Author: kannadanewsnow09

ಬೆಳಗಾವಿ: ಸದನಕ್ಕೆ ರಾಜ್ಯಾದ್ಯಂತ ಬಗರ್ ಹುಕುಂ ಅರ್ಜಿಗಳ ತಿರಸ್ಕೃತಕ್ಕೆ ಕಾರಣವೇನು? ಎಂಬ ಕುರಿತು ಸದನಕ್ಕೆ ಮಾಹಿತಿ ನೀಡಿದ ಸಚಿವ ಕೃಷ್ಣ ಬೈರೇಗೌಡ ಅವರು, ” ಬಗರ್ ಹುಕುಂ ಅಡಿ ಅರ್ಜಿ ಸಲ್ಲಿಸಲು ಕನಿಷ್ಟ 18 ವರ್ಷವಾಗಿರಬೇಕು. ಆದರೆ, 7000 ಅರ್ಜಿದಾರರಿಗೆ 18 ವರ್ಷ ಆಗೇ ಇಲ್ಲ. 3273 ಜನ ಅರ್ಜಿದಾರರು ಕೃಷಿಕರೇ ಅಲ್ಲ. ಸ್ಮಶಾನ, ರಸ್ತೆ, ಕೆರೆ, ಗುಂಡುತೋಪು ಮಂಜೂರಾತಿ ಕೋರಿ 27,452 ಜನ ಅರ್ಜಿ ಸಲ್ಲಿಸಿದ್ದಾರೆ. ನಗರ ವ್ಯಾಪ್ತಿಯಲ್ಲಿ 33,000 ಜನ ಅರ್ಜಿ ಸಲ್ಲಿಸಿದ್ದರೆ, 12,283 ಅರ್ಜಿಗಳು ಸಲ್ಲಿಕೆಯಾಗಿವೆ. ಇನ್ನೂ ಕುಟುಂಬದಲ್ಲಿ 5 ಜಮೀನು ಇದ್ದರೂ ಸಹ ಸಾವಿರಾರು ಜನ ಅರ್ಜಿ ಸಲ್ಲಿಸಿದ್ದಾರೆ. ಇಂತಹ ಅರ್ಜಿಯನ್ನಷ್ಟೇ ತಿರಸ್ಕೃತಗೊಳಿಸಲಾಗಿದೆಯೇ ವಿನಃ ಕಾನೂನು ರೀತ್ಯಾ ಅರ್ಹ ಅರ್ಜಿಗಳನ್ನು ತಿರಸ್ಕೃತಗೊಳಿಸಲಾಗಿಲ್ಲ. ಒಂದು ವೇಳೆ ಕಣ್ತಪ್ಪಿನಿಂದ ಹಾಗೆ ಆದಲ್ಲಿ ಉಪ ವಿಭಾಗಾಧಿಕಾರಿಗಳ ಕೋರ್ಟ್‌ನಲ್ಲಿ ದಾವೆ ಹೂಡಬಹುದು. ಅಥವಾ ನನ್ನ ಗಮನಕ್ಕೆ ತಂದರೆ ಕೂಡಲೇ ಕ್ರಮವಹಿಸಲಾಗುವುದು” ಎಂದು ಅವರು ಆಶ್ವಾಸನೆ ನೀಡಿದರು. Good News : ‘ಬಿಮಾ ಸಖಿ…

