Subscribe to Updates
Get the latest creative news from FooBar about art, design and business.
Author: kannadanewsnow09
ಹುಬ್ಬಳ್ಳಿ: ಧಾರವಾಡದಲ್ಲಿ ಮೊದಲ ಕೋವಿಡ್ -19 ಪ್ರಕರಣ ವರದಿಯಾದ ನಂತರ, ಹುಬ್ಬಳ್ಳಿಯಲ್ಲಿ ಎರಡನೇ ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲಿ 11 ತಿಂಗಳ ಮಗುವಿಗೆ ವೈರಸ್ ಪಾಸಿಟಿವ್ ಬಂದಿದೆ. ಬೈರಿದೇವರಕೊಪ್ಪ ನಿವಾಸಿಯಾಗಿರುವ ಮಗು ಪ್ರಸ್ತುತ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 11 ತಿಂಗಳ ಮಗುವಿಗೆ ಯಾವುದೇ ಪ್ರಯಾಣದ ಇತಿಹಾಸವಿಲ್ಲ. ಆದರೆ ಮಗುವಿಗೆ ಕೋವಿಡ್ ಸೋಂಕಿನ ಲಕ್ಷಣಗಳಿದ್ದಂತ ಕಾರಣ ಕೊರೋನಾ ಪರೀಕ್ಷೆ ಮಾಡಲಾಯಿತು. ಆ ಸಂದರ್ಭದಲ್ಲಿ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ದಿವ್ಯಾ ಪ್ರಭು ಹೇಳಿದರು. ಇದಲ್ಲದೆ, ಭಯಪಡುವ ಅಗತ್ಯವಿಲ್ಲ ಎಂದು ಅವರು ಹೇಳಿದರು. ಹೆಚ್ಚಿನ ಸಂಖ್ಯೆಯ ಜನರಿಗೆ ಲಸಿಕೆ ನೀಡಲಾಗುತ್ತಿದೆ. ಇಲ್ಲಿಯವರೆಗೆ ಹೊಸ ತಳಿಯು ತೀವ್ರ ಹಾನಿಯನ್ನುಂಟುಮಾಡುವ ಯಾವುದೇ ಮಾರ್ಗವನ್ನು ಹೊಂದಿಲ್ಲ. ಆದರೆ ಅದೇ ಸಮಯದಲ್ಲಿ, ಹರಡುವಿಕೆಯ ಬಗ್ಗೆ ಜಾಗರೂಕರಾಗಿರಬೇಕು. ಪ್ರಸ್ತುತ ಆರೋಗ್ಯ ಇಲಾಖೆಯ ಮಾರ್ಗದರ್ಶನದ ಆಧಾರದ ಮೇಲೆ ವಿಷಯಗಳನ್ನು ನೋಡಿಕೊಳ್ಳಲಾಗುತ್ತಿದೆ. ಸಾರ್ವಜನಿಕರು ಮತ್ತು ವಿಶೇಷವಾಗಿ ಮಕ್ಕಳು ಮಾಸ್ಕ್ ಧರಿಸುವಂತೆ ಅವರು ವಿನಂತಿಸಿದರು. ಶೀತ ಮತ್ತು ಇತರ ಅಲರ್ಜಿಗಳಿಂದ ಬಳಲುತ್ತಿರುವ ಜನರು…
