Author: kannadanewsnow09

ದಾವಣಗೆರೆ: ಆ ವಿದ್ಯಾರ್ಥಿ ಓದಿನಲ್ಲೂ ಚುರುಕು, ಆಟದಲ್ಲೂ ಮುಂದು. ಕಬ್ಬಡಿ ಆಟ ಆಡುವಾಗ ಬಿದ್ದಾಗ ಕೈ ಮುರಿದಿದೆ. ಇದಕ್ಕಾಗಿ ಸಾವಿರಾರು ರೂಪಾಯಿ ಖರ್ಚಾಗಿದೆ. ಅಷ್ಟು ಹಣ ಹೊಂದಿಸಲು ಪರದಾಡುತ್ತಿದ್ದಾರೆ. ಇಂತಹ ಬಡ ವಿದ್ಯಾರ್ಥಿ ನಿಮ್ಮ ಸಹಾಯದ ನಿರೀಕ್ಷಿಸಿದೆ. ಈ ಕುರಿತು ಶಾಲೆಯ ಮುಖ್ಯ ಶಿಕ್ಷಕ ಬಸಲಿಂಗಪ್ಪ ಹುಗ್ಗಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ವಿದ್ಯಾರ್ಥಿ ಚನ್ನಗಿರಿ ತಾಲ್ಲೂಕಿನ ಶ್ರೀ ಮಹಾರುದ್ರಸ್ವಾಮಿ ಪ್ರೌಢ ಶಾಲೆಯ ವಸತಿ ನಿಲಯದಲ್ಲಿ 8ನೇ ತರಗತಿ ಓದುತ್ತಿದ್ದಾನೆ. ಈತ ಮೂಲತಃ ಹರಪನಹಳ್ಳಿ ತಾಲೂಕಿನವನಾಗಿದ್ದು ಅತ್ಯಂತ ಬಡ ವಿದ್ಯಾರ್ಥಿಯಾಗಿದ್ದಾನೆ ಎಂದು ಹೇಳಿದ್ದಾರೆ. ನಮ್ಮ ಶಾಲೆಯಲ್ಲಿ ಕಬಡ್ಡಿ ಆಡುವಾಗ ಬಿದ್ದು ಕೈ ಮುರಿದಿದ್ದು ಹೊಸಪೇಟೆಯ ಪುತ್ತೂರು ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿದ್ದು. ಸುಮಾರು 50,000 . ವೆಚ್ಚವಾಗಿದ್ದು ನಮ್ಮ ಶಾಲೆಯಿಂದ ನಾನು ಮತ್ತು ನಮ್ಮ ಶಿಕ್ಷಕರು ಸೇರಿ ರೂ.20,000ಗಳನ್ನು ಶಸ್ತ್ರ್ರ ಚಿಕಿತ್ಸೆಗೆ ನೀಡಿದ್ದೇವೆ. ಉಳಿದ ಹಣವನ್ನು ಪೋಷಕರು ಬರಿಸುವ ಸ್ಥಿತಿಯಲ್ಲಿಲ್ಲ. ಆದ್ದರಿಂದ ನಿಮ್ಮ ಕೈಲಾದ ಸಹಾಯವನ್ನು ಈ ಬಡ ವಿದ್ಯಾರ್ಥಿಗೆ ಮಾಡುವಂತೆ ವಿನಂತಿಸಿದ್ದಾರೆ.…

