Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೇಗೌಡರು ಆರೋಗ್ಯವಾಗಿದ್ದಾರೆ. ಯಾರೂ ಆತಂಕಪಡುವ ಅಗತ್ಯವಿಲ್ಲ ಮೂರು ನಾಲ್ಕು ದಿನದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಾರೆ ಎಂದು ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಮಾಹಿತಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಗುರುವಾರ ತಮ್ಮ ತಂದೆಯವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದರು. ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಯಾರೂ ಆತಂಕಪಡುವ ಅಗತ್ಯತೆ ಇಲ್ಲ. ತಂದೆಯವರಿಗೆ ಆರೋಗ್ಯದ ಸಮಸ್ಯೆ ಇಲ್ಲ. ಕಳೆದ ಮೂರು ದಿನಗಳಿಂದ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ದೇವರ ಮತ್ತು ಜನತೆಯ ಆಶೀರ್ವಾದದಿಂದ ಆರೋಗ್ಯವಾಗಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು. https://kannadanewsnow.com/kannada/the-gramadani-podcast-has-come-to-deliver-government-information-to-rural-people-what-is-its-specialty-and-benefits/
ಶಿವಮೊಗ್ಗ : ದಿನಾಂಕ: 11.10.2025ರ ನಾಳೆ ಸಾಗರದ ಈ ಕೆಳಕಂಡ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂಬುದಾಗಿ ಮೆಸ್ಕಾಂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಈ ಕುರಿತು ಮಾಹಿತಿ ನೀಡಿರುವ ಮೆಸ್ಕಾಂ ದಿನಾಂಕ: 11.10.2025 ರ ಶನಿವಾರದಂದು 110/33/11 ಕೆವಿ ಸಾಗರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ದಿನಾಂಕ 11.10.2025 ರಂದು ಸಾಗರ ಪಟ್ಟಣ ವ್ಯಾಪ್ತಿಯ ಎಫ್-1 ಸಾಗರ ಟೌನ್, ಎಫ್-7 ಮಂಗಳಬೀಸು ಇಂಡಸ್ಟ್ರಿಯಲ್ ಏರಿಯಾ, ಎಫ್-8 ಮಾರಿಕಾಂಬ, ಎಫ್-13 ರಾಮನಗರ ಇಂಡಸ್ಟ್ರಿಯಲ್ ಏರಿಯಾದಲ್ಲಿ ಕರೆಂಟ್ ಇರೋದಿಲ್ಲ. ಎಫ್-15 ಆರ್.ಎಂ.