Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ರಾಜ್ಯದಲ್ಲಿ ನಿವೇಶನ ರಹಿತರಿಗೆ ಸರ್ಕಾರದಿಂದ ಸೈಟ್ ನೀಡೋದಕ್ಕೂ ಅವಕಾಶವಿದೆ. ಎಸ್ಸಿ, ಎಸ್ಟಿ ಹಾಗೂ ಇತರೆ ವರ್ಗದವರಿಗೆ ಸರ್ಕಾರಿ ದರದಲ್ಲಿ ನಿವೇಶನ ನೀಡಲು ಕಾನೂನಿನಡಿ ಅವಕಾಶವಿದೆ. ಆ ಬಗ್ಗೆ ಮಾಹಿತಿ ಮುಂದೆ ಓದಿ. ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದಂತ ನಿವೇಶನ ರಹಿತರು ಸ್ಥಳೀಯ ಆಡಳಿತಕ್ಕೆ ಅರ್ಜಿಯನ್ನು ಸಲ್ಲಿಸುವ ಮೂಲಕ ನಿವೇಶನ ಪಡೆಯಲು ಅವಕಾಶವಿದೆ. ಆದರೇ ಅದಕ್ಕೆ ಇಂತಿಷ್ಟೇ ಎನ್ನುವಂತ ಮಿತಿಯನ್ನು ಕೂಡ ವಿಧಿಸಲಾಗಿದೆ. ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿ ವಾಸದ ಮನೆಯನ್ನು ದಿನಾಂಕ 14-04-1998 ರೊಳಗೆ ನಿರ್ಮಿಸಿದ್ದರೆ ಮಾತ್ರ ಕಟ್ಟಡ ನಿರ್ಮಿಸಿದ ವಿಸ್ತೀರ್ಣದ ಭೂಮಿಯನ್ನು ಸಕ್ರಮೀಕರಣಕ್ಕಾಗಿ ಕಾಲಂ 94 ಸಿ ಅಡಿಯಲ್ಲಿ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ಇದೆ. ತಹಶೀಲ್ದಾರ್ ಕೈಪಿಡಿಯಲ್ಲಿನ ಮಾಹಿತಿ ಪ್ರಕಾರ, ನಗರ ಪ್ರದೇಶದಲ್ಲಿ 20×30 ಅಡಿ ವಿಸ್ತೀರ್ಣದ ನಿವೇಶನ ಜಮೀನಿಗೆ ಮಾತ್ರ ಹಕ್ಕು ಪತ್ರ ನೀಡಲು ತಹಶೀಲ್ದಾರರಿಗೆ ಅಧಿಕಾರ ಇರುತ್ತದೆ. ಇನ್ನೂ ಗ್ರಾಮೀಣ ಪ್ರದೇಶದಲ್ಲಿ 30×40ರ ಅಳತೆಯ ನಿವೇಶನವನ್ನು ಮಂಜೂರು ಮಾಡಬಹುದಾಗಿದೆ. ತಹಶೀಲ್ದಾರರ ಕೈಪಿಡಿಯಲ್ಲಿ ಏನಿದೆ.? ಮಂಜೂರಾದ ನಿವೇಶನದ ಮೌಲ್ಯ ಷೆಡ್ಯೂಲ್‌ನಲ್ಲಿ ವಿಧಿಸಿರುವ ದರದಂತೆ…
ಬೆಂಗಳೂರು: ರಾಜ್ಯದಲ್ಲಿ ಬಿಪಿಎಲ್ ರೇಷನ್ ಕಾರ್ಡ್ ರದ್ದಾಗಿವೆ ಎನ್ನಲಾಗುತ್ತಿದೆ. ಇದೇ ಈಗ ತೀವ್ರ ವಿವಾದಕ್ಕೂ ಕಾರಣವಾಗಿದೆ. ಒಂದು ವೇಳೆ ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ರದ್ದಾಗಿದ್ದರೇ ತಹಶೀಲ್ದಾರರ ಗಮನಕ್ಕೆ ತಂದರೇ ಒಂದು ವಾರದಲ್ಲೇ ಸಮಸ್ಯೆ ಬಗೆಹರಿಸಿ, ವಾಪಾಸ್ ಸಿಗಲಿದೆ. ಒಂದು ವೇಳೆ ಬಿಪಿಎಲ್ ಕಾರ್ಡ್ ವಿಚಾರದಲ್ಲಿ ಬಡವರಿಗೆ ತೊಂದರೆಯಾದಲ್ಲಿ ತಹಶೀಲ್ದಾರ್ ಗಮನಕ್ಕೆ ತಂದರೆ ಒಂದು ವಾರದೊಳಗಾಗಿ ಸಮಸ್ಯೆ ಬಗೆಹರಿಸಲಾಗುವುದು. ಅರ್ಹರಿಗೆ ಬಿಪಿಎಲ್ ತಪ್ಪಿ ಹೋಗಬಾರದು. ಆಕಸ್ಮಾತ್ ತಪ್ಪಿ ಹೋಗಿದ್ದರೆ ವಾಪಸ್ ಕೊಡಲಾಗುವುದು. ಹಾಗೆಯೇ ಪಡಿತರ ಚೀಟಿ ಇಲ್ಲವೆಂದು ಆರೋಗ್ಯ ಸೌಲಭ್ಯ ವಿಚಾರದಲ್ಲಿ ಯಾವುದೇ ತೊಂದರೆ ಆಗುವುದಿಲ್ಲ ಎಂದು ಆಹಾರ ಸಚಿವರಾದ ಕೆ.ಎಚ್.ಮುನಿಯಪ್ಪ ಅವರು ತಿಳಿಸಿದ್ದಾರೆ. https://twitter.com/KarnatakaVarthe/status/1859567579209269522 ಇನ್ನೂ ಸರ್ಕಾರಿ ನೌಕರರು ಮತ್ತು ಆದಾಯ ತೆರಿಗೆ ಪಾವತಿದಾರರನ್ನು ಹೊರತುಪಡಿಸಿ ಉಳಿದ ಯಾವುದೇ ಕುಟುಂಬದವರ ಪಡಿತರ ಚೀಟಿ ರದ್ದಾಗಿದ್ದರೆ ತಕ್ಷಣವೇ ವಾಪಸ್ ನೀಡಬೇಕು. ಬಡ ಕುಟುಂಬಗಳ ಪಡಿತರ ಚೀಟಿಗಳನ್ನು ವಿನಾಕಾರಣ ರದ್ದು ಮಾಡಿದರೆ ಆಹಾರ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿಗಳಾದ…
ಬೆಂಗಳೂರು: ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವಂತ ಅರ್ಹರ ಬಿಪಿಎಲ್ ಕಾರ್ಡ್ ಗಳು ಯಾವುದೇ ಕಾರಣಕ್ಕೂ ರದ್ದಾಗುವುದಿಲ್ಲ ಎಂಬುದಾಗಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸ್ಪಷ್ಟ ಪಡಿಸಿದ್ದಾರೆ. ಬಿಪಿಎಲ್ ಕಾರ್ಡ್ ವಿತರಣೆಗೆ ಕೇಂದ್ರ ಸರ್ಕಾರ ಕೆಲವು ಮಾನದಂಡಗಳನ್ನು ನಿಗದಿಪಡಿಸಿದೆ. ಅದರಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಅರ್ಹರ ಕಾರ್ಡ್ ರದ್ದಾಗಿದ್ದರೆ ಅವರಿಂದ ಮತ್ತೆ ಅರ್ಜಿ ಪಡೆದು ಬಿಪಿಎಲ್ ಕಾರ್ಡ್ ನೀಡಲಾಗುವುದು. ಅರ್ಹರು ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯ ಇಲ್ಲ ಎಂದು ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ತಿಳಿಸಿದ್ದಾರೆ. https://twitter.com/KarnatakaVarthe/status/1859535995127070898 