Author: kannadanewsnow09

ಮಂಡ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಖರೀದಿಸಿದ ಜಮೀನು ಪಿತ್ರಾರ್ಜಿತ ಆಸ್ತಿಯಾಗಿದ್ದು, ಅದಕ್ಕೆ 27 ಹಕ್ಕುದಾರರಿದ್ದರೂ ಕೇವಲ ಒಬ್ಬರ ಬಳಿ ಸಹಿ ಹಾಕಿಸಿಕೊಳ್ಳಲಾಗಿದೆ. ಇದು ಸಂಪೂರ್ಣ ಅಕ್ರಮ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ನಡೆಸಿದ ಅವರು, ಸಿಎಂ ಸಿದ್ದರಾಮಯ್ಯ ಅವರ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು. ಜಮೀನಿನ ಮೂಲ ಹಕ್ಕುದಾರರು, ಇತಿಹಾಸದ ಕುರಿತು ವಿವರಿಸಿದರು. ಸಿಎಂ ಸಿದ್ದರಾಮಯ್ಯ ಖರೀದಿಸಿದ ಜಾಗ ನಿಂಗ ಎಂಬುವರಿಗೆ ಸೇರಿದ ಜಮೀನಾಗಿದ್ದು, 1936 ರಲ್ಲಿ ನಿಂಗ ಜಮೀನು ಖರೀದಿಸಿದ್ದರು. ಅವರು 28 ವರ್ಷಗಳ ಹಿಂದೆ ನಿಧನರಾಗಿದ್ದು, ಅವರ ಪತ್ನಿ ನಿಂಗಮ್ಮ 1990 ರಲ್ಲಿ ಮೃತರಾಗಿದ್ದರು. ಇದು ನಿಂಗ ಮತ್ತು ನಿಂಗಮ್ಮ ಅವರ ಸ್ವಯಾರ್ಜಿತ ಆಸ್ತಿಯಾಗಿದ್ದು, ಅವರ ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಾಗಿದೆ. ನಿಂಗ ಅವರಿಗೆ ಮೂರು ಮಕ್ಕಳಿದ್ದು, ಅವರ ಕುಟುಂಬದವರು 27 ಜನರಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ದೇವರಾಜು ಎಂಬ ಒಬ್ಬ ವ್ಯಕ್ತಿಯಿಂದ ಮಾತ್ರ ಸಹಿ ಹಾಕಿಸಿಕೊಂಡಿದ್ದಾರೆ ಎಂದು ವಿವರಿಸಿದರು. 1968 ರಲ್ಲಿ ಸರ್ವೆ ಸಂಖ್ಯೆ…

Read More

ಬೆಂಗಳೂರು: ರಾಜ್ಯ ಸರ್ಕಾರದಿಂದ ಯಜಮಾನಿಯರಿಗೆ ಗುಡ್ ನ್ಯೂಸ್ ಎನ್ನುವಂತೆ ಗೃಹಲಕ್ಷ್ಮೀ ಯೋಜನೆಯ ಜೂನ್, ಜುಲೈ ತಿಂಗಳ ಹಣ ಜಮಾ ಮಾಡಲಾಗಿದೆ. ಈ ಬಗ್ಗೆ ಅನೇಕ ಯಜಮಾನಿಯರು ತಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಿರುವ ಸ್ಕ್ರೀನ್ ಶಾಟ್ ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹಾಗಾದ್ರೇ ನಿಮಗೆ ಬಂದಿರದೇ ಇದ್ರೇ ತಪ್ಪದೇ ಆ ಕೆಲಸ ಮಾಡಬೇಕಿದೆ. ಅದೇನು ಅಂತ ಮುಂದೆ ಓದಿ.  ನಿನ್ನೆಯಷ್ಟೇ ಮಂಡ್ಯದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಕಳೆದ ಎರಡು ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಇಂದೇ ಜಮಾ ಮಾಡಲಾಗುವುದು. ಎರಡು ತಿಂಗಳ ಹಣ ಇಂದು ಮನೆ ಒಡತಿಯರ ಬ್ಯಾಂಕ್ ಅಕೌಂಟ್ ಗೆ ಜಮಾ ಆಗಲಿದ್ದು, ಇದರ ಬಗ್ಗೆ ಗೊಂದಲ ಬೇಡ. ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ ಎಂದಿದ್ದರು. ಈ ಬೆನ್ನಲ್ಲೇ ಇಂದು ಜೂನ್, ಜುಲೈ ತಿಂಗಳ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಫಲಾನುಭವಿಗಳಾದಂತ ಯಜಮಾನಿಯರ ಖಾತೆಗೆ ಜಮಾ ಮಾಡಲಾಗಿದೆ. ಒಂದು ವೇಳೆ ಬಂದಿಲ್ಲದೇ ಇದ್ದರೇ ನಾಳೆ ಅಥವಾ…

