Author: kannadanewsnow09

ಬೆಂಗಳೂರು : “ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಪೂರ್ಣಗೊಳಿಸಲು ಹೆಚ್ಚಿನ ಕಾಲಾವಕಾಶ ಬೇಕೆನ್ನುವ ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕಕ್ಷಕರ ಸಂಘದ ಮನವಿ ಮೇರೆಗೆ ಇದೇ ತಿಂಗಳು 18 ರವರೆಗೆ ಅಂದರೆ 10 ದಿನಗಳ ಕಾಲ ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಶಾಲೆಗಳಿಗೆ ಸರ್ಕಾರ ರಜೆ ಘೋಷಿಸಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಕರ್ನಾಟಕ ರಾಜ್ಯ ಸಾಮಾಜಿಕ ಮತ್ತು ಶೈಕ್ಷಣಿಕ ಆಯೋಗವು ನಡೆಸುತ್ತಿರುವ ಸಮೀಕ್ಷೆ ಪ್ರಗತಿ ಕುರಿತು ವಿಧಾನಸೌಧದಲ್ಲಿ ಮಂಗಳವಾರ ನಡೆದ ಸಭೆ ಬಳಿಕ ಶಿವಕುಮಾರ್ ಅವರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. “ರಾಜ್ಯಾದ್ಯಂತ ನಡೆಯುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಕುರಿತು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಶೇ.90ರಷ್ಟು ಜನರು ಸಮೀಕ್ಷೆಗೆ ಸಹಕಾರ ನೀಡಿದ್ದಾರೆ. ಸರ್ಕಾರದ ಪರವಾಗಿ ಅವರಿಗೆ ಅಭಿನಂದಿಸುತ್ತೇನೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ತರಬೇತಿ ಹಾಗೂ ಚುನಾವಣಾ ಆಯೋಗದ ಕೆಲಸಗಳ ಹಿನ್ನೆಲೆಯಲ್ಲಿ ಸಮೀಕ್ಷೆಯನ್ನು ಸ್ವಲ್ಪ ತಡವಾಗಿ ಆರಂಭಿಸಿದ್ದೇವೆ. ಈ ಭಾಗದಲ್ಲಿ ಸಮೀಕ್ಷೆ ಮಂದಗತಿಯಲ್ಲಿದ್ದು, ಶೇ.25ರಷ್ಟು ಪೂರ್ಣಗೊಂಡಿದೆ.…

Read More

ಬೆಂಗಳೂರು : ಕನ್ನಡದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಹೌಸ್‌ಗೆ ಇದೀಗ ಸಂಕಷ್. ಶೋ ಆರಂಭವಾದಂತ ಎರಡೇ ವಾರದಲ್ಲಿ ಜಾಲಿವುಡ್ ಡೇಸ್ ಸ್ಟುಡಿಯೋಗೆ ತಹಶೀಲ್ದಾರ್ ಬೀಗ ಮುದ್ರೆಯಾಕಿ, ಸೀಜ್ ಮಾಡಿದ್ದಾರೆ. ಇಂದು ಶೋ ನಡೆಯುತ್ತಿರುವ ಜಾಲಿವುಡ್ ಸ್ಟುಡಿಯೋಸ್ ಗೆಬೆಂಗಳೂರು ದಕ್ಷಿಣ ಜಿಲ್ಲಾಡಳಿತದ ಅಧಿಕಾರಿಗಳು ಸ್ಟುಡಿಯೋಸ್ ಗೆ ತೆರಳಿದ್ದರು. ತಹಶೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡವು, ವೇಲ್ಸ್ ಸ್ಟುಡಿಯೋಸ್ ಮತ್ತು ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ ಗೆ ಬಿಗಮುದ್ರೆ ಹಾಕಿದೆ. ಹೌದು ಬಿಗ್ ಬಾಸ್ ಹೊಸ ವಿಡಿಯೋದಿಂದ ಬೀಗ ಮುದ್ರೆ ಬಿದ್ದಿದೆ. ಬಿಗ್ ಬಾಸ್ ಬಂದ್ ಮಾಡುವಂತೆ ನಿನ್ನೆ ನೋಟಿಸ್ ನೀಡಿದ್ದರು. ಆದರೆ ನೋಟಿಸ್ ಪಡೆಯಲು ಜಾಲಿವುಡ್ ವೀಡಿಯೋಸ್ ಹಿಂದಿಟು ಹಾಕಿದೆ. ಹಾಗಾಗಿ ಘಟನಾ ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಪೊಲೀಸರು ತೆರಳಿದ್ದರು. ಬಿಗ್ ಬಾಸ್ ಮನೆಯ ಒಳಗೆ ತೆರಳಿದ್ದಂತ ಅಧಿಕಾರಿಗಳು ಮನೆಯಲ್ಲಿ ಇರುವವರನ್ನು ಹೊರಗೆ ಕಳುಹಿಸಿ ಬಂದ್ ಮಾಡಿಸಿದ್ದಾರೆ. ಹೀಗಾಗಿ ಬಿಗ್ ಬಾಸ್ ಮನೆಗೆ ಬೀಗ ಜಡಿಯಲಾಗಿದೆ. ಈ ಕುರಿತು ಮತ್ತಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

