Subscribe to Updates
Get the latest creative news from FooBar about art, design and business.
Author: ವಸಂತ ಬಿ ಈಶ್ವರಗೆರೆ
ವಸಂತ ಬಿ ಈಶ್ವರಗೆರೆ (Vasantha B Eshwaragere) ಅವರು ಕರ್ನಾಟಕದ ಪತ್ರಕರ್ತರು ಮತ್ತು ಕವಿ. ಉದಯ ನ್ಯೂಸ್, ಟಿವಿ5 ಕನ್ನಡ ಸೇರಿದಂತೆ ವಿವಿಧ ಸುದ್ದಿ ಮಾಧ್ಯಮಗಳಲ್ಲಿ ಸುಮಾರು 15 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಪ್ರಸ್ತುತ ಅವರು Kannada News Now ಡಿಜಿಡಿಲ್ ಮಾಧ್ಯಮದಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಾಜಾ ಸುದ್ದಿ, ಸಾಹಿತ್ಯ, ಸಾಮಾಜಿಕ ವರದಿಗಾರಿಕೆ, ನ್ಯಾಯಾಂಗ ಸಂಬಂಧಿತ ವರದಿ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಸುದ್ದಿಗಳ ವರದಿಯಲ್ಲಿ ಸಕ್ರಿಯರಾಗಿದ್ದಾರೆ. ಗುಡವಿ ಪಕ್ಷಿಧಾಮದಂತಹ ಪ್ರವಾಸಿ ತಾಣಗಳ ಕುರಿತು ಲೇಖನಗಳನ್ನು ಬರೆದಿದ್ದಾರೆ.
ಬೆಂಗಳೂರು: KPCL ನ (ಕರ್ನಾಟಕ ವಿದ್ಯುತ್ ನಿಗಮ) ಒಟ್ಟು 622 ಹುದ್ದೆಗಳ ನೇಮಕಾತಿ ಸಂಬಂಧ ಡಿ.27 ಮತ್ತು 28ರಂದು ನಡೆದ ಮರು ಪರೀಕ್ಷೆಯ ಅಂತಿಮ ಫಲಿತಾಂಶವನ್ನು KEA ಪ್ರಕಟಿಸಿದೆ. ಶೀಘ್ರದಲ್ಲೇ ಅಭ್ಯರ್ಥಿಗಳು ಪಡೆದ ಅಂಕಗಳ ವಿವರ ಸಮೇತ ಪೂರ್ಣ ಪಟ್ಟಿಯನ್ನು ಕೆಪಿಸಿಎಲ್ ಗೆ ಹಸ್ತಾಂತರ ಮಾಡಲಾಗುತ್ತದೆ. ಈ ಕುರಿತಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಅವರು ಮಾಹಿತಿ ನೀಡಿದ್ದು, ಕೆಪಿಸಿಎಲ್ 622 ಹುದ್ದೆಗಳ ನೇಮಕಾತಿಗೆ ನಡೆದಂತ ಮರು ಪರೀಕ್ಷೆಯ ಅಂತಿಮ ಫಲಿತಾಂಶವನ್ನು ಪ್ರಕಟಿಸಲಾಗಿದೆ. ತಾತ್ಕಾಲಿಕ ಫಲಿತಾಂಶಕ್ಕೆ ಬಂದ ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ ಅಂತಿಮ ಫಲಿತಾಂಶ ಪ್ರಕಟಿಸಲಾಗಿದೆ ಎಂದಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಮರು ಪರೀಕ್ಷೆ ನಡೆಸಲಾಯಿತು. ಎಂಟು ದಿನಗಳಲ್ಲಿ ತಾತ್ಕಾಲಿಕ ಹಾಗೂ ಹತ್ತು ದಿನಗಳಲ್ಲಿ ಅಂತಿಮ ಫಲಿತಾಂಶವನ್ನು KEA ಪ್ರಕಟಿಸಿ, ದಾಖಲೆ ಬರೆದಿದೆ ಎಂಬುದಾಗಿ ತಿಳಿಸಿದ್ದಾರೆ. https://twitter.com/KEA_karnataka/status/2008866492658667541 https://kannadanewsnow.com/kannada/call-for-applications-for-kuwj-annual-awards/ https://kannadanewsnow.com/kannada/i-will-remain-in-politics-as-long-as-i-have-the-blessings-of-the-people-cm-siddaramaiah/
ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ)2024ನೇ ಸಾಲಿನ ಕೆಳಕಂಡ ವಾರ್ಷಿಕ ಪ್ರಶಸ್ತಿಗಳಿಗೆ ಪತ್ರಕರ್ತರಿಂದ ಆ ವರ್ಷದ ವರದಿ/ಲೇಖನ/ಸುದ್ದಿ ಛಾಯಾಚಿತ್ರಗಳನ್ನು ಆಹ್ವಾನಿಸಲಾಗಿದೆ. ಅಧ್ಯಕ್ಷರು/ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ, 3ನೇ ಮಹಡಿ, ಕಂದಾಯ ಭವನ, ಬೆಂಗಳೂರು-09 ಇಲ್ಲಿಗೆ ದಿನಾಂಕ 20-01-2026 ರೊಳಗೆ ತಲುಪುವಂತೆ ತಮ್ಮ ಸ್ವ ಪರಿಚಯದೊಂದಿಗೆ ಅರ್ಜಿಯನ್ನು ಕಳುಹಿಸಿಕೊಡಬೇಕು ಎಂದು ಕೆಯುಡಬ್ಲೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ತಿಳಿಸಿದ್ದಾರೆ. ಪ್ರಶಸ್ತಿಗಳ ವಿವರ: 1. ಜಿ. ನಾರಾಯಣಸ್ವಾಮಿ ಪ್ರಶಸ್ತಿ (ಅತ್ಯುತ್ತಮ ಗ್ರಾಮಾಂತರ ವರದಿ) 2. ಪಟೇಲ್ ಭೈರಹನುಮಯ್ಯ ಪ್ರಶಸ್ತಿ (ಅತ್ಯುತ್ತಮ ಮಾನವೀಯ ವರದಿ) 3. ಗಿರಿಧರ್ ಪ್ರಶಸ್ತಿ (ಅತ್ಯುತ್ತಮ ಅಪರಾಧ ವರದಿ) 4. ಬಿ. ಎಸ್.ವೆಂಕಟರಾಂ ಪ್ರಶಸ್ತಿ (ಅತ್ಯುತ್ತಮ ಸ್ಕೂಪ್ ವರದಿ) 5. ಕೆ. ಎ. ನೆಟ್ಟಕಲಪ್ಪ ಪ್ರಶಸ್ತಿ (ಅತ್ಯುತ್ತಮ ಕ್ರೀಡಾ ವರದಿ) 6. ಖಾದ್ರಿ ಶಾಮಣ್ಣ ಪ್ರಶಸ್ತಿ (ಅತ್ಯುತ್ತಮ ರಾಜಕೀಯ ವಿಮರ್ಶೆ) 7. ಮಂಗಳ ಎಂ. ಸಿ. ವರ್ಗಿಸ್ ಪ್ರಶಸ್ತಿ (ವಾರ ಪತ್ರಿಕೆಯಲ್ಲಿ ಚಿತ್ರ ಲೇಖನಕ್ಕೆ) 8.…
