Author: kannadanewsnow09

ಬೆಂಗಳೂರು: ದೇಶಾದ್ಯಂತ ತೀರ್ಥಯಾತ್ರೆಗೆ ತೆರಳುವವರ ಸಂಖ್ಯೆ ಹೆಚ್ಚುತ್ತಿದ್ದು, 2024-25 ವರ್ಷದಲ್ಲಿ ತೀರ್ಥಯಾತ್ರೆಗಳ ವಸತಿ ಬುಕ್ಕಿಂಗ್‌ನಲ್ಲಿ ಶೇ. 19ರಷ್ಟು ವೃದ್ಧಿಯಾಗಿದೆ ಎಂದು ಮೇಕ್‌ ಮೈ ಟ್ರಿಪ್‌ ತಿಳಿಸಿದೆ. ಈ ಕುರಿತು ಮಾತನಾಡಿದ ಮೇಕ್‌ಮೈಟ್ರಿಪ್‌ನ ಸಹಸ್ಥಾಪಕ ಮತ್ತು ಗ್ರೂಪ್ ಸಿಇಒ ರಾಜೇಶ್ ಮಗೊವ್, ತನ್ನ ಬುಕ್ಕಿಂಗ್‌ ಆಪ್‌ನಲ್ಲಿ ತೀರ್ಥಯಾತ್ರಿಕ ಸಂಖ್ಯೆ ಹೆಚ್ಚುತ್ತಿದ್ದು, ದೇಶಾದ್ಯಂತ 34 ತಾಣಗಳಲ್ಲಿ ಎರಡಂಕಿ ಬೆಳವಣಿಗೆ ದಾಖಲಿಸಿದೆ, ಇನ್ನು, 15 ತಾಣಗಳಲ್ಲಿ ಶೇ.25ಕ್ಕಿಂತ ಹೆಚ್ಚಿನ ಬೆಳವಣಿಗೆ ಸಾಧಿಸುವ ಮೂಲಕ ಆಧ್ಯಾತ್ಮಿಕ ಪ್ರಯಾಣಕ್ಕೆ ಜನ ಆದ್ಯತೆ ನೀಡುತ್ತಿರುವುದು ತಿಳಿದುಬಂದಿದೆ. ಪ್ರಮುಖ ಧಾರ್ಮಿಕ ಸ್ಥಳಗಳಾದ ಪ್ರಯಾಗ್‌ರಾಜ್, ವಾರಣಾಸಿ, ಅಯೋಧ್ಯ, ಪುರಿ, ಅಮೃತ್ಸರ, ಮತ್ತು ತಿರುಪತಿ ಸೇರಿದಂತೆ ಮುಂತಾದ ಸ್ಥಳಗಳಲ್ಲಿ ಹೆಚ್ಚು ಬುಕ್ಕಿಂಗ್‌ ಆಗಿವೆ. ಜೊತೆಗೆ, ಖಾತುಷ್ಯಾಮ್ ಜಿ, ಓಂಕಾರೇಶ್ವರ ಮತ್ತು ತಿರುಚೆಂದೂರ್ ಮುಂತಾದ ಸ್ಥಳಗಳೂ ಕೂಡ ಹೆಚ್ಚು ಬುಕ್ಕಿಂಗ್‌ ನೋಡಬಹುದು. ಯಾತ್ರಾ ಬೇಡಿಕೆಯಲ್ಲಿನ ಪ್ರಬಲ ಬೆಳವಣಿಗೆಗೆ, ಪ್ರಮುಖ ಗಮ್ಯಗಳಾದ್ಯಂತ ವಸತಿಯ ಚುರುಕಾದ ವಿಸ್ತರಣೆಯೂ ಕಾರಣವಾಗಿದೆ. ಪ್ರಯಾಣಿಕರು ಬಹುತೇಕವಾಗಿ, ಚಿಕ್ಕದಾದ, ಉದ್ದಿಶ್ಯಿತ ವಸತಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದು,…

