Subscribe to Updates
Get the latest creative news from FooBar about art, design and business.
Author: kannadanewsnow09
ದಾವಣಗೆರೆ: ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಬೈಕ್ ಸವಾರನೊಬ್ಬ ಅವಾಜ್ ಹಾಕಿದಂತ ಘಟನೆ ನಡೆದಿದೆ. ಒನ್ ವೇನಲ್ಲಿ ಬಂದಂತ ಬೈಕ್ ಸವಾರನನ್ನು ಪ್ರಶ್ನಿಸಿದ್ದಕ್ಕೆ ಡಿಸಿಗೆ ಅವಾಜ್ ಹಾಕಿರೋದಾಗಿ ತಿಳಿದು ಬಂದಿದೆ. ಇಂದು ಬೆಳಗ್ಗೆ ಸೈಕಲ್ಲಿನಲ್ಲಿ ದಾವಣಗೆರೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಅವರು ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಬೈಕ್ ಸವಾರನೊಬ್ಬ ಒನ್ ವೇನಲ್ಲಿ ವೇಗವಾಗಿ ಬಂದಿದ್ದನು. ಇದನ್ನು ಡಿಸಿ ಗಂಗಾಧರಸ್ವಾಮಿ ಪ್ರಶ್ನೆ ಮಾಡಿದ್ದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಗಂಗಾಧರಸ್ವಾಮಿಗೆ ಬೈಕ್ ಸವಾರ ಅವಾಜ್ ಹಾಕಿದ್ದಾನೆ. ತಕ್ಷಣವೇ ಪೊಲೀಸರಿಗೆ ಪೋನ್ ಮಾಡಿ ಜಿಲ್ಲಾಧಿಕಾರಿ ಬೈಕ್ ಸವಾರನ ವಿರುದ್ಧ ಕ್ರಮಕ್ಕೆ ಸೂಚಿಸಿದ್ದಾರೆ. ಪೊಲೀಸರು ಜಿಲ್ಲಾಧಿಕಾರಿಗಳಿಂದ ಬೈಕ್ ನಂಬರ್ ಪಡೆದು ಇದೀಗ ಕಾನೂನು ಕ್ರಮ ಕೈಗೊಂಡಿರೋದಾಗಿ ಹೇಳಲಾಗುತ್ತಿದೆ. https://kannadanewsnow.com/kannada/on-june-22-a-dance-performance-by-the-supreme-bhagavat-bhadrachala-ramadasu-will-take-place-in-bangalore/ https://kannadanewsnow.com/kannada/breaking-grihalakshmi-money-released-for-the-month-of-may-minister-lakshmi-hebbalkar-gives-important-information/
ಬೆಂಗಳೂರು: 17ನೇ ಶತಮಾನದಲ್ಲಿ ಜನಿಸಿದ ಕನಚರ್ಲ ಗೋಪನ್ನ, ಶ್ರೀರಾಮನ ಪ್ರತಿ ಅವಿರತ ನಿಷ್ಠೆಯಿಂದ ಭದ್ರಾಚಲ ರಾಮದಾಸು ಎಂಬ ಮಹಾನ್ ಸಂತ-ಕವಿಯಾಗಿ ಪರಿವರ್ತನಾದರು. ಗೋಲ್ಕೊಂಡ ಸುಲ್ತಾನರ ಆಳ್ವಿಕೆಯಲ್ಲಿ ಅಂಶದಾರರಾಗಿದ್ದರೂ, ಗೋಪನ್ನನ ದೃಷ್ಟಿ ಕೇವಲ ರಾಜಕಾರ್ಯಗಳಲ್ಲಿ ಸೀಮಿತವಾಗಿರಲಿಲ್ಲ. ತಮ್ಮ ಆಧ್ಯಾತ್ಮಿಕ ನಿಷ್ಠೆಯ ಪರಿಣಾಮವಾಗಿ, ಅವರು ಬಂಧನಕ್ಕೊಳಗಾದರು. ಆದರೆ ಕಾರಾಗೃಹದ ಗೋಡೆಗಳು ಸಹ ಅವರ ಆತ್ಮಶಕ್ತಿಯನ್ನು ತಡೆಯಲಿಲ್ಲ. ಬಂಧನದಲ್ಲಿಯೇ ಅವರು ಶ್ರೀರಾಮನನ್ನು ಉದ್ದೇಶಿಸಿ ನೂರಕ್ಕೂ ಅಧಿಕ ಭಕ್ತಿಮಯ ಕೀರ್ತನೆಗಳನ್ನು ರಚಿಸಿದರು—ಈ ಕೃತಿಗಳು ಶರಣಾಗತಿಯ ಭಾವನೆ, ತೀವ್ರತೆಯ ಭಕ್ತಿ, ಹಾಗೂ ದೈವೀಯ ಪ್ರೀತಿಯಿಂದ ತುಂಬಿವೆ. ಈ ಭಾವಪೂರ್ಣ ಗೀತೆಗಳು ಇಂದಿಗೂ ಕರ್ನಾಟಕ ಸಂಗೀತ ಹಾಗೂ ದೇವಸ್ಥಾನ ಸಂಪ್ರದಾಯಗಳಲ್ಲಿ ಅಮರವಾಗಿ ಉಳಿದಿವೆ. ಪೌರಾಣಿಕ ಕಥೆಯಂತೆ, ಶ್ರೀರಾಮ ಮತ್ತು ಲಕ್ಷ್ಮಣ ಸ್ವತಃ ಸುಲ್ತಾನರ ಮುಂದಿನ ಪ್ರತ್ಯಕ್ಷರಾಗಿ ಗೋಪನ್ನನ ಪರವಾಗಿ ಸಾಲವನ್ನು ತೀರಿಸಿ, ಅವರ ಬಿಡುಗಡೆಗೆ ಕಾರಣರಾದರು. ಇಂತಹ ಅರ್ಥಪೂರ್ಣ ಜೀವನವು ಅವರನ್ನು “ಪರಮ ಭಾಗವತ” ಎಂಬ ವಿಶಿಷ್ಟ ಬಿರುದಿಗೆ ಪಾತ್ರಗೊಳಿಸಿತು. ಈ ಭಕ್ತಿಯ ಶಿಖರ ಸಾಧಕನಿಗೆ ನೃತ್ಯ ನಮನವಾಗಿ, ನಟನಂ ಇನ್‌ಸ್ಟಿಟ್ಯೂಟ್…
ಬೆಂಗಳೂರು: ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಅಪ್ಸರಕೊಂಡ ಕಡಲ ಜೀವಧಾಮ ಘೋಷಣೆ, ಆರೋಗ್ಯ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಉಚಿತ ಆರೋಗ್ಯ ವಿಮಾ ಯೋಜನೆ ಜಾರಿ ಸೇರಿದಂತೆ ಮಹತ್ವದ ನಿರ್ಧಾರಗಳಿಗೆ ಅನುಮೋದನೆ ನೀಡಲಾಯಿತು. ಆ ಸಚಿವ ಸಂಪುಟ ಸಭೆಯ ಪ್ರಮುಖ ಹೈಲೈಟ್ಸ್ ಮುಂದಿದೆ ಓದಿ. ಇಂದಿನ ರಾಜ್ಯ ಸಂಪುಟ ಸಭೆ ಬಳಿಕ ಕಾನೂನು ಸಚಿವ ಎಚ್ ಕೆ ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಟ್ಟು ಸಂಪುಟ ಸಭೆಯಲ್ಲಿ 26 ವಿಷಯಗಳ ಚರ್ಚೆ ನಡೆದಿದೆ. ಗಣಿಗಾರಿಕೆಯಲ್ಲಿ ನಡೆದ ಅಕ್ರಮದ ತನಿಖೆಗೆ ಸೃಜಿಸಲಾಗಿರುವ ತನಿಖಾ ಸಮಿತಿಯ ಅವಧಿ ವಿಸ್ತರಣೆ ಮಾಡಲಾಗುತ್ತಿದೆ. ವಿವರವಾದ ತಾಂತ್ರಿಕ ಮಾಹಿತಿ ಕಲೆ ಹಾಕಲು ಅವಕಾಶ ಆಗುವ ಹಿನ್ನೆಲೆಯಲ್ಲಿ ಒಂದು ವರ್ಷದ ಅವಧಿಗೆ ವಿಸ್ತರಣೆ ಆಗಿದೆ. ಅಪ್ಸರಕೊಂಡ ಕಡಲ ಜೀವಧಾಮ ಘೋಷಣೆ ಮಾಡಲಾಗುತ್ತಿದೆ. ಹೊನ್ನಾವರದ ಸಮುದ್ರ ಪ್ರದೇಶದ ಆರು ಕಿ ಮೀ ದೂರದ ಪ್ರದೇಶವನ್ನ ವನ್ಯಧಾನಮವಾಗಿ ಘೋಷಣೆ ಮಾಡಲಾಗಿದೆ ಎಂದರು. ಆರೋಗ್ಯ ಇಲಾಖೆಯ ಮೂರು ಲಕ್ಷ…
ಬೆಂಗಳೂರು: ರಾಜ್ಯ ಸರ್ಕಾರವು ಆರೋಗ್ಯ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರ ಸಂಘದ ಬೇಡಿಕೆಗೆ ಅಸ್ತು ಎಂದಿದೆ. ಇಂದಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಆರೋಗ್ಯ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರು, ಅವರ ಅವಲಂಬಿತರಿಗೆ ವಿಮಾ ಯೋಜನೆ ಜಾರಿಗೆ ಅನುಮೋದನೆ ನೀಡಿದೆ. ಈ ಕುರಿತಂತೆ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘವು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಗೆ ಪತ್ರದಲ್ಲಿ ಮನವಿ ಮಾಡಿತ್ತು. KSHCOEA-BMS ಸಂಘ ಸಲ್ಲಿಸಿದ್ದಂತ ಮನವಿ ಪತ್ರದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಿಗೆ ಜೀವ-ಗುಂಪು ವಿಮೆ ಮತ್ತು ಆರೋಗ್ಯ ವಿಮೆ ಯೋಜನೆ ಜಾರಿ ಮಾಡುವಂತೆ ಮನವಿ ಮಾಡಲಾಗಿತ್ತು. ದಿನಾಂಕ 31-01-2024ರಂದು ಸಚಿವ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ನಡೆದಂತ ಸಭೆಯಲ್ಲೂ ಸಂಘವು ಈ ವಿಚಾರವನ್ನು ಪ್ರಸ್ತಾಪಿಸಿತ್ತು. ಅಭಿಯಾನ ನಿರ್ದೇಶಕರು ಈಗಾಗಲೇ ಬ್ಯಾಂಕಿನವರು ಪ್ರಸ್ತಾವನೆಯನ್ನು ಸಲ್ಲಿಸಿದ್ದು ಪರಿಶೀಲಿಸಲಾಗುತ್ತಿದೆ ಎಂಬುದಾಗಿ ಅಂದು ತಿಳಿಸಿದ್ದರು.…
ಬೆಂಗಳೂರು: ರಾಜ್ಯ ಸರ್ಕಾರದಿಂದ ಈಗಾಗಲೇ ಆರೋಗ್ಯ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಟರ್ಮ್ ಇನ್ಸೂರೆನ್ಸ್ ಜಾರಿಗೊಳಿಸಿದೆ. ಈಗ ಸರ್ಕಾರ ಮತ್ತೊಂದು ಸಿಹಿಸುದ್ದಿ ನೀಡಿದೆ. ಅದೇ 5 ಲಕ್ಷದವರೆಗೆ ನಗದು ರಹಿತ ಆರೋಗ್ಯ ಯೋಜನೆ ಜಾರಿಗೊಳಿಸಿದೆ. ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ಆರೋಗ್ಯ ಇಲಾಖೆಯ ಮೂರು ಲಕ್ಷ ಸಿಬ್ಬಂದಿ ಮತ್ತು ಅವರ ಅವಲಂಬಿತರಿಗೆ 5 ಲಕ್ಷದವರೆಗೆ ನಗದು ರಹಿತ ಆರೋಗ್ಯ ಯೋಜನೆ ಜಾರಿಗೆ ಅನುಮೋದಿಸಲಾಗಿದೆ. ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ಅವರ ಅವಲಂಬಿತರಿಗೆ 5 ಲಕ್ಷದ ವರೆಗೆ ನಗದು ರಹಿತ ಆರೋಗ್ಯ ಯೋಜನೆಗಾಗಿ ಮಾಸಿಕ ಕುತಂಗಳಲ್ಲಿ ಸಿಬ್ಬಂದಿಗಳಿಂದ 100 ರೂಪಾಯಿ ಸಂಗ್ರಹಿಸಲು ಒಪ್ಪಿಗೆ ಸೂಚಿಸಿದೆ. ಆರೋಗ್ಯ ಇಲಾಖೆಯ ಖಾಯಂ ಹಾಗೂ ಗುತ್ತಿಗೆ ಸಿಬ್ಬಂದಿ ಹಾಗೂ ಅವರ ಅವಲಂಬಿತರಿಗೆ ಈ ಯೋಜನೆಯ ಸೌಲಭ್ಯ ಲಭ್ಯವಾಗಲಿದೆ. ಹೀಗಾಗಿ ಆರೋಗ್ಯ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ಸಿಬ್ಬಂದಿ ಮತ್ತು ಅವರ ಅವಲಂಬಿತರಿಗೆ ಇನ್ಮುಂದೆ ಐದು ಲಕ್ಷದವರೆಗೆ ನಗದು…
