Author: kannadanewsnow09

ನವದೆಹಲಿ: ಕೇಂದ್ರ ಆರೋಗ್ಯ ಸೇವೆಗಳ ನಿರ್ದೇಶನಾಲಯವು ಹೊಸ ಭೌತಚಿಕಿತ್ಸೆಯ ಪಠ್ಯಕ್ರಮದಲ್ಲಿ ಬದಲಾವಣೆಗಳನ್ನು ಮಾಡುವಂತೆ ಕೇಳಿಕೊಂಡಿದ್ದು, ಫಿಜಿಯೋಥೆರಪಿಸ್ಟ್ ಗೆ “ಡಾ” ಪೂರ್ವಪ್ರತ್ಯಯದ ಬಳಕೆಯನ್ನು ತೆಗೆದುಹಾಕಲು ಕೇಳಿಕೊಂಡಿದೆ. ಇದು ರೋಗಿಗಳನ್ನು ದಾರಿ ತಪ್ಪಿಸಬಹುದು ಮತ್ತು ಗೊಂದಲಗೊಳಿಸಬಹುದು ಎಂದು ಹೇಳಿದೆ. ಭಾರತೀಯ ವೈದ್ಯಕೀಯ ಸಂಘ (ಐಎಂಎ) ಗೆ ಬರೆದ ಪತ್ರದಲ್ಲಿ, ಭಾರತೀಯ ಭೌತಚಿಕಿತ್ಸೆಯ ಸಾಮರ್ಥ್ಯ ಆಧಾರಿತ ಪಠ್ಯಕ್ರಮ, 2025 ರಲ್ಲಿನ ನಿಬಂಧನೆಗೆ ಭಾರತೀಯ ಫಿಜಿಯೋಥೆರಪಿಸ್ಟ್ ಗಳ ಸಂಘ (ಐಎಪಿಎಂಆರ್) ಸೇರಿದಂತೆ ಹಲವಾರು ಗುಂಪುಗಳು ಆಕ್ಷೇಪಣೆಗಳನ್ನು ವ್ಯಕ್ತಪಡಿಸಿವೆ ಎಂದು ಡಿಜಿಎಚ್‌ಎಸ್ ತಿಳಿಸಿದೆ. ಈ ವರ್ಷದ ಏಪ್ರಿಲ್‌ನಲ್ಲಿ ಹೊರಡಿಸಲಾದ ಪಠ್ಯಕ್ರಮವು ಫಿಜಿಯೋಥೆರಪಿಸ್ಟ್  ಪದವೀಧರರು ತಮ್ಮ ಹೆಸರಿನ ಮೊದಲು “ಡಾ” ಅನ್ನು “ಪಿಟಿ” ಪ್ರತ್ಯಯದೊಂದಿಗೆ ಬಳಸಬಹುದು ಎಂದು ಸೂಚಿಸಿತ್ತು. ಫಿಜಿಯೋಥೆರಪಿಸ್ಟ್ ಗಳು ವೈದ್ಯಕೀಯ ವೈದ್ಯರಾಗಿ ತರಬೇತಿ ಪಡೆದಿಲ್ಲ ಮತ್ತು ತಮ್ಮನ್ನು ತಾವು ಹಾಗೆ ಪ್ರಸ್ತುತಪಡಿಸಬಾರದು ಎಂದು ಡಿಜಿಎಚ್‌ಎಸ್ ಗಮನಿಸಿದೆ. ಡಿಜಿಎಚ್‌ಎಸ್ ಆರೋಗ್ಯ ರಕ್ಷಣೆಗೆ ಪ್ರಾಥಮಿಕ ನಿಯಂತ್ರಕ ಸಂಸ್ಥೆಯಾಗಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ಲಗತ್ತಿಸಲಾಗಿದೆ. “ಫಿಸಿಯೋಥೆರಪಿಸ್ಟ್ ಗಳಿಗೆ ವೈದ್ಯಕೀಯ…