ಹಾವೇರಿ : ರಾಜಕಾರಣದಲ್ಲಿ ಇರಬೇಕಾದರೆ ಜನರ ಆಶೀರ್ವಾದ ಇರಬೇಕು. ಅವರ ಆಶೀರ್ವಾದದಿಂದ ಇಲ್ಲಿಯವರೆಗೂ ಸಾಗಿ ಬಂದಿದ್ದು, ಜನರ ಆಶೀರ್ವಾದ ಇರುವವರೆಗೆ ರಾಜಕೀಯದಲ್ಲಿರುತ್ತೇನೆ. ನನ್ನ ಆಡಳಿತ ತೃಪ್ತಿ ತಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಹಾವೇರಿಯ ಕೊಳ್ಳಿ ಪಾಲಿಟೇಕ್ನಿಕ್ ಆವರಣದ ಹೆಲಿ ಪ್ಯಾಡ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಹಾವೇರಿ ವೈದ್ಯಕೀಯ ಕಾಲೇಜು ಪೂರ್ಣಗೊಂಡಿದ್ದು, ಇದಕ್ಕೆ ಸುಮಾರು 500 ಕೋಟಿಗಳು ವೆಚ್ಚವಾಗಿದೆ. ಇದನ್ನು ನಾನೇ ಘೋಷಣೆ ಮಾಡಿದ್ದೆ ಹಾಗೂ ಉದ್ಘಾಟನೆಯನ್ನು ನಾನೇ ಮಾಡುತ್ತಿದ್ದೇನೆ. ಈಗಾಗಲೇ ಮೂರನೇ ಬ್ಯಾಚ್ ನಡೆಯುತ್ತಿದೆ ಎಂದರು. ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಸಿದ್ದರಾಮಯ್ಯ ಅವರ ಸರ್ಕಾರ ಬೊಕ್ಕಸ ಖಾಲಿ ಮಾಡಿದೆ ಎಂದು ಬಿಜೆಪಿಯವರು ಮಾಡಿರುವ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಎಂದರು. ಜಿಎಸ್‌ಟಿ: ರಾಜ್ಯಕ್ಕೆ ಈ ವರ್ಷ 5 ರಿಂದ 6 ಸಾವಿರ ಕೋಟಿ ನಷ್ಟ ಕೇಂದ್ರ ಸರ್ಕಾರವೇ ಜಿಎಸ್.ಟಿ ಜಾರಿಗೆ ತಂದು ಎಂಟು ವರ್ಷ 24% ತೆರಿಗೆ ಸುಲಿಗೆ ಮಾಡಿ…
ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ (CCPA) ಬುಧವಾರ, ಮುಂಬರುವ ಸಂಸತ್ತಿನ ಬಜೆಟ್ ಅಧಿವೇಶನದ ಪ್ರಮುಖ ದಿನಾಂಕಗಳನ್ನು ಅನುಮೋದಿಸಿದೆ. ಸಂಸದೀಯ ಕ್ಯಾಲೆಂಡರ್ ಪ್ರಕಾರ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1, ಭಾನುವಾರದಂದು 2026-27ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ. ಇದರೊಂದಿಗೆ, ಕೇಂದ್ರ ಬಜೆಟ್ ಅನ್ನು ಭಾನುವಾರದಂದು ಮಂಡಿಸಲಾಗುತ್ತಿರುವುದು ಇದೇ ಮೊದಲು. ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿಗಳು ಜನವರಿ 28 ರಂದು ಭಾಷಣ ಮಾಡಲಿದ್ದು, ಬಜೆಟ್ ಅಧಿವೇಶನ ಆರಂಭವಾಗಲಿದೆ. ಜನವರಿ 29 ರಂದು ಆರ್ಥಿಕ ಸಮೀಕ್ಷೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗುವುದು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ ಎಂಟನೇ ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ. ಇದು ಸ್ವಾತಂತ್ರ್ಯದ ನಂತರದ 80 ನೇ ಬಜೆಟ್ ಕೂಡ ಆಗಿರುತ್ತದೆ. 2017 ರಿಂದ, ಫೆಬ್ರವರಿ 28 ರ ಹಿಂದಿನ ಸಂಪ್ರದಾಯದಿಂದ ಮುಂದುವರೆದ ನಂತರ, ಫೆಬ್ರವರಿ 1 ರಂದು ಬೆಳಿಗ್ಗೆ 11 ಗಂಟೆಗೆ ಕೇಂದ್ರ ಬಜೆಟ್ ಮಂಡಿಸುವ ಅಭ್ಯಾಸವನ್ನು…
ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ (CCPA) ಬುಧವಾರ, ಮುಂಬರುವ ಸಂಸತ್ತಿನ ಬಜೆಟ್ ಅಧಿವೇಶನದ ಪ್ರಮುಖ ದಿನಾಂಕಗಳನ್ನು ಅನುಮೋದಿಸಿದೆ. ಸಂಸದೀಯ ಕ್ಯಾಲೆಂಡರ್ ಪ್ರಕಾರ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1, ಭಾನುವಾರದಂದು 2026-27ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ. ಇದರೊಂದಿಗೆ, ಕೇಂದ್ರ ಬಜೆಟ್ ಅನ್ನು ಭಾನುವಾರದಂದು ಮಂಡಿಸಲಾಗುತ್ತಿರುವುದು ಇದೇ ಮೊದಲು. ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿಗಳು ಜನವರಿ 28 ರಂದು ಭಾಷಣ ಮಾಡಲಿದ್ದು, ಬಜೆಟ್ ಅಧಿವೇಶನ ಆರಂಭವಾಗಲಿದೆ. ಜನವರಿ 29 ರಂದು ಆರ್ಥಿಕ ಸಮೀಕ್ಷೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗುವುದು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ ಎಂಟನೇ ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ, ಇದು ಸ್ವಾತಂತ್ರ್ಯದ ನಂತರದ 80 ನೇ ಬಜೆಟ್ ಕೂಡ ಆಗಿರುತ್ತದೆ. 2017 ರಿಂದ, ಫೆಬ್ರವರಿ 28 ರ ಹಿಂದಿನ ಸಂಪ್ರದಾಯದಿಂದ ಮುಂದುವರೆದ ನಂತರ, ಫೆಬ್ರವರಿ 1 ರಂದು ಬೆಳಿಗ್ಗೆ 11 ಗಂಟೆಗೆ ಕೇಂದ್ರ ಬಜೆಟ್ ಮಂಡಿಸುವ…
ಚಿಕ್ಕಮಗಳೂರು: ರಾಜ್ಯದಲ್ಲೇ ಹೃದಯ ವಿದ್ರಾವಕ ಘಟನೆ ಎನ್ನುವಂತದ್ದು ಚಿಕ್ಕಮಗಳೂರಲ್ಲಿ ನಡೆದಿದೆ. ಹಣದ ಆಸೆಗಾಗಿ ತನ್ನ ಅಪ್ರಾಪ್ತ ಪುತ್ರಿಯನ್ನೇ ಪಾಪಿ ತಂದೆಯೊಬ್ಬ ವೇಶ್ಯಾವಾಟಿಕೆಗೆ ತಳ್ಳಿದಂತ ಘಟನೆ ಚಿಕ್ಕಮಗಳೂರಿನ ಅಜ್ಜಂಪುರ ತಾಲ್ಲೂಕಿನಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ನಾಗವಂಗಲ ಗ್ರಾಮದಲ್ಲಿ 16 ವರ್ಷದ ಅಪ್ರಾಪ್ತೆಯ ತಾಯಿ 6 ವರ್ಷಗಳ ಹಿಂದೆ ತೀರಿಕೊಂಡ ಬಳಿಕ ಅಜ್ಜಿ ಹಾಗೂ ತಂದೆಯ ಜೊತೆಗೆ ವಾಸವಿದ್ದಳು. ತಂದೆ ಗಿರೀಶ್, ಬ್ರೋಕರ್ ನಾರಾಯಣಸ್ವಾಮಿ ಮೂಲಕ ಮಂಗಳೂರಿನ ಭರತ್ ಶೆಟ್ಟಿ ಮನೆಗೆ ಹೋಗೋಣ ಎಂಬುದಾಗಿ ಅಪ್ರಾಪ್ತೆಯನ್ನು ಕರೆದೊಯ್ದಿದ್ದಾರೆ. ಅಲ್ಲೇ ತಂದೆ ಗಿರೀಶ್ ಎದುರಲ್ಲೇ ಅಪ್ರಾಪ್ತ ಪುತ್ರಿಯ ಮೇಲೆ ಭರತ್ ಶೆಟ್ಟಿ ಅತ್ಯಾಚಾರ ಎಸಗಿದ್ದಾನೆ. ಇದಾದ ಒಂದು ವಾರದ ಬಳಿಕ ಅಪ್ರಾಪ್ತೆ ಮುಟ್ಟಾಗಿ ನೋವಿನಿಂದ ನರಳುತ್ತಿದ್ದರೂ ಬಿಡದೇ 8 ರಿಂದ 10 ಮಂದಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಬಾಲಕಿ ತೀವ್ರ ವಿರೋಧ ವ್ಯಕ್ತ ಪಡಿಸಿದಂತ ಸಂದರ್ಭದಲ್ಲಿ ಕೀಚಕರು ನಿಮ್ಮ ಅಪ್ಪ ಗಿರೀಶ್ ಹಾಗೂ ಭರತ್ ಶೆಟ್ಟಿಗೆ ಹಣ ನೀಡಿದ್ದೇವೆ ಎಂಬುದಾಗಿ ಹೇಳುತ್ತಲೇ ಸರಣಿ…
ಶಿವಮೊಗ್ಗ: ಫೆಬ್ರವರಿ.3ರಿಂದ ಸಾಗರದ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬ ದೇವಿ ಜಾತ್ರೆ ಆರಂಭಗೊಳ್ಳಲಿದೆ. ಈ ಹಿನ್ನಲೆಯಲ್ಲಿ ನಿನ್ನೆ ಶಾಸಕ ಗೋಪಾಲಕೃಷ್ಣ ಬೇಳೂರು ಸಾಗರದ ಪ್ರಮುಖ ರಸ್ತೆಗಳ ಡಾಂಬಾರೀಕರಣ ಕಾಮಗಾರಿಗೆ ಚಾಲನೆ ನೀಡಿದ್ದರು. ಈ ಬೆನ್ನಲ್ಲೇ ಸಾಗರದ ಮಾರಿಕಾಂಬ ದೇವಸ್ಥಾನದ ಮುಂಭಾಗದ ರಸ್ತೆಯನ್ನು ಡಾಂಬಾರೀಕರಣ ಮಾಡಲಾಯಿತು. ಶಾಸಕ ಗೋಪಾಲಕೃಷ್ಣ ಬೇಳೂರು ಅವರು ನಿನ್ನೆ ಮಾರಿಕಾಂಬ ದೇವಿ ಜಾತ್ರೆಯ ಹಿನ್ನಲೆಯಲ್ಲಿ ಸಾಗರ ನಗರದ ಪ್ರಮುಖ ರಸ್ತೆಗಳ ಡಾಂಬಾರೀಕರಣಕ್ಕೆ ಚಾಲನೆ ನೀಡಿದ್ದರು. ಇಂದು ಸಾಗರದ ಗಂಡನ ಮನೆ ಮುಂಭಾಗದಲ್ಲಿನ ರಸ್ತೆಯ ಅಂಗಡಿಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡೋ ಮೂಲಕ ಡಾಂಬಾರೀಕರಣ ಮಾಡಲಾಯಿತು. ಸಾಗರದ ಮಾರಿಗುಡಿ ದೇವಸ್ಥಾನದ ಮುಂಭಾಗದಲ್ಲಿ ರಸ್ತೆ ಡಾಂಬಾರೀಕರಣ ಕಾಮಗಾರಿಯನ್ನು ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ಅಧ್ಯಕ್ಷ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಗಿರಿಭಟ್, ಸಮಿತಿಯ ನಾಗೇಂದ್ರ ಕುಮಟ, ಕೃಷ್ಣಮೂರ್ತಿ ಮತ್ತು ಗೌತಮ್, ಲಿಂಗರಾಜು ಸೇರಿದಂತೆ ಇತರರು ವೀಕ್ಷಣೆ ಮಾಡಿದರು. ಹೀಗಿದೆ ಸಾಗರದ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವದ ವೇಳಾಪಟ್ಟಿ 2026ರ ಜನವರಿ 27ರಂದು…
