Author: kannadanewsnow09

ಇಂದಿನ ಕಾಲದಲ್ಲಿ ಹಿತ ಶತ್ರುಗಳು ಗುಪ್ತ ಶತ್ರುಗಳು ಕಣ್ಣಿಗೆ ಕಾಣದಂತೆ ಪ್ರಯೋಗಾದಿಗಳನ್ನು ಮಾಡುತ್ತಲೇ ಇರುತ್ತಾರೆ ಇದರಿಂದ ರಕ್ಷಣೆ ಹೇಗೆ ಎಂಬ ಸಂಶಯ ಪ್ರತಿಯೊಬ್ಬರಲ್ಲೂ ಬರುವುದು ಸಹಜ ಅದಕ್ಕಾಗಿ. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564 ತಂತ್ರ ಈ ರೀತಿ ಇದೆ ಮನೆಯ ಮುಖ್ಯದ್ವಾರದ ಮುಂದೆ ಹಾಗೂ ಹಿಂದೆ ಶುದ್ಧವಾದ ಪೂಜೆ ಅರಿಶಿಣವನ್ನು ಹಾಗೂ ಗಂಗಾಜಲವನ್ನು ಸ್ವಲ್ಪ ಮಿಕ್ಸ್ ಮಾಡಿ ಪೇಸ್ಟ್ ರೀತಿ ಮಾಡಿಕೊಂಡು ನಿಮ್ಮ ಎರಡು ಕೈಗಳನ್ನು ಒತ್ತಿದಾಗ ಹಸ್ತದ ಅಚ್ಚನ್ನು ನಿಮ್ಮ ಮನೆಯ ಬಾಗಿಲ ಮುಂದೆ ಹಾಗೂ ಹಿಂದೆ ಮೂಡುವಂತೆ ಮಾಡಬೇಕು. ಈ ಒಂದು ಸಣ್ಣ ತಂತ್ರದಿಂದ ನಿಮ್ಮ ಮನೆಯಾಗಲಿ ಅಂಗಡಿಯಾಗಿರಬಹುದು ಫ್ಯಾಕ್ಟರಿ ಆಗಿರಬಹುದು ದೊಡ್ಡ ದೊಡ್ಡ ಕಾರ್ಖಾನೆ ಆಗಿರಬಹುದು ಆಫೀಸ್ ಗಳಾಗಿರಬಹುದು ಇವೆಲ್ಲವುದಕ್ಕೂ ಯಾರು ಏನೇ ಮಾಡಿದರು ತಾಗುವುದಿಲ್ಲ . ನಿಮ್ಮ ಮನೆ ಅಥವಾ ಫ್ಯಾಕ್ಟರಿ ಹೊಸದಿರಲಿ ಹಳೆಯದೇ ಇರಲಿ ಈ ತಂತ್ರವನ್ನು…

Read More

ಮಂಗಳೂರು: ಇಂದು ನಗರದ ಬೋಳಾರ ಸಿಟಿ ಬೀಚ್ ನಲ್ಲಿ ಖ್ಯಾತ ಡಿಜೆ ಸಜಂಕಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆದರೇ ಡಿಜೆ ಕುಣಿತದಲ್ಲಿ ಹಿಂದೂ ದೇವರ ಬಗ್ಗೆ ಅವಹೇಳನ ಮಾಡಿದ್ದರ ಕಾರಣ ತೀವ್ರ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಪೊಲೀಸರು ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ್ದರು. ಈ ಹಿನ್ನಲೆಯಲ್ಲಿ ಇಂದು ಸಂಜೆ ನಡೆಯಬೇಕಿದ್ದಂತ ಖ್ಯಾತ ಡಿಜೆ ಸಜಂಕಾ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ಹೊಸ ವರ್ಷಾಚರಣೆಗೆ ಮುನ್ನವೇ ಮಂಗಳೂರಿನ ಬೋಳಾರ ಸಿಟಿ ಬೀಚ್ ನಲ್ಲಿ ಖ್ಯಾತ ಡಿಜೆ ಸಜಂಕಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆದರೇ ಸಜಂಕಾ ಡಿಜೆ ಕುಣಿತದಲ್ಲಿ ಹಿಂದೂ ದೇವರ ಬಗ್ಗೆ ಅವಹೇಳನ ಮಾಡಿದ್ದಾರೆ. ಅವರ ಕಾರ್ಯಕ್ರಮಕ್ಕೆ ಅನುಮತಿ ನೀಡದಂತೆ ಹಿಂದೂಪರ ಸಂಘಟನೆಗಳು ತೀವ್ರ ಒತ್ತಾಯ, ಆಕ್ರೋಶವನ್ನು ಹೊರ ಹಾಕಿದ್ದರು. ಹೀಗಾಗಿ ಮಂಗಳೂರು ಪೊಲೀಸರು ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ್ದರು. ಈ ಬಗ್ಗೆ ಸ್ವತಹ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪ್ ಅಗರ್ವಾಲ್ ಮಾಹಿತಿ ನೀಡಿದ್ದು, ಇಂದು ಬೋಳಾರದ ಸಿಟಿ ಬೀಚ್ ನಲ್ಲಿ ಆಯೋಜಿಸಿದ್ದಂತ ಸಜಂಕಾ ಅವರ ಡಿಜೆ ಕಾರ್ಯಕ್ರಮಕ್ಕೆ ಅನುಮತಿ…