Read More

ಚಿಕ್ಕಮಗಳೂರು: ಶಿವಮೊಗ್ಗದ ಭದ್ರಾವತಿಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಬೆನ್ನಲ್ಲೇ ಚಿಕ್ಕಮಗಳೂರಿನ ತರೀಕೆರೆಯಲ್ಲೂ ಪಾಕ್ ಪರ ಘೋಷಣೆ ಕೂಗಿದ ಘಟನೆ ನಡೆದಿತ್ತು. ಹೀಗೆ ಪಾಕಿಸ್ತಾನ ಪರ ಘೋಷಣೆ ಕೂಗಿದವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದ ಘಟನೆಗೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ ಮುಖಂಡ ನಾರಾಯಣಪ್ಪ ದೂರು ನೀಡಿದ್ದರು. ಈ ದೂರು ಆಧರಿಸಿ ತರೀಕೆರೆ ಪೊಲೀಸರು ಕೇಸ್ ದಾಖಲಿಸಿದ್ದಾರೆ. https://kannadanewsnow.com/kannada/four-people-took-oaths-as-newly-appointed-members-of-the-legislative-council/ https://kannadanewsnow.com/kannada/tumakuru-the-conflict-that-started-over-water-ends-in-a-grave-incident-horrific-murder-of-a-person-after-a-goods-vehicle-was-overturned/

Read More

ಬೆಂಗಳೂರು: ರಾಜ್ಯ ಕಾಂಗ್ರೆಸ್ ಪಕ್ಷದಿಂದ ವಿಧಾನ ಪರಿಷತ್ತಿಗೆ ನಾಲ್ವರನ್ನು ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಲಾಗಿತ್ತು. ಇಂದು ಅವರು ನೂತನ ವಿಧಾನ ಪರಿಷತ್ ನಾಮ ನಿರ್ದೇಶಿತ ಸದಸ್ಯರಾಗಿ ರಮೇಶ್ ಬಾಬು ಸೇರಿದಂತೆ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇಂದು ವಿಧಾನ ಸೌಧದ ಬ್ಯಾಕ್ವೆಟ್ ಹಾಲ್ ನಲ್ಲಿ ನಡೆದಂತ ಸರಳ ಸಮಾರಂಭದಲ್ಲಿ ನೂತನ ನಾಮ ನಿರ್ದೇಶಿಸಿತ ವಿಧಾನಸಭಾ ಸದಸ್ಯರಾಗಿ ರಮೇಶ್ ಬಾಬು, ಆರತಿ ಕೃಷ್ಣ, ಜಕ್ಕಪ್ಪನವರ್ ಹಾಗೂ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿದರು. ಅವರಿಗೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಪ್ರಮಾಣವಚನ ಬೋಧಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಗೃಹ ಸಚಿವ ಡಾ.ಜಿ ಪರಮೇಶ್ವರ್, ಕಾನೂನು ಸಚಿವ ಹೆಚ್.ಕೆ ಪಾಟೀಲ್ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು. https://kannadanewsnow.com/kannada/special-train-services-arranged-for-the-dasara-festival/

Read More

ರಾಯ್‌ಪುರ: ಛತ್ತೀಸ್‌ಗಢದ ಗರಿಯಾಬಂದ್ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮಾವೋವಾದಿ ನಾಯಕ ಮೋಡೆಮ್ ಬಾಲಕೃಷ್ಣ ಅಲಿಯಾಸ್ ಮನೋಜ್ ಮತ್ತು ಇತರ ಒಂಬತ್ತು ನಕ್ಸಲರನ್ನು ಹತ್ಯೆ ಮಾಡಲಾಗಿದೆ ಎಂದು ಗುರುವಾರ ಅಧಿಕಾರಿಗಳು ತಿಳಿಸಿದ್ದಾರೆ. ಆದಾಗ್ಯೂ, ಎನ್‌ಕೌಂಟರ್ ಇನ್ನೂ ನಡೆಯುತ್ತಿರುವುದರಿಂದ ಈ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ. ಎನ್‌ಕೌಂಟರ್ ಬಗ್ಗೆ ವಿವರಗಳನ್ನು ಒದಗಿಸುತ್ತಾ, ರಾಯ್‌ಪುರ ರೇಂಜ್ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಅಮರೇಶ್ ಮಿಶ್ರಾ, ಈ ಪ್ರದೇಶದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಯ ಸಮಯದಲ್ಲಿ ಮೈನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಾಡಿನಲ್ಲಿ ಎನ್‌ಕೌಂಟರ್ ಸಂಭವಿಸಿದೆ ಎಂದು ಹೇಳಿದರು. “ವಿಶೇಷ ಕಾರ್ಯಪಡೆ (ಎಸ್‌ಟಿಎಫ್), ಕೋಬ್ರಾ (ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್ – ಸಿಆರ್‌ಪಿಎಫ್‌ನ ಗಣ್ಯ ಘಟಕ) ಮತ್ತು ಇತರ ರಾಜ್ಯ ಪೊಲೀಸ್ ಘಟಕಗಳಿಗೆ ಸೇರಿದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಮಧ್ಯಂತರ ಗುಂಡಿನ ಚಕಮಕಿ ಇನ್ನೂ ನಡೆಯುತ್ತಿದೆ” ಎಂದು ಮಿಶ್ರಾ ಹೇಳಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ಉಲ್ಲೇಖಿಸಿದೆ. https://kannadanewsnow.com/kannada/special-train-services-arranged-for-the-dasara-festival/ https://kannadanewsnow.com/kannada/ugcet-final-round-results-announced-last-date-to-report-to-the-college-is-september-13/