Read More

ಹಾಸನ: ಗಣೇಶ ಮೆರವಣಿಗೆ ವೇಳೆಯಲ್ಲಿ ಟ್ರಕ್ ಒಂದು ಚಾಲಕನ ನಿಯಂತ್ರಣ ತಪ್ಪಿ ಜನರ ಮೇಲೆ ಹರಿದ ಪರಿಣಾಮ, ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿ, ಹಲವರು ಗಾಯಗೊಂಡಿರುವಂತ ಘೋರ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ತಾಲ್ಲೂಕಿನ ಮೊಸಳೆಹೊಸಳ್ಳಿ ಬಳಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಗಣೇಶ ಮೆರವಣಿಗೆ ವೇಳೆ ಟ್ರಕ್ ಹರಿದು ನಾಲ್ವರು ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದು, ಸಾವು-ನೋವಿನ ಸಂಖ್ಯೆ ಹೆಚ್ಚಾಗುವ ಸಾಖ್ಯತೆ ಇದೆ ಎನ್ನಲಾಗುತ್ತಿದೆ. https://kannadanewsnow.com/kannada/shots-fired-outside-actor-disha-patanis-house/ https://kannadanewsnow.com/kannada/the-hearing-of-the-pil-filed-against-the-selection-of-writer-banu-mushtaq-for-the-dasara-inauguration-on-the-15th-has-been-scheduled/

Read More

ಬೆಂಗಳೂರು: ರಾಜ್ಯ ಸರ್ಕಾರದಿಂದ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಉದ್ಘಾಟನೆಗೆ ಲೇಖಕಿ ಬಾನು ಮುಷ್ತಾಕ್ ಆಯ್ಕೆ ಮಾಡಲಾಗಿತ್ತು. ಈ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಸಲ್ಲಿಸಲಾಗಿತ್ತು. ಈ ಅರ್ಜಿಗಳನ್ನು ಸೆಪ್ಟೆಂಬರ್.15ಕ್ಕೆ ವಿಚಾರಣೆ ನಡೆಸಲು ನಿಗದಿ ಪಡಿಸಲಾಗಿದೆ. ಲೇಖಕಿ ಬಾನು ಮುಷ್ತಾಕ್ ಅವರು ಮೈಸೂರು ದಸರಾ ಉದ್ಘಾಟನೆ ವಿರೋಧಿಸಿ ಹೈಕೋರ್ಟ್ ಗೆ ಮೂರು ಪಿಐಎಲ್ ಸಲ್ಲಿಕೆಯಾಗಿದ್ದವು. ಈ ಅರ್ಜಿಗಳನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ಪೀಠದಲ್ಲಿ ವಿಚಾರಣೆಗೆ ದಿನಾಂಕ ನಿಗದಿ ಪಡಿಸಲಾಗಿದೆ. ಸೆಪ್ಟೆಂಬರ್.15ರಂದು ಮಾಜಿ ಸಂಸದ ಪ್ರತಾಪ್ ಸಿಂಹ, ಟಿ.ಗಿರೀಶ್ ಕುಮಾರ್, ಹೆಚ್.ಎಸ್ ಗೌರವ್ ಸಲ್ಲಿಸಿದ್ದಂತ ಪಿಐಎಲ್ ಅರ್ಜಿಗಳ ವಿಚಾರಣೆ ನಡೆಯಲಿದೆ. ದಸರಾ ಉದ್ಘಾಟನೆ ಹಿಂದೂ ಸಂಪ್ರದಾಯದಂತೆ ನಡೆಯಬೇಕು. ಸರ್ಕಾರ ನೀಡಿರುವ ಆಹ್ವಾನ ಹಿಂಪಡೆಯುವಂತೆ ನಿರ್ದೇಶನ ಕೋರಲಾಗಿದೆ. https://kannadanewsnow.com/kannada/sushila-karki-takes-the-oath-as-the-new-prime-minister-of-nepal/ https://kannadanewsnow.com/kannada/shots-fired-outside-actor-disha-patanis-house/