Read More

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಅನಧಿಕೃತ ಮನೆಗಳನ್ನು ತೆರವು ಮಾಡಬೇಕೆಂದು‌ ಕನ್ನಡ ಚಳುವಳಿಗಾರ ತೇಜಸ್ವಿ ನಾಗಲಿಂಗಸ್ವಾಮಿ ಆಗ್ರಹಿಸಿದ್ದಾರೆ. ಪವಿತ್ರ ಧಾರ್ಮಿಕ ಕ್ಷೇತ್ರವಾದ ಚಾಮುಂಡಿ ಬೆಟ್ಟದ ಅಂದವನ್ನು‌ ಹಾಳು ಮಾಡಬೇಡಿ ಎಂದು ಒತ್ತಾಯಿಸಿದ್ದಾರೆ. ಬೆಟ್ಟದಲ್ಲಿ ಯಾವುದೇ ಹೊಸ ಮನೆಗಳ ನಿರ್ಮಾಣ ಮಾಡಬಾರದು ಮತ್ತು ಮೊದಲ ಮಹಡಿ ಗಳನ್ನು ಕಟ್ಟಬಾರದು ಈಗಾಗಲೇ ಇರುವ ಮನೆಗಳ ಯಾತಸ್ಥಿತಿ ಕಾಪಾಡುವಂತೆ ಸರ್ಕಾರ ಆದೇಶ ನೀಡಿದ್ದರು ಕೆಲವರು ಸರ್ಕಾರದ ಆದೇಶವನ್ನು ಗಾಳಿಗೆ ತೂರಿ ಮನೆಗಳ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಕನ್ನಡ ತೇಜಸ್ವಿ ನಾಗಲಿಂಗಸ್ವಾಮಿ ಸ್ವಾಮಿ ಆರೋಪ ಮಾಡಿದ್ದಾರೆ. ಕೆಲವರು ಅರಣ್ಯ ಇಲಾಖೆಯ‌ ಗಡಿಯನ್ನು ದಾಟಿ ಮನೆಗಳ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದಾರೆ ಅಂತವರ ಮೇಲೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಮತ್ತು ಮನೆಗಳ ನಿರ್ಮಾಣ ಕಾರ್ಯ ಸ್ಥಗಿತ ಗೋಳಿಸ ಬೇಕು ಎಂದು ತೇಜಸ್ವಿ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ. ಈಗಾಗಲೇ ಅನೇಕ ಬಾರಿ ಚಾಮುಂಡಿ ಬೆಟ್ಟದಲ್ಲಿ ಕುಸಿತ ಉಂಟಾಗಿದ್ದು ಕಳೆದ ನಾಲ್ಕು ಐದು ವರ್ಷಗಳ ಹಿಂದೆಯೇ ನಂದಿ ರಸ್ತೆ‌ ಕುಸಿತ ವಾಗಿದ್ದರೂ ಈವರೆಗೂ ಕೂಡ…

