Subscribe to Updates
Get the latest creative news from FooBar about art, design and business.
Author: ವಸಂತ ಬಿ ಈಶ್ವರಗೆರೆ
ವಸಂತ ಬಿ ಈಶ್ವರಗೆರೆ (Vasantha B Eshwaragere) ಅವರು ಕರ್ನಾಟಕದ ಪತ್ರಕರ್ತರು ಮತ್ತು ಕವಿ. ಉದಯ ನ್ಯೂಸ್, ಟಿವಿ5 ಕನ್ನಡ ಸೇರಿದಂತೆ ವಿವಿಧ ಸುದ್ದಿ ಮಾಧ್ಯಮಗಳಲ್ಲಿ ಸುಮಾರು 15 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಪ್ರಸ್ತುತ ಅವರು Kannada News Now ಡಿಜಿಡಿಲ್ ಮಾಧ್ಯಮದಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಾಜಾ ಸುದ್ದಿ, ಸಾಹಿತ್ಯ, ಸಾಮಾಜಿಕ ವರದಿಗಾರಿಕೆ, ನ್ಯಾಯಾಂಗ ಸಂಬಂಧಿತ ವರದಿ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಸುದ್ದಿಗಳ ವರದಿಯಲ್ಲಿ ಸಕ್ರಿಯರಾಗಿದ್ದಾರೆ. ಗುಡವಿ ಪಕ್ಷಿಧಾಮದಂತಹ ಪ್ರವಾಸಿ ತಾಣಗಳ ಕುರಿತು ಲೇಖನಗಳನ್ನು ಬರೆದಿದ್ದಾರೆ.
ತುಳಸಿ ವಿವಾಹವನ್ನು ವರ್ಷಕ್ಕೊಮ್ಮೆ ನಡೆಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಕಾರ್ತಿಕ ಮಾಸದಲ್ಲಿ ತುಳಸಿ ವಿವಾಹ ಪೂಜೆಯನ್ನು ಮಾಡುವುದರಿಂದ ಕುಟುಂಬಕ್ಕೆ ಸಂತೋಷ ಮತ್ತು ಸಮೃದ್ಧಿ ಸಿಗುತ್ತದೆ. ತುಳಸಿ ವಿವಾಹದಲ್ಲಿ, ತುಳಸಿ ಸಸ್ಯದ ಮದುವೆಯನ್ನು ವಿಷ್ಣುವಿನ ಶಾಲಿಗ್ರಾಮ್ ರೂಪದೊಂದಿಗೆ ನಡೆಸಲಾಗುತ್ತದೆ. ತುಳಸಿ ವಿವಾಹ ಪೂಜೆಯನ್ನು ಮಾಡುವುದರಿಂದ ಮಗಳನ್ನು ಮದುವೆಯಲ್ಲಿ ನೀಡುವಷ್ಟೇ ಪ್ರಯೋಜನಗಳನ್ನು ನೀಡುತ್ತದೆ ಎಂದು ನಂಬಲಾಗಿದೆ. ಈ ವರ್ಷ ತುಳಸಿ ವಿವಾಹ ಯಾವಾಗ ನಡೆಯುತ್ತದೆ, ಶುಭ ಸಮಯ, ಪೂಜಾ ವಿಧಾನ ಮತ್ತು ಸಾಮಗ್ರಿಗಳನ್ನು ಕಂಡುಹಿಡಿಯೋಣ. ತುಳಸಿ ವಿವಾಹ ಯಾವಾಗ? ಪಂಚಾಂಗದ ಪ್ರಕಾರ, ನವೆಂಬರ್ 13 ರಂದು ಬರುವ ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿ ತಿಥಿಯಂದು ತುಳಸಿ ವಿವಾಹ ಪೂಜೆಯನ್ನು ನಡೆಸಲಾಗುತ್ತದೆ. ದ್ವಾದಶಿ ತಿಥಿ ನವೆಂಬರ್ 12 ರಂದು ಸಂಜೆ 04:04 ಕ್ಕೆ ಪ್ರಾರಂಭವಾಗುತ್ತದೆ ಮತ್ತು ನವೆಂಬರ್ 13 ರಂದು ಮಧ್ಯಾಹ್ನ 01:01 ಕ್ಕೆ ಕೊನೆಗೊಳ್ಳುತ್ತದೆ. ತುಳಸಿ ವಿವಾಹ ಆಚರಣೆ: ಹಿಂದೂ ಧರ್ಮದಲ್ಲಿ ತುಳಸಿ ಪೂಜೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಬ್ರಹ್ಮ ಮುಹೂರ್ತದಲ್ಲಿ ಸ್ನಾನ…