ಬೆಂಗಳೂರು: ಶಿವರಾಜ್ ಕುಮಾರ್ ರೀತಿಯಲ್ಲಿ ಇನ್ಯಾರು ನಟ ಕಮಲ್ ಹಾಸನ್ ಪರವಾಗಿದ್ದಾರೋ ಅವರೆಲ್ಲ ನಾಡದ್ರೋಹಿಗಳು ಎಂಬುದಾಗಿ ಮುಖ್ಯಮಂತ್ರಿ ಚಂದ್ರು ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ತಮಿಳು ನಟನನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಅಲ್ಲದೇ ನಟ ಶಿವರಾಜ್ ಕುಮಾರ್ ವಿರುದ್ಧವೂ ಗರಂ ಆದಂತ ಅವರು, ಶಿವಣ್ಣ ರೀತಿಯಲ್ಲಿ ಇನ್ಯಾರು ಕಮಲ್ ಹಾಸನ್ ಪರವಾಗಿದ್ದರೂ ಅವರೆಲ್ಲ ನಾಡದ್ರೋಹಿಗಳು ಅಂತ ಕೆಂಡಕಾರಿದ್ದಾರೆ. ನಟ ಕಮಲ್ ಹಾಸನ್ ಹೇಳಿಕೆ ನಮ್ಮ ನಾಡಿಗೆ ಅವಮಾನ. ಈ ಘಟನೆಗೆ ಸಾಕ್ಷಿಯಾದಂತ ಶಿವರಾಜ್ ಕುಮಾರ್ ಪಲಾಯನವಾದ ಮಾಡಿ ಬಿಟ್ಟಿದ್ದಾರೆ. ಅವರು ಕಮಲ್ ಹಾಸನ್ ಹೇಳಿಕೆಯನ್ನು ಖಂಡಿಸಬೇಕಿತ್ತು ಎಂದರು. ನಾಡು ನುಡಿಗೆ ಧಕ್ಕೆ ಬಂದಾಗ ರಾಜ್ ಕುಟುಂಬ ಒಂದೇ ಕನ್ನಡ ನಾಡಲ್ಲ, ಶಿವಣ್ಣ ಒಬ್ಬರೇ ಕನ್ನಡ ನಾಡಲ್ಲ. ಕನ್ನಡ ನಾಡಿನಿಂದ ಅವರೆಲ್ಲ ಬಂದಿದ್ದಾರೆ. ಆದ್ರೇ ಅವರ ಪ್ರತಿಕ್ರಿಯೆ ನೋಡಿದಾಗ ಅರಿವಿನ ಕೊರತೆಯಿಂದ ಫಲಾಯನವಾದ ಮಾಡಿದ್ರು ಅನ್ನಿಸುತ್ತೆ ಎಂಬುದಾಗಿ ಬೇಸರ ಹೊರ ಹಾಕಿದರು. ಬೆಂಗಳೂರಿಗೆ ಬಂದಾಗ ಕೇಳಬಹುದಿತ್ತಲ್ಲ ಅಂತ ಹೇಳ್ತಾರೆ. ಹಾಗಿದ್ದರೇ ಕನ್ನಡ ವಿಚಾರಕ್ಕೆ…
ರಾಯಚೂರು: ಜಿಲ್ಲೆಯಲ್ಲಿ ದೇವಸ್ಥಾನದ ಪೂಜೆ ವಿಚಾರಕ್ಕೆ ಇಬ್ಬರು ಸಹೋದರರ ನಡುವೆ ಮಾರಾಮಾರಿ ನಡೆದಿರುವಂತ ಘಟನೆ ನಡೆದಿದೆ. ಈ ಘಟನೆಯಲ್ಲಿ ಹಲವರಿಗೆ ಗಾಯವಾಗಿದೆ. ರಾಯಚೂರು ಜಿಲ್ಲೆಯ ವಡವಟ್ಟಿ ಗ್ರಾಮದಲ್ಲಿ ನಡೆದಿದೆ. ಲಕ್ಷ್ಮೀ ರಂಗನಾಥ ದೇವಸ್ಥಾನದ ಪೂಜೆ ವಿಚಾರಕ್ಕೆ ವೆಂಕಟೇಶ್, ಸಹೋದರ ತಿಮ್ಮಯ್ಯ ಕಿರಿಕ್ ಮಾಡಿದ್ದಾರೆ ಎಂಬುದಾಗಿ ವೆಂಕಟೇಶ್, ನಾಗರಾಜ್, ಸುಮಿತ್ರಾ ಎಂಬುವರ ಮೇಲೆ ಆರೋಪಿಸಿದ್ದಾರೆ. ಗಲಾಟೆ ತಾರಕಕ್ಕೇರಿದಂತ ಸಂದರ್ಭದಲ್ಲಿ ಎರಡು ಕುಟುಂಬದವರು ದೊಣ್ಣೆ, ಕಟ್ಟಿಗೆಗಳಿಂದ ಹೊಡೆದಾಡಿಕೊಂಡಿದ್ದಾರೆ. ಎರಡು ಕುಟಂಬಗಳ ಹೊಡೆದಾಟದಲ್ಲಿ ಹಲವರಿಗೆ ಗಾಯವಾಗಿದೆ. https://kannadanewsnow.com/kannada/two-dead-hundreds-arrested-in-france-as-psg-fans-celebrate-champions-league-triumph/ https://kannadanewsnow.com/kannada/good-news-for-rural-people-under-this-scheme-you-will-get-rs-2-lakh-subsidized-loan/
ಪ್ಯಾರಿಸ್: ಫ್ರಾನ್ಸ್ನಲ್ಲಿ ರಾತ್ರಿಯಿಡೀ ಫುಟ್ಬಾಲ್ ಅಭಿಮಾನಿಗಳು ಪ್ಯಾರಿಸ್ ಸೇಂಟ್-ಜರ್ಮೈನ್ನ ಅದ್ಭುತ ಚಾಂಪಿಯನ್ಸ್ ಲೀಗ್ ಅಂತಿಮ ವಿಜಯವನ್ನು ಆಚರಿಸುತ್ತಿದ್ದ ವೇಳೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಅಲ್ಲದೇ ಪೊಲೀಸರ ಜೊತೆಗೆ ವಾಗ್ವಾದಕ್ಕಿಳಿದಂತ ನೂರಾರು ಜನರನ್ನು ಬಂಧಿಸಲಾಗಿದೆ ಎಂದು ಆಂತರಿಕ ಸಚಿವಾಲಯ ಭಾನುವಾರ ತಿಳಿಸಿದೆ. ಮ್ಯೂನಿಚ್ನಲ್ಲಿ ಇಂಟರ್ ಮಿಲನ್ ವಿರುದ್ಧ ಪಿಎಸ್ಜಿ 5-0 ಅಂತರದಿಂದ ಜಯಗಳಿಸಿದ ನಂತರ ರಾತ್ರಿಯಿಡೀ ಕಾರು ಹಾರ್ನ್ಗಳು, ಚಿಯರ್ಗಳು, ಬೀದಿಯಲ್ಲಿ ಹಾಡುಗಾರಿಕೆ ಮತ್ತು ಪಟಾಕಿಗಳ ರಂಗಮಂದಿರವಾಗಿದ್ದ ಪ್ಯಾರಿಸ್ನಲ್ಲಿ ಸಂಭ್ರಮದ ಕೇಂದ್ರಬಿಂದುವಾಗಿತ್ತು. ಚಾಂಪ್ಸ್-ಎಲಿಸೀಸ್ ಅವೆನ್ಯೂದಲ್ಲಿ ಜನಸಮೂಹ ಒಟ್ಟುಗೂಡಿದಾಗ ಮತ್ತು ಅಧಿಕಾರಿಗಳೊಂದಿಗೆ ಘರ್ಷಣೆಗಳು ನಡೆದಾಗ ರಾಜಧಾನಿಯಲ್ಲಿ 491 ಜನರನ್ನು ಬಂಧಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಪ್ಯಾರಿಸ್ ಸೇರಿದಂತೆ ಫ್ರಾನ್ಸ್ನಾದ್ಯಂತ ಒಟ್ಟು 559 ಜನರನ್ನು ಬಂಧಿಸಲಾಗಿದೆ ಎಂದು ಅದು ಹೇಳಿದೆ. ಆಚರಣೆಗಳು ನಡೆಯುತ್ತಿರುವಾಗ ಈ ಎರಡು ಸಾವು ಪ್ಯಾರಿಸ್ನಲ್ಲಿ ಮೋಟಾರ್ ಸ್ಕೂಟರ್ ಸವಾರಿ ಮಾಡುತ್ತಿದ್ದ ವ್ಯಕ್ತಿಯೊಬ್ಬ ಚಾಂಪ್ಸ್-ಎಲಿಸೀಸ್ನಿಂದ ಕೇವಲ ಒಂದೆರಡು ಕಿಲೋಮೀಟರ್ (1.3 ಮೈಲುಗಳು) ದೂರದಲ್ಲಿರುವ ನಗರದ ದಕ್ಷಿಣ 15 ನೇ ಅರೋಂಡಿಸ್ಮೆಂಟ್ನಲ್ಲಿ ಕಾರು ಡಿಕ್ಕಿ ಹೊಡೆದು…