ಸಿ, ಎಫ್-17 ಎಸ್.ಎನ್.ನಗರ, ಮತ್ತು ಗ್ರಾಮೀಣ ವ್ಯಾಪ್ತಿಯ ಎಫ್-2 ಮಾಲ್ವೆ, ಎಫ್-3 ಹೆಗ್ಗೋಡು, ಎಫ್-4 ಆವಿನಹಳ್ಳಿ, ಎಫ್-5 ವರದಹಳ್ಳಿ, ಎಫ್-6 ಬೊಮ್ಮತ್ತಿ, ಎಫ್-9 ಮಾಸೂರು, ಎಫ್-14 ಹಿರೇನೆಲ್ಲೂರು ಹಾಗೂ ಎಫ್-16 ಲಿಂಗದಹಳ್ಳಿ ಮಾರ್ಗದದಿಂದ ವಿದ್ಯುತ್ ಸಂಪರ್ಕ ಪಡೆದಿರುವ ಸಾಗರ ಪಟ್ಟಣ, ಆವಿನಹಳ್ಳಿ, ಹೆಗ್ಗೋಡು, ಭೀಮನಕೋಣೆ ವಿದ್ಯುತ್ ವ್ಯತ್ಯಯ ಆಗಲಿದೆ. ಯಡಜಿಗಳಮನೆ, ಕಲ್ಮನೆ, ಮಾಲ್ವೆ, ಭೀಮನೇರಿ, ಕೆಳದಿ, ಮಾಸೂರು, ಹಿರೇನೆಲ್ಲೂರು, ಪಡವಗೋಡು,…
ಬೆಂಗಳೂರು: ಕೃಷ್ಣ ಮೇಲ್ದಂಡೆ ಯೋಜನೆಯ 3ನೇ ಹಂತದ ಭೂ ಸ್ವಾಧೀನ ಪ್ರಕ್ರಿಯೆಯನ್ನು ಒಂದೇ ಹಂತದಲ್ಲಿ ತ್ವರಿತವಾಗಿ ಕೈಗೊಳ್ಳಲು ರಾಜ್ಯ ಸರ್ಕಾರ ದರ ನಿಗದಿ ಪಡಿಸಿ ಆದೇಶಿಸಿದೆ. ಈ ಕುರಿತಂತೆ ರಾಜ್ಯ ಸರ್ಕಾರದಿಂದ ನಡವಳಿಯನ್ನು ಹೊರಡಿಸಲಾಗಿದೆ. ಅದರಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆ ಒಪ್ಪಂದದ ಐತೀರ್ಪು ದರಗಳು ಹಾಗೂ ಸಂಬಂಧಿಸಿದ ಇನ್ನಿತರೆ ಕಾನೂನಾತ್ಮಕ ಮತ್ತು ಆಡಳಿತಾತ್ಮಕ ವಿಷಗಳಿಗೆ ಈ ಕೆಳಗಿನಂತೆ ಅನುಮೋದನೆ ನೀಡಿರುವುದಾಗಿ ತಿಳಿಸಿದೆ. ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ 75,563 ಎಕರೆ ಮುಳುಗಡೆಯಾಗುವ ಭೂಮಿಗಾಗಿ RL:519.60 ಮೀಟರ್ ನಿಂದ RL:524.256 ಮೀಟರ್ ವರೆಗೆ ಒಂದೇ ಹಂತದಲ್ಲಿ ಒಪ್ಪಂದದ ದರ ಅಥವಾ ಭೂ ಖರೀದಿ ಮುಖಾಂತರ ಭೂಸ್ವಾದೀನ ಮಾಡಲು ಆದೇಶಿಸಿದೆ. ಕೃಷ್ಣ ಮೇಲ್ದಂಡೆ ಯೋಜನೆ 3ನೇ ಹಂತದ ಯೋಜನೆಗೆ ಅಗತ್ಯವಿರುವ ಮುಳುಗಡೆ ಜಮೀನು ಮತ್ತು ಕಾಲುವೆ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲು ನಿಗದಿಪಡಿಸಿದ ಒಪ್ಪಂದದ ಐತೀರ್ಪು ದರಗಳು ಈ ಕೆಳಕಂಡಂತೆ ಇದೆ. ಮುಳುಗಡೆ ಜಮೀನುಗಳ ಭೂಸ್ವಾಧೀನತೆಗಾಗಿ ಖುಷ್ಕಿ ಒಣ ಭೂಮಿಗೆ…