Read More

ಬೆಂಗಳೂರು: ಕ್ರಿಸ್ಮಸ್ ಹಬ್ಬದ ನಂತರ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಪೂರೈಸಲು ನೈಋತ್ಯ ರೈಲ್ವೆ ಎಸ್ಎಸ್ಎಸ್ ಹುಬ್ಬಳ್ಳಿ – ಕನ್ಯಾಕುಮಾರಿ ನಿಲ್ದಾಣಗಳ ನಡುವೆ ಪ್ರತಿ ದಿಕ್ಕಿನಲ್ಲಿ ಮೂರು ಟ್ರಿಪ್ ವಿಶೇಷ ರೈಲುಗಳನ್ನು ಓಡಿಸಲಿದೆ. ರೈಲು ಸಂಖ್ಯೆ 07367/07368 ಎಸ್ಎಸ್ಎಸ್ ಹುಬ್ಬಳ್ಳಿ-ಕನ್ಯಾಕುಮಾರಿ-ಎಸ್ಎಸ್ಎಸ್ ಹುಬ್ಬಳ್ಳಿ ಎಕ್ಸ್ಪ್ರೆಸ್ ವಿಶೇಷ (3 ಟ್ರಿಪ್ಗಳು) ರೈಲು ಸಂಖ್ಯೆ 07367 ಎಸ್ಎಸ್ಎಸ್ ಹುಬ್ಬಳ್ಳಿ-ಕನ್ಯಾಕುಮಾರಿ ಎಕ್ಸ್ಪ್ರೆಸ್ ವಿಶೇಷ ರೈಲು ಡಿಸೆಂಬರ್ 30, ಜನವರಿ 06 ಮತ್ತು 13, 2025 ರಂದು ಸಂಜೆ 04:00 ಗಂಟೆಗೆ ಎಸ್ಎಸ್ಎಸ್ ಹುಬ್ಬಳ್ಳಿ ಇಂದ ಹೊರಟು ಮರುದಿನ ಮಧ್ಯಾಹ್ನ 3:20 ಕ್ಕೆ ಕನ್ಯಾಕುಮಾರಿಯನ್ನು ತಲುಪಲಿದೆ. ರೈಲು ಸಂಖ್ಯೆ 07368 ಕನ್ಯಾಕುಮಾರಿ-ಎಸ್ಎಸ್ಎಸ್ ಹುಬ್ಬಳ್ಳಿ ಎಕ್ಸ್ಪ್ರೆಸ್ ವಿಶೇಷ ರೈಲು ಡಿಸೆಂಬರ್ 31, 2024 ಮತ್ತು ಜನವರಿ 07 ಮತ್ತು 14, 2025 ರಂದು ಸಂಜೆ 07:10 ಕ್ಕೆ ಕನ್ಯಾಕುಮಾರಿಯಿಂದ ಹೊರಟು ಮರುದಿನ ಸಂಜೆ 07:35 ಕ್ಕೆ ಎಸ್ಎಸ್ಎಸ್ ಹುಬ್ಬಳ್ಳಿಯನ್ನು ತಲುಪಲಿದೆ. ಎರಡೂ ಮಾರ್ಗಗಳಲ್ಲಿ ಈ ರೈಲು ಹಾವೇರಿ, ರಾಣಿಬೆನ್ನೂರು, ಹರಿಹರ, ದಾವಣಗೆರೆ, ಬೀರೂರು…