Read More

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರಂ ವಲಯದಲ್ಲಿನ ಮಲಂದೂರು ಮೀಸಲು ಅರಣ್ಯವನ್ನು ಒತ್ತುವರಿ ಮಾಡಿದ್ದಂತ 6 ಎಕರೆ 24 ಗುಂಟೆ ಜಮೀನನ್ನು ಅರಣ್ಯಾಧಿಕಾರಿಗಳು ತೆರವುಗೊಳಿಸಿದ್ದರು. ಆದರೇ ಈ ತೆರವು ಕಾನೂನಿನಡಿ ಮಾಡಿಲ್ಲ. ಕಾನೂನು ಮೀರಿ ಮಾಡಲಾಗಿದೆ ಎಂಬುದಾಗಿ ಹಲವರ ಆರೋಪವಾಗಿತ್ತು. ಇದು ಸುಳ್ಳು ಎಂಬುದನ್ನು ಅರಣ್ಯ ಇಲಾಖೆಯ 64ಎ ಆದೇಶವೇ ಹೇಳುತ್ತಿದೆ. ಕರ್ನಾಟಕ ಅರಣ್ಯ ಅಧಿನಿಯಮ 1963ರ ಸೆಕ್ಷನ್ 64(ಎ)ರ ಅಡಿಯಲ್ಲೇ ಕಾನೂನಿನಂತೆ ತೆರವು ಮಾಡಲಾಗಿದೆ. ಆ 64ಎ ಪ್ರೊಸಿಡಿಂಗ್ಸ್ ಆದೇಶದ ಸಂಪೂರ್ಣ ವಿವರ ಮುಂದಿದೆ ಓದಿ. ಈ ಕುರಿತಂತೆ ಸಾಗರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವಿ.ಕೆ ಆದೇಶ ಹೊರಡಿಸಿದ್ದಾರೆ. ಅದರಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರಂನ ಮಲಂದೂರು ಗ್ರಾಮದ ಸರ್ವೆ ನಂಬರ್ 157ರ ಮಲಂದೂರು ರಾಜ್ಯ ಅರಣ್ಯ ಪ್ರದೇಶದಲ್ಲಿ ಆರ್.ಎಂ ಷಣ್ಮುಖ ಬಿನ್ ಮಂಜಪ್ಪಗೌಡ ಎಂಬುವರು 6 ಎಕರೆ 24 ಗುಂಟೆ ಜಮೀನು ಒತ್ತುವರಿ ಮಾಡಿದ್ದರ ಬಗ್ಗೆ ದೂರು ಬಂದಿತ್ತು. ಈ ದೂರು ಆಧರಿಸಿ ಅರಣ್ಯಾಧಿಕಾರಿಗಳು…

