Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಮಾಜಿ ಸಚಿವರಾದ ಬಿ.ಸುಬ್ಬಯ್ಯ ಶೆಟ್ಟಿ ಅವರ ನಿಧನರಾಗಿದ್ದಾರೆ. ಈ ಮೂಲಕ ಮಾಜಿ ಸಚಿವ ಬಿ.ಸುಬ್ಬಯ್ಯ ಶೆಟ್ಟಿ ಇನ್ನಿಲ್ಲವಾಗಿದ್ದಾರೆ. ಅವರ ನಿಧನಕ್ಕೆ ಸಿಎಂ ಸಿದ್ಧರಾಮಯ್ಯ ಅವರು ಸಂತಾಪ ಸೂಚಿಸಿದ್ದಾರೆ. ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಮಾಜಿ ಸಚಿವ ಬಿ.ಸುಬ್ಬಯ್ಯ ಶೆಟ್ಟಿ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಬದ್ಧತೆ, ಪ್ರಾಮಾಣಿಕತೆ ಮತ್ತು ಜನಪರ ಕಾಳಜಿಗಳನ್ನು ರಾಜಕೀಯ ಜೀವನದುದ್ದಕ್ಕೂ ವ್ರತದಂತೆ ಪಾಲಿಸಿಕೊಂಡು ಬಂದಿದ್ದ ಸುಬ್ಬಯ್ಯ ಶೆಟ್ಟಿಯವರು ಅಪರೂಪದ ಮುತ್ಸದ್ದಿ ರಾಜಕಾರಣಿ ಎಂದಿದ್ದಾರೆ. ದೇವರಾಜ ಅರಸು ಅವರ ಸಂಪುಟದಲ್ಲಿ ಭೂ ಸುಧಾರಣಾ ಸಚಿವರಾಗಿದ್ದ ಸುಬ್ಬಯ್ಯ ಶೆಟ್ಟಿಯವರು ಉಳುವವನನ್ನೇ ಭೂಮಿಯ ಒಡೆಯನನ್ನಾಗಿ ಮಾಡಿದ ಕಾಯ್ದೆ ರಾಜ್ಯದಲ್ಲಿ ಯಶಸ್ವಿಯಾಗಿ ಅನುಷ್ಠಾನಕ್ಕೆ ಬರಲು ಕಾರಣಿಕರ್ತರು. ಸುಬ್ಬಯ್ಯ ಶೆಟ್ಟಿಯವರನ್ನು ಕಳೆದುಕೊಂಡ ಪತ್ನಿ, ಮಕ್ಕಳು ಮತ್ತು ಅಪಾರ ಅಭಿಮಾನಿಗಳ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂಬುದಾಗಿ ತಿಳಿಸಿದ್ದಾರೆ. https://twitter.com/siddaramaiah/status/1899080884268994780 https://kannadanewsnow.com/kannada/tata-capital-finance-fined-for-not-stopping-loan-recovery-despite-full-repayment/ https://kannadanewsnow.com/kannada/it-is-mandatory-for-doctors-to-perform-duties-in-government-hospitals-from-9-am-to-4-pm-minister-dr-sharanprakash-patil/
ಧಾರವಾಡ: ಪೂರ್ತಿ ಮರುಪಾವತಿ ಮಾಡಿದರೂ ಸಾಲ ವಸೂಲಾತಿ ನಿಲ್ಲಿಸದ ಧಾರವಾಡದ ಟಾಟಾ ಕ್ಯಾಪಿಟಲ್ ಫೈನಾನ್ಸ್‍ಗೆ ದಂಡ ವಿಧಿಸಿ ಮತ್ತು ಪರಿಹಾರ ನೀಡಲು ಆಯೋಗ ಆದೇಶ ಮಾಡಿದೆ. ಧಾರವಾಡ ದಯಲಿಗಾರ ಓಣಿ ನಿವಾಸಿ ಅಫ್ರೀನ್ ದಫೇದಾರ ರವರು ದ್ವೀಚಕ್ರ ವಾಹನ ಖರೀದಿಸಲು ಧಾರವಾಡದ ಟಾಟಾಕ್ಯಾಪಿಟಲ್ ಫೈನಾನ್ಸ್ ನಿಂದ ದಿ:21/09/2019ರಂದು ರೂ.70,635 ಸಾಲ ಪಡೆದಿದ್ದರು. ಸಾಲ ಮರುಪಾವತಿ ನಿಯಮದಂತೆ ತಿಂಗಳಿಗೆ ರೂ.2,571 ರಂತೆ ಅವರು 42 ಕಂತುಗಳಲ್ಲಿ ದಿ:03/09/2019 ರಿಂದ ದಿ:03/04/2024ರವರೆಗೆ ಸಾಲ ಮರುಪಾವತಿ ಮಾಡಿದ್ದರು. ಪೂರ್ತಿ ಸಾಲ ಮರುಪಾವತಿಯಾಗಿದೆ ಮತ್ತು ದೂರುದಾರರಿಂದ ಯಾವುದೇ ಹಣ ಬರುವುದು ಬಾಕಿ ಇಲ್ಲಅಂತಾ ದಿ:17/04/2023ರಂದು ಎದುರುದಾರ ಫೈನಾನ್ಸ್ ನವರು ಆರ್.ಟಿ.ಓ ಕಚೇರಿಗೆ ಮಾಹಿತಿ ನೀಡಿದ್ದರು. ಪೂರ್ತಿ ಸಾಲ ಮರುಪಾವತಿ ಆಗಿದ್ದರೂ ದಿ:17/04/2023ರ ನಂತರ ದಿ:08/10/2024ರವರೆಗೆ ದೂರುದಾರರ ಕೆನರಾ ಬ್ಯಾಂಕಿನ ಎಸ್.ಬಿ. ಖಾತೆಯಿಂದ ಪ್ರತಿ ತಿಂಗಳು ಈ.ಸಿ.ಎಸ್. ಮರುಪಾವತಿ ಆಗುತ್ತಿತ್ತು. ಅದನ್ನು ನಿಲ್ಲಿಸುವಂತೆ ಹಲವುಬಾರಿ ದೂರುದಾರರು ಎದುರುದಾರರಿಗೆ ವಿನಂತಿಸಿದಳು. ವಕೀಲರ ಮೂಲಕ ಕಾನೂನು ಬದ್ಧ ನೋಟಿಸನ್ನು ಕೊಡಿಸಿದಳು. ಆದರೂ…
ಆಸ್ಟ್ರೇಲಿಯಾ: ಮಕ್ಕಳು ಸತ್ತ ಹಾವನ್ನೇ ಸ್ಕಿಪ್ಪಿಂಗ್ ಆಟಕ್ಕೆ ಹಗ್ಗವಾಗಿ ಬಳಸಿರುವ ಮನಕಲಕುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಸೆಂಟ್ರಲ್ ಕ್ವೀನ್ಸ್‌ಲ್ಯಾಂಡ್‌ನ ರಾಕ್‌ಹ್ಯಾಂಪ್ಟನ್‌ನಿಂದ ಸುಮಾರು ಎರಡು ಗಂಟೆಗಳ ಪ್ರಯಾಣದ ದೂರದಲ್ಲಿರುವ ಆಸ್ಟ್ರೇಲಿಯಾದ ವೂರಬಿಂಡಾದಿಂದ ಬಂದ ಈ ವಿಡಿಯೋದಲ್ಲಿ, ಸತ್ತ ಹಾವಿನ ಮೇಲೆ ಹಾರುತ್ತಿರುವಾಗ ಮಕ್ಕಳು ನಗುತ್ತಿರುವುದನ್ನು ವಯಸ್ಕರು ಮೇಲ್ವಿಚಾರಣೆ ಮಾಡುತ್ತಿರುವಂತೆ ಧ್ವನಿಸುತ್ತಿರುವುದನ್ನು ರೆಕಾರ್ಡ್ ಮಾಡಲಾಗಿದೆ. ಅದನ್ನು ನನಗೆ ತೋರಿಸಿ, ಅದು ಏನೆಂದು ನನಗೆ ತೋರಿಸಿ” ಎಂದು ಕ್ಯಾಮೆರಾ ಹಿಂದೆ ಇರುವ ವೀಡಿಯೊದಲ್ಲಿರುವ ಮಹಿಳೆ ಹೇಳುವುದನ್ನು ಕೇಳಿಸುತ್ತದೆ. ಮಕ್ಕಳು ಹಾರಿ ನಗುತ್ತಿದ್ದಂತೆ, ಹುಡುಗರಲ್ಲಿ ಒಬ್ಬರು ಅದು ಕಪ್ಪು ತಲೆಯ ಹೆಬ್ಬಾವು ಎಂದು ಹೇಳಿದರು. ಮಕ್ಕಳು ತಮ್ಮ ಸಂತೋಷಕ್ಕಾಗಿ ಬಳಸಲು ಪ್ರಾರಂಭಿಸುವ ಮೊದಲು ಹೆಬ್ಬಾವು ಸತ್ತಿದೆಯೇ ಎಂಬುದು ಸ್ಪಷ್ಟವಾಗಿಲ್ಲ. https://twitter.com/clowndownunder/status/1898892150513049705 