Read More

ಬೆಳಗಾವಿ : ರೈತರಿಗಾಗುತ್ತಿರುವ ಶೋಷಣೆಗಳನ್ನು ತಪ್ಪಿಸುವ ಸಲುವಾಗಿ ಜನವರಿ.01 ರಿಂದ ಈವರೆಗಿನ ಎಲ್ ಭೂ-ಮಂಜೂರು ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಿಸಲು ಕ್ರಮವಹಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸದನಕ್ಕೆ ಮಾಹಿತಿ ನೀಡಿದರು. ಸೋಮವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ್ದ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ಬಗರ್ ಹುಕುಂ ಯೋಜನೆ ಅಡಿಯಲ್ಲಿ 1999 ರಿಂದ 2004ರ ಅವಧಿಯಲ್ಲಿ ಜಮೀನು ಮಂಜೂರು ಮಾಡಲಾಗಿದ್ದರೂ ಸಾಗುವಳಿ ಚೀಟಿ ನೀಡಿಲ್ಲ, ಕೆಲವರಿಗೆ ಸಾಗುವಳಿ ಚೀಟಿ ನೀಡಿದ್ದರೂ ಖಾತೆ ನೀಡಿಲ್ಲ. ಅಲ್ಲದೆ, ಈ ವರ್ಷ ಬಗರ್ ಹುಕುಂ ಅಡಿಯಲ್ಲಿ ಸಾವಿರಾರು ರೈತರ ಅರ್ಜಿಗಳನ್ನೇ ವಜಾ ಮಾಡಲಾಗಿದೆ. ಪರಿಣಾಮ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ” ಎಂದರು. ಶಾಸಕ ಧೀರಜ್ ಮುನಿರಾಜು ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವ ಕೃಷ್ಣ ಬೈರೇಗೌಡ ಅವರು, “ಈ ಹಿಂದೆ ನಮೂನೆ 50-53 ರ ಅಡಿ ಭೂ ಮಂಜೂರು ಪಡೆಯದವರೂ ಸಹ ನಕಲಿ ದಾಖಲೆ ಸೃಷ್ಟಿ ಮಾಡಿದ್ದಾರೆ. ಕೆಲವರು ದಾಖಲೆ ಬಚ್ಚಿಟ್ಟು ರೈತರಿಗೆ ಸಮಸ್ಯೆ ನೀಡುತ್ತಿದ್ದಾರೆ. ಬಗರ್‌…

Read More

ಬೆಂಗಳೂರು: ಇತ್ತೀಚಿಗೆ ಕೆಲವು ಕಂಪನಿಗಳು ತಮ್ಮ ಹೂಡಿಕೆಯ ಶೇ.100ರಷ್ಟು ಮತ್ತು ಅದಕ್ಕಿಂತಲೂ ಹೆಚ್ಚು ಪ್ರಮಾಣದ ಸಬ್ಸಿಡಿ ಕೇಳುತ್ತಿವೆ. ಆದರೆ ಹೀಗೆ ಸಬ್ಸಿಡಿ ಕೊಡುವುದು ಕಾರ್ಯಸಾಧುವಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಸೋಮವಾರ ಹೇಳಿದ್ದಾರೆ. ರಾಜ್ಯ ಸರಕಾರವು ಖಾಸಗಿ ಹೂಡಿಕೆದಾರರಿಗೆ ಆಗಬಹುದಾದ ಅಪಾಯವನ್ನು ಕಡಿಮೆ ಮಾಡಲೆಂದು ಮತ್ತು ಯೋಜನೆಯ ಆರ್ಥಿಕ ಕಾರ್ಯಸಾಧ್ಯತೆಯನ್ನು ಹೆಚ್ಚಿಸುವ ಉದ್ದೇಶಗಳಿಂದ ಮಾತ್ರ ಸಬ್ಸಿಡಿ ಕೊಡುತ್ತದೆ. ಯೋಜಿತ ಹೂಡಿಕೆಗಿಂತ ಹೆಚ್ಚು ಸಬ್ಸಿಡಿ ಕೊಡುತ್ತ ಹೋದರೆ ಕೈಗಾರಿಕಾ ಯೋಜನೆಗಳ ಆರ್ಥಿಕ ಕಾರ್ಯಸಾಧ್ಯತೆಯ ಬಗ್ಗೆಯೇ ಪ್ರಶ್ನೆಗಳು ಏಳುತ್ತವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ರಾಜ್ಯ ಸರಕಾರವು ಕೈಗಾರಿಕಾಸ್ನೇಹಿ ವಾತಾವರಣ ಸೃಷ್ಟಿಸಲು ಆದ್ಯತೆ ಕೊಟ್ಟಿದ್ದು, ಖಾಸಗಿ ಉದ್ದಿಮೆಗಳನ್ನು ಮುಕ್ತವಾಗಿ ಸ್ವಾಗತಿಸಲಾಗುತ್ತಿದೆ. ಈ ಮೂಲಕ ಕರ್ನಾಟಕವು ನಾವೀನ್ಯತೆ ಮತ್ತು ಅವಕಾಶಗಳ ಆಡುಂಬೊಲವಾಗಿ ಇರುವಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ. ಸರಕಾರ ಎಂದಮೇಲೆ ಎಲ್ಲವೂ ತೆರಿಗೆದಾರರ ಹಣವನ್ನೇ ಅವಲಂಬಿಸಿ ನಡೆಯುತ್ತದೆ. ಅವರ ಸಂಪನ್ಮೂಲಗಳ ಹಿತವನ್ನೂ ಕಾಯಬೇಕಾದ್ದು ನಮ್ಮ‌ ಕೆಲಸವಾಗಿದೆ. ರಾಜ್ಯಕ್ಕೆ ದೀರ್ಘಾವಧಿ…

