Author: kannadanewsnow09

ಆಹಾರ ಸೇವನೆಯಲ್ಲೂ ಕೆಲವೊಂದು ನಿಯಮಗಳು ಇವೆ.ಈ 5 ಆಹಾರ ಪದ್ಧತಿಯನ್ನು ಪಾಲಿಸಿದರೆ ಮನೆಯಲ್ಲಿ ಬಡತನ ತಾಂಡವಾಡುತ್ತದೆ. ಭೀಷ್ಮರು ಅರ್ಜುನನಿಗೆ ಹೇಳಿದ ಆ 5 ಆಹಾರ ಗುಟ್ಟೇನು ಕೂದಲು ಬಿದ್ದ ಆಹಾರವನ್ನು ಸೇವಿಸಿದರೆ ಏನಾಗುತ್ತದೆ. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564 ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,ಭಾನಮತಿ ಕೃತಿಮ ವಶೀಕರಣ ಇನ್ನೂ ನಿಮ್ಮ ಜೀವನದ ಗುಪ್ತ ಘೋರ ನಿಗೂಢ ಸಮಸ್ಯೆಗಳಿಗೆ ಚೌಡಮ್ಮ ಪೂಜಾ…

Read More

ಬೆಂಗಳೂರು : ನೂರಾರು ವರ್ಷಗಳ ಹಿಂದೆಯೇ ದೂರದೃಷ್ಟಿ ಯಿಂದ ಬೆಂಗಳೂರು ಅಭಿವೃದ್ಧಿ ಗೆ ನೀಲ ನಕ್ಷೆ ರೂಪಿಸಿ ಅನುಷ್ಠಾನ ಗೊಳಿಸಿದ ಕೀರ್ತಿ ನಾಡ ಪ್ರಭು ಕೆಂಪೇಗೌಡರದು ಎಂದು ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ. ಚಾಮರಾಜಪೇಟೆಯ ಅಜಾದ್ ನಗರದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 515 ನೇ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರಿನತ್ತ ಇಡೀ ಜಗತ್ತು ನೋಡುತ್ತಿದ್ದರೆ ಅದಕ್ಕೆ ಕೆಂಪೇಗೌಡರು ಕಾರಣ ಎಂದು ತಿಳಿಸಿದರು. ನಾಡಪ್ರಭು ಕೆಂಪೇಗೌಡರು ಒಂದು ಜಾತಿಗೆ ಸೀಮಿತ ಅಲ್ಲ.ಎಲ್ಲ ಸಮುದಾಯಕ್ಕೆ ಸೇರಿದವರು ಎಂದು ಹೇಳಿದರು. ಕನಕ ಜಯಂತಿ, ವಾಲ್ಮೀಕಿ ಜಯಂತಿ, ಬಸವ ಜಯಂತಿಗೆ ಸರ್ಕಾರಿ ರಜೆ ನೀಡಿದಂತೆ ಕೆಂಪೇಗೌಡರ ಜಯಂತಿಗೂ ಸರ್ಕಾರಿ ರಜೆ ಘೋಷಿಸಬೇಕು. ಈ ಕುರಿತು ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಪತ್ರ ಬರೆಯುತ್ತೇನೆ ಎಂದು ತಿಳಿಸಿದರು. ಕೆ ಎಂ ಡಿಸಿ ಅಧ್ಯಕ್ಷ ಅಲ್ತಾಫ್ ಖಾನ್, ಮುಖಂಡರಾದ ಡಿಸಿ ರಮೇಶ್, ಬಿಟಿ ಶ್ರೀನಿವಾಸ ಮೂರ್ತಿ, ಅಪ್ಪೋಡ ಚಂದ್ರಶೇಖರ್, ಸೋಮಶೇಖರ್, ಗೋಪಾಲಣ್ಣ, ನಾರಾಯಣ, ಗೌಸಿ, ವಿನಾಯಕ್, ಸರ್ವರ್…