Read More

ಶಿವಮೊಗ್ಗ: ಸಾಗರದ ಬುಲೆಟ್ ಬೈಕ್ ಪ್ರಿಯರ ಆಸೆ ಈಡೇರಿಸಲು ಆರ್ ಬಿ ಡಿ ಮೋಟಾರ್ಸ್ ಅಣಿಯಾಗಿದೆ. ಹೊಸ ಹೊಸ ವಿನೂತನ ಮಾದರಿಯ ರಾಯಲ್ ಎನ್‌ಫೀಲ್ಡ್ ಮೋಟಾರ್ ಬೈಕ್ ಗಳೊಂದಿಗೆ ಸಾಗರದಲ್ಲಿ ಹೊಸ ಶೋ ರೂಂ ಗ್ರಾಂಡ್ ಓಪನ್ ಆಗಲಿದೆ.  ಅಕ್ಟೋಬರ್.10, 2025ರಂದು ರಾಯಲ್ ಎನ್‌ಫೀಲ್ಡ್ ಬೈಕ್ ಮಾರಾಟ ಮಳಿಗೆ ಗ್ರಾಂಡ್ ಓಪನ್ ಈ ಕುರಿತಂತೆ ಮಾಹಿತಿಯನ್ನು ಹಂಚಿಕೊಂಡಿರುವಂತ ಆರ್ ಬಿ ಡಿ ಮೋಟಾರ್ಸ್ ನ RBD ಮಹೇಶ್ ಅವರು, ಸಾಗರದಲ್ಲಿ ರಾಯಲ್ ಎನ್‌ಫೀಲ್ಡ್ ಮೋಟಾರ್ ಶೋ ರೂಂ ತೆರೆಯಬೇಕು ಎಂಬುದು ಬಹು ದಿನದ ಕನಸಾಗಿತ್ತು. ಅದು ನನಸಾಗಿದೆ. ಬುಲೆಟ್ ಬೈಕ್ ಪ್ರಿಯರ ಆಸೆ ಈಡೇರಿಸಲು ಆರ್ ಬಿ ಡಿ ಮೋಟಾರ್ಸ್ ನಿಂದ ಅಕ್ಟೋಬರ್.10ರಂದು ರಾಯಲ್ ಎನ್‌ಫೀಲ್ಡ್ ಬೈಕ್ ಮಾರಾಟ ಮಳಿಗೆ ಆರಂಭಗೊಳ್ಳುತ್ತಿದೆ ಎಂದರು. ಸಾಗರದ ಲೋಹಿಯಾ ನಗರ, ವಾರ್ಡ್ ನಂ.9, ಬಿಹೆಚ್ ರಸ್ತೆ, ರಾಷ್ಟ್ರೀಯ ಹೆದ್ದಾರಿ 69ರಲ್ಲಿ ರಾಯಲ್ ಎನ್ ಫೀಲ್ಡ್ ಶೋ ರೂಂ ಗ್ರ್ಯಾಂಡ್ ಓಪನಿಂಗ್ ಆಗಲಿದೆ. ಸಾಗರದ ಸಾರ್ವಜನಿಕರು,…

Read More

ನವದೆಹಲಿ: ಅಂತರರಾಷ್ಟ್ರೀಯ ಪ್ರವಾಸೋದ್ಯಮ ವಲಯವು ಮುಂದಿನ 10 ವರ್ಷಗಳಲ್ಲಿ 9.1 ಕೋಟಿ ಹೊಸ ಉದ್ಯೋಗಗಳನ್ನು ಸೃಷ್ಟಿಸಲಿದೆ, ಇದು ಜಾಗತಿಕವಾಗಿ ಸೃಷ್ಟಿಯಾಗುವ ಪ್ರತಿ ಮೂರು ಉದ್ಯೋಗಗಳಲ್ಲಿ ಒಂದನ್ನು ಪ್ರತಿನಿಧಿಸುತ್ತದೆ ಎಂದು ವಿಶ್ವ ಪ್ರಯಾಣ ಮತ್ತು ಪ್ರವಾಸೋದ್ಯಮ ಮಂಡಳಿ (ಡಬ್ಲ್ಯೂಟಿಟಿಸಿ) ವರದಿ ಮಾಡಿದೆ. ಜನಸಂಖ್ಯಾ ಮತ್ತು ರಚನಾತ್ಮಕ ಬದಲಾವಣೆಗಳನ್ನು ಗಮನಿಸದಿದ್ದರೆ 4.3 ಕೋಟಿಗೂ ಹೆಚ್ಚು ಜನರ ಕಾರ್ಯಪಡೆಯ ಕೊರತೆ ಉಂಟಾಗಬಹುದು ಎಂದು 20 ಆರ್ಥಿಕತೆಗಳ ಮೇಲೆ ಕೇಂದ್ರೀಕರಿಸಿದ ‘ಪ್ರಯಾಣ ಮತ್ತು ಪ್ರವಾಸೋದ್ಯಮ ಕಾರ್ಯಪಡೆಯ ಭವಿಷ್ಯ’ ವರದಿ ಹೇಳುತ್ತದೆ. ಮಂಡಳಿಯು ಪ್ರಯಾಣ ಮತ್ತು ಪ್ರವಾಸೋದ್ಯಮ ಉದ್ಯಮದ ಸಮಸ್ಯೆಗಳ ಕುರಿತು ಸರ್ಕಾರಗಳೊಂದಿಗೆ ಕೆಲಸ ಮಾಡುತ್ತದೆ ಮತ್ತು ಕ್ಷೇತ್ರದ ಆರ್ಥಿಕ ಮತ್ತು ಸಾಮಾಜಿಕ ಕೊಡುಗೆಯ ಕುರಿತು ಜಾಗತಿಕ ಪ್ರಾಧಿಕಾರವಾಗಿದೆ. ಇತ್ತೀಚೆಗೆ ರೋಮ್‌ನಲ್ಲಿ ನಡೆದ 25 ನೇ ಡಬ್ಲ್ಯೂಟಿಟಿಸಿ ಜಾಗತಿಕ ಶೃಂಗಸಭೆಯಲ್ಲಿ ಬಿಡುಗಡೆಯಾದ ವರದಿಯು ವ್ಯಾಪಕವಾದ ಜಾಗತಿಕ ಸಂಶೋಧನೆಯನ್ನು ಆಧರಿಸಿದೆ, ಇದರಲ್ಲಿ ವ್ಯಾಪಾರ ನಾಯಕರ ದೊಡ್ಡ ಪ್ರಮಾಣದ ಸಮೀಕ್ಷೆ ಮತ್ತು ಪ್ರವಾಸೋದ್ಯಮ ಸಂಸ್ಥೆಯ ಸದಸ್ಯರು ಮತ್ತು ಇತರ ಪ್ರಮುಖ ಪಾಲುದಾರರೊಂದಿಗೆ…