ಬೆಳಗಾವಿ: ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ತೊಡಗಿದ್ದಂತ ಕೂಲಿ ಕಾರ್ಮಿಕರ ಮೇಲೆ ಆಯಿಲ್ ಟ್ಯಾಂಕ್ ಹರಿದು ಉರುಳಿ ಬಿದ್ದ ಪರಿಣಾಮ, ಮೂವರು ಸಾವನ್ನಪ್ಪಿ, ಮತ್ತೆ ಮೂವರು ಗಾಯಗೊಂಡಿರುವಂತ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಇಟಗಿ ಕ್ರಾಸ್ ನಲ್ಲಿ ಇಂದು ಭೀಕರ ದುರ್ಘಟನೆ ಸಂಭವಿಸಿದೆ. ಟ್ಯಾಂಕರ್ ಹರಿದು ಮೂವರು ಕೂಲಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಆಯಿಲ್ ಟ್ಯಾಂಕ್ ಹರಿದ ಪರಿಣಾಮ ಈ ದುರ್ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 4ರ ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಕಲಬುರ್ಗಿಯ ವಡ್ಡರಗಲ್ಲಿ ನಿವಾಸಿ ರಾಮಚಂದ್ರ ಚಾಧವ್(45), ರಾಮಚಂದ್ರ ಪುತ್ರ ಮಹೇಶ್ ರಾಮಚಂದ್ರ ಜಾಧವ್ (18), ಶಿರೋಳಿ ನಿವಾಸಿ ರಾಮಣ್ಣ ಆಲಿಯಾಸ್ ರಮೇಶ್ (38) ಎಂಬುವರು ಸಾವನ್ನಪ್ಪಿದ್ದಾರೆ. ಇನ್ನೂ ಈ ಅಪಘಾತದಲ್ಲಿ ರಾಮಣ್ಣ ಆಲಿಯಾಸ್ ರಮೇಶ್ ಪತ್ನಿ ಭೀಮವ್ವನವರ ಎರಡು ಕಾಲ್ ಕಟ್ ಆಗಿದೆ. ರಾಮಚಂದ್ರ ಜಾಧವ್ ಪತ್ನಿ ಲಕ್ಷ್ಮೀ ಭಾಯಿಗೂ ಗಂಭೀರ ಗಾಯವಾಗಿದೆ. ಆಯಿಲ್ ಟ್ಯಾಂಕರ್ ಚಾಲಕ ದಿನೇಶ್ ಶೆಟ್ಟಿಗೂ ಗಂಭೀರ ಗಾಯವಾಗಿದೆ. ಗಾಯಾಳುಗಳನ್ನು…
ಚೆನ್ನೈ: ಗ್ರಾಮೀಣ ಕ್ರಿಕೆಟ್ಗೆ ಹೊಸ ಆಯಾಮ ನೀಡುವ ಉದ್ದೇಶದಿಂದ, ದಕ್ಷಿಣ ಭಾರತದ ಮೊದಲ T10 ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಆದ ಸದರನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ (SSPL) ಚೆನ್ನೈನಲ್ಲಿ ಶುಕ್ರವಾರ ರಾತ್ರಿ ಅದ್ಧೂರಿ ಸಮಾರಂಭದೊಂದಿಗೆ ಅಧಿಕೃತವಾಗಿ ಚಾಲನೆ ಪಡೆಯಿತು. ಈ ವಿಶಿಷ್ಟ ಕಾರ್ಯಕ್ರಮದ ಮೂಲಕ ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಪುದುಚೇರಿ ಮತ್ತು ಗೋವಾದಾದ್ಯಂತ ಹರಡಿರುವ ಕಚ್ಚಾ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ವೇದಿಕೆ ಒದಗಿಸಲು ಉದ್ದೇಶಿಸಲಾಗಿದೆ. 3 ಕೋಟಿ ರೂಪಾಯಿಗಳ ಆಕರ್ಷಕ ಬಹುಮಾನದೊಂದಿಗೆ SSPL ಗಲ್ಲಿಯ ಹೀರೋಗಳನ್ನು ಕ್ರೀಡಾಂಗಣದ ಸೂಪರ್ಸ್ಟಾರ್ಗಳಾಗಿ ಪರಿವರ್ತಿಸುವ ಗುರಿಯನ್ನು ಹೊಂದಿದೆ, ಇದು ಭಾರತೀಯ ಕ್ರಿಕೆಟ್ ಕ್ಷೇತ್ರದಲ್ಲಿ ಆಟದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯವನ್ನು ಹೊಂದಿದೆ. ಅನಾವರಣ ಸಮಾರಂಭದಲ್ಲಿ ಲೀಗ್ನ ಅಧಿಕೃತ ಲೋಗೋ, ಸ್ಫೂರ್ತಿದಾಯಕ ಗೀತೆ ಮತ್ತು 5 ಅಡಿ ಎತ್ತರದ ಆಕರ್ಷಕ ಟ್ರೋಫಿಯನ್ನು ಅನಾವರಣಗೊಳಿಸಲಾಯಿತು, ಇದು ಮುಂಬರುವ ರೋಮಾಂಚಕ ಋತುವಿಗೆ ಭರವಸೆಯ ಸ್ಪರ್ಶ ನೀಡಿತು. ಎಸ್ಎಸ್ಪಿಎಲ್ನ ಅಧ್ಯಕ್ಷ ನವಾಬ್ಜಾದ ಮೊಹಮ್ಮದ್ ಆಸಿಫ್ ಅಲಿ, ಸೆಲೆಬ್ರಿಟಿ…
ಬೆಂಗಳೂರು: ಜೂನ್.1ರ ಇಂದು ವಿಶ್ವ ಹಾಲು ದಿನಾಚರಣೆ ( World Milk Day ). ಈ ಪ್ರಯುಕ್ತ ಕರ್ನಾಟಕ ಸಹಕಾರ ಹಾಲು ಮಹಾಮಂಡಳ 18 ವಿವಿಧ ಮಾದರಿ ನಂದಿನಿ ಕೇಕ್ ( Nandini Cake ) ಹಾಗೂ ಮಫಿನ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದ್ದು, ಮಾರುಕಟ್ಟೆಯಲ್ಲಿ ದೊರೆಯುವ ಬೇರೆ ಖಾಸಗಿ ಬ್ರಾಂಡ್ನ ಕೇಕ್ ಹಾಗೂ ಮಫಿನ್ಗಳಿಗಿಂತ ನಂದಿನಿ ಕೇಕ್ ಹಾಗೂ ಮಫಿನ್ಗಳು ಉತ್ತಮ ಗುಣಮಟ್ಟದಲ್ಲಿ ಹಾಗೂ ಸ್ಪರ್ಧಾತ್ಮಕ ಬೆಲೆಗಳಲ್ಲಿ ನೀಡಲಾಗುತ್ತಿದೆ. ಹಾಲು, ಮೊಸರು, ಮಜ್ಜಿಗೆ, ಲಸ್ಸಿ, ಸಿಹಿ ಹಾಗೂ ಖಾರಾ ಉತ್ಪನ್ನಗಳು ನಂದಿನಿ ಆಳ್ವಾ ಅಲ್ಲದೇ ಬ್ರೇಡ್, ಬನ್, ಐಸ್ ಕ್ರೀಂ ಸೇರಿದಂತೆ ಈಗಾಗಲೇ 150 ಕ್ಕೂ ಹೆಚ್ಚು ವಿವಿಧ ಉತ್ಪನ್ನಗಳನ್ನು ಕೆ.ಎಂ.ಎಫ್ ಹಾಗೂ ಹಾಲು ಒಕ್ಕೂಟಗಳಿಂದ ಮಾರಾಟ ಮಾಡಲಾಗುತ್ತಿದೆ. ಈಗಾಗಲೇ ಶಿಮುಲ್ ವತಿಯಿಂದ 100 ಗ್ರಾಂ ಪ್ಯಾಕ್ನಲ್ಲಿ ಖೋವಾ ಕಡಲೇ ಮಿಠಾಯಿಯನ್ನು ಮಾರಾಟ ಮಾಡಲಾಗುತ್ತಿದ್ದು, ಅದರೊಂದಿಗೆ 12 ಗ್ರಾಂ (ರೂ.5/- ) ಹಾಗೂ 25 ಗ್ರಾಂ (ರೂ.10/-) ಪ್ಯಾಕ್ಗಳಲ್ಲಿ ಸಹ ಖೋವಾ…