Read More

ಬೆಂಗಳೂರು: ದಕ್ಷಿಣ ಮಧ್ಯ ರೈಲ್ವೆ ಕಾರ್ಯಾಚರಣೆಯ ನಿರ್ಬಂಧಗಳಿಂದಾಗಿ ಈ ರೈಲುಗಳನ್ನು ರದ್ದುಗೊಳಿಸಲು ಅಧಿಸೂಚನೆ ಹೊರಡಿಸಿದೆ. ಹೀಗಿದೆ ರದ್ದಾದ ರೈಲುಗಳ ಪಟ್ಟಿ 1. ರೈಲು ಸಂಖ್ಯೆ 07589 (ಹೊಸ ಸಂಖ್ಯೆ 57405) ತಿರುಪತಿ – ಕದಿರಿದೇವರ ಪಲ್ಲಿ, ಡಿಸೆಂಬರ್ 28, 2024 ರಿಂದ ಫೆಬ್ರವರಿ 28, 2025 ರವರೆಗೆ ರೈಲಿನ ಪ್ರಯಾಣವನ್ನು ರದ್ದುಗೊಳಿಸಲಾಗಿದೆ. 2. ರೈಲು ಸಂಖ್ಯೆ 07590 (ಹೊಸ ಸಂಖ್ಯೆ 57406) ಕದಿರಿದೇವರ ಪಲ್ಲಿ-ತಿರುಪತಿ, ಡಿಸೆಂಬರ್ 29, 2024 ರಿಂದ ಮಾರ್ಚ್ 01, 2025 ರವರೆಗೆ ರೈಲಿನ ಪ್ರಯಾಣವನ್ನು ರದ್ದುಗೊಳಿಸಲಾಗಿದೆ. 3. ರೈಲು ಸಂಖ್ಯೆ 07657 (ಹೊಸ ಸಂಖ್ಯೆ 57401) ತಿರುಪತಿ-ಎಸ್ಎಸ್ಎಸ್ ಹುಬ್ಬಳ್ಳಿ, ಡಿಸೆಂಬರ್ 28, 2024 ರಿಂದ ಫೆಬ್ರವರಿ 28, 2025 ರವರೆಗೆ ರೈಲಿನ ಪ್ರಯಾಣವನ್ನು ರದ್ದುಗೊಳಿಸಲಾಗಿದೆ. 4. ರೈಲು ಸಂಖ್ಯೆ 07658 (ಹೊಸ ಸಂಖ್ಯೆ 57402) ಎಸ್ಎಸ್ಎಸ್ ಹುಬ್ಬಳ್ಳಿ-ತಿರುಪತಿ, ಡಿಸೆಂಬರ್ 29, 2024 ರಿಂದ ಮಾರ್ಚ್ 01, 2025 ರವರೆಗೆ ರೈಲಿನ ಪ್ರಯಾಣವನ್ನು ರದ್ದುಗೊಳಿಸಲಾಗಿದೆ. https://kannadanewsnow.com/kannada/bengaluru-metro-rail-services-to-be-extended-till-2-40-am-on-december-31/ https://kannadanewsnow.com/kannada/former-suzuki-motor-chairman-osamu-suzuki-who-led-company-for-40-years-dies-at-94-death/

