Author: ವಸಂತ ಬಿ ಈಶ್ವರಗೆರೆ

ವಸಂತ ಬಿ ಈಶ್ವರಗೆರೆ (Vasantha B Eshwaragere) ಅವರು ಕರ್ನಾಟಕದ ಪತ್ರಕರ್ತರು ಮತ್ತು ಕವಿ. ಉದಯ ನ್ಯೂಸ್, ಟಿವಿ5 ಕನ್ನಡ ಸೇರಿದಂತೆ ವಿವಿಧ ಸುದ್ದಿ ಮಾಧ್ಯಮಗಳಲ್ಲಿ ಸುಮಾರು 15 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಪ್ರಸ್ತುತ ಅವರು Kannada News Now ಡಿಜಿಡಿಲ್‌ ಮಾಧ್ಯಮದಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಾಜಾ ಸುದ್ದಿ, ಸಾಹಿತ್ಯ, ಸಾಮಾಜಿಕ ವರದಿಗಾರಿಕೆ, ನ್ಯಾಯಾಂಗ ಸಂಬಂಧಿತ ವರದಿ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಸುದ್ದಿಗಳ ವರದಿಯಲ್ಲಿ ಸಕ್ರಿಯರಾಗಿದ್ದಾರೆ. ಗುಡವಿ ಪಕ್ಷಿಧಾಮದಂತಹ ಪ್ರವಾಸಿ ತಾಣಗಳ ಕುರಿತು ಲೇಖನಗಳನ್ನು ಬರೆದಿದ್ದಾರೆ.

ಬೆಂಗಳೂರು : ಕೇಂದ್ರ ಸರ್ಕಾರದ ವಿಬಿ ಜಿ ರಾಮ್ ಜಿ ಕಾಯ್ದೆ ವಿರುದ್ಧ ಕಾಂಗ್ರೆಸ್ ಪಕ್ಷ ನ್ಯಾಯಾಲಯದಲ್ಲಿ ಕಾನೂನು ಹಾಗೂ ಬೀದಿಗಿಳಿದು ಹೋರಾಟ ಮಾಡಿ ಜನರಲ್ಲಿ ಅರಿವು ಮೂಡಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಹೊಟೇಲ್ ಲಲಿತ್ ಅಶೋಕದಲ್ಲಿ ಗುರುವಾರ ಆಯೋಜಿಸಿದ್ದ ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ವಿಬಿ ಜಿ ರಾಮ್ ಜಿ ಕಾಯ್ದೆ ವಿರುದ್ಧ ಪಕ್ಷದ ವತಿಯಿಂದ ನಡೆಸಬೇಕಾದ ಹೋರಾಟದ ಬಗ್ಗೆ ಚರ್ಚಿಸಲು ಪಕ್ಷದ ಸಚಿವರು, ಸಂಸದರು, ಶಾಸಕರು ಹಾಗೂ ಮುಖಂಡರ ಸಭೆಗೂ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. “ಕೇಂದ್ರ ಸರ್ಕಾರದ ಈ ಹೊಸ ಕಾಯ್ದೆ ಜಾರಿ ಕಷ್ಟ. ಮನರೇಗಾ ಯೋಜನೆಯಲ್ಲಿ ಕಾಮಗಾರಿ ಆಯ್ಕೆ ಮಾಡುವ ಅಧಿಕಾರ ಪಂಚಾಯಿತಿಗಳ ಬಳಿ ಇತ್ತು. ಈಗ ದೆಹಲಿಯಿಂದ ತೀರ್ಮಾನ ಆಗುತ್ತದೆ. ಶೇಕಡಾ 40 ರಷ್ಟು ಅನುದಾನ ಭರಿಸಲು ಯಾವುದೇ ರಾಜ್ಯಗಳಿಂದ ಸಾಧ್ಯವಿಲ್ಲ. ಈ ವಿಚಾರವಾಗಿ ಕೇಂದ್ರ ಸರ್ಕಾರ ತೀರ್ಮಾನ ಮಾಡುವ ಮುನ್ನ ರಾಜ್ಯಗಳ ಅಭಿಪ್ರಾಯ ಪಡೆಯಬೇಕಿತ್ತು. ರಾಜ್ಯಗಳ ಅಭಿಪ್ರಾಯ ಪಡೆಯದೇ…

Read More

ಶಿವಮೊಗ್ಗ: ಅದು ಖಾಸಗಿ ಸ್ವತ್ತಾಗಿರಲೀ, ಅರಣ್ಯ ಭೂಮಿಯಾಗಿರಲಿ ಅವುಗಳಲ್ಲಿನ ಮರಗಳನ್ನು ಕಾನೂನು ಮೀರಿ ಕಡಿತಲೆ ಮಾಡುವುದು ಅಪರಾಧ. ಆದ್ರೆ ಸಾಗರದಲ್ಲೊಬ್ಬ ಅರಣ್ಯಾಧಿಕಾರಿ ಮಾತ್ರ ಖಾಸಗಿ ಜಮೀನುಗಳಲ್ಲಿ ಮರಗಳ ಮಾರಣಹೋಮವೇ ನಡೆಯುತ್ತಿದ್ದರೂ, ಕಡಿತಲೆ ಮಾಡುವುದನ್ನು ತಡೆಗಟ್ಟೋ ಬದಲು, ಕಡಿದ ಮೇಲೆ ದಂಡ ಹಾಕೋದು ಮಾತ್ರ ನಮ್ಮ ಕೆಲಸ ಎನ್ನುವ ನಡೆಯನ್ನು ತೋರುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಉಳ್ಳೂರು ವ್ಯಾಪ್ತಿಯ ಸರ್ವೆ ನಂಬರ್.25ರಲ್ಲಿ ಕಳೆದ ಕೆಲ ವರ್ಷಗಳ ಹಿಂದೆಯೂ ಖಾಸಗಿ ಭೂಮಿಯಲ್ಲಿ ಬೆಳೆದಿದ್ದಂತ ಮರಗಳನ್ನು ಅನುಮತಿ ಪಡೆಯದೇ ಕಡಿತಲೆ ಮಾಡಲಾಗಿತ್ತು. ಆಗಲೂ ಕೇಸ್ ಮಾಡಿ ದಂಡ ಹಾಕಿ ಅರಣ್ಯ ಇಲಾಖೆಯ ಅಧಿಕಾರಿಗಳು ಕೈ ತೊಳೆದುಕೊಂಡಿದ್ದರು. ಇದೀಗ ಮತ್ತೆ ಅದೇ ಜಮೀನು ಮಾಲೀಕನಿಂದ ಮರಗಳ ಮಾರಣಹೋಮವೇ ನಡೆದಿದೆ. ಕಡಿತಲೆ ತಡೆಯಬೇಕಿದ್ದ ಅರಣ್ಯಾಧಿಕಾರಿ, ಸಿಬ್ಬಂದಿಗಳೇ ಕಣ್ಣಿದ್ದೂ ಕುರುಡು ಉಳ್ಳೂರು ವ್ಯಾಪ್ತಿಯ ಸರ್ವೆ ನಂಬರ್.25ರಲ್ಲಿ ಖಾಸಗಿ ಭೂಮಿಯಲ್ಲಿ ಬೆಳೆದಿದ್ದಂತ 20ಕ್ಕೂ ಹೆಚ್ಚು ಮರಗಳನ್ನು ತಿಂಗಳಾನುಗಟ್ಟಲೇ ಕಡಿತಲೆ ಮಾಡಲಾಗಿದೆ. ಈ ಭಾಗದ ಮರಗಳ ಕಡಿತಲೆ ಮೇಲೆ ಕಣ್ಣಿಡಬೇಕಿದ್ದಂತ ವಾಚರ್,…

Read More

ಬೆಂಗಳೂರು: ಡಿ-ಫಾರ್ಮಾ ಕೋರ್ಸ್ ಪ್ರವೇಶಕ್ಕೆ ಇದೇ ಮೊದಲ ಬಾರಿಗೆ ಕೌನ್ಸೆಲಿಂಗ್ ನಡೆಸುತ್ತಿದ್ದು ಅಭ್ಯರ್ಥಿಗಳ ರಾಂಕ್ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಗುರುವಾರ ಪ್ರಕಟಿಸಿದೆ. ಅಭ್ಯರ್ಥಿಗಳು ವೆರಿಫಿಕೇಷನ್ ಸ್ಲಿಪ್ ಡೌನ್‌ಲೋಡ್ ಮಾಡಿಕೊಂಡು, ಇಚ್ಚೆ/ಆಯ್ಕೆಗಳ ದಾಖಲಿಗೆ ಜನವರಿ 10ರಂದು ಮಧ್ಯಾಹ್ನ 3 ಗಂಟೆವರೆಗೆ ಅವಕಾಶ ನೀಡಲಾಗಿದೆ. ಅದೇ ದಿ‌ನ ಸಂಜೆ 6 ಗಂಟೆ ನಂತರ ತಾತ್ಕಾಲಿಕ ಫಲಿತಾಂಶ ಪ್ರಕಟಿಸಲಾಗುವುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ. ಅಭ್ಯರ್ಥಿಗಳು ವೆರಿಫಿಕೇಷನ್ ಸ್ಲಿಪ್ ನಲ್ಲಿ ದಾಖಲಿಸಿರುವಂತೆ ಎಲ್ಲ ಮೂಲ ದಾಖಲೆಗಳನ್ನು ಸಿದ್ಧಮಾಡಿಟ್ಟುಕೊಳ್ಳಬೇಕು. ಕಾಲೇಜು ಪ್ರವೇಶ ಸಂದರ್ಭದಲ್ಲಿ ಅವುಗಳ ಹಾಜರುಪಡಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ. https://kannadanewsnow.com/kannada/good-news-for-the-states-beedi-workers-minister-santosh-lad-holds-important-meeting-on-minimum-wage-fixing/ https://kannadanewsnow.com/kannada/breaking-screaming-over-priests-rights-against-the-neighbors-cannot-be-filed-as-a-case-high-court-important-verdict/

Read More

ಬೆಂಗಳೂರು : ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಎಸ್‌ ಲಾಡ್‌ ಅವರು, ವಿಕಾಸಸೌಧದಲ್ಲಿ ಬೀಡಿ ಉದ್ಯಮದ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ನಿಗದಿಪಡಿಸುವ ಕುರಿತು ಸಭೆ ನಡೆಸಿದರು. ಈ ಸಭೆಯಲ್ಲಿ ಕಾರ್ಮಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಸಲ್ಮಾ ಕೆ ಫಾಹಿಂ, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಕಾರ್ಮಿಕ ಆಯುಕ್ತರಾದ ಡಾ. ಎಚ್‌ ಎನ್‌ ಗೋಪಾಲಕೃಷ್ಣ, ಜಂಟಿ ಕಾರ್ಮಿಕ ಆಯುಕ್ತ ರಾದ ಡಾ. ರವಿಕುಮಾರ್, ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷರಾದ ಶಾಹಿದ್ ಟೆಕ್ಕಿಲ್, ಬೀಡಿ ಉದ್ಯಮದ ಸಂಘಟನೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು. https://kannadanewsnow.com/kannada/woman-stripped-and-assaulted-in-hubballi-national-commission-registers-case-and-investigates/ https://kannadanewsnow.com/kannada/breaking-screaming-over-priests-rights-against-the-neighbors-cannot-be-filed-as-a-case-high-court-important-verdict/

Read More

ಬೆಂಗಳೂರು: ಹುಬ್ಬಳ್ಳಿ ಘಟನೆಯನ್ನು ರಾಷ್ಟ್ರೀಯ ಮಹಿಳಾ ಆಯೋಗ (NCW) ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿರುವುದು, ಮಹಿಳೆಯರ ಘನತೆಯನ್ನು ರಕ್ಷಿಸುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಸಂಪೂರ್ಣ ವೈಫಲ್ಯಕ್ಕೆ ಜೀವಂತ ಸಾಕ್ಷಿಯಾಗಿದೆ ಎಂಬುದಾಗಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ. ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಪೊಲೀಸ್ ಬಂಧನದ ಸಮಯದಲ್ಲಿ ಮಹಿಳೆಯೊಬ್ಬರು ಅತ್ಯಂತ ಸಂಕಷ್ಟದ ಮತ್ತು ಅವಮಾನಕರ ಸ್ಥಿತಿಯಲ್ಲಿರುವ ದೃಶ್ಯಗಳು ಹೊರಬಂದಾಗ, ಒಂದು ಜವಾಬ್ದಾರಿಯುತ ಸರ್ಕಾರ ಸಂವೇದನಾಶೀಲತೆಯಿಂದ ಪಾರದರ್ಶಕವಾಗಿ ನ್ಯಾಯವನ್ನು ಒದಗಿಸುವ ಮಾಡಬೇಕಿತ್ತು. ಆದರೆ ಲಜೆಗೆಟ್ಟ ಕಾಂಗ್ರೆಸ್ ಸರ್ಕಾರ ಮಾಡಿದ್ದು, ನಿರಾಕರಣೆ ಮತ್ತು ಸಾರ್ವಜನಿಕ ಆಕ್ರೋಶವನ್ನು ಲಘುವಾಗಿ ಕಾಣುವ ಪ್ರಯತ್ನ ಎಂದು ಹೇಳಿದ್ದಾರೆ. ಸಾಂವಿಧಾನಿಕ ಸಂಸ್ಥೆಗಳು ರಾಜ್ಯ ಸರ್ಕಾರಕ್ಕೆ ಅದರ ಮೂಲಭೂತ ಕರ್ತವ್ಯವಾದ ನಾಗರೀಕರ ಘನತೆ ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ರಕ್ಷಿಸುವ ಬಗ್ಗೆ ನೆನಪಿಸುವಂತಹ ಪರಿಸ್ಥಿತಿ ಬಂದಿರುವುದು ಅತ್ಯಂತ ದುರದೃಷ್ಟಕರ. ಈ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸುವಂತೆ, ನ್ಯಾಯಯುತ ಮತ್ತು ಕಾಲಮಿತಿಯ ತನಿಖೆ ನಡೆಸುವಂತೆ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ, ಮತ್ತು ಸಂತ್ರಸ್ತೆಗೆ ಸೂಕ್ತ…

Read More

ನವದೆಹಲಿ: ಗುರುವಾರದ ಇಂದು ಭಾರತೀಯ ಷೇರು ಮಾರುಕಟ್ಟೆಯು ತೀವ್ರ ಮಾರಾಟಕ್ಕೆ ಸಾಕ್ಷಿಯಾಯಿತು. ಇದು ದುರ್ಬಲ ಜಾಗತಿಕ ಮಾರುಕಟ್ಟೆ ಭಾವನೆಯನ್ನು ಪ್ರತಿಬಿಂಬಿಸುತ್ತದೆ. ಸೆನ್ಸೆಕ್ಸ್ ನಾಲ್ಕು ತಿಂಗಳಿನಲ್ಲಿಯೇ ಒಂದು ದಿನದ ಅತಿದೊಡ್ಡ ಕುಸಿತವನ್ನು ಶೇಕಡಾವಾರು ಪ್ರಮಾಣದಲ್ಲಿ ಅನುಭವಿಸಿತು, ಆದರೆ ನಿಫ್ಟಿ 50 ಕುಸಿತದ ಸಮಯದಲ್ಲಿ 25,900 ಅನ್ನು ದಾಟಿತು. ಭಾರಿ ಮಾರಾಟವು 30-ಷೇರುಗಳ ಪ್ಯಾಕ್ ಸೆನ್ಸೆಕ್ಸ್ ಅನ್ನು 780 ಅಂಕಗಳು ಅಥವಾ 0.92% ನಷ್ಟು ಕುಸಿತದೊಂದಿಗೆ 84,180.96 ಕ್ಕೆ ತಳ್ಳಿತು. ಕ್ಯಾಪಿಟಲ್ ಮಾರ್ಕೆಟ್‌ನ ದತ್ತಾಂಶವು ಆಗಸ್ಟ್ 26, 2025 ರಂದು ಸೂಚ್ಯಂಕವು 1.04% ನಷ್ಟು ನಷ್ಟವನ್ನು ಅನುಭವಿಸಿದ ನಂತರ ಸೂಚ್ಯಂಕದ ಒಂದು ದಿನದ ಅತಿದೊಡ್ಡ ಕುಸಿತವಾಗಿದೆ ಎಂದು ತೋರಿಸುತ್ತದೆ. ನಿಫ್ಟಿ 50 ದಿನವನ್ನು 264 ಅಂಕಗಳು ಅಥವಾ 1.01% ನಷ್ಟು ನಷ್ಟದೊಂದಿಗೆ 25,876.85 ಕ್ಕೆ ಕೊನೆಗೊಳಿಸಿತು. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ತಲಾ 2% ರಷ್ಟು ಕುಸಿದವು. ಬಿಎಸ್‌ಇ-ಪಟ್ಟಿಮಾಡಿದ ಸಂಸ್ಥೆಗಳ ಒಟ್ಟಾರೆ ಮಾರುಕಟ್ಟೆ ಬಂಡವಾಳೀಕರಣವು ಹಿಂದಿನ ವಹಿವಾಟಿನಲ್ಲಿ ಸುಮಾರು ₹480 ಲಕ್ಷ ಕೋಟಿಗಳಿಂದ…

Read More

ಅಮೇರಿಕಾ: ರಷ್ಯಾದ ಮಾಧ್ಯಮಗಳು ಉಲ್ಲೇಖಿಸಿರುವ ಮೂಲಗಳ ಪ್ರಕಾರ, ಉತ್ತರ ಅಟ್ಲಾಂಟಿಕ್‌ನಲ್ಲಿ ಅಮೆರಿಕ ವಶಪಡಿಸಿಕೊಂಡ ರಷ್ಯಾ ಸಂಬಂಧಿತ ತೈಲ ಟ್ಯಾಂಕರ್ ಮರಿನೆರಾದಲ್ಲಿ ಮೂವರು ಭಾರತೀಯ ನಾಗರಿಕರು ಸಿಬ್ಬಂದಿ ಇದ್ದಾರೆ. ಆರ್‌ಟಿ ಮೂಲದ ಪ್ರಕಾರ, ಮರಿನೆರಾದ ಸಿಬ್ಬಂದಿ 17 ಉಕ್ರೇನಿಯನ್ ನಾಗರಿಕರು, ಆರು ಜಾರ್ಜಿಯನ್ ನಾಗರಿಕರು, ಮೂವರು ಭಾರತೀಯ ನಾಗರಿಕರು ಮತ್ತು ಇಬ್ಬರು ರಷ್ಯಾದ ನಾಗರಿಕರನ್ನು ಒಳಗೊಂಡಿದೆ. ಗಯಾನ ಧ್ವಜದಡಿಯಲ್ಲಿ ಖಾಸಗಿ ವ್ಯಾಪಾರಿಯೊಬ್ಬರು ವಶಪಡಿಸಿಕೊಂಡ ವಾಣಿಜ್ಯ ಹಡಗನ್ನು 20 ಉಕ್ರೇನಿಯನ್ನರು, ಆರು ಜಾರ್ಜಿಯನ್ನರು – ಅವರಲ್ಲಿ ಕ್ಯಾಪ್ಟನ್ – ಮತ್ತು ಇಬ್ಬರು ರಷ್ಯಾದ ನಾಗರಿಕರು ಸೇರಿದಂತೆ 28 ಸಿಬ್ಬಂದಿಯನ್ನು ಹೊತ್ತೊಯ್ದಿದ್ದಾರೆ ಎಂದು ವರದಿ ತಿಳಿಸಿದೆ. https://twitter.com/RT_com/status/2009207924409946283 ರಷ್ಯಾದ ನೌಕಾಪಡೆಯ ಬೆಂಗಾವಲಿನ ಹೊರತಾಗಿಯೂ ಅಮೆರಿಕ ಟ್ಯಾಂಕರ್ ವಶ ವೆನೆಜುವೆಲಾ ಬಳಿ ಪ್ರಾರಂಭವಾದ ಬೆನ್ನಟ್ಟುವಿಕೆಯ ನಂತರ, “ಯುಎಸ್ ಫೆಡರಲ್ ನ್ಯಾಯಾಲಯ ಹೊರಡಿಸಿದ ವಾರಂಟ್‌ಗೆ ಅನುಸಾರವಾಗಿ” ಉತ್ತರ ಅಟ್ಲಾಂಟಿಕ್‌ನಲ್ಲಿ ಟ್ಯಾಂಕರ್ ಅನ್ನು ವಶಪಡಿಸಿಕೊಂಡಿರುವುದಾಗಿ ಯುಎಸ್ ಮಿಲಿಟರಿ ಬುಧವಾರ ದೃಢಪಡಿಸಿತು. ಜಲಾಂತರ್ಗಾಮಿ ಸೇರಿದಂತೆ ರಷ್ಯಾದ ನೌಕಾ ಸ್ವತ್ತುಗಳಿಂದ ಹಡಗನ್ನು ಕರೆದೊಯ್ಯಲಾಗುತ್ತಿದೆ…

Read More

ಬೆಂಗಳೂರು : ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ವತಿಯಿಂದ 2024-25ನೇ ಸಾಲಿನ ಡಿವಿಡೆಂಡ್ 77,17,50,000 ರೂ.ಅನ್ನು ಇಂಧನ ಸಚಿವ ಕೆ.ಜೆ ಜಾರ್ಜ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗುರುವಾರ ಸಲ್ಲಿಸಿದರು. ಕ್ರೆಡಲ್‌ 2024-25ನೇ ಸಾಲಿನಲ್ಲಿ 257.25 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಲಾಭದ ಶೇ. 30ರಷ್ಟು ಡಿವಿಡೆಂಡ್ 77,17,50,000 ರೂ. ಮೊತ್ತದ ಚೆಕ್‌ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಪಿಸಿಎಲ್‌ ಕಚೇರಿಯಲ್ಲಿ ಸ್ವೀಕರಿಸಿದರು. ಇದೇ ವೇಳೆ ಕ್ರೆಡಲ್ ವತಿಯಿಂದ ಮಖ್ಯಮಂತ್ರಿಗಳ ಪರಿಹಾರ ನಿಧಿಗೆ 5 ಕೋಟಿ ರೂ. ಮೊತ್ತದ ಚೆಕ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಚಿವರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕ್ರೆಡಲ್ ಅಧ್ಯಕ್ಷರೂ ಆಗಿರುವ ಶಾಸಕ ಟಿ.ಡಿ. ರಾಜೇಗೌಡ, ಇಂಧನ ಇಲಾಖೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ರುದ್ರಪ್ಪಯ್ಯ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. https://kannadanewsnow.com/kannada/many-important-decisions-including-a-account-for-everyone-were-taken-in-todays-state-cabinet-meeting-here-are-the-key-highlights/ https://kannadanewsnow.com/kannada/breaking-screaming-over-priests-rights-against-the-neighbors-cannot-be-filed-as-a-case-high-court-important-verdict/

Read More

ಬೆಂಗಳೂರು: ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದಂತ ಸಂಪುಟ ಸಭೆಯಲ್ಲಿ ರಾಜ್ಯದ ಎಲ್ಲಾ ಬಿ-ಖಾತಾ ಆಸ್ತಿ ಮಾಲೀಕರಿಗೆ ಎ-ಖಾತಾ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. ಇದಲ್ಲದೇ ಇನ್ನೂ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಆ ಎಲ್ಲಾ ಇಂದಿನ ರಾಜ್ಯ ಸಚಿವ ಸಂಪುಟ ಸಭೆ ಪ್ರಮುಖ ಹೈಲೈಟ್ಸ್ ಮುಂದಿದೆ ಓದಿ. ಇಂದಿನ ರಾಜ್ಯ ಸಂಪುಟ ಸಭೆಯ ಬಳಿಕ ಕಾನೂನು ಸಚಿವ ಹೆಚ್.ಕೆ ಪಾಟೀಲ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಇಂದು 27 ವಿಷಯಗಳ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ಸಾಬೂನು ತಯಾರಿಕೆ ಯಂತ್ರ ಖರೀದಿಗೆ ಒಪ್ಪಿಗೆ ನೀಡಲಾಗಿದೆ. 17 ಕೋಟಿ ವೆಚ್ಚದಲ್ಲಿ ಖರೀದಿಗೆ ಒಪ್ಪಿಗೆ ನೀಡಲಾಗಿದೆ. ಕೆಎಸ್ ಐಡಿಎಲ್ ಗೆ ಖರೀದಿಗೆ ಒಪ್ಪಿಗೆ ನೀಡಲಾಗಿದೆ ಎಂದರು. ಹಸಿತ್ಯಾಜ್ಯ ಸಂಸ್ಕರಣೆಗೆ ಅನುಮತಿ ನೀಡಲಾಗಿದೆ. 150 ಟಿಪಿಟಿ ಸಿಬಿಜಿ ಘಟಕಕ್ಕೆ ಅನುಮತಿಸಲಾಗಿದೆ. ಗೇಲ್ ಸಂಸ್ಥೆ ಸ್ಥಾಪಿಸುತ್ತಿರುವ ಘಟಕ ಇದಾಗಿದೆ ಎಂದರು. ಕಲಬುರಗಿಯಲ್ಲಿ ಸಹಕಾರ ಭವನವನ್ನು 10 ಕೋಟಿ ವೆಚ್ಚದಲ್ಲಿ ಭವನ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ. ಪಿಎಂಎಬಿಹೆಚ್ ಐ ಯೋಜನೆಯಡಿ 196 ಗ್ರಾಮಾಂತರ ವೆಲ್ ನೆಸ್ ಸೆಂಟರ್…

Read More

ಸಾಲ ಅಂತ ಇದ್ರೆ ಅದು ನಮ್ಮನ್ನು ನಿದ್ರೆ ಮಾಡಲು ಬಿಡುವುದಿಲ್ಲ ಯಾವಗ ಸಾಲ ತೀರುತ್ತದೆ ಎಂಬ ಚಿಂತೆ ನಿಮ್ಮನ್ನು ಕಾಡುತ್ತಿದೇಯೆ..!! ಸಾಲ ಲಕ್ಷ ಇರಲಿ ಕೋಟಿ ಇರಲಿ ಎಲೆ ಲವಂಗ ಏಲಕ್ಕಿ ಪ್ರಯೋಗ ಮಾಡಿ । ಸಾಲ ತೀರೋದು ಗ್ಯಾರಂಟಿ  1)ಸಾಲ ಲಕ್ಷ ಕೋಟಿ ಇರಲಿ ಎಲೆ ಲವಂಗ ಏಲಕ್ಕಿಯ ಪ್ರಯೋಗ ಮಾಡಿದರೆ ಸಾಲತಿರುವುದು 2)ಪಕ್ಕಾ ಸಾಲ ಅಂತ ಇದ್ರೆ ಅದು ನಮ್ಮನ್ನು ನಿದ್ರೆ ಮಾಡಲು ಬಿಡುವುದಿಲ್ಲ ಯಾವಗ ಸಾಲ ತೀರುತ್ತದೆ ಎಂಬ ಚಿಂತೆ ನಮ್ಮನ್ನು ಕಾಡುತ್ತದೆ ಸಾಲ ಇಲ್ಲದ ಜೀವನ ಅತಿ ಸುಂದರ ಜೀವನ ಎನ್ನಬಹುದು ಸಾಲ ತೆಗೆದುಕೊಳ್ಳುವುದು ತುಂಬಾ ಸುಲಭ ಆದರೆ ಅದನ್ನು ತೀರಿಸುವುದು ತುಂಬಾ ಕಷ್ಟಕರವಾದ ಕೆಲಸ ಎಂದು ಎಲ್ಲರಿಗೂ ಗೊತ್ತು ಕೆಲವೊಮ್ಮೆ ಪರಿಸ್ಥಿತಿಗಳು ಹೇಗೆ ಬರುತ್ತಿದೆ ಎಂದರೆ ತಗೊಂಡ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ…

Read More