Read More

ಹುಬ್ಬಳ್ಳಿ: ಪ್ರಮುಖ ಹಬ್ಬಗಳಲ್ಲಿ ಒಂದಾದ ದಸರಾ ಹಬ್ಬದ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ನೈಋತ್ಯ ರೈಲ್ವೆಯು ಒಂದು ಟ್ರಿಪ್ ಈ ಕೆಳಗಿನ ವಿಶೇಷ ರೈಲುಗಳನ್ನು ಓಡಿಸಲಿದೆ. ರೈಲುಗಳ ವಿವರಗಳು ಹೀಗಿವೆ: 1. ರೈಲು ಸಂಖ್ಯೆ 06249/06250 ಯಶವಂತಪುರ–ಮಡಗಾಂವ್–ಯಶವಂತಪುರ ಎಕ್ಸ್‌ಪ್ರೆಸ್ ವಿಶೇಷ ರೈಲು (1 ಟ್ರಿಪ್): ರೈಲು ಸಂಖ್ಯೆ 06249 ಯಶವಂತಪುರ–ಮಡಗಾಂವ್ ವಿಶೇಷ ಎಕ್ಸ್‌ಪ್ರೆಸ್ ರೈಲು ಸೆಪ್ಟೆಂಬರ್ 30, 2025 ರಂದು ಮಧ್ಯಾಹ್ನ 12:00 ಗಂಟೆಗೆ ಯಶವಂತಪುರದಿಂದ ಹೊರಟು, ಮರುದಿನ ಬೆಳಿಗ್ಗೆ 05:30 ಗಂಟೆಗೆ ಮಡಗಾಂವ್ ತಲುಪಲಿದೆ.ಮತ್ತೆ ಮರಳುವಾಗ, ರೈಲು ಸಂಖ್ಯೆ 06250 ಮಡಗಾಂವ್–ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ ರೈಲು ಅಕ್ಟೋಬರ್ 1, 2025 ರಂದು ಬೆಳಿಗ್ಗೆ 06:30 ಗಂಟೆಗೆ ಮಡಗಾಂವ್‌ನಿಂದ ಹೊರಟು, ಅದೇ ದಿನ ರಾತ್ರಿ 11:40 ಗಂಟೆಗೆ ಯಶವಂತಪುರ ತಲುಪಲಿದೆ. ಈ ರೈಲು 16 ಬೋಗಿಗಳನ್ನು (10 ಸ್ಲೀಪರ್ ಕ್ಲಾಸ್, 4 ಜನರಲ್ ಸೆಕೆಂಡ್ ಕ್ಲಾಸ್ ಸಿಟ್ಟಿಂಗ್ ಮತ್ತು 2 ಎಸ್‌ಎಲ್‌ಆರ್/ಡಿ ಬೋಗಿಗಳು) ಒಳಗೊಂಡಿರಲಿದೆ. ಈ ರೈಲು ಎರಡೂ ಮಾರ್ಗಗಳಲ್ಲಿ ಚಿಕ್ಕಬಾಣಾವರ,…