https://kannadanewsnow.com/kannada/good-news-for-job-seekers-application-deadline-extended-for-kptcl-posts/ https://kannadanewsnow.com/kannada/good-news-for-the-homeless-from-the-central-government-here-is-the-information-about-the-application-for-pm-awas-scheme/ https://kannadanewsnow.com/kannada/note-if-you-have-a-ration-card-you-can-get-the-benefits-of-these-government-schemes/
ಬೆಂಗಳೂರು : ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಮತ್ತು ಎಸ್ಕಾಂಗಳಲ್ಲಿ ಕೈಗೊಳ್ಳಲಾಗಿರುವ ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್ ಮ್ಯಾನ್ ಹುದ್ದೆಗಳ ನೇಮಕಾತಿಗೆ, ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಇ-ಸಹಿ ಮಾಡಿ ಅಂಚೆ ಚಲನ್ ಪಡೆಯುವ ದಿನಾಂಕವನ್ನು ಹಾಗೂ ಅರ್ಜಿ ಶುಲ್ಕ ಪಾವತಿ ಮಾಡುವ ದಿನಾಂಕವನ್ನು ಕ್ರಮವಾಗಿ ಡಿ.5 ಹಾಗೂ ಡಿ. 10 ರವರೆಗೆ ವಿಸ್ತರಿಸಲಾಗಿದೆ. ಕೆಪಿಟಿಸಿಎಲ್ ಹಾಗೂ ಎಸ್ಕಾಂಗಳಲ್ಲಿ ಸದರಿ ಹುದ್ದೆಗಳ ಭರ್ತಿಗಾಗಿ 2024ರ ಅಕ್ಟೋಬರ್ 14ರಂದು ಉದ್ಯೋಗ ಪ್ರಕಟಣೆ ಹೊರಡಿಸಲಾಗಿತ್ತು. ಅದರಂತೆ, ನೇಮಕಾತಿಗೆ ಅರ್ಜಿ ಸಲ್ಲಿಸಲು 2024ರ ನವೆಂಬರ್ 20 ಹಾಗೂ ಅರ್ಜಿ ಶುಲ್ಕ ಪಾವತಿಸಲು ನವೆಂಬರ್ 25ಕ್ಕೆ ಕೊನೆಯ ದಿನಾಂಕವೆಂದು ನಿಗದಿ ಪಡಿಸಲಾಗಿತ್ತು. ಆನ್‌ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಅಭ್ಯರ್ಥಿಗಳು ಹಂತ ಹಂತವಾಗಿ ಮಾಡಬೇಕಿದ್ದು, ಅರ್ಜಿ ನಮೂನೆಯಲ್ಲಿ ಮಾಹಿತಿ ಸಲ್ಲಿಸುವುದು, ಅರ್ಜಿ ಶುಲ್ಕ ಪಾವತಿಗೆ ಅಂಚೆ ಇಲಾಖೆಯ ಚಲನ್ ಡೌನ್‌ಲೋಡ್ ಮಾಡಿಕೊಂಡು ಅರ್ಜಿ ಶುಲ್ಕ ಪಾವತಿಸಬೇಕಿದೆ. ಅದಕ್ಕೂ ಮುನ್ನ ಅಭ್ಯರ್ಥಿಗಳು ಇ-ಸಹಿ ಪ್ರಕ್ರಿಯ ಪೂರ್ಣಗೊಳಿಸಬೇಕಿರುತ್ತದೆ. ಆದರೆ,…