Read More

ನವದೆಹಲಿ: ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 2025 ರವರೆಗೆ ಸರ್ಕಾರವು ಗಡುವನ್ನು ವಿಸ್ತರಿಸಿದೆ, ಅರ್ಹ ನಗರ ಮತ್ತು ಗ್ರಾಮೀಣ ಕುಟುಂಬಗಳು ಕೈಗೆಟುಕುವ ವಸತಿ ಬೆಂಬಲಕ್ಕಾಗಿ ನೋಂದಾಯಿಸಿಕೊಳ್ಳಲು ಹೆಚ್ಚುವರಿ ಸಮಯವನ್ನು ನೀಡಿದೆ. PMAY ಕೇಂದ್ರದ ಪ್ರಮುಖ ವಸತಿ ಯೋಜನೆಯಾಗಿದ್ದು, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಗಳು (EWS), ಕಡಿಮೆ ಆದಾಯದ ಗುಂಪುಗಳು (LIG) ಮತ್ತು ಇತರ ಅನನುಕೂಲಕರ ಸಮುದಾಯಗಳಿಗೆ ಪಕ್ಕಾ ಮನೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಅಧಿಕೃತ ಮಾಹಿತಿಯ ಪ್ರಕಾರ, ಈ ಯೋಜನೆಯಡಿಯಲ್ಲಿ ಇಲ್ಲಿಯವರೆಗೆ 92.61 ಲಕ್ಷಕ್ಕೂ ಹೆಚ್ಚು ಮನೆಗಳನ್ನು ಪೂರ್ಣಗೊಳಿಸಲಾಗಿದೆ. ಯಾರು ಅರ್ಹರು? PMAY ಗೆ ಅರ್ಹತೆಯನ್ನು ಆದಾಯ ಗುಂಪು, ವಸತಿ ಸ್ಥಿತಿ ಮತ್ತು ಸಾಮಾಜಿಕ ಹಿನ್ನೆಲೆಯ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. PMAY-ನಗರ (PMAY-U) ಅರ್ಹತೆ ಪಡೆಯಲು, ಅರ್ಜಿದಾರರು ಭಾರತದಲ್ಲಿ ಎಲ್ಲಿಯೂ ಪಕ್ಕಾ ಮನೆ ಹೊಂದಿರಬಾರದು ಮತ್ತು ಈ ಕೆಳಗಿನ ವರ್ಗಗಳಲ್ಲಿ ಒಂದಕ್ಕೆ ಒಳಪಡಬೇಕು: EWS: ವಾರ್ಷಿಕ ಆದಾಯ ₹3 ಲಕ್ಷದವರೆಗೆ…

Read More

ಬೆಂಗಳೂರು: ನಗರದಲ್ಲಿ ಬೃಹತ್ ಗಾತ್ರದ ಅರಳಿ ಮರ ಉರುಳಿ ಬಿದ್ದು ಯುವತಿಯೊಬ್ಬಳು ಸ್ಥಳದಲ್ಲೇ ಸ್ಥಳದಲ್ಲೇ ಸಾವನ್ನಪ್ಪಿರುವಂತ ಘೋರ ದುರಂತ ನಡೆದಿದೆ. ಬೆಂಗಳೂರಿನ ಉತ್ತರ ತಾಲ್ಲೂಕಿನ ಸೋಲದೇವನಹಳ್ಳಿ ಠಾಣೆಯ ಬಳಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಬೆಂಗಳೂರಿನ ಆರ್ ಟಿ ನಗರದ ಕೀರ್ತನಾ(23) ಮರ ಬಿದ್ದು ಸಾವನ್ನಪ್ಪಿದಂತ ದುರ್ದೈವಿಯಾಗಿದ್ದಾರೆ. ಸ್ಯಾಂಡರ್ ವುಡ್ ಪ್ರೀಮಿಯರ್ ಲೀಗ್ ನೋಡೋದಕ್ಕೆ ಕೀರ್ತನಾ ತೆರಳಿದ್ದರು. ಆಚಾರ್ಯ ಕಾಲೇಜು ಮೈದಾನದಲ್ಲಿ ಸ್ಯಾಂಡಲ್ ವುಡ್ ಪ್ರೀಮಿಯರ್ ಪಂದ್ಯಾವಳಿ ನಡೆದಿತ್ತು. ಸ್ನೇಹಿತೆ ಜೊತೆ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದಾಗ ಮರಳ ಉರುಳಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ನೇಪಾಳ: ಪೂರ್ವ ನೇಪಾಳದ ವಿವಿಧ ಸ್ಥಳಗಳಲ್ಲಿ ನಿನ್ನೆ ರಾತ್ರಿಯಿಂದ ಸುರಿಯುತ್ತಿರುವ ಮಳೆಯಿಂದಾಗಿ ಉಂಟಾದ ಭೂಕುಸಿತ ಮತ್ತು ಪ್ರವಾಹದಲ್ಲಿ ಭಾನುವಾರ ಬೆಳಿಗ್ಗೆವರೆಗೆ ಕನಿಷ್ಠ 51 ಜನರು ಸಾವನ್ನಪ್ಪಿದ್ದಾರೆ ಎಂದು ಸಶಸ್ತ್ರ ಪೊಲೀಸ್ ಪಡೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಳೆದ ಎರಡು ದಿನಗಳಲ್ಲಿ ಭಾರೀ ಮಳೆಯಿಂದ ಉಂಟಾದ ಭೂಕುಸಿತಗಳಿಂದಾಗಿ ಕೋಶಿ ಪ್ರಾಂತ್ಯದ ಇಲಾಮ್ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಸುಮಾರು 37 ಜನರು ಸಾವನ್ನಪ್ಪಿದ್ದಾರೆ ಎಂದು ಸಶಸ್ತ್ರ ಪೊಲೀಸ್ ಪಡೆಯ ವಕ್ತಾರ ಕಾಳಿದಾಸ್ ಧೌಬಾಜಿ ತಿಳಿಸಿದ್ದಾರೆ. 37 ಜನರಲ್ಲಿ, ದೆಯುಮೈ ಮತ್ತು ಮೈಜೋಗ್ಮೈ ಪುರಸಭೆಗಳಲ್ಲಿ ತಲಾ ಎಂಟು ಜನರು, ಇಲಾಮ್ ಪುರಸಭೆ ಮತ್ತು ಸಂದಕ್ಪುರ್ ಗ್ರಾಮೀಣ ಪುರಸಭೆಯಲ್ಲಿ ತಲಾ ಆರು ಜನರು, ಸೂರ್ಯೋದಯ ಪುರಸಭೆಯಲ್ಲಿ ಐದು ಜನರು, ಮಂಗ್ಸೆಬಂಗ್ನಲ್ಲಿ ಮೂವರು ಮತ್ತು ಫಕ್ಫೋಕ್ಥಮ್ ಗ್ರಾಮದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಉದಯಪುರದಲ್ಲಿ ಇಬ್ಬರು ಮತ್ತು ಪಂಚಥರ್‌ನಲ್ಲಿ ಒಬ್ಬರು ಪ್ರವಾಹ ಮತ್ತು ಭೂಕುಸಿತದಿಂದ ಸಾವನ್ನಪ್ಪಿದ್ದಾರೆ. ಪ್ರತ್ಯೇಕವಾಗಿ, ರೌತಹತ್‌ನಲ್ಲಿ…

