಡಲಾಗಿದೆ. ಮಿದುಳು ನಿಷ್ಕ್ರಿಯಗೊಂಡು ಮೃತಪಟ್ಟವರಿಂದ ಅಂಗಾಂಗಗಳನ್ನು ಪಡೆಯುವ ಪ್ರಯತ್ನಗಳು ಸರ್ಕಾರಿ ಜಿಲ್ಲಾ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಹೆಚ್ಚಾಗಬೇಕು. ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಅಂಗಾಂಗ ಮರುಪಡೆಯುವಿಕೆ ಕೇಂದ್ರ ಪ್ರಾರಂಭಿಸಲು ಕ್ರಮವಹಿಸಲಾಗಿದೆ. ಕಳೆದ ವಾರ ಜೀವಸಾರ್ಥಕತೆ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಅಂಗಾಂಗ ದಾನ ಹೆಚ್ಚಿಸುವ ಬಗ್ಗೆ ಚರ್ಚಿಸಲಾಗಿದೆ ಎಂದು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ತಿಳಿಸಿದ್ದಾರೆ. https://twitter.com/KarnatakaVarthe/status/1929514320679027079
ಬೆಂಗಳೂರು: ಕನ್ನಡ ಭಾಷೆಯ ಬಗ್ಗೆ ತಮ್ಮ ಹೇಳಿಕೆಗಳ ವಿರುದ್ಧ ಹೆಚ್ಚುತ್ತಿರುವ ಪ್ರತಿಭಟನೆಗಳ ನಡುವೆ, ನಟ-ರಾಜಕಾರಣಿ ಕಮಲ್ ಹಾಸನ್ ತಮ್ಮ ಇತ್ತೀಚಿನ ಚಿತ್ರ ‘ಥಗ್ ಲೈಫ್’ ಕರ್ನಾಟಕದಲ್ಲಿ ಸುಗಮ ಬಿಡುಗಡೆಗೆ ರಕ್ಷಣೆ ಕೋರಿ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದಾರೆ. ‘ಕನ್ನಡ ತಮಿಳಿನಿಂದ ಹುಟ್ಟಿತು’ ಎಂಬ ಹಾಸನ್ ಹೇಳಿಕೆಗೆ ಔಪಚಾರಿಕ ಕ್ಷಮೆಯಾಚಿಸದಿದ್ದರೆ ಚಿತ್ರ ಬಿಡುಗಡೆಯನ್ನು ನಿಷೇಧಿಸಲಾಗುವುದು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್ಸಿಸಿ) ಎಚ್ಚರಿಕೆ ನೀಡಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಜೂನ್ 5 ರಂದು ತೆರೆಗೆ ಬರಲಿರುವ ‘ಥಗ್ ಲೈಫ್’, ಮೇ 24 ರಂದು ಚೆನ್ನೈನಲ್ಲಿ ನಡೆದ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಹಾಸನ್ ಅವರ ಹೇಳಿಕೆಗಳ ನಂತರ ವಿವಾದಕ್ಕೆ ಸಿಲುಕಿದೆ. ಈ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಹಾಸನ್, ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದು ಹೇಳಿದ್ದು, ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಕ್ಷಮೆಯಾಚಿಸುವಂತೆ ಒತ್ತಾಯಿಸಿ ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ ಮತ್ತು ಮೈಸೂರು ಸೇರಿದಂತೆ ನಗರಗಳಲ್ಲಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. 70 ವರ್ಷದ…














