Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

2026ರ SSLC ಪರೀಕ್ಷೆ-2ಕ್ಕೆ ನೋಂದಣಿ ಕುರಿತು ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ

23/04/2026 2:33 PM

BREAKING: ಬಿಕ್ಕಾಜಿ ಫುಡ್ಸ್ ಸಂಸ್ಥಾಪಕ ಶ್ರೀ ಶಿವ ರತನ್ ಅಗರ್ವಾಲ್ ನಿಧನ: ಭಾರತೀಯ ಲಘು ಆಹಾರ ಉದ್ಯಮದ ಧ್ರುವತಾರೆ ಅಸ್ತ

23/04/2026 2:25 PM

Viral : ತಮಿಳುನಾಡು ವಿಧಾನಸಭೆ ಚುನಾವಣೆ : ಮದುವೆ ಬೆನ್ನಲ್ಲೇ ಮತ ಚಲಾಯಿಸಿದ ನವ ವಧು-ವರರ ವಿಡಿಯೋ ವೈರಲ್ | WATCH VIDEO

23/04/2026 2:02 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » AI ಆಧಾರಿತ ನಿರ್ವಹಣಾ ಶಿಕ್ಷಣಕ್ಕೆ ದಿಕ್ಸೂಚಿಯಾದ ಬಿಎಂಎ ಸಮ್ಮೇಳನ
KARNATAKA

AI ಆಧಾರಿತ ನಿರ್ವಹಣಾ ಶಿಕ್ಷಣಕ್ಕೆ ದಿಕ್ಸೂಚಿಯಾದ ಬಿಎಂಎ ಸಮ್ಮೇಳನ

By kannadanewsnow0919/01/2026 5:37 PM

ಬೆಂಗಳೂರು: ಬೆಂಗಳೂರು ಮ್ಯಾನೇಜ್‌ಮೆಂಟ್ ಅಸೋಸಿಯೇಷನ್ (ಬಿಎಮ್‌ಎ) ಶನಿವಾರ (ಜನವರಿ 17) “ಎಐ ಮತ್ತು ನಿರ್ವಹಣಾ ಶಿಕ್ಷಣದ ಭವಿಷ್ಯ” ಕುರಿತು ವಿಚಾರ ಸಂಕಿರಣವನ್ನು ಆಯೋಜಿಸಿತು. ನಿರ್ದೇಶಕರು, ಡೀನ್ಸ್‌, ವಿಭಾಗ ಮುಖ್ಯಸ್ಥರು ಹಾಗೂ ನಿರ್ವಹಣಾ ಶಿಕ್ಷಣ ಸಂಸ್ಥೆಗಳ ಹಿರಿಯ ಪ್ರಾಧ್ಯಾಪಕರು ಸೇರಿದಂತೆ ಸುಮಾರು 120 ಪ್ರತಿನಿಧಿಗಳು ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು.

ಬಿಎಮ್‌ಎ ಅಧ್ಯಕ್ಷರಾದ ಪಂಕಜ್ ಕುಮಾರ್ ಪಾಂಡೆ, ಐಎಎಸ್, ಅವರ ಮಾರ್ಗದರ್ಶನದ ಮೂಲಕ ಬಿಎಮ್‌ಎ ಹಿರಿಯ ಉಪಾಧ್ಯಕ್ಷರಾದ ಡಾ. ಶಿವಶಂಕರ ಎನ್., ಐಎಎಸ್ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಯಿತು. ವೇಗವಾಗಿ ಬದಲಾಗುತ್ತಿರುವ ಉದ್ಯಮ ಅಗತ್ಯತೆಗಳ ಹಿನ್ನೆಲೆಯಲ್ಲಿ ನಿರ್ವಹಣಾ ಶಿಕ್ಷಣದಲ್ಲಿ ಕೃತಕ ಬುದ್ಧಿಮತ್ತೆ ಉಂಟುಮಾಡುತ್ತಿರುವ ಸವಾಲುಗಳು ಮತ್ತು ಅವಕಾಶಗಳ ಕುರಿತು ಶಿಕ್ಷಣ ತಜ್ಞರು ಹಾಗೂ ಕೈಗಾರಿಕಾ ವಲಯದ ಪ್ರಮುಖರು ಚರ್ಚಿಸಲು ವಿಚಾರ ಸಂಕಿರಣ ವೇದಿಕೆಯಾಗಿತ್ತು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಉಪ ಕುಲಪತಿಗಳಾದ ಪ್ರೊ. ವಿದ್ಯಾಶಂಕರ ಎಸ್. ಅವರು ಮಾತನಾಡಿ, ವಿಶ್ವವಿದ್ಯಾಲಯಗಳು ಉದಯೋನ್ಮುಖ ಎಐ ಅಗತ್ಯತೆಗಳನ್ನು ಹೇಗೆ ಎದುರಿಸುತ್ತಿವೆ ಎಂಬುದನ್ನು ವಿಸ್ತೃತವಾಗಿ ವಿವರಿಸಿದರು. ಶಿಕ್ಷಣ ಸಂಸ್ಥೆಗಳು ವೇಗವಾಗಿ ಬದಲಾಗುತ್ತಿರುವ ಎಐ ಅಗತ್ಯೆತೆಗಳಿಗೆ ಒಗ್ಗಿಕೊಳ್ಳಬೇಕು ಎಂದು ಪ್ರತಿಪಾದಿಸಿದರು.

ಸೈವೇರ್ ಸಂಸ್ಥೆಯ ಹಿರಿಯ ಉಪಾಧ್ಯಕ್ಷರಾದ ಅಶ್ವಿನ್ ಹೆಗಡೆ ಕಾರ್ಕಳ ಅವರು, ಜಾಗತಿಕ ಮಟ್ಟದಲ್ಲಿ ವೇಗವಾಗಿ ಬದಲಾಗುತ್ತಿರುವ ಕೌಶಲ್ಯ ಅಗತ್ಯತೆಗಳು ಹಾಗೂ ಅದಕ್ಕೆ ಅನುಗುಣವಾಗಿ ಮಾನವ ಸಂಪನ್ಮೂಲ ಮತ್ತು ಪ್ರತಿಭಾ ಅಗತ್ಯತೆಗಳಲ್ಲಿ ಆಗುತ್ತಿರುವ ಬದಲಾವಣೆಗಳನ್ನು ವಿವರಿಸಿದರು.

ಬಿಎಂಎ ಹಿರಿಯ ಉಪಾಧ್ಯಕ್ಷ ಡಾ. ಶಿವಶಂಕರ ಎನ್. ಮಾತಾನಡಿ, ಬಿಎಮ್‌ಎಯ ದೃಷ್ಟಿಕೋನ ಹಾಗೂ ಕೈಗಾರಿಕೆಗಳು, ಎಂಎಸ್‌ಎಂಇಗಳು, ಸ್ಟಾರ್ಟ್‌ಅಪ್ಸ್‌, ಸೇವಾ ಕ್ಷೇತ್ರಗಳು ಮತ್ತು ಸರ್ಕಾರಿ ಸಂಸ್ಥೆಗಳಾದ್ಯಂತ ಪರಿಣಾಮಕಾರಿ ನಿರ್ವಹಣಾ ಸಂಸ್ಕೃತಿಯನ್ನು ಉತ್ತೇಜಿಸುವಲ್ಲಿ ಬಿಎಮ್‌ಎ ವಹಿಸುತ್ತಿರುವ ಮಹತ್ವದ ಪಾತ್ರವನ್ನು ವಿವರಿಸಿದರು. ಇದರಲ್ಲಿ ಅಕಾಡೆಮಿಕ್ ವಲಯ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಹೇಳಿದರು.

ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ನಿರ್ವಹಣಾ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಮತ್ತು ಉದ್ಯೋಗಾರ್ಹತೆಯನ್ನು ಸುಧಾರಿಸಲು ಬಿಎಮ್‌ಎಯ ಉಪಕ್ರಮಗಳಲ್ಲಿ ಸಕ್ರಿಯ ಪಾಲುದಾರರಾಗಬೇಕೆಂದು ಡಾ. ಶಿವಶಂಕರ ಅವರು ಒತ್ತಿ ಹೇಳಿದರು.