ಶಿವಮೊಗ್ಗ : ಶಿವಮೊಗ್ಗ ನಗರ ಉಪವಿಭಾಗ -2ರ ಘಟಕ 5 ರ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣೆ ಕೆಲಸ ಇರುವುದರಿಂದ ನ.14 ರಂದು ಬೆಳಗ್ಗೆ 10.00 ರಿಂದ ಸಂಜೆ 6.00ರವರೆಗೆ ಆರ್.ಎಂ.ಎಲ್.ನಗರ, ಮಂಡ್ಲಿ ವೃತ್ತ, ಬೈಪಾಸ್, ಎನ್.ಟಿ.ರಸ್ತೆ, ಮರ‍್ನಮಿಬೈಲು, ಜೆ.ಸಿ.ನಗರ, ಭಾರತಿ ಕಾಲೋನಿ, ಪಂಚವಟಿ ಕಾಲೋನಿ, ಬಿ.ಹೆಚ್.ರಸ್ತೆ, ಪಿಯರ್‌ಲೈಟ್ ಫ್ಯಾಕ್ಟರಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ. ಮೈಸೂರು ಕಿಸಾನ್ ಮಾಲ್ ಸ್ಥಾಪಿಸಲು ಅರ್ಜಿ ಆಹ್ವಾನ ಶಿವಮೊಗ್ಗ ಜಿಲ್ಲಾ ತೋಟಗಾರಿಕೆ ಇಲಾಖೆಯು 2024-25ನೇ ಸಾಲಿನಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಗಾಂಧಿಪಾರ್ಕ್ನಲ್ಲಿರುವ ತೋಟಗಾರಿಕೆ ಇಲಾಖೆ ಆವರಣದಲ್ಲಿ ಮೈಸೂರು ಕಿಸಾನ್ ಮಾಲ್ ಸ್ಥಾಪಿಸಲು ಆಸಕ್ತ ರೈತ ಉತ್ಪಾದಕ ಸಂಸ್ಥೆಗಳಿಂದ ಕರ್ನಾಟಕ ಪಬ್ಲಿಕ್ ಪ್ರೊಕ್ಯೂರ್‌ಮೆಂಟ್ ಪೋರ್ಟಲ್‌ನಲ್ಲಿ ಅರ್ಜಿ ಆಹ್ವಾನಿಸಿದೆ. ಆಸಕ್ತ ಅರ್ಹ ರೈತ ಉತ್ಪಾದಕ ಸಂಸ್ಥೆಗಳು ನ.27ರೊಳಗಾಗಿ ಕ.ಪ.ಪ್ರೊ.ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸುವಂತೆ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ.: 9902546944 ನ್ನು ಸಂಪರ್ಕಿಸುವುದು. https://kannadanewsnow.com/kannada/good-news-for-sslc-puc-science-students-applications-invited-for-this-free-job-oriented-training/ https://kannadanewsnow.com/kannada/breaking-if-i-rape-i-will-die-of-blood-bjp-mla-muniraths-statement/…
