Subscribe to Updates
Get the latest creative news from FooBar about art, design and business.
Author: kannadanewsnow09
ಶಿವಮೊಗ್ಗ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆಗಸ್ಟ್ 15 ರಂದು ಕೆಂಪುಕೋಟೆಯಲ್ಲಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡುವಾಗ ನವರಾತ್ರಿ ಹಬ್ಬಕ್ಕೆ ಜನಸಾಮಾನ್ಯರಿಗೆ ಶುಭ ಸುದ್ದಿ ಕೊಡುತ್ತೇನೆ ಎಂದು ಭರವಸೆ ನೀಡಿದ್ದರು. ಅದರಂತೆ ಸರುಕು ಹಾಗೂ ಸೇವಾ ತೆರಿಗೆಯನ್ನು ಕಡಿತಗೊಳಿಸುವ ಮೂಲಕ ಕೊಟ್ಟ ಮಾತು ಈಡೇರಿಸಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಇಂದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ತಾಲ್ಲೂಕಿನ ಆನವಟ್ಟಿ ಗ್ರಾಮದ ವಾಸವಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವರ್ತಕರ ಸಭೆಯಲ್ಲಿ ಮಾತನಾಡಿದಂತ ಅವರು, ಸೋರುತ್ತಿರುವ ಆದಾಯವನ್ನು ತಡೆಗಟ್ಟಲು ದೇಶಕ್ಕೆ ಒಂದೇ ತೆರಿಗೆ 2016ರಲ್ಲಿ ಜಾರಿಗೆ ತರಲಾಗಿತ್ತು. ಆಟೋಮೊಬೈಲ್ ಉತ್ಪನ್ನಗಳನ್ನು 375 ವಸ್ತುಗಳಿಗೆ ಅನ್ವಯವಾಗುವಂತೆ ಹೊರೆ ಇಳಿಸಲಾಗಿದೆ. ಇದರಿಂದ 2.50 ಲಕ್ಷ ಕೋಟೆ ಸರ್ಕಾರಕ್ಕೆ ಹೊರೆಯಾಗಿದೆ. ಇದು ನವರಾತ್ರಿ ಹಬ್ಬಕ್ಕೆ ಸಾರ್ವಜನಿಕರಿಗೆ ಉಡುಗೊರೆ ಕೊಡಲಾಗಿದೆ ಎಂದು ತಿಳಿಸಿದರು. ದೇಶದಲ್ಲಿ ಒಟ್ಟು 25 ಕೋಟಿ ಜನರು ಬಡತನದ ಪಟ್ಟಿಯಿಂದ ಮುಕ್ತಗೊಂಡಿದ್ದಾರೆ. ಮಧ್ಯಮವರ್ಗ ಮತ್ತು ಸಾಮಾನ್ಯ ಜನರು ಗುಣಮಟ್ಟದ ಜೀವನ ಅನುಕೂಲವಾಗಿದೆ. ದುಶ್ಚಟಗಳಿಗೆ…
ಶಿವಮೊಗ್ಗ: ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜಿಎಸ್ ಟಿಯನ್ನು ತೆರಿಗೆಯನ್ನು ಕಡಿತಗೊಳಿಸುವ ಮೂಲಕ ಸಾರ್ವಜನಿಕರಿಗೆ ದಸರಾ ಹಬ್ಬಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ ಎಂದು ಸೊರಬ ಬಿಜೆಪಿ ಮುಖಂಡ ಡಾ.ಜ್ಞಾನೇಶ್ ಹೇಳಿದರು. ಇಂದು ಶಿವಮೊಗ್ಗ ಜಿಲ್ಲೆಯ ಸೊರಬದ ಶ್ರೀ ಬಯಲು ಬಸವೇಶ್ವರ ದೇವಸ್ಥಾನದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯ ನಡೆಸಿ,ನಂತರ ಪಟ್ಟಣದ ಆಂಜನೇಯ ಸ್ವಾಮಿ ವೃತ್ತದ ಬಳಿ ಸರಕು,ಸೇವಾ ತೆರಿಗೆ ಕಡಿತಗೊಳಿಸದ ಕೇಂದ್ರ ಸರ್ಕಾರದ ನಿಲುವನ್ನು ಸ್ವಾಗತಿಸಿ ಅವರು ಮಾತನಾಡಿದರು. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಜಿಎಸ್ ಟಿ ಕಡಿತದಿಂದ ಸಾರ್ವಜನಿಕವಾಗಿ ದಿನಬಳಕೆ ವಸ್ತುಗಳ ಬೆಲೆ ಗಣನೀಯ ಇಳಿಕೆಯಾಗಿದೆ. ಇದರಿಂದ ಕೆಳವರ್ಗದ ಜನರ ಜೀವನ ಕ್ರಮ ಸುಧಾರಿಸುವ ಜೊತೆಗೆ ವ್ಯಾಪಾರ, ವಹಿವಾಟು ನಡೆಸುವ ವರ್ತಕರಿಗೆ ಆರ್ಥಿಕತೆಯಲ್ಲಿ ಅನುಕೂಲವಾಗಲಿದೆ ಎಂದು ತಿಳಿಸಿದರು. ಜಾಗತಿಕ ಮಟ್ಟದಲ್ಲಿ ದೇಶವನ್ನು ಆರ್ಥಿಕತೆಯಲ್ಲಿ ಉನ್ನತಿಗೆ ಕೊಂಡೊಯ್ದ ನರೇಂದ್ರ ಮೋದಿ ಅವರು ವಿಶ್ವ ನಾಯಕರಾಗಿದ್ದಾರೆ. ದಿನಬಳಕೆ…
ಮೈಸೂರು : ಪ್ರಧಾನಿ ನರೇಂದ್ರ ಮೋದಿ ಬರೀ ಡೋಂಗಿ. GST ಜಾರಿ ಮಾಡಿದ್ದೂ ಮೋದಿ. GST ಹೆಚ್ಚೆಚ್ಚು ವಿಧಿಸಿದ್ದೂ ಮೋದಿಯವರೇ. ಈಗ ಬೆನ್ನು ತಟ್ಟಿಕೊಳ್ತಾ ಇರೋದೂ ಮೋದಿಯವರೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವ್ಯಂಗ್ಯವಾಡಿದರು. ಮಹಾರಾಜ ಕಾಲೇಜು ಮೈದಾನದಲ್ಲಿ ದಸರಾ ಆಹಾರ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಎಂಟು ವರ್ಷ ವಿಪರೀತ GST ವಸೂಲಿ ಮಾಡಿದ್ರಲ್ಲಾ ಪ್ರಧಾನಿ ಮೋದಿಯವರೇ ಅದೆಲ್ಲವನ್ನೂ ಭಾರತೀಯರಿಗೆ ವಾಪಾಸ್ ಕೊಡ್ತೀರಾ ಎಂದು ಪ್ರಶ್ನಿಸಿದರು. GST 18%, 28% ಹೆಚ್ಚಿಸಿದ್ದರ ಬಗ್ಗೆ ವಿರೋಧ ಮಾಡಿದವರು ನಾವು. ಇಷ್ಟು ವರ್ಷ ವಸೂಲಿ ಮಾಡಿದವರೇ ಈಗ ಕ್ರೆಡಿಟ್ ತಗೊತಾ ಇದಾರೆ. ಭಾರತೀಯರಿಗೆ ಎಷ್ಟು ನಾಜೂಕಾಗಿ ಟೋಪಿ ಹಾಕ್ತಾರೆ ನೋಡಿ. ನೀವು ಇದಕ್ಕೆಲ್ಲಾ ಮರಳಾಗಬಾರದು ಎಂದರು. ಬಡವರು ಖಾಲಿ ಹೊಟ್ಟೆಯಲ್ಲಿ ಮಲಗಬಾರದು ಎನ್ನುವ ಕಾರಣಕ್ಕೆ ಅನ್ನಭಾಗ್ಯ ಜಾರಿಗೆ ತಂದು 10 ಕೆಜಿ ಅಕ್ಕಿ ಕೊಟ್ಟಿದ್ದೇ ಈ ಸಿದ್ದರಾಮಯ್ಯ ಎಂದು ನುಡಿದರು. ಮಾಜಿ ಸಂಸದರಿಗಿಂತ ನಾನು ಉತ್ತಮ ಹಿಂದು: ಸಿ.