Read More

ಶಿವಮೊಗ್ಗ: ಜಿಲ್ಲೆಯ ಆಗುಂಬೆ ಘಾಟಿ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರವನ್ನು ಮಳೆಗಾಲದ ಹಿನ್ನಲೆಯಲ್ಲಿ ನಿಷೇಧ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಇಂದು ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಅಧಿಸೂಚನೆ ಹೊರಡಿಸಿದ್ದು, ರಾಷ್ಟ್ರೀಯ ಹೆದ್ದಾರಿ 169ಎ ತೀರ್ಥಹಳ್ಳಿ-ಮಲ್ಪೆ ರಸ್ತೆಯ ಆಗುಂಬೆ ಘಾಟಿಯಲ್ಲಿ ಭಾರೀ ಮಳೆಯಿಂದಾಗಿ ಮತ್ತು ಭಾರೀ ವಾಹನಗಳ ಓಡಾಟದಿಂದಾಗಿ ಅಲ್ಲಲ್ಲಿ ರಸ್ತೆ ಬದಿಯಲ್ಲಿ ಭೂಕುಸಿತ ಆಗುವ ಸಂಭವ ಇರುವುದರಿಂದ ದಿನಾಂಕ 27-06-2024ರ ಇಂದಿನಿಂದ ದಿನಾಂಕ 15-09-2024ರವರೆಗೆ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ ಅಂತ ತಿಳಿಸಿದ್ದಾರೆ. ಅಗುಂಬೆ ಘಾಟಿ ರಸ್ತೆಯಲ್ಲಿ ಭಾರೀ ವಾಹನ ಸಂಚಾರ ನಿಷೇಧಿಸಿರುವುದರಿಂದ ತಿರ್ಥಹಳ್ಳಿ ಟು ಉಡುಪಿಗೆ ತೆರಳುವಂತ ಭಾರೀ ವಾಹನಗಳು ತೀರ್ಥಹಳ್ಳಿ, ಮಾಸ್ತಿಕಟ್ಟೆ, ಸಿದ್ಧಾಪುರ, ಕುಂದಾಪುರ, ಉಡುಪಿಗೆ ತೆರಳುವುದು. ಉಡುಪಿಯಿಂದ ತೀರ್ಥಹಳ್ಳಿಗೆ ಉಡುಪಿ, ಕುಂದಾಪುರ, ಸಿದ್ಧಾಪುರ, ಮಾಸ್ತಿಕಟ್ಟೆ, ತೀರ್ಥಹಳ್ಳಿಗೆ ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ತಿಳಿಸಿದ್ದಾರೆ. ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು https://kannadanewsnow.com/kannada/jio-hikes-prepaid-tariffs-by-20/ https://kannadanewsnow.com/kannada/ramesh-babu-demands-judicial-probe-into-land-scam-against-r-ashoka/

Read More

ನವದೆಹಲಿ: ನೀಟ್ ವಿವಾದದ ಬಗ್ಗೆ ಸಂಸತ್ತಿನ ಉಭಯ ಸದನಗಳಲ್ಲಿ ಶುಕ್ರವಾರ ಮುಂದೂಡಿಕೆ ನಿರ್ಣಯಗಳನ್ನು ತರುವುದಾಗಿ ಪ್ರತಿಪಕ್ಷ ಎನ್ಡಿಎ ಮೈತ್ರಿಕೂಟ ಗುರುವಾರ ತಿಳಿಸಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ನಡೆದ ಎನ್ಡಿಎ ಮೈತ್ರಿಕೂಟ ಪಕ್ಷಗಳ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಧ್ಯಕ್ಷ ದ್ರೌಪದಿ ಮುರ್ಮು ಅವರ ಭಾಷಣದ ಮೇಲಿನ ಚರ್ಚೆಯಲ್ಲಿ ಪ್ರತಿಪಕ್ಷಗಳು ನೀಟ್, ಹಣದುಬ್ಬರ, ನಿರುದ್ಯೋಗ, ಸಿಬಿಐ, ಇಡಿ ಮತ್ತು ರಾಜ್ಯಪಾಲರ ಕಚೇರಿಯ ದುರುಪಯೋಗದ ಬಗ್ಗೆ ವಿಷಯಗಳನ್ನು ಎತ್ತಲಿವೆ. “ಇಂದು ನಡೆದ ಸಭೆಯಲ್ಲಿ ಹಲವಾರು ವಿಷಯಗಳ ಬಗ್ಗೆ ಚರ್ಚಿಸಲಾಯಿತು… ರಾಷ್ಟ್ರಪತಿಗಳ ಭಾಷಣವಾಗಲಿ ಅಥವಾ ಸ್ಪೀಕರ್ ಆಯ್ಕೆಯಾಗಲಿ ಸಂಸತ್ತಿನಲ್ಲಿ ಎಲ್ಲಾ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸಭೆಯ ನಂತರ ಹೇಳಿದರು. ನೀಟ್ ವಿಷಯದ ಬಗ್ಗೆ ನಾವು ನಾಳೆ ಸಂಸತ್ತಿನಲ್ಲಿ ನೋಟಿಸ್ ನೀಡುತ್ತೇವೆ ಎಂದು ಡಿಎಂಕೆ ಸಂಸದ ಟಿ ಶಿವ ಎಎನ್ಐಗೆ ತಿಳಿಸಿದರು. https://kannadanewsnow.com/kannada/jio-hikes-prepaid-tariffs-by-20/ https://kannadanewsnow.com/kannada/ramesh-babu-demands-judicial-probe-into-land-scam-against-r-ashoka/