Read More

ಬೆಂಗಳೂರು: ಎಂಜಿನಿಯರಿಂಗ್‌ ಸೇರಿದಂತೆ ಇತರ ಯುಜಿಸಿಇಟಿ ಕೋರ್ಸ್‌ಗಳ ಮೂರನೇ ಹಾಗೂ ಅಂತಿಮ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಿದ್ದು, ಶುಲ್ಕ ಪಾವತಿಸಿ ಕಾಲೇಜಿಗೆ ವರದಿ ಮಾಡಿಕೊಳ್ಳಲು ಸೆ.13 ಕೊನೆ ದಿನ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್‌.ಪ್ರಸನ್ನ ತಿಳಿಸಿದ್ದಾರೆ.‌ ಯುಜಿಸಿಇಟಿ ಕೋರ್ಸ್‌ಗಳಲ್ಲಿ ಸೀಟು ಹಂಚಿಕೆಯಾದವರು ಕಡ್ಡಾಯವಾಗಿ ಕಾಲೇಜುಗಳಲ್ಲಿ ಪ್ರವೇಶ ಪಡೆಯಬೇಕಾಗುತ್ತದೆ. ಅಂತಹವರಿಗೆ ಯಾವುದೇ ಛಾಯ್ಸ್‌ ಆಯ್ಕೆಗೂ ಅವಕಾಶ ಇರುವುದಿಲ್ಲ ಎಂದು ಅವರು ಹೇಳಿದ್ದಾರೆ. ಸೀಟು ಹಂಚಿಕೆಯಾದವರು ಇದುವರೆಗೂ ಶುಲ್ಕ ಪಾವತಿ ಮಾಡದೇ ಇದ್ದರೆ ಸೆ.13ರಂದು ಮಧ್ಯಾಹ್ನ 2.30ರೊಳಗೆ ಕಟ್ಟಬೇಕು. ಅದೇ ದಿನ ಸಂಜೆ 5.30ರೊಳಗೆ ಸೀಟು ಖಾತರಿ ಚೀಟಿ ಡೌನ್‌ಲೋಡ್ ಮಾಡಿಕೊಂಡು ಕಾಲೇಜಿಗೆ ವರದಿ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು. ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸ್‌ಗಳ ಪ್ರವೇಶಕ್ಕೆ ಅಂತಿಮ ಫಲಿತಾಂಶವನ್ನು ಎಂಸಿಸಿ ಫಲಿತಾಂಶದ ನಂತರ ಪ್ರಕಟಿಸಲಾಗುತ್ತದೆ. ಅಲ್ಲಿಯವರೆಗೂ ಕಾದು ನೋಡಲು ಅವರು ಸಲಹೆ ನೀಡಿದ್ದಾರೆ. ಹಂಚಿಕೆಯಾಗದೆ ಉಳಿದಿರುವ 14,940 ಎಂಜಿನಿಯರಿಂಗ್ ಹಾಗೂ 413 ಆರ್ಕಿಟೆಕ್ಚರ್ ಕೋರ್ಸ್ ಗಳ…

Read More

ಬೆಂಗಳೂರು: ರಾಜ್ಯದ ಗ್ರಾಮ ಆಡಳಿತಾಧಿಕಾರಿಗಳಿಗೆ ಆನ್ ಲೈನ್ ಮೂಲಕ ಕಡತ ವಿಲೇವಾರಿಗೆ ಉಪಯೋಗ ಆಗುವ ನಿಟ್ಟಿನಲ್ಲಿ ಲ್ಯಾಪ್ ಟಾಪ್ ವಿತರಣೆಗೆ ಸಚಿವ ಸಂಪುಟ ಅನುಮೋದಿಸಿದೆ. ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು, ಕಂದಾಯ ಇಲಾಖೆಯಲ್ಲಿ ಡಿಜಿಟಲೀಕರಣ ಮತ್ತು ಇ-ಆಡಳಿತ ನೀಡುವ ಉದ್ದೇಶದಿಂದ ನಮ್ಮ ಸರ್ಕಾರದಿಂದ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ದಿಶೆಯಲ್ಲಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿರುವುದು ಹೆಮ್ಮೆಯ ವಿಷಯವಾಗಿದೆ. ಇದರ ಮುಂದುವರೆದ ಭಾಗವಾಗಿ ಕಂದಾಯ ಇಲಾಖೆಯಲ್ಲಿ ಸಂಪೂರ್ಣ ಡಿಜಿಟಲೀಕರಣ ಆಡಳಿತ ಸಾಧಿಸಲು ಕೆಳಹಂತದಿಂದಲೇ ಎಲ್ಲರಿಗೂ ಆನ್ಲೈನ್ ಕಡತ ವಿಲೇವಾರಿ ಜಾರಿ ಮಾಡಲು ಎಲ್ಲಾ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್ಟಾಪ್ ಒದಗಿಸಲು ಸಂಪುಟ ಮಂಜೂರಾತಿ ಮಾಡಿದೆ. ಈಗಾಗಲೇ 5000 ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್ಟಾಪ್ ನೀಡಲಾಗುತ್ತಿದೆ. ಉಳಿದ ಗ್ರಾಮ ಆಡಳಿತಾಧಿಕಾರಿಗಳಿಗೆ ಮತ್ತು ಕಂದಾಯ ನಿರೀಕ್ಷಕರುಗಳಿಗೆ 3500 ಲ್ಯಾಪ್ಟಾಪ್ ನೀಡಲು 19.25 ಕೋಟಿ ಅನುದಾನ ಒದಗಿಸಲು ಇಂದಿನ ಸಭೆಯಲ್ಲಿ ಸಂಪುಟ ಅನುಮತಿ ನೀಡಿದೆ ಎಂದಿದ್ದಾರೆ. ಇದರಿಂದ ಈ ವರ್ಷದಿಂದಲೇ ಕಂದಾಯ ಇಲಾಖೆಯ ಎಲ್ಲಾ ಹಂತಗಳಲ್ಲಿ…