Read More

ಬೆಳಗಾವಿ: ಪರಮಪೂಜ್ಯ ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಭೇಟಿ ಮಾಡಿದ್ದೇವೆ. ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಸ್ವಾಮೀಜಿಗಳಿಗೆ ತಿಳಿಸಿದ್ದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತಿಳಿಸಿದರು. ಬೆಳಗಾವಿಯಲ್ಲಿ ಇಂದು ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಸ್ವಾಮೀಜಿ ಅವರ ಭೇಟಿ ವೇಳೆ ಪಕ್ಷದ ಹಿರಿಯ ಮುಖಂಡರು ಮತ್ತು ಮಾಜಿ ಸಚಿವ ಸಿ.ಸಿ.ಪಾಟೀಲ್, ಮಾಜಿ ಡಿಸಿಎಂ ಡಾ.ಅಶ್ವತ್ಥನಾರಾಯಣ್, ಶೈಲೇಂದ್ರ ಬೆಲ್ದಾಳೆ, ಶರಣು ಸಲಗರ್, ಪಕ್ಷದ ಎಲ್ಲ ಮುಖಂಡರು ಇದ್ದರು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಸ್ವಾಮೀಜಿಗಳಲ್ಲಿ ಮತ್ತೊಂದು ಮನವಿ ಮಾಡಿದ್ದೇನೆ. ಕೆಲವು ವೈಯಕ್ತಿಕ ಕಾರಣಕ್ಕೆ ಪಂಚಮಸಾಲಿ ಹೋರಾಟಕ್ಕೆ ಹಿಂದಿನ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರ ಬೆಂಬಲ ಇಲ್ಲ ಎಂದು ಬಿಂಬಿಸುವ ಪ್ರಯತ್ನ ನಿರಂತರವಾಗಿ ಮಾಡಿಕೊಂಡು ಬಂದಿದ್ದಾರೆ ಎಂದು ವಿವರಿಸಿದರು. ಹಿಂದೆ ಬಿಜೆಪಿ ಸರಕಾರ ಇದ್ದಾಗ ಸನ್ಮಾನ್ಯ ಯಡಿಯೂರಪ್ಪನವರು ಮುಖ್ಯಮಂತ್ರಿಗಳಿದ್ದಾಗ, ಪಂಚಮಸಾಲಿ ಸಮಾಜಕ್ಕೆ 3 ಬಿ ಕೊಡಲಾಗಿತ್ತು. 3 ಬಿ ಕೊಟ್ಟ ಕಾರಣದಿಂದಲೇ…