Read More

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಉಡುವಳ್ಳಿ ಗ್ರಾಮ ಪಂಚಾಯ್ತಿಯಲ್ಲಿನ ಕರ್ಮಕಾಂಡದ ವರದಿಯನ್ನು ನಿಮ್ಮ ಕನ್ನಡ ನ್ಯೂಸ್ ನೌ ( Kannada News Now ) ಆಗಸ್ಟ್.5ರಂದು ರಾಜ್ಯದ ‘ಪಂಚಾಯತ್ ರಾಜ್ ಇಲಾಖೆ’ಯಲ್ಲೊಂದು ‘ಬಹುದೊಡ್ಡ ಕರ್ಮಕಾಂಡ’ ಎಂಬುದಾಗಿ ಪ್ರಕಟಿಸಿತ್ತು. ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದಂತ ಪ್ರಿಯಾಂಕ್ ಖರ್ಗೆ ಅವರ ಗಮನಕ್ಕೂ ತರಲಾಗಿತ್ತು. ಈ ಬೆನ್ನಲ್ಲೇ ಇಂದು ಇಲಾಖೆಯ ಇಬ್ಬರು ಅಧಿಕಾರಿಗಳ ತಂಡ ಉಡುವಳ್ಳಿ ಗ್ರಾಮ ಪಂಚಾಯ್ತಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಉಡುವಳ್ಳಿ ಗ್ರಾಮ ಪಂಚಾಯ್ತಿಯಲ್ಲೇ ಹೀಗೊಂದು ಬಹುದೊಡ್ಡ ಕರ್ಮಕಾಂಡ ನಡೆದಿದೆ. ಅದೆಲ್ಲೋ ಕುರುಚಲು ಗಿಡಗಳ ಮಧ್ಯೆ ಗೋ ಕಟ್ಟೆ ನಿರ್ಮಾಣ ಮಾಡ್ತಿವಿ ಅಂತ ಯಾರಿಗೂ ಗೊತ್ತಾಗದಂತೆ ಪಿಡಿಒ ಹಾಗೂ ಕಾಮಗಾರಿ ಮಾಡಿಸೋರು ಸೇರಿ ಬೋರ್ಡ್ ಹಾಕ್ತಾರೆ ಅಂದ್ರೆ ನೀವೇ ಯೋಚನೆ ಮಾಡಿ ಅನ್ನುವ ಹಾಗೆ ಕಾಮಗಾರಿಯನ್ನು ನಡೆಸಿದ ಬಗ್ಗೆ ಕನ್ನಡ ನ್ಯೂಸ್ ನೌ ಆಗಸ್ಟ್.5ರಂದು ವರದಿಯನ್ನು ಪ್ರಕಟಿಸಿತ್ತು. ಈ ಹಿನ್ನಲೆಯಲ್ಲಿ ಇಂದು…

Read More

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ವಿವಿಧ ಗೃಹರಕ್ಷಕ ದಳದ ಘಟಕಗಳಲ್ಲಿ ಖಾಲಿಯಿರುವ ಪುರುಷ ಮತ್ತು ಮಹಿಳಾ ಗೃಹರಕ್ಷಕರ ಒಟ್ಟು 189 ಸ್ಥಾನಗಳಲ್ಲಿ ಸೇವೆ ಸಲ್ಲಿಸಲು ಸಿದ್ದರಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಭಾರತೀಯ ಪ್ರಜೆಯಾಗಿದ್ದು, 19 ರಿಂದ 45 ವರ್ಷ ವಯೋಮಿತಿಯ, 10ನೇ ತರಗತಿ ಪಾಸಾಗಿರುವ, ವೈದ್ಯಕೀಯವಾಗಿ ಸಶಕ್ತರಾಗಿರುವ ಹಾಗೂ ಪೊಲೀಸ್ ಠಾಣೆಯಲ್ಲಿ ಯಾವುದೇ ಕ್ರಿಮಿನಲ್ ಮೊಕದ್ದಮೆಗಳು/ಆರೋಪ ಅಥವಾ ಅಪರಾಧಿಯಾಗಿರದವರು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತರು ನಿಗದಿತ ನಮೂನೆ ಅರ್ಜಿಯನ್ನು ಸಮಾದೇಷ್ಟರ ಕಾರ್ಯಾಲಯ, ಗೃಹರಕ್ಷಕ ದಳ, ಶಾಂತ ಮ್ಯಾನ್‌ಷನ್, 2ನೇ ಮಹಡಿ, ಗಾಂಧಿನಗರ ಮುಖ್ಯರಸ್ತೆ, ಶಿವಮೊಗ್ಗ, ಅಥವಾ ಜಿಲ್ಲೆಯ ಎಲ್ಲಾ ಗೃಹರಕ್ಷಕ ದಳ ಘಟಕ/ಉಪ ಘಟಕಗಳ ಕಚೇರಿಗಳಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಆ.12ರೊಳಗಾಗಿ ಸಲ್ಲಿಸುವಂತೆ ಜಿಲ್ಲಾ ಗೌರವ ಸಮಾದೇಷ್ಠರಾದ ಡಾ. ಚೇತನ ಹೆಚ್.ಪಿ. ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08182-295630 / 255630 ಗಳನ್ನು ಸಂಪರ್ಕಿಸುವುದು. https://kannadanewsnow.com/kannada/railways-invites-applications-for-7951-vacancies-2/ https://kannadanewsnow.com/kannada/will-retire-from-politics-if-shantakumarswamys-allegations-against-me-are-proved-belur-gopalakrishna/

Read More

ಬೆಂಗಳೂರು : ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಬರುವ ಗ್ರೂಪ್‌-ಎ ನ 650 ಸಹಾಯಕ ಪ್ರಾಧ್ಯಾಪಕರು ಮತ್ತು 1200 ನರ್ಸ್‌ಗಳನ್ನು (ದಾದಿಯರು) ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮೂಲಕ ನೇಮಕ ಮಾಡಿಕೊಳ್ಳುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್ ರವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಸಂಬಂಧ ವೈದ್ಯಕೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆ ವಿಕಾಸ ಸೌಧದಲ್ಲಿ ಬುಧವಾರ ಮಹತ್ವದ ಸಭೆಯ ಅಧ್ಯಕ್ಷತೆ ವಹಿಸಿದ ಅವರು, ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುವ ಉದ್ದೇಶದಿಂದ ಸ್ಪರ್ಧಾತಕ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕವೇ ಭರ್ತಿ ಮಾಡಿಕೊಳ್ಳಬೇಕೆಂದು ವೈದ್ಯಕೀಯ ಶಿಕ್ಷಣ ಇಲಾಖೆಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಸಹಾಯಕ ಪ್ರಾಧ್ಯಾಪಕರು ಹಾಗೂ ನರ್ಸ್‌ಗಳ ನೇಮಕಾತಿ ಸಂದರ್ಭದಲ್ಲಿ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ಆರೋಪದ ನಡುವೆ ವೈದ್ಯಕೀಯ ಕಾಲೇಜು ಸಂಸ್ಥೆಗಳ ಮುಖ್ಯಸ್ಥರು ನೇಮಕಾತಿ ನಡೆಸುತ್ತಿದ್ದ ಪ್ರಸ್ತುತ ನೇಮಕಾತಿ ಪ್ರಕ್ರಿಯೆಯಿಂದ ತೃಪ್ತರಾಗದ ಸಚಿವರು, ಮುಂಬರುವ ಗ್ರೂಪ್‌-ಎ ಮತ್ತು ದಾದಿಯರ ನೇಮಕಾತಿಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕವೇ ಭರ್ತಿ ಮಾಡಿಕೊಳ್ಳಬೇಕೆಂದು ಪಾಟೀಲ್‌ ನಿರ್ದೇಶನ ನೀಡಿದರು. ರಾಜ್ಯಾದ್ಯಂತ…

Read More

ಬೆಂಗಳೂರು: ಸ್ವಾತಂತ್ರ್ಯೋತ್ಸವದ ಅಂಗವಾಗಿ ನಾಳೆಯಿಂದ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಫಲಪುಷ್ಪ ಪ್ರದರ್ಶನ ಆರಂಭಗೊಳ್ಳಲಿದೆ. ಟಿಕೆಟ್ ದರ ಎಷ್ಟು ಎನ್ನುವ ಬಗ್ಗೆ ಮುಂದೆ ಓದಿ. ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ವಿಷಯ ಆಧಾರಿತ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನವು ಲಾಲ್‌ಬಾಗ್‌ನಲ್ಲಿ ಆಗಸ್ಟ್‌ 8 ರಿಂದ 19ರ ವರೆಗೆ ನಡೆಯಲಿದೆ. ಲಾಲ್‌ಬಾಗ್‌ನ ಎಲ್ಲ ಪ್ರವೇಶ ದ್ವಾರಗಳಲ್ಲಿ ಎಲೆಕ್ಟ್ರಾನಿಕ್‌ ಟಿಕೆಟ್‌ ಯಂತ್ರಗಳ ವ್ಯವಸ್ಥೆ ಮಾಡಲಾಗಿದ್ದು, ಆನ್‌ಲೈನ್‌ ಬುಕ್ಕಿಂಗ್‌ ಪಡೆದುಕೊಳ್ಳುವ ಸೌಲಭ್ಯ ಇದೆ. ವಯಸ್ಕರಿಗೆ ₹80, ರಜೆ ದಿನಗಳಲ್ಲಿ ₹100, ಮಕ್ಕಳಿಗೆ ₹30 ಹಾಗೂ ಸಮವಸ್ತ್ರ ಧರಿಸಿ ಬರುವ ಶಾಲಾ ವಿದ್ಯಾರ್ಥಿಗಳಿಗೆ ಪ್ರವೇಶ ಉಚಿತವಾಗಿದೆ. ನಾಳೆಯಿಂದ ಆರಂಭಗೊಳ್ಳುತ್ತಿರುವಂತ ಲಾಲ್ ಬಾಗ್ ಪ್ಲವರ್ ಶೋ ಬೆಳಿಗ್ಗೆ 6 ಗಂಟೆಯಿಂದ ಆರಂಭಗೊಂಡು ಸಂಜೆ 6.30ರವರೆಗೆ ತೆರೆದಿರಲಿದೆ. ಸಾರ್ವಜನಿಕರು ಲಾಲ್ ಬಾಗ್ ಪ್ಲವರ್ ಶೋಗೆ ಭೇಟಿ ನೀಡಿ, ಬಗೆ ಬಗೆಯ ಹೂವುಗಳ ಪ್ರದರ್ಶನವನ್ನು ಕಣ್ ತುಂಬಿಕೊಳ್ಳಬಹುದಾಗಿದೆ. https://twitter.com/KarnatakaVarthe/status/1821126299265442109 https://kannadanewsnow.com/kannada/have-you-swallowed-14-sites-of-muda-in-mysuru-cleanly/ https://kannadanewsnow.com/kannada/railways-invites-applications-for-7951-vacancies-2/ https://kannadanewsnow.com/kannada/paris-olympics-2024-vinesh-phogat-disqualified-from-50kg-category-due-to-overweight/

