Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ರಾಜ್ಯ ಸರ್ಕಾರದಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾಗಿ ಶಾಸಕ ಎಸ್ ಆರ್ ಶ್ರೀನಿವಾಸ (ವಾಸು) ಅವರನ್ನು ನೇಮಕ ಮಾಡಿ ಆದೇಶಿಸಿತ್ತು. ಅದರಂತೆ ಇಂದು ಅವರು ನಿಗಮದ ಕೇಂದ್ರ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ತುಮಕೂರಿನ ಗುಬ್ಬಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್ ಆರ್ ಶ್ರೀನಿವಾಸ್ ಅವರನ್ನು ಕೆ ಎಸ್ ಆರ್ ಟಿಸಿ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಇಂತಹ ಅವರು ಇಂದು ನಿಗಮದ ಕಚೇರಿಯಲ್ಲಿ ಅಧಿಕಾರವನ್ನು ಸ್ವೀಕರಿಸಿದರು. ಅಧಿಕಾರ ಸ್ವೀಕರಾದ ಬಳಿಕ ಶಾಸಕ ಎಸ್ ಆರ್ ಶ್ರೀನಿವಾಸ್ ಅವರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ನೂತನ ಅಧ್ಯಕ್ಷರಿಗೆ ಹೂ ಗುಚ್ಚ ನೀಡಿ ಶುಭ ಹಾರೈಸಿದರು. ಅಲ್ಲದೇ ಸಹಕಾರ ಸಚಿವ ಕೆಎನ್ ರಾಜಣ್ಣ ಅವರು ನೂತನ ಅಧ್ಯಕ್ಷರಿಗೆ ಶುಭಾಶಯ ತಿಳಿಸಿದರು. ಇದೇ ಸಂದರ್ಭದಲ್ಲಿ ವಿ. ಅನ್ಬುಕುಮಾರ್ ಭಾ.ಆ.ಸೇ. ವ್ಯವಸ್ಥಾಪಕ ನಿರ್ದೇಶಕರು, ಡಾ. ನಂದಿನಿದೇವಿ ಕೆ, ಭಾ.ಆ.ಸೇ, ನಿರ್ದೇಶಕರು (ಸಿಬ್ಬಂದಿ ಮತ್ತು ಜಾಗೃತ) ರವರು ಮಾನ್ಯ ಅಧ್ಯಕ್ಷರಿಗೆ ಶುಭ ಕೋರಿದರು. https://kannadanewsnow.com/kannada/major-surgery-from-state-government-to-administrative-machinery-order-transferring-218-psi/ https://kannadanewsnow.com/kannada/its-a-great-post-office-plan-you-get-a-lot-of-interest/
ಬೆಂಗಳೂರು: ರಾಜ್ಯ ಸರ್ಕಾರದಿಂದ ( Karnataka Government ) ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಎನ್ನುವಂತೆ ಬರೋಬ್ಬರಿ 218 ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳನ್ನು ( Police