Subscribe to Updates
Get the latest creative news from FooBar about art, design and business.
Author: kannadanewsnow09
ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) JEE (ಮುಖ್ಯ) 2026 ಸೆಷನ್ 1 ರ ಪೇಪರ್ 1 (B.E./B.Tech.) ಫಲಿತಾಂಶಗಳನ್ನು ಘೋಷಿಸಿದ್ದು, ದೇಶಾದ್ಯಂತ ಲಕ್ಷಾಂತರ ಎಂಜಿನಿಯರಿಂಗ್ ಆಕಾಂಕ್ಷಿಗಳಿಗೆ ನೆಮ್ಮದಿ ತಂದಿದೆ. ಫಲಿತಾಂಶಗಳನ್ನು ಫೆಬ್ರವರಿ 16 ರಂದು ಪ್ರಕಟಿಸಲಾಗಿದ್ದು, ಈಗ ಆನ್‌ಲೈನ್‌ನಲ್ಲಿ ಲಭ್ಯವಿದೆ. ಜನವರಿ ಸೆಷನ್‌ಗೆ ಹಾಜರಾದ ಅಭ್ಯರ್ಥಿಗಳು ತಮ್ಮ ಲಾಗಿನ್ ರುಜುವಾತುಗಳನ್ನು ಬಳಸಿಕೊಂಡು ಅಧಿಕೃತ ಪೋರ್ಟಲ್ ಮೂಲಕ ತಮ್ಮ NTA ಅಂಕಗಳನ್ನು ಪ್ರವೇಶಿಸಬಹುದು. ಟಾಪರ್‌ಗಳು ಮತ್ತು ಪರೀಕ್ಷಾ ಪ್ರಕ್ರಿಯೆಯ ಮುಂದಿನ ಹಂತದ ಕುರಿತು ಪ್ರಮುಖ ನವೀಕರಣಗಳು ಸೇರಿದಂತೆ ಪ್ರಮುಖ ಮುಖ್ಯಾಂಶಗಳನ್ನು ಏಜೆನ್ಸಿ ಹಂಚಿಕೊಂಡಿದೆ. ನಿಮ್ಮ ಫಲಿತಾಂಶವನ್ನು ಎಲ್ಲಿ ಪರಿಶೀಲಿಸಬೇಕು? ಅಭ್ಯರ್ಥಿಗಳು ತಮ್ಮ JEE (ಮುಖ್ಯ) 2026 ಸೆಷನ್ 1 ಫಲಿತಾಂಶಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು: https://jeemain.nta.nic.in ಸ್ಕೋರ್‌ಕಾರ್ಡ್ ಡೌನ್‌ಲೋಡ್ ಮಾಡಿ: ಅಧಿಕೃತ ಪೋರ್ಟಲ್ https://jeemain.nta.nic.in ಭೇಟಿ ನೀಡಿ ಜೆಇಇ (ಮುಖ್ಯ) 2026 ಸೆಷನ್ 1 ಫಲಿತಾಂಶ ಲಿಂಕ್ ಅನ್ನು ಕ್ಲಿಕ್ ಮಾಡಿ ನಿಮ್ಮ ಅರ್ಜಿ ಸಂಖ್ಯೆ ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್…
ಬೆಂಗಳೂರು: ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ಅವರ 2012-13ನೇ ಸಾಲಿನ ಕಾರ್ಯಪಾಲನ ವರದಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮಾಹಿತಿ ಆಯೋಗದ ನಿರ್ದೇಶನದ ಮೇರೆಗೆ ರಾಜ್ಯ ಸರ್ಕಾರ ಪ್ರವಾಸೋದ್ಯಮ ಇಲಾಖೆ ಜಂಟಿ ಕಾರ್ಯದರ್ಶಿ ಅವರ ನೇತೃತ್ವದಲ್ಲಿ ತನಿಖಾ ಸಮಿತಿಯನ್ನು ರಚನೆ ಮಾಡಿದೆ. ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿಯಾದ ಕೆ.ಎಂ. ಬಾಲಸುಬ್ರಮಣ್ಯ ಪ್ರಸಾದ್ ಅವರು ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ನಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಅವಧಿಯ ತನ್ನ ಕಾರ್ಯಪಾಲನ ವರದಿ ನೀಡುವಂತೆ ಪ್ರವಾಸೋದ್ಯಮ ಸಚಿವಾಲಯಕ್ಕೆ ಮಾಹಿತಿ ಹಕ್ಕು ಅಧಿನಿಯಮ-2005 ರಡಿಯಲ್ಲಿ ಅರ್ಜಿ ಹಾಕಿದ್ದರು. ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ನಿಂದ ಅಧಿಕಾರಿ ಪ್ರವಾಸೋದ್ಯಮ ಇಲಾಖೆಗೆ ಕಳುಹಿಸಿರುವ ಪತ್ರ ಬಾಲಸುಬ್ರಮಣ್ಯ ಪ್ರಸಾದ್ ಅವರ ಬಳಿಯಲ್ಲಿ ಇದೆ. ಮಾಹಿತಿ ಹಕ್ಕು ಅಧಿನಿಯಮದಡಿ ಸಲ್ಲಿಸಿದ ಅರ್ಜಿಗೆ ಪ್ರವಾಸೋದ್ಯಮ ಸಚಿವಾಲಯದ ಸಾರ್ವಜನಿಕ ಮಾಹಿತಿ ಅಧಿಕಾರಿ ಕಾರ್ಯಪಾಲನ ವರದಿ ಲಭ್ಯವಿಲ್ಲವೆಂಬ ಉತ್ತರ ನೀಡಿದ್ದರು. ಬಾಲಸುಬ್ರಮಣ್ಯ ಪ್ರಸಾದ್ ಕರ್ನಾಟಕ ಮಾಹಿತಿ ಆಯೋಗದಲ್ಲಿ ದ್ವಿತೀಯ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಪೀಠ ಸಂಖ್ಯೆ -4…
ಬಳ್ಳಾರಿ : ನಟಿ ಟಿ ರಚಿತಾ ರಾಮ್ ಕಾರು ಚಾಲಕನಿಂದ ಅಧಿಕಾರಿ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರ ಮೇಲೆ ಹಲ್ಲೆ ನಡೆಸಿರುವ ಘಟನೆ ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಹಂಪಿಯಲ್ಲಿ ನಡೆದಿದೆ. ಹಂಪಿ ಉತ್ಸವದ ಕೊನೆಯ ದಿನವಾದ ನಿನ್ನೆ ಭದ್ರತಾ ನೆಪದಲ್ಲಿ ರಚಿತಾ ರಾಮ್ ಕಾರು ಚಾಲಕ, ಜನರನ್ನು ವಾಪಸ್ಸ ಕಳುಹಿಸುತ್ತಿದ್ದ ಈ ವೇಳೆಯಲ್ಲಿ ಅಲ್ಲೇ ಇದ್ದ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ರವಿಕುಮಾರ್ ಅವರನ್ನು ಮೊಣಕೈನಿಂದ ಜೋರಾಗಿ ತಿವಿದು ತಳ್ಳಿದ್ದಾನೆ ಎನ್ನಲಾಗಿದೆ. ಈ ವೇಳೇ ಅಧಿಕಾರಿ ರವಿಕುಮಾರ್ ಕಣ್ಣಿಗೆ ಗಾಯವಾಗಿದೆ ಎನ್ನಲಾಗಿದೆ. ಸದ್ಯ ಘಟನೆ ಬಗ್ಗೆ ದೂರು ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ತನಿಖೆ ನಡೆಸುತ್ತಿದ್ದಾರೆ. ಭದ್ರತೆಯ ನೆಪದಲ್ಲಿ ಸಾರ್ವಜನಿಕರ ಮೇಲೂ ಅಸಭ್ಯ ಹಾಗೂ ಆಕ್ರಮಣಕಾರಿ ವರ್ತನೆ ತೋರಲಾಗಿದೆ ಎಂದು ಸ್ಥಳದಲ್ಲಿದ್ದವರು ಆರೋಪಿಸಿದ್ದಾರೆ. https://kannadanewsnow.com/kannada/sandalwoods-famous-television-actress-rashmi-leela-is-no-more/
ಬಳ್ಳಾರಿ : ಸಾರ್ವಜನಿಕರು ಕುದಿಸಿ ಆರಿಸಿ ಸೋಸಿದ ನೀರನ್ನು ಕುಡಿಯಬೇಕು. ಇದರಿಂದ ಸಂಭಾವ್ಯ ವಾಂತಿ ಬೇಧಿ ಪ್ರಕರಣಗಳನ್ನು ತಡೆಗಟ್ಟಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್‌ಬಾಬು ಅವರು ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಬೇಸಿಗೆ ಪ್ರಾರಂಭದ ಹಿನ್ನಲೆಯಲ್ಲಿ ಜಾತ್ರೆ ಹಾಗೂ ಉತ್ಸವಗಳಲ್ಲಿ ಕಲುಷಿತ ನೀರಿನಿಂದ, ಕಲುಷಿತ ಆಹಾರ ಸೇವನೆಯಿಂದ ಸಾಮಾನ್ಯವಾಗಿ ವಾಂತಿ ಬೇಧಿ ಸೇರಿದಂತೆ ಟೈಫಾಯಿಡ್, ಕಾಲಾರ, ಮುಂತಾದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳಿರುತ್ತವೆ. ಅದರಲ್ಲೂ ವಾಂತಿ ಬೇಧಿ ಪ್ರಕರಣಗಳು ಕಂಡುಬಂದ ಸಂದರ್ಭದಲ್ಲಿ ಕುದಿಸಿ ಆರಿಸಿ ಸೋಸಿದ ನೀರನ್ನು ಕುಡಿಯಬೇಕು. ಓಆರ್‌ಎಸ್ ಜೀವಜಲವನ್ನು ತಯಾರಿಸುವಾಗ 1 ಲೀ. ನೀರಿಗೆ ಆರೋಗ್ಯ ಇಲಾಖೆಯಿಂದ ಕೊಡುವ ಪೊಟ್ಟಣದಲ್ಲಿರುವ ಪುಡಿಯನ್ನು ಸಂಪೂರ್ಣವಾಗಿ ಹಾಕಿ ಮಿಶ್ರಣ ಮಾಡಿದ ದ್ರಾವಣವನ್ನು ವಾಂತಿ ಬೇಧಿ ಭಾದಿತರಿಗೆ ಕುಡಿಯಲು ಕೊಡಬೇಕು ಹಾಗೂ ಇದನ್ನು 24 ಗಂಟೆಯೊಳಗೆ ಸಂಪೂರ್ಣವಾಗಿ ಬಳಸಲು ಆದ್ಯತೆ ನೀಡಬೇಕು ಎಂದಿದ್ದಾರೆ. ಕಲುಷಿತ ನೀರಿನ ಸೇವನೆಯಿಂದ ಸಾಮಾನ್ಯವಾಗಿ ವಾಂತಿ-ಬೇಧಿ, ಕಾಲರಾ, ಟೈಪಾಯಿಡ್, ಹೆಪಟೈಟಸ್-ಎ,…
ಬೆಂಗಳೂರು: ಕೆಲ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತ ಸ್ಯಾಂಡಲ್ ವುಡ್ ಕಿರುತೆರೆ ನಟಿ ರಶ್ಮಿ ಲೀಲಾ ಅವರು ಚಿಕಿತ್ಸೆ ಫಲಿಸದೇ ಇಂದು ನಿಧರಾಗಿದ್ದಾರೆ. ಆ ಮೂಲಕ ಕನ್ನಡದ ಕಿರುತೆರೆ ನಟಿ ರಶ್ಮಿ ಲೀಲಾ ಇನ್ನಿಲ್ಲವಾಗಿದ್ದಾರೆ. ಶ್ವಾಸಕೋಶ ಸಂಬಂಧಿ ಸಮಸ್ಯೆಯಿಂದ ಬಳುತ್ತಿದ್ದಂತ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಕೆಲ ದಿನಗಳ ಹಿಂದಷ್ಟೇ ಸೂಕ್ತ ದಾನಿಗಳು ಬಂದ ಹಿನ್ನಲೆಯಲ್ಲಿ ಶ್ವಾಸಕೋಶದ ಟ್ರಾನ್ಸೆಫರಂಟ್ ಕೂಡ ಮಾಡಲಾಗಿತ್ತು ಎನ್ನಲಾಗಿದೆ. ಆ ಬಳಿಕ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕಿರುತೆರೆ ನಟಿ ರಶ್ಮಿ ಲೀಲಾಗೆ ಚಿಕಿತ್ಸೆ ಮುಂದುವರೆದಿತ್ತು. ಆದರೇ ಇಂದು ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಅವರ ನಿಧನಕ್ಕೆ ಸ್ಯಾಂಡಲ್ ವುಟ್ ಗಣ್ಯರು ಸಂತಾಪ ಸೂಚಿಸಿದ್ದಾರೆ. https://kannadanewsnow.com/kannada/be-careful-of-those-who-make-reels-in-public-places-young-man-arrested-read-this-news-to-find-out-why/
ಬಳ್ಳಾರಿ : ಸಾರ್ವಜನಿಕ ಸ್ಥಳವಾಗಲೀ, ಅದು ಯಾವುದೇ ಪ್ರದೇಶವಾಗಿರಲಿ, ಕೆಲವರು ರೀಲ್ಸ್ ಮಾಡೋದನ್ನು ಮಾತ್ರ ಬಿಡೋದಿಲ್ಲ. ಹೀಗೆ ಸಾರ್ವಜನಿಕ ಸ್ಥಳದಲ್ಲಿ ರೀಲ್ಸ್ ಮಾಡಿ ಹುಚ್ಚಾಟ ಮೆರೆದಿದ್ದಕ್ಕೆ ಯುವಕನೊಬ್ಬನನ್ನು ಬಂಧಿಸಲಾಗಿದೆ. ಅದು ಎಲ್ಲಿ? ಏಕೆ ಎನ್ನುವ ಬಗ್ಗೆ ಮುಂದೆ ಓದಿ. ಬಳ್ಳಾರಿಯ ಬ್ರೂಸ್ ಪೇಟೆ ಪೊಲೀಸರಿಂದ ವಿಶ್ವನಾಥ್(29) ಎಂಬಾತನನ್ನು ಬಂಧಿಸಲ್ಪಟ್ಟಿದ್ದಾರೆ. ಕಾರಣ, ಸಾರ್ವಜನಿಕ ಸ್ಥಳದಲ್ಲಿ ರೀಲ್ಸ್ ಮಾಡಿದ್ದಕ್ಕೆ. ಹೌದು ದುರ್ಗಮ್ಮ ದೇಗುಲ ಬಳಿ ರೈಲು ಸೇತುವೆ ಮೇಲೆ ನಿಂತು ಡ್ಯಾನ್ಸ್ ಮಾಡಿ, ರೀಲ್ಸ್ ಮಾಡುತ್ತಾ ವಿಶ್ವನಾಥ್ ಹುಚ್ಚಾಟ ಮೆರೆದಿದ್ದನು. ಸಾರ್ವಜನಿಕ ಸ್ಥಳದಲ್ಲಿ ರೀಲ್ಸ್ ಮಾಡಿ ಹುಚ್ಚಾಟ ಮೆರೆದಿದ್ದಕ್ಕಾಗಿ ಸಾರ್ವಜನಿಕರು ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ರೀಲ್ಸ್ ಮಾಡಿ ಹುಚ್ಚಾಟ ಮೆರೆದಂತ ವಿಶ್ವನಾಥ್ ನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಯುವಕ ವಿಶ್ವನಾಥ್ ಮೂಲತಹ ಉತ್ತರ ಪ್ರದೇಶದವನು. ಸಾರ್ವಜನಿಕ ಸ್ಥಳದಲ್ಲಿ, ಅಪಾಯ ಕಾರಿ ಪ್ರದೇಶದಲ್ಲಿ ರೀಲ್ಸ್ ಮಾಡುವುದು ಅಪರಾಧ. ಈ ಹಿನ್ನಲೆಯಲ್ಲೇ ಯುವಕ ವಿಶ್ವನಾಥ್ ನನ್ನು ಪೊಲೀಸರು ಬಂಧಿಸಿ, ಬಿಸಿ ಮುಟ್ಟಿಸಿದ್ದಾರೆ.…
ಬೀದರ್: ರಾಜ್ಯದಲ್ಲೊಂದು ಹೃದಯ ವಿದ್ರಾವಕ ಘಟನೆ ಎನ್ನುವಂತೆ ಆಕಸ್ಮಿಕವಾಗಿ ಕಾರಂಜಾ ಡ್ಯಾಂನ ಕಾಲುವೆಗೆ ಬಿದ್ದು ತಂದೆ-ಮಗ ಧಾರುಣವಾಗಿ ಸಾವನ್ನಪ್ಪಿರುವಂತ ಘಟನೆ ನಡೆದಿದೆ. ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಬ್ಯಾಲಹಳ್ಳಿ ಗ್ರಾಮದ ಬಳಿಯಲ್ಲಿ ಈ ಘಟನೆ ನಡೆದಿದೆ. ಹಳ್ಳಿಖೇಡ್(ಬಿ) ಗ್ರಾಮದ ವಿಶ್ವನಾಥ(50) ಹಾಗೂ ಅಮರೇಶ(23) ಕಾಲು ಜಾರಿ ಬಿದ್ದು ಡ್ಯಾಂನಲ್ಲಿ ಸಾವನ್ನಪ್ಪಿದ್ದಾರೆ. ಬೀದರ್ ನಲ್ಲಿ ಸೀಮೆಂಟ್ ಖಾಲಿ ಮಾಡಿ ವಾಪಾಸ್ ಊರಿಗೆ ಹೋಗುತ್ತಿದ್ದರು. ಈ ವೇಳೆ ಕಾಲುವೆಗೆ ಇಳಿದು ಕೈಕಾಲು ತೊಡೆದುಕೊಳ್ಳುತ್ತಿದ್ದ ಪುತ್ರ ಅಮರೇಶ್ ಕಾಲು ಜಾರಿ ಕಾರಂಜಾ ಡ್ಯಾಂನ ಕಾಲುವೆಗೆ ಬಿದ್ದಿದ್ದರು. ಪುತ್ರನನ್ನು ರಕ್ಷಿಸೋದಕ್ಕೆ ಹೋಗಿ ತಂದೆ ವಿಶ್ವನಾಥ್ ಕೂಡ ಸಾವನ್ನಪ್ಪಿದ್ದಾರೆ. ತಂದೆ-ಮಗನ ಶವವನ್ನು ಅಗ್ನಿಶಾಮಕ ಸಿಬ್ಬಂದಿ ಕಾರಂಜಾ ಡ್ಯಾಂ ಕಾಲುವೆಯಿಂದ ಹೊರತೆಗೆದಿದ್ದಾರೆ. ಈ ಸಂಬಂಧ ಬೀದರ್ ನ ಧನ್ನೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/actress-rashmika-mandanna-actor-vijay-deverakonda-wedding-on-february-26-invitation-card-goes-viral/