ಶಿವಮೊಗ್ಗ: ಸಾಗರದ ಬುಲೆಟ್ ಬೈಕ್ ಪ್ರಿಯರ ಆಸೆ ಈಡೇರಿಸಲು ಆರ್ ಬಿ ಡಿ ಮೋಟಾರ್ಸ್ ಅಣಿಯಾಗಿದೆ. ಹೊಸ ಹೊಸ ವಿನೂತನ ಮಾದರಿಯ ರಾಯಲ್ ಎನ್‌ಫೀಲ್ಡ್ ಮೋಟಾರ್ ಬೈಕ್ ಗಳೊಂದಿಗೆ ಇಂದು ಸಾಗರದಲ್ಲಿ ಹೊಸ ಶೋ ರೂಂ ಗ್ರಾಂಡ್ ಓಪನ್ ಆಗಲಿದೆ. ಈ ಕುರಿತಂತೆ ಮಾಹಿತಿಯನ್ನು ಹಂಚಿಕೊಂಡಿರುವಂತ ಆರ್ ಬಿ ಡಿ ಮೋಟಾರ್ಸ್ ನ RBD ಮಹೇಶ್ ಅವರು, ಸಾಗರದಲ್ಲಿ ರಾಯಲ್ ಎನ್‌ಫೀಲ್ಡ್ ಮೋಟಾರ್ ಶೋ ರೂಂ ತೆರೆಯಬೇಕು ಎಂಬುದು ಬಹು ದಿನದ ಕನಸಾಗಿತ್ತು. ಆ ಮೂಲಕ ಸ್ಥಳೀಯರಿಗೆ ಉದ್ಯೋಗ ನೀಡುವ ಗುರಿ ಹೊಂದಲಾಗಿತ್ತು. ಅದು ನನಸಾಗಿದೆ. ಬುಲೆಟ್ ಬೈಕ್ ಪ್ರಿಯರ ಆಸೆ ಈಡೇರಿಸಲು, ಸ್ಥಳೀಯರಿಗೆ ಉದ್ಯೋಗ ಅವಕಾಶ ನೀಡಲು ಆರ್ ಬಿ ಡಿ ಮೋಟಾರ್ಸ್ ನಿಂದ ಇಂದು ರಾಯಲ್ ಎನ್‌ಫೀಲ್ಡ್ ಬೈಕ್ ಮಾರಾಟ ಮಳಿಗೆ ಆರಂಭಗೊಳ್ಳುತ್ತಿದೆ ಎಂದರು. ಸಾಗರದ ಲೋಹಿಯಾ ನಗರ, ವಾರ್ಡ್ ನಂ.9, ಬಿಹೆಚ್ ರಸ್ತೆ, ರಾಷ್ಟ್ರೀಯ ಹೆದ್ದಾರಿ 69ರಲ್ಲಿ ರಾಯಲ್ ಎನ್ ಫೀಲ್ಡ್ ಶೋ ರೂಂ ಗ್ರ್ಯಾಂಡ್ ಓಪನಿಂಗ್…
ಬೆಂಗಳೂರು: ರಾಜ್ಯ ಸರ್ಕಾರದಿಂದ 10 ಕೆಜಿ ಅಕ್ಕಿ ಬದಲಾಗಿ 5 ಕೆಜಿ ಅಕ್ಕಿ ನೀಡಿ, ಇನ್ನುಳಿದ ಐದು ಕೆಜಿ ಅಕ್ಕಿಯ ಬದಲಾಗಿ ಇಂದಿರಾ ಆಹಾರದ ಕಿಟ್ ವಿತರಣೆಗೆ ನಿರ್ಧರಿಸಿದೆ. ಹಾಗಾದರೇ ಆ ಆಹಾರದ ಕಿಟ್ ನಲ್ಲಿ ಏನಿರಲಿದೆ ಎನ್ನುವ ಬಗ್ಗೆ ಮುಂದಿದೆ ಓದಿ. ರಾಜ್ಯ ಸರ್ಕಾರದ ವತಿಯಿಂದ ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿಯಾಗಿ ಐದು ಕೆಜಿ ಅಕ್ಕಿಯ ಬದಲಾಗಿ ಪ್ರತಿ ಪಡಿತರ ಚೀಟಿಗೆ ಇಂದಿರಾ ಆಹಾರದ ಕಿಟ್ ಅಂದರೆ ಪೌಷ್ಠಿಕ ಆಹಾರದ ಕಿಟ್ ಅನ್ನು ನೀಡಲು ಇಂದಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. INDIRA ಅಂದರೇ Integrated Nutrition and Dietary Initiative For Realizing Annabhagya Beneficiaries ಎಂಬುದಾಗಿದೆ. ಅಂದರೆ ಅನ್ನಭಾಗ್ಯ ಫಲಾನುಭವಿಗಳನ್ನು ಪುನರುಜ್ಜೀವನಗೊಳಿಸಲು ಸಮಗ್ರ ಪೋಷಣೆ ಮತ್ತು ಆಹಾರ ಉಪಕ್ರಮದ ಕಿಟ್ ಎಂದು ನಾಮೀಕರಿಸಿ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಇಂದಿರಾ ಆಹಾರದ ಕಿಟ್ ನಲ್ಲಿ ಏನಿರಲಿದೆ? ತೊಗರಿ ಬೇಳೆ – 1 ಕೆಜಿ ಹೆಸರುಕಾಳು- 1 ಕೆಜಿ ಅಡುಗೆ ಎಣ್ಣೆ…