Sub Inspector – PSI ) ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈ ಸಂಬಂಧ ರಾಜ್ಯ ಸರ್ಕಾರದಿಂದ ಆದೇಶ ಮಾಡಿದ್ದು, ದೇವನಹಳ್ಳಿ ಠಾಣೆಯ ಪಿಎಸ್ಐ ಶಿವಪ್ಪ ಎಂ ನಾಯಕ್ ಅವರನ್ನು ರಾಮಮೂರ್ತಿ ನಗರಕ್ಕೆ ವರ್ಗಾವಣೆ ಮಾಡಲಾಗಿದೆ. ಶಿವಪ್ಪ ಅವರನ್ನು ವೈಟ್ ಫೀಲ್ಡ್ ಪೊಲೀಸ್ ಠಾಣೆ, ರಾಮದೇವಿ ಬಿಎಸ್ ಅವರನ್ನು ಮಹದೇವಪುರ ಪೊಲೀಸ್ ಠಾಣೆ, ಮೂರ್ತಿ ಅವರನ್ನು ಮಲ್ಲೇಶ್ವರಂ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಮಂಜುನಾಥ್ ಹೆಚ್ ಅವರನ್ನು ವರ್ತೂರು ಪೊಲೀಸ್ ಠಾಣೆಯಿಂದ ರಾಮಮೂರ್ತಿ ನಗರ ಪೊಲೀಸ್ ಠಾಣೆಗೆ, ಮೌನೇಶ್ ಅವರನ್ನು ವರ್ತೂರು ಪೊಲೀಸ್ ಠಾಣೆಗೆ, ಅಮರೇಶ್ ಅವರನ್ನು ಕೋರಮಂಗಲ ಠಾಣೆ, ಶಿವರಾಜ ಎಂ.ಜೆ ಅವರನ್ನು ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಹೀಗಿದೆ 218 ಪಿಎಸ್ಐ ವರ್ಗಾವಣೆಯ ಸಂಪೂರ್ಣ ಪಟ್ಟಿ https://kannadanewsnow.com/kannada/its-a-great-post-office-plan-you-get-a-lot-of-interest/ https://kannadanewsnow.com/kannada/breaking-imran-khan/
ಬೆಂಗಳೂರು: ಸಿಲಿಕಾನ್ ಸಿಟಿಯ ಶಿವಾಜಿನಗರದಲ್ಲಿ ಹಾರಿಸಲಾಗುತ್ತಿದ್ದಂತ ಹಸಿರು ಧ್ವಜವನ್ನು ಹಿಂದೂ ಸಂಘಟನೆಗಳ ಒತ್ತಾಯದ ಬೆನ್ನಲ್ಲೇ ತೆರವುಗೊಳಿಸಲಾಗಿದೆ. ಆ ಧ್ವಜ ಕಂಭದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲಾಗಿದೆ. ಬೆಂಗಳೂರಿನ ಶಿವಾಜಿನಗರದಲ್ಲಿರುವಂತ ಚಾಂದಿನಿ ಚೌಕ್ ನಲ್ಲಿನ ಬಿಬಿಎಂಪಿ ಧ್ವಜ ಸ್ತಂಭದಲ್ಲಿ ಹಸಿರು ಧ್ವಜವನ್ನು ಕಟ್ಟಲಾಗಿತ್ತು. ಇದಕ್ಕೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ತೀವ್ರ ವಿರೋಧವನ್ನು ವ್ಯಕ್ತ ಪಡಿಸಿದ್ದರು. ಹಿಂದೂಪರ ಸಂಘಟನೆಗಳ ವಿರೋಧದಿಂದಾಗಿ ಪೊಲೀಸರು ಶಿವಾಜಿನಗರ ಚಾಂದಿನಿ ಚೌಕ್ ನಲ್ಲಿದ್ದಂತ ಹಸಿರು ಧ್ವಜವನ್ನು ತೆರವುಗೊಳಿಸಿದ್ದಾರೆ. ಅಲ್ಲದೇ ಆ ಧ್ವಜ ಸ್ತಂಭದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲಾಗಿದೆ. https://kannadanewsnow.com/kannada/big-twist-to-mandya-keragodi-hanumandhwaja-controversy-gram-panchayat-conduct-book-goes-missing/ https://kannadanewsnow.com/kannada/its-a-great-post-office-plan-you-get-a-lot-of-interest/
ಮಂಡ್ಯ: ಮಂಡ್ಯ ತಾಲೂಕಿನ ಕೆರಗೋಡಿ ಗ್ರಾಮದಲ್ಲಿ ನಡೆದಿದ್ದಂತ ಹನುಮಧ್ವಜ ಹಾರಾಟ ವಿವಾದಕ್ಕೆ ಈಗ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಹನುಮಧ್ವಜ ಹಾರಾಟ ಸಂಬಂಧ ಗ್ರಾಮ ಪಂಚಾಯ್ತಿ ನಡೆಸಿದ್ದಂತ ನಡವಳಿಯ ನಿರ್ಣಯದ ಪುಸ್ತಕವೇ ನಾಪತ್ತೆಯಾಗಿರೋದಾಗಿ ತಿಳಿದು ಬಂದಿದೆ. ಮಂಡ್ಯ ತಾಲೂಕಿನ ಕೆರಗೋಡಿ ಗ್ರಾಮದಲ್ಲಿ ಹನುಮಧ್ವಜ ಹಾರಾಟಕ್ಕೂ ಮುನ್ನಾ, ಗ್ರಾಮ ಪಂಚಾಯ್ತಿಯ 22 ಸದಸ್ಯರಿಂದ ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ 18 ಜನರು ಹನುಮಧ್ವಜ ಹಾರಾಟ ಸಂಬಂಧ ಒಪ್ಪಿಗೆಯನ್ನು ಸೂಚಿಸಿದ್ದಾರೆ. ಇನ್ನುಳಿದವರು ಒಪ್ಪಿಗೆ ಸೂಚಿಲ್ಲ. ಈ ಎಲ್ಲವನ್ನು ಜನವರಿ.25ರಂದು ನಡವಳಿ ಪುಸ್ತಕದಲ್ಲಿ ನಮೂದಿಸಲಾಗಿದೆ. ಇದೀಗ ಹೀಗೆ ಜನವರಿ.25ರಂದು ಹನುಮಧ್ವಜ ಹಾರಿಸೋ ಸಂಬಂಧ ನಡೆದಂತ ಗ್ರಾಮ ಪಂಚಾಯ್ತಿಯ ಸದಸ್ಯರ ಸಭೆಯ ನಡವಳಿಯ ನಿರ್ಣಯದ ಪುಸ್ತಕವೇ ನಾಪತ್ತೆಯಾಗಿದೆ ಎಂಬುದಾಗಿ ತಿಳಿದು ಬಂದಿದೆ. ಈ ಮೂಲಕ ಈಗ ಹನುಮಧ್ವಜ ವಿವಾದ ಮತ್ತೊಂದು ತಿರುವು ಪಡೆದಿದೆ. ಅಂದಹಾಗೆ ನಿನ್ನೆ ಇದೇ ವಿಚಾರವಾಗಿ ಬಿಜೆಪಿ ಕಾರ್ಯಕರ್ತರು, ನಾಯಕರು ಕೆರಗೋಡಿಯಿಂದ ಮಂಡ್ಯ ಡಿಸಿ ಕಚೇರಿಯವರೆಗೆ ಪಾದಯಾತ್ರೆ ಮಾಡಿ ಹನುಮಧ್ವಜ ತೆರವಿಗಾಗಿ ಆಕ್ರೋಶವನ್ನು ಹೊರ…
ಉತ್ತರ ಕನ್ನಡ: ಮಂಡ್ಯ ಜಿಲ್ಲೆಯ ಬಳಿಕ, ಉತ್ತರ ಕನ್ನಡಕ್ಕೂ ಧರ್ಮ ಧ್ವಜ ದಂಗಲ್ ಕಾಲಿಟ್ಟಿದೆ. ಅನುಮತಿ ಇದ್ದರೂ ಭಗವಧ್ವಜ ನಿರ್ಮಿಸಿದ್ದನ್ನು ತೆರವುಗೊಳಿಸಲಾಗಿದೆ. ಅಲ್ಲದೇ ಧ್ವಜ ಕಟ್ಟೆಯನ್ನು ತೆರವುಗೊಳಿಸಿದ್ದಕ್ಕಾಗಿ ಗ್ರಾಮಸ್ಥರು ತೀವ್ರ ಆಕ್ರೋಶವನ್ನು ಹೊರ ಹಾಕಿದ್ದಾರೆ. ಉತ್ತರ ಕನ್ಡನ ಜಿಲ್ಲೆಯ ಭಟ್ಕಳದ ತೆಂಗಿನಗುಂಡಿ ಬೀಚ್ ನಲ್ಲಿ ಅನುಮತಿ ಪಡೆದು ವೀರಸಾರ್ವರ್ಕರ್ ವೃತ್ತದಲ್ಲಿ ಭಗವಧ್ವಜ, ನಾಮಫಲಕ ಹಾಗೂ ಧ್ವಜ ಕಟ್ಟೆಯನ್ನು ನಿರ್ಮಿಸಲಾಗಿತ್ತು. ಮಂಡ್ಯದಲ್ಲಿ ಭಗವಧ್ವಜ ವಿವಾದದ ಬಳಿಕ, ಭಟ್ಕಳದ ತೆಂಗಿನಗುಂಡಿ ಬೀಚ್ ನಲ್ಲಿ ಅನುಮತಿ ಪಡೆದು ನಿರ್ಮಿಸಲಾಗಿದ್ದಂತ ಭಗವಧ್ವಜವನ್ನು ತೆರವುಗೊಳಿಸಲಾಗಿದೆ ಎಂಬುದಾಗಿ ಆರೋಪ ಕೇಳಿ ಬಂದಿದೆ. ಭಗವಧ್ವಜ, ಧ್ವಜ ಕಟ್ಟೆಯನ್ನು ತೆರವುಗೊಳಿಸಿದ್ದಕ್ಕಾಗಿ, ಭಟ್ಕಳದ ತೆಂಗಿನಗುಂಡಿ ಬೀಚ್ ನಲ್ಲಿ ಪಿಡಿಓ ಅಧಿಕಾರಿಯನ್ನು ಗ್ರಾಮಸ್ಥರು ತೀವ್ರವಾಗಿ ತರಾಟೆಯನ್ನು ತೆಗೆದುಕೊಂಡಿದ್ದಾರೆ. ಈ ಮೂಲಕ ಆಕ್ರೋಶವನ್ನು ಹೊರ ಹಾಕಿದ್ದಾರೆ. https://kannadanewsnow.com/kannada/its-a-great-post-office-plan-you-get-a-lot-of-interest/ https://kannadanewsnow.com/kannada/breaking-imran-khan/
ಮಂಡ್ಯ: ಹನುಮಧ್ವಜ ವಿಚಾರವಾಗಿ ಮಂಡ್ಯದಲ್ಲಿ ಕೋಮು ಸೌಹಾರ್ಧತೆ ಕೆಡಿಸಿ, ಬೆಂಕಿ ಹಚ್ಚೋ ಕೆಲಸ ಮಾಡಿದ್ರೇ ಅದರ ಪರಿಣಾಮ ನೆಟ್ಟಗಿರಲ್ಲ ಎಂಬುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಸಚಿವ ಚಲುವರಾಯಸ್ವಾಮಿ ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಸ್ವಾಭಿಮಾನ, ಗೌರವದ ವಿಚಾರದಲ್ಲಿ ಮಂಡ್ಯ ಜಿಲ್ಲೆ ರಾಜ್ಯಕ್ಕೆ ಮಾದರಿಯಾಗಿದೆ. ಜನತಾ ಪಕ್ಷವನ್ನ ನಿನ್ನೆಯೇ ಅಂತಿಮಗೊಳಿಸಿದ್ದೀರಿ. ನಿನ್ನೆ ಕೇಸರಿ ಶಾಲು ಹಾಕೊಂಡು ಪಕ್ಷದ ಅಂತಿಮ ಯಾತ್ರೆಗೆ ತಿಲಾಂಜಲಿ ಹಾಡಿದ್ದಾರೆ. ಇಷ್ಟು ದಿನ ಹಸಿರು ಶಾಲು ಹಾಕೊಂಡು ಹೋರಾಟ ಮಾಡುತ್ತಿದ್ರಿ. ನೀವು ಪಕ್ಷ ಸೇರ್ಪಡೆ ಆಗಿದ್ದರೆ ಜನತಾ ಪರಿವಾರದವರಿಗೆ ನೋವಾಗುತ್ತಿರಲಿಲ್ಲ. ನಿಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ, ತಮ್ಮ ರಾಜಕೀಯಕ್ಕಾಗಿ ಜಯಪ್ರಕಾಶ್ ನಾರಾಯಣರ ಹೋರಾಟಕ್ಕೆ ತಿಲಾಂಜಲಿ ಹಾಡೀದ್ದೀರಿ. ನಿಮ್ಮ ಬೇಡಿಕೆ ಏನು? ರಾಷ್ಟ್ರ ಧ್ವಜ ಕೆಳಗೆ ಇಳಿಸಬೇಕ? ಈ ಬಗ್ಗೆ ಸ್ಪಷ್ಟನೆ ಕೊಡಬೇಕು ಎಂಬುದಾಗಿ ಕುಮಾರಸ್ವಾಮಿ ವಿರುದ್ಧ ವಾಗ್ಧಾಳಿ ನಡೆಸಿದರು. ಸರ್ಕಾರ, ಜಿಲ್ಲಾಡಳಿತ ಕಾನೂನುಬದ್ಧವಾಗಿ ಏನು ಮಾಡಬೇಕೋ ಮಾಡಿದೆ. ನಿಮ್ಮ ಹೋರಾಟ ನೋಡಿದ್ರೆ ರಾಷ್ಟ್ರ…
ಬೆಂಗಳೂರು: ನಗರದ ಅನೇಕ ಕಡೆಯಲ್ಲಿ ಪುಟ್ ಪಾತ್ ಗಳನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಹೈಕೋರ್ಟ್ ಗೆ ಅರ್ಜಿ ಕೂಡ ಸಲ್ಲಿಕೆಯಾಗಿತ್ತು. ಹೀಗಾಗಿ ಇಂದು ಪುಟ್ ಪಾತ್ ಗಳನ್ನು ಒತ್ತುವರಿ ತೆರವು ಮಾಡದಂತ ಬಿಬಿಎಂಪಿಗೆ ಹೈಕೋರ್ಟ್ ತರಾಟೆ ತೆಗೆದುಕೊಂಡಿದೆ. ಇಂದು ಕರ್ನಾಟಕ ಹೈಕೋರ್ಟ್ ಬೆಂಗಳೂರಲ್ಲಿ ಪುಟ್ ಪಾತ್ ಒತ್ತುವರಿಗಳನ್ನು ತೆರವು ಮಾಡದಂತ ಬಿಬಿಎಂಪಿಯ ಕಾರ್ಯ ವೈಖರಿಗೆ ತೀವ್ರ ಅಸಮಾಧಾನವನ್ನು ಹೊರ ಹಾಕಿದೆ. ಇದೇ ಸಂದರ್ಭದಲ್ಲಿ ಬಿಬಿಎಂಪಿಗೆ ಎಲ್ಲಾ ಪುಟ್ ಪಾತ್ ಗಳ ಒತ್ತುವರಿಯನ್ನು ತೆರವು ಮಾಡುವಂತೆ ಖಡಕ್ ಸೂಚನೆಯನ್ನು ಹೈಕೋರ್ಟ್ ನೀಡಿದೆ. ಬಿಬಿಎಂಪಿಯಿಂದ ಬೆಂಗಳೂರಲ್ಲಿ ರಸ್ತೆ, ಪುಟ್ ಪಾತ್ ಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಒತ್ತುವರಿಯ ಬಗ್ಗೆ ಸರಿಯಾಗಿ ಕ್ರಮ ಕೈಗೊಳ್ಳುತ್ತಿಲ್ಲ. ಹೀಗೆ ಆದ್ರೇ ಸ್ವಯಂ ಪ್ರೇರಿತವಾಗಿ ಪಿಐಎಲ್ ದಾಖಲಿಸಿಕೊಳ್ಳೋದಾಗಿ ಖಡಕ್ ಎಚ್ಚರಿಕೆ ನೀಡಿದೆ. ಇನ್ನೂ ಬೆಂಗಳೂರಲ್ಲಿ ಪುಟ್ ಪಾತ್ ಒತ್ತುವರಿಗಳ ತೆರವು ವಿಚಾರವಾಗಿ ಫೆ.1ರಂದು ಬಿಬಿಎಂಪಿಯ ಮುಖ್ಯ ಆಯುಕ್ತರೇ ಕೋರ್ಟ್ ಗೆ ಖುದ್ದು ಹಾಜರಾಗಿ, ವಿವರಣೆ…