Read More

ಬೆಂಗಳೂರು: ನಗರದಲ್ಲಿ ಡಿಸೆಂಬರ್.31ರಂದು ಮುಂಜಾನೆ 2.40ರವರೆಗೆ ನಮ್ಮ ಮೆಟ್ರೋ ಸಂಚಾರದ ( Namma Metro Train Service ) ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಮೂಲಕ ಹೊಸ ವರ್ಷಾಚರಣೆಯಲ್ಲಿ ತೊಡಗೋರಿಗೆ ಗುಡ್ ನ್ಯೂಸ್ ನೀಡಲಾಗಿದೆ. ಈ ಬಗ್ಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು ( Bangalore Metro Rail Corporation Limited-BMRCL ) ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, 2025ರ ಹೊಸ ವರ್ಷದ ಮುನ್ನಾದಿನದಂದು ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಮೆಟ್ರೋ ರೈಲು ಸೇವೆಗಳನ್ನು ವಿಸ್ತರಿಸುತ್ತಿದೆ. ಕೊನೆಯ ರೈಲು ಜನವರಿ 1, 2025 ರಂದು ಮುಂಜಾನೆ 02:00 ಗಂಟೆಗೆ ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಹೊರಡಲಿದ್ದು, ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣ (ಮೆಜೆಸ್ಟಿಕ್)ನಿಂದ ಕೊನೆಯ ರೈಲು ಎಲ್ಲಾ ನಾಲ್ಕು ದಿಕ್ಕುಗಳಿಗೆ ಮುಂಜಾನೆ 2:40 ಗಂಟೆಗೆ ಹೊರಡುತ್ತವೆ ಎಂದಿದೆ. ರೈಲುಗಳು 31 ಡಿಸೆಂಬರ್ 2024ರ ರಾತ್ರಿ 11.00 ರಿಂದ ದಿನದ ವಿಸ್ತೃತ ಸೇವಾ ಅವಧಿಯವರೆಗೆ 10 ನಿಮಿಷಗಳ ಮಧ್ಯಂತರದಲ್ಲಿ ಕಾರ್ಯನಿರ್ವಹಿಸುತ್ತವೆ. ಆದಾಗ್ಯೂ, ಎಂ.ಜಿ ರಸ್ತೆಯಲ್ಲಿ…

Read More

ಕೆಎನ್ಎನ್ ಡಿಜಿಟಲ್ ಡೆಸ್ಕ್: ನಮ್ಮಲ್ಲಿ ಅನೇಕರಿಗೆ ಚಹಾ ಚೀಲವನ್ನು ಹಬೆಯಲ್ಲಿ ಕಪ್ ನೀರಿನಲ್ಲಿ ಮುಳುಗಿಸುವುದು ಕೇವಲ ದಿನಚರಿಗಿಂತ ಹೆಚ್ಚಿನದಾಗಿದೆ, ಇದು ಇಂದ್ರಿಯಗಳನ್ನು ಜಾಗೃತಗೊಳಿಸುವ ಮತ್ತು ಪ್ರಕಾಶಮಾನವಾದ ಟಿಪ್ಪಣಿಯೊಂದಿಗೆ ದಿನವನ್ನು ಪ್ರಾರಂಭಿಸಲು ಸಹಾಯ ಮಾಡುವ ಸಾಂತ್ವನದಾಯಕ ಆಚರಣೆಯಾಗಿದೆ. ಆದಾಗ್ಯೂ, ಆಘಾತಕಾರಿ ಬಹಿರಂಗಪಡಿಸುವಿಕೆಯಲ್ಲಿ, ಇತ್ತೀಚಿನ ಅಧ್ಯಯನವು ಪಾಲಿಮರ್ ಆಧಾರಿತ ಚಹಾ ಚೀಲಗಳು ನಿಮ್ಮ ಕಪ್ಗೆ ಶತಕೋಟಿ ನ್ಯಾನೊಪ್ಲಾಸ್ಟಿಕ್ಗಳು ಮತ್ತು ಮೈಕ್ರೋಪ್ಲಾಸ್ಟಿಕ್ಗಳನ್ನು ಬಿಡುಗಡೆ ಮಾಡಬಹುದು ಎಂದು ಕಂಡುಹಿಡಿದಿದೆ. ಇದು ರಕ್ತಪ್ರವಾಹವನ್ನು ಪ್ರವೇಶಿಸಬಹುದು. ದೇಹದಾದ್ಯಂತ ಹರಡಬಹುದು ಮತ್ತು ನಿಮ್ಮ ಕರುಳಿನ ಕೋಶಗಳಿಂದ ಹೀರಲ್ಪಡಬಹುದು ಎಂಬುದಾಗಿ ಅಧ್ಯಯನ ತಿಳಿಸಿದೆ. ಸಣ್ಣ ಮೈಕ್ರೋಪ್ಲಾಸ್ಟಿಕ್ಗಳು ಮತ್ತು ನ್ಯಾನೊಪ್ಲಾಸ್ಟಿಕ್ಗಳು ನಾವು ಉಸಿರಾಡುವ ಗಾಳಿಯಲ್ಲಿ ಅಡಗಿರಬಹುದು ಮತ್ತು ಮೆದುಳು, ಹೃದಯ, ಮೂತ್ರಪಿಂಡ ಅಥವಾ ವೃಷಣಗಳು ಸೇರಿದಂತೆ ಮಾನವ ದೇಹದ ಊಹಿಸಲಾಗದ ಭಾಗಗಳಿಗೆ ದಾರಿ ಕಂಡುಕೊಳ್ಳುತ್ತವೆ ಎಂದು ಈ ಹಿಂದೆ ನಡೆಸಿದ ಅನೇಕ ಅಧ್ಯಯನಗಳು ಸಾಬೀತುಪಡಿಸಿವೆ. ಯುಎಬಿ ಡಿಪಾರ್ಟ್ಮೆಂಟ್ ಆಫ್ ಜೆನೆಟಿಕ್ಸ್ ಅಂಡ್ ಮೈಕ್ರೋಬಯಾಲಜಿಯ ಮ್ಯುಟಜೆನೆಸಿಸ್ ಗ್ರೂಪ್ನ ಇತ್ತೀಚಿನ ಅಧ್ಯಯನವು ಪಾಲಿಮರ್ ಆಧಾರಿತ ಚಹಾ ಚೀಲಗಳು…