ವೀಡಿಯೊ ವೈರಲ್ ಆಗಿ, ಸಾಮಾಜಿಕ ಮಾಧ್ಯಮದಲ್ಲಿ ನೂರಾರು ವೀಕ್ಷಣೆಗಳನ್ನು ಆಕರ್ಷಿಸುತ್ತಿದ್ದಂತೆ, ಪರಿಸರ, ಪ್ರವಾಸೋದ್ಯಮ, ವಿಜ್ಞಾನ ಮತ್ತು ನಾವೀನ್ಯತೆ ಇಲಾಖೆ ಎಚ್ಚರಿಕೆ ನೀಡಿದೆ. “ಈ ಅನುಚಿತ ನಡವಳಿಕೆಯನ್ನು ನಾವು ಖಂಡಿಸುತ್ತೇವೆ ಮತ್ತು ಘಟನೆಯ ಬಗ್ಗೆ…
ಧಾರವಾಡ : ಕರ್ನಾಟಕ ಮಾಧ್ಯಮ ಅಕಾಡೆಮಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ ಪತ್ರಕರ್ತರಿಗೆ ಉತ್ತೇಜನ ನೀಡುವ ಸಲುವಾಗಿ ಉಚಿತವಾಗಿ ಒo-ಎo-ಏiಣ (ಮೊಬೈಲ್, ಟ್ರೈಪಡ್, ಮಯರಲೆಸ್ ಮೈಕ್, ಸೇರಿರುವ ಮೊಬೈಲ್ ಜರ್ನಲಿಸಂ ಕಿಟ್) ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ಅರ್ಜಿದಾರರು ಕೆಲವು ಷರತ್ತುಗಳಿಗೆ ಒಳಪಟ್ಟು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿದಾರರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಮಾನ್ಯತೆ ಪಡೆದ ಪತ್ರಕರ್ತರಾಗಿರಬೇಕು ಅಥವಾ ವಾರ್ತಾ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳಲ್ಲಿ ಅಥವಾ ಉಪಗ್ರಹ ಸುದ್ದಿ ವಾಹಿನಿಗಳಲ್ಲಿ ಕಾರ್ಯನಿರ್ವಹಿಸುತ್ತಿರಬೇಕು. ಮಾಧ್ಯಮಕ್ಷೇತ್ರದಲ್ಲಿ ಕನಿಷ್ಠ 10 ವರ್ಷಗಳ ಅನುಭವವಿರಬೇಕು ಹಾಗೂ ಇದಕ್ಕೆ ಸಂಬಂಧಿಸಿದ ಪೂರಕ ದಾಖಲೆಗಳನ್ನು ಒದಗಿಸಬೇಕು. ಪತ್ರಿಕೆಯ ಸಂಪಾದಕರಾಗಿದ್ದಲ್ಲಿ ಪತ್ರಿಕೆಯು ವಾರ್ತಾ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿ ಸೇರಿರಬೇಕು. ಅರ್ಜಿದಾರರು ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು. ತಾವು ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳ ಮುಖ್ಯಸ್ಥರಿಂದ ಸೇವಾ ದೃಢೀಕರಣ ಪತ್ರ ಸಲ್ಲಿಸಬೇಕು. ಈ ಹಿಂದೆ ಕರ್ನಾಟಕ…