ಎಂ ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್…
ಮಂಡ್ಯ: ಜಿಎಸ್ಟಿ ಇಳಿಕೆ ಬಗ್ಗೆ ಕೇಂದ್ರ ಸರ್ಕಾರ ಟಾಂ ಟಾಂ ಹೊಡೆಯುತ್ತಿದೆ. ಒಂದರಲ್ಲಿ ಕಡಿಮೆ ಮಾಡಿ ಹೆಮ್ಮೆ ಪಡುವುದಲ್ಲ. ಟ್ಯಾಕ್ಸ್ ತೊಂದರೆ ಸರಿ ಮಾಡಿ ಎಂಬುದಾಗಿ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಹೇಳಿದ್ದಾರೆ. ಇಂದು ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಕೇಂದ್ರ ಸರ್ಕಾರದಿಂದ GST ಇಳಿಕೆ ವಿಚಾರ ಮಾತನಾಡಿದಂತ ಅವರು, ರಾಷ್ಟ್ರ ಮಟ್ಟದಲ್ಲಿ GST ಇಳಿಕೆ ಮಾಡಿದ್ದಾರೆ. ಇನ್ನು ಹಲವು ಟ್ಯಾಕ್ಸ್ ವ್ಯವಸ್ಥೆಯಲ್ಲಿ ತೊಂದರೆ ಇದೆ. ಒಂದರಲ್ಲಿ ಕಡಿಮೆ ಮಾಡಿ ಹೆಮ್ಮೆ ಪಡುವುದಲ್ಲ ಟ್ಯಾಕ್ಸ್ ಕಟ್ಟಬೇಕು ವಂಚನೆ ಮಾಡಬಾರದು ಇದರ ಬಗ್ಗೆ ಕ್ರಮ ಕೈಗೊಂಡಿಲ್ಲ. ರಾಜಕೀಯವಾಗಿ ಸೀಮಿತವಾಗಿದೆ ಎಂದರು. ಬಾನು ಮುಷ್ತಾಕ್ ದಸರಾ ಉದ್ಘಾಟನೆ ವಿಚಾರ ಪ್ರತಿಕ್ರಿಯಿಸಿದಂತ ಅವರು, ವಿರೋಧ ಪಕ್ಷದ ಪ್ರಯತ್ನ ಮೆಟ್ಟಿಲೆರಲ್ಲ. ಬಾನು ಮುಷ್ತಾಕ್, ಹೂ, ಮಂಗಳಾರತಿ ತಗೊಳ್ಳ ಅಂದ್ರು ಅದೆಲ್ಲ ಉಲ್ಟಾ ಆಯ್ತು. ಸುಪ್ರೀಂಕೋರ್ಟ್ ಗೆ ಹಹೋಗಿ ಛಿಮಾರಿ ಹಾಕಿಸಿಕೊಂಡ್ರು. ಸಾಧಕರು ನಡೆದುಕೊಂಡ ರೀತಿ ಹಿಂದುಗಳೆ ಮೆಚ್ಚಿದ್ದಾರೆ. ಅವರಿಗೆ ಶೆಮ್ ಆಯ್ತು, ದಿನೇ ದಿನೇ ಬಿಜೆಪಿ ಕುಸಿಯುತ್ತಿದ್ದಾರೆ ಎಂದರು. ಆರ್.ಅಶೋಕ್ ಪ್ರಶ್ನೆಗೆ…