ಬೆಂಗಳೂರು: ರಾಜ್ಯದಲ್ಲಿ ಅವಧಿ ಮುಕ್ತಾಯಗೊಂಡ ಗ್ರಾಮ ಪಂಚಾಯ್ತಿ ಚುನಾವಣೆಗೆ ಆಯೋಗ ಸಿದ್ಧತೆ ಮಾಡಿಕೊಳ್ಳುತ್ತಿದ್ದರೇ, ಇತ್ತ ರಾಜ್ಯದ ಎಲ್ಲಾ ಗ್ರಾಮ ಪಂಚಾಯ್ತಿ ಚುನಾಯಿತ ಪ್ರತಿನಿಧಿಗಳ ಅವಧಿ ಮುಕ್ತಾಯಗೊಳ್ಳುವ ಮಾಹಿತಿಯನ್ನು ಸಲ್ಲಿಸುವಂತೆ ಪಂಚಾಯತ್ ರಾಜ್ ಇಲಾಖೆ ರಾಜ್ಯದ ಎಲ್ಲಾ ಸಿಇಓಗಳಿಗೆ ಸೂಚಿಸಿದೆ. ಈ ಕುರಿತಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತರು ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಅದರಲ್ಲಿ 2025-26 ನೇ ಸಾಲಿಗೆ ರಾಜ್ಯದ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳ ಅವಧಿ ಮುಕ್ತಾಯಗೊಳ್ಳುವ ಮಾಹಿತಿಯನ್ನು ಈ ಪತ್ರದೊಂದಿಗೆ ಲಗತ್ತಿಸಿರುವ ನಿಗಧಿತ ನಮೂನೆಯಲ್ಲಿ ಭರ್ತಿ ಮಾಡಿ, ದೃಢೀಕರಿಸಿ ಈ ಕಛೇರಿಯ ಇ-ಮೇಲ್ ವಿಳಾಸ prcdirdev@gmail.com ದಿನಾಂಕ: 24-10-2025 ರೊಳಗಾಗಿ ಸಲ್ಲಿಸುವಂತೆ ತಿಳಿಸಿದ್ದಾರೆ.
ಚಿತ್ರದುರ್ಗ: ಆನ್ ಲೈನ್ ಬೆಟ್ಟಿಂಗ್ ಪ್ರಕರಣ ಸಂಬಂಧ ಚಿತ್ರದುರ್ಗದ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿಯನ್ನು ಇಡಿಯಿಂದ ಬಂಧಿಸಲಾಗಿತ್ತು. ಇಂದು ಅವರಿಗೆ ಸೇರಿದಂತ ವಿವಿಧೆಡೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ದಾಳಿಯ ವೇಳೆ ಮತ್ತೆ 50 ಕೋಟಿ ರೂಪಾಯಿ ಮೌಲ್ಯದ 44 ಕೆಜಿ ಚಿನ್ನವನ್ನು ಸೀಜ್ ಮಾಡಿದ್ದಾರೆ. ಚಿತ್ರದುರ್ಗದ ಶಾಸಕ ವೀರೇಂದ್ರ ಪಪ್ಪಿಗೆ ಸೇರಿದಂತ ಚಳ್ಳಕೆರೆ ಬ್ಯಾಂಕ್ ನ 2 ಲಾಕರ್ ನಲ್ಲಿ ಇದ್ದಂತ 44 ಕೆಜಿ ಚಿನ್ನವನ್ನು ಇಡಿ ಜಪ್ತಿ ಮಾಡಿದ್ದಾರೆ. ಆನ್ ಲೈನ್ ಗೇಮಿಂಗ್ ಕೇಸ್ ಸಂಬಂಧ ಈ ಕ್ರಮ ಕೈಗೊಳ್ಳಲಾಗಿದೆ. ಈ ಮೂಲಕ ಈವರೆಗೆ 150 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದಂತೆ ಆಗಿದೆ. https://kannadanewsnow.com/kannada/massive-fire-at-bengaluru-restaurant-two-dead/ https://kannadanewsnow.com/kannada/a-tragic-incident-in-the-state-a-brother-and-sister-drown-in-an-agricultural-well-and-die/
ಬಳ್ಳಾರಿ: ರಾಜ್ಯದಲ್ಲೊಂದು ಧಾರುಣ ಘಟನೆ ಎನ್ನುವಂತೆ ಕೃಷಿ ಹೊಂಡದಲ್ಲಿ ಮುಳುಗಿ ಅಕ್ಕ, ತಮ್ಮರಿಬ್ಬರು ದುರ್ಮರಣ ಹೊಂದಿರುವಂತ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲ್ಲೂಕಿನ ಮೈಲಾರ ಗ್ರಾಮದಲ್ಲಿ ಕೃಷಿ ಹೊಂಡದಲ್ಲಿ ಬಿದ್ದಂತ ತಮ್ಮನನ್ನು ಉಳಿಸಲು ಹೋಗಿ, ಅಕ್ಕನೂ ಮುಳುಗಿ ಸಾವನ್ನಪ್ಪಿರುವಂತ ಘಟನೆ ನಡೆದಿದೆ. ಬಳ್ಳಾರಿಯ ಮೈಲಾಪುರದಲ್ಲಿ ರೈತ ಮೂಕಣ್ಣನವರು ಹೊಲದಲ್ಲಿ ಕೆಲಸ ಮಾಡುತ್ತಿದ್ದಂತ ಸಂದರ್ಭದಲ್ಲಿ ಮಕ್ಕಳಾದಂತ ಮಹಾಂಕಾಳಿ(12) ಹಾಗೂ ಶಿವರಾಜ್(9) ತಂದೆಯ ಬಳಿಗೆ ತೆರಳಿದ್ದರು. ತಂದೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರೇ, ಮಕ್ಕಳು ಆಟ ಆಡುತ್ತಿದ್ದರು. ಕೃಷಿ ಹೊಂಡದ ಬಳಿಯಲ್ಲಿ ಆಟ ಆಡುತ್ತಿದ್ದಂತ ಸಂದರ್ಭದಲ್ಲಿ ತಮ್ಮ ಶಿವರಾಜ್(9) ಕಾಲು ಜಾರಿ ಬಿದ್ದಿದ್ದಾನೆ. ಆತನನ್ನು ರಕ್ಷಣೆ ಮಾಡೋದಕ್ಕೆ ಅಕ್ಕ ಮಹಾಂಕಾಳಿ(12) ಧಾವಿಸಿದ್ದಾರೆ. ಆದರೇ ಅದು ಸಾಧ್ಯವಾಗದೇ ಅಕ್ಕ-ತಮ್ಮ ಧಾರುಣವಾಗಿ ಸಾವನ್ನಪ್ಪಿದ್ದಾರೆ. ಇಬ್ಬರು ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಬಳ್ಳಾರಿಯ ಸಿರಗುಪ್ಪದ ತೆಕ್ಕಲಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ನಗರದ ರೆಸ್ಟೋರೆಂಟ್ ನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಬೆಂಕಿ ಅನಾಹುತದಿಂದ ಯುವಕ, ಯುವತಿ ಸಜೀವ ದಹನವಾಗಿದ್ದಾರೆ. ಬೆಂಗಳೂರಿನ ಯಲಹಂಕದಲ್ಲಿರುವ ಕಿಚನ್ ಫ್ಯಾಮಿಲಿ ರೆಸ್ಟೋರೆಂಟ್ ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಈ ಅವಘಡದಲ್ಲಿ ಗದಗ ಮೂಲದ ಯುವಕ, ಹುನಗುಂದ ಮೂಲದ ಕಾವೇರಿ ಸಾವನ್ನಪ್ಪಿದ್ದಾರೆ. ಯಲಹಂಕದ ಕಿಚನ್ ಫ್ಯಾಮಿಲಿ ರೆಸ್ಟೋರೆಂಟಿನ ಲಾಡ್ಜ್ ಕೊಠಡಿಯ ಬಾತ್ ರೂಮ್ ನಲ್ಲಿ ಕಾವೇರಿ ಬಡಿಗೇರ್ ಬೆಂಕಿ ಕಾಣಿಸಿಕೊಂಡ ಸಂದರ್ಭದಲ್ಲಿ ಇದ್ದರು. ಹೊಗೆ ಬಂದ ತಕ್ಷಣ ಲಾಡ್ಜ್ ಸಿಬ್ಬಂದಿಗೆ ಕರೆಯನ್ನು ಕಾವೇರಿ ಮಾಡಿದ್ದರು. ಬೆಂಕಿ ಕಾಣಿಸಿಕೊಂಡ ನಂತ್ರ ಸ್ಥಳಕ್ಕೆ ಬಂದಿದ್ದಂತ ಅಗ್ನಿ ಶಾಮಕ ಸಿಬ್ಬಂದಿ ಬಾಗಿಲು ಮುರಿದು ಒಳಗೆ ಪ್ರವೇಶಿಸಿದ್ದರು. ಬೆಂಕಿಯಿಂದ ಯುವಕ ಸಾವನ್ನಪ್ಪಿದರೇ, ಹೊಗೆಯಿಂದ ಯುವತಿ ಸಾವನ್ನಪ್ಪಿದ್ದಾರೆ. ಸದ್ಯ ಇಬ್ಬರ ಶವಗಳನ್ನು ಅಗ್ನಿಶಾಮಕ ಸಿಬ್ಬಂದಿ ಹೊರ ತೆಗೆದಿದ್ದಾರೆ. ಈ ಸಂಬಂಧ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಕೆರೆಗಳಿಗೆ ನೀರು ತುಂಬಿಸುವುದರಲ್ಲಿ ಏಷ್ಯಾದಲ್ಲೇ ಉತ್ತಮ ಕಾರ್ಯ ನಮ್ಮ ರಾಜ್ಯದಲ್ಲಿ ಆಗುತ್ತಿದೆ ಎಂದು ಮುಖ್ಯಮಂತ್ರಿ ಸಿ.ಎಂ.ಸಿದ್ದರಾಮಯ್ಯ ಅವರು ಮೆಚ್ಚುಗೆ ಸೂಚಿಸಿದರು. ಸಣ್ಣ ನೀರಾವರಿ ಇಲಾಖೆ ಬ್ಯಾಂಕ್ವೆಂಟ್ ಹಾಲ್ ನಲ್ಲಿ ಆಯೋಜಿಸಿದ್ದ “ನೀರಿದ್ದರೆ ನಾಳೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಾಗರಿಕತೆ ಬೆಳೆದದ್ದು-ಉಳಿದಿರುವುದು ನೀರಿನಿಂದಲೇ. ಜನರಲ್ಲಿ ನೀರಿನ ಬಳಕೆ, ನೀರಿನ ಮೌಲ್ಯ ಮತ್ತು ಅಂತರ್ಜಲ ವೃದ್ಧಿ ಬಗ್ಗೆ ಸಚಿವ ಬೋಸರಾಜು ಅವರು ಇಲಾಖಾ ವತಿಯಿಂದ ಉತ್ತಮ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ. ಇದು ಆರೋಗ್ಯಕರ ಸಂಗತಿ. ಜನರಿಗೆ ನೀರಿನ ಅಗತ್ಯ ಮತ್ತು ನೀರಿನ ಸ್ಥಿತಿ ಗತಿ ಬಗ್ಗೆ ಸಾರ್ವಜನಿಕರಿಗೆ ಮನವರಿಕೆ ಮಾಡಿಸಬೇಕು ಎಂದು ಕರೆ ನೀಡಿದರು. ರಾಜ್ಯದಲ್ಲಿ 37 ಲಕ್ಷ ಬೋರ್ ವೆಲ್ ಗಳ ಮೂಲಕ ಅಂತರ್ಜಲ ಬಳಕೆ ಆಗುತ್ತಿದೆ. ದಾಖಲೆಗಳಲ್ಲಿ ಇಲ್ಲದ ಲಕ್ಷಾಂತರ ಅನಧಿಕೃತ ಬೋರ್ ವೆಲ್ ಗಳೂ ಇವೆ. ರಾಷ್ಟ್ರೀಯ ಸರಾಸರಿಗಿಂತ ಶೇ8 ರಷ್ಟು ಹೆಚ್ಚಿನ ಬಳಕೆ ಆಗುತ್ತಿದೆ ಎನ್ನುವ ವರದಿಗಳಿವೆ ಎಂದು ವಿವರಿಸಿದರು. 144 ತಾಲ್ಲೂಕುಗಳನ್ನು ಹೊರತು ಪಡಿಸಿ ಉಳಿದ ತಾಲ್ಲೂಕುಗಳಲ್ಲಿ ನೀರಿನ…