ಬಳ್ಳಾರಿ : ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ 2022, 2023 ಮತ್ತು 2024ರ ಕ್ಯಾಲೆಂಡರ್ ವರ್ಷದಲ್ಲಿ (ಜನವರಿ ಯಿಂದ ಡಿಸೆಂಬರ್) ಕನ್ನಡದಲ್ಲಿ ಪ್ರಕಟವಾದ ಕೃತಿಗಳಿಗೆ, ಅವುಗಳ ಮುದ್ರಣ, ಮುಖಪುಟ ವಿನ್ಯಾಸ, ಗುಣಮಟ್ಟವನ್ನು ಪರಿಗಣಿಸಿ ವಿವಿಧ “ಕನ್ನಡ ಪುಸ್ತಕ ಸೊಗಸು ಬಹುಮಾನ”ಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಪ್ರಕಾಶಕರು, ಮುದ್ರಕರು, ಕಲಾವಿದರು, ಲೇಖಕರುಗಳು ಸ್ವಯಂ ಅರ್ಜಿ ಸಲ್ಲಿಸಬಹುದಾಗಿದೆ. ಪುಸ್ತಕದ ಹೆಸರು, ಲೇಖಕರ ಹೆಸರು, ಪ್ರಕಟವಾದ ವರ್ಷ, ಪ್ರಕಾಶಕರ ಹೆಸರು, ಮುದ್ರಣಾಲಯದ ಹೆಸರು, ಮುಖಪುಟ ಚಿತ್ರ ರಚನೆಯ ಕಲಾವಿದರ ಹೆಸರು/ಚಿತ್ರ ಕಲಾವಿದರ ಪೂರ್ಣ ವಿಳಾಸ/ದೂರವಾಣಿ ಸಂಖ್ಯೆ – ಈ ಎಲ್ಲಾ ವಿವರಗಳೊಂದಿಗೆ ಪುಸ್ತಕದ ಎರಡು ಪ್ರತಿಗಳನ್ನು ಮಾ.29 ರೊಳಗಾಗಿ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560 002 – ಈ ವಿಳಾಸಕ್ಕೆ ಕಳುಹಿಸಿಕೊಡಬಹುದಾಗಿದೆ. ಸಲ್ಲಿಸಲಾಗುವ ಪುಸ್ತಕಗಳನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸಲಾಗುವುದಿಲ್ಲ ಹಾಗೂ ಕೊನೆಯ ದಿನಾಂಕ ಮುಗಿದ ನಂತರ ಬಂದ ಪುಸ್ತಕಗಳನ್ನು ಬಹುಮಾನಕ್ಕೆ ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ…
ಬಳ್ಳಾರಿ : ಕರ್ನಾಟಕ ಮಾಧ್ಯಮ ಅಕಾಡೆಮಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ ಪತ್ರಕರ್ತರಿಗೆ ಉತ್ತೇಜನ ನೀಡುವ ಸಲುವಾಗಿ ಉಚಿತವಾಗಿ ಮೋ-ಜೋ ಕಿಟ್ ಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಪರಿಶಿಷ್ಟ ಜಾತಿ, ಪರಿಷ್ಟ ಪಂಗಡಕ್ಕೆ ಸೇರಿದ ಅರ್ಜಿದಾರರು ಈ ಕೆಳಕಂಡ ಷರತ್ತು ಗೊಳಪಟ್ಟು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿದಾರರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಮಾನ್ಯತೆ ಪಡೆದ ಪತ್ರಕರ್ತರಾಗಿರಬೇಕು ಅಥವಾ ವಾರ್ತಾ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳಲ್ಲಿ ಅಥವಾ ಉಪಗ್ರಹ ಸುದ್ದಿ ವಾಹಿನಿಗಳಲ್ಲಿ ಕಾರ್ಯನಿರ್ವಹಿಸುತ್ತಿರಬೇಕು. ಮಾಧ್ಯಮಕ್ಷೇತ್ರದಲ್ಲಿ ಕನಿಷ್ಠ 10 ವರ್ಗಗಳ ಅನುಭವವಿರಬೇಕು ಹಾಗೂ ಇದಕ್ಕೆ ಸಂಬAಧಿಸಿದ ಪೂರಕ ದಾಖಲೆಗಳನ್ನು ಒದಗಿಸಬೇಕು. ಪತ್ರಿಕೆಯ ಸಂಪಾದಕರಾಗಿದ್ದಲ್ಲಿ ಪತ್ರಿಕೆಯು