ಬೆಂಗಳೂರು: ದ್ವಿತೀಯ ಪಿಯುಸಿ ನಂತ್ರ ವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳಿಗೆ ಯುಜಿಸಿಇಟಿ-2025 ಪರೀಕ್ಷೆ ಕಡ್ಡಾಯ. ಈ ಪರೀಕ್ಷೆ ಬರೆದಿದ್ದಂತ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಕೆಇಎ ಮಹತ್ವದ ಮಾಹಿತಿ ಬಿಡುಗಡೆ ಮಾಡಿದೆ. ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದು, UGCET-25: ದ್ವಿತೀಯ ಪಿಯುಸಿ ಅಂಕ ದಾಖಲಿಸಿದವರ ಹಾಗೂ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದವರ ಅಂಕಗಳ ಸಂಯೋಜನೆ ನಡೆಯುತ್ತಿದ್ದು, ಜೂನ್ 2ರ ಮಧ್ಯಾಹ್ನ 2ಗಂಟೆ ನಂತರ KEA ವೆಬ್ ಸೈಟ್ ನಲ್ಲಿ Rank ಪ್ರಕಟಿಸಲಾಗುತ್ತದೆ ಎಂದು ತಿಳಿಸಿದೆ. https://twitter.com/KEA_karnataka/status/1928824548767543695 https://kannadanewsnow.com/kannada/the-hemavati-express-canal-is-essential-for-the-water-supply-of-the-kunigal-people-mla-dr-h-d-ranganath/ https://kannadanewsnow.com/kannada/good-news-for-rural-people-under-this-scheme-you-will-get-rs-2-lakh-subsidized-loan/
