Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾಗರದಲ್ಲಿ ಹಾಸ್ಟೆಲ್‌ಗೆ ಶಾಸಕ ಗೋಪಾಲಕೃಷ್ಣ ಬೇಳೂರು ದಿಢೀರ್ ಭೇಟಿ: ಅವ್ಯವಸ್ಥೆ ಕಂಡು ಸಿಬ್ಬಂದಿಗಳನ್ನು ತರಾಟೆಗೆ

BREAKING: ಉತ್ತರ ಕನ್ನಡದ ಕಾಳಿ ನದಿಯಲ್ಲಿ ರಿವರ್ ರ್ಯಾಫ್ಟಿಂಗ್ ವೇಳೆ ವಿದ್ಯುತ್ ಪ್ರವಹಿಸಿ ಓರ್ವ ಸಾವು, ನಾಲ್ವರು ಬಚಾವ್

Eat Garlic Daily: ದಿನವೂ ಬೆಳ್ಳುಳ್ಳಿ ತಿಂದರೆ ದೇಹದಲ್ಲಿ ಏನಾಗುತ್ತದೆ? ಇಲ್ಲಿದೆ ಅಚ್ಚರಿಯ ಮಾಹಿತಿ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಅರಬ್ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರವನ್ನು ಸುರಕ್ಷಿತವಾಗಿ ಕರೆತನ್ನಿ: ಸಿಎಂ, ಡಿಸಿಎಂಗೆ MLC ರಮೇಶ್ ಗೂಳಿಗೌಡ ಪತ್ರ
KARNATAKA

ಅರಬ್ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರವನ್ನು ಸುರಕ್ಷಿತವಾಗಿ ಕರೆತನ್ನಿ: ಸಿಎಂ, ಡಿಸಿಎಂಗೆ MLC ರಮೇಶ್ ಗೂಳಿಗೌಡ ಪತ್ರ

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ಇರಾನ್-ಇರಾಕ್ ನಡುವಿನ ಯುದ್ಧದ ಭೀತಿಯಿಂದ ದುಬೈ ಸೇರಿದಂತೆ ಅರಬ್ ರಾಷ್ಟ್ರಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರು ಮತ್ತು ಜನಪ್ರತಿನಿಧಿಗಳನ್ನು ತುರ್ತಾಗಿ ತಾಯ್ನಾಡಿಗೆ ಕರೆತರಲು ಒಬ್ಬರು ಸಚಿವರು ಹಾಗೂ ಐಎಎಸ್‌ ಅಧಿಕಾರಿಯೊಬ್ಬರನ್ನು ನಿಯೋಜಿಸಲು ಅಗತ್ಯ ಕ್ರಮವಹಿಸುವಂತೆ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಡಿಗೌಡ ಪತ್ರ ಬರೆದು ಮನವಿ ಮಾಡಿದ್ದಾರೆ.

ಇಂದು ಸಿಎಂ, ಡಿಸಿಎಂಗೆ ಪತ್ರ ಬರೆದಿರುವಂತ ಅವರು, ಪ್ರಸ್ತುತ ಇರಾನ್ ಮತ್ತು ಇರಾಕ್ ದೇಶಗಳ ನಡುವೆ ಯುದ್ಧೋನ್ಮಾದದ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದರ ನೇರ ಪರಿಣಾಮ ಇರಾನ್, ಇರಾಕ್, ದುಬೈ ಸೇರಿದಂತೆ ಮಧ್ಯಪ್ರಾಚ್ಯದ ಬಹುತೇಕ ಅರಬ್ ರಾಷ್ಟ್ರಗಳ ಮೇಲಾಗಿದೆ. ಇದರಿಂದಾಗಿ ಆ ಭಾಗದಲ್ಲಿ ಅತ್ಯಂತ ಪ್ರಕ್ಷುಬ್ಧ ಮತ್ತು ಆತಂಕದ ವಾತಾವರಣ ನಿರ್ಮಾಣವಾಗಿದೆ ಎಂದಿದ್ದಾರೆ.