Read More

ರಾಜಸ್ಥಾನ: ಇಲ್ಲಿನ ದೌಸಾ ಜಿಲ್ಲೆಯಿಂದ ಒಂದು ದೊಡ್ಡ ಸುದ್ದಿ ಹೊರಬರುತ್ತಿದೆ. ನಂಗಲ್ ರಾಜ್ವತನ್ ಪೊಲೀಸ್ ಠಾಣೆ ವ್ಯಾಪ್ತಿಯ ಕಾಲಿಖಡ್ ಗ್ರಾಮದಲ್ಲಿ ಐದು ವರ್ಷದ ಬಾಲಕ 150 ಅಡಿ ಆಳದ ಕೊಳವೆಬಾವಿಗೆ ಬಿದ್ದಿದ್ದಾನೆ. ಮಗುವಿನ ರಕ್ಷಣೆಗಾಗಿ ಎಸ್ಡಿಆರ್ಎಫ್ ಮತ್ತು ಎನ್ಡಿಆರ್ಎಫ್ ತಂಡಗಳನ್ನು ಸಹ ಕರೆಯಲಾಗಿದೆ. ಉನ್ನತ ಪೊಲೀಸ್ ಮತ್ತು ಆಡಳಿತ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದಾರೆ. ಬೋರ್ವೆಲ್ ಒಳಗೆ ಆಮ್ಲಜನಕ ಪೂರೈಕೆಯನ್ನು ಪ್ರಾರಂಭಿಸಲಾಗಿದೆ. ದೌಸಾ ಜಿಲ್ಲೆಯ ನಂಗಲ್ ರಾಜ್ವತನ್ ಪೊಲೀಸ್ ಠಾಣೆ ವ್ಯಾಪ್ತಿಯ ಕಾಲಿಖಂಡ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಾಹಿತಿಯ ಪ್ರಕಾರ, ಗ್ರಾಮದಲ್ಲಿ ವಾಸಿಸುವ ಐದು ವರ್ಷದ ಮಗು ಆರ್ಯನ್ ಕೊಳವೆಬಾವಿಗೆ ಬಿದ್ದಿದ್ದಾನೆ. ಮಗು ಕೊಳವೆಬಾವಿಗೆ ಬಿದ್ದ ಸುದ್ದಿ ಗ್ರಾಮದಲ್ಲಿ ಹರಡುತ್ತಿದ್ದಂತೆಯೇ ಗ್ರಾಮದಲ್ಲಿ ಕೋಲಾಹಲ ಉಂಟಾಯಿತು. ಕುಟುಂಬದ ಗೋಳಾಟ ಮುಗಿಲು ಮುಟ್ಟಿದೆ. ಎನ್ಡಿಆರ್ಎಫ್-ಎಸ್ಡಿಆರ್ಎಫ್ ರಕ್ಷಣಾ ಕಾರ್ಯದಲ್ಲಿ ತೊಡಗಿದೆ ಏತನ್ಮಧ್ಯೆ, ಗ್ರಾಮದ ಜನರು ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಮಾಹಿತಿ ಪಡೆದ ಕೂಡಲೇ ಪೊಲೀಸ್ ತಂಡ ಸ್ಥಳಕ್ಕೆ ತಲುಪಿ ಘಟನೆಯ…

Read More

ಬೆಂಗಳೂರು: :  ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್ಮೆಂಟ್, ಬೆಂಗಳೂರು ಸಹಕಾರ ತರಬೇತಿ ಸಂಸ್ಥೆ ವತಿಯಿಂದ ದಿನಾಂಕ: 01-01-2025 ರಿಂದ 6 ತಿಂಗಳ ಅವಧಿಯ “ರೆಗ್ಯೂಲರ್ ಡಿಪ್ಲೊಮಾ ಇನ್ ಕೋ ಆಪರೇಟಿವ್ ಮ್ಯಾನೇಜ್ ಮೆಂಟ್ ತರಬೇತಿಯನ್ನು ಪ್ರಾರಂಭಿಸಲಾಗುತ್ತಿದ್ದು ತರಬೇತಿ ಪಡೆಯಲು ಬೆಂಗಳೂರು ನಗರ. ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಮತ್ತು ರಾಮನಗರ ಜಿಲ್ಲೆಗಳ ಖಾಸಗಿ ಆಭ್ಯರ್ಥಿಗಳಿಂದ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರುದ್ಯೋಗಿ ಅಭ್ಯರ್ಥಿಗಳಿಂದ ಮತ್ತು ವಿವಿಧ ಸಹಕಾರ ಸಂಘ/ಬ್ಯಾಂಕ್ಗಳ ಉದ್ಯೋಗಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಕನಿಷ್ಠ ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಆಸಕ್ತಿಯುಳ್ಳ ಎಲ್ಲಾ ಅಭ್ಯರ್ಥಿಗಳು ಪ್ರವೇಶ ಪಡೆಯಲು ಅವಕಾಶವಿರುತ್ತದೆ. ವಯೋಮಿತಿ 16 ವರ್ಷ ದಾಟಿದವರಾಗಿರಬೇಕು. ಅರ್ಜಿಗಳನ್ನು ಬೆಂಗಳೂರು ನಗರ, ರಾಮನಗರ, ಕೋಲಾರ, ಚಿಕ್ಕಬಳ್ಳಾಮರ, ತುಮಕೂರು, ಬೆಂಗಳೂರು ಗ್ರಾಮಾಂತರ ಈ ಜಿಲ್ಲೆಯ ಜಿಲ್ಲಾ ಸಹಕಾರ ಯೂನಿಯನ್್, ಗ ಳಲ್ಲಿ ಹಾಗೂ ಸಹಕಾರ ಭವನ, ಬೆಂಗಳೂರು ನಗರ ಜಿಲ್ಲಾ ಸಹಕಾರ ಒಕ್ಕೂಟದ ಕಟ್ಟಡ, ನಂ 1/3, 2ನೇ…