ಪ್ಯಾನಲ್ ಚರ್ಚೆಯಲ್ಲಿ ಬಯೋಕಾನ್ ಬಯಾಲಜಿಕ್ಸ್‌ನ ಎವಿಪಿ–ಗ್ಲೋಬಲ್ ಹೆಡ್ ಚೆಲ್ಲ ಪಾಂಡಿಯನ್ ಪಿಚ್ಚೈ, ರೋಬೋಸಾಫ್ಟ್‌ನ ಟ್ಯಾಲೆಂಟ್ ಅಕ್ವಿಜಿಷನ್ ಮುಖ್ಯಸ್ಥ  ನದೀಮ್ ಪಾಷಾ, ಎನ್‌ಎಚ್‌ಆರ್‌ಡಿ ಕಾರ್ಯದರ್ಶಿ ಡಾ. ಎಸ್.ಜೆ. ನಾಗನ ಗೌಡ, ಕ್ವಾಂಟೆಕ್ ಸಂಸ್ಥೆಯ ಮುಖ್ಯಸ್ಥ  ಅನಂತ್ ಮಲ್ಯ ಮತ್ತು ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ನಿವೃತ್ತ ನಿರ್ದೇಶಕರಾದ ಡಾ. ಎನ್. ಮೋಹನ್ ದಾಸ್ ಅವರು ಭಾಗವಹಿಸಿ, ಎಐ ಸಾಕ್ಷರತೆ, ವಿಶ್ಲೇಷಣಾತ್ಮಕ ಚಿಂತನೆ, ಹೊಂದಿಕೊಳ್ಳುವಿಕೆ, ನೈತಿಕತೆ ಹಾಗೂ ಶೈಕ್ಷಣಿಕ ವಲಯ ಮತ್ತು ಉದ್ಯಮದ ನಡುವಿನ ನಿಕಟ ಸಹಕಾರದ ಮಹತ್ವವನ್ನು ಒತ್ತಿ ಹೇಳಿದರು.

 ಎನ್.‌ ಡಿ. ವೀರಣ್ಣ ಗೌಡ, ನಿರ್ದೇಶಕರು ನಿರ್ವಹಣಾ ಅಭಿವೃದ್ಧಿ ಕೇಂದ್ರ, ಬಿಎಮ್‌ಎ ಮಾತನಾಡಿ, ಸಂಯುಕ್ತ ಸಮಿತಿಗಳ ರಚನೆ, ಪಠ್ಯಕ್ರಮ ಪುನರ್ ವಿನ್ಯಾಸ, ಅಧ್ಯಾಪಕರ ಕೌಶಲ್ಯಾಭಿವೃದ್ಧಿ, ವಿದ್ಯಾರ್ಥಿ ಯೋಜನೆಗಳು, ಇಂಟರ್ನ್‌ಶಿಪ್‌ಗಳು ಹಾಗೂ ಉದ್ಯೋಗವಕಾಶಕ್ಕೆ ಬೆಂಬಲ ಸೇರಿದಂತೆ ವಿಚಾರ ಸಂಕಿರಣದಲ್ಲಿ ವ್ಯಕ್ತವಾದ ಪ್ರಮುಖ ಶಿಫಾರಸುಗಳು ಮತ್ತು ಕ್ರಿಯಾಯೋಜನೆಗಳನ್ನು ವಿವರಿಸಿದರು. ಇದರಲ್ಲಿ ಬಿಎಮ್‌ಎ ಸಹಾಯಕ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.

ಈ ವಿಚಾರ ಸಂಕಿರಣವು ಇಂತಹ ಪ್ರಗತಿಪರ ಪ್ರಯತ್ನಗಳಲ್ಲಿ ಬಿಎಮ್‌ಎ ಮುಂದಾಳತ್ವ ಹಾಗೂ ತಟಸ್ಥ ಸಹಾಯಕ ಸಂಸ್ಥೆಯಾಗಿ ತನ್ನ ಪಾತ್ರವನ್ನು ಮತ್ತೊಮ್ಮೆ ನಿರೂಪಿಸಿತು.