Read More

ನವದೆಹಲಿ: ಭಾರತದಾದ್ಯಂತ ಡಿಜಿಟಲ್ ಪಾವತಿಗಳು ದೈನಂದಿನ ಜೀವನದಲ್ಲಿ ಆಳವಾಗಿ ಹುದುಗುತ್ತಿದ್ದಂತೆ, ಈ ವಹಿವಾಟುಗಳ ಸುರಕ್ಷತೆಯನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಹೊಸ ಕ್ರಮಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಘೋಷಿಸಿದೆ. ಹೊಸ ದೃಢೀಕರಣ ನಿಯಮಗಳು ಯಾವುವು ಮತ್ತು ಅವು ಯಾವಾಗ ಪ್ರಾರಂಭವಾಗುತ್ತವೆ? ಫೆಬ್ರವರಿ 2024 ರಲ್ಲಿ, ದೇಶದ ಪಾವತಿ ಪರಿಸರ ವ್ಯವಸ್ಥೆಯಾದ್ಯಂತ ದೃಢೀಕರಣ ವಿಧಾನಗಳನ್ನು ಆಧುನೀಕರಿಸುವ ತನ್ನ ಯೋಜನೆಗಳನ್ನು RBI ವಿವರಿಸಿದೆ. ಈ ಯೋಜನೆಗಳನ್ನು ಈಗ ಭಾರತೀಯ ರಿಸರ್ವ್ ಬ್ಯಾಂಕ್ (ಡಿಜಿಟಲ್ ಪಾವತಿ ವಹಿವಾಟುಗಳಿಗೆ ದೃಢೀಕರಣ ಕಾರ್ಯವಿಧಾನಗಳು) ನಿರ್ದೇಶನಗಳು, 2025 ರಲ್ಲಿ ಔಪಚಾರಿಕಗೊಳಿಸಲಾಗಿದೆ, ಇದು ಏಪ್ರಿಲ್ 1, 2026 ರಿಂದ ಜಾರಿಗೆ ಬರಲಿದೆ. “ಬ್ಯಾಂಕ್‌ಗಳು ಮತ್ತು ಬ್ಯಾಂಕೇತರ ಘಟಕಗಳು ಸೇರಿದಂತೆ ಎಲ್ಲಾ ಪಾವತಿ ವ್ಯವಸ್ಥೆ ಪೂರೈಕೆದಾರರು ಮತ್ತು ಪಾವತಿ ವ್ಯವಸ್ಥೆ ಭಾಗವಹಿಸುವವರು ಏಪ್ರಿಲ್ 1, 2026 ರೊಳಗೆ ಈ ನಿರ್ದೇಶನಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಬೇಕು, ನಿರ್ದಿಷ್ಟ ನಿಬಂಧನೆಗಳಿಗೆ ಬೇರೆ ರೀತಿಯಲ್ಲಿ ನಿರ್ದಿಷ್ಟಪಡಿಸದ ಹೊರತು,” RBI ಹೇಳಿದೆ. SMS OTP ಇನ್ನು ಮುಂದೆ ಏಕೆ ಸಾಕಾಗುವುದಿಲ್ಲ?…

Read More

ಬೆಂಗಳೂರು: ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾಗಿರುವ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಸಂಪೂರ್ಣ ಜವಾಬ್ದಾರಿ ಹಾಗೂ ಅಧಿಕಾರವನ್ನು ನಿರ್ದೇಶಕರಿಗೆ ಪುನಃ ಸ್ಥಾಪಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸಂಸ್ಥೆಯಲ್ಲಿ ನಡೆದಿದ್ದ ಅವ್ಯವಹಾರ ಹಾಗೂ ಅಕ್ರಮಗಳಿಗೆ ಸಂಬಂಧಿಸಿದಂತೆ ತನಿಖೆಗೆ ನೇಮಿಸಲಾಗಿದ್ದ ಸಮಿತಿಯ ಶಿಫಾರಸುಗಳನ್ನು ಆಧರಿಸಿ ಸರ್ಕಾರ ಕೆಲವು ಮಹತ್ವದ ಬದಲಾವಣೆಗಳನ್ನು ಮಾಡಿ ಆದೇಶ ಹೊರಡಿಸಿದೆ. ಆಡಳಿತಾಧಿಕಾರಿಗಳಾಗಿ ನೇಮಕಗೊಂಡಿದ್ದ ಅಧಿಕಾರಿಗಳಿಗೆ ನೀಡಲಾಗಿದ್ದ ಎಲ್ಲಾ ಜವಾಬ್ದಾರಿಗಳನ್ನು ಹಿಂಪಡೆಯಲು ಸರ್ಕಾರ ಆದೇಶ ಹೊರಡಿಸಿದೆ. ಆಡಳಿತಾತ್ಮಕ ವಿಷಯ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಸಿಬ್ಬಂದಿ ಸೇವಾ ವಿಷಯ, ಹಣಕಾಸು ನಿರ್ವಹಣೆ, ಸಂಗ್ರಹಣೆ, ಖರೀದಿ, ಮಾನವ ಸಂಪನ್ಮೂಲ ನಿರ್ವಹಣೆ ಸೇರಿದಂತೆ ಎಲ್ಲಾ ಪೂರ್ಣ ಜವಾಬ್ದಾರಿಯನ್ನು ಈ ಹಿಂದೆ ಇದ್ದರಂತೆ ನಿರ್ದೇಶಕರಿಗೆ ಪುನಃ ಸ್ಥಾಪಿಸಿ ಆದೇಶ ಹೊರಡಿಸಲಾಗಿದೆ. https://kannadanewsnow.com/kannada/notice-has-been-served-to-the-bigg-boss-house-minister-eshwar-khandre/ https://kannadanewsnow.com/kannada/holiday-for-all-schools-in-the-state-till-october-18-decision-taken-at-a-meeting-led-by-cm-siddaramaiah/