Read More

ಬೆಂಗಳೂರು:  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್ ನ ಸಹಯೋಗದಲ್ಲಿ ನಡೆಸುತ್ತಿರುವ ರುಡ್ ಸೆಟ್ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿರುವ ಟಿವಿ ರಿಪೇರಿ ಕುರಿತ 30 ದಿನಗಳ ಉಚಿತ ತರಬೇತಿಯು ಡಿಸೆಂಬರ್ 18 ರಿಂದ ಪ್ರಾರಂಭವಾಗಲಿದ್ದು, ಗ್ರಾಮೀಣ ಆಸಕ್ತ ನಿರುದ್ಯೋಗಿ ಯುವಕ –ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಟಿವಿ ಟೆಕ್ನಿಷಿಯನ್ ತರಬೇತಿಯಲ್ಲಿ ಬೇಸಿಕ್‌ನಿಂದ ಅತ್ಯಧಿಕ ತಂತ್ರಜ್ಞಾನದವರೆಗೆ ತರಬೇತಿ ನೀಡಲಾಗುವುದು. ಥಿಯರಿ ಜೊತೆಯಲ್ಲಿ ಪ್ರಾಕ್ಟಿಕಲ್ ತರಬೇತಿಯನ್ನು ಸಹ ನೀಡಲಾಗುವುದು. ಇದರಲ್ಲಿ ಇಲೆಕ್ಟ್ರಾನಿಕ್ ಸ್ಪೇರ್ ಪಾರ್ಟ್ಸ್, ಕಲರ್ ಟಿವಿ, ಆಂಡ್ರಾಯ್ಡ್, ಸ್ಮಾರ್ಟ್, 4K, ಟಿವಿ LED ಮತ್ತು LCD ಟಿವಿ ಯಾ ಮದರ್ ಬೋರ್ಡ್, ಸಾಫ್ಟ್ ವೇರ್ ಪವರ್ ಸಪ್ಲೈ ಜೊತೆಯಲ್ಲಿ ಆಡಿಯೋ ಸಿಸ್ಟಮ್ ರಿಪೇರಿ, ಎಲ್ಲಾ ಕಂಪನಿಯ ಡಿಟಿಹೆಚ್ ಅಳವಡಿಕೆ ಮತ್ತು ಎಲೆಕ್ಟ್ರಾನಿಕ್ ವಸ್ತುಗಳ ರಿಪೇರಿ ಸಹ ಇರುತ್ತದೆ. ಆಸಕ್ತರು 18 ರಿಂದ 45 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಬಿಪಿಎಲ್‌ ಕಾರ್ಡ್‌ ಅಥವಾ ಜಾಬ್‌…