ಬೆಂಗಳೂರು: ಬೆಂಗಳೂರು ಹಾಲು ಒಕ್ಕೂಟದ ನೂತನ ಅಧ್ಯಕ್ಷರಾಗಿ ಮಾಜಿ ಸಂಸದ ಡಿ.ಕೆ ಸುರೇಶ್ ಆಯ್ಕೆಯಾಗಿದ್ದಾರೆ. ಇಂದು ಬೆಂಗಳೂರು ಹಾಲು ಒಕ್ಕೂಟ(BAMUL) ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಡಿ.ಕೆ ಸುರೇಶ್ ಆಯ್ಕೆಯಾಗಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸೋತ ಬಳಿಕ ಡಿ.ಕೆ ಸುರೇಶ್, ರಾಜಕೀಯದಿಂದ ಹಿನ್ನಡೆ ಅನುಭವಿಸಿದ್ದರು. ಇದೀಗ ವಿಶ್ರಾಂತಿಯ ಬಳಿಕ ಬಮೂಲ್ ಅಧ್ಯಕ್ಷರಾಗಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ರೈತರು, ಸೊಸೈಟಿಯವರು ನನ್ನ ಮೇಲೆ ನಂಬಿಕೆ ಇಟ್ಟು ಆಯ್ಕೆ ಮಾಡಿದ್ದಾರೆ. ಆ ಭರವಸೆಯನ್ನು ಉಳಿಸಿಕೊಳ್ಳುತ್ತೇನೆ. ಅಧ್ಯಕ್ಷನಾಗಿ ರೈತರಿಗೆ ಎಲ್ಲಾ ಅನುಕೂಲ ಮಾಡಿಕೊಡುವಂತ ಕೆಲಸ ಮಾಡುವುದಾಗಿ ತಿಳಿಸಿದರು. ಅಂದಹಾಗೇ ಬಮೂಲ್ 14 ನಿರ್ದೇಶಕರಲ್ಲಿ ಡಿ.ಕೆ ಸುರೇಶ್ ಸೇರಿದಂತ 11 ಕಾಂಗ್ರೆಸ್ ಬೆಂಬಲಿತ ನಿರ್ದೇಶಕರಿದ್ದರು. ಇಂದು ನಿರ್ದೇಶಕ ಸ್ಥಾನದಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ. https://kannadanewsnow.com/kannada/madhu-received-her-phd-under-the-guidance-of-dr-s-m-muttiah-a-professor-at-sahyadri-science-college-shivamogga/ https://kannadanewsnow.com/kannada/breaking-grihalakshmi-money-released-for-the-month-of-may-minister-lakshmi-hebbalkar-gives-important-information/ https://kannadanewsnow.com/kannada/breaking-the-state-government-has-moved-to-increase-the-reservation-for-muslims-in-the-housing-scheme-by-15/
ಶಿವಮೊಗ್ಗ : ಮಧು ಟಿ. ಎಂಬುವವರು ಕುವೆಂಪು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಎಸ್. ಎಂ. ಮುತ್ತಯ್ಯ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ್ದ “ಸಮಕಾಲೀನ ಮಹಿಳಾ ಕಥನ ಸಾಹಿತ್ಯ; ವಿಭಿನ್ನ ನೆಲೆಗಳು” (ಹೆಚ್.ನಾಗವೇಣಿ, ಸುಮಂಗಲಾ, ಸುನಂದಾ ಪ್ರಕಾಶ ಕಡಮೆ, ವಿನಯಾ ಒಕ್ಕುಂದರವರ ಕಥನ ಸಾಹಿತ್ಯವನ್ನು ಅನುಲಕ್ಷಿಸಿ) ಎಂಬ ಮಹಾಪ್ರಬಂಧಕ್ಕೆ ಪಿಹೆಚ್.