Read More

ಬೆಂಗಳೂರು: ನೀವು ಕ್ಲೀನಾಗಿ ಮೈಸೂರು ‘ಮೂಡ’ದ 14 ಸೈಟ್ ನುಂಗಿದ್ದೀರಲ್ಲವೇ? ನೀವ್ಯಾವ ಸೀಮೆಯ ಕ್ಲೀನ್ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಪ್ರಶ್ನಿಸಿದರು. ಮಂಡ್ಯದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಮೊನ್ನೆ ಬಹಳ ದುಃಖದಿಂದ ನಾನು ಕ್ಲೀನ್ ಎಂದು ಪತ್ರಿಕಾ ಸಂದರ್ಶನದಲ್ಲಿ ಹೇಳಿದ್ದಾರೆ. 40 ವರ್ಷಗಳ ರಾಜಕಾರಣದಲ್ಲಿ ನಾನು ಕ್ಲೀನ್ ಎಂದಿದ್ದಾರೆ ಎಂದು ವ್ಯಂಗ್ಯವಾಡಿದರು. ಹಿಂದೆ ರೀಡೂ ಸಂಬಂಧ ನಾಕೈದು ಸಾವಿರ ಕೋಟಿಯ ಹಗರಣ ಆಗಿತ್ತು. ಆ ಹಗರಣದಲ್ಲಿ ನೀವೇ ನಂಬರ್ ಒನ್. ಆಗ ಕೆಂಪಣ್ಣ ಆಯೋಗ ಮಾಡಿದ್ದೀರಿ. ಆರು ತಿಂಗಳು ಅವಕಾಶ ಕೊಡಲಾಗಿತ್ತು. ಆರು ವರ್ಷವಾದರೂ ವರದಿ ಮಂಡಿಸಿಲ್ಲ; ಇನ್ನು 60 ವರ್ಷ ಆಗಲು ನಾವು ಕಾಯಬೇಕಿದೆ; ಕೆಂಪಣ್ಣ ವರದಿ ಏನು ಹೇಳಿದೆ ಎಂದು ಕಾಯುತ್ತಿದ್ದೇವೆ ಎಂದರು. ಈಗ ದೇಸಾಯಿ ಆಯೋಗ ಮಾಡಿದ್ದೀರಿ. ಸಿದ್ದರಾಮಯ್ಯನವರು ಈ ಆಯೋಗಕ್ಕೆ ಎಷ್ಟು ತಿಂಗಳು ಕೊಡುತ್ತಾರೆ ಎಂದು ಮೊದಲೇ ತಿಳಿಸಬೇಕು. ಇದಕ್ಕೂ 6 ತಿಂಗಳು, ಆಮೇಲೆ 6 ವರ್ಷ,…