Read More

ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಅತಿಥಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವಂತ ಶಿಕ್ಷಕರಿಗೆ ಗುಡ್ ನ್ಯೂಸ್ ಅನ್ನು ಸಚಿವ ಮಧು ಬಂಗಾರಪ್ಪ ನೀಡಿದ್ದಾರೆ. ಆರ್ಥಿಕ ಇಲಾಖೆಯ ಅನುಮೋದನೆ ಪಡೆದು ಅತಿಥಿ ಶಿಕ್ಷಕರ ಮಾಸಿಕ ಗೌರವಧನ ಹೆಚ್ಚಳ ಮಾಡುವುದಾಗಿ ಘೋಷಿಸಿದ್ದಾರೆ. ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರಿಗೆ ಪ್ರಸ್ತುತ ನೀಡಲಾಗುತ್ತಿರುವ ಮಾಸಿಕ ಗೌರವಧನ ಮೊತ್ತವನ್ನು ಆರ್ಥಿಕ ಇಲಾಖೆಯ ಅನುಮೋದನೆ ಪಡೆದು ಹೆಚ್ಚಳ ಮಾಡಲಾಗುವುದು. ಅತಿಥಿ ಶಿಕ್ಷಕರು / ಉಪನ್ಯಾಸಕರ ಬದಲಾಗಿ ಅರೆಕಾಲಿಕ ಶಿಕ್ಷಕರ ನೇಮಕ ಮಾಡುವ ಪ್ರಸ್ತಾವನೆ ಇರುವುದಿಲ್ಲ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಬೆಳಗಾವಿಯ ಚಳಿಗಾಲದ ವಿಧಾನ ಮಂಡಲ ಅಧಿವೇಶನದಲ್ಲಿ ತಿಳಿಸಿದರು. ಪ್ರೌಢಶಾಲಾ ಸಹ ಶಿಕ್ಷಕರಿಗೆ ಬಡ್ತಿ 2025 ಫೆಬ್ರವರಿ ಅಂತ್ಯದೊಳಗೆ ಪೂರ್ಣ: ಸಚಿವ ಎಸ್.ಮಧು ಬಂಗಾರಪ್ಪ ಬೆಳಗಾವಿ ಸುವರ್ಣವಿಧಾನಸೌಧ : ಶಾಲಾ ಶಿಕ್ಷಣ ಇಲಾಖೆಯಿಂದ ರಾಜ್ಯಮಟ್ಟದ ಪ್ರೌಢಶಾಲಾ ಸಹ ಶಿಕ್ಷಕರ ಒಂದೇ ಜೇಷ್ಠತಾ ಪಟ್ಟಿ ಸಿದ್ದಪಡಿಸಿ,…

Read More

ಮಡಿಕೇರಿ : ಮೂರ್ನಾಡು 33/11 ಕೆ.ವಿ ಉಪ ಕೇಂದ್ರದಿಂದ ಹೊರಹೊಮ್ಮುವ ಎಫ್.ಎಸ್ ಹೊದ್ದೂರು ಮತ್ತು ಎಫ್2 ನಾಪೋಕ್ಲು ಫೀಡರ್‍ನಲ್ಲಿ ಡಿಸೆಂಬರ್, 10 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ತುರ್ತು ನಿರ್ವಹಣಾ ಕಾಮಗಾರಿ ನಡೆಸಬೇಕಿರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಆದ್ದರಿಂದ ಹೊದ್ದೂರು, ಕಬಡಗೇರಿ, ಕುಂಬಳದಾಳು, ಕಕ್ಕಬೆ, ಕೊಳಕೇರಿ, ಕುಂಜಿಲ, ಯುವಕಪಾಡಿ, ನಾಲಡಿ, ಎಮ್ಮೆಮಾಡು, ನೆಲಜಿ, ಬಲ್ಲಮಾವಟಿ, ಪೆರೂರು, ಕಿಯಲಕೇರಿ, ನಾಪೋಕ್ಲು ಟೌನ್, ಕೊಟ್ಟಮುಡಿ, ಪಾಲೂರು, ಬೇತು, ಚೆರಿಯಪರಂಬು, ಹಳೆತಾಲ್ಲೂಕು, ಚೋನೆಕೆರೆ ಹಾಗೂ ಸುತ್ತಮುತ್ತಲ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ. ನಾಳೆ ವಿರಾಜಪೇಟೆ ಉಪ ವಿಭಾಗ ವ್ಯಾಪ್ತಿಯಲ್ಲಿ ವಿದ್ಯುತ್ ಗ್ರಾಹಕರ ಜನ ಸಂಪರ್ಕ ಸಭೆ ಮಡಿಕೇರಿ : ವಿರಾಜಪೇಟೆ ಉಪ ವಿಭಾಗ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಕುಂದುಕೊರತೆ ನಿವಾರಿಸುವ ಸಭೆಯು ಡಿಸೆಂಬರ್, 10 ರಂದು ಬೆಳಗ್ಗೆ 11.30 ಗಂಟೆಯಿಂದ 12.30 ಗಂಟೆವರೆಗೆ…