ಬೆಂಗಳೂರು: ಕರ್ನಾಟಕ ಸರ್ಕಾರದ ಕೌಶಲ್ಯ ಅಭಿವೃದ್ಧಿ ನಿಗಮದ ಸಹಯೋಗದೊಂದಿಗೆ ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆಯ ಅಡಿಯಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ಡಯಾಗ್ನೋಸ್ಟಿಕ್ಸ್ ವಲಯದಲ್ಲಿ ವೃತ್ತಿಪರ ಉದ್ಯೋಗಾವಕಾಶ ವಿಶೇಷ ತರಬೇತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಸಹಯೋಗದೊಂದಿಗೆ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ( CMKKY) ಯೋಜನೆಯಡಿ ನ್ಯೂಬರ್ಗ್ ಆನಂದ್ ಅಕಾಡೆಮಿ ಅಫ್ ಲ್ಯಾಬೋರೇಟರಿ ಮೆಡಿಸಿನ್ ಪ್ರೈವೇಟ್ ಲಿಮಿಟೆಡ್ ವತಿಯಿಂದ SSLC ಮತ್ತು PUC ವಿದ್ಯಾರ್ಥಿಗಳಿಗೆ ಡಯಾಗ್ನೋಸ್ಟಿಕ್ಸ್ ವಲಯದಲ್ಲಿ ವೃತ್ತಿಪರ ಉದ್ಯೋಗಾವಕಾಶ ಬಯಸುವ ವಿಶೇಷ ತರಬೇತಿಯನ್ನು ಆಯೋಜಿಸಲಾಗಿದೆ. ಉದ್ಯೋಗ ಆಧಾರಿತ ತರಬೇತಿಯಾದಂತ ಪ್ಲೆಬೋಟೊಮಿಸ್ಟ್ ತರಬೇತಿಯನ್ನು 6 ತಿಂಗಳುಗಳ ಕಾಲ ಎಸ್ ಎಸ್ ಎಲ್ ಸಿ ಹಾಗೂ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಡಯೊಗ್ನೋಸ್ಟಿಕ್ಸ್ ನಲ್ಲಿ ಸಹಾಯಕ ಗುಣಮಟ್ಟ ನಿರ್ವಾಹಕ ತರಬೇತಿಯನ್ನು 2 ತಿಂಗಳವರೆಗೆ ನೀಡಲಾಗುತ್ತದೆ. ರೋಗ ನಿರ್ಣಯ ಕೇಂದ್ರಗಳಲ್ಲಿ ಗುಣಮಟ್ಟ ಪ್ರಕ್ರಿಯೆಗಳನ್ನು ನಿರ್ವಹಿಸಲು ಕೌಶಲ್ಯವನ್ನು ಪಡೆಯಬಹುದಾಗಿದೆ. ಇದಕ್ಕೆ ಪಿಯುಸಿ ವಿಜ್ಞಾನ ವಿಷಯದಲ್ಲಿ ತೇರ್ಗಡೆಯಾಗಿರಬೇಕು. ತರಬೇತಿ ಮಾತ್ರವೇ…
ಶಿವಮೊಗ್ಗ: ಜಿಲ್ಲೆಯಲ್ಲಿ ಖಾಸಗಿ ಬಸ್ ಲಾರಿಯೊಂದಕ್ಕೆ ಡಿಕ್ಕಿಯಾಗಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಹಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವಂತ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆ ಸಮೀಪದ ಚಿಕ್ಕಜೇನಿಯ ಬಳಿಯಲ್ಲಿ ಖಾಸಗಿ ಬಸ್ ಆದಂತ ದುರ್ಗಾಂಬ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಶಿವಮೊಗ್ಗದಿಂದ ಕುಂದಾಪುರಕ್ಕೆ ತೆರಳುತ್ತಿದ್ದಂತ ದುರ್ಗಾಂಬ ಬಸ್, ಹೊಸನಗರದಿಂದ ಭತ್ತ ಕಟಾವು ಯಂತ್ರವನ್ನು ಕೊಂಡೊಯ್ಯುತ್ತಿದ್ದಂತ ಲಾರಿಗೆ ಡಿಕ್ಕಿಯಾಗಿ ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಬಸ್ ಪಲ್ಟಿಯಾದಂತ ಸಂದರ್ಭದಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಇವರಲ್ಲಿ 15ಕ್ಕೂ ಹೆಚ್ಚು ಜನರಿಗೆ ಗಾಯಗೊಂಡಿದ್ದಾರೆ ಎನ್ನಲಾಗುತ್ತಿದೆ. ಗಾಯಾಳುಗಳನ್ನು