ವಾರ್ತಾ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿ ಸೇರಿರಬೇಕು. ಅರ್ಜಿದಾರರು ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು. ತಾವು ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳ ಮುಖ್ಯಸ್ಥರಿಂದ ಸೇವಾ ದೃಢೀಕರಣ ಪತ್ರ ಸಲ್ಲಿಸಬೇಕು. ಈ ಹಿಂದೆ ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಇಲಾಖೆ ಹಾಗೂ…
ಬಳ್ಳಾರಿ : ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಮತ್ತು ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರಾಜ್ಯ ಮಟ್ಟದ ಬ್ಯಾಂಕರುಗಳ ಸಮಿತಿಯ ನೇತೃತ್ವದಲ್ಲಿ ಅಭಿಯಾನ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ. ರಾಜ್ಯ ಮಟ್ಟದ ಬ್ಯಾಂಕರುಗಳ ಸಮಿತಿರವರು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಭಿವೃದ್ಧಿ ಅಧಿಕಾರಿಗಳ ನೇತೃತ್ವದಲ್ಲಿ ಸ್ಥಳೀಯ ಬ್ಯಾಂಕುಗಳೊAದಿಗೆ ಪ್ರಧಾನಮಂತ್ರಿ ಜನ್ ಜೀವನ್ ಬಿಮಾ ಯೋಜನೆ ಮತ್ತು ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ ರಾಜ್ಯ ಮಟ್ಟದಲ್ಲಿ ಸಕ್ರಿಯ ನೋಂದಣಿಗಳನ್ನು ಹೆಚ್ಚಿಸುವ ಸಲುವಾಗಿ ಜಿಲ್ಲಾ ಲೀಡ್ ಬ್ಯಾಂಕ್, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತಯರ ಸಹಯೋಗದೊಂದಿಗೆ ಈ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಅಭಿಯಾನ ಆಯೋಜಿಸುತ್ತಾರೆ ಎಂದು ಹೇಳಿದ್ದಾರೆ. ಮುಂಬರುವ ಎರಡು ತಿಂಗಳಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು ಎರಡು ಯೋಜನೆಗಳಲ್ಲಿ ಪ್ರತಿ ಪಂಚಾಯಿತಿಯಲ್ಲೂ ಕನಿಷ್ಠ 150ಕ್ಕೂ ಹೆಚ್ಚಿನ ನೋಂದಣಿಗಳನ್ನು ಮಾಡಿಸುವ ಉದ್ದೇಶ ಹೊಂದಲಾಗಿದೆ. ಆಯಾ ಗ್ರಾಪಂ…