Read More

ದಾವಣಗೆರೆ: ಪ್ರಸಕ್ತ ಸಾಲಿನಲ್ಲಿ ಮ್ಯಾನ್ಯೂಯಲ್ ಸ್ಕ್ಯಾವೆಂಜರ್ಸ್, ಸಫಾಯಿ ಕರ್ಮಚಾರಿ ಕುಟುಂಬದ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಲ್ಯಾಪ್‍ಟಾಪ್ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಮ್ಯಾನ್ಯೂಯಲ್ ಸ್ಕ್ಯಾವೆಂಜರ್ಸ್ ಮಕ್ಕಳಿಗೆ 3 ಹಾಗೂ ಸಫಾಯಿ ಕರ್ಮಚಾರಿ ಮಕ್ಕಳಿಗೆ 2 ಲ್ಯಾಪ್‍ಟಾಪ್ ವಿತರಿಸಲು ಅವಕಾಶವಿರುತ್ತದೆ. ಬಿ.ಕಾಂ, ಬಿ.ಎಸ್ಸಿ, ಎಂ.ಕಾಂ, ಎಂ.ಎಸ್ಸಿ, ಬಿ.ಇ, ಎಂ.ಟೆಕ್ ವಿದ್ಯಾಭ್ಯಾಸ ಮಾಡುತ್ತಿರಬೇಕು. ಅರ್ಜಿದಾರರು ಜಿಲ್ಲಾ ವ್ಯವಸ್ಥಾಪಕರು, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮ, ನಂ.337/16ಎ-16, ಗಣೇಶ್ ಲೇಔಟ್ 1ನೇಕ್ರಾಸ್ ಪಿ.ಬಿ.ರಸ್ತೆ ದಾವಣಗೆರೆಯಲ್ಲಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಕಚೇರಿಗೆ ಸಲ್ಲಿಸಬೇಕು ಎಂದು ನಿಗಮದ ವ್ಯವಸ್ಥಾಪಕರು ತಿಳಿಸಿದ್ದಾರೆ. ಆಪ್ ತಂತ್ರಾಂಶದ ಮಾದರಿ ನೊಂದಣಿ ಸಮೀಕ್ಷೆ ವ್ಯವಸ್ಥೆಗೆ ತರಬೇತಿ ದಾವಣಗೆರೆ : ಕೇಂದ್ರ ಸರ್ಕಾರದ ಜನಗಣತಿ ಇಲಾಖೆಯಿಂದ ಆಪ್ ಮೂಲಕ ಜನನ ಮತ್ತು ಮರಣ ಅಂಕಿಅಂಶಗಳನ್ನು ಸಂಗ್ರಹಿಸಲು ಅಂಶಕಾಲಿಕೆ ಗಣತಿದಾರರಿಗೆ ಮಾದರಿ ನೊಂದಣಿ ಕುರಿತಂತೆ ತರಬೇತಿಯನ್ನು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಏರ್ಪಡಿಸಲಾಗಿತ್ತು. ತರಬೇತಿ ಕಾರ್ಯಗಾರವನ್ನು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿಯವರು ಉದ್ಘಾಟಿಸಿ ಆಪ್ ಮೂಲಕ ಮಾದರಿ ನೊಂದಣಿ ಪದ್ದತಿಯ ಅವಶ್ಯಕತೆ ಮತ್ತು ಇದರ ಗುಣಮಟ್ಟದ ಕಾರ್ಯದ…

Read More