ಈ ಸಂಕಷ್ಟದ ಪರಿಸ್ಥಿತಿಯಲ್ಲಿ ನಮ್ಮ ರಾಜ್ಯದ ಶಾಸಕರಾದ ಎ.ಸಿ.ಶ್ರೀನಿವಾಸ್, ಎಸ್‌.ಎಲ್‌.ಬೋಜೇಗೌಡರು, ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷರಾದ ಪುಷ್ಪಾ ಅಮರನಾಥ್‌ ಸೇರಿದಂತೆ ಹಲವು ಪ್ರಮುಖರು ದುಬೈಗೆ ಭೇಟಿ ನೀಡಿದ್ದು, ಅಲ್ಲಿಯೇ ಸಿಲುಕಿಕೊಂಡಿದ್ದಾರೆ. ಇವರಷ್ಟೇ ಅಲ್ಲದೆ, ಪ್ರವಾಸಕ್ಕೆ ತೆರಳಿದ್ದವರು, ಉದ್ಯೋಗ ಅರಸಿ ಹೋದ ಯುವಜನರು ಹಾಗೂ ವ್ಯಾಸಂಗ ಮಾಡುತ್ತಿರುವ ಅಸಂಖ್ಯಾತ ಕನ್ನಡಿಗರು ಈ ಯುದ್ಧ ಭೀತಿಯ ನಡುವೆ ಬೇರೆ ಬೇರೆ ದೇಶ ಗಳಿಂದ ತಾಯ್ನಾಡಿಗೆ ಮರಳಲು . ಇನ್ನು ಕೃಷಿ ಸಚಿವರಾದ ಎನ್‌.ಚಲುವರಾಯಸ್ವಾಮಿ ಹಾಗೂ ಹಲವು ಜಪ್ರತಿನಿಧಿಗಳು ವಿದೇಶದಲ್ಲಿ ಅಧ್ಯಯನ ಪ್ರವಾಸಕ್ಕೆ ಹೋಗಿದ್ದಾರೆ. ಅವರನ್ನೂ ಸುರಕ್ಷಿತವಾಗಿ ಕರೆತರುವ ಕೆಲಸ ಆಗಬೇಕಿದೆ ಎಂಬುದಾಗಿ ತಿಳಿಸಿದ್ದಾರೆ.

ರಷ್ಯಾ-ಉಕ್ರೇನ್ ಯುದ್ಧ ಹಾಗೂ ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ನಾವು ಕನ್ನಡಿಗರನ್ನು ಯಶಸ್ವಿಯಾಗಿ ರಕ್ಷಿಸಿ ಕರೆತಂದ ರೀತಿಯಲ್ಲೇ, ಈ ಬಾರಿಯೂ ತಕ್ಷಣದ ಕಾರ್ಯಾಚರಣೆಯ ಅಗತ್ಯವಿದೆ. ದೂರವಾಣಿ ಸಂಪರ್ಕಗಳು ವ್ಯತ್ಯಯವಾಗುತ್ತಿರುವುದರಿಂದ ಇಲ್ಲಿರುವ ಕುಟುಂಬಸ್ಥರು, ಪೋಷಕರು ತಮ್ಮವರ ಸುರಕ್ಷತೆಯ ಬಗ್ಗೆ ತೀವ್ರ ಆತಂಕದಲ್ಲಿದ್ದಾರೆ. ಹಾಗಾಗಿ, ಸಂಕಷ್ಟದಲ್ಲಿರುವ ನಮ್ಮ ಜನಪ್ರತಿನಿಧಿಗಳು ಹಾಗೂ ಸಮಸ್ತ ಕನ್ನಡಿಗರನ್ನು ಭದ್ರತೆಯೊಂದಿಗೆ ಮರಳಿ ಕರೆತರಲು ರಾಜ್ಯ ಸರ್ಕಾರವು ಈ ಕೆಳಗಿನ ತುರ್ತು ಕ್ರಮಗಳನ್ನು ಕೈಗೊಳ್ಳಬೇಕಾಗಿ ವಿನಂತಿಸಿದ್ದಾರೆ.