ಬಳ್ಳಾರಿ : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು 2024-25ರ ಜನವರಿ ಆವೃತ್ತಿಗೆ ಯುಜಿಸಿ ಅನುಮೋದಿತ ಶಿಕ್ಷಣಕ್ರಮಗಳ ಪ್ರವೇಶಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಬಿ.ಎ., ಬಿ.ಕಾಂ., ಬಿ.ಎಸ್ಸಿ., ಬಿ.ಬಿ.ಎ., ಬಿ.ಸಿ.ಎ., ಬಿ.ಲಿಬ್.ಐ.ಎಸ್ಸಿ., ಬಿ.ಎಸ್.ಡಬ್ಲೂö್ಯ,. ಎಂ.ಎ., ಎಂ.ಕಾA., ಎಂ.ಎಸ್ಸಿ., ಎಂ.ಬಿ.ಎ., ಎಂ.ಸಿ.ಎ., ಎಂ.ಎಸ್.ಡಬ್ಲೂö್ಯ., ಎಂ.ಲಿಬ್.ಐ.ಎಸ್ಸಿ., ಪಿಜಿ ಸರ್ಟಿಫಿಕೇಟ್, ಡಿಪ್ಲೋಮಾ ಮತ್ತು ಸರ್ಟಿಫಿಕೇಟ್ ಶಿಕ್ಷಣಕ್ರಮಗಳಿಗೆ ಬಳ್ಳಾರಿ ಪ್ರಾದೇಶಿಕ ಕೇಂದ್ರದಲ್ಲಿ ಆನ್‌ಲೈನ್ ಮೂಲಕ ಪ್ರವೇಶಾತಿ ನೀಡಲಾಗುತ್ತಿದೆ. ವಿಶ್ವವಿದ್ಯಾನಿಲಯದ ಅಂತರ್ಜಾಲ www.ksoumysuru.ac.in ನಲ್ಲಿ ಲಭ್ಯವಿರುವ ಪ್ರಾಸ್‌ಪೆಕ್ಟಸ್‌ನಲ್ಲಿ ಎಲ್ಲಾ ವಿವರಗಳನ್ನು ನೀಡಿದ್ದು, ವಿದ್ಯಾರ್ಥಿಗಳು ಅದರನ್ವಯ ಅರ್ಹ ಶಿಕ್ಷಣಕ್ರಮಗಳಿಗೆ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಆನ್‌ಲೈನ್ ಅಡ್ಮಿಷನ್ ಪೋರ್ಟಲ್ ಮೂಲಕ ಪ್ರವೇಶಾತಿ ಮಾಡಿಕೊಳ್ಳಬಹುದಾಗಿದೆ. ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳಾ ವಿದ್ಯಾರ್ಥಿಗಳಿಗೆ, ಡಿಫೆನ್ಸ್/ ಎಕ್ಸ್ಸರ್ವೀಸ್‌ಮನ್ ವಿದ್ಯಾರ್ಥಿಗಳು, ಆಟೋ/ಕ್ಯಾಬ್ ಡ್ರೆöÊರ‍್ಸ್ ಮತ್ತು ಕೆ.ಎಸ್.ಆರ್.ಟಿ.ಸಿ ನೌಕರರಿಗೆ ಮತ್ತು ಅವರ ಮಕ್ಕಳಿಗೆ ಬೋಧನಾ ಶುಲ್ಕದಲ್ಲಿ ಶೇ.10 ರಷ್ಟು ವಿಶೇಷ ರಿಯಾಯಿತಿ ಇದೆ. ಕೋವಿಡ್‌ನಿಂದಾಗಿ ಮೃತ ಪೋಷಕರ ಮಕ್ಕಳಿಗೆ, ದೃಷ್ಠಿಹೀನ ವಿದ್ಯಾರ್ಥಿಗಳಿಗೆ ಹಾಗೂ ತೃತಿಯ ಲಿಂಗಗಳಿಗೆ ಪೂರ್ಣಶುಲ್ಕ ವಿನಾಯಿತಿ ಇದ್ದು, ಇದರ…
ನವದೆಹಲಿ: ‘ಖಾಸಗಿ ಭಾಗಗಳಲ್ಲಿ ಗಾಯದ ಗುರುತುಗಳು ಅಗತ್ಯವಿಲ್ಲ…’: ಅತ್ಯಾಚಾರದ 40 ವರ್ಷಗಳ ನಂತರ ಟ್ಯೂಷನ್ ಶಿಕ್ಷಕನ ವಿರುದ್ಧ ಐತಿಹಾಸಿಕ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿದೆ. ಈ ಮೂಲಕ ಅತ್ಯಾಚಾರ ದೃಢಪಡಿಸಲು ಖಾಸಗಿ ಭಾಗಗಳಲ್ಲಿನ ಗಾಯದ ಗುರುತುಗಳ ಅಗತ್ಯವಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದೆ. ಸುಮಾರು ನಾಲ್ಕು ದಶಕಗಳ ಹಿಂದೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣವು 40 ವರ್ಷಗಳ ಕಠಿಣ ಕಾನೂನು ಹೋರಾಟದ ನಂತರ ಮುಕ್ತಾಯಗೊಂಡಿದೆ. 