Read More

ಬೆಂಗಳೂರು: ಭಾರತದ ಕೃಷಿ ಮತ್ತು ಆಹಾರ ಉದ್ಯಮದ ಅತಿದೊಡ್ಡ ಮತ್ತು ಸಮಗ್ರ ಪ್ರದರ್ಶನವಾದ ಅಗ್ರಿಟೆಕ್ ಇಂಡಿಯಾ 2024ಕ್ಕೆ ಬೆಂಗಳೂರಲ್ಲಿ ವೇದಿಕೆ ಸಿದ್ಧವಾಗಿದೆ. ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಆಗಸ್ಟ್ 22 ರಿಂದ 24, 2024 ರಿಂದ ನಡೆಯಲಿರುವ ಈ ವರ್ಷದ ಆವೃತ್ತಿಯು ಹಿಂದಿನ ಎಲ್ಲಾ ಪುನರಾವರ್ತನೆಗಳನ್ನು ಮೀರಿಸುವ ಭರವಸೆ ನೀಡುತ್ತದೆ. ಕೆನಡಾ, ಟರ್ಕಿ, ಚೀನಾ, ಬ್ರೆಜಿಲ್, ಜರ್ಮನಿ, ಇಟಲಿ, ಸ್ಪೇನ್, ಹಾಲೆಂಡ್, ರಷ್ಯಾ, ತೈವಾನ್, ಥೈಲ್ಯಾಂಡ್, ಸಿಂಗಾಪುರ್, ಇಂಡೋನೇಷ್ಯಾ, ನೇಪಾಳ ಮತ್ತು ಇನ್ನೂ ಅನೇಕ ದೇಶಗಳ ಉತ್ಪನ್ನಗಳು ಮತ್ತು ಸೇವೆಗಳ ಭವ್ಯ ಪ್ರದರ್ಶನವನ್ನು ಪ್ರಸ್ತುತಪಡಿಸುತ್ತದೆ. ಸೂಕ್ಷ್ಮ, ಸಣ್ಣ, ಮಧ್ಯಮ ಉದ್ಯಮಗಳ ಸಚಿವರಾದ ಶರಣಬಸಪ್ಪ ದರ್ಶನಾಪುರ ಅವರು ಕೆಲವು ಪ್ರಮುಖ ಗಣ್ಯರನ್ನು ಖಚಿತಪಡಿಸಿದ್ದಾರೆ. ಅವರೊಂದಿಗೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಐಎಎಸ್ ಶಾಲಿನಿ ರಜನೀಶ್ ಸೇರಿದಂತೆ ಗಣ್ಯರ ಸಮಿತಿಯು ಇರಲಿದೆ. ಗೋಕುಲ್ ಪಟ್ನಾಯಕ್, ಐಎಎಸ್ (ನಿವೃತ್ತ), ಅಧ್ಯಕ್ಷರು, ಗ್ಲೋಬಲ್ ಅಗ್ರಿಸಿಸ್ಟಮ್ ಪ್ರೈವೇಟ್ ಲಿಮಿಟೆಡ್, ರತ್ನಪ್ರಭಾ, ಐಎಎಸ್ (ನಿವೃತ್ತ), ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ…