1. ನೋಡಲ್ ಅಧಿಕಾರಿಗಳ ನೇಮಕ: ಈ ಕಾರ್ಯಾಚರಣೆಯ ಉಸ್ತುವಾರಿಗಾಗಿ ತಕ್ಷಣವೇ ಸಚಿವರೊಬ್ಬರ ಸಹಿತ ರಾಜ್ಯ ಸರ್ಕಾರದ ಹಿರಿಯ ಐಎಎಸ್ (IAS) ಅಧಿಕಾರಿಯೊಬ್ಬರನ್ನು ನೋಡಲ್ ಅಧಿಕಾರಿಯನ್ನಾಗಿ ನಿಯೋಜಿಸಬೇಕು.

2. ಕೇಂದ್ರದೊಂದಿಗೆ ಸಮನ್ವಯ: ನೇಮಕಗೊಂಡ ಅಧಿಕಾರಿಗಳು ಕೇಂದ್ರ ಸರ್ಕಾರದ ವಿದೇಶಾಂಗ ಸಚಿವಾಲಯ ಹಾಗೂ ಆಯಾ ದೇಶಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಗಳೊಂದಿಗೆ (Embassies) ಸತತ ಸಂಪರ್ಕ ಸಾಧಿಸಿ, ಕನ್ನಡಿಗರನ್ನು ಆದ್ಯತೆಯ ಮೇರೆಗೆ ಏರ್‌ಲಿಫ್ಟ್ ಮಾಡಲು ತ್ವರಿತ ಕ್ರಮವಹಿಸಬೇಕು.

3. ನಿರಂತರ ಸಂಪರ್ಕ ಮತ್ತು ಭರವಸೆ: ನೇಮಕಗೊಂಡ ಅಧಿಕಾರಿಗಳ ತಂಡವು ಅಲ್ಲಿ ಸಿಲುಕಿರುವ ಕನ್ನಡಿಗರೊಂದಿಗೆ ಸತತ ಸಂಪರ್ಕದಲ್ಲಿರಬೇಕು ಮತ್ತು ಅವರಿಗೆ ಅಗತ್ಯ ಧೈರ್ಯ ಹಾಗೂ ಸುರಕ್ಷತೆಯ ಭರವಸೆ ನೀಡಬೇಕು.

ನಮ್ಮ ರಾಜ್ಯದ ಜನರ ಪ್ರಾಣ ರಕ್ಷಣೆ ಹಾಗೂ ಕುಟುಂಬದವರ ಆತಂಕ ನಿವಾರಿಸುವ ನಿಟ್ಟಿನಲ್ಲಿ ಸರ್ಕಾರವು ಇದನ್ನು ಅತ್ಯಂತ ಗಂಭೀರ ವಿಚಾರವೆಂದು ಪರಿಗಣಿಸಿ, ಕೂಡಲೇ ಕಾರ್ಯಾನ್ಮುಖರಾಗಬೇಕೆಂದು ಕಳಕಳಿಯಿಂದ ಪ್ರಾರ್ಥಿಸಿದ್ದಾರೆ.

ರಾಜ್ಯದ ಜನತೆಗೆ ಸಿಹಿ ಸುದ್ದಿ: ಸದ್ಯಕ್ಕಿಲ್ಲ ವಿದ್ಯುತ್ ದರ ಏರಿಕೆ; ಸಿಎಂ ಸ್ಪಷ್ಟನೆ

Share. Facebook Twitter LinkedIn WhatsApp Email

Related Posts

ಸಾಗರದಲ್ಲಿ ಹಾಸ್ಟೆಲ್‌ಗೆ ಶಾಸಕ ಗೋಪಾಲಕೃಷ್ಣ ಬೇಳೂರು ದಿಢೀರ್ ಭೇಟಿ: ಅವ್ಯವಸ್ಥೆ ಕಂಡು ಸಿಬ್ಬಂದಿಗಳನ್ನು ತರಾಟೆಗೆ