1984ರ ಮಾರ್ಚ್ ನಲ್ಲಿ ಟ್ಯೂಷನ್ ಶಿಕ್ಷಕನೊಬ್ಬ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ್ದ. ವಿಚಾರಣಾ ನ್ಯಾಯಾಲಯವು ಎರಡು ವರ್ಷಗಳಲ್ಲಿ ಆರೋಪಿಗಳನ್ನು ದೋಷಿ ಎಂದು ಘೋಷಿಸಿದರೂ, ಈ ಪ್ರಕರಣವು ದಶಕಗಳಿಂದ ಉನ್ನತ ನ್ಯಾಯಾಲಯಗಳಲ್ಲಿ ಕೊಳೆಯುತ್ತಿದೆ. ತೀರ್ಪನ್ನು ವಿಳಂಬಗೊಳಿಸಲು ಆರೋಪಿಗಳು ಸಣ್ಣ ವಾದವನ್ನು ಬಳಸಿದರು, ಅಂತಿಮವಾಗಿ ಸಂತ್ರಸ್ತೆಯ ನೋವು ಮತ್ತು ನ್ಯಾಯಾಂಗ ಪ್ರಕ್ರಿಯೆಯನ್ನು ವಿಸ್ತರಿಸಿದರು. ವಿಚಾರಣಾ ನ್ಯಾಯಾಲಯವು 1986 ರಲ್ಲಿ ತನ್ನ ತೀರ್ಪನ್ನು ನೀಡಿತು, ಶಿಕ್ಷಕನಿಗೆ ಜೈಲು ಶಿಕ್ಷೆ ವಿಧಿಸಿತು, ಆದರೆ ಅಲಹಾಬಾದ್ ಹೈಕೋರ್ಟ್ ಈ ತೀರ್ಪನ್ನು ಎತ್ತಿಹಿಡಿಯಲು ಇನ್ನೂ 25…
ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಸಂವಿಧಾನದ ಅನುಚ್ಚೇದ 371 (ಜೆ) ಅಡಿ ಶಿಕ್ಷಣ ಮತ್ತು ಉದ್ಯೋಗಕ್ಕೆ ಕಲ್ಪಿಸಿರುವ ಮೀಸಲಾತಿ ನಿಯಮಗಳ ಸಮರ್ಪಕ ಜಾರಿ ಮತ್ತು ಅನುಷ್ಠಾನಕ್ಕೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹೆಚ್ಚು ಆಸಕ್ತಿ ವಹಿಸಬೇಕು. ಈ ವಿಷಯದಲ್ಲಿ ಅನಾದರ, ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ವಹಿಸಲಾಗುವುದು. ಪ್ರಗತಿ ಪರಿಶೀಲನಾ ಸಭೆಗಳಿಗೆ ಇಲಾಖಾ ಮುಖ್ಯಸ್ಥರು ಹಾಗೂ ಕಾರ್ಯದರ್ಶಿಗಳಿಗಿಂತ ಮೇಲ್ಪಟ್ಟ ಜವಾಬ್ದಾರಿಯುತ ಅಧಿಕಾರಿಗಳು ಖುದ್ದಾಗಿ ಹಾಜರಾಗಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು 371 (ಜೆ) ಅಡಿ ಹೊರಡಿಸಲಾಗಿರುವ ಆದೇಶಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ಮತ್ತು ಸಚಿವ ಸಂಪುಟ ಉಪಸಮಿತಿಯ ವರದಿಗಳ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಭಿವೃದ್ಧಿಯಲ್ಲಿ ತಾರತಮ್ಯ ಹೋಗಲಾಡಿಸುವ ಮಹತ್ವಾಕಾಂಕ್ಷೆಯೊಂದಿಗೆ ಸಂವಿಧಾನದ 371 (ಜೆ) ಅನುಚ್ಚೇದಕ್ಕೆ ತಿದ್ದುಪಡಿ ತಂದು ಕಲ್ಪಿಸಲಾಗಿರುವ ಸಂವಿಧಾನಾತ್ಮಕ ಹಕ್ಕು ಮತ್ತು ಸೌಕರ್ಯಗಳ ಜಾರಿಗೆ ಅಧಿಕಾರಿಗಳು ಅನಾಸಕ್ತಿ ತೋರುತ್ತಿರುವುದನ್ನು ಗಮನಿಸಲಾಗುತ್ತಿದೆ.…