Read More

ನವದೆಹಲಿ: ರಿಲಯನ್ಸ್ ಜಿಯೋ ಗುರುವಾರ ತನ್ನ ಪ್ರಿಪೇಯ್ಡ್ ಯೋಜನೆಗಳಲ್ಲಿ 20% ಸುಂಕ ಹೆಚ್ಚಳವನ್ನು ಘೋಷಿಸಿದೆ. ಎರಡೂವರೆ ವರ್ಷಗಳಲ್ಲಿ ಮೊದಲ ಬಾರಿಗೆ ಬೆಲೆ ಹೆಚ್ಚಳವಾಗಿದೆ. ಇತ್ತೀಚೆಗೆ ಮುಕ್ತಾಯಗೊಂಡ ಹರಾಜಿನಲ್ಲಿ ಜಿಯೋ 1800 ಮೆಗಾಹರ್ಟ್ಸ್ ಬ್ಯಾಂಡ್ನಲ್ಲಿ 14.4 ಮೆಗಾಹರ್ಟ್ಸ್ ಸ್ಪೆಕ್ಟ್ರಮ್ ಅನ್ನು 973 ಕೋಟಿ ರೂ.ಗೆ ಸ್ವಾಧೀನಪಡಿಸಿಕೊಂಡ ಒಂದು ದಿನದ ನಂತರ ಈ ಪ್ರಕಟಣೆ ಬಂದಿದೆ. ಒಟ್ಟಾರೆಯಾಗಿ ಜಿಯೋ ಪ್ರೀಪೆಯ್ಡ್ ಗ್ರಾಹಕರಿಗೆ ಬಿಗ್ ಶಾಕ್ ಎನ್ನುವಂತೆ ಟ್ಯಾರಿಫ್ ದರ ಶೇ.20ರಷ್ಟು ಹೆಚ್ಚಳವಾಗಲಿದ್ದು, ನಿಮ್ಮ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ ಎನ್ನುವಂತೆ ಆಗಿದೆ. ಹೊಸ ಪೋಸ್ಟ್ ಪೇಯ್ಡ್ ಯೋಜನೆಗಳು ಪೋಸ್ಟ್ ಪೇಯ್ಡ್ ಯೋಜನೆಗಳು ಸಹ ಹೆಚ್ಚು ದುಬಾರಿಯಾಗಿವೆ. 30 ಜಿಬಿ ಡೇಟಾವನ್ನು ಒದಗಿಸುತ್ತಿದ್ದ 299 ರೂ.ಗಳ ಯೋಜನೆಯ ಬೆಲೆ ಈಗ ಬಿಲ್ಲಿಂಗ್ ಚಕ್ರಕ್ಕೆ 349 ರೂ. 75 ಜಿಬಿ ಡೇಟಾದೊಂದಿಗೆ 399 ರೂ.ಗಳ ಯೋಜನೆಯ ಬೆಲೆ ಈಗ 449 ರೂ. ಜಿಯೋ ಎರಡು ಹೊಸ ಅಪ್ಲಿಕೇಶನ್ಗಳನ್ನು ಸಹ ಪ್ರಾರಂಭಿಸುತ್ತಿದೆ: ಜಿಯೋಸೇಫ್: ಕರೆ, ಮೆಸೇಜಿಂಗ್ ಮತ್ತು ಫೈಲ್…