1 Min Read

BREAKING: ಉತ್ತರ ಕನ್ನಡದ ಕಾಳಿ ನದಿಯಲ್ಲಿ ರಿವರ್ ರ್ಯಾಫ್ಟಿಂಗ್ ವೇಳೆ ವಿದ್ಯುತ್ ಪ್ರವಹಿಸಿ ಓರ್ವ ಸಾವು, ನಾಲ್ವರು ಬಚಾವ್

1 Min Read

BREAKING: ನೀಟ್ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ

1 Min Read
Recent News

ಸಾಗರದಲ್ಲಿ ಹಾಸ್ಟೆಲ್‌ಗೆ ಶಾಸಕ ಗೋಪಾಲಕೃಷ್ಣ ಬೇಳೂರು ದಿಢೀರ್ ಭೇಟಿ: ಅವ್ಯವಸ್ಥೆ ಕಂಡು ಸಿಬ್ಬಂದಿಗಳನ್ನು ತರಾಟೆಗೆ

BREAKING: ಉತ್ತರ ಕನ್ನಡದ ಕಾಳಿ ನದಿಯಲ್ಲಿ ರಿವರ್ ರ್ಯಾಫ್ಟಿಂಗ್ ವೇಳೆ ವಿದ್ಯುತ್ ಪ್ರವಹಿಸಿ ಓರ್ವ ಸಾವು, ನಾಲ್ವರು ಬಚಾವ್

Eat Garlic Daily: ದಿನವೂ ಬೆಳ್ಳುಳ್ಳಿ ತಿಂದರೆ ದೇಹದಲ್ಲಿ ಏನಾಗುತ್ತದೆ? ಇಲ್ಲಿದೆ ಅಚ್ಚರಿಯ ಮಾಹಿತಿ!

BREAKING: ನೀಟ್ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ

State News
KARNATAKA

ಸಾಗರದಲ್ಲಿ ಹಾಸ್ಟೆಲ್‌ಗೆ ಶಾಸಕ ಗೋಪಾಲಕೃಷ್ಣ ಬೇಳೂರು ದಿಢೀರ್ ಭೇಟಿ: ಅವ್ಯವಸ್ಥೆ ಕಂಡು ಸಿಬ್ಬಂದಿಗಳನ್ನು ತರಾಟೆಗೆ

By ವಸಂತ ಬಿ ಈಶ್ವರಗೆರೆ KARNATAKA 1 Min Read

ಶಿವಮೊಗ್ಗ: “ವಿದ್ಯಾರ್ಥಿ ನಿಲಯಗಳಲ್ಲಿ ಮಕ್ಕಳಿಗೆ ಶುಚಿರುಚಿಯಾದ ಆಹಾರವನ್ನು ನೀಡಬೇಕು. ಹಾಸ್ಟೆಲ್ ಆವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಜೊತೆಗೆ, ಮಕ್ಕಳು ಸಹ ಶುಚಿತ್ವ ಕಾಪಾಡಿಕೊಳ್ಳುವಂತೆ…

BREAKING: ಉತ್ತರ ಕನ್ನಡದ ಕಾಳಿ ನದಿಯಲ್ಲಿ ರಿವರ್ ರ್ಯಾಫ್ಟಿಂಗ್ ವೇಳೆ ವಿದ್ಯುತ್ ಪ್ರವಹಿಸಿ ಓರ್ವ ಸಾವು, ನಾಲ್ವರು ಬಚಾವ್

BREAKING: ನೀಟ್ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ

Rain Alert: ಮೇ.29ರವರೆಗೆ ರಾಜ್ಯದಲ್ಲಿ ವರುಣನ ಆರ್ಭಟ: ಬೆಂಗಳೂರು ಸೇರಿ 17 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಣೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.