ರಿಪ್ಪನ್ ಪೇಟೆಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ರಿಪ್ಪನ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/minister-zameer-ahmed-apologises-for-calling-kumaraswamy-kariyanna/ https://kannadanewsnow.com/kannada/breaking-if-i-rape-i-will-die-of-blood-bjp-mla-muniraths-statement/
ಮೈಸೂರು: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರನ್ನು ಕರಿಯಣ್ಣ ಎಂದಿದ್ದಕ್ಕೆ ಜೆಡಿಎಸ್ ಕಾರ್ಯಕರ್ತರು, ಮುಖಂಡರು ಸಚಿವ ಜಮೀರ್ ಅಹ್ಮದ್ ವಿರುದ್ಧ ಮುಗಿ ಬಿದ್ದಿದ್ದರು. ಅಲ್ಲದೇ ಜನಾಂಗೀಯ ನಿಂದನೆಯ ಹೇಳಿಕೆ ನೀಡಿದ್ದಂತ ಜಮೀರ್ ವಿರುದ್ಧ ಕಿಡಿಕಾರಿದ್ದರು. ಈ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವಂತ ಅವರು, ನಾನು ಮೊದಲಿನಿಂದಲೇ ಕರಿಯಣ್ಣ ಅಂತಾನೇ ಕರೆಯೋದು. ಇದಕ್ಕೆ ನೋವಾಗಿದ್ದರೇ ಕ್ಷಮೆ ಕೇಳುವೆ ಎಂದಿದ್ದಾರೆ. ಇಂದು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ನಾನು ಹೆಚ್.ಡಿ ಕುಮಾರಸ್ವಾಮಿ ಅವರನ್ನು ಮೊದಲಿನಿಂದಲೂ ಕುಮಾರಣ್ಣ ಅಂತಾನೇ ಕರೆಯೋದು. ಅವರು ನನ್ನ ಕುಳ್ಳ ಅಂತ ಕರೆಯುತ್ತಾರೆ. ಆ ಕಾರಣದಿಂದಲೇ ನಾನು ಕರಿಯಣ್ಣ ಅಂತ ಕುಮಾರಸ್ವಾಮಿ ಕರೆದಿದ್ದು ಎಂಬುದಾಗಿ ಸ್ಪಷ್ಟ ಪಡಿಸಿದರು. ಜೆಡಿಎಸ್ ಮುಖಂಡರಿಗೆ ನಾನು ಕುಮಾರಸ್ವಾಮಿ ಅವರನ್ನು ಕರಿಯಣ್ಣ ಅಂತ ಕರೆದಿದ್ದರಿಂದ ನೋವಾಗಿದೆ ಎಂಬುದಾಗಿ ತಿಳಿದು ಬಂದಿದೆ. ನನ್ನ ಕರಿಯಣ್ಣ ಹೇಳಿಕೆಯಿಂದ ನೋವಾಗಿದ್ದರೇ ದಯವಿಟ್ಟು ಕ್ಷಮಿಸಿ ಎಂಬುದಾಗಿ ಕ್ಷಮೆಯನ್ನು ಕೋರಿದರು. https://kannadanewsnow.com/kannada/yoga-guru-sharath-jois-passes-away-in-us-due-to-cardiac-arrest/ https://kannadanewsnow.com/kannada/breaking-if-i-rape-i-will-die-of-blood-bjp-mla-muniraths-statement/