Read More

ಶಿವಮೊಗ್ಗ : ನ್ಯಾಯಾಂಗ ಸೇವೆಗೆ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು. ಕಾನೂನು ಸೇವೆಯನ್ನು ಕೇವಲ ಉದ್ಯೋಗವಾಗಿ ನೋಡಬೇಡಿ. ಪ್ರಾಮಾಣಿಕತೆ, ಸಹನೆ ಮತ್ತು ಕಠಿಣ ಪರಿಶ್ರಮ ಈ ವೃತ್ತಿಯ ಮೂಲಭೂತ ಅಸ್ತ್ರ ಅಧ್ಯಯನಕ್ಕೆ ಆದ್ಯತೆ ನೀಡಿ ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಜೆ.ಎಂ.ಖಾಜಿ ಹೇಳಿದರು. ಇಂದು ಶಿವಮೊಗ್ಗದ ಸಾಗರದ ವಕೀಲರ ಭವನದಲ್ಲಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದಂತ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದಂತ ಅವರು, ನ್ಯಾಯಾಂಗ ಸೇವೆ ಎಂದರೆ ಕೇವಲ ತೀರ್ಪುಗಳನ್ನು ನೀಡುವುದಲ್ಲ. ನ್ಯಾಯಾಂಗ ಸೇವೆ ನ್ಯಾಯಕ್ಕಾಗಿ ಬಾಗಿಲು ತಟ್ಟುವ ಪ್ರತಿಯೊಬ್ಬ ನಾಗರೀಕನ ಬದುಕನ್ನು ಸ್ಪರ್ಶಿಸುವ ಹೊಣೆಯಾಗಿರುತ್ತದೆ. ಶಿವಮೊಗ್ಗ, ಸಾಗರದ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸುವಾಗ ಕಾನೂನು ಸೇವೆಯನ್ನು ಆಳವಾಗಿ ಅಧ್ಯಯನ ಮಾಡಲು ಅವಕಾಶ ಕಲ್ಪಿಸಿತು. ಸಾಗರ ನ್ಯಾಯಾಂಗ ಸೇವೆಗೆ ಮಾತ್ರವಲ್ಲದೇ ಸಾಹಿತ್ಯ ಮತ್ತು ನಿಸರ್ಗ ಪ್ರೇಮಕ್ಕೂ ಸಾಕ್ಷಿಯಾಗಿದೆ ಎಂದರು. ನ್ಯಾಯಾಂಗ ಮತ್ತು ವಕೀಲ ವೃತ್ತಿ ಸಮಾಜದ ಎರಡು ಪ್ರಮುಖ ಸ್ತಂಭಗಳು. ವಕೀಲರು ತಮ್ಮ ವಾದಗಳ ಮೂಲಕ ಸತ್ಯವನ್ನು ಬೆಳಗಿಸುತ್ತಾರೆ. ನ್ಯಾಯಾಧೀಶರು ತೀರ್ಪುಗಳ ಮೂಲಕ ಅದಕ್ಕೆ…