ಬೆಂಗಳೂರು: ಹುಟ್ಟಿದಾಗಿನಿಂದ-16 ವರ್ಷದವರೆಗೂ ಲಸಿಕೆಗಳನ್ನು ಸರಿಯಾದ ಸಮಯಕ್ಕೆ ಹಾಕಿಸುವುದರ ಮೂಲಕ ಮಾರಣಾಂತಿಕ ಖಾಯಿಲೆಗಳಿಂದ ನಿಮ್ಮ ಮಗುವನ್ನು ರಕ್ಷಿಸಿಕೊಳ್ಳಿ ಎಂಬುದಾಗಿ ಆರೋಗ್ಯ ಇಲಾಖೆ ಮನವಿ ಮಾಡಿದೆ. ಗರ್ಭಿಣಿ ಸ್ತ್ರೀಯರು ಟಿ.ಡಿ-1 ಲಸಿಕೆಯನ್ನು ಗರ್ಭಧಾರಣೆಯ ಆರಂಭಿಕ ಹಂತದಲ್ಲಿ ಹಾಗೂ ಟಿ.ಡಿ-2 ಲಸಿಕೆಯನ್ನು ಟಿ.ಡಿ-1 ಲಸಿಕೆ ಪಡೆದ 4 ವಾರಗಳ ನಂತರ ಪಡೆದುಕೊಳ್ಳಬೇಕು. ಹುಟ್ಟಿದ ಕೂಡಲೇ ಮಗುವಿಗೆ 24 ಗಂಟೆಯೊಳಗೆ ಹೆಪಟೈಟೀಸ್-ಬಿ ಲಸಿಕೆ, ಬಿ.ಸಿ.ಜಿ ಹಾಗೂ ಓ.ಪಿ.ವಿ ಲಸಿಕೆಯನ್ನು ಪಡೆದುಕೊಳ್ಳಬೇಕು. ಹುಟ್ಟಿದ 6 ವಾರಗಳ ನಂತರ ಓ.ಪಿ.ವಿ-1, ರೋಟಾ-1, ಐ.ಪಿ.ವಿ- 1, ಪಿ.ಸಿ.ವಿ-1 ಹಾಗೂ ಪೆಂಟಾವೆಲೆಂಟ್-1 ಲಸಿಕೆಯನ್ನು ಪಡೆದುಕೊಳ್ಳಬೇಕು. ಹುಟ್ಟಿದ 10 ವಾರಗಳ ನಂತರ ಓ.ಪಿ.ವಿ-2, ರೋಟಾ-2 ಮತ್ತು ಪೆಂಟಾವೆಲೆಂಟ್-2 ಲಸಿಕೆಯನ್ನು ಪಡೆದುಕೊಳ್ಳಬೇಕು. ಹುಟ್ಟಿದ 14 ವಾರಗಳ ನಂತರ ಓ.ಪಿ.ವಿ-3, ರೋಟಾ-3, ಐ.ಪಿ.ವಿ-2, ಪಿ.ಸಿ.ವಿ-2 ಹಾಗೂ ಪೆಂಟಾವೆಲೆಂಟ್-3 ಲಸಿಕೆಯನ್ನು ಪಡೆದುಕೊಳ್ಳಬೇಕು. 9 ತಿಂಗಳ ಮಗುವಿಗೆ ಐ.ಪಿ.ವಿ-3, ದಡಾರ ರುಬೆಲ್ಲಾ-1, ಪಿ.ಸಿ.ವಿ ವರ್ಧಕ, ಜೆ.ಇ-1 ಮತ್ತು ವಿಟಮಿನ್ ಎ-1 ಲಸಿಕೆಗಳನ್ನು ಪಡೆದುಕೊಳ್ಳಬೇಕು. 16-23 ತಿಂಗಳ ಮಕ್ಕಳಿಗೆ ಓ.ಪಿ.ವಿ…
ಬೆಳಗಾವಿ: ನಿನ್ನೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನ ಕಾರು ಚಾಲಕನಿಗೆ ಬೈಕ್ ನಲ್ಲಿ ಬಂದಿದ್ದಂತ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಗಾಯಗೊಳಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಕಾರು ಚಾಲಕ ಬಸವಂತ ಕಡೋಲ್ಕರ್ ಅವರು ಕಾರು ನಿಲ್ಲಿಸಿ ಹೊರಗೆ ನಿಂತಿದ್ದಂತ ಸಂದರ್ಭದಲ್ಲಿ ನಿನ್ನೆ ದುಷ್ಕರ್ಮಿಗಳು ಎದೆ, ಭುಜ ಸೇರಿದಂತೆ ವಿವಿಧೆಡೆ ಚಾಕುವಿನಿಂದ ಇರಿದು ಪರಾರಿಯಾಗಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದಂತ ಪೊಲೀಸರು ಇಂದು ಪ್ರಕರಣ ಸಂಬಂಧ ಶಿವಯ್ಯ ಪೂಜಾರಿ, ನಿತೇಶ್ ಬಡಿಗೇರ, ಮೌನಪ್ಪ ಹಾಗೂ ಸಂಪತ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ. ಅಂದಹಾಗೇ ಬಸವಂತಗೆ ಚಾಕುವಿನಿಂದ ಇರಿದಂತ ಆರೋಪಿಗಳು ಅವರ ಸ್ನೇಹಿತರೇ ಆಗಿದ್ದರು. ಚಾಕು ಇರಿತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಇದೀಗ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ಪೊಲೀಸರು ಪಡೆಯಲಿದ್ದಾರೆ ಎನ್ನಲಾಗುತ್ತಿದೆ.
ಬೆಂಗಳೂರು : ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು ಹಾಗೂ ರಾಮನಗರ ಜಿಲ್ಲೆ ಉಪ ವಿಭಾಗಾಧಿಕಾರಿಗಳ (ಎಸಿ) ವ್ಯಾಪ್ತಿಯಲ್ಲಿ ನ್ಯಾಯಾಲಯ ಪ್ರಕರಣಗಳು ಅತಿಹೆಚ್ಚು ಸಂಖ್ಯೆಯಲ್ಲಿ ಬಾಕಿ ಇದ್ದು, ಶೀಘ್ರ ವಿಲೇವಾರಿ ಮಾಡುವಂತೆ ಸಚಿವ ಕೃಷ್ಣ ಬೈರೇಗೌಡ ಅವರು ಸೂಚಿಸಿದರು. ಬುಧವಾರ ವಿಕಾಸಸೌಧದಲ್ಲಿ ನಡೆದ ಉಪ ವಿಭಾಗಾಧಿಕಾರಿಗಳ ಕೋರ್ಟ್ ಕೇಸ್ ಸಂಬಂಧಿಸಿದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಮಹತ್ವದ ಸೂಚನೆ ನೀಡಿದ ಅವರು, “ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ರಾಜ್ಯಾದ್ಯಂತ ಒಟ್ಟು 19,000 ಪ್ರಕರಣಗಳು ಬಾಕಿ ಇವೆ. ಈ ಪೈಕಿ ಸುಮಾರು 13,000 ಪ್ರಕರಣಗಳು ಬೆಂ.ನಗರ, ಬೆಂ.ಗ್ರಾಮಾಂತರ, ತುಮಕೂರು ಹಾಗೂ ರಾಮನಗರ ಜಿಲ್ಲೆಗಳಲ್ಲೇ ಬಾಕಿ ಇವೆ” ಎಂದು ಬೇಸರ ವ್ಯಕ್ತಪಡಿಸಿದರು. “ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳಲ್ಲೇ ಹೆಚ್ಚು ಸಂಖ್ಯೆಯಲ್ಲಿ ನ್ಯಾಯಾಲಯ ಪ್ರಕರಣಗಳು ಬಾಕಿ ಇದ್ದರೆ, ರಾಜ್ಯದ ಇತರ ಭಾಗಗಳ ಅಧಿಕಾರಿಗಳೊಂದಿಗೆ ಏನೆಂದು ಸಭೆ ನಡೆಸಲಿ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಕೇವಲ 6,000 ಪ್ರಕರಣಗಳು ಮಾತ್ರ ಬಾಕಿ ಇದ್ದು, ಈ ನಾಲ್ಕು ಜಿಲ್ಲೆಗಳ ಅಧಿಕಾರಿಗಳು…