Read More

ಬೆಂಗಳೂರು: ಸ್ಯಾಂಡಲ್ ವುಡ್ ನಟ ವಿಷ್ಣುವರ್ಧನ್ ಗೆ ಹಾಗೂ ಬಿ.ಸರೋಜಾದೇವಿಗೂ ಕರ್ನಾಟಕ‌ರತ್ನ ಪ್ರಶಸ್ತಿ ನೀಡಲು ರಾಜ್ಯ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದೆ. ಅಲ್ಲದೇ ಕುವೆಂಪು ಅವರಿಗೆ ಭಾರತ ರತ್ನ‌ಪ್ರಶಸ್ತಿ ನೀಡಬೇಕು. ಈ ಬಗ್ಗೆ ಕೇಂದ್ರಕ್ಕೆ ಶಿಫಾರಸು‌ಮಾಡಲು ನಿರ್ಧರಿಸಲಾಗಿದೆ. ಆ ಎಲ್ಲಾ ಇಂದಿನ ರಾಜ್ಯ ಸಚಿವ ಸಂಪುಟ ಸಭೆಯ ಪ್ರಮುಖ ಹೈಲೈಟ್ಸ್ ಮುಂದಿದೆ ಓದಿ. ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಸಂಪುಟದ ನಿರ್ಧಾರಗಳನ್ನು ವಿವರಿಸಿದಂತ ಸಚಿವ ಹೆಚ್.ಕೆ ಪಾಟೀಲ್ ಅವರು, ಇಂದು 40 ವಿಷಯಗಳ ಬಗ್ಗೆ ಚರ್ಚೆಯಾಗಿದೆ. ಉಪಖನಿಜ ರಿಯಾಯ್ತಿ ತಿದ್ದುಪಡಿ ನಿಯಮಕ್ಕೆ ಒಪ್ಪಿಗೆ ನೀಡಲಾಗಿದೆ. ಜನರಿಗೆ ಅನುಕೂಲವಾಗುವಂತೆ ಸರಳೀಕರಣ ಮಾಡಲಾಗುತ್ತಿದೆ. ಮಣ್ಣು,ಮರಳು ತೆಗೆಯಲು ಅನುಕೂಲ ಆಗಲಿದೆ ಎಂದರು. ಪ್ರೋಟೋಕಾಲ್ ಮಾರ್ಗಸೂಚಿ‌ ಪರಿಷ್ಕರಣೆ ಮಾಡಲಾಗುತ್ತಿದೆ. ಸರ್ಕಾರಿ ಕಾರ್ಯಕ್ರಮಗಳಿಗೆ ಅನ್ವಯವಾಗಲಿದೆ. ಆಹ್ವಾನ ಪತ್ರಿಕೆಗಳಲ್ಲಿ‌ ಗಣ್ಯರ ಹೆಸರು ಸೇರಿಸಲು ಅವಕಾಶ ನೀಡಲಾಗುತ್ತದೆ. ಶಿಷ್ಟಾಚಾರ ಪಟ್ಟಿ ಬದಲಾವಣೆಗೆ ಕ್ಯಾಬಿನೆಟ್ ಒಪ್ಪಿಗೆ ಸೂಚಿಸಿದೆ. ಹೆಚ್ಚು ಮಂದಿ ಸೇರಿಸುವುದಕ್ಕೆ ಕಡಿವಾಣ ಬೀಳಲಿದೆ. 9 ಗಣ್ಯರಿಗಷ್ಟೇ ಇನ್ಮುಂದೆ ಆಹ್ವಾನಿಸಲು ಸಮ್ಮತಿ ನೀಡಲಾಗಿದೆ. ಈ ಮೊದಲು 20, 25…

Read More

ಬೆಂಗಳೂರು: ದಿವಂಗತ ನಟ ವಿಷ್ಣವರ್ಧನ್ ಹಾಗೂ ಬಿ ಸರೋಜಾ ದೇವಿ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿ ರಾಜ್ಯ ಸರ್ಕಾರ ಆದೇಶಿಸಿದೆ. ಈ ಮೂಲಕ ಬಹು ದಿನಗಳ ಅಭಿಮಾನಿಗಳ ಬೇಡಿಕೆಯನ್ನು ಸರ್ಕಾರ ಈಡೇರಿಸಿದಂತೆ ಆಗಿದೆ. ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಇಂದಿನ ಸಚಿವ ಸಂಪುಟ ಸಭೆಯಲ್ಲಿ ಮರಣೋತ್ತರವಾಗಿ ದಿವಂಗತ ನಟ ಡಾ.ವಿಷ್ಣುವರ್ಧನ್ ಹಾಗೂ ಬಿ.ಸರೋಜಾ ದೇವಿ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ಅಂದಹಾಗೇ ಕೆಲ ದಿನಗಳ ಹಿಂದೆಯಷ್ಟೇ ನಟ ವಿಷ್ಣುವರ್ಧನ್ ಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಸ್ಯಾಂಡಲ್ ವುಡ್ ಹಿರಿಯ ನಟಿಯರು ಮುಖ್ಯಮಂತ್ರಿ ಸಿದ್ಧರಾಮಯ್ಯ ಭೇಟಿಯಾಗಿ ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿರುವಂತ ಸಿಎಂ ಸಿದ್ಧರಾಮಯ್ಯ, ಇಂದಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮರಣೋತ್ತರವಾಗಿ ನಟ ವಿಷ್ಣುವರ್ಧನ್, ನಟಿ ಬಿ ಸರೋಜಾ ದೇವಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ನಿರ್ಧರಿಸಿದ್ದಾರೆ.

Read More

ಬೆಂಗಳೂರು: ದಿವಂಗತ ನಟ ವಿಷ್ಣವರ್ಧನ್ ಹಾಗೂ ಬಿ ಸರೋಜಾ ದೇವಿ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿ ರಾಜ್ಯ ಸರ್ಕಾರ ಆದೇಶಿಸಿದೆ. ಈ ಮೂಲಕ ಬಹು ದಿನಗಳ ಅಭಿಮಾನಿಗಳ ಬೇಡಿಕೆಯನ್ನು ಸರ್ಕಾರ ಈಡೇರಿಸಿದಂತೆ ಆಗಿದೆ. ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಇಂದಿನ ಸಚಿವ ಸಂಪುಟ ಸಭೆಯಲ್ಲಿ ಮರಣೋತ್ತರವಾಗಿ ದಿವಂಗತ ನಟ ಡಾ.ವಿಷ್ಣುವರ್ಧನ್ ಹಾಗೂ ಬಿ.ಸರೋಜಾ ದೇವಿ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ಅಂದಹಾಗೇ ಕೆಲ ದಿನಗಳ ಹಿಂದೆಯಷ್ಟೇ ನಟ ವಿಷ್ಣುವರ್ಧನ್ ಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಸ್ಯಾಂಡಲ್ ವುಡ್ ಹಿರಿಯ ನಟಿಯರು ಮುಖ್ಯಮಂತ್ರಿ ಸಿದ್ಧರಾಮಯ್ಯ ಭೇಟಿಯಾಗಿ ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿರುವಂತ ಸಿಎಂ ಸಿದ್ಧರಾಮಯ್ಯ, ಇಂದಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮರಣೋತ್ತರವಾಗಿ ನಟ ವಿಷ್ಣುವರ್ಧನ್, ನಟಿ ಬಿ ಸರೋಜಾ ದೇವಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ನಿರ್ಧರಿಸಿದ್ದಾರೆ.

Read More