ಮೈಸೂರು: ಅಮೇರಿಕಾದಲ್ಲಿ ಮೈಸೂರಿನ ಅಷ್ಟಾಂಗ ಯೋಗ ಗುರುವಾಗಿದ್ದಂತ ಶರತ್ ಜೋಯಿಸ್ (53) ಅವರು ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಅಮೇರಿಕಾದ ವರ್ಜೇನಿಯದಲ್ಲಿ ನೆಲೆಸಿದ್ದಂತ ಅಷ್ಟಾಂಗ ಯೋಗ ಗುರು ಶರತ್ ಜೋಯಿಸ್ ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೈಸೂರಿನ ಯೋಗ ಗುರು ಪಟ್ಟಾಭಿ ಜೋಯಿಸ್ ಅವರ ಮೊಮ್ಮಗರಾಗಿದ್ದಂತ ಶರತ್ ಅವರು, ಗೋಕುಲಂ ನಿವಾಸಿಯಾಗಿದ್ದರು. ದೇಶ ವಿದೇಶಗಳಲ್ಲಿ ಯೋಗವನ್ನು ಕಲಿಸಿಕೊಡುತ್ತಿದ್ದರು. ಇಂತಹ ಸದ್ಯ ವರ್ಜೇನಿಯಾದಲ್ಲಿ ನೆಲೆಸಿದ್ದಂತ ಅವರು ಇನ್ನಿಲ್ಲವಾಗಿದ್ದಾರೆ. https://kannadanewsnow.com/kannada/good-news-for-pensioners-digital-life-certificate-submission-system-introduced-at-doorstep/ https://kannadanewsnow.com/kannada/breaking-if-i-rape-i-will-die-of-blood-bjp-mla-muniraths-statement/
ಬೆಂಗಳೂರು: ಭಾರತೀಯ ಅಂಚೆ ಇಲಾಖೆಯು ರಾಜ್ಯ ಸರ್ಕಾರದ ಖಜಾನೆಯೊಂದಿಗೆ ಕರ್ನಾಟಕ ರಾಜ್ಯ ಸರ್ಕಾರದ ಪಿಂಚಣಿದಾರರಿಗೆ/ಕುಟುಂಬ ಪಿಂಚಣಿದಾರರು ವೈಯಕ್ತಿಕವಾಗಿ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸುವ ಸಮಯದಲ್ಲಿ ಎದುರಿಸುತ್ತಿರುವ ತೊಂದರೆಗಳನ್ನು ತಪ್ಪಿಸಲು ಭಾರತೀಯ ಅಂಚೆ ಇಲಾಖೆಯು “ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್”, ಪಿಂಚಣಿದಾರರ ಮನೆಬಾಗಿಲಿನಲ್ಲಿ ಡಿಜಿಟಲ್ ಲೈಫ್ ಪ್ರಮಾಣ ಪತ್ರವನ್ನು ಸಲ್ಲಿಸುವ ವ್ಯವಸ್ಥೆಯನ್ನು ಮಾಡಿದೆ. ಪಿಂಚಣಿದಾರರು ತಮ್ಮ ಡಿಜಿಟಲ್ ಲೈಫ್ ಪ್ರಮಾಣಪತ್ರವನ್ನು ಕೆಲವೇ ನಿಮಿಷಗಳಲ್ಲಿ ಪೋಸ್ಟ್ಮನ್ ಮೂಲಕ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ಪಿಪಿಓ ಸಂಖ್ಯೆ ಮತ್ತು ಪಿಂಚಣಿದಾರರ ಬ್ಯಾಂಕ್ ಖಾತೆಯ ವಿವರಗಳೊಂದಿಗೆ ತಮ್ಮ ಬಯೋಮೆಟ್ರಿಕ್ (ಬೆರಳಚ್ಚು) ವೆರಿಫೈ ಮಾಡಿ ಸಲ್ಲಿಸಬಹುದಾಗಿದೆ. ತಮ್ಮಲ್ಲಿರುವ ಮೊಬೈಲ್ ಮುಖಾಂತರ ಜೀವನ ಪ್ರಮಾಣ ಪತ್ರ ಮಾಡಿ ಕೊಡುವ ವ್ಯವಸ್ಥೆಯಲ್ಲಿ ಯಾವುದೆ ಕಾಗದ ಪತ್ರವನ್ನು ಕೊಡಬೇಕಾಗಿಲ್ಲ. ಡಿಜಿಟಲ್ ಜೀವನ ಪ್ರಮಾಣ ಪತ್ರವು ಪಿಂಚಣಿ ಪಡೆಯುವ ಕಚೇರಿಗೆ ತಂತ್ರಾಂಶ ಮೂಲಕ ರವಾನೆಯಾಗುವುದು ಹಾಗೂ ಮೊಬೈಲ್ ಗೆ ಇದರ ವಿವರ ಸಂದೇಶದ ಮೂಲಕ ಬರುತ್ತದೆ. ಕರ್ನಾಟಕ ಸರ್ಕಾರದ ಪಿಂಚಣಿದಾರರು/ಕುಟುಂಬ ಪಿಂಚಣಿದಾರರು ತಮ್ಮ ಹತ್ತಿರದ…