Read More

ನೇಪಾಳ: ನೇಪಾಳ ಯುವಜನರ ನೇತೃತ್ವದ ಪ್ರತಿಭಟನೆಗಳ ನಡುವೆ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರ ರಾಜೀನಾಮೆಯ ನಂತರ, ನೇಪಾಳದ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಶುಕ್ರವಾರ ಮಧ್ಯಂತರ ಸರ್ಕಾರದ ಮುಖ್ಯಸ್ಥೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನೇಪಾಳದ ನೂತನ ಪ್ರಧಾನಿಯಾಗಿ ಸುಶೀಲಾ ಕರ್ಕಿ ಪ್ರಮಾಣವಚನ ಸ್ವೀಕರಿಸಿದ್ದು, ನೇಪಾಳದ ಮೊದಲ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ರಾಷ್ಟ್ರಪತಿಗಳ ನಿವಾಸ ಶೀತಲ್ ನಿವಾಸ್‌ನಲ್ಲಿ ರಾತ್ರಿ 8:45 ಕ್ಕೆ (ಸ್ಥಳೀಯ ಸಮಯ) ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು ಎಂದು ರಾಷ್ಟ್ರಪತಿ ಕಚೇರಿಯ ಮೂಲಗಳು ತಿಳಿಸಿವೆ. ನೇಪಾಳದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ ಕಾರ್ಕಿ, ಜುಲೈ 2016 ರಿಂದ ಜೂನ್ 2017 ರವರೆಗೆ ಸೇವೆ ಸಲ್ಲಿಸಿದರು. ಪರಿವರ್ತನಾ ನ್ಯಾಯ ಮತ್ತು ಚುನಾವಣಾ ವಿವಾದಗಳ ಕುರಿತಾದ ತೀರ್ಪುಗಳಿಗೆ ಹೆಸರುವಾಸಿಯಾದ ಅವರು 1979 ರಲ್ಲಿ ಕಾನೂನು ಅಭ್ಯಾಸ ಮಾಡಲು ಪ್ರಾರಂಭಿಸಿದರು, 2007 ರಲ್ಲಿ ಹಿರಿಯ ವಕೀಲರಾಗಿ ನೇಮಕಗೊಂಡರು ಮತ್ತು 2009 ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ದೇಶದ Gen-Z ಚಳವಳಿಯ…

Read More

ಬರೇಲಿ: ಗುರುವಾರ ತಡರಾತ್ರಿ ಉತ್ತರ ಪ್ರದೇಶದ ಬರೇಲಿಯಲ್ಲಿರುವ ಬಾಲಿವುಡ್ ನಟಿ ದಿಶಾ ಪಟಾನಿ ಅವರ ಮನೆಯ ಹೊರಗೆ ಗುಂಡು ಹಾರಿಸಲಾಗಿದೆ. ಪೊಲೀಸರ ಪ್ರಕಾರ, ಅಪರಿಚಿತ ದುಷ್ಕರ್ಮಿಗಳು ಮೂರರಿಂದ ನಾಲ್ಕು ಸುತ್ತು ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಗುಂಡಿನ ದಾಳಿಗೆ ಕಾರಣರಾದವರನ್ನು ಪತ್ತೆಹಚ್ಚಲು ಅಧಿಕಾರಿಗಳು ಹುಡುಕಾಟ ಆರಂಭಿಸಿದ್ದಾರೆ. https://kannadanewsnow.com/kannada/do-not-take-loans-expecting-forgiveness-whoever-comes-to-power-in-the-future-will-not-forgive-loans-d-k-suresh/