ನೆಲಮಂಗಲ: ಹಿರಿಯ ನಟಿ ದಿವಂಗತ ಲೀಲಾವತಿ ಅವರ ಸ್ಮರಣಾರ್ಥದ ಮಠದ ಮಕ್ಕಳ ಅನ್ನ ದಾಸೋಹ ಸಂಗ್ರಹ ಸೇವೆಗಾಗಿ ಕಾರೊಂದನ್ನು ನಟ ವಿನೋದ್ ರಾಜ್ ಉಡುಗೋರೆಯಾಗಿ ನೀಡಿದ್ದಾರೆ. ಬೆಂಗಳೂರು ಹೊರವಲಯದ ನೆಲಮಂಗಲ ಬಳಿಯ ಸೋಲದೇವನಹಳ್ಳಿ ತೋಟದಲ್ಲಿ ಬಾಗಲಕೋಟೆಯ ಮಹಾಂತ ಮಂದಾರ ಮಠ ಬನಹಟ್ಟಿ ಪೂಜ್ಯ ಶ್ರೀ ಮಹಾಂತಾ ದೇವರು ಸ್ವಾಮೀಜಿ ಅವರಿಗೆ ತಾಯಿ ಲೀಲಾವತಿ ಅವರ ಸ್ಮರಣಾರ್ಥ ಮಠದ ಮಕ್ಕಳ ಅನ್ನದಾಸೋಹ ಸಂಗ್ರಹ ಸೇವೆಗೆ ನೆರವಾಗುವುದಕ್ಕೆ ನಟ ವಿನೋದ್ ರಾಜ್ ಕಾರೊಂದನ್ನು ಉಡುಗೋರೆಯಾಗಿ ನೀಡಿದರು. ನಟ ವಿನೋದ್ ರಾಜ್ ಈ ಹಿಂದೆ ಲೀಲಾವತಿ ಹೆಸರಿನ ಸಾರ್ವಜನಿಕ ಆಸ್ಪತ್ರೆ, ಪಶು ಚಿಕಿತ್ಸಾಲಯ, ರಸ್ತೆ ರಿಪೇರಿಗೆ ತನ್ನದೆ ಆದಂತ ನೆರವು ನೀಡಿ ಸಾಮಾಜಿಕ ಸೇವೆಯನ್ನು ಮೆರೆದಿದ್ದರು. ಇದೀಗ ಮಕ್ಕಳ ಅನ್ನ ದಾಸೋಹಕ್ಕೆ ನೆರವಾಗಲಿ ಎಂಬುದಾಗಿ ಕಾರು ನೀಡಿದ್ದಾರೆ. https://kannadanewsnow.com/kannada/watch-video-congress-releases-ai-against-pm-modi-another-video/ https://kannadanewsnow.com/kannada/state-cabinet-to-be-reshuffled-in-november-opportunity-for-newcomers-mlc-salim-ahmeds-explosive-statement/
ನವದೆಹಲಿ: ನವೆಂಬರ್ ನಲ್ಲಿ ಸಂಪುಟ ಪುನರ್ ರಚನೆಯಾಗಲಿದೆ. ಶೇ. 50ರಷ್ಟು ಸಚಿವರ ಬದಲಾವಣೆಯ ಸಾಧ್ಯತೆ ಇದೆ. ನವೆಂಬರ್ ನಲ್ಲಿ ಸಂಪುಟ ಪುನರ್ ರಚನೆ ಆಗಿ, ಹೊಸಬರಿಗೆ ಸಂಪುಟದಲ್ಲಿ ಅವಕಾಶ ನೀಡುವ ಸಾಧ್ಯತೆ ಇದೆ ಎಂದು ದೆಹಲಿಯಲ್ಲಿ ಎಂಎಲ್ಸಿ ಸಲೀಂ ಅಹಮದ್ ಹೊಸ ಬಾಂಬ್ ಸಿಡಿಸಿದ್ದಾರೆ. ನವೆಂಬರ್ ನಲ್ಲಿ ನಮ್ಮ ಸರ್ಕಾರ ಆಡಳಿತಕ್ಕೆ ಬಂದು ಎರಡೂವರೆ ವರ್ಷ ಆಗುತ್ತದೆ. ಹಾಗಾಗಿ ಸಂಪುಟ ಬದಲಾವಣೆ ಆಗಲಿದೆ ಸುಮಾರು ಶೇ.50 ರಷ್ಟು ಹೊಸಬರಿಗೆ ಸ್ಥಾನ ನೀಡಲಾಗುತ್ತದೆ. ಸಂಪುಟದಿಂದ ಕೈಬಿಟ್ಟಂದವರಿಗೆ ಪಕ್ಷದ ಜವಾಬ್ದಾರಿಯನ್ನು ವಹಿಸಲಾಗುತ್ತದೆ ಎಂದರು. ಜೊತೆಗೆ ಪಕ್ಷ ಸಂಘಟನೆ ಮಾಡಲಾಗುತ್ತದೆ ಮುಂದಿನ 2028 ರಲ್ಲಿ ಕೂಡ ರಾಜ್ಯದಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ ಹಾಗಾಗಿ ಹೊಸಬರಿಗೆ ಅವಕಾಶ ಮಾಡಿಕೊಡಬೇಕು ಅಂತ ಹೇಳಿದ್ದೇವೆ. ಸಂಪುಟ ಬದಲಾವಣೆ ಸಾಧ್ಯತೆ ಇದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್ ಸ್ಪೋಟಕ ಹೇಳಿಕೆ ನೀಡಿದರು. https://kannadanewsnow.com/kannada/woman-seriously-injured-in-stabbing-in-bengaluru-dies-without-treatment/ https://kannadanewsnow.com/kannada/high-court-adjourns-hearing-of-pil-challenging-caste-census-to-tomorrow-afternoon/
ಬೆಂಗಳೂರು: ನಗರದಲ್ಲಿ ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದಂತ ಮಹಿಳೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಚಿಕಿತ್ಸೆ ಫಲಿಸದೇ ಖಾಸಗಿ ಆಸ್ಪತ್ರೆಯಲ್ಲಿ ರೇಖಾ(35) ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಸುಂಕದಕಟ್ಟೆ ಬಳಿ ಲೋಕೇಶ್ ನಿಂದ ಚಾಕು ಇರಿತಕ್ಕೆ ರೇಖಾ ಒಳಗಾಗಿದ್ದರು. ತುಮಕೂರು ಜಿಲ್ಲೆಯ ಶಿರಾ ಮೂಲದ ರೇಖಾಗೆ ಚಾಕುವಿನಿಂದ ಲೋಕೇಶ್ ಇರಿದಿದ್ದರು. ಲೋಕೇಶ್ ಆಲಿಯಾಸ್ ಲೋಹಿತಾಶ್ವ ಎಂಬಾತನಿಂದ ಈ ಕೃತ್ಯ ಎಸಗಲಾಗಿತ್ತು. ರೇಖಾಗೆ 11 ಬಾರಿ ಆರೋಪಿ ಲೋಕೇಶ್ ಚಾಕುವಿನಿಂದ ಇರಿದಿದ್ದರು. ಆಕೆಯನ್ನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೇ ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿ ಲೋಕೇಶ್ ಪತ್ತೆಗೆ ಕಾಮಾಕ್ಷಿಪಾಳ್ಯ ಪೊಲೀಸರು ಬಲೆ ಬೀಸಿದ್ದಾರೆ. https://kannadanewsnow.com/kannada/shivamogga-list-veerashaiva-as-lingayat-in-the-caste-column-td-megharaj-appeals/ https://kannadanewsnow.com/kannada/high-court-adjourns-hearing-of-pil-challenging-caste-census-to-tomorrow-afternoon/