Read More

ಬೆಂಗಳೂರು : ರಾಮನಗರ ಜಿಲ್ಲೆ ಬಿಡದಿ ಬಳಿಯಿರುವ ವೆಲ್ಸ್ ಸ್ಟುಡಿಯೋಸ್ ಅಂಡ್ ಎಂಟರ್ ಟೈನ್ಮೆಂಟ್ ಪ್ರೈ. ಲಿ. (ಜಾಲಿ ವುಡ್ ಸ್ಟುಡಿಯೋ)ಗೆ ಜಲ ಕಾಯಿದೆ, ವಾಯು ಕಾಯಿದೆಯಡಿ ಅನುಮತಿ ಪಡೆಯದೆ ಕಾರ್ಯಾಚರಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ನೀಡಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ. ವಿಕಾಸಸೌಧದಲ್ಲಿಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಗ್ ಬಾಸ್ ಕಾರ್ಯಕ್ರಮ ನಡೆಯುತ್ತಿರುವ ಸ್ಟುಡಿಯೋಗೆ ನೋಟಿಸ್ ನೀಡಿರುವ ವಿಚಾರ ಮಾಧ್ಯಮದಿಂದ ತಮಗೆ ತಿಳಿಯಿತು. ಈ ಬಗ್ಗೆ ಮಾಹಿತಿ ಪಡೆದಾಗ,   ರಾಮನಗರ ಪ್ರಾದೇಶಿಕ ಕಚೇರಿಯಿಂದ 2024ರಲ್ಲೇ 2 ಬಾರಿ ನೋಟಿಸ್ ನೀಡಿದ್ದರೂ ಅನುಪಾಲನೆ ಮಾಡಿದ ಕಾರಣ ಈ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದರು. ಇಲ್ಲಿ ಎಸ್.ಟಿ.ಪಿ. ಕಾರ್ಯನಿರ್ವಹಣೆ ಸೇರಿದಂತೆ ಸಮರ್ಪಕವಾಗಿ ತಾಜ್ಯ ವಿಲೇವಾರಿ ಆಗುತ್ತಿಲ್ಲ, ಜನರೇಟರ್ ಸೆಟ್ ಗಳಿದ್ದು ಅದಕ್ಕೂ ಅನುಮತಿ ಪಡೆದಿಲ್ಲ ಎಂದು ತಿಳಿಸಿದ್ದಾರೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಹೀಗಾಗಿ ಮಂಡಳಿ ಕ್ರಮ…

Read More

ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಹೀಗಾಗಿ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ, ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಅವರಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Read More