Read More

ದಕ್ಷಿಣ ಕನ್ನಡ: ಜಿಲ್ಲೆಯಲ್ಲಿ ಇಂದು ಭಾರೀ ಮಳೆಯಾಗಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಹಿನ್ನಲೆಯಲ್ಲಿ ಇಂದು ದಕ್ಷಿಣ ಕನ್ನಡ ಜಿಲ್ಲೆಯಾಧ್ಯಂತ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಇದೀಗ ನಾಳೆಯೂ ಮಳೆಯ ಹಿನ್ನಲೆಯಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಈ ಸಂಬಂಧ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಆದೇಶ ಹೊರಡಿಸಿದ್ದು, ಹವಾಮಾನ ಇಲಾಖೆಯಿಂದ ನಾಳೆಯೂ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಈ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ನಾಳೆಯೂ ರಜೆ ಘೋಷಣೆ ಮಾಡಿರೋದಾಗಿ ತಿಳಿಸಿದ್ದಾರೆ. ಇಂದು ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯ ಎರಡು ತಾಲೂಕುಗಳಿಗೆ ಭಾರೀ ಮಳೆಯ ಹಿನ್ನಲೆಯಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಈಗ ನಾಳೆಯೂ ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಿಗೆ ಡಿಸಿ ರಜೆ ಘೋಷಣೆ ಮಾಡಿ ಆದೇಶಿಸಿದ್ದಾರೆ. https://kannadanewsnow.com/kannada/ramesh-babu-demands-judicial-probe-into-land-scam-against-r-ashoka/ https://kannadanewsnow.com/kannada/emergency-proposal-could-have-been-avoided-rahul-gandhi-meets-lok-sabha-speaker/

Read More

ಯರಗಟ್ಟಿ : ಅಂಗನವಾಡಿಗಳಿಗೆ ಕಳಪೆ ಗುಣಮಟ್ಟದ ಪೂರಕ ಆಹಾರ ಉತ್ಪನ್ನಗಳು ಪೂರೈಕೆಯಾದರೆ ಸಂಬಂಧಿಸಿದ ಜಿಲ್ಲೆಯ ಉಪನಿರ್ದೇಶಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮಹಿಳಾ ಮತ್ತು ಮಕ್ಕಳ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಎಚ್ಚರಿಕೆ ನೀಡಿದ್ದಾರೆ. ಬೆಳಗಾವಿ ಜಿಲ್ಲೆ ಯರಗಟ್ಟಿಯಲ್ಲಿ ಗುರುವಾರ ಮಹಿಳಾ ಮತ್ತು ಮಕ್ಕಳ ಪೌಷ್ಠಿಕ ಆಹಾರ ತಯಾರಿಕಾ ಘಟಕಕ್ಕೆ ಭೇಟಿ ನೀಡಿ ಅವರು ಮಾತನಾಡಿದರು. ಯಾವುದೇ ಉತ್ಪನ್ನ ಕಳಪೆ ಗುಣಮಟ್ಟದ್ದಿದ್ದರೆ ಎಂಎಸ್ ಪಿಸಿಯವರೇ ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಬೇಕು. ಅಂಗನವಾಡಿ ಮಕ್ಕಳು ಸ್ವಂತ ಮಕ್ಕಳು ಎಂದು ತಿಳಿದು ಉತ್ತಮ ಗುಣಮಟ್ಟದ ಪೂರಕ ಆಹಾರಗಳನ್ನು ಒದಗಿಸಬೇಕು. ಕಳಪೆ ಆಹಾರಗಳ ಪೂರೈಕೆಯನ್ನು ಯಾವುದೇ ಕಾರಣದಿಂದ ಸಹಿಸಲು ಸಾಧ್ಯವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ಸ್ಥಳೀಯ ಮಟ್ಟದಲ್ಲಿ ತಪ್ಪುಗಳಾದರೆ ಅದು ಮೇಲ್ಮಟ್ಟದವರೆಗೆ ಎಲ್ಲರಿಗೂ ಕೆಟ್ಟ ಹೆಸರು ತರುತ್ತದೆ. ಮಕ್ಕಳ ಹಾಗೂ ಮಹಿಳಾಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಗುಣಮಟ್ಟಕ್ಕೆ ಅತೀ ಹೆಚ್ಚು ಆದ್ಯತೆ ನೀಡಬೇಕು. ಘಟಕದ ಪ್ರತಿಯೊಂದು ಉತ್ಪನ್ನಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಸಚಿವರು, ಯಾವುದಾದರೂ ಕಳಪೆ ಎಂದು…