-ಎನ್.‌ ಡಿ. ವೀರಣ್ಣ ಗೌಡ, ನಿರ್ದೇಶಕರು ನಿರ್ವಹಣಾ ಅಭಿವೃದ್ಧಿ ಕೇಂದ್ರ, ಬಿಎಮ್‌ಎ

Share. Facebook Twitter LinkedIn WhatsApp Email

Related Posts

2026ರ SSLC ಪರೀಕ್ಷೆ-2ಕ್ಕೆ ನೋಂದಣಿ ಕುರಿತು ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ

23/04/2026 2:33 PM1 Min Read

ಮೊಸರು ಗಟ್ಟಿಯಾಗಿ ಹೆಪ್ಪುಗಟ್ಟಲು ಈ ಒಂದು ಎಲೆ ಸಾಕು: ಇಲ್ಲಿದೆ ಅದ್ಭುತ ಟ್ರಿಕ್ಸ್.!

23/04/2026 1:56 PM1 Min Read

ವಿದ್ಯಾರ್ಥಿಗಳೇ ಗಮನಿಸಿ : ‘SSLC’ ಬಳಿಕ ಯಾವ ಕೋರ್ಸ್ ಮಾಡಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ

23/04/2026 1:53 PM3 Mins Read
Recent News

2026ರ SSLC ಪರೀಕ್ಷೆ-2ಕ್ಕೆ ನೋಂದಣಿ ಕುರಿತು ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ

23/04/2026 2:33 PM

BREAKING: ಬಿಕ್ಕಾಜಿ ಫುಡ್ಸ್ ಸಂಸ್ಥಾಪಕ ಶ್ರೀ ಶಿವ ರತನ್ ಅಗರ್ವಾಲ್ ನಿಧನ: ಭಾರತೀಯ ಲಘು ಆಹಾರ ಉದ್ಯಮದ ಧ್ರುವತಾರೆ ಅಸ್ತ

23/04/2026 2:25 PM

Viral : ತಮಿಳುನಾಡು ವಿಧಾನಸಭೆ ಚುನಾವಣೆ : ಮದುವೆ ಬೆನ್ನಲ್ಲೇ ಮತ ಚಲಾಯಿಸಿದ ನವ ವಧು-ವರರ ವಿಡಿಯೋ ವೈರಲ್ | WATCH VIDEO

23/04/2026 2:02 PM

ಮೊಸರು ಗಟ್ಟಿಯಾಗಿ ಹೆಪ್ಪುಗಟ್ಟಲು ಈ ಒಂದು ಎಲೆ ಸಾಕು: ಇಲ್ಲಿದೆ ಅದ್ಭುತ ಟ್ರಿಕ್ಸ್.!

23/04/2026 1:56 PM
State News
KARNATAKA

2026ರ SSLC ಪರೀಕ್ಷೆ-2ಕ್ಕೆ ನೋಂದಣಿ ಕುರಿತು ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ

By kannadanewsnow0923/04/2026 2:33 PM KARNATAKA 1 Min Read

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು 2026ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2ಕ್ಕೆ ಸಂಬಂಧಿಸಿದಂತೆ ಮಹತ್ವದ ಪ್ರಕಟಣೆಯನ್ನು ಹೊರಡಿಸಿದೆ. ಪರೀಕ್ಷೆಯಲ್ಲಿ…

ಮೊಸರು ಗಟ್ಟಿಯಾಗಿ ಹೆಪ್ಪುಗಟ್ಟಲು ಈ ಒಂದು ಎಲೆ ಸಾಕು: ಇಲ್ಲಿದೆ ಅದ್ಭುತ ಟ್ರಿಕ್ಸ್.!

23/04/2026 1:56 PM

ವಿದ್ಯಾರ್ಥಿಗಳೇ ಗಮನಿಸಿ : ‘SSLC’ ಬಳಿಕ ಯಾವ ಕೋರ್ಸ್ ಮಾಡಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ

23/04/2026 1:53 PM

BIG NEWS : ಆಂಬುಲೆನ್ಸ್‌ನಲ್ಲಿ ಬಂದು, ಸ್ಟ್ರೆಚರ್ ಮೇಲೆ ಮಲಗಿಯೇ ಪರೀಕ್ಷೆ ಬರೆದಿದ್ದ ಕುಸುಮಾ ಫಸ್ಟ್ ಕ್ಲಾಸ್ ನಲ್ಲಿ ಪಾಸ್

23/04/2026 1:52 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.