ಶಿವಮೊಗ್ಗ: ರಾಜ್ಯ ಸರ್ಕಾರ ನಡೆಸುತ್ತಿರುವ ಜಾತಿ ಜನಗಣತಿಯ ವೇಳೆಯಲ್ಲಿ ಧರ್ಮದ ಕಾಲಂನಲ್ಲಿ ಹಿಂದೂ ಧರ್ಮವೆಂದು, ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯಿತ, ಉಪ ಜಾತಿ ಕಾಲಂನಲ್ಲಿ ಬೇರೆ ಬೇರೆ ಉಪಜಾತಿ ನಮೂದಿಸುವಂತೆ ವೀರಶೈವ ಲಿಂಗಾಯಿತ ಸಮಾಜದ ಪ್ರಮುಖರಾದ ಟಿ.ಡಿ.ಮೇಘರಾಜ್ ಮನವಿ ಮಾಡಿದರು. ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸೋಮವಾರ ಕರೆಯಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಾತಿ ಜನಗಣತಿ ಸಂದರ್ಭದಲ್ಲಿ ಗಣತಿದಾರರು ಕೇಳುವ 60 ಪ್ರಶ್ನೆಗಳಿಗೆ ಯಾವುದೇ ಗೊಂದಲಕ್ಕೆ ಈಡಾಗದೆ ಸಾರ್ವಜನಿಕರು ಉತ್ತರ ನೀಡಬೇಕು ಎಂದರು. ಕೇಂದ್ರ ಸರ್ಕಾರ ಜಾತಿಜನಗಣತಿಗೆ ದಿನಾಂಕ ಘೋಷಣೆ ಮಾಡಿದೆ. ಆದರೆ ರಾಜ್ಯ ಸರ್ಕಾರ ಹಿಂದೆ ಕಾಂತರಾಜ್ ಸೇರಿದಂತೆ ಬೇರೆಬೇರೆ ಜಾತಿಗಣತಿ ವರದಿ ಅನುಷ್ಟಾನಕ್ಕೆ ತರಲು ವಿಫಲವಾಗಿದೆ. ಇದಕ್ಕಾಗಿ ನೂರಾರು ಕೋಟಿ ರೂಪಾಯಿ ವ್ಯಯ ಮಾಡಿದ್ದು ಎಲ್ಲವೂ ನೀರಿನಲ್ಲಿ ಹೋಮ ಮಾಡಿದಂತೆ ಆಗಿದೆ. ಮತ್ತೆ 450 ಕೋಟಿ ರೂ. ಖರ್ಚು ಮಾಡಿ ಜಾತಿಗಣತಿಗೆ ಮುಂದಾಗಿದೆ ಎಂದು ಆರೋಪಿಸಿದರು. ರಾಜ್ಯ ಸರ್ಕಾರವು ಜಾತಿ ಗಣತಿ…
ಶಿವಮೊಗ್ಗ: ಜಿಲ್ಲೆಯ ಸೊರಬದ ಹಳೇಸೊರಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 49 ವಸಂತಗಳನ್ನು ಪೂರೈಸಿದ್ದು, ಮುಂದಿನ ವರ್ಷದಲ್ಲಿ 50 ನೇ ವರ್ಷದ ಸಂಭ್ರಮಾಚರಣೆಯನ್ನು ಅದ್ದೂರಿಯಾಗಿ ನಡೆಸಲು ಸಹಕಾರಿ ಬಂಧುಗಳು ಸಹಕಾರ ನೀಡಬೇಕು ಎಂದು ಹಳೇಸೊರಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜೆ. ಪ್ರಕಾಶ್ ಹೇಳಿದರು. ಸೋಮವಾರ ಪಟ್ಟಣದ ಗಿರಿಜಾ ಶಂಕರ ಭವನದಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕಿನ ಹಳೇಸೊರಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದಂತ ಅವರು, ಸುದೀರ್ಘ ಅವಧಿಗೆ ಸಹಕಾರ ಸಂಘವು ರೈತ ಪರವಾಗಿ ಕಾರ್ಯ ನಿರ್ವಹಿಸಲು ಮಾಜಿ ಅಧ್ಯಕ್ಷರು,ನಿರ್ದೇಶಕರು ಹಾಗೂ ರೈತರು ಸಹಕಾರ ನೀಡಿದ್ದಾರೆ. ಪ್ರಸ್ತುತ ವರ್ಷದಲ್ಲಿ ಸಂಘವು ಒಟ್ಟು 7.26 ಲಕ್ಷ ರೂಪಾಯಿ ನಿವ್ವಳ ಲಾಭ ಗಳಿಸಿದೆ ಎಂದರು. ಸರ್ಕಾರದಿಂದ ಸಹಕಾರಿ ಸಂಘಕ್ಕೆ ಹಣಕಾಸಿನ ನೆರವು ಸಿಕ್ಕಿಲ್ಲ. ಅದರಿಂದ ಸಾಲವನ್ನು ಹೆಚ್ಚುವರಿಯಾಗಿ ನೀಡಲು ಅವಕಾಶವಿಲ್ಲ. ನೀಡಿರುವ ಸಾಲವನ್ನು ರೈತರು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿದರೆ ಅದು ಸಂಘದಲ್ಲಿ ಬಂಡವಾಳವಾಗಿ ಪರಿವರ್ತನೆಯಾಗಲಿದೆ.…
ನವದೆಹಲಿ: ಜಾಗತಿಕ ಸುಂಕದ ಅನಿಶ್ಚಿತತೆಯ ನಡುವೆ ಆರ್ಥಿಕತೆಗೆ ಉತ್ತೇಜನ ನೀಡಲು ಸರಕು ಮತ್ತು ಸೇವಾ ತೆರಿಗೆ (Goods and Services Tax -GST) ಮಂಡಳಿಯು ಕನಿಷ್ಠ 375 ವಸ್ತುಗಳ ಮೇಲೆ ಕಡಿಮೆ ದರಗಳನ್ನು ಜಾರಿಗೆ ತಂದಿದ್ದರಿಂದ, ಭಾರತದ ಪರೋಕ್ಷ ತೆರಿಗೆ ವ್ಯವಸ್ಥೆಯು ಇಂದು ಸೆಪ್ಟೆಂಬರ್ 22 ರಿಂದ ಪ್ರಮುಖ ಪರಿಷ್ಕರಣೆಗೆ ಒಳಗಾಯಿತು. ಗ್ರಾಹಕರಿಗೆ ಹಬ್ಬದ ಸಂಭ್ರಮದಲ್ಲಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ 56 ನೇ ಜಿಎಸ್‌ಟಿ ಮಂಡಳಿಯ ಸಭೆಯು ವರ್ಗಗಳಾದ್ಯಂತ ತೆರಿಗೆ ದರಗಳನ್ನು ಕಡಿತಗೊಳಿಸಲು ನಿರ್ಧರಿಸಿತು. ಇಂದಿನಿಂದ ಜಾರಿಗೆ ಬರುವಂತೆ, ಹಿಂದಿನ ನಾಲ್ಕು-ಸ್ಲ್ಯಾಬ್ ರಚನೆಯನ್ನು ಬದಲಾಯಿಸುವ ಮೂಲಕ ಕೇವಲ ಎರಡು ಪ್ರಾಥಮಿಕ ಜಿಎಸ್‌ಟಿ ಸ್ಲ್ಯಾಬ್‌ಗಳು – 5% ಮತ್ತು 18% – ಉಳಿದಿವೆ. ಈ ಪರಿಷ್ಕರಣೆಯ ನಂತರ, ಈ ಹಿಂದೆ 12% ತೆರಿಗೆ ವಿಧಿಸಲಾಗಿದ್ದ ಸುಮಾರು 99% ಸರಕುಗಳು 5% ಸ್ಲ್ಯಾಬ್‌ಗೆ ಬದಲಾಗಿವೆ, ಆದರೆ 28% ಸ್ಲ್ಯಾಬ್‌ನಲ್ಲಿರುವ 90% ವಸ್ತುಗಳು ಈಗ 18% ಬ್ರಾಕೆಟ್‌ಗೆ ಬರುತ್ತವೆ. ಆದಾಗ್ಯೂ, ತಂಬಾಕು,…