Read More

ದಕ್ಷಿಣ ಕನ್ನಡ: ಜಿಲ್ಲೆಯಲ್ಲಿ ಮಳೆಯಿಂದಾಗಿ ಮತ್ತೊಂದು ಬಲಿಯಾಗಿದೆ. ಕಂಬವನ್ನು ಮುಟ್ಟಿದ ಪರಿಣಾಮ, ವಿದ್ಯುತ್ ಪ್ರವಹಿಸಿ ಯುವತಿಯೊಬ್ಬಳು ದುರ್ಮರಣ ಹೊಂದಿರೋದಾಗಿ ತಿಳಿದು ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಬಾಜೆಯಲ್ಲಿ ಮಳೆಗೆ ಬರ್ಗುಲಾ ನಿವಾಸಿ ಪ್ರತೀಕ್ಷಾ ಶೆಟ್ಟಿ(20) ಸಾವನ್ನಪ್ಪಿದ್ದಾರೆ. ಈ ಮೂಲಕ ಕರಾವಳಿಯಲ್ಲಿ ಮಳೆಯಿಂದಾಗಿ ಇದು ಎರಡನೇ ಬಲಿಯಾಗಿದೆ. ಮನೆಯಿಂದ ಪಾರ್ಸಲ್ ತೆಗೆದುಕೊಂಡು ಬರೋದಕ್ಕೆ ಹೊರ ಬಂದಿದ್ದಂತ ಪ್ರತೀಕ್ಷಾ ಶೆಟ್ಟಿ, ಮನೆ ಬಳಿಯ ಕಂಬವನ್ನು ಟಚ್ ಮಾಡಿದ್ದರಿಂದ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ. https://kannadanewsnow.com/kannada/ramesh-babu-demands-judicial-probe-into-land-scam-against-r-ashoka/ https://kannadanewsnow.com/kannada/emergency-proposal-could-have-been-avoided-rahul-gandhi-meets-lok-sabha-speaker/

Read More

ಬೆಂಗಳೂರು : “ಕೆಂಪೇಗೌಡರು ಒಕ್ಕಲಿಗರಾದರೂ ಅವರನ್ನು ಒಂದು ಜಾತಿಗೆ ಸೀಮಿತ ಮಾಡಬಾರದು. ವಿಶ್ವಮಾನ್ಯ ಬೆಂಗಳೂರನ್ನು ಕಟ್ಟಿದ ಅವರು ಎಲ್ಲಾ ಜಾತಿ, ಧರ್ಮಕ್ಕೂ ನಾಡಪ್ರಭುಗಳಾಗಿದ್ದಾರೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಅಭಿಪ್ರಾಯಪಟ್ಟರು. ಕಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ನಡೆದ ನಾಡಪ್ರಭು ಕೆಂಪೇಗೌಡರ 515 ನೇ ಜಯಂತ್ಯೋತ್ಸವದಲ್ಲಿ ಮಾತನಾಡಿದ ಅವರು ಹೇಳಿದ್ದಿಷ್ಟು; “ನಾಡಪ್ರಭುಗಳ ಹೆಸರನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ. ಶಿಕ್ಷಣ ಇಲಾಖೆಯಿಂದ ಎಲ್ಲಾ ಶಾಲೆಗಳಲ್ಲಿ ಕೆಂಪೇಗೌಡರ ಬಗ್ಗೆ ಚರ್ಚಾ ಸ್ಪರ್ಧೆ ನಡೆಸಲು ಹಾಗೂ ತಿಳುವಳಿಕೆ ನೀಡಲು ಪ್ರತಿ ತಾಲ್ಲೂಕಿಗೆ ಬಿಬಿಎಂಪಿಯಿಂದ ತಲಾ 1 ಲಕ್ಷ ಹಣ ಬಿಡುಗಡೆ ಮಾಡಲಾಗಿದೆ. ಯಾವ ರೀತಿ ಕಾರ್ಯಕ್ರಮ ರೂಪಿಸಬೇಕು ಎಂದು ಪ್ರಧಾನ ಕಾರ್ಯದರ್ಶಿಗಳು ಮುಂದಿನ ದಿನಗಳಲ್ಲಿ ತಿಳಿಸಲಿದ್ದಾರೆ.” “ಸರ್ಕಾರದಿಂದ ಸುಮಾರು 25 ಕ್ಕೂ ಹೆಚ್ಚು ಜಯಂತಿಗಳನ್ನು ಆಚರಿಸಲಾಗುತ್ತದೆ. ಈಗ ನೀಡುತ್ತಿರುವ ಹಣ ಕಡಿಮೆಯಾಗುತ್ತಿದ್ದು ಆದ ಕಾರಣ ನಾಡಪ್ರಭುಗಳ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲು ಪ್ರತಿ ತಾಲ್ಲೂಕು ಮಟ್ಟಕ್ಕೂ ಬಿಬಿಎಂಪಿಯಿಂದ 1 ಲಕ್ಷ ರೂಪಾಯಿ ನೀಡಲು ಸೂಚನೆ ನೀಡಲಾಗಿದೆ.” ನಾಡಪ್ರಭು…