ಕುಣಿಗಲ್: “ಕುಣಿಗಲ್ ತಾಲೂಕು ಆರಂಭದಿಂದಲೂ ಹೇಮಾವತಿ ನೀರಿನ ತನ್ನ ಪಾಲು 3.01 ಟಿಎಂಸಿ ನೀರನ್ನು ಪಡೆಯಲು ವಂಚಿತವಾಗಿದ್ದು, ಈ ಪಾಲಿನ ನೀರು ಪಡೆಯಲು ಲಿಂಕ್ ಕೆನಾಲ್ ಯೋಜನೆ ಅನಿವಾರ್ಯ. ಇದಕ್ಕಾಗಿ ಉಗ್ರ ಹೋರಾಟಕ್ಕೂ ಸಿದ್ಧ” ಎಂದು ಶಾಸಕ ಡಾ. ಎಚ್.ಡಿ. ರಂಗನಾಥ್ ತಿಳಿಸಿದ್ದಾರೆ. “ವೈ.ಕೆ. ರಾಮಯ್ಯ ಅವರ ಹೋರಾಟದ ಫಲವಾಗಿ ತುಮಕೂರು ಜಿಲ್ಲೆಯು ಹೇಮಾವತಿ ನೀರಿನ ಶೇ.49 ರಷ್ಟು ಪಾಲನ್ನು ಪಡೆಯುತ್ತಿದೆ. ಹೇಮಾವತಿ ಹೋರಾಟದ ತವರು ಕುಣಿಗಲ್ ತಾಲೂಕು. ಕಾವೇರಿ ಜಲಾನಯನ ಪ್ರದೇಶಕ್ಕೆ ಒಳಪಟ್ಟ ಮೂಲ ಫಲಾನುಭವಿಗಳಾಗಿದ್ದರೂ ತಾಲೂಕು ತನ್ನ ಪಾಲಿನ ನೀರು ಪಡೆಯಲು ಸಾಧ್ಯವಾಗಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ನಮಗೆ ಹರಿದಿರುವುದು ಕೇವಲ 300- 500 ಎಂಸಿಎಫ್ ನೀರು ಮಾತ್ರ. ಅಂದರೆ ಶೇ. 90 ನೀರು ನಮಗೆ ಬಂದಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ. “ಈ ಅನ್ಯಾಯ ಸರಿಪಡಿಸಿ ಕುಣಿಗಲ್ ತಾಲ್ಲೂಕಿನ ಜನತೆಗೆ ತಮ್ಮ ಪಾಲಿನ ನೀರನ್ನು ಹರಿಸಲು 2018ರಲ್ಲಿ ಈ ಲಿಂಕ್ ಕೆನಾಲ್ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಯಿತು. ಹಲವಾರು ಕಾರಣಗಳಿಂದಾಗಿ ಕಾಮಗಾರಿಯು ವಿಳಂಭವಾಗಿತ್ತು.…
ಶುಕ್ರವಾರ ಲಕ್ಷ್ಮಿ ದೇವಿಗೆ ಅರ್ಪಿತವಾದ ದಿನ ಎಂದು ನಮಗೆಲ್ಲರಿಗೂ ತಿಳಿದಿದೆ ಮತ್ತು ಆ ದಿನ ಪೂಜೆ ಮಾಡಿದರೆ ಸಂಪತ್ತು ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ವಿಶೇಷವಾಗಿ ಬಹಳ ವಿಶೇಷವೆಂದು ಪರಿಗಣಿಸಲಾದ ತಿಂಗಳುಗಳಲ್ಲಿ, ಶುಕ್ರವಾರಗಳು ಅಸಾಧಾರಣ ಪ್ರಯೋಜನಗಳನ್ನು ತರುತ್ತವೆ. ಈ ಆಧ್ಯಾತ್ಮಿಕ ಪೋಸ್ಟ್ನಲ್ಲಿ, ಅನೇಕ ಶುಭ ಕಾರ್ಯಕ್ರಮಗಳು ನಡೆಯುವ ವೈಕಾಸಿ ಮಾಸದ ಮೂರನೇ ಶುಕ್ರವಾರದಂದು ಮಹಾಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಹಣ ಹೇಗೆ ಬರುತ್ತದೆ ಎಂಬುದನ್ನು ನಾವು ನೋಡಲಿದ್ದೇವೆ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ,…