ಡಿ. ಪದವಿ ನೀಡಿ ಗೌರವಿಸಿದೆ. ಮಧು ಟಿ. ಶಿವಮೊಗ್ಗ ತಾಲ್ಲೂಕಿನ ಗಾಜನೂರು ಅಗ್ರಹಾರದ ಅರಸಮ್ಮ ಮತ್ತು ತಿಮ್ಮಯ್ಯ ದಂಪತಿಗಳ ಪುತ್ರರಾಗಿದ್ದು, ಪ್ರಸ್ತುತ ಕಟೀಲ್ ಅಶೋಕ ಪೈ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. https://kannadanewsnow.com/kannada/the-state-cabinet-has-approved-an-increase-in-muslim-reservation-in-the-housing-scheme/ https://kannadanewsnow.com/kannada/breaking-grihalakshmi-money-released-for-the-month-of-may-minister-lakshmi-hebbalkar-gives-important-information/
ಬೆಂಗಳೂರು: ರಾಜ್ಯದ ಮುಸ್ಲಿಂ ಸಮುದಾಯದವರಿಗೆ ಗುಡ್ ನ್ಯೂಸ್ ಎನ್ನುವಂತೆ ವಸತಿ ಯೋಜನೆಯಲ್ಲೂ ಮೀಸಲಾತಿ ಹೆಚ್ಚಳಕ್ಕೆ ರಾಜ್ಯ ಸಚಿವ ಸಂಪುಟ ಸಭೆ ಅನುಮೋದಿಸಿದೆ. ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ನಡೆದಂತ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ವಸತಿ ಯೋಜನೆಯಲ್ಲಿ ಮುಸ್ಲೀಂ ಸಮುದಾಯಕ್ಕೆ ಮೀಸಲಾತಿ ಹೆಚ್ಚಳಕ್ಕೆ ಅಸ್ತು ಎಂದಿದೆ. ಹೀಗಾಗಿ ಮುಸ್ಲೀಮರಿಗೆ ವಸತಿ ಯೋಜನೆಯಲ್ಲಿ ಮೀಸಲಾತಿ ಶೇ.10ರಿಂದ ಶೇ.15ಕ್ಕೆ ಹೆಚ್ಚಳವಾಗಲಿದೆ. ವಸತಿ ಯೋಜನೆಯಲ್ಲಿ ಅಲ್ಪಸಂಖ್ಯಾತರಿಗೆ ಶೇ.10ರಷ್ಟು ಮೀಸಲಾತಿ ಇತ್ತು. ಇದೀಗ ವಸತಿ ಯೋಜನೆಯ ಮೀಸಲಾತಿ ಶೇ.15ಕ್ಕೆ ಹೆಚ್ಚಳಕ್ಕೆ ರಾಜ್ಯ ಸಚಿವ ಸಂಪುಟ ಸಭೆ ಅನುಮೋದಿಸಿದೆ. https://kannadanewsnow.com/kannada/the-date-for-the-karnataka-legislative-assembly-monsoon-session-has-been-fixed-starting-from-august-11/ https://kannadanewsnow.com/kannada/breaking-grihalakshmi-money-released-for-the-month-of-may-minister-lakshmi-hebbalkar-gives-important-information/
ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ಯಾವುದೇ ರೀತಿಯ ಪರಿಷ್ಕರಣೆ ಇಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು. ಹಣ ಸಂದಾಯಕ್ಕೆ ತಾಂತ್ರಿಕ ಸಮಸ್ಯೆ ಆಗುತ್ತಿದೆಯೇ ಎಂಬ ಪ್ರಶ್ನೆಗೆ, ಆತಂಹ ಸಮಸ್ಯೆ ಏನೂ ಇಲ್ಲ ಎಂದರು. ಈಗಾಗಲೇ ಏಪ್ರಿಲ್ ತಿಂಗಳ ಹಣ ಸಂದಾಯವಾಗಿದ್ದು, ಮೇ ತಿಂಗಳ ಹಣ ವರ್ಗಾವಣೆ ಆಗಬೇಕಿದೆ. ನಮಗೆ ಹಣಕಾಸು ಇಲಾಖೆಯಿಂದ ಹಣ ಬಿಡುಗಡೆ ಆಗಬೇಕಿದೆ. ನಮ್ಮ ಇಲಾಖೆಯ ಬದಲಾಗಿ ಈಗ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಮೂಲಕ ಹಣ ಸಂದಾಯವಾಗುತ್ತಿದೆ ಎಂದು ಹೇಳಿದರು. ಗೃಹಲಕ್ಷ್ಮಿ ಯೋಜನೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕಾಳಜಿ ಇದೆ. ಯೋಜನೆಗೆ ಯಾವುದೇ ತೊಂದರೆ ಇಲ್ಲ. ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಗಳ ಮೂಲಕ ಹಣ ಸಂದಾಯವಾಗಬೇಕು ಎಂದು ಕೇಂದ್ರದ ನಿಯಮ ಇದೆ. ಹೀಗಾಗಿ ಫಲಾನುಭವಿಗಳಿಗೆ ಹಣ ತಲುಪಲು ಕೊಂಚ ವಿಳಂಬವಾಗುತ್ತಿದೆ ಎಂದು ಉತ್ತರಿಸಿದರು. ಪ್ರತಿ ತಿಂಗಳು 10 ರಿಂದ…
ಬೆಂಗಳೂರು: ಪರಿಸರ ಮತ್ತು ಹವಾಮಾನ ವೈಪರೀತ್ಯದಂತಹ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿ ಶಾಲೆಯಲ್ಲೂ ʼಜಾಗೃತಿ ಕ್ಲಬ್ʼಗಳನ್ನು ಕಡ್ಡಾಯವಾಗಿ ಆರಂಭಿಸಲು ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಈ ಜಾಗೃತಿ ಕ್ಲಬ್‌ಗಳು ಪರಿಸರ ಮತ್ತು ನಿಸರ್ಗವನ್ನು ಉಳಿಸುವ ದಿಸೆಯಲ್ಲಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಲಿದೆ ಎಂದು ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ತಿಳಿಸಿದ್ದಾರೆ. https://twitter.com/KarnatakaVarthe/status/1935311047487012957 “ಕಬ್ಬನ್ ಪಾರ್ಕ್, ಲಾಲ್ ಬಾಗ್ ರೀತಿ ಉದ್ಯಾನಗಳನ್ನು ಅಭಿವೃದ್ಧಿಪಡಿಸಿದರೆ ಬೆಂಗಳೂರು ನಗರದಾದ್ಯಂತ ಇರುವ ಅರಣ್ಯ ಇಲಾಖೆ ಜಾಗಗಳು ಉಳಿದಂತಾಗುತ್ತದೆ. ಸಾರ್ವಜನಿಕರಿಗೂ ಅನುಕೂಲವಾಗುತ್ತದೆ” ಎಂದು ಹೇಳಿದರು. “ಭೂಮಿ ನಮಗೆ ಸೇರಿದ್ದಲ್ಲ, ನಾವು ಭೂಮಿಗೆ ಸೇರಿದವರು ಎನ್ನುವುದನ್ನು ಯಾರೊಬ್ಬರು ಮರೆಯಬಾರದು. ಪ್ರಕೃತಿ ಉಚಿತವಾಗಿ ಊಟ ಕೊಡುತ್ತಿದೆ ಎಂದು ಅದನ್ನು ಕಂಠಪೂರ್ತಿ ತಿನ್ನಬಾರದು. ಭವಿಷ್ಯಕ್ಕೂ ಉಳಿಸಬೇಕು” ಎಂದು ತಿಳಿಸಿದರು. “ಸುತ್ತಲಿನ ಪ್ರಕೃತಿ, ಮಣ್ಣು, ನೀರನ್ನು ಉಳಿಸುವ ಸಂಕಲ್ಪವನ್ನು ನಮ್ಮ ಸರ್ಕಾರ ತೆಗೆದುಕೊಂಡಿದೆ. ಹಸಿರು ಮತ್ತು ಉಸಿರನ್ನು ರಕ್ಷಿಸುವ ಗ್ಯಾರಂಟಿಯನ್ನು ನಮ್ಮ ಸರ್ಕಾರ ನೀಡಲಿದೆ. ಪ್ರಕೃತಿಯಿಂದ ನಾವು ತೆಗೆದುಕೊಳ್ಳುವುದಕ್ಕಿಂತ ಹೆಚ್ಚಿಗೆ ಅದಕ್ಕೆ ವಾಪಸ್ ಕೊಡಬೇಕು. ಈ…