Read More

ಬೆಂಗಳೂರು: ನಂದಿನಿ ಹಾಲಿನ ದರ ಏರಿಕೆ ವಿಚಾರದಲ್ಲಿ ಆಡಳಿತಾರೂಢ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ವಾಕ್ಸಮರ ತಾರಕಕ್ಕೇರಿದೆ. ಗ್ಯಾರೆಂಟಿ ಯೋಜನೆ ಹಿನ್ನೆಲೆಯಲ್ಲಿ ಆದಾಯ ಕ್ರೋಡೀಕರಣಕ್ಕೆ ಹರಸಾಹಸಪಡುತ್ತಿರುವ ಕಾಂಗ್ರೆಸ್ ಸರ್ಕಾರ ಪೆಟ್ರೋಲ್-ಡೀಸೆಲ್ ದರ ಏರಿಕೆ ಮಾಡಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ. ಅದೇ ಹೊತ್ತಿಗೆ ಸರ್ಕಾರಿ ಸ್ವಾಮ್ಯದ KMF ಕೂಡಾ ಹಾಲಿನ ದರ ಏರಿಕೆ ಮಾಡಿ ವಿವಾದಕ್ಕೆ ಗುರಿಯಾಗಿದೆ. ಪೆಟ್ರೋಲ್ ದರ ಏರಿಕೆ ಖಂಡಿಸಿ ಪ್ರತಿಪಕ್ಷಗಳು ಹೋರಾಟದ ಅಖಾಡದಲ್ಲಿರುವಾಗಲೇ ಹಾಲಿನ ದರ ಏರಿಕೆಯಾಗಿದ್ದು ಸರ್ಕಾರದ ಕ್ರಮವನ್ನು ಬಿಜೆಪಿ ನಾಯಕರು ಖಂಡಿಸಿದ್ದಾರೆ. ಇದಕ್ಕೆ ಸಮಜಾಯಿಷಿ ನೀಡಿರುವ ಸಿಎಂ ಸಿದ್ದರಾಮಯ್ಯ, ಹಾಲಿನ ದರ ಏರಿಕೆಯಾಗಿಲ್ಲ, ಹಾಲಿನ ಪ್ರಮಾಣವಷ್ಟೇ ಹೆಚ್ಚಳವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, ಹಾಲಿನ ದರ ಏರಿಕೆಯು ಬಿಜೆಪಿ ನಾಯಕರ ತೀರ್ಮಾನವಾಗಿದೆ ಎಂದು ಕಾಂಗ್ರೆಸ್ ನಾಯಕ ರಮೇಶ್ ಬಾಬು ಹೊಸ ಬಾಂಬ್ ಸಿಡಿಸಿದ್ದಾರೆ. ರಾಜ್ಯದ ಹಾಲು ಉತ್ಪಾದಕರ ಒಕ್ಕೂಟದಲ್ಲಿ (ಕೆಎಂಎಫ್) ಬಿಜೆಪಿ ನಾಯಕರು ನಿರ್ದೇಶಕರಿದ್ದಾರೆ. ಬಿಜೆಪಿ ನಾಯಕರಿರುವ ನಿರ್ದೇಶಕರ ಮಂಡಳಿಯೇ ಹಾಲಿನವದರ ಏರಿಕೆಯ ತೀರ್ಮಾನ…

Read More