Read More

ಕನಕಪುರ: “ಬೆಳೆಸಾಲ,‌ ಹಸು ಸಾಲ ಪಡೆದು ಆರ್ಥಿಕವಾಗಿ ಸಬಲರಾಗಿ.‌ ಬೆಂಗಳೂರಿಗೆ ವಲಸೆ ಹೋಗಿ ಸೆಕ್ಯುರಿಟಿ ಗಾರ್ಡ್ ಗಳಾಗಿ, ಹೋಟೆಲ್ ಕೆಲಸ ಮಾಡಿಕೊಂಡು ಕಷ್ಟದಲ್ಲಿ ಜೀವನ ತಳ್ಳಬೇಡಿ. ಸ್ವಂತ ಊರಿನಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಿ” ಎಂದು ಬಮುಲ್ ಅಧ್ಯಕ್ಷರಾದ ಡಿ.ಕೆ.ಸುರೇಶ್ ಅವರು ಕರೆ ನೀಡಿದರು. ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಹಾಗೂ ಕನಕಪುರ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಕನಕಪುರದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬೆಳೆಸಾಲ, ಸ್ತ್ರೀ ಶಕ್ತಿ ಸಹಾಯ ಸಂಘದ ಸಾಲ ಮತ್ತು ಸಾಕಾಣಿಕೆ ಸಾಲ ವಿತರಣಾ ಸಮಾರಂಭದಲ್ಲಿ ಡಿ.ಕೆ. ಸುರೇಶ್ ಅವರು ಮಾತನಾಡಿದರು. “1.10 ಲಕ್ಷ ಜನರಿಗೆ ಬಿಡಿಸಿಸಿ ಬ್ಯಾಂಕ್ ಸಾಲ ನೀಡಿದೆ. ಅದರಲ್ಲಿ ನಮ್ಮ ಕ್ಷೇತ್ರದ ಜನರೇ 15,304 ಜನರಿದ್ದಾರೆ. ಇವರಿಗೆ 300 ಕೋಟಿಯಷ್ಟು ಬೆಳೆ ಹಾಗೂ ಜಾನುವಾರು ಸಾಲ ನೀಡಲಾಗಿದೆ. ಯಾರ ಬಳಿಯೂ ಕೈಯೊಡ್ಡಿ ಬದುಕಬೇಡಿ ಎಂದು ನಾವು ನಿಮಗೆ ಆಸರೆಯಾಗಿ ನಿಲ್ಲುತ್ತಿದ್ದೇವೆ. ಬೆಂಗಳೂರಿನಲ್ಲಿ ಮನೆಗೆಲಸಕ್ಕೆ ಹೋಗುವ ಬದಲು ತಾಯಂದಿರು ಎರಡು ಹಸು…

Read More

ಚಿಕ್ಕಮಗಳೂರು : ಉದ್ದೇಶಿತ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಕೇಂದ್ರ ವನ್ಯಜೀವಿ ಮಂಂಡಳಿ ಅನುಮೋದನೆ ನೀಡಿದ್ದು, ಸ್ಥಳೀಯರ ಮನವೊಲಿಸಿ ಶೀಘ್ರವೇ ಕಾಮಗಾರಿ ಆರಂಭಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿಗಳೂ ಆಗಿರುವ ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. ಇಲ್ಲಿನ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಸಂಬಂಧಿಸಿದಂತೆ ಆ ಭಾಗದ ಜನರಿಗೆ ಯಾವುದೇ ಆತಂಕ ಬೇಡ. ಪರಿಸರದ ಮೇಲೆ ದುಷ್ಪರಿಣಾಮ ಬೀರದಂತೆ ಯೋಜನೆ ಜಾರಿಗೊಳಿಸಲಾಗುವುದು. ಪರಿಸರದ ಮೇಲೆ ದೊಡ್ಡ ಮಟ್ಟದಲ್ಲಿ ಹಾನಿಯಾಗುವುದಿಲ್ಲ. ಈ ವಿಚಾರವನ್ನು ಜನರಿಗೆ ತಿಳಿಸಿ ಅವರ ಮನವೊಲಿಸಲಾಗುವುದು ಎಂದರು. 2000 ಮೆಗಾವ್ಯಾಟ್ ಸಾಮರ್ಥ್ಯ ಈ ಯೋಜನೆ ಅನುಷ್ಠಾನಕ್ಕೆ ಕೇವಲ ಕೇವಲ 120 ಎಕರೆ ಜಮೀನು ಸಾಕು.ಇದರಲ್ಲಿ 50 ಎಕರೆ ಖಾಸಗಿಯಾಗಿದ್ದು, ಉಳಿದಂತೆ ಕಂದಾಯ ಮತ್ತು ಅರಣ್ಯ ಮತ್ತು ಕಂದಾಯ ಭೂಮಿಯನ್ನು ಬಳಸಿಕೊಳ್ಳಲಾಗುತ್ತದೆ. ಖಾಸಗಿಯವರ ಭೂಮಿಗೆ ಸೂಕ್ತ ಪರಿಹಾರ ನೀಡಲಾಗುವುದು. ಯೋಜನೆಗೆ ಬಳಸಿಕೊಳ್ಳುವ ಅರಣ್ಯಕ್ಕೆ ಬದಲಾಗಿ ಅರಣ್ಯ ಇಲಾಖೆಗೆ ಅರಣ್ಯೀಕರಣಕ್ಕೆ ಬೇಕೆ ಕಡೆಭೂಮಿ ನೀಡಲಾಗುವುದು ಎಂದು…