Read More

ಮೈಸೂರು: ಆರ್ಥಿಕ- ಸಾಮಾಜಿಕ- ಶೈಕ್ಷಣಿಕ ಸಮೀಕ್ಷೆ ಹೆಸರಿನಲ್ಲಿ ರಾಜ್ಯ ಸರಕಾರವು ಜಾತಿ ಜನಗಣತಿ ಮಾಡುತ್ತಿದ್ದು, ದಿನೇದಿನೇ ಇದರಿಂದ ಗೊಂದಲಗಳು ಹೆಚ್ಚಾಗುತ್ತಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ. ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು ಪ್ರಶ್ನೆಗೆ ಉತ್ತರಿಸಿದರು. ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಪ್ರತಿಕ್ರಿಯೆಯನ್ನು ನೋಡಿದಾಗಲೇ ಇದು ಗೊತ್ತಾಗುತ್ತದೆ. 60 ಪ್ರಶ್ನೆಗಳನ್ನು ಜನಸಾಮಾನ್ಯರ ಮುಂದೆ ಇಟ್ಟಿದ್ದಾರೆ. ಎಲ್ಲ ಸಮಾಜಗಳಲ್ಲೂ ಗೊಂದಲ ಸೃಷ್ಟಿಯಾಗಿದೆ. ಪೂರ್ವತಯಾರಿ ಇಲ್ಲದೇ ಆತುರಾತುರವಾಗಿ ರಾಜ್ಯ ಸರಕಾರ ಈ ನಿರ್ಣಯ ಮಾಡಿದ್ದು ಮೇಲ್ನೋಟಕ್ಕೆ ಗೊತ್ತಾಗುತ್ತದೆ ಎಂದು ನುಡಿದರು. ವಿಕಲಚೇತನರನ್ನೂ ಇದಕ್ಕೆ ಜೋಡಿಸಿದ್ದಾರೆ. ಇದರ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗಿದೆ. ರಾಜ್ಯ ಸರಕಾರ ಅಥವಾ ಮುಖ್ಯಮಂತ್ರಿಗಳಿಗೆ ಇಷ್ಟೊಂದು ಆತುರ ಯಾಕೆ ಎಂದು ಕೇಳಿದರು. ನವೆಂಬರ್ ಕ್ರಾಂತಿ- ಅಕ್ಟೋಬರ್ ಕ್ರಾಂತಿ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಚರ್ಚೆ ನಡೆದಿದೆ. ರಾಜ್ಯದ ರಾಜಕಾರಣದಲ್ಲಿ ಆಗುವ ಕ್ರಾಂತಿಗೂ, ಈ ಜಾತಿ ಜನಗಣತಿಗೂ ಎಲ್ಲೋ ಒಂದು ಕಡೆ ಸಂಬಂಧ ಇದೆಯೇ ಎಂಬುದೂ ರಾಜ್ಯದಲ್ಲಿ ಚರ್ಚೆ…

Read More

ಹಾಸನ : ಕಾರ್ಮಿಕ ಮುಖಂಡರಾಗಿ ರಾಜಕಾರಣಕ್ಕೆ ಬಂದು ಎಲ್ಲರ ಹೃದಯಗಳನ್ನೂ ಗೆಲ್ಲುವ ಶಕ್ತಿ ಇರುವ ಗೋಪಾಲಸ್ವಾಮಿ ಅವರು ಹಾಸನ‌ ಜಿಲ್ಲಾ ರಾಜಕಾರಣದ ಘನತೆಯನ್ನು ಮರುಸ್ಥಾಪಿಸುವ ಕೆಲಸವನ್ನೂ ಮಾಡಲಿ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯ ಪಟ್ಟರು. ಮಾಜಿ ವಿಧಾನ ಪರಿಷತ್ ಸದಸ್ಯರಾದ ಎಂ.ಎ.ಗೋಪಾಲಸ್ವಾಮಿ ಅವರ 55ನೇ ಹುಟ್ಟು ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಕಬ್ಬಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು. ಒಬ್ಬ ಕ್ರೀಡಾ ಪಟುವಿಗೆ ಇರಬೇಕಾದ ಕ್ರೀಡಾ ಮನೋಭಾವ ಮತ್ತು ಬದ್ಧತೆ ಎರಡೂ ಗೋಪಾಲಸ್ವಾಮಿ ಅವರಿಗಿದೆ. ಪ್ರತಿಯೊಬ್ಬರನ್ನೂ ಅತ್ಯಂತ ಆತ್ಮೀಯವಾಗಿ ನಡೆಸಿಕೊಳ್ಳುವ ಸಜ್ಜನಿಕೆಯೇ ಗೋಪಾಲಸ್ವಾಮಿ ಅವರ ವ್ಯಕ್ತಿತ್ವದ ಶಕ್ತಿ ಎಂದರು. ತಾವು ಪ್ರತಿನಿಧಿಸುವ ಕ್ಷೇತ್ರದ ಜನರ ಮತ್ತು ಸಮಾಜದ ಘನತೆಯನ್ನು ಹೆಚ್ಚಿಸುವುದು ಉತ್ತಮ ರಾಜಕಾರಣಿಯ ಲಕ್ಷಣ. ಈ ಲಕ್ಷಣಗಳು ಗೋಪಾಲಸ್ವಾಮಿ ಅವರಲ್ಲಿವೆ. ಹೀಗಾಗಿ ಹಾಸನ ಜಿಲ್ಲಾ ರಾಜಕಾರಣದ ಘನತೆಯನ್ನು ಮರು ಸ್ಥಾಪಿಸುವುದು ಹಾಗೂ ಹಾಸನ ಜಿಲ್ಲೆಯ ರಾಜಕಾರಣದ ಇತಿಹಾಸ ಮತ್ತು ವರ್ತಮಾನಕ್ಕೆ ಅಂಟಿರುವ ಕಳಂಕವನ್ನು ಅಳಿಸಿ ಹಾಸನದ ಜನತೆಯ ಸ್ವಾಭಿಮಾನವನ್ನು ಎತ್ತಿ ಹಿಡಿಯುವ…