Read More

ಬೆಂಗಳೂರು: ನಗರದಲ್ಲಿ ಹೊಸ ವರ್ಷಾಚರಣೆಯಲ್ಲಿ ತೊಡಗುವವರಿಗೆ ಗುಡ್ ನ್ಯೂಸ್ ಎನ್ನುವಂತೆ ಡಿಸೆಂಬರ್.31ರಂದು ಮುಂಜಾನೆ 2.40ರವರೆಗೆ ನಮ್ಮ ಮೆಟ್ರೋ ಸಂಚಾರದ ( Namma Metro Train Service ) ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಬಗ್ಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು (ಬಿಎಂಆರ್‌ಸಿಎಲ್) ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, 2025ರ ಹೊಸ ವರ್ಷದ ಮುನ್ನಾದಿನದಂದು ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಮೆಟ್ರೋ ರೈಲು ಸೇವೆಗಳನ್ನು ವಿಸ್ತರಿಸುತ್ತಿದೆ. ಕೊನೆಯ ರೈಲು ಜನವರಿ 1, 2025 ರಂದು ಮುಂಜಾನೆ 02:00 ಗಂಟೆಗೆ ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಹೊರಡಲಿದ್ದು, ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣ (ಮೆಜೆಸ್ಟಿಕ್)ನಿಂದ ಕೊನೆಯ ರೈಲು ಎಲ್ಲಾ ನಾಲ್ಕು ದಿಕ್ಕುಗಳಿಗೆ ಮುಂಜಾನೆ 2:40 ಗಂಟೆಗೆ ಹೊರಡುತ್ತವೆ ಎಂದಿದೆ. ರೈಲುಗಳು 31 ಡಿಸೆಂಬರ್ 2024ರ ರಾತ್ರಿ 11.00 ರಿಂದ ದಿನದ ವಿಸ್ತೃತ ಸೇವಾ ಅವಧಿಯವರೆಗೆ 10 ನಿಮಿಷಗಳ ಮಧ್ಯಂತರದಲ್ಲಿ ಕಾರ್ಯನಿರ್ವಹಿಸುತ್ತವೆ. ಆದಾಗ್ಯೂ, ಎಂ.ಜಿ ರಸ್ತೆಯಲ್ಲಿ ಜನಸಂದಣಿ ಹೆಚ್ಚಾಗುವ ಸಾಧ್ಯತೆ ಇರುವುದರಿಂದ, ಡಿಸೆಂಬರ್ 31, 2024 ರಂದು ರಾತ್ರಿ…