ಬಳ್ಳಾರಿ: ಜಿಲ್ಲೆಯ ಸಂಡೂರು ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಾಳೆ ನಡೆಯಲಿದೆ. ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಮನೆ ಮನೆ ಪ್ರಚಾರಕ್ಕೆ ಮಾತ್ರವೇ ಅವಕಾಶವಿದೆ. ಈ ವೇಳೆಯಲ್ಲಿ ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಮಾತ್ರ ತಾನು ಚುನಾವಣಾ ಪ್ರಚಾರಕ್ಕೂ ಜೈ, ಬೋಂಡಾ ಮಾಡೋದಕ್ಕೂ ಸೈ ಎಂಬುದಾಗಿ ಹೋಟೆಲ್ ಒಂದರಲ್ಲಿ ಮಿರ್ಚಿ ಮಾಡಿದ್ದಾರೆ. ಈ ಬಗ್ಗೆ ಎಕ್ಸ್ ನಲ್ಲಿ ವೀಡಿಯೋ ಸಹಿತ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿರುವಂತ ಹೊನ್ನಾಳಿ ಕ್ಷೇತ್ರದ ಮಾಜಿ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಅವರು, ಸಂಡೂರು ತಾಲೂಕಿನ ಕಳಸಿಗೆರೆ ಗ್ರಾಮದಲ್ಲಿ ನೆನ್ನೆ ಮತಯಾಚನೆ ಸಂದರ್ಭದಲ್ಲಿ ನಾಗೇಂದ್ರ ಗೌಡ ಅವರ ಹೋಟೆಲ್ ನಲ್ಲಿ ಅವರ ಅಪೇಕ್ಷೆ ಮೇರೆಗೆ ಮಿರ್ಚಿ ಮಾಡಿದ ಸಂದರ್ಭ ಎಂದಿದ್ದಾರೆ. https://twitter.com/MPRBJP/status/1856225489511121380 https://kannadanewsnow.com/kannada/no-objection-to-release-of-taxique-forest-minister-ishwar-khandre/ https://kannadanewsnow.com/kannada/breaking-if-i-rape-i-will-die-of-blood-bjp-mla-muniraths-statement/
ಬೆಂಗಳೂರು: ಅಕ್ರಮವಾಗಿ ಮರ ಕಡಿದಿದ್ದರ ಕಾರಣ ಟ್ಯಾಕ್ಸಿಕ್ ಚಿತ್ರ ತಂಡದ ವಿರುದ್ಧ ಎಫ್ಐಆರ್ ದಾಖಲಾಗಿದೆ. ಆದರೇ ಇದೇ ಕಾರಣಕ್ಕೆ ಚಿತ್ರ ಬಿಡುಗಡೆಗೆ ಯಾವುದೇ ತೊಂದ್ರೆ ಇಲ್ಲ. ಚಿತ್ರತಂಡದ ನಿರ್ಧರಿಸಿದಂತೆ ಸಿನಿಮಾ ಬಿಡುಗಡೆಯಾಗಲಿದೆ ಎಂಬುದಾಗಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ. ಇಂದು ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಪೀಣ್ಯದ ಹೆಚ್ ಎಂ ಟಿ ಅರಣ್ಯ ಪ್ರದೇಶದಲ್ಲಿ ಟ್ಯಾಕ್ಸಿಕ್ ಸಿನಿಮಾ ಚಿತ್ರೀಕರಣಕ್ಕಾಗಿ ಅಕ್ರಮವಾಗಿ ಮರಗಳನ್ನು ಕಡಿದಿದ್ದು ಗಮನಕ್ಕೆ ಬಂದಿತ್ತು. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಕೂಡ ನಡೆಸಿದ್ದರು ಎಂದರು. ಈ ಹಿಂದೆ ಹೆಚ್ ಎಂ ಟಿ ಅರಣ್ಯ ಪ್ರದೇಶದಲ್ಲಿ ಮರಗಳು ಹೇಗಿದ್ದವು. ಟ್ಯಾಕ್ಸಿಕ್ ಚಿತ್ರೀಕರಣದ ಸಮಯದಲ್ಲಿ ಹೇಗಿದೆ ಎನ್ನುವ ಸ್ಯಾಟಲೈಟ್ ಚಿತ್ರಗಳನ್ನು ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ ಅಕ್ರಮವಾಗಿ ಮರಗಳನ್ನು ಕಡಿದದ್ದು ಗಮನಕ್ಕೆ ಬಂದಿತ್ತು ಎಂದು ತಿಳಿಸಿದರು. ಅನುಮತಿಯಿಲ್ಲದೇ ಅರಣ್ಯ ಪ್ರದೇಶದಲ್ಲಿನ ಮರಗಳನ್ನು ಕಡಿದಿದ್ದರಿಂದಾಗಿ ಟ್ಯಾಕ್ಸಿಕ್ ಚಿತ್ರತಂಡ ಸೇರಿದಂತೆ ಇತರರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಯಾರು ಮರ ಕಡಿದಿದ್ದಾರೋ ಗೊತ್ತಿಲ್ಲ. ಮರ ಕಡಿದವ…
ಬೆಂಗಳೂರು: ಕಾಂಗ್ರೆಸ್ ಸರಕಾರವು 38 ಇಲಾಖೆಗಳಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇದೆಲ್ಲವನ್ನೂ ನಮ್ಮ ಮುಖಂಡರು ಒಂದೊಂದಾಗಿ ಬೆಳಕಿಗೆ ತರುತ್ತಿದ್ದಾರೆ. ಮುಖ್ಯಮಂತ್ರಿಗಳು ಭ್ರಷ್ಟಾಚಾರದ ಕೂಪದಲ್ಲಿ ಕುಳಿತಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದರು. ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಕುಟುಂಬವು ಮುಡಾದ 14 ನಿವೇಶನ ವಾಪಸ್ ಮಾಡಿದ್ದು, ಪ್ರಿಯಾಂಕ್ ಖರ್ಗೆಯವರು 5 ಎಕರೆ ವಾಪಸ್ ಮಾಡಿದ್ದರಿಂದ ಭ್ರಷ್ಟಾಚಾರ ಸಾಬೀತಾಗಿದೆ. ಅದರ ತನಿಖೆ ಏನಿದ್ದರೂ ನಿಮ್ಮ ಕಸರತ್ತು ಅಷ್ಟೇ ಎಂದು ವ್ಯಂಗ್ಯವಾಡಿದರು. ಸಿದ್ದರಾಮಯ್ಯನವರೇ, ನೀವು ಮಾತನಾಡುವಾಗ ಯಾವ ಮಟ್ಟಕ್ಕೆ ಹೋಗುತ್ತೀರಿ? ಪ್ರಧಾನಿಯವರ ಯೋಗ್ಯತೆ, ತಮ್ಮ ಯೋಗ್ಯತೆಯನ್ನು ಅರ್ಥ ಮಾಡಿಕೊಳ್ಳಬೇಕು. ವಯಸ್ಸು, ಅಧಿಕಾರದಲ್ಲಿ ನೀವು ಅವರ ಮಟ್ಟಕ್ಕಿದ್ದರೆ ಅವರನ್ನು ಪ್ರಶ್ನೆ ಮಾಡುವುದರಲ್ಲಿ ಅರ್ಥವಿದೆ. ಸಣ್ಣಸಣ್ಣ ವ್ಯಕ್ತಿಗಳೂ ಪ್ರಧಾನಮಂತ್ರಿಗಳನ್ನು ಕೀಳು ಭಾಷೆಯಲ್ಲಿ ಮಾತನಾಡುವುದು ಎಷ್ಟು ಸರಿ? ಎಂದು ಕೇಳಿದರು. ಈಚೆಗೆ ವೈನ್ ಮರ್ಚೆಂಟ್ ಅಸೋಸಿಯೇಶನ್‍ನವರು ಒಂದು ಆಪಾದನೆ ಮಾಡಿದ್ದಾರೆ. ಸುಮಾರು 500…