ಕೆಎನ್ಎನ್ ಡಿಜಿಟಲ್ ಡೆಸ್ಕ್: ಜಾನ್ ಕ್ಲಾರ್ಕ್, ಮೈಕೆಲ್ ಎಚ್ ಡೆವೊರೆಟ್ ಮತ್ತು ಜಾನ್ ಎಂ ಮಾರ್ಟಿನಿಸ್ 2025 ರ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ 2025 ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಜಾನ್ ಕ್ಲಾರ್ಕ್, ಮೈಕೆಲ್ ಹೆಚ್. ಡೆವೊರೆಟ್ ಮತ್ತು ಜಾನ್ ಎಂ. ಮಾರ್ಟಿನಿಸ್ ಅವರಿಗೆ “ವಿದ್ಯುತ್ ಸರ್ಕ್ಯೂಟ್‌ನಲ್ಲಿ ಮ್ಯಾಕ್ರೋಸ್ಕೋಪಿಕ್ ಕ್ವಾಂಟಮ್ ಮೆಕ್ಯಾನಿಕಲ್ ಟನಲಿಂಗ್ ಮತ್ತು ಶಕ್ತಿ ಪರಿಮಾಣೀಕರಣದ ಆವಿಷ್ಕಾರಕ್ಕಾಗಿ” ನೀಡಲು ನಿರ್ಧರಿಸಿದೆ. https://twitter.com/NobelPrize/status/1975498493218394168

Read More

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವಂತ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯ ಸಂದರ್ಭದಲ್ಲಿ ಮೂವರು ಶಿಕ್ಷಕರು ಸಾವನ್ನಪ್ಪಿದ್ದಾರೆ. ಅವರಿಗೆ ರಾಜ್ಯ ಸರ್ಕಾರದಿಂದ ತಲಾ 20 ಲಕ್ಷ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ಇಂದು ಸಮೀಕ್ಷೆ ಸಂಬಂಧ ಅಧಿಕಾರಗಳ ಜೊತೆಗೆ ಸಭೆಯನ್ನು ನಡೆಸಿದಂತ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ಕೊಪ್ಪಳ ಜಿಲ್ಲೆಯಲ್ಲಿ ಜಾತಿಗಣತಿ ಸಮೀಕ್ಷೆ ಶೇ.90ರಷ್ಟು ಆಗಿದೆ. ದಕ್ಷಿಣ ಕನ್ನಡ, ಉಡುಪಿಯಲ್ಲಿ ಶೇ.68, 69ರಷ್ಟು ಆಗಿದೆ. ಇಡೀ ರಾಜ್ಯದಲ್ಲಿ ನಮ್ಮ ನಿರೀಕ್ಷೆ ಏನಿತ್ತೋ ಅದು ಸಾಧ್ಯವಾಗಿಲ್ಲ. ಇಂದು ಸಂಜೆ ಜಾತಿಗಣತಿ ಸಮೀಕ್ಷೆ ಎಷ್ಟು ಆಗಲಿದೆ ಎಂಬುದು ತಿಳಿಯಲಿದೆ. ನನಗೆ ಬಂದಿರುವಂತ ಮಾಹಿತಿಯಂತೆ ಎಲ್ಲಾ ಜಿಲ್ಲೆಯಲ್ಲಿ ಸಂಪೂರ್ಣ ಸಮೀಕ್ಷೆಯಾಗಿಲ್ಲ ಎಂದರು. ನಿನ್ನೆ ಶಿಕ್ಷಣ ಇಲಾಖೆಯಿಂದ ಒಂದು ಆದೇಶ ಮಾಡಲಾಗಿದೆ. ಹಿಂದುಳಿದ ಆಯೋಗದ ಜೊತೆಗೆ ಚರ್ಚಿಸಿ ಮಾಡಿರುವಂತ ಆದೇಶವಾಗಿದೆ. ಆ ಬಳಿಕ ಇಂದು ಚರ್ಚಿಸಿ ಎಲ್ಲಾ ಶಿಕ್ಷಕರನ್ನು ಸಮೀಕ್ಷೆಗೆ ತೊಡಗಿಸಿಕೊಳ್ಳಲು ನಿರ್ಧರಿಸಲಾಗಿದೆ. ಒಂದು ದಿನಕ್ಕೆ ಕನಿಷ್ಠ 15 ಮನೆಗಳನ್ನು ಮಾಡಲು ಹೇಳಲಾಗಿತ್ತು. ಆದರೇ ಅದು ಸಾಧ್ಯವಾಗಿಲ್ಲ. ರಜೆ ವಿಸ್ತರಣೆ…

Read More