Read More

ಮೈಸೂರು: ತಂದೆಯವರು ಮಾಡಿಸಿದ್ದಂತ ಎಲ್ಐಸಿಯಿಂದ ಹಣ ಪಡೆಯೋ ಕಾರಣಕ್ಕಾಗಿ ಅವರನ್ನೇ ಕೊಲೆ ಮಾಡಿರುವಂತ ಘಟನೆ ಪಿರಿಯಾಪಟ್ಟಣದಲ್ಲಿ ನಡೆದಿದೆ. ತಂದೆಯನ್ನು ಪುತ್ರನೊಬ್ಬ ಕೊಲೆ ಮಾಡಿದ್ದರ ಕಾರಣ ಮತ್ತೊಬ್ಬ ಮಗ ಈ ಸುದ್ದಿ ಕೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ತಿಳಿದು ಬಂದಿದೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಕೊಪ್ಪದ ಗೆರೋಸಿ ಕಾಲೋನಿಯ ಅಣ್ಣಪ್ಪ ಎಂಬುವರಿಗೆ ಪುತ್ರ ಪಾಂಡು ಎಲ್ಐಸಿ ಪಾಲಿಸಿ ಮಾಡಿಸಿದ್ದರು. ಈ ಹಣವನ್ನು ಪಡೆಯೋ ಕಾರಣದಿಂದಾಗಿ ತಂದೆ ಅಣ್ಣಪ್ಪ ಅವರಿಗೆ ಪುತ್ರ ಪಾಂಡು ಹಿಂಬದಿಯಿಂದ ತಲೆಗೆ ಹೊಡೆದು ಕೊಂದಿರುವುದಾಗಿ ಹೇಳಲಾಗುತ್ತಿದೆ. ಈ ರೀತಿಯಾಗಿ ತಂದೆಯನ್ನು ಸಾಯಿಸಿ, ಅಪ್ಪನಿಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಸಾವನ್ನಪ್ಪಿರುವುದಾಗಿ ಕಥೆ ಕಟ್ಟಿದ್ದಾನೆ. ಈ ವಿಷಯ ತಿಳಿದು ಅಣ್ಣಪ್ಪ ಅವರ ಮತ್ತೊಬ್ಬ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೂ ಈ ಸಂಬಂಧ ಬೈಲುಕುಪ್ಪೆ ಪೊಲೀಸರಿಗೆ ದೂರು ಸಹ ಕೊಲೆ ಮಾಡಿದ್ದಂತ ಪಾಂಡುವೇ ನೀಡಿದ್ದಾರೆ. ಈ ದೂರು ಪಡೆದಂತ ಪೊಲೀಸರು ಅಪರಿಚಿತ ವಾಹನ ಡಿಕ್ಕಿಯಾಗಿ ಸಾವು ಅಂತ ಕೇಸ್ ದಾಖಲಿಸಿದ್ದಾರೆ. ಆದರೇ ಯಾಕೋ ಪ್ರಕರಣದ…