ಬೆಂಗಳೂರು : ಮಹಾತ್ಮಾ ಗಾಂಧಿ ಶ್ರೇಷ್ಠ ಹಿಂದೂ. ಕಾಂಗ್ರೆಸ್ ಪಕ್ಷಕ್ಕೆ ಅವರ ತತ್ಪಾದರ್ಶಗಳೇ ದಾರಿದೀಪ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು KPCC ಕಚೇರಿ ಕ್ವೀನ್ಸ್ ರೋಡ್ ಬೆಂಗಳೂರು ಇಲ್ಲಿ ಆಯೋಜಿಸಲಾಗಿದ್ದ ಮಹಾತ್ಮಾ ಗಾಂಧೀಜಿಯವರ ಪುಣ್ಯ ಸ್ಮರಣೆಯ ಅಂಗವಾಗಿ ಹುತಾತ್ಮರ ದಿನಾಚರಣೆ ಕಾರ್ಯಕ್ರಮ ದಲ್ಲಿ ಭಾಗವಹಿಸಿ ನಂತರ ಕಾರ್ಯಕ್ರಮ ವನ್ನು ಉದ್ದೇಶಿಸಿ ಮಾತನಾಡಿದರು. ಗೋಡ್ಸೆ ಬಿಜೆಪಿಯವರ ಆರಾಧ್ಯ ದೈವ: ಹಂತಕ ಗೋಡ್ಸೆ, ಗಾಂಧೀಜಿಯವರ ಕಾಲಿಗೆ ನಮಸ್ಕರಿಸುವ ನೆಪದಲ್ಲಿ ಅವರನ್ನು ಹತ್ಯೆಗೈದರು. ಗಾಂಧಿಜೀಯವರನ್ನು ಹತ್ಯೆಗೈದ ಗೋಡ್ಸೆಯವರನ್ನು ಆರ್ ಎಸ್ ಎಸ್ ಸಂಘಟನೆ ಹಾಗೂ ಬಿಜೆಪಿಯವರ ಆರಾಧ್ಯ ದೈವ.. ನಮ್ಮನ್ನು ಹಿಂದೂ ವಿರೋಧಿಗಳು ಎಂದು ಬಿಂಬಿಸುತ್ತಾರೆ. ಮಹಾತ್ಮಾ ಗಾಂಧಿಜೀ ಒಬ್ಬ ಶ್ರೇಷ್ಠ ಹಿಂದೂ. ಅಂತಹ ಹಿಂದೂ ಭಕ್ತನನ್ನೇ ಗುಂಡಿಕ್ಕಿ ಕೊಂದವರೇ ಹಿಂದುತ್ವದ ಬಗ್ಗೆ ಮಾತನಾಡುತ್ತಾರೆ. ಗಾಂಧೀಜಿಯವರನ್ನು ಮಾತ್ರ ಮಹಾತ್ಮಾ ಮತ್ತು ರಾಷ್ಟ್ರಪಿತ ಎಂದು ಕರೆಯಲಾಗುತ್ತದೆ. ಅವರು ತಮ್ಮ ಜೀವನದುದ್ದಕ್ಕೂ ಸತ್ಯ ಮತ್ತು ಅಹಿಂಸೆಯನ್ನು ಪಾಲಿಸಿದರು. ಗಾಂಧಿಜೀಯವರು ನುಡಿದಂತೆ ನಡೆಯುತ್ತಿದ್ದರು. ದೇಶ ವಿಭಜನೆಯಾದಾಗ ಸ್ವಾತಂತ್ರ್ಯವನ್ನು…
ಕಲಬುರ್ಗಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಅವಹೇಳನ ಪ್ರಕರಣ ಸಂಬಂಧ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಈ ಪ್ರಕರಣಕ್ಕೆ ಕಲಬುರ್ಗಿ ಕೋರ್ಟ್ ತಡೆಯಾಜ್ಞೆ ನೀಡಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಏಕವಚನದಲ್ಲೇ ಮಾತನಾಡಿದ್ದಂತ ಚಕ್ರವರ್ತಿ ಸೂಲಿಬೆಲೆ, ಅಯೋಗ್ಯ ಎಂಬ ಪದವನ್ನು ಪ್ರಯೋಗ ಮಾಡಿ, ಅವಹೇಳನ ಮಾಡಿದ್ದರು. ಈ ಸಂಬಂಧ ರಾಯಚೂರು ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಅಟ್ರಾಸಿಟಿ ಕಾಯ್ದೆಯ ಅಡಿಯಲ್ಲಿ ಕೇಸ್ ದಾಖಲಾಗಿತ್ತು. ಚಕ್ರವರ್ತಿ ಸೂಲಿ ಬೆಲೆ ವಿರುದ್ಧ ಕಲಬುರ್ಗಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ನೀಡಿದ್ದಂತ ದೂರಿನ ಹಿನ್ನಲೆಯಲ್ಲಿ ಎಫ್ಐಆರ್ ಕೂಡ ದಾಖಲಾಗಿತ್ತು. ಈ ಪ್ರಕರಣಕ್ಕೆ ತಡೆ ಕೋರಿ ಚಕ್ರವರ್ತಿ ಸೂಲಿ ಬೆಲೆ ಅವರು ಕಲಬುರ್ಗಿ ಕೋರ್ಟ್ ಮೊರೆ ಹೋಗಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದಂತ ಕಲಬುರ್ಗಿ ಏಕ ಸದಸ್ಯ ನ್ಯಾಯಪೀಠದ ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕಲ್ ಅವರು, ಪೊಲೀಸರು ಚಕ್ರವರ್ತಿ ಸೂಲಿಬೆಲೆ ವಿರುದ್ಧ ದಾಖಲಾಗಿದ್ದಂತ ಎಫ್ಐಆರ್ ಗೆ ತಡೆಯಾಜ್ಞೆ ನೀಡಿದ್ದಾರೆ. https://kannadanewsnow.com/kannada/kumaraswamy-has-almost-merged-jds-with-bjp-dk-shivakumar-shivakumar/ https://kannadanewsnow.com/kannada/its-a-great-post-office-plan-you-get-a-lot-of-interest/
ಬೆಂಗಳೂರು : “ಕುಮಾರಸ್ವಾಮಿ ಅವರು ಜೆಡಿಎಸ್ ಪಕ್ಷವನ್ನು ಬಿಜೆಪಿಯಲ್ಲಿ ಬಹುತೇಕ ವಿಲೀನ ಮಾಡಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ. ಇಂದು ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದಂತ ಅವರು, ಇದು ಅವರ ಪಕ್ಷದ ವಿಚಾರ, ಅವರು ಏನಾದರೂ ಮಾಡಿಕೊಳ್ಳಲಿ. ನಮಗೂ ಅದಕ್ಕೂ ಸಂಬಂಧವಿಲ್ಲ. ಅವರು ಯಾವ ಬಣ್ಣದ ಶಾಲನ್ನಾದರೂ ಧರಿಸಲಿ. ಬಿಜೆಪಿಗೆ ಮಂಡ್ಯದಲ್ಲಿ ರಾಜಕೀಯ ನೆಲೆ ಇಲ್ಲ. ಅಲ್ಲಿ ನೆಲೆ ಕಂಡುಕೊಳ್ಳಲು ಇವರಿಬ್ಬರಲ್ಲಿ ಯಾರು ಯಾರನ್ನು ನುಂಗುತ್ತಾರೋ ಗೊತ್ತಿಲ್ಲ ಎಂದು ಕಿಡಿಕಾರಿದರು. ಮಂಡ್ಯದಲ್ಲಿ ಕೋಮು ಗಲಭೆ ಪ್ರಯೋಗ ಮಂಡ್ಯದಲ್ಲಿ ಕೇಸರಿ ಧ್ವಜದ ವಿವಾದದ ಬಗ್ಗೆ ಬಿಜೆಪಿ ಪ್ರತಿಭಟನೆ ಬಗ್ಗೆ ಕೇಳಿದಾಗ, “ಶಾಂತಿ ಕದಡಬೇಕು, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಬೇಕು ಎಂದು ಮುಗ್ಧ ಹಳ್ಳಿ ಜನರನ್ನು ಎತ್ತಿಕಟ್ಟುತ್ತಿದ್ದಾರೆ. ನಮ್ಮ ಭಾಗದ ಎಲ್ಲಾ ಜಾತಿ ಹಾಗೂ ಧರ್ಮದ ಜನರು ಬಹಳ ಸೌಹಾರ್ದತೆಯಿಂದ ಅಣ್ಣ-ತಮ್ಮಂದಿರಂತೆ ಬದುಕುತ್ತಿದ್ದರು. ನಮ್ಮ ಕಡೆ ಊರ ಹಬ್ಬ ಮಾಡುವಾಗ ಯಾವರೀತಿ ಮಾಡುತ್ತಾರೆ ಎಂದು ನೀವು ನೋಡಿದ್ದೀರಲ್ಲಾ? ಈಗ ಅವರು…