ನವದೆಹಲಿ: ಇದೇ ಫೆಬ್ರವರಿ.26ರಂದು ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಮದುವೆಯಾಗಲಿದ್ದಾರೆ. ಮದುವೆಯ ಆಮಂತ್ರಣದ ಆಹ್ವಾನ ಪತ್ರಿಕೆಯು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದೆ. ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಅಭಿಮಾನಿಗಳು ಸಂಭ್ರಮಿಸಲು ಮತ್ತೊಂದು ಕಾರಣ ಸಿಕ್ಕಿದೆ. ಜನಪ್ರಿಯ ಪ್ಯಾನ್-ಇಂಡಿಯನ್ ನಟರಾದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಈ ತಿಂಗಳ ಕೊನೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ವರ್ಷಗಳ ಕಾಲ ತಮ್ಮ ಸಂಬಂಧವನ್ನು ಬಹಳ ಖಾಸಗಿಯಾಗಿ ಇಟ್ಟುಕೊಂಡಿದ್ದ ಈ ಜೋಡಿ ಈಗ ತಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಸಜ್ಜಾಗಿದೆ. ಅವರ ವಿವಾಹ ಆಮಂತ್ರಣ ಪತ್ರಿಕೆ ಸೋರಿಕೆಯಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ ಮತ್ತು ದಂಪತಿಗಳು ಹೊಸ ಆರಂಭಕ್ಕೆ ಮುಂದಾಗುತ್ತಿರುವಂತೆ ತೋರುತ್ತಿದೆ. ರಶ್ಮಿಕಾ ಮತ್ತು ವಿಜಯ್ ಅವರ ವಿವಾಹ ಆರತಕ್ಷತೆಯ ಆಹ್ವಾನ ಪತ್ರಿಕೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಆಮಂತ್ರಣ ಪತ್ರಿಕೆಯಲ್ಲಿ “ನಮ್ಮ ಕುಟುಂಬಗಳ ಆಶೀರ್ವಾದದೊಂದಿಗೆ, ರಶ್ಮಿಕಾ ಮತ್ತು ನಾನು 26.02.26 ರಂದು ಸಣ್ಣ ಮತ್ತು ಆತ್ಮೀಯ ಸಮಾರಂಭದಲ್ಲಿ…
ಕೆಎನ್ಎನ್ ಡಿಜಿಟಲ್ ಡೆಸ್ಕ್: ಮಾಘ ಮಾಸದ ಅಂತ್ಯದೊಂದಿಗೆ, ಶುಕ್ರ ಮುಹೂರ್ತವೂ ಕೊನೆಗೊಳ್ಳುತ್ತಿದೆ. ಈ ತಿಂಗಳ 17 ರಂದು ಅಮಾವಾಸ್ಯೆಯೊಂದಿಗೆ ಶುಕ್ರ ಮುಹೂರ್ತ ಕೊನೆಗೊಳ್ಳುತ್ತದೆ ಮತ್ತು ಫಾಲ್ಗುಣ ಮಾಸ 18 ರಂದು ಪ್ರಾರಂಭವಾಗುತ್ತದೆ. ಹಾಗಾದ್ರೆ 2026ರ ಮದುವೆ ಶುಭ ಮುಹೂರ್ತದ ದಿನಗಳ ಪಟ್ಟಿ ಈ ಕೆಳಗಿನಂತಿದೆ. ಮದುವೆ ಮುಹೂರ್ತಗಳು ಫಾಲ್ಗುಣ ಶುದ್ಧ ವಿದ್ಯಾದ 19 ರಂದು ಪ್ರಾರಂಭವಾಗಿ ವರ್ಷವಿಡೀ ಮುಂದುವರಿಯುತ್ತವೆ. ಪಂಚಾಂಗ ಬರಹಗಾರರ ಪ್ರಕಾರ, ಮದುವೆಗಳಿಗೆ ಶುಭ ದಿನಾಂಕಗಳು ಫೆಬ್ರವರಿ 19, 20, 21, 24, 25, ಮತ್ತು 26; ಮಾರ್ಚ್ 1, 3, 4, 7, 8, 9, 11, ಮತ್ತು 12; ಏಪ್ರಿಲ್ 15, 20, 21, 25, 26, 27, 28, ಮತ್ತು 29; ಮೇ 1, 3, 5, 6, 7, 8, 13, ಮತ್ತು 14; ಜೂನ್ 21, 22, 23, 24, 25, 26, 27, ಮತ್ತು 29; ಜುಲೈ 1, 6, 7, ಮತ್ತು…
ನವದೆಹಲಿ: PhonePe, Googleನಲ್ಲಿ 1000ಕ್ಕಿಂತ ಹೆಚ್ಚು ಹಣ ವರ್ಗಾವಣೆ ಶುಲ್ಕ ವಿಧಿಸಲಾಗುತ್ತದೆ ಎನ್ನುವ ಸುದ್ದಿಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಹಾಗಾದ್ರೇ ಇದು ನಿಜವೇ? ಇದರ ಅಸಲಿ ಸತ್ಯವೇನು ಅಂತ ಮುಂದೆ ಓದಿ.. ದೇಶಾದ್ಯಂತ UPI ಬಳಸುವ ಜನರ ಸಂಖ್ಯೆ ತೀವ್ರವಾಗಿ ಹೆಚ್ಚುತ್ತಿದೆ. ಸ್ಮಾರ್ಟ್‌ಫೋನ್ ಹೊಂದಿರುವ ಪ್ರತಿಯೊಬ್ಬರೂ ತಮ್ಮ ಬ್ಯಾಂಕ್ ಅನ್ನು ಎರಡು ಅಥವಾ ಮೂರು UPI ಅಪ್ಲಿಕೇಶನ್‌ಗಳೊಂದಿಗೆ ಲಿಂಕ್ ಮಾಡಿ ಪಾವತಿಗಳನ್ನು ಮಾಡುತ್ತಿದ್ದಾರೆ. ಪ್ರತಿದಿನ ಲಕ್ಷ ಕೋಟಿ ರೂಪಾಯಿಗಳ ನಗದು ವಹಿವಾಟುಗಳು ನಡೆಯುತ್ತಿವೆ. ಆದಾಗ್ಯೂ, ನಗದು ವಹಿವಾಟುಗಳು ಹೆಚ್ಚುತ್ತಿರುವಂತೆ, ಕೆಲವು ವದಂತಿಗಳು ಹೊರಹೊಮ್ಮುತ್ತಿವೆ. UPI ವಹಿವಾಟುಗಳಿಗೆ ಶುಲ್ಕ ವಿಧಿಸಲಾಗುತ್ತದೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿದೆ. ಕಾಲಕಾಲಕ್ಕೆ, ಭಾರತೀಯ ರಿಸರ್ವ್ ಬ್ಯಾಂಕ್, ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಮತ್ತು ಕೇಂದ್ರ ಸರ್ಕಾರವು ಸ್ಪಷ್ಟನೆ ನೀಡುತ್ತಿವೆ. ಇತ್ತೀಚೆಗೆ, ಮತ್ತೊಂದು ಸುದ್ದಿ ವೈರಲ್ ಆಗುತ್ತಿದೆ. UPI ವಹಿವಾಟಿನ ಮೂಲಕ ರೂ. 1000 ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಕಳುಹಿಸಿದರೆ ಸೇವಾ ಶುಲ್ಕ ವಿಧಿಸಲಾಗುತ್ತದೆ…