Read More

ಬೆಂಗಳೂರು : ರಾಜ್ಯ ಸರ್ಕಾರವು ಸಿನಿ ಪ್ರಿಯರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಇಂದಿನಿಂದ ಚಿತ್ರಮಂದಿರಗಳಲ್ಲಿ 200 ರೂ.ಟಿಕೆಟ್ ಗೆ ಅನುಮೋದನೆ ನೀಡಿದೆ. ಈ ಕುರಿತು ಸರ್ಕಾರ ಅಧಿಕೃತ ಆದೇಶ ಕೂಡ ಹೊರಡಿಸಿದೆ. ರಾಜ್ಯದ ಎಲ್ಲಾ ಮಲ್ಟಿಪ್ಲೆಕ್ಸ್, ಚಿತ್ರಮಂದಿರಗಳಲ್ಲಿ ಏಕರೂಪದ ದರ ಜಾರಿಗೊಳಿಸಿ ಸರ್ಕಾರ ಆದೇಶಿಸಿದೆ. ಹೀಗಾಗಿ ರಾಜ್ಯದ ಎಲ್ಲಾ ಚಿತ್ರಮಂದಿರ, ಮಲ್ಟಿಪ್ಲೆಕ್ಸ್ ಗಳಲ್ಲಿ ಇನ್ಮುಂದೆ ಟಿಕೆಟ್ ದರ ಏಕರೂಪವಾಗಿ ಇರಲಿದೆ. ಈ ಸಂಬಂಧ ರಾಜ್ಯ ಸರ್ಕಾರ ಆದೇಶ ಮಾಡಿದ್ದು, ರಾಜ್ಯದಲ್ಲಿರುವ ಎಲ್ಲಾ ಮಲ್ಟಿಫ್ಲೆಕ್ಸ್ ಗಳು ಸೇರಿದಂತೆ ಎಲ್ಲಾ ಚಿತ್ರಮಂದಿರಗಳಲ್ಲಿ ಏಕರೂಪದ ದರ ಜಾರಿಗೊಳಿಸಿ ಆದೇಶಿಸಿದೆ. ಎಲ್ಲಾ ಚಿತ್ರಮಂದಿರಗಳಲ್ಲಿ ಏಕರೂಪದ ದರ ಜಾರಿಗೊಳಿಸಲಾಗಿದೆ. ರೂ.200 ಮೀರದಂತೆ ಆದೇಶ ಹೊರಡಿಸಿದೆ. ಎಲ್ಲಾ ಭಾಷೆಯ ಸಿನಿಮಾಗಳಿಗೂ ಏಕರೂಪದ ದರವನ್ನು ಜಾರಿಗೊಳಿಸಲಾಗಿದೆ. ರಾಜ್ಯದಲ್ಲಿನ ಎಲ್ಲಾ ಭಾಷೆಯ ಸಿನಿಮಾಗಳಿಗೂ ಏಕರೂಪದ ದರವನ್ನು ಜಾರಿಗೊಳಿಸಲಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ.