Read More

ಹುಬ್ಬಳ್ಳಿ: ನಗರದಲ್ಲಿ ಡಿ.22ರಂದು ನಡೆದಿದ್ದಂತ ಸಿಲಿಂಡರ್ ಸ್ಪೋಟ ಘಟನೆಯಲ್ಲಿ 9 ಅಯ್ಯಪ್ಪ ಮಾಲಾಧಾರಿಗಳು ಗಾಯಗೊಂಡು ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಇವರಲ್ಲಿ ಈಗಾಗಲೇ ಇಬ್ಬರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು. ಇಂದು ಮತ್ತಿಬ್ಬರು ಅಯ್ಯಪ್ಪ ಮಾಲಾಧಾರಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಹುಬ್ಬಳ್ಳಿಯ ಸಾಯಿ ನಗರದ ಈಶ್ವರದೇವಸ್ಥಾನದಲ್ಲಿ ಅಡುಗೆ ಮಾಡುತ್ತಿದ್ದಂತ ಸಂದರ್ಭದಲ್ಲಿ ಡಿಸೆಂಬರ್.22ರಂದು ಸಿಲಿಂಡರ್ ಸ್ಪೋಟಗೊಂಡು 9 ಅಯ್ಯಪ್ಪ ಮಾಲಾಧಾರಿಗಳು ಗಾಯಗೊಂಡಿದ್ದರು. ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಇವರಲ್ಲಿ ಈಗಾಗಲೇ ಇಬ್ಬರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಇಂದು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತ ಅಯ್ಯಪ್ಪ ಮಾಲಾಧಾರಿ ರಾಜು ಅರ್ಲಾಪೂರ ಹಾಗೂ ಲಿಂಗರಾಜು ಬೀರನೂರು(19) ಎಂಬುವರು ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಹೀಗಾಗಿ ಮೃತರ ಸಂಖ್ಯೆ 4ಕ್ಕೆ ಏರಿಕೆಯಾದಂತೆ ಆಗಿದೆ. ಕಿಮ್ಸ್ ಆಸ್ಪತ್ರೆಯಲ್ಲಿ ಇನ್ನೂ ಐವರು ಗಾಯಾಳು ಮಾಲಾಧಾರಿಗಳಿಗೆ ಚಿಕಿತ್ಸೆ ಮುಂದುವರೆದಿದೆ. ಅಂದಹಾಗೇ ಈಗಾಗಲೇ ಮೃತ ಅಯ್ಯಪ್ಪ ಮಾಲಾಧಾರಿಗಳ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ತಲಾ 5 ಲಕ್ಷ ಪರಿಹಾರವನ್ನು…

Read More

ಬೆಂಗಳೂರು: ನಗರದಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ, ಆ ಬಳಿಕ ವ್ಯಕ್ತಿಯ ಮೇಲೆಯೇ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವಂತ ಘಟನೆ ಕೆ ಆರ್ ಮಾರ್ಕೆಟ್ ಫ್ಲೈಓವರ್ ಬಳಿಯಲ್ಲಿ ನಡೆದಿದೆ. ಬೆಂಗಳೂರಿನ ಕೆ ಆರ್ ಮಾರ್ಕೆಟ್ ಬಳಿಯ ಫ್ಲೈಓವರ್ ಮೇಲೆ ಬೈಕ್ ನಲ್ಲಿ ತೆರಳುತ್ತಿದ್ದಂತ ಶಂಕರ್ ಎಂಬುವರಿಗೆ ಹಿಂಬದಿಯಿಂದ ವಾಹನವೊಂದು ಡಿಕ್ಕಿಯಾಗಿದೆ. ಈ ಪರಿಣಾಮ ಅವರು ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಮತ್ತೊಂದು ವಾಹನ ಅವರ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೂ ಮೃತ ಶಂಕರ್ ಅವರು ಮಾರ್ಕೆಟ್ ನಿಂದ ಮೈಸೂರು ರಸ್ತೆಯ ಕಡೆಗೆ ತೆರಳುತ್ತಿದ್ದಾಗಿ ತಿಳಿದು ಬಂದಿದೆ. ಈ ವೇಳೆಯಲ್ಲೇ ಅಪರಿಚಿತ ವಾಹನ ಡಿಕ್ಕಿಯಾಗಿ ಶಂಕರ್ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಮೃತ ಶಂಕರ್ ಅವರ ಪಾರ್ಥೀವ ಶರೀರವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಈ ಸಂಬಂಧ ಸ್ಥಳಕ್ಕೆ ಚಾಮರಾಜಪೇಟೆ ಠಾಣೆಯ ಪೊಲೀಸರು ಆಗಮಿಸಿ, ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ. https://kannadanewsnow.com/kannada/manmohan-singh-brought-the-country-back-on-track-when-it-was-in-a-bad-shape-economically-hdd/ https://kannadanewsnow.com/kannada/former-suzuki-motor-chairman-osamu-suzuki-who-led-company-for-40-years-dies-at-94-death/

Read More