ತುಮಕೂರು: 2019ರಲ್ಲಿ ಇಡೀ ರಾಜ್ಯದ ಗಮನ ಸೆಳೆದಿದ್ದ ದಲಿತ ಮಹಿಳೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಸಾಬೀತಾದ ಹಿನ್ನೆಲೆ 21 ಆರೋಪಿಗಳಿಗೆ ಇಂದು ನ್ಯಾಯಾಲಯ ಶಿಕ್ಷೆ ಪ್ರಮಾಣ ಪ್ರಕಟಿಸಿದೆ. ದಲಿತ ಮಹಿಳೆ ಹತ್ಯೆಗೈದ 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿ ಕೋರ್ಟ್ ಆದೇಶಿಸಿದೆ. ತುಮಕೂರಿನ 3ನೇ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ಶಿಕ್ಷೆ ಪ್ರಕಟಿಸಲಿದೆ. ಒಟ್ಟು 27 ಆರೋಪಿಗಳಲ್ಲಿ 6 ಮಂದಿ ಈಗಾಗಲೇ ಸಾವನ್ನಪ್ಪಿದ್ದು, ಉಳಿದ 21 ಮಂದಿ ಆರೋಪಿಗಳು ಎಂದು ಕೋರ್ಟ್ ಆದೇಶಿಸಿತ್ತು. ಐಪಿಸಿ ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ಅಡಿ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಧೀಶರು ಪ್ರಕಟಿಸಿದ್ದಾರೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಗೋಪಾಲಪುರ ಗ್ರಾಮದಲ್ಲಿ 2019ರಲ್ಲಿ ಹೊನ್ನಮ್ಮ ಎಂಬ ದಲಿತ ಮಹಿಳೆಯ ಕೊಲೆ ನಡೆದಿತ್ತು. ಹೊನ್ನಮ್ಮ ಡಾಬಾ ನಡೆಸುತ್ತಿದ್ದು, ಗ್ರಾಮದಲ್ಲಿ ದೇವಸ್ಥಾನ ನಿರ್ಮಿಸಲು ಮರದ ತುಂಡು ಸಂಗ್ರಹಿಸಿ ಇಟ್ಟಿದ್ದರು. ಈ ಮರದ ತುಂಡುಗಳನ್ನು ಗ್ರಾಮದ ಕೆಲವರು ಕಳವು ಮಾಡಿದ್ದರು.…
ಪ್ರಾಸಿಕ್ಯೂಟರ್ ಕರೀಂ ಖಾನ್ ಅವರ ಮನವಿಯ ಆರು ತಿಂಗಳ ನಂತರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ( Israeli Prime Minister Benjamin Netanyahu ) ಮತ್ತು ಮಾಜಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರಿಗೆ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ( International Criminal Court -ICC) ಗುರುವಾರ ಬಂಧನ ವಾರಂಟ್ ಹೊರಡಿಸಿದೆ. ಹೇಗ್ ಮೂಲದ ನ್ಯಾಯಾಲಯವು ಮೊಹಮ್ಮದ್ ಡೀಫ್ ಎಂದು