Read More

ಒಬ್ಬ ವ್ಯಕ್ತಿಯು ಬಡವನಾಗಿ ಹುಟ್ಟಿ ಬಡ ಜೀವನವನ್ನು ನಡೆಸಲು ಹಲವು ಕಾರಣಗಳಿವೆ. ಆಧ್ಯಾತ್ಮಿಕವಾಗಿ, ವಿವಿಧ ಪುರಾಣಗಳು, ಸಿದ್ಧರ ಬೋಧನೆಗಳು ಮತ್ತು ವೇದಾಂತ ದೃಷ್ಟಿಕೋನವು ವ್ಯಕ್ತಿಯು ಬಡವನಾಗಲು ಕಾರಣಗಳನ್ನು ನಮಗೆ ಹೇಗೆ ವಿವರಿಸುತ್ತದೆ? ಈ ಲೇಖನದಲ್ಲಿ, ನಾವು ಆಸಕ್ತಿದಾಯಕ ಆಧ್ಯಾತ್ಮಿಕ ಮಾಹಿತಿಯನ್ನು ಹಂಚಿಕೊಳ್ಳುತ್ತೇವೆ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ…

Read More

ನೇಪಾಳದ ರಾಜಕೀಯ ಬಿಕ್ಕಟ್ಟು ನಾಟಕೀಯ ತಿರುವು ತಲುಪಿದ್ದು, ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರು ದೇಶದ ಮಧ್ಯಂತರ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹೀಗಾಗಿ ನೇಪಾಳ ಸಂಸತ್ ವಿಸರ್ಜನೆಯಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ದೇಶದಲ್ಲಿ ಮಾರಕ ಅಶಾಂತಿಯ ನಂತರ ವ್ಯಾಪಕ ರಾಜಕೀಯ ಬದಲಾವಣೆಯನ್ನು ಒತ್ತಾಯಿಸಿರುವ ಅಧ್ಯಕ್ಷ ರಾಮಚಂದ್ರ ಪೌಡೆಲ್, ಸುಶೀಲಾ ಕರ್ಕಿ ಮತ್ತು ಜೆನ್-ಝಡ್ ಪ್ರತಿಭಟನಾ ಚಳವಳಿಯ ಪ್ರತಿನಿಧಿಗಳ ನಡುವಿನ ತೀವ್ರವಾದ ಮಾತುಕತೆಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಒಪ್ಪಂದದ ಭಾಗವಾಗಿ, ನೇಪಾಳದ ಸಂಸತ್ತನ್ನು ವಿಸರ್ಜಿಸಲಾಗಿದೆ. ಇದು ಸಾಂವಿಧಾನಿಕ ಹೊಂದಾಣಿಕೆಯ ಮೂಲಕ ಸುಶೀಲಾ ಕರ್ಕಿ ಅವರ ಉನ್ನತೀಕರಣಕ್ಕೆ ದಾರಿ ಮಾಡಿಕೊಡುತ್ತದೆ. ಸುಶೀಲಾ ಕರ್ಕಿ ಅವರನ್ನು ಮೊದಲು ಮೇಲ್ಮನೆಗೆ ನಾಮನಿರ್ದೇಶನ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಒಟ್ಟಾರೆಯಾಗಿ ನೇಪಾಳ ಸಂಸತ್ತು ವಿಸರ್ಜನೆಯಾಗಿದೆ. ಸುಶೀಲಾ ಕರ್ಕಿ ಇಂದು ರಾತ್ರಿ 8.30ಕ್ಕೆ ಮಧ್ಯಂತರ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. https://twitter.com/ANI/status/1966499075190374879 https://kannadanewsnow.com/kannada/good-news-for-state-government-employees-extension-of-the-deadline-to-register-for-the-salary-package/ https://kannadanewsnow.com/kannada/bjps-n-ravikumar-insists-on-action-against-the-police-officer-for-permission-to-dj-in-chitradurga/

Read More