Read More

ಬೆಂಗಳೂರು : ಸಾಂಪ್ರದಾಯಿಕ ನೇಕಾರಿಕೆ ಇಂದು ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದು, ನೇಕಾರಿಕೆಗೆ ವೈಜ್ಞಾನಿಕ ಸ್ಪರ್ಶ ಸಿಗದಿದ್ದರೆ ಈ ಉದ್ಯಮ ಉಳಿಯಲು ಸಾಧ್ಯವಿಲ್ಲ ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ್‌ ಅವರು ಹೇಳಿದರು. ವಿಧಾನ ಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ, ಕಾವೇರಿ ಹ್ಯಾಂಡ್‌ ಲೂಮ್ಸ್‌, ನೇಕಾರರ ಸೇವಾ ಕೇಂದ್ರ ಹಾಗೂ ಎಫ್‌ಐಸಿಸಿಐ ಎಫ್‌ ಎಲ್‌ಒ ಇವುಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 10 ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಹಾಗೂ ಕೈಮಗ್ಗ ನೇಕಾರರಿಗೆ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಅವರು ಮಾತನಾಡಿದರು. ನೇಕಾರಿಕೆಯಿಂದ ಇಂದು ಹಲವು ಕುಟುಂಬಗಳು ವಿಮುಖವಾಗುತ್ತಿವೆ. ಈ ಕೆಲಸ ಬಿಟ್ಟು ವಲಸೆ ಹೋಗುತ್ತಿದ್ದಾರೆ. ನೇಕಾರಿಕೆಗೆ ಇಂದು ಸವಾಲುಗಳು ಹೆಚ್ಚಿವೆ. ಆದ್ದರಿಂದ ಪಾರಂಪರಿಕ ನೇಕಾರಿಕೆ ಲಾಭವಲ್ಲ ಎಂಬ ಅಭಿಪ್ರಾಯ ಮೂಡಿದೆ. ಪಾರಂಪರಿಕ ನೇಕಾರಿಕೆಯಿಂದ ಜೀವನೋಪಾಯ ಸಾಧ್ಯವಿಲ್ಲ ಎಂಬ ಸಂದಿಗ್ದ ಪರಿಸ್ಥಿತಿ ಉದ್ಭವಿಸಿದೆ ಎಂದು ಅವರು…

Read More

ನವದೆಹಲಿ: ರಾಜ್ಯಸಭಾ ಖಾಲಿ ಇರುವ 12 ಸ್ಥಾನಗಳಿಗೆ ಸೆಪ್ಟೆಂಬರ್.3 ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ರಾಜ್ಯಸಭೆಯಲ್ಲಿ ಖಾಲಿ ಇರುವ 12 ಸ್ಥಾನಗಳಿಗೆ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದ್ದು, ಒಂಬತ್ತು ರಾಜ್ಯಗಳಲ್ಲಿ ಖಾಲಿ ಇರುವ 12 ರಾಜ್ಯಸಭಾ ಸ್ಥಾನಗಳಿಗೆ ಸೆಪ್ಟೆಂಬರ್ 3 ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಬುಧವಾರ ತಿಳಿಸಿದೆ. ನಾಮಪತ್ರ ಹಿಂಪಡೆಯಲು ಆಗಸ್ಟ್ 26 ರಿಂದ 27 ಕೊನೆಯ ದಿನವಾಗಿದೆ. ಕೇಂದ್ರ ಸಚಿವರಾದ ಪಿಯೂಷ್ ಗೋಯಲ್, ಸರ್ಬಾನಂದ ಸೋನೊವಾಲ್ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಸೇರಿದಂತೆ ಹಾಲಿ ಸದಸ್ಯರು ಲೋಕಸಭೆಗೆ ಆಯ್ಕೆಯಾದ ನಂತರ ಹತ್ತು ಸ್ಥಾನಗಳು ಖಾಲಿಯಾಗಿವೆ. ಸದಸ್ಯರು ರಾಜೀನಾಮೆ ನೀಡಿದ ನಂತರ ಎರಡು ಸ್ಥಾನಗಳು ಖಾಲಿ ಉಳಿದಿವೆ. 12 ಸ್ಥಾನಗಳ ಪೈಕಿ ಅಸ್ಸಾಂ, ಬಿಹಾರ ಮತ್ತು ಮಹಾರಾಷ್ಟ್ರದ ತಲಾ 2 ಸ್ಥಾನಗಳಿವೆ. ಮತ್ತು ಹರಿಯಾಣ, ಮಧ್ಯಪ್ರದೇಶ, ರಾಜಸ್ಥಾನ, ತ್ರಿಪುರಾ, ತೆಲಂಗಾಣ ಮತ್ತು ಒಡಿಶಾದಿಂದ ತಲಾ 1. ಅಂದಹಾಗೇ ಅಸ್ಸಾಂನ ಕಾಮಕ್ಯ ಪ್ರಸಾದ್ ತಾಸಾ, ಸರ್ಬಾನಂದ ಸೋನವಾಲ,…

Read More