ಕರೆಯಲ್ಪಡುವ ಹಮಾಸ್ ಮಿಲಿಟರಿ ಮುಖ್ಯಸ್ಥ ಮೊಹಮ್ಮದ್ ದಿಯಾಬ್ ಇಬ್ರಾಹಿಂ ಅಲ್-ಮಸ್ರಿಗೆ ವಾರಂಟ್ ಹೊರಡಿಸಿದೆ. ಇಸ್ರೇಲಿಗಳು ಮತ್ತು ಡೀಫ್ ಕಳೆದ ವರ್ಷ ಅಕ್ಟೋಬರ್ 7 ರಿಂದ ಮಾಡಿದ ದೌರ್ಜನ್ಯಗಳ ಮೇಲೆ ಹಲವಾರು ಯುದ್ಧ ಅಪರಾಧಗಳು ಮತ್ತು ಮಾನವೀಯತೆಯ ವಿರುದ್ಧದ ಅಪರಾಧಗಳ ಆರೋಪ ಹೊರಿಸಿದ್ದಾರೆ. ತನ್ನ ಹೇಳಿಕೆಯಲ್ಲಿ, ಐಸಿಸಿಯ ಪ್ರೀ-ಟ್ರಯಲ್ ಚೇಂಬರ್ I, ಮೂವರು ನ್ಯಾಯಾಧೀಶರ ಸಮಿತಿಯು ತನ್ನ ಅಧಿಕಾರ ವ್ಯಾಪ್ತಿಯನ್ನು ಪ್ರಶ್ನಿಸಿ ಇಸ್ರೇಲ್ ಮಾಡಿದ ಮೇಲ್ಮನವಿಗಳನ್ನು ತಿರಸ್ಕರಿಸಿದೆ ಎಂದು ಹೇಳಿದೆ. ಬಂಧನ ವಾರಂಟ್‌ಗಳನ್ನು “ರಹಸ್ಯ” ಎಂದು ವರ್ಗೀಕರಿಸಲಾಗಿದೆ ಆದರೆ ಅವುಗಳನ್ನು…
ವಾಸ್ತು, ಇತ್ತೀಚೆಗೆ ನಾವು ಈ ವಾಸ್ತು ಬಗ್ಗೆ ಹೆಚ್ಚು ಮಾತನಾಡುತ್ತಿದ್ದೇವೆ. ಆದರೆ ವಾಸ್ತು ಇಂದು ನಿನ್ನೆಯದಲ್ಲ. ವಾಸ್ತು ರಾಜರ ಕಾಲದಿಂದಲೂ ಇದೆ. ವಾಸ್ತುವನ್ನು ನಂಬುವವರು ಈ ಪರಿಹಾರವನ್ನು ಅನುಸರಿಸಬಹುದು. ಅನೇಕರ ಮನೆಯಲ್ಲಿ ವಾಸ್ತು ಸರಿಯಾಗಿ ಹೊಂದಿಸದೇ ಇರುವುದರಿಂದ ಕುಟುಂಬದಲ್ಲಿ ಕೆಲವು ಸಮಸ್ಯೆಗಳು ಉದ್ಭವಿಸುತ್ತವೆ. ಕೆಲವರಿಗೆ ಮನೆಯಲ್ಲಿ ನೆಮ್ಮದಿ ಕಳೆದುಕೊಳ್ಳಬಹುದು, ವ್ಯಾಪಾರದಲ್ಲಿ ನಷ್ಟ ಉಂಟಾಗಬಹುದು, ಕೆಲವರಿಗೆ ಮನೆಯಲ್ಲಿ ಜಗಳಗಳು ಕೂಡ ಬರಬಹುದು. ಕೆಲವು ಮನೆಗಳಲ್ಲಿ ವಾಸ್ತು ಸರಿಯಿಲ್ಲದ ಕಾರಣ ಕುಟುಂಬ ಎರಡು ಹೋಳಾಗುತ್ತದೆ. ಸಣ್ಣಪುಟ್ಟ ವಾಸ್ತು ಸಮಸ್ಯೆಯಾಗಿದ್ದರೆ ಅದನ್ನು ಸುಲಭವಾಗಿ ಸರಿಪಡಿಸಬಹುದು. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564 ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ,…