Read More

ಶಿವಮೊಗ್ಗ : ಶರಾವತಿ ಪಂಪ್ಡ್ ಸ್ಟೋರೇಜ್ ವಿರುದ್ದ ಹೋರಾಟಕ್ಕೆ ನನ್ನ ಬೆಂಬಲವಿದೆ. ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಪರಿಸರ ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮ ಆದ್ಯತೆಯಾಗಬೇಕು ಹಸಿರು ಹೊದಿಕೆಯ ಗರ್ಭ ಬಗೆದು ಮುನ್ನಡೆಸುವ ಯೋಜನೆ ಸಲ್ಲದು ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು. ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ಉಪವಿಭಾಗಾಧಿಕಾರಿಗಳ ಕಚೇರಿ ಆವರಣದಲ್ಲಿ ರೈತ ಸಂಘದ ವತಿಯಿಂದ ನಡೆಸುತ್ತಿರುವ ಶರಾವತಿ ಪಂಪ್ಡ್ ಸ್ಟೋರೇಜ್ ವಿರುದ್ದದ ಹೋರಾಟದಲ್ಲಿ ಭಾನುವಾರ ಪಾಲ್ಗೊಂಡು ಮಾತನಾಡಿದಂತ ಅವರು, ಶರಾವತಿ ಪಂಪ್ಡ್ ಸ್ಟೋರೇಜ್ ವಿರುದ್ದ ಪಕ್ಷಾತೀತ ಹೋರಾಟ ನಡೆಯುತ್ತಿರುವುದು ಸ್ವಾಗತಾರ್ಹ ಸಂಗತಿ. ಕೇಂದ್ರದಲ್ಲಿ ನಮ್ಮದೆ ಸರ್ಕಾರ ಇದ್ದರೂ ಶರಾವತಿ ಪಂಪ್ಡ್ ಸ್ಟೋರೇಜ್ ಆಗುತ್ತಿರುವುದು ನನ್ನ ಗಮನಕ್ಕೆ ಬಂದಿಲ್ಲ. ಕೇಂದ್ರಕ್ಕೆ ಪ್ರಸ್ತಾವನೆ ಕಳಿಸುವುದು ಸಹಜ ಎಂದರು. ಕೇಂದ್ರ ಸರ್ಕಾರ ಬೇರೆಬೇರೆ ವಿದ್ಯುತ್ ಯೋಜನೆಗೆ ಒಪ್ಪಿಗೆ ನೀಡುತ್ತಾ ಬರುತ್ತಿದ್ದರೂ ಶರಾವತಿ ಪಂಪ್ಡ್ ಸ್ಟೋರೇಜ್‌ನಿಂದ ಆ ಭಾಗದ ಪರಿಸರ, ಸಿಂಗಳೀಕ ಬಾಲದ ಮಂಗಗಳು, ಜೀವವೈವಿಧ್ಯಕ್ಕೆ ಹಾನಿಯಾಗುತ್ತಿರುವುದರ ಬಗ್ಗೆ ಕೇಂದ್ರದ ಸಂಬoಧಪಟ್ಟ ಸಚಿವರು, ಇಲಾಖೆ ಜೊತೆ ಮಾತನಾಡುತ್ತೇನೆ. ನಾನು ಮತ್ತು…

Read More