ಬೆಂಗಳೂರು: ರಾಜ್ಯದಲ್ಲಿ ಅನೇಕರು ಸರ್ಕಾರಿ ಭೂಮಿಯಲ್ಲಿ ವಾಸದ ಮನೆ ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಇಂತಹ ಜನರು ಸಕ್ರಮಕ್ಕಾಗಿ, ತಾವು ವಾಸಿಸುತ್ತಿರುವಂತ ಮನೆಯ ಭೂಮಿ ಸರ್ಕಾರಿ ಜಾಗವಾಗಿದ್ದರೂ, ತಮ್ಮ ಹೆಸರಿಗೆ ಮಂಜೂರಾತಿ ಪಡೆಯಲು ನಿಯಮಗಳ ಅಡಿಯಲ್ಲಿ ಅವಕಾಶವಿದೆ. ಈ ಕುರಿತಂತೆ ತಹಶೀಲ್ದಾರರ ಕೈಪಿಡಿ ಪುಸ್ತಕದಲ್ಲಿ ಮಾಹಿತಿಯನ್ನು ನೀಡಲಾಗಿದೆ. ರಾಜ್ಯದಲ್ಲಿ ಸರ್ಕಾರಿ ಭೂಮಿಯಲ್ಲಿ ಅತಿಕ್ರಮವಾಗಿ ವಾಸದ ಮನೆಯನ್ನು ದಿನಾಂಕ 14-04-1998ರ ಪೂರ್ವಭಾವಿಯಾಗಿ ನಿರ್ಮಿಸಿದ್ದರೇ, ನಿಗದಿತ ನಮೂನೆ 1ರಲ್ಲಿ ಸಕ್ಷಮ ಪ್ರಾಧಿಕಾರಿಗೆ, ವಾಸದ ಮನೆಯ ಕಟ್ಟಡ ನಿರ್ಮಿಸಿರುವ ವಿಸ್ತೀರ್ಣದ ಭೂಮಿಯನ್ನು ಸಕ್ರಮೀಕರಣಕ್ಕಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಕರ್ನಾಟಕ ( ವಾಸದ ಮನೆ ನಿಯಮ) ಭೂ ಮಂಜೂರಾತಿ ನಿಯಮಗಳು 1999ರ ಕಲಂ 94 (ಸಿ) ಅಡಿಯಲ್ಲಿ ಸಕ್ರಮೀಕರಣಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿದೆ ಅಂತ ನಿಯಮದಲ್ಲೇ ಹೇಳಲಾಗಿದೆ. ಯಾರು ಸಕ್ಷಮ ಪ್ರಾಧಿಕಾರಿ.? ಬೆಂಗಳೂರು ಮಹಾನಗರ ಪಾಲಿಕೆಗಳ ವ್ಯಾಪ್ತಿಯ 18 ಕಿಲೋ ಮೀಟರ್ ವ್ಯಾಪ್ತಿಯ ಸರಹದ್ದಿನ ಸರ್ಕಾರಿ ಜಮೀನುಗಳಲ್ಲಿ ನೀವು ವಾಸದ ಮನೆ ನಿರ್ಮಿಸಿಕೊಂಡಿದ್ದರೇ, ಜಿಲ್ಲಾಧಿಕಾರಿಗಳು(ನಗರ), ಬೆಂಗಳೂರು ಜಿಲ್ಲೆ ಇವರು ಸಕ್ಷಮ…
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ದಾಸರಹಳ್ಳಿ ವಲಯದಲ್ಲಿ ನಾಳೆ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ಅವರು ಮುಖ್ಯ ಆಯುಕ್ತರ ನಡೆ ವಲಯದ ಕಡೆ ಕಾರ್ಯಕ್ರಮ ನಡೆಸಲಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಪರಿಹರಿಸಲು ಸಾರ್ವಜನಿಕರಿಗೆ ಅನುಕೂಲವಾಗಲೆಂದು ಹಾಗೂ ವಲಯ ಮಟ್ಟದಲ್ಲಿ ನಡೆಯುತ್ತಿರುವ ಕಾರ್ಯಚಟುವಟಿಕೆಗಳನ್ನು ನಿಯಮಿತವಾಗಿ ಪರಿಶೀಲನೆ ನಡೆಸುವ ಸಲುವಾಗಿ “ಮುಖ್ಯ ಆಯುಕ್ತರ ನಡೆ ವಲಯದ ಕಡೆ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರ ಕುಂದು ಕೊರತೆಗಳ ಪರಿಶೀಲನೆ: ದಾಸರಹಳ್ಳಿ ವಲಯ ವ್ಯಾಪ್ತಿಯ ವಲಯ ಆಯುಕ್ತರ ಕಛೇರಿಯ ಸಭಾಂಗಣ ಕೊಠಡಿಯಲ್ಲಿ ನಾಳೆ ಮಧ್ಯಾಹ್ನ 3.00 ರಿಂದ ಸಂಜೆ 5.00 ರವರೆಗೆ ಸಾರ್ವಜನಿಕರ ಕುಂದು ಕೊರತೆಗಳನ್ನು ಮುಖ್ಯ ಆಯುಕ್ತರು ಖುದ್ದು ಆಲಿಸಲಿದ್ದಾರೆ. ಈ ವೇಳೆ ವಲಯ ಆಯುಕ್ತರು, ವಲಯ ಜಂಟಿ ಆಯುಕ್ತರು, ಮುಖ್ಯ ಅಭಿಯಂತರರು, ಪಾಲಿಕೆ, ಬೆಸ್ಕಾಂ, ಜಲಮಂಡಳಿ ಅಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿರಲಿದ್ದಾರೆ. BIG NEWS: ‘ಆಸ್ಪತ್ರೆಗಳಲ್ಲಿ ಸೇವಾ ಶುಲ್ಕ ಹೆಚ್ಚಳ’ದ ಬಗ್ಗೆ ಈ ಸ್ಪಷ್ಟನೆ ಕೊಟ್ಟ ‘ಸಚಿವ ದಿನೇಶ್ ಗುಂಡೂರಾವ್’ – Kannada News |…
ನವದೆಹಲಿ: ನರೇಂದ್ರ ಮೋದಿ ಸರ್ಕಾರವು ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಐದು ಹೊಸ ಮಸೂದೆಗಳನ್ನು ಪರಿಚಯಿಸಲು ಸಜ್ಜಾಗಿದೆ. ಇದರಲ್ಲಿ ಒಂದು ರಾಷ್ಟ್ರೀಯ ಭದ್ರತೆ ಮತ್ತು ವಾಣಿಜ್ಯ ಅಗತ್ಯಗಳಿಗಾಗಿ ಭಾರತೀಯ ಧ್ವಜ ಹಡಗುಗಳನ್ನು ಪ್ರೋತ್ಸಾಹಿಸುವುದು ಮತ್ತು ಇನ್ನೊಂದು ಭಾರತೀಯ ಬಂದರುಗಳ ಸಂರಕ್ಷಣೆ. ಈ ವರ್ಷದ ಆಗಸ್ಟ್ನಿಂದ ಪ್ರಸ್ತಾವಿತ ಶಾಸನವನ್ನು ಪರಿಶೀಲಿಸುತ್ತಿರುವ ಸಂಸತ್ತಿನ ಜಂಟಿ ಸಮಿತಿಯು ವರದಿಯನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸಲ್ಲಿಸಿದ ನಂತರ ವಕ್ಫ್ (ತಿದ್ದುಪಡಿ) ಮಸೂದೆ 2024 ಅನ್ನು ಅಂಗೀಕರಿಸಲು ಸರ್ಕಾರ ಯೋಜಿಸಿದೆ. ಬಾಕಿ ಇರುವ 13 ಮಸೂದೆಗಳು ಸೇರಿದಂತೆ ಒಟ್ಟು 18 ಮಸೂದೆಗಳು ಸರ್ಕಾರವು ಲೋಕಸಭೆ ಮತ್ತು ರಾಜ್ಯಸಭಾ ಸಚಿವಾಲಯಗಳಿಗೆ ಸಲ್ಲಿಸಿದ ಮಸೂದೆಗಳ ತಾತ್ಕಾಲಿಕ ಪಟ್ಟಿಯ ಭಾಗವಾಗಿದೆ ಎಂದು ಉಭಯ ಸದನಗಳ ಸಂಸತ್ತಿನ ಬುಲೆಟಿನ್ಗಳು ತಿಳಿಸಿವೆ. ಲೋಕಸಭೆಯಲ್ಲಿ 15 ಮಸೂದೆಗಳ ಪಟ್ಟಿ ಇದ್ದರೆ, ರಾಜ್ಯಸಭೆಯಲ್ಲಿ ಕೆಳಮನೆಗಿಂತ ಮೂರು ಮಸೂದೆಗಳು ಹೆಚ್ಚು. ಹೊಸ ಮಸೂದೆಗಳಲ್ಲಿ ಕರಾವಳಿ ಹಡಗು ಮಸೂದೆ, 2024 ಸೇರಿದೆ, ಇದು ಕರಾವಳಿ ವ್ಯಾಪಾರವನ್ನು ಉತ್ತೇಜಿಸಲು ಮತ್ತು ರಾಷ್ಟ